ಮೆಲನಿನ್ (ಚರ್ಮದ ವರ್ಣದ್ರವ್ಯ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Not to be confused with melamine, melatonin, or Melanotan (disambiguation).
ಮೆಲನಿನ್ ವರ್ಣದ್ರವ್ಯ (ಕಪ್ಪಾದ ಕಣ ಪದಾರ್ಥ - ಚಿತ್ರದ ಮಧ್ಯಭಾಗದಲ್ಲಿ) ವರ್ಣಕತೆಯುಳ್ಳ ಮೆಲನೋಮ. ಪ್ಯಾಪ್ ಸ್ಟೈನ್.

ಮೆಲನಿನ್ (ಗ್ರೀಕ್ μέλας, ಕಪ್ಪು ; pronounced /ˈmɛlənɪn/ ( listen)) ಎಂಬುದು ವಾಸ್ತವವಾಗಿ ಸರ್ವತ್ರವಾಗಿರುವ ವರ್ಣದ್ರವ್ಯ, ಇದು ಹೆಚ್ಚಿನ ಜೀವಿಗಳಲ್ಲಿ ಕಂಡುಬರುತ್ತದೆ.(ಇದು ಕಂಡುಬರದ ಕೆಲವೇ ಕೆಲವು ಪ್ರಾಣಿ ಗುಂಪಿನಲ್ಲಿ ಜೇಡಗಳು ಸೇರಿವೆ).

ಪ್ರಾಣಿಗಳಲ್ಲಿ ಮೆಲನಿನ್ ವರ್ಣದ್ರವ್ಯಗಳು ಅಮೈನೋ ಆಮ್ಲದ ಟೈರೋಸಿನ್ ನಿಂದ ಜನ್ಯವಾಗುತ್ತವೆ. ಜೀವವಿಜ್ಞಾನದ ಮೆಲನಿನ್ ನಲ್ಲಿ ಅತ್ಯಂತ ಕಡಿಮೆ ಸಾಮಾನ್ಯ ರಚನೆಯೆಂದರೆ ಯುಮೆಲನಿನ್ ,ಇದು ಡೈಹೈಡ್ರಾಕ್ಸಿ ಇಂಡೋಲ್ಕಾರ್ಬಾಕ್ಸಿಲಿಕ್ ಆಮ್ಲಗಳು,ಹಾಗು ಅವುಗಳ ಅಪಕರ್ಷಿತ ರೂಪಗಳ ಕಂದು-ಕಪ್ಪು ಪಾಲಿಮರ್ ಗಳನ್ನೊಳಗೊಂಡಿದೆ. ತಾಂತ್ರಿಕವಾಗಿ ಎಲ್ಲ ಮೆಲನಿನ್ ಗಳು ಪಾಲ್ಯಸೆಟಿಲಿನ್ ನ ಜನ್ಯ ರೂಪಗಳಾಗಿವೆ. ಅತ್ಯಂತ ಸಾಮಾನ್ಯ ಮೆಲನಿನ್ ಎಂದರೆ ಡೋಪಮೆಲನಿನ್, ಇದು ಪಾಲ್ಯಸೆಟಿಲಿನ್,ಪಾಲ್ಯನಿಲಿನ್ ಹಾಗು ಪಾಲ್ಯಪೈರ್ರೋಲ್ ನ ಮಿಶ್ರಿತ ಸಹಪಾಲಿಮರ್ ಆಗಿದೆ. ಮತ್ತೊಂದು ಸಾಮಾನ್ಯ ರೂಪದ ಮೆಲನಿನ್ ಎಂದರೆ ಫಿಯೋಮೆಲನಿನ್, ಬೆಂಜೋಥಿಯಾಜಿನ್ ನ ಏಕಾಂಶವಾದ ಈ ಕೆಂಪು-ಕಂದು ಪಾಲಿಮರ್ ಗಳು ಕೆಂಪು ಕೂದಲು ಹಾಗು ಚರ್ಮದ ಮೇಲಿನ ನಸುಕಂದು ಮಚ್ಚೆಗೆ ಕಾರಣವಾಗಿವೆ. ಆರ್ಕಿಯ ಹಾಗು ಬ್ಯಾಕ್ಟೀರಿಯ ಜಗತ್ತಿನಲ್ಲಿ ಮೆಲನಿನ್ ನ ಉಪಸ್ಥಿತಿ ಬಗ್ಗೆ ಈ ಕ್ಷೇತ್ರದ ಸಂಶೋಧಕರ ನಡುವೆ ನಿರಂತರ ಚರ್ಚೆ ನಡೆಯುತ್ತದೆ.

ಮಾನವ ಚರ್ಮದಲ್ಲಿ ಅಧಿಕವಾಗಿ ಉತ್ಪತ್ತಿಯಾಗುವ ಮೆಲನಿನ್ ನನ್ನು ಮೆಲನೋಜೆನೆಸಿಸ್ ಎಂದು ಕರೆಯಲಾಗುತ್ತದೆ. UVB-ವಿಕಿರಣದಿಂದ ಪ್ರೇರಿತವಾಗಿ ಹಾನಿಗೊಳಗಾಗುವ DNAಯಿಂದ ಮೆಲನಿನ್ ನ ಉತ್ಪತ್ತಿ ಚುರುಕುಗೊಳ್ಳುತ್ತದೆ,[೧] ಜೊತೆಗೆ ಇದರಿಂದ ಚರ್ಮದ ಬಣ್ಣವು ಕಂದುಬಣ್ಣಕ್ಕೆ ತಿರುಗುವುದು ನಿಧಾನವಾಗುತ್ತದೆ.ಅಂದರೆ ವಿಳಂಬವಾದ ವರ್ಣದ್ರವ್ಯದ ಉತ್ಪಾದನೆಗೆ ಕಾರಣವಾಗುತ್ತದೆ. ಮೆಲನೋಜೆನಿಸಿಸ್ ಅನ್ನು ಆಧರಿಸಿದ ಚರ್ಮದ ಕಂದು ಬಣ್ಣವು ಬೆಳವಣಿಗೆಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೆ ಇದು ಶಾಶ್ವತವಾಗಿ ಹಾಗೆಯೇ ಉಳಿಯುತ್ತದೆ.[೨]

ಮೆಲನಿನ್ ನ ದ್ಯುತಿರಾಸಾಯನಿಕ ಲಕ್ಷಣಗಳು ಇದನ್ನು ಅತ್ಯುತ್ತಮ ಫೋಟೋಪ್ರೊಟೆಕ್ಟನ್ಟ್ ಆಗಿ ಮಾಡುತ್ತವೆ. ಇದು ಹಾನಿಕರ (ನೇರಳಾತೀತ) UV-ವಿಕಿರಣವನ್ನು ಹೀರಿಕೊಳ್ಳುವುದರ ಜೊತೆಗೆ "ಅಲ್ಟ್ರಾಫಾಸ್ಟ್ ಇಂಟರ್ನಲ್ ಕನ್ವರ್ಸೆಶನ್" ಎಂಬ ಪ್ರಕ್ರಿಯೆ ಮೂಲಕ ಶಕ್ತಿಯನ್ನು ಹಾನಿಮಾಡದ ಶಾಖವನ್ನಾಗಿ ಮಾರ್ಪಡಿಸುತ್ತದೆ. ಈ ಲಕ್ಷಣವು, ಶಾಖವಾಗಿ ಹೀರಿಕೊಳ್ಳಲ್ಪಟ್ಟ 99.9%ಗೂ ಹೆಚ್ಚಿನ ಪ್ರಮಾಣದ UV ವಿಕಿರಣವು ಹಂಚಿ ಹೋಗುವಂತೆ ಮೆಲನಿನ್ ಗೆ ಸಾಮರ್ಥ್ಯ ಒದಗಿಸುತ್ತದೆ.[೩](ಫೋಟೋಪ್ರೊಟೆಕ್ಶನ್ ಅನ್ನು ನೋಡಿ). ಇದು ಪರೋಕ್ಷ DNA ಹಾನಿಯನ್ನು ತಡೆಗಟ್ಟುತ್ತದೆ, ಅಲ್ಲದೇ ಹಾನಿಕರ ಮೆಲನೋಮ(ಸಾಮಾನ್ಯವಾಗಿ ಚರ್ಮದಲ್ಲಿನ ಕೋಶಗಳಲ್ಲಿ ಉಂಟಾಗುವ ಹಾನಿಕರ ಗಂತಿ, ಅರ್ಬುದ) ಹಾಗು ಇತರ ಚರ್ಮದ ಕ್ಯಾನ್ಸರ್ ಗಳ ಹುಟ್ಟಿಗೆ ಕಾರಣವಾಗಿದೆ.

ಮಾನವರಲ್ಲಿ[ಬದಲಾಯಿಸಿ]

ಮೆಲನೋಸೈಟ್ ಗಳು ಕಡಿಮೆ ಅಥವಾ ಯಾವುದೇ ಮೆಲನಿನ್ ನನ್ನು ಉತ್ಪಾದಿಸಿದಾಗ ಆಲ್ಬಿನಿಸಂ(ಬಿಳಿಚಿಕೆ) ಉಂಟಾಗುತ್ತದೆ. ಬಿಳಿಚಿಕೆಯನ್ನು ಹೊಂದಿರುವ ಈ ಹುಡುಗಿ ಪಪುವ ನ್ಯೂ ಗಿನ್ನಿಯವಳು.

ಮಾನವರಲ್ಲಿ, ಮೆಲನಿನ್ ಚರ್ಮಕ್ಕೆ ಬಣ್ಣವನ್ನು ನೀಡುವ ಒಂದು ಪ್ರಾಥಮಿಕ ಅಂಶವಾಗಿದೆ. ಇದು ಕೂದಲಲ್ಲಿ,ಕಣ್ಣಿನ ಪಾಪೆ ಪೊರೆಯ ಕೆಳಭಾಗದಲ್ಲಿರುವ ವರ್ಣದ್ರವ್ಯದಿಂದ ಕೂಡಿದ ಅಂಗಾಂಶ,ಹಾಗು ಕಣ್ಣಿನ ಒಳಭಾಗದ ಸ್ಟ್ರೆಯ ವ್ಯಾಸ್ಕ್ಯುಲರಿಸ್ (ಅತಿ ಸಣ್ಣ ರಕ್ತಕೋಶ)ನಲ್ಲಿ ಕಂಡುಬರುತ್ತದೆ. ಮಿದುಳಿನಲ್ಲಿ, ಮೆಲನಿನ್ ನಿಂದ ಕೂಡಿರುವ ಅಂಗಾಂಶಗಳೆಂದರೆ ಹಿಮ್ಮೆದುಳು ಹಾಗು ಅಡ್ರಿನಲ್ ಗ್ರಂಥಿಯ ಜೋನ ರೆಟಿಕ್ಯುಲರಿಸ್,(ವರ್ಣರಹಿತ ಪೊರೆ)ಹಾಗು ಮಿದುಳುಕಾಂಡದೊಳಗಿರುವ ವರ್ಣದ್ರವ್ಯ-ಹೊಂದಿರುವ ನರಕೊಶಗಳು, ಉದಾಹರಣೆಗೆ ಲೋಕಸ್ ಕೊಯೇರ್ಯುಲೆಯಸ್ ಹಾಗು ಸಬ್ಸ್ಟಾನ್ಶಿಯಾ ನಿಗ್ರ ಎನಿಸಿದೆ.(ಫೈಬರ್ ಮೂಲಕ ಸಂಚರಿಸುವ ಕೋಶ)

ಚರ್ಮದಲ್ಲಿನ ಮೆಲನಿನ್ ನನ್ನು ಮೆಲನೋಸೈಟ್ ಗಳು ಉತ್ಪಾದಿಸುತ್ತವೆ, ಇವು ಹೊರಚರ್ಮದ ತಳ ಪದರದಲ್ಲಿ ಕಂಡುಬರುತ್ತವೆ. ಆದಾಗ್ಯೂ ಮಾನವರು ಸಾಮಾನ್ಯವಾಗಿ ತಮ್ಮ ಚರ್ಮದಲ್ಲಿ ಮೆಲನೋಸೈಟ್ ಗಳ ಸದೃಶ ಸಾರೀಕರಣವನ್ನು ಹೊಂದಿರುತ್ತಾರೆ. ಕೆಲವು ವ್ಯಕ್ತಿಗಳಲ್ಲಿ ಹಾಗು ಜನಾಂಗೀಯ ಗುಂಪುಗಳಲ್ಲಿ ಕಂಡುಬರುವ ಮೆಲನೋಸೈಟ್ ಗಳು ಹೆಚ್ಚು ಸಾಮಾನ್ಯವಾಗಿ ಅಥವಾ ವಿರಳವಾಗಿ ಮೆಲನಿನ್-ಉತ್ಪಾದಿಸುವ ಜೀನು(ವಂಶವಾಹಿನಿ)ಗಳನ್ನು ಪ್ರಕಟಿಸುತ್ತವೆ. ಆ ಮೂಲಕ ಚರ್ಮದ ಮೆಲನಿನ್ ಗೆ ಹೆಚ್ಚು ಅಥವಾ ಕಡಿಮೆ ಸಾರೀಕರಣವನ್ನು ಒದಗಿಸುತ್ತವೆ. ಕೆಲವು ಪ್ರತ್ಯೇಕ ಪ್ರಾಣಿಗಳು ಹಾಗು ಮನುಷ್ಯರು ಬಹಳ ಕಡಿಮೆ ಅಥವಾ ಮೆಲನಿನ್ ನ ಯಾವುದೇ ಅಂಶವನ್ನು ತಮ್ಮ ದೇಹದಲ್ಲಿ ಹೊಂದಿರುವುದಿಲ್ಲ, ಈ ಪರಿಸ್ಥಿತಿಯನ್ನು ಆಲ್ಬಿನಿಸಂ(ಚರ್ಮದಲ್ಲಿ ಸಹಜ ವರ್ಣದ್ರವ್ಯವಿಲ್ಲದಿರುವುದರಿಂದ ಆಗುವ ಬಿಳಿಚುವಿಕೆ) ಎಂದು ಕರೆಯಲಾಗುತ್ತದೆ.

ಮೆಲನಿನ್ ಅಣುಗಳ ಸಣ್ಣ ಸಂಯೋಜನೆಯ ಒಂದು ಮೊತ್ತವಾಗಿರುವ ಕಾರಣದಿಂದಾಗಿ, ವಿವಿಧ ಪ್ರಮಾಣಗಳ ವಿವಿಧ ಮಾದರಿಗಳು ಹಾಗು ಈ ಸಂಯೋಜಿತ ಅಣುಗಳ ಬಂಧಕ ಮಾದರಿಗಳು ಮೆಲನಿನ್ ನಲ್ಲಿವೆ. ಫಿಯೋಮೆಲನಿನ್ ಹಾಗು ಯುಮೆಲನಿನ್ ಎರಡೂ ಸಹ ಮಾನವ ಚರ್ಮ ಹಾಗು ಕೂದಲಲ್ಲಿ ಕಂಡುಬರುತ್ತವೆ. ಆದರೆ ಮಾನವರಲ್ಲಿ ಯುಮೆಲನಿನ್ ಅತ್ಯಂತ ಹೇರಳವಾಗಿದೆ, ಜೊತೆಗೆ ಆಲ್ಬಿನಿಸಂ ಕೊರತೆ ಕಡಿಮೆ ಮಾಡುವ ಮೆಲನಿನ್ ನ ಒಂದು ಮಾದರಿಯಾಗಿದೆ.

ಯುಮೆಲನಿನ್ (ಕೂದಲಿಗೆ ವರ್ಣ ನೀಡುವ[ರಾಸಾಯನಿಕ] ಮೆಲನಿನ್ )[ಬದಲಾಯಿಸಿ]

ಯುಮೆಲನಿನ್ ಪಾಲಿಮರ್ ಗಳನ್ನು ಹಿಂದಿನಿಂದಲೂ ಹಲವಾರು ಬಂಧಕಗಳಾದ 5,6 ಡಿಹೈಡ್ರಾಕ್ಸಿ ಇಂಡೋಲ್ (DHI) ಹಾಗು 5,6-ಡಿ ಹೈಡ್ರಾಕ್ಸಿಇಂಡೋಲ್-3-ಕಾಬಾಕ್ಸಿಲಿಕ್ ಆಮ್ಲ (DHICA) ಪಾಲಿಮರ್ ಗಳನ್ನು ಒಳಗೊಂಡಿದೆ ಎಂದು ಭಾವಿಸಲಾಗುತ್ತದೆ. ಆದಾಗ್ಯೂ, ಯುಮೆಲನಿನ್ ನ ವಿದ್ಯುತ್ತೀಯ ಪ್ರಭಾವದ ಲಕ್ಷಣದ ಬಗ್ಗೆ ನಡೆದ ಇತ್ತೀಚಿನ ಸಂಶೋಧನೆಯು, ಇದು ಬೇರೆ ಇತರ ಪ್ರಕ್ರಿಯೆಯಿಂದ ಒಂದಕ್ಕೊಂದು ಅಂಟಿಕೊಂಡಿರುವ ಮೂಲ ಆಲಿಗೋಮರ್ ಗಳನ್ನು(ಕೇವಲ ನಾಲ್ಕೋ ಐದೋ ಅಣುಗಳಿಂದಾದ ಪಾಲಿಮರ್) ಒಳಗೊಂಡಿರುತ್ತದೆ, ಎಂದು ಸೂಚಿಸುತ್ತದೆ. ಯುಮೆಲನಿನ್ ಕೂದಲಲ್ಲಿ ಕಂಡುಬರುತ್ತದೆ, ವರ್ಣವಲಯ, ಹಾಗು ಚರ್ಮ, ಹಾಗು ಕೂದಲಿನ ನೆರೆ ಬಣ್ಣ, ಕಪ್ಪು, ಹಳದಿ, ಹಾಗು ಕಂದು ಬಣ್ಣಗಳಲ್ಲಿ ಕಂಡುಬರುತ್ತದೆ. ಕಪ್ಪು ಚರ್ಮವುಳ್ಳ ಜನರಲ್ಲಿ ಇದು ಹೇರಳವಾಗಿರುತ್ತದೆ.

ಯುಮೆಲನಿನ್ ನಲ್ಲಿ ಎರಡು ವಿಧದ ಮಾದರಿಗಳಿರುತ್ತವೆ, ಈ ಎರಡು ಮಾದರಿಗಳೆಂದರೆ ಕಪ್ಪು ಯುಮೆಲನಿನ್ ಹಾಗು ಕಂದು ಯುಮೆಲನಿನ್, ಇದರಲ್ಲಿ ಕಂದು ಬಣ್ಣಕ್ಕಿಂತ ಕಪ್ಪು ಮೆಲನಿನ್ ಹೆಚ್ಚು ಗಾಢವಾಗಿರುತ್ತದೆ. ಕಪ್ಪು ಯುಮೆಲನಿನ್ ಬಹುತೇಕ ಯುರೋಪಿಯನ್ ಅಲ್ಲದವರಲ್ಲಿ ಹಾಗು ವಯಸ್ಸಾದ ಯುರೋಪಿಯನ್ನರಲ್ಲಿ ಕಂಡುಬರುತ್ತದೆ, ಕಂದು ಯುಮೆಲನಿನ್ ಬಹುತೇಕ ಯುವ ಯುರೋಪಿಯನ್ನರಲ್ಲಿ ಕಂಡುಬರುತ್ತದೆ.

ಇತರ ವರ್ಣದ್ರವ್ಯಗಳೊಂದಿಗೆ ಒಂದು ಸಣ್ಣ ಪ್ರಮಾಣದ ಕಪ್ಪು ಯುಮೆಲನಿನ್ ನ ಕೊರತೆಯು ನೆರೆ ಕೂದಲಿಗೆ ಕಾರಣವಾಗುತ್ತದೆ. ಇತರ ವರ್ಣದ್ರವ್ಯಗಳೊಂದಿಗೆ ಒಂದು ಸಣ್ಣ ಪ್ರಮಾಣದ ಕಂದು ಯುಮೆಲನಿನ್ ನ ಕೊರತೆಯು ಹಳದಿ (ಹೊಂಬಣ್ಣ) ಬಣ್ಣದ ಕೂದಲಿಗೆ ಕಾರಣವಾಗುತ್ತದೆ.

ಫಿಯೋಮೆಲನಿನ್ (ತಿಳಿ ಮತ್ತು ಗಾಢ ಬಣ್ಣದ ಕೂದಲಿರುವವರಲ್ಲಿನ ರಾಸಾಯನಿಕ ದ್ರವ್ಯ)[ಬದಲಾಯಿಸಿ]

ಫಿಯೋಮೆಲನಿನ್ ಕೂದಲು ಹಾಗು ಚರ್ಮ ಎರಡರಲ್ಲೂ ಕಂಡುಬರುವುದರ ಜೊತೆಗೆ ಶ್ವೇತ ವರ್ಣ ಹಾಗು ಕಪ್ಪು ವರ್ಣದ ಮಾನವರಿಬ್ಬರಲ್ಲೂ ಕಂಡುಬರುತ್ತದೆ. ಫಿಯೋಮೆಲನಿನ್ ಕೆಂಪು ಬಣ್ಣಕ್ಕೆ ಗುಲಾಬಿ ವರ್ಣ ನೀಡುತ್ತದೆ, ಹಾಗು, ಈ ರೀತಿ, ವಿಶೇಷವಾಗಿ ಇದು ಕೆಂಪು ಕೂದಲಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ. ಫಿಯೋಮೆಲನಿನ್ ವಿಶೇಷವಾಗಿ ತುಟಿಗಳು, ವರ್ಣವಲಯ, ಮೊಲೆತೊಟ್ಟುಗಳು, ಪುರುಷ ಜನನಾಂಗದ ತುದಿ, ಹಾಗು ಯೋನಿಯಲ್ಲಿ ಕಂಡುಬರುತ್ತದೆ.[೪] ಸೂರ್ಯನ ನೇರಳಾತೀತ ಕಿರಣಗಳಿಗೆ ಒಡ್ಡಿಕೊಂಡಾಗ ಫಿಯೋಮೆಲನಿನ್ ಗಳು ಕ್ಯಾನ್ಸರ್ ಜನಕಗಳಾಗಬಹುದು. ರಾಸಾಯನಿಕವಾಗಿ, ಫಿಯೋಮೆಲನಿನ್, ಯುಮೆಲನಿನ್ ಗಿಂತ ಭಿನ್ನವಾಗಿದೆ, ಇದರ ಆಲಿಗೋಮರ್ (ಅಣುವಿನ ಘಟಕ)ರಚನೆಯು ಬೆಂಜೋತಿಯಜಿನ್ ಅಂಶಗಳಿಂದ ಸಂಯೋಜನೆಗೊಂಡಿರುತ್ತದೆ. ಇವುಗಳು ಅಮೈನೋ ಆಮ್ಲದ L-ಸಿಸ್ಟಿನ್ ಗಳ ಉಪಸ್ಥಿತಿಯಲ್ಲಿ DHI ಹಾಗು DHICAಗೆ ಬದಲಾಗಿ ಉತ್ಪತ್ತಿಯಾಗುತ್ತವೆ.

ನ್ಯೂರೋಮೆಲನಿನ್ (ಮೆದುಳಿನ ಆಳದ ನರಕೋಶ)[ಬದಲಾಯಿಸಿ]

ನ್ಯೂರೋಮೆಲನಿನ್ ಎಂಬುದು ಗಾಢ ವರ್ಣದ್ರವ್ಯವಾಗಿದ್ದು, ಕೇಂದ್ರ ನರಮಂಡಲದಲ್ಲಿರುವ ನಾಲ್ಕು ಪ್ರತ್ಯೇಕ ಬೂದು ದ್ರವ್ಯರಾಶಿಯಲ್ಲಿರುವ ನರಕೋಶದ ವರ್ಣದ್ರವ್ಯದಲ್ಲಿರುತ್ತದೆ: ಸಬ್ಸ್ಟ್ಯಾನ್ಶಿಯಾ ನಿಗ್ರ(ಲ್ಯಾಟಿನ್ ಭಾಷೆಯಲ್ಲಿ, ಇದು ಅಕ್ಷರಶಃ "ಕಪ್ಪು ಪದಾರ್ಥ" ಎಂಬ ಅರ್ಥ ನೀಡುತ್ತದೆ.) -ಪಾರ್ಸ್ ಕಾಂಪ್ಯಾಕ್ಟ ಭಾಗ, ಲೋಕಸ್ ಕೊಯೇರ್ಯುಲೆಯಸ್("ನೀಲಿ ಮಚ್ಚೆ"), ವೇಗಸ್ ನರದ ಬೆನ್ನಿನ ಚಾಲಿತ ಶಕ್ತಿಯ ಮಧ್ಯ ಭಾಗ (ತಲೆಬುರುಡೆಯ ನರ X), ಹಾಗು ಪಾನ್ಸ್(ಮಿದುಳಿನಲ್ಲಿರುವ ನರವ್ಯವಸ್ಥೆ) ಯ ಮಧ್ಯಸ್ಥ ರಾಫೆ ನ್ಯೂಕ್ಲಿಯಸ್ ಇದಾಗಿದೆ.

 ಸಬ್ಸ್ಟ್ಯಾನ್ಶಿಯಾ ನಿಗ್ರ ಹಾಗು ಲೋಕಸ್ ಕೊಯೇರ್ಯುಲೆಯಸ್ (ನರಕೋಶದ ಕೇಂದ್ರ ಸ್ಥಾನ)ಎರಡನ್ನೂ ಅವುಗಳ ಗಾಢ ವರ್ಣಕತೆಯಿಂದ ಶವಪರೀಕ್ಷೆಯ ಸಮಯದಲ್ಲಿ ಸುಲಭವಾಗಿ ಗುರುತಿಸಬಹುದು. ಮಾನವರಲ್ಲಿ, ಜನನದಿಂದಲೇ ಈ ನರಕೋಶಗಳು ವರ್ಣದ್ರವ್ಯವನ್ನು ಹೊಂದಿರುವುದಿಲ್ಲ, ಆದರೆ ಪ್ರಾಯದಿಂದ ಹಿಡಿದು ಪ್ರೌಢವಯಸ್ಸಿನ ಅವಧಿಯಲ್ಲಿ ವರ್ಣದ್ರವ್ಯವು ಬೆಳವಣಿಗೆ ಹೊಂದುತ್ತದೆ. ಆದಾಗ್ಯೂ, ಮಿದುಳಿಗೆ ನ್ಯೂರೋಮೆಲನಿನ್ ನ ಕಾರ್ಯಾಚರಣೆಯು ತಿಳಿಯದಿದ್ದರೂ, ಇದು ಮೋನೋಅಮೈನೆ ನ್ಯೂರೋಟ್ರ್ಯಾನ್ಸ್ಮಿಟ್ಟರ್ ನ ಸಂಶ್ಲೇಷಣೆಯ ಒಂದು ಉಪೋತ್ಪನ್ನವಾಗಿದೆ, ಇವುಗಳಿಗೆ ವರ್ಣದ್ರವ್ಯದಿಂದ ಕೂಡಿದ ನರಕೋಶಗಳೇ ಏಕೈಕ ಆಧಾರವಾಗಿವೆ. ನಿರ್ದಿಷ್ಟ ನ್ಯೂಕ್ಲಿಯಸ್ ನಿಂದ ವರ್ಣದ್ರವ್ಯವುಳ್ಳ ನರಕೋಶಗಳ ಕೊರತೆಯು ವಿವಿಧ ನ್ಯೂರೋಡೀಜೆನರೇಟಿವ್ ಕಾಯಿಲೆ(ನರಕೋಶಗಳಲ್ಲಿನ ನಂಜು)ಗಳಲ್ಲಿ ಕಂಡುಬರುತ್ತದೆ. ಪಾರ್ಕಿನ್ಸನ್ ಕಾಯಿಲೆಯಲ್ಲಿ, ಸಬ್ಸ್ಟ್ಯಾನ್ಶಿಯಾ ನಿಗ್ರದಲ್ಲಿ ಡೋಪಮೈನ್-ಉತ್ಪಾದಿಸುವ ವರ್ಣದ್ರವ್ಯವುಳ್ಳ ನರಕೋಶಗಳ ದೊಡ್ಡ ಕೊರತೆಯುಂಟಾಗುತ್ತದೆ. ನ್ಯೂರೋಮೆಲನಿನ್,ಬೆಕ್ಕುಗಳು ಹಾಗು ನಾಯಿಗಳಂತಹ ಸಸ್ತನಿ ಹಾಗು ಮಾಂಸಾಹಾರಿ ಪ್ರಾಣಿಗಳಲ್ಲೂ ಸಹ ಕಂಡುಬರುತ್ತದೆ.

ಇತರ ಜೀವಿಗಳಲ್ಲಿ[ಬದಲಾಯಿಸಿ]

ವಿವಿಧ ಜೀವಿಗಳಲ್ಲಿ ಮೆಲನಿನ್ ಗಳು ಭಿನ್ನರೀತಿ ಕಾರ್ಯ ಹಾಗು ಚಟುವಟಿಕೆಗಳನ್ನು ನಡೆಸುತ್ತವೆ. ಮೆಲನಿನ್ ನ ಒಂದು ವಿಧವು ಹಲವು ಶೀರ್ಷಪಾದಿಗಳು ಬಳಸುವ ಅವು ಸೃವಿಸುವ ರಾಸಾಯನಿಕ ಸಾಂದ್ರ ಅಂಟು ದ್ರವದಲ್ಲಿರುತ್ತದೆ.ಅದು ಪರಭಕ್ಷಕಗಳ ವಿರುದ್ಧ ರಕ್ಷಣಾ ತಂತ್ರವಾಗಿರುತ್ತದೆ.ಇದನ್ನು ಆ ಸಂದರ್ಭದಲ್ಲಿ ಬಳಸುತ್ತವೆ.(ನೋಡಿ ಸೆಫಲೋಪೋಡ್ ಇಂಕ್) ಮೆಲನಿನ್ ಗಳು ಸೂಕ್ಷ್ಮಜೀವಿಗಳನ್ನೂ ಸಹ ರಕ್ಷಿಸುತ್ತವೆ, ಉದಾಹರಣೆಗೆ ಬ್ಯಾಕ್ಟೀರಿಯ ಹಾಗು ಶಿಲೀಂಧ್ರ; ಇವುಗಳು ಅಂಗಾಂಶಕ್ಕೆ ಹಾನಿ ಮಾಡುವ ಸೂರ್ಯನ UV ವಿಕಿರಣ ಹಾಗು ಪ್ರತಿಕ್ರಿಯಾಶೀಲ ಆಮ್ಲಜನಕದ ಜೀವಿಗಳು ರಕ್ಷಣೆಗೊಳಪಡುತ್ತವೆ. ಮೆಲನಿನ್ ಅಧಿಕ ತಾಪಮಾನ, ರಾಸಾಯನಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.(ಉದಾಹರಣೆಗೆ ಭಾರಿ ಲೋಹಗಳು ಹಾಗು ಆಕ್ಸಿಡೀಕರಣಗೊಳಿಸುವ ಕಾರಕಗಳು), ಜೊತೆಗೆ ಜೀವರಾಸಾಯನಿಕ ಹಾನಿಗಗಳಿಂದ ರಕ್ಷಣೆ ನೀಡುತ್ತದೆ. (ಉದಾಹರಣೆಗೆ ಸೂಕ್ಷ್ಮಜೀವಿಗಳ ಆಕ್ರಮಣಕ್ಕೆ ವಿರುದ್ಧವಾಗಿ ಪರಪೋಷಿಯು ರಕ್ಷಣೆ ನೀಡುತ್ತದೆ).[೫] ಈ ರೀತಿ, ಹಲವು ರೋಗಕಾರಕ ಸೂಕ್ಷ್ಮಜೀವಿಗಳಲ್ಲಿ(ಉದಾಹರಣೆಗೆ,ಕ್ರಿಪ್ಟೋಕೊಕ್ಕಸ್ ನಿಯೋಫೋರ್ಮನ್ಸ್ ಎಂಬ ಒಂದು ಬಗೆಯ ಶಿಲೀಂಧ್ರ) ಮೆಲನಿನ್ ಗಳು ವಿಷಪೂರಿತತೆ ಹಾಗು ರೋಗಕಾರಕತೆಯಲ್ಲಿ ಮಹತ್ವದ ಪಾತ್ರ ವಹಿಸುವಂತೆ ಕಂಡುಬರುತ್ತವೆ. ಇವುಗಳು ಅದರ ಪರಪೋಷಿಯ ಪ್ರತಿರಕ್ಷಿತ ಪ್ರತಿಕ್ರಿಯೆಗಳಿಗೆ ವಿರುದ್ಧವಾಗಿ ಸೂಕ್ಷ್ಮಜೀವಿಯನ್ನು ರಕ್ಷಿಸುತ್ತವೆ. ಅಕಶೇರುಕಗಳಲ್ಲಿ, ರೋಗಕಾರಕಗಳ ದಾಳಿಗೆ ವಿರುದ್ಧವಾದ, ಸಹಜ ಪ್ರತಿರಕ್ಷಿತ ವ್ಯವಸ್ಥೆಯ ಒಂದು ಪ್ರಮುಖ ಅಂಶ ಮೆಲನಿನ್ ನನ್ನು ಒಳಗೊಂಡಿರುತ್ತದೆ. ಸೋಂಕು ತಗುಲಿದ ಕೆಲವೇ ನಿಮಿಷಗಳೊಳಗೆ, ಸೂಕ್ಷ್ಮಜೀವಿಯು ಮೆಲನಿನ್ ನೊಳಗೆ ಸುತ್ತುವರಿಯುತ್ತದೆ. (ಮೆಲನೈಸೆಶನ್), ಅಲ್ಲದೇ ಈ ಕೋಶವು ರೂಪುಗೊಳ್ಳುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಮುಕ್ತ ರಾಡಿಕಲ್ ಉಪೋತ್ಪನ್ನಗಳು ಅವುಗಳನ್ನು ಕೊಲ್ಲುವಲ್ಲಿ ಸಹಕಾರಿಯಾಗಿವೆಯೆಂದು ಭಾವಿಸಲಾಗುತ್ತದೆ.[೬] ರೇಡಿಯೋಟ್ರೋಫಿಕ್ ಶಿಲೀಂಧ್ರವೆಂದು ಕರೆಯಲ್ಪಡುವ ಕೆಲವು ಮಾದರಿಯ ಶಿಲೀಂಧ್ರಗಳು, ಮೆಲನಿನ್ ನನ್ನು ಒಂದು ದ್ಯುತಿಸಂಶ್ಲೇಷಕ ವರ್ಣದ್ರವ್ಯವಾಗಿ ಬಳಕೆ ಮಾಡಲು ಸಮರ್ಥವಾಗಿರುತ್ತವೆ. ಇದು ಅವುಗಳು ಗಾಮ ಕಿರಣಗಳನ್ನು[೭] ಸೆರೆಹಿಡಿಯಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಬೆಳವಣಿಗೆಗೆ ಸಾಧನವಾದ ಶಕ್ತಿಯನ್ನು ಒದಗಿಸುತ್ತದೆ.[೮]

(ಬಯೋಸಿಂಥೆಟಿಕ್) ಎರಡು ಜೈವಿಕ ಕೋಶಗಳ ಪ್ರತಿಕ್ರಿಯಾಸರಣಿಗಳು[ಬದಲಾಯಿಸಿ]

L-ಟೈರೋಸಿನ್
L-DOPA
L-ಡೋಪಕ್ವಿನೋನ್
L-ಲ್ಯೂಕೋಡೋಪಕ್ರೋಮ್
L-ಡೋಪಕ್ರೋಮ್

ಬಯೋಸಿಂಥೆಟಿಕ್ ಪ್ರತಿಕ್ರಿಯಾಸರಣಿಯ ಮೊದಲ ಹಂತದಲ್ಲಿ ಯುಮೆಲನಿನ್ ಹಾಗು ಫಿಯೋಮೆಲನಿನ್ ಎರಡೂ ಟೈರೋಸಿನೇಸ್ ನಿಂದ (ಎಂಜೈಮ್ ಗಳು)ವೇಗವರ್ಧನೆಗೊಳ್ಳುತ್ತವೆ:

ಟೈರೋಸಿನ್ → DOPA → ಡೋಪಕ್ವಿನೋನ್(ಪರ್ಯಾಯ ವರ್ಣದ್ರವ್ಯದ ಅಂಶಗಳು)

ಡೋಪಕ್ವಿನೋನ್ ಬೆಂಜೋಥಿಯಾಜಿನ್ ಹಾಗು ಫಿಯೋಮೆಲನಿನ್ ಗೆ ಎರಡು ಪ್ರತಿಕ್ರಿಯಾಸರಣಿಗಳಲ್ಲಿ ಸಿಸ್ಟಿನ್ ನೊಂದಿಗೆ ಸಂಯೋಗ ಹೊಂದುತ್ತವೆ.

ಡೋಪಕ್ವಿನೋನ್ + ಸಿಸ್ಟಿನ್ → 5-S-ಸಿಸ್ಟೆನಿಲ್ಡೋಪ → ಬೆಂಜೋಥಿಯಾಜಿನ್ ಮಧ್ಯಂತರ ಸಂಯುಕ್ತ → ಫಿಯೋಮೆಲನಿನ್ ಆಗಿ ಮಾರ್ಪಡುತ್ತದೆ.
ಡೋಪಕ್ವಿನೋನ್ + ಸಿಸ್ಟಿನ್→ 2-S-ಸಿಸ್ಟೆನಿಲ್ಡೋಪ → ಬೆಂಜೋತಿಯಾಜಿನ್ ಮಧ್ಯಂತರ ಸಂಯುಕ್ತ → ಫಿಯೋಮೆಲನಿನ್

ಪರ್ಯಾಯವಾಗಿ, ಡೋಪಕ್ವಿನೋನ್ ನನ್ನು ಲ್ಯುಕೊಡೋಪಕ್ರೊಮ್ ಆಗಿ (ಬಿಳಿವರ್ಣವಾಗಿ)ಮಾರ್ಪಡಿಸಬಹುದು. ಅಲ್ಲದೇ ಯುಮೆಲನಿನ್ ಗೆ ಹೆಚ್ಚಿನ ಎರಡು ಪ್ರತಿಕ್ರಿಯಾಸರಣಿಗಳನ್ನು ಅನುಸರಿಸಬಹುದು.

ಡೋಪಕ್ವಿನೋನ್ → ಲ್ಯುಕೊಡೋಪಚ್ರೋಮ್ → ಡೋಪಕ್ರೋಮ್ → 5,6-ಡಿ ಹೈಡ್ರಾಕ್ಸಿನ್ಡೋಲ್ -2-ಕಾರ್ಬಾಕ್ಸಿಲಿಕ್ ಆಮ್ಲ → ಕ್ವಿನೋನ್ → ಯುಮೆಲನಿನ್
ಡೋಪಕ್ವಿನೋನ್ → ಲ್ಯುಕೊಡೋಪಚ್ರೋಮ್→ ಡೋಪಕ್ರೋಮ್→ 5,6-ಹೈಡ್ರಾಕ್ಸಿನ್ಡೋಲ್ → ಕ್ವಿನೋನ್ → ಯುಮೆಲನಿನ್

ಸೂಕ್ಷ್ಮರೂಪದಲ್ಲಿ ಗೋಚರತೆ

ಸೂಕ್ಷ್ಮದರ್ಶನೀಯವಾಗಿ, ಮೆಲನಿನ್ ಕಂದು ಬಣ್ಣದಲ್ಲಿದ್ದು, ವಕ್ರೀಕಾರಕವಾಗಿರುವುದಿಲ್ಲ. ಜೊತೆಗೆ ಪ್ರತ್ಯೇಕ ಕಣದೊಂದಿಗೆ ನಯವಾದ ಕಣರಚನೆ ಹೊಂದಿರುತ್ತದೆ.ಇಲ್ಲಿ ಇವುಗಳು 800 ನ್ಯಾನೋಮೀಟರ್ ಗೂ ಕಡಿಮೆ ವ್ಯಾಸ ಹೊಂದಿರುತ್ತವೆ. ಇದು ಸಾಮಾನ್ಯ ರಕ್ತ ವಿಭಜನಾ ವರ್ಣದ್ರವ್ಯಗಳಿಂದ ಮೆಲನಿನ್ ನನ್ನು ಭಿನ್ನವಾಗಿಸುತ್ತದೆ. ಈ ವಿಭಜಿತ ವರ್ಣದ್ರವ್ಯಗಳು ದೊಡ್ದದಾಗಿ, ದಪ್ಪ ಕಣಗಳಿಂದ ಕೂಡಿದ್ದು ವಕ್ರೀಕಾರಕವಾಗಿರುತ್ತವೆ. ಅಲ್ಲದೇ ಹಸಿರಿನಿಂದ ಹಳದಿಯವರೆಗೂ ಅಥವಾ ಕೆಂಪು-ಕಂದು ಬಣ್ಣಗಳ ಶ್ರೇಣಿಯಲ್ಲಿರುತ್ತವೆ. ಹೆಚ್ಚು ವರ್ಣದ್ರವ್ಯದಿಂದ ಆದ ಹಾನಿ ಮತ್ತು ಮೆಲನಿನ್ ನ ದಟ್ಟ ಸಂಗ್ರಹ ಊತಕಶಾಸ್ತ್ರೀಯ ವಿವರಣೆಯನ್ನು ಅಸ್ಪಷ್ಟಗೊಳಿಸಬಹುದು. ಪೊಟ್ಯಾಷಿಯಂ ಪರ್ಮಾಂಗನೇಟ್ ನ ಸಾರಹೀನ ದ್ರಾವಣವು ಒಂದು ಪರಿಣಾಮಕಾರಿ ಮೆಲನಿನ್ ಬಿಳಿಚುಕಾರಿ ಎನಿಸಿಕೊಂಡಿದೆ.

ಕ್ರಮಭಂಗ ವಂಶವಾಹಿಗಳು ಹಾಗು ಕಾಯಿಲೆಗಳ ಅವಸ್ಥೆಗಳು[ಬದಲಾಯಿಸಿ]

ಮೆಲನಿನ್ ಕೊರತೆಯನ್ನು ಅಲ್ಪಾವಧಿಗೆ ವಿಭಿನ್ನ ವಂಶವಾಹಿನಿ ವೈಪರಿತ್ಯಗಳು ಹಾಗು ಕಾಯಿಲೆಯ ಹಂತಗಳೊಂದಿಗೆ ಹೋಲಿಸಬಹುದು.

ಆಕ್ಯುಲೋಕ್ಯುಟೆನಿಯಸ್ ಆಲ್ಬಿನಿಸಂ ನಲ್ಲಿ (ಶರೀರದ ಎಲ್ಲಾ ಭಾಗಗಳು ಬಿಳಿಚಾಗುವಿಕೆ)ಸರಿಸುಮಾರು ಹತ್ತು ವಿವಿಧ ಮಾದರಿಗಳಿವೆ; ಇವುಗಳು ಸಾಮಾನ್ಯವಾಗಿ ಅಲಿಂಗವರ್ಣತಂತು ಅಪಸರಣ ಕಾಯಿಲೆಗಳಾಗಿರುತ್ತವೆ. ಕೆಲವು ಜನಾಂಗೀಯ ಗುಂಪುಗಳು ವಿಭಿನ್ನ ರೂಪಗಳ ವ್ಯಾಪ್ತಿಯ ಹೆಚ್ಚು ಪ್ರಮಾಣವನ್ನು ಹೊಂದಿರುತ್ತವೆ. ಉದಾಹರಣೆಗೆ, ಒಂದು ಸಾಮಾನ್ಯ ಮಾದರಿಯಾದ ಆಕ್ಯುಲೋಕ್ಯುಟೆನಿಯಸ್ ಆಲ್ಬಿನಿಸಂ ಮಾದರಿ 2(OCA2), ವಿಶೇಷವಾಗಿ ಆಫ್ರಿಕಾದ ಕಪ್ಪು ಜನಾಂಗದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಅಲಿಂಗವರ್ಣತಂತು ಅಪಸರಣ ಕಾಯಿಲೆಯ ಲಕ್ಷಣದಲ್ಲಿ ಮೆಲನಿನ್ ವರ್ಣದ್ರವ್ಯವು ಚರ್ಮ, ಕೂದಲು ಹಾಗು ಕಣ್ಣುಗಳಲ್ಲಿ ಹುಟ್ಟಿನಿಂದಲೇ ಕಡಿಮೆ ಪ್ರಮಾಣದಲ್ಲಿರುತ್ತದೆ ಅಥವಾ ಇರುವುದಿಲ್ಲ. ಆಫ್ರಿಕನ್-ಅಮೆರಿಕನ್ನರಲ್ಲಿ OCA2ನ ಅಂದಾಜಿತ ಪ್ರಮಾಣವು 10,000ದಲ್ಲಿ ಒಬ್ಬರಿಗೆ ಮಾತ್ರ ಕಂಡುಬರುತ್ತದೆ. ಇದು ಶ್ವೇತವರ್ಣೀಯ ಅಮೆರಿಕನ್ನರ ಪ್ರಮಾಣವಾದ 36,000ದಲ್ಲಿ ಒಬ್ಬರಿಗೆ ಕಂಡುಬರುವ ಪ್ರಮಾಣಕ್ಕಿಂತಲೂ ಭಿನ್ನವಾಗಿದೆ.[೯] ಕೆಲವು ಆಫ್ರಿಕನ್ ರಾಷ್ಟ್ರಗಳಲ್ಲಿ, ಈ ಕಾಯಿಲೆಯ ಪ್ರಮಾಣ ಮತ್ತಷ್ಟು ಅಧಿಕವಾಗಿದೆ, ಇದು 2,000ದಿಂದ 5,000ದಲ್ಲಿ ಒಬ್ಬರಿಗೆ ಕಂಡುಬರುತ್ತದೆ.[೧೦] ಆಲ್ಬಿನಿಸಂ ನ ಮತ್ತೊಂದು ಮಾದರಿಯೆಂದರೆ, "ಹಳದಿ ಆಕ್ಯುಲೋಕ್ಯುಟೆನಿಯಸ್ ಆಲ್ಬಿನಿಸಂ", ಇದು ಹೆಚ್ಚಾಗಿ ಅಮಿಶ್ (ಚರ್ಚ್ ಅನುಯಾಯಿಗಳು)ಜನಾಂಗದವರಲ್ಲಿ ಕಂಡುಬರುತ್ತದೆ.ಇವರು ಪ್ರಾಥಮಿಕವಾಗಿ ಸ್ವಿಸ್ಸ್ ಹಾಗು ಜರ್ಮನ್ ಸಂತತಿಯವರು. ಈ ಕಾಯಿಲೆಯ IB ಭೇದವನ್ನು ಹೊಂದಿರುವ ಜನರು ಸಾಮಾನ್ಯವಾಗಿ ಹುಟ್ಟಿನಿಂದ ಬಿಳಿ ಕೂದಲು ಹಾಗು ಚರ್ಮವನ್ನು ಹೊಂದಿರುತ್ತಾರೆ. ಆದರೆ ಶೀಘ್ರವೇ ಎಳೆತನದಲ್ಲಿ ಚರ್ಮದ ರೂಢಿಗತ ವರ್ಣಕತೆಯನ್ನು ಹೊಂದುತ್ತಾರೆ.[೧೦]

ಕಣ್ಣಿನ ಆಲ್ಬಿನಿಸಂ, ಕಣ್ಣಿನ ವರ್ಣಕತೆಗೆ ಮಾತ್ರವಲ್ಲದೇ ದೃಷ್ಟಿಯ ತೀಕ್ಷ್ಣತೆಗೂ ಸಹ ಪರಿಣಾಮ ಉಂಟುಮಾಡುತ್ತದೆ. ಆಲ್ಬಿನಿಸಂ ಅನ್ನು ಹೊಂದಿರುವ ಜನರು ಸಾಮಾನ್ಯವಾಗಿ ಪರೀಕ್ಷೆ ವೇಳೆ ನ್ಯೂನತೆಯಿಂದಾಗಿ, 20/60 ರಿಂದ 20/400 ನಡುವಿನ ಶ್ರೇಣಿಯಲ್ಲಿರುತ್ತಾರೆ. ಇದರ ಜೊತೆಗೆ, ಸರಿಸುಮಾರು 2700ರಲ್ಲಿ ಒಬ್ಬರಿಗೆ ಮಾತ್ರ ಕಂಡುಬರುವ ಆಲ್ಬಿನಿಸಂ ನ ಎರಡು ನ್ಯೂನತೆ ವಿಧಗಳಿವೆ. ಪೋರ್ಟೊರಿಕೊ ಮೂಲದವರಲ್ಲಿ ಕಂಡುಬರುತ್ತದೆ. ಇದು ಮೆಲನೋಮ-ಸಂಬಂಧಿತ ಸಾವುಗಳಿಗಿಂತ ಹೆಚ್ಚಿನ ಮರಣ ಪ್ರಮಾಣ ಹೊಂದಿರುತ್ತದೆ.

ಹರ್ಮನ್ಸ್ಕಿ ಪುಡ್ಲಕ್ ಸಿಂಡ್ರೋಮ್ ಹಾಗು ಚೆಡಿಯಾಕ್ ಹಿಗಾಶಿ ಸಿಂಡ್ರೋಮ್ ನ ರೋಗಿಗಳಲ್ಲಿಯೂ ಸಹ ಸಾವಿನ ಪ್ರಮಾಣ ಅಧಿಕವಾಗಿರುತ್ತದೆ. (ಕಣ್ಣಿನ ರಕ್ಷಕ ಪೊರೆಯ ಮೆಲನಿನ್ ಕಡಿಮೆಯಾಗಿ ಅದು ರಕ್ತ ಒಸರುವ ಮಟ್ಟಿಗೆ ಭೀಕರಗೊಳ್ಳುವ ಕಾಯಿಲೆ) ಹರ್ಮನ್ಸ್ಕಿ-ಪುಡ್ಲಕ್ ಸಿಂಡ್ರೋಮ್ ನ ರೋಗಿಗಳು ಕಿರುಬಿಲ್ಲೆಯ ವಾಡಿಕೆರಹಿತ,ಏರುಪೇರಾದ ಕ್ರಿಯೆಯೊಂದಿಗೆ ರಕ್ತಸ್ರಾವದ ದೇಹಸ್ಥಿತಿ ಹೊಂದಿರುತ್ತಾರೆ. ಜೊತೆಗೆ ಇವರು ನಿರ್ಬಂಧಕ ಶ್ವಾಸಕೋಶದ ಕಾಯಿಲೆಯನ್ನೂ ಎದುರಿಸುತ್ತಾರೆ.(ಶ್ವಾಸಕೋಶದ ತಂತೂತಕವೃದ್ದಿ), ದೇಹ ಕೆರಳಿಸುವ ಕರುಳಿನ ಕಾಯಿಲೆ, ಕಾರ್ಡಿಯೋಮಯೋಪಥಿ, ಹಾಗು ಮೂತ್ರಪಿಂಡದ ಕಾಯಿಲೆ. ಚೆಡಿಯಾಕ್-ಹಿಗಾಶಿ ಸಿಂಡ್ರೋಮ್ ನ(ರೋಗ ನಿರೋಧಕ ಶಕ್ತಿ ನ್ಯೂನತೆಯುಳ್ಳ) ರೋಗಿಗಳು ಸೋಂಕಿಗೆ ಒಳಪಡುವ ಸಾಧ್ಯತೆಗಳಿರುತ್ತವೆ. ಜೊತೆಗೆ ಇವರಲ್ಲಿ ಲಿಮ್ಫೋಫಾಲಿಕ್ಯುಲರ್ (ದುಗ್ದ ರಸದ ಸ್ರಾವಕ ಗ್ರಂಥಿ ಊತದ)ತೀವ್ರತೆಯೂ ಸಹ ಉಂಟಾಗಬಹುದು.[೧೦]

ಇಂತಹ ಕಾಯಿಲೆಗಳಲ್ಲಿ ಮೆಲನಿನ್ ನ ಕೊರತೆಯ ಪಾತ್ರ ಕುರಿತಂತೆ ಅಧ್ಯಯನಗಳು ನಡೆಯುತ್ತಿವೆ.

ಆಲ್ಬಿನಿಸಂ ಹಾಗು ಕಿವುಡುತನದ ನಡುವಿನ ಸಂಬಂಧ ಗೊತ್ತಿದ್ದರೂ, ಇದರ ಬಗೆಗಿನ ಮಾಹಿತಿಯನ್ನು ಅತ್ಯಲ್ಪಮಟ್ಟದಲ್ಲಿ ಅರ್ಥಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, 1859ರ ಆನ್ ದಿ ಆರಿಜಿನ್ ಆಫ್ ಸ್ಪೀಶಿಸ್ ನ ನಿರ್ಧಿಷ್ಟ ವಿಷಯದ ಪ್ರಬಂಧದಲ್ಲಿ, ಚಾರ್ಲ್ಸ್ ಡಾರ್ವಿನ್ "ಬೆಕ್ಕುಗಳು ಸಂಪೂರ್ಣವಾಗಿ ಬಿಳಿ ಬಣ್ಣವಾಗಿದ್ದು, ಮೆಲನಿನ್ ನ ನೀಲಿ ಬಣ್ಣ ಹೊಂದಿರುತ್ತವೆ, ಇವುಗಳು ಸಾಮಾನ್ಯವಾಗಿ ಕಿವುಡಾಗಿರುತ್ತವೆ".[೧೧]ಎಂದು ವಿಶ್ಲೇಷಿಸಿದ್ದಾರೆ. ಮಾನವರಲ್ಲಿ, ಅಧಿಕ ವರ್ಣಕತೆ ಹಾಗು ಕಿವುಡುತನ ಸಾಮಾನ್ಯವಾಗಿ ವಿರಳವಾಗಿ ಒಟ್ಟಿಗೆ ವಾರ್ಡೆನ್ಬರ್ಗ್ ಸಿಂಡ್ರೋಮ್ ನಲ್ಲಿ (ವಂಶವಾಹಿನಿಯ ಮೂಲಕ ಉಂಟಾದ ಕಿವುಡುತನ)ಕಂಡುಬರುತ್ತದೆ, ಇದು ಪ್ರಮುಖವಾಗಿ ಉತ್ತರ ಅಮೆರಿಕದ ಹೋಪಿ ಜನಾಂಗದವರಲ್ಲಿ ಕಂಡುಬರುತ್ತದೆ.[೧೨] ಹೋಪಿ ಇಂಡಿಯನ್ಸ್ ನಲ್ಲಿ ಆಲ್ಬಿನಿಸಂನ ಕಾಯಿಲೆಯು ಸರಿಸುಮಾರು 200ರಲ್ಲಿ ಒಬ್ಬ ವ್ಯಕ್ತಿಯಲ್ಲಿ ಕಂಡುಬರುತ್ತದೆಂದು ಅಂದಾಜಿಸಲಾಗಿದೆ. ಕುತೂಹಲಕಾರಿಯಾಗಿ, ಆಲ್ಬಿನಿಸಂ ಹಾಗು ಕಿವುಡುತನದ ಇದೇ ಮಾದರಿ, ನಾಯಿಗಳು ಹಾಗು ದಂಶಕಗಳನ್ನೊಳಗೊಂಡಂತೆ ಇತರ ಸಸ್ತನಿಗಳಲ್ಲಿ ಕಂಡುಬರುತ್ತದೆ. ಆದಾಗ್ಯೂ, ವಸ್ತುತಃ ಮೆಲನಿನ್ ನ ಕೊರತೆಯು, ಅಧಿಕ ವರ್ಣಕತೆಗೆ ಸಂಬಂಧಿಸಿದ ಕಿವುಡುತನಕ್ಕೆ ನೇರ ಕಾರಣವಲ್ಲ. ಕಿಣ್ವಗಳ ಕೊರತೆಯಿರುವವರು ಮೆಲನಿನ್ ನನ್ನು ಸಮನ್ವಯಗೊಳಿಸುವ ಅವಶ್ಯಕತೆಯಿರುತ್ತದೆ. ಇದು ಸಾಮಾನ್ಯ ಶ್ರವ್ಯ ಚಟುವಟಿಕೆಗಳನ್ನು ಹೊಂದಿರುತ್ತದೆ.[೧೩] ಬದಲಿಗೆ, ಕಿವಿಯ ಒಳಭಾಗದ ಸ್ಟ್ರೆಯ ವ್ಯಾಸ್ಕ್ಯುಲರಿಸ್ ನಲ್ಲಿ(ಸಣ್ಣರಕ್ತಕೋಶಗಳು) ಮೆಲನೋಸೈಟ್ಸ್ ಗಳ ಕೊರತೆಯು ಕರ್ಣಶಂಖಕ್ಕೆ ಹಾನಿಯನ್ನು ಉಂಟುಮಾಡುತ್ತದೆ.[೧೪] ಆದಾಗ್ಯೂ ಇದಕ್ಕೆ ಸರಿಯಾದ ಕಾರಣವೇನೆಂಬುದು ಸಂಪೂರ್ಣವಾಗಿ ತಿಳಿದುಬಂದಿಲ್ಲ. ಶಬ್ದ ಗ್ರಾಹ್ಯ ದ್ರವ್ಯವಾದ ಮೆಲನಿನ್, ಇದರ ರಕ್ಷಣಾ ಚಟುವಟಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಪರ್ಯಾಯವಾಗಿ, ಮೆಲನಿನ್ ಇದರ ಅಭಿವೃದ್ಧಿಗೆ ಹಾನಿಯನ್ನುಂಟು ಮಾಡಬಹುದೆಂದು ಡಾರ್ವಿನ್ ಸೂಚಿಸುತ್ತಾರೆ.

ನ್ಯುರೋಮೋಟರ್, ಚಾಲಿತ ನರಗಳ ಕಾರ್ಯಚಟುವಟಿಕೆಗೆ ಹಾನಿಯುಂಟುಮಾಡುವ ಪಾರ್ಕಿನ್ಸನ್ ಕಾಯಿಲೆಯಲ್ಲಿ, ಕೆಲವು ನಿರ್ದಿಷ್ಟ ಡೋಪಮಿನೆರ್ಜಿಕ್ (ಕೇಂದ್ರ ನರಮಂಡಲದ)ವರ್ಣಕತೆಯುಳ್ಳ ನರಕೋಶಗಳ ಚಟುವಟಿಕೆಯ ನಿಲುಗಡೆಯ ಪರಿಣಾಮವಾಗಿ ಸಬ್ಸ್ಟ್ಯಾನ್ಶಿಯಾ ನಿಗ್ರದಲ್ಲಿ ನ್ಯುರೋಮೆಲನಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಡೋಪಮೈನ್ ಸಮನ್ವಯದಲ್ಲಿ ಕೊರತೆಯನ್ನು ಉಂಟುಮಾಡುತ್ತದೆ. ಸಬ್ಸ್ಟ್ಯಾನ್ಶಿಯಾ ನಿಗ್ರದಲ್ಲಿನ ನ್ಯೂರೋಮೆಲನಿನ್ ನ ಮಟ್ಟ ಹಾಗು ವೇಗದ ನಡುವೆ ಯಾವುದೇ ಪರಸ್ಪರ ಸಂಬಂಧ ವರದಿಯಾಗಿಲ್ಲ. ಬಿಳಿಯರಿಗೆ ಹೋಲಿಸಿದರೆ ಪಾರ್ಕಿನ್ಸನ್ ಕಾಯಿಲೆಯು ಕಪ್ಪುವರ್ಣೀಯರಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬಂದಿರುವುದು; "ಕೆಲವರಲ್ಲಿ, ಚರ್ಮಕ್ಕೆ ಸಂಬಂಧಿಸಿದ ಮೆಲನಿನ್ ಯಾವುದೇ ರೀತಿಯಲ್ಲಾದರೂ ಸಬ್ಸ್ಟ್ಯಾನ್ಶಿಯಾ ನಿಗ್ರದಲ್ಲಿರುವ ನ್ಯೂರೋಮೆಲನಿನ್ ನನ್ನು ಬಾಹ್ಯ ಜೀವಾಣು ವಿಷದಿಂದ ರಕ್ಷಿಸುತ್ತದೆ ಎಂಬ ಅಭಿಪ್ರಾಯ ಹುಟ್ಟುಹಾಕಿದೆ."[೧೫] ಜೊತೆಗೆ ನ್ಯೂರೋಮೆಲನಿನ್ ನ ಕಾರ್ಯಚಟುವಟಿಕೆಯ ಬಗ್ಗೆ ನಿಕಾಲೌಸ್[೧೬] ಅವರ ವಿಮರ್ಶಾತ್ಮಕ ಲೇಖನ ನೋಡಿ

ಮೆಲನಿನ್ ನ ಕೊರತೆಯ ಜೊತೆಯಲ್ಲಿ, ಮೆಲನಿನ್ ನ ಆಣ್ವಿಕ ತೂಕವಾದ ಪಾಲಿಮರ್ ನ ತೂಕವು ಆಕ್ಸಿಡೀಕರಣಶೀಲ ಒತ್ತಡ, ಬೆಳಕಿಗೆ ಒಡ್ಡಿಕೆ, ಮೆಲನೋಸೋಮಲ್ ಮ್ಯಾಟ್ರಿಕ್ಸ್ ಪ್ರೋಟೀನ್(ಕ್ರೊಮೊಸೋಮ್ ಗಳೊಂದಿಗಿನ) ಗಳೊಂದಿಗಿನ ಅವ್ಯವಸ್ಥೆ, pHನಲ್ಲಿ ಬದಲಾವಣೆ ಅಥವಾ ಲೋಹ ಅಯಾನುಗಳ ಸ್ಥಳೀಯ ಕೇಂದ್ರೀಕರಣಗಳಂತಹ ವಿವಿಧ ಅಂಶಗಳಿಂದ ಕಡಿಮೆಯಾಗುತ್ತವೆ. ಒಂದು ತಗ್ಗಿದ ಆಣ್ವಿಕ ತೂಕ ಅಥವಾ ಆಕ್ಯುಲರ್ ಮೆಲನಿನ್ ನ ಪಾಲಿಮರೀಕರಣದ ತಗ್ಗಿದ ಮಟ್ಟವು ಸಾಧಾರಣವಾಗಿ ಆಂಟಿ ಆಕ್ಸಿಡೆಂಟ್ ಪಾಲಿಮರ್ ಗಳನ್ನು ಪ್ರೊ-ಆಕ್ಸಿಡೆಂಟ್ ಆಗಿ ಬದಲಾವಣೆ ಮಾಡುತ್ತದೆ. ತನ್ನ ಪ್ರೊ-ಆಕ್ಸಿಡೆಂಟ್ ಹಂತದಲ್ಲಿ, ಮೆಲನಿನ್, ಕಪ್ಪುಮಚ್ಚೆಯ ಅವನತಿ ಹಾಗು ಮೆಲನೋಮದ ಫಲೋತ್ಪಾದನೆ ಹಾಗು ಪ್ರಗತಿಯನ್ನು ಒಳಗೊಳ್ಳುತ್ತವೆ ಎಂದು ಸೂಚಿಸಲಾಗಿದೆ.[೧೭]

ಯುಮೆಲನಿನ್ ನ ಅಧಿಕ ಮಟ್ಟಗಳೂ ಸಹ ಅನಾನುಕೂಲವನ್ನುಂಟು ಮಾಡಬಹುದು. ಆದಾಗ್ಯೂ, ಇದು ಜೀವಸತ್ವ Dಯ ಕೊರತೆಯನ್ನು ಅಧಿಕಗೊಳಿಸುತ್ತದೆ. ಪೋರ್ಟ್ ವೈನ್ ಕಲೆಗಳನ್ನು ಲೇಸರ್ ಮೂಲಕ ತೆಗೆದುಹಾಕುವಲ್ಲಿ ಕಪ್ಪು ಚರ್ಮವು ಒಂದು ಜಟಿಲ ಅಂಶವಾಗಿದೆ. ಬಿಳಿ ಚರ್ಮದ ಚಿಕಿತ್ಸೆಗೆ ಪರಿಣಾಮಕಾರಿಯಾದ ಲೇಸರ್ ಕಿರಣಚಿಕಿತ್ಸೆಗಳು, ಸಾಧಾರಣವಾಗಿ ಏಶಿಯನ್ ಅಥವಾ ಆಫ್ರಿಕನ್ ಮೂಲದ ಜನರಲ್ಲಿರುವ ಪೋರ್ಟ್-ವೈನ್ ಕಲೆಗಳನ್ನು ತೆಗೆದುಹಾಕುವಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಕಪ್ಪು ಚರ್ಮವುಳ್ಳ ವ್ಯಕ್ತಿಗಳಲ್ಲಿ ಮೆಲನಿನ್ ನ ಅಧಿಕ ಮಟ್ಟವು ಕೇವಲ ಲೇಸರ್ ವಿಕಿರಣವನ್ನು ಪ್ರಸರಿಸಿ ಹೀರಿಕೊಳ್ಳುತ್ತದೆ, ಇದಕ್ಕೆ ಗುರಿಯಾದ ಅಂಗಾಂಶವು ಸ್ವಲ್ಪಮಟ್ಟಿನ ಹೀರಿಕೆಯನ್ನು ನಿಷೇಧಿಸುತ್ತದೆ. ಕಪ್ಪು ಚರ್ಮವಿರುವ ಜನರಲ್ಲಿ ಚರ್ಮಕ್ಕೆ ಸಂಬಂಧಿಸಿದ ಇತರ ರೋಗಗಳ ಸರಿಪಡಿಸುವಿಕೆಯಲ್ಲಿ ಇದೇ ರೀತಿಯಾಗಿ ಮೆಲನಿನ್ ಲೇಸರ್ ಚಿಕಿತ್ಸೆಯನ್ನು ಜಟಿಲಗೊಳಿಸಬಹುದು.

ಚರ್ಮದಲ್ಲಿ ಮೆಲನಿನ್ ನ ಸ್ಥಳಿಯ ಕೇಂದ್ರೀಕರಣದಿಂದಾಗಿ ನಸುಗಂದು ಮಚ್ಚೆಗಳು ಹಾಗು ಕಲೆಗಳು ಉಂಟಾಗಬಹುದು. ಇವುಗಳು ತೆಳು ಚರ್ಮದವರಲ್ಲಿ ಅಧಿಕವಾಗಿರುತ್ತವೆ.

ನಿಕೋಟಿನ್ ಇದು ಮೆಲಾನಿನ್ ಸಂಶ್ಲೇಷಣಾ ಕ್ರಿಯೆಯಲ್ಲಿ ತನ್ನ ಪೂರ್ವಗಾಮಿ ಕಾರ್ಯದ ಮೂಲಕ ಅಥವಾ ಮೆಲಾನಿನ್ ಮತ್ತು ನಿಕೋಟಿನ್‌ನ ಇದರ ಬದಲಾಯಿಸಲಾಗದ ಬಂಧದ ಮೂಲಕ ಮೆಲಾನಿನ್-ಒಳಗೊಂಡಿರುವ ಅಂಗಾಂಶಗಳಿಗೆ ಸಾದೃಶ್ಯವಾದ ಲಕ್ಷಣಗಳನ್ನೂ ಕೂಡ ಹೊಂದಿದೆ. ಗಾಢ ವರ್ಣವನ್ನು ಹೊಂದಿದ ವ್ಯಕ್ತಿಗಳಲ್ಲಿ ಹೆಚ್ಚಿದ ನಿಕೋಟಿನ್ ಅವಲಂಬನೆಮತ್ತು ಕಡಿಮೆಯಾದ ಧೂಮಪಾನತ್ಯಜಿಸಿದ ಪ್ರಮಾಣಗಳನ್ನು ಆಧಾರವಾಗಿ ಹೇಳಲು ಇದನ್ನು ಸೂಚಿಸಲಾಗಿದೆ.[೧೮]

ಮಾನವ ರೂಪಾಂತರದ ಅನುವರ್ತನ[ಬದಲಾಯಿಸಿ]

ಮೆಲನೋಸೈಟ್ ಗಳು, ಮೆಲನೋಸೋಮ್ ಗಳೆಂಬ ವಿಶಿಷ್ಟ ಕೊಶೀಯವಾದ ವೆಸಿಕಲ್ಸ್(ಕೋಶಕಗಳು)ನಲ್ಲಿ ಮೆಲನಿನ್ ನ ಕಣಗಳನ್ನು ತೋರಿಸುತ್ತವೆ. ಇವುಗಳನ್ನು ನಂತರದಲ್ಲಿ ಮಾನವನ ಬಾಹ್ಯಚರ್ಮದ ಇತರ ಚರ್ಮ ಕೋಶಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಮೆಲನೋಸೋಮ್ ನ ಪ್ರತಿ ಸ್ವೀಕೃತ ಕೋಶವು ಕೋಶ ಕೇಂದ್ರದ ತುದಿಯಲ್ಲಿ ಸಂಗ್ರಹವಾಗುತ್ತದೆ. ಇಲ್ಲಿ ಅವುಗಳು ಬೈಜಿಕ DNA ಅನ್ನು ಸೂರ್ಯನ ನೇರಳಾತೀತ ಕಿರಣಗಳ ಅಯಾನಿಕೃತ ವಿಕಿರಣಗಳಿಂದ ಉಂಟಾಗುವ ಬದಲಾವಣೆಯಿಂದ ರಕ್ಷಿಸುತ್ತವೆ. ಸಮಭಾಜಕವೃತ್ತಕ್ಕೆ ಸಮೀಪದ ಪ್ರದೇಶದಲ್ಲಿ ಬಹಳ ಕಾಲದಿಂದ ಜೀವಿಸುತ್ತಿದ್ದ ಜನರು, ಸಾಧಾರಣವಾಗಿ ತಮ್ಮ ಚರ್ಮಗಳಲ್ಲಿ ಯುಮೆಲನಿನ್ ನ ಅಧಿಕ ಪ್ರಮಾಣ ಹೊಂದಿರುತ್ತಿದ್ದರು. ಇದು ಅವರ ಚರ್ಮಕ್ಕೆ ಕಂದು ಅಥವಾ ಕಪ್ಪು ಬಣ್ಣವನ್ನು ನೀಡುವುದರ ಜೊತೆಗೆ ಸೂರ್ಯನ ಕಿರಣಗಳಿಗೆ ಅಧಿಕ ಮಟ್ಟದಲ್ಲಿ ಒಡ್ಡಿಕೆಯಾಗುವುದರ ವಿರುದ್ಧ ರಕ್ಷಣೆ ನೀಡುತ್ತದೆ, ಇದು ಸಾಮಾನ್ಯವಾಗಿ ತೆಳು ಚರ್ಮದ ಜನರಲ್ಲಿ ಮೆಲನೋಮವನ್ನು ಉಂಟುಮಾಡುತ್ತದೆ.

ಮಾನವರಲ್ಲಿ, ಸೂರ್ಯನಕಿರಣಕ್ಕೆ ಒಡ್ಡಿಕೆಯು ಚರ್ಮವನ್ನು ಜೀವಸತ್ವ Dಯನ್ನು ತಯಾರಿಸಲು ಉತ್ತೇಜಿಸುತ್ತದೆ. ಏಕೆಂದರೆ ಚರ್ಮಕ್ಕೆ ಅಧಿಕ ಪ್ರಮಾಣದ ಮೆಲನಿನ್ ಸ್ವಾಭಾವಿಕ ಸನ್ ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತದೆ. ಭೂಮಿಯ ಮೇಲಿನ ಅತ್ಯಂತ ತಂಪು ಪ್ರದೇಶಗಳು ಎಂದು ಕರೆಯಲ್ಪಡುವ ವಲಯಗಳಲ್ಲಿ ಜೀವಸತ್ವ Dಯ ಕೊರತೆಯು ಒಂದು ಅಪಾಯಕಾರಿ ಅಂಶವಾಗಬಹುದು; ಅಂದರೆ ಉತ್ತರ ಖಗೋಳವೃತ್ತದಲ್ಲಿ 36 ಡಿಗ್ರಿ ಅಕ್ಷಾಂಶಕ್ಕಿಂತ ಅಧಿಕ ಹಾಗು ದಕ್ಷಿಣ ಖಗೋಳವೃತ್ತದಲ್ಲಿ 36 ಡಿಗ್ರಿ ಅಕ್ಷಾಂಶಕ್ಕಿಂತ ಕಡಿಮೆ. ಇದರ ಪರಿಣಾಮವಾಗಿ, ಕೆನಡಾ ಹಾಗು USAನ ಆರೋಗ್ಯಾಧಿಕಾರಿಗಳು, ಗಾಢವರ್ಣದ ಚರ್ಮವುಳ್ಳವರು (ದಕ್ಷಿಣ ಯುರೋಪಿಯನ್ ಮೂಲದವರನ್ನು ಒಳಗೊಂಡಂತೆ) 1000-2000 IU(ಇಂಟರ್ನ್ಯಾಷನಲ್ ಯೂನಿಟ್ಸ್)ಗಳಷ್ಟು ಜೀವಸತ್ವ Dಯನ್ನು ನಿತ್ಯವೂ ಶರತ್ಕಾಲದಿಂದ ವಸಂತಕಾಲದವರೆಗೂ ಸೇವಿಸಬೇಕೆಂದು ಸಲಹೆ ನೀಡುತ್ತಾರೆ.

ಉತ್ತರ ಅಕ್ಷಾಂಶದಲ್ಲಿ ನೆಲೆಯಾಗಿರುವ ಯುನೈಟೆಡ್ ಕಿಂಗ್ಡಮ್ ನಲ್ಲಿ, ಬ್ರಿಟನ್ಸ್ ಮೂಲದವರು ತೆಳು ಚರ್ಮ ಹೊಂದಿದ್ದಾರೆ. ಇಲ್ಲಿ ಅವರ ಚರ್ಮವು ಸೂರ್ಯನ ಕಿರಣಕ್ಕೆ ಅತ್ಯಲ್ಪವಾದ ಒಡ್ಡಿಕೆಯಾಗುತ್ತದೆ, ಅವರ ಚರ್ಮದಲ್ಲಿ ಉತ್ಪತ್ತಿಯಾಗುವ ಸಾಕೂಸಾಲದಂತಿರುವ ಮೆಲನಿನ್ ಸೂರ್ಯನಕಿರಣವನ್ನು ನಿರ್ಬಂಧಿಸುವಲ್ಲಿ ಅಸಮರ್ಥವಾಗಿದೆ. ಈ ರೀತಿಯಾಗಿ, ಅವರ ದೇಹಗಳು ಸೂರ್ಯನಕಿರಣದ ಸಹಾಯದಿಂದ ಜೀವಸತ್ವ Dಯನ್ನು ಉತ್ಪಾದಿಸುವಲ್ಲಿ ಸಮರ್ಥವಾಗಿವೆ. ಜೀವಸತ್ವ Dಯು, ಮೀನಿನ ಎಣ್ಣೆಯ ಪೂರಕಗಳಲ್ಲಿ ಕಂಡುಬಂದಿಲ್ಲ. ಆದರೆ ಮೀನಿನ ಲಿವರ್ ಎಣ್ಣೆ, ಉದಾಹರಣೆಗೆ ಕಾಡ್ ಲಿವರ್ ಎಣ್ಣೆ, ಒಂದು ಉತ್ತಮ ಮೂಲವಾಗಿದೆ. ಜೀವಸತ್ವ Dಯು, ದೇಹದಲ್ಲಿ ಕ್ಯಾಲ್ಷಿಯಂ ನ ಕಡಿಮೆ ಪ್ರಮಾಣದಿಂದ ಉಂಟಾಗುವ ರಿಕೆಟ್ಸ್(ಕುಟಿಲ ವಾತ) ಅನ್ನು ತಡೆಗಟ್ಟುವಲ್ಲಿ ಅಗತ್ಯವೆನಿಸಿದೆ.

ಅದೃಷ್ಟವಶಾತ್, 1930ರಲ್ಲಿ, ಜೀವಸತ್ವ Dಯನ್ನು ಆಹಾರಕ್ರಮದಲ್ಲಿ ಒಂದು ಪೂರಕ ಸತ್ವವಾಗಿ ಬಳಸಬಹುದೆಂದು ಕಂಡುಹಿಡಿಯಲಾಯಿತು; ಹಾಗು ಅದರಂತೆ ಸಿದ್ಧಪಡಿಸಲಾಯಿತು. ಸಾಮಾನ್ಯ ಆಹಾರಗಳಾದ ಹಾಲು ಹಾಗು ಬ್ರೆಡ್ ಜೀವಸತ್ವ Dಯಿಂದ ಪುಷ್ಟಿಗೊಂಡಿವೆ.

ತೀರ ಇತ್ತೀಚಿನ ವೈಜ್ಞಾನಿಕ ಸಾಕ್ಷ್ಯವು, ಎಲ್ಲ ಮಾನವರು ಆಫ್ರಿಕಾದಿಂದ ವಿಕಸನಗೊಂಡಿದ್ದಾರೆ ಎಂದು ಸೂಚಿಸುತ್ತದೆ. [೧೯]ನಂತರದಲ್ಲಿ ಯಶಸ್ವೀ ವಿಕಿರಣಗಳ ಮೂಲಕ ಜಗತ್ತಿನ ಉಳಿದ ಭಾಗಗಳಲ್ಲಿ ನೆಲೆಸಿದರು. ಸಂಭವನೀಯವಾಗಿ, ಮೊದಲ ಆಧುನಿಕ ಮಾನವರು ಮೆಲನೋಸೈಟ್ ಗಳನ್ನು ಉತ್ಪಾದಿಸುವ ಯುಮೆಲನಿನ್ ಗಳನ್ನು ತುಲನಾತ್ಮಕವಾಗಿ ಅಧಿಕ ಪ್ರಮಾಣದಲ್ಲಿ ಹೊಂದಿದ್ದರು. ಈ ರೀತಿಯಾಗಿ, ಇಂದಿನ ಸ್ಥಳೀಯ ಆಫ್ರಿಕಾ ಜನರ ಮಾದರಿ ಕಪ್ಪು ಚರ್ಮವನ್ನು ಹೊಂದಿದ್ದರು. ಈ ಮೂಲ ನಿವಾಸಿಗಳಲ್ಲಿ ಕೆಲವರು ಏಶಿಯ ಹಾಗು ಯುರೋಪ್ ನ ಪ್ರದೇಶಗಳಿಗೆ ವಲಸೆ ಬಂದು ನೆಲೆಯೂರಿದರು. ಸೂರ್ಯನ ಕಿರಣದ ತೀವ್ರತೆಯು ಕಡಿಮೆ ಇರುವ ತಾಪಮಾನದಲ್ಲಿ ಯುಮೆಲನಿನ್ ನ ಉತ್ಪತ್ತಿಯು ತಗ್ಗಿದ ಪ್ರಮಾಣದಲ್ಲಿತ್ತು. ತೆಳುವಾದ ಮಾನವ ಚರ್ಮದೊಂದಿಗೆ ಸಂಯೋಜನೆ ಹೊಂದಿದೆಯೆಂದು ಹೇಳಲಾಗುವ ಎರಡು ಸಾಮಾನ್ಯ ಜೀನುಗಳಲ್ಲಿ Mc1r [೨೦] ಗುಣಾತ್ಮಕ ಆಯ್ಕೆಯನ್ನು ಹೊಂದಿರುವಂತೆ ಕಂಡುಬರುವುದಿಲ್ಲ, ಆದರೆ SLC24A5 [೨೧] ಗುಣಾತ್ಮಕ ಆಯ್ಕೆಯನ್ನು ಹೊಂದಿರುತ್ತದೆ.

ಉತ್ತರದಿಕ್ಕಿಗೆ ವಲಸೆಹೋದ ಜನರಲ್ಲಿ, ಸಮಭಾಜಕವೃತ್ತಕ್ಕೆ ವಲಸೆ ಹೋಗುವ ತೆಳು ಚರ್ಮದವರು ಹೆಚ್ಚಿದ ಸೂರ್ಯ ಕಿರಣಕ್ಕೆ ಒಗ್ಗಿಕೊಳ್ಳುತ್ತಾರೆ. ಹೆಚ್ಚಿನ ಜನರ ಚರ್ಮವು UV ಬೆಳಕಿಗೆ ಒಡ್ಡಿಕೊಂಡಾಗ ಕಪ್ಪಾಗುತ್ತದೆ, ಇದು ಅಗತ್ಯಬಿದ್ದಾಗ ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ. ಇದು ಸೂರ್ಯನಿಂದ ಉಂಟಾಗುವ ಚರ್ಮದ ಕಂದುಬಣ್ಣಕ್ಕಿರುವ ದೈಹಿಕ ಕಾರಣವಾಗಿದೆ. ಚರ್ಮವನ್ನು ಹೆಚ್ಚು ರಕ್ಷಿಸುವ ಯುಮೆಲನಿನ್ ಅನ್ನು ಹೊಂದಿರುವ ಗಾಢಚರ್ಮವುಳ್ಳ ಜನರು ಬಿಸಿಲುಕಂದಿನ (ಚರ್ಮ ಬಾಡುವುದರ)ವಿರುದ್ಧ ಅಧಿಕ ರಕ್ಷಣೆ ಪಡೆಯುತ್ತಾರೆ. ಜೊತೆಗೆ ಚರ್ಮ ಅರ್ಬುದದ ಲಕ್ಷಣ ಅತ್ಯಂತ ಮಾರಕ ರೂಪವೆನಿಸಿದ ಮೆಲನೋಮದ ಬೆಳವಣಿಗೆಗೆ ಕಾರಣವಾಗುತ್ತದೆ. ಜೊತೆಗೆ ತೀಕ್ಷ್ಣವಾದ ಸೂರ್ಯನ ಕಿರಣದ ಒಡ್ಡಿಕೆಯಿಂದಾಗಿ ಉಂಟಾಗುವ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಾದ ಕೆಲವು ಜೀವಸತ್ವಗಳಿಂದ ಉಂಟಾಗುವ ಫೋಟೋಡಿಗ್ರೇಡೆಷನ್ ಉದಾಹರಣೆಗೆ ರಿಬೋಫ್ಲೇವಿನ್ ಗಳು, ಕರಾಟಿನಾಯ್ಡ್ ಗಳು(ಕೆಂಪು ಅಥವಾ ಹಳದಿ ವರ್ಣದ್ರವ್ಯ), ಟೋಕೋಫೆರೋಲ್, ಹಾಗು ಫೋಲೇಟ್(ಫೊಲಿಕ್ ಆಮ್ಲದ ಕೊರತೆ)ಸಮಸ್ಯೆಯಾಗಬಹುದು.

ಕಣ್ಣುಗಳು, ಪಾಪೆಪೊರೆಗಳು ಹಾಗು ಕೊರಾಯ್ಡ್(ಕಣ್ಣುಗುಡ್ಡೆಯ ಕವಚದಲ್ಲಿಯ ನಡುಪೊರೆ), ನೇರಳಾತೀತ ಹಾಗು ಅಧಿಕ ಆವರ್ತನವುಳ್ಳ ಗೋಚರಿಸುವ ಬೆಳಕಿನಿಂದ ರಕ್ಷಣೆ ಒದಗಿಸುತ್ತವೆ; ಸೂರ್ಯನ ಕಿರಣದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು ಬೂದು, ನೀಲಿ, ಹಾಗು ಹಸಿರು ಕಣ್ಣಿನ ಜನರಿಗೆ ಅಧಿಕವಾಗಿರುತ್ತವೆ. ಇದಲ್ಲದೆ, ಕಣ್ಣಿನ ಲೆನ್ಸ್ ಗಳು ವಯಸ್ಸಾದಂತೆಲ್ಲ, ಹೆಚ್ಚಿನ ರಕ್ಷಣೆ ಒದಗಿಸುವ ಸಲುವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದಾಗ್ಯೂ, ವಯಸ್ಸಾದಂತೆಲ್ಲ ಲೆನ್ಸ್ ಗಳು ಸಹ ತಮ್ಮ ಹೊಂದಾಣಿಕೆಯನ್ನು ಕಳೆದುಕೊಂಡು ಹೆಚ್ಚು ರಿಜಿಡ್(ಗಡುಸು)ಆಗುತ್ತವೆ - ದೂರದಿಂದ ಸಮೀಪದವರೆಗೂ ದೃಷ್ಟಿಸಲು ಆಕಾರದ ಬದಲಾವಣಾ ಸಾಮರ್ಥ್ಯ-ಈ ಹಾನಿಯು ಬಹುಶಃ UV ತೆರೆದುಕೊಳ್ಳುವ ಪ್ರೋಟೀನ್ ಅಡ್ಡಬಂಧದಿಂದ ಉಂಟಾಗಬಹುದು.

J.D. ಸೈಮನ್ ಮತ್ತಿತರರು [೨೨] ನಡೆಸಿದ ಇತ್ತೀಚಿನ ಸಂಶೋಧನೆಯಲ್ಲಿ ಮೆಲನಿನ್ ಫೋಟೋಪ್ರೊಟೆಕ್ಶನ್ ಅನ್ನು(ನೈಸರ್ಗಿಕ ಹಾನಿ ನಿಯಂತ್ರಕಗಳು) ಹೊರತುಪಡಿಸಿ ಮೆಲನಿನ್ ಒಂದು ಆರಕ್ಷಕ ಪಾತ್ರವನ್ನು ನಿರ್ವಹಿಸುತ್ತದೆಂದು ಸೂಚಿಸುತ್ತಾರೆ. ಮೆಲನಿನ್ ತನ್ನ ಕಾರ್ಬಾಕ್ಸಿಲೇಟ್ ಹಾಗು ಫೆನಾಲಿಕ್ ಹೈಡ್ರಾಕ್ಸಿಲ್ ಗುಂಪುಗಳ ಮೂಲಕ ಲೋಹ ಅಯಾನುಗಳನ್ನು ಪರಿಣಾಮಕಾರಿಯಾಗಿ ಬಂಧಿಸುತ್ತದೆ, ಹಲವು ಸಂದರ್ಭಗಳಲ್ಲಿ ಶಕ್ತಿಶಾಲಿ ಕೊಂಡಿಯಂತಹ ಲಿಗಂಡ್ ಎಥೈಲಿನ್ಡಯಾಮಿನೆಟೆಟ್ರಾಸಿಟೇಟ್ (EDTA)ಗಿಂತ (ಸಂಕೀರ್ಣ ಲವಣದ ಅಯಾನು) ಪರಿಣಾಮಕಾರಿಯಾಗಿರುತ್ತದೆ. ಈ ರೀತಿಯಾಗಿ ವಿಷಕಾರಿ ಲೋಹ ಅಯಾನುಗಳೆಂದು ಹೇಳಲಾಗುವ ಬಂಧಕಕ್ಕೆ ಸಹಾಯಕವಾಗಿ ಉಳಿದ ಕೋಶವನ್ನು ರಕ್ಷಿಸುತ್ತದೆ. ಈ ಆಧಾರ ಕಲ್ಪನೆಯು, ಪಾರ್ಕಿನ್ಸನ್ ಕಾಯಿಲೆಯಲ್ಲಿ ಕಂಡುಬರುವ ನ್ಯೂರೋಮೆಲನಿನ್ ನ ಕೊರತೆಯು ಮಿದುಳಿನಲ್ಲಿ ಉಂಟಾಗುವ ಅಧಿಕ ಮಟ್ಟದ ಕಬ್ಬಿಣಾಂಶದಿಂದ ಉಂಟಾಗುತ್ತದೆಂಬ ಅಂಶವನ್ನು ಸಮರ್ಥಿಸುತ್ತದೆ.

ಭೌತಿಕ ಗುಣಲಕ್ಷಣಗಳು ಹಾಗು ತಂತ್ರಜ್ಞಾನ ಅಳವಡಿಕೆಗಳು[ಬದಲಾಯಿಸಿ]

ರಾಚನಿಕ ಹಾಗು ಇಲೆಕ್ಟ್ರಾನಿಕವಾಗಿ,(ಅಣುರೂಪವಾಗಿರುವ) ಮೆಲನಿನ್ ಗಳು "ಗಡುಸಾದ-ಬೆನ್ನೆಲುಬು" ವಾಹಕ ಪಾಲಿಮರ್ ಗಳಾಗಿವೆ. ಇದು ಪಾಲ್ಯಸೆಟಿಲಿನ್, ಪಾಲಿಪೈರ್ರೋಲ್, ಹಾಗು ಪಾಲ್ಯನಿಲಿನ್ "ಬ್ಲ್ಯಾಕ್" ಗಳಿಂದ ಹಾಗು ಅವುಗಳ ಸಹಪಾಲಿಮರ್ ಗಳ ಮಿಶ್ರಣದಿಂದ ರಚನೆಯಾಗಿದೆ. ಅತ್ಯಂತ ಸರಳ ಮೆಲನಿನ್ ಎಂದರೆ ಪಾಲ್ಯಸೆಟಿಲಿನ್, ಹಾಗು ಕೆಲವು ಶಿಲೀಂಧ್ರಯುಕ್ತ ಮೆಲನಿನ್ ಗಳು ಶುದ್ಧ ಪಾಲ್ಯಸೆಟಿಲಿನ್ ಗಳಾಗಿವೆ.

1963ರಲ್ಲಿ, D.ಎ ವೆಯಿಸ್ಸ್ ಹಾಗು ಸಹ ವರ್ತಿಗಳು[೨೩][೨೪][೨೫] ಮೆಲನಿನ್ ನಲ್ಲಿರುವ ಅಧಿಕ ವಿದ್ಯುತ್ ವಾಹಕತೆಯನ್ನು ವರದಿ ಮಾಡಿದರು, ಅಯೋಡಿನ್-ಮಿಶ್ರಿತ ಹಾಗು ಆಕ್ಸಿಡೀಕೃತ ಪಾಲಿಪೈರ್ರೋಲ್ "ಬ್ಲ್ಯಾಕ್" ಎಂಬ ಹೆಸರೂ ನೀಡಲಾಯಿತು. ಅವರು 1 Ohm/cmನಷ್ಟು ಅಧಿಕ ವಾಹಕತೆಯನ್ನು ಸಾಧಿಸಿದರು.

ದಶಕದ ನಂತರ, ಜಾನ್ ಮ್ಯಾಕ್ಗಿನ್ನೆಸ್ಸ್, ಹಾಗು ಸಹಕೆಲಸಗಾರರು DOPA ಮೆಲನಿನ್ ನಲ್ಲಿ ತಯಾರಿಸಲಾದ ಒಂದು ವೋಲ್ಟೇಜ್-ನಿಯಂತ್ರಿತ ಘನ-ಸ್ಥಿತಿಯ ಪ್ರತಿಕ್ರಿಯಾರಂಭ ಮಿತಿಯ ಸ್ವಿಚ್ ನ ಅಧಿಕ ವಾಹಕತೆ "ON" ಸ್ಥಿತಿಯ ಬಗ್ಗೆ ವರದಿ ಮಾಡಿದರು. ಇದಲ್ಲದೆ, ಈ ಪದಾರ್ಥವು-ಸ್ವಿಚ್ ಹಾಕಿದಾಗ ಬೆಳಕಿನ ಒಂದು ಪ್ರತಿಫಲನವನ್ನು ಹೊರಚಿಮ್ಮಿಸುತ್ತಿತ್ತು-ಇಲೆಕ್ಟ್ರೋಲುಮಿನಿಸೆನ್ಸ್ಇದಾಗಿತ್ತು. ಮೆಲನಿನ್ ಋಣಾತ್ಮಕ ನಿರೋಧಶಕ್ತಿಯನ್ನು ಪ್ರದರ್ಶಿಸುತ್ತದೆ, ಇದು ಇಲೆಕ್ಟ್ರಾನಿಕವಾಗಿ ಸಕ್ರಿಯವಾದ ವಾಹಕ ಪಾಲಿಮರ್ ಗಳ ಒಂದು ಪ್ರಮುಖ ಲಕ್ಷಣವಾಗಿದೆ. ಇದೇ ರೀತಿಯಾಗಿ, ಮೆಲನಿನ್ ಒಂದು ಉತ್ತಮ ಶಬ್ದ-ಗ್ರಾಹ್ಯ ಪದಾರ್ಥವಾಗಿದೆ;[೨೬] ಏಕೆಂದರೆ ಇದು ಬಲವಾದ ಎಲೆಕ್ಟ್ರಾನ್-ಫೋನಾನ್ ಜೋಡಿಬಂಧ ಹೊಂದಿದೆ. ಇದು ಕಿವಿಯ ಒಳಭಾಗದಲ್ಲಿರುವ ಮೆಲನಿನ್ ನ ಉಪಸ್ಥಿತಿಗೆ ಸಂಬಂಧಿಸಿದೆ.
ಮೆಲನಿನ್ ವೋಲ್ಟೇಜ್-ನಿಯಂತ್ರಿತ ಸ್ವಿಚ್, 1974ರಿಂದಲೂ ಚಾಲ್ತಿಯಲ್ಲಿರುವ ಒಂದು "ಸಕ್ರಿಯ" ಜೈವಿಕ ಪಾಲಿಮರ್ ವಿದ್ಯುತ್ತಿನ ಸಾಧನ. ಸ್ಮಿತ್ಸೋನಿಯನ್ ಚಿಪ್ ಸಂಗ್ರಹ.

ಮೆಲನಿನ್ ಗಳನ್ನೂ ಸಾಧನವಾಗಿ ಬಳಸುವ ಇತ್ತೀಚಿನ ಆವಿಷ್ಕಾರದವರೆಗೂ ಈ ಹಿಂದಿನ ಸಂಶೋಧನೆಗಳು "ಕಣ್ಮರೆಯಾಗಿದ್ದವು". ವಿಶೇಷವಾಗಿ ಇಲೆಕ್ಟ್ರೋಲೂಮಿನೆಸೆಂಟ್ ಪ್ರದರ್ಶನಗಳು ಎನ್ನಬಹುದು. 2000ದಲ್ಲಿ, ರಸಾಯನಶಾಸ್ತ್ರಕ್ಕಾಗಿ ಮೂವರು ವಿಜ್ಞಾನಿಗಳಿಗೆನೋಬಲ್ ಪ್ರಶಸ್ತಿಯನ್ನು ನೀಡಲಾಯಿತು. ಇವರು 1977ರಲ್ಲಿ ಕೈಗೊಂಡ ವಾಹಕ ಆರ್ಗ್ಯಾನಿಕ್ ಪಾಲಿಮರ್ ಗಳ ಬಗೆಗಿನ (ಮರು)ಸಂಶೋಧನೆ ಹಾಗು ಬೆಳವಣಿಗೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೆಯಿಸ್ಸ್ ಮತ್ತಿತರರು ನಡೆಸಿದ ಸಂಶೋಧನೆಯ ಅಗತ್ಯದ ಪುನರಾವರ್ತನೆಯಾಗಿ, ಈ ಪಾಲಿಮರ್ ಗಳನ್ನು ಆಕ್ಸಿಡೀಕರಣಗೊಳಿಸಲಾಗಿತ್ತು, ಇವು ಅಯೋಡಿನ್-ಮಿಶ್ರಿತ "ಪಾಲ್ಯಸೆಟಿಲಿನ್ ಬ್ಲ್ಯಾಕ್" ಮೆಲನಿನ್ ಗಳಾಗಿದ್ದವು. ವೆಯಿಸ್ಸ್ ಮತ್ತಿತರರ ಹಿಂದಿನ ವರದಿಯು ಬಹುತೇಕ ಭಿನ್ನವಾಗಿತ್ತೆಂಬುದಕ್ಕೆ ನೋಬಲ್ ಸಮಿತಿಗೆ ಯಾವುದೇ ಸಾಕ್ಷ್ಯಗಳಿರಲಿಲ್ಲ[೨೩][೨೪][೨೫]. ಇದು ಅಯೋಡಿನೀಕೃತ ಪಾಲಿಪೈರ್ರೋಲ್ ಬ್ಲ್ಯಾಕ್ ನಲ್ಲಿ ಅಪ್ರವರ್ತಕ ಅಧಿಕ ವಾಹಕತೆ ಅಥವಾ ವಿನಿಮಯ ಹಾಗು DOPA ಮೆಲನಿನ್ ನಲ್ಲಿ ಅಧಿಕ ವಿದ್ಯುತ್ ವಾಹಕತೆ ಹಾಗು ಸಂಬಂಧಿತ ಕಾರ್ಬನಿಕ ಅರೆವಾಹಕಗಳು ಅಸ್ತಿತ್ವದಲ್ಲಿವೆ. ಮೆಲನಿನ್ ಕಾರ್ಬನಿಕ ಎಲೆಕ್ಟ್ರಾನಿಕ್ ಸಾಧನವು ಇದೀಗ ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಶನ್ ನ ನ್ಯಾಷನಲ್ ಮ್ಯೂಸಿಯಂ ಆಫ್ ಅಮೆರಿಕನ್ ಹಿಸ್ಟರಿಯ "ಸ್ಮಿತ್ಸೋನಿಯನ್ ಚಿಪ್ಸ್"ನಲ್ಲಿದೆ.[೨೭]ಇದು ಐತಿಹಾಸಿಕ ಘನ-ಸ್ಥಿತಿಯ ಎಲೆಕ್ಟ್ರಾನಿಕ್ ಸಾಧನವಾಗಿದೆ..

ಆದಾಗ್ಯೂ ಸಂಶ್ಲೇಷಿತ ಮೆಲನಿನ್ (ಸಾಮಾನ್ಯವಾಗಿ BSM, ಅಥವಾ "ಕಪ್ಪು ಸಂಶ್ಲೇಷಿತ ಪದಾರ್ಥ" ಎಂದು ಸೂಚಿತವಾಗುತ್ತದೆ.) ಒಟ್ಟಾಗಿ ಬಂಧಿತವಾದ 3-6 ಆಲಿಗೋಮೆಟ್ರಿಕ್ ಯೂನಿಟ್ ಗಳಿಂದ ತಯಾರಾಗಿರುತ್ತದೆ-ಇದನ್ನು "ಪೆಟ್ರೋಮಾಲೆಕ್ಯೂಲ್" ಎಂದು ಕರೆಯಲಾಗುತ್ತದೆ-ಸ್ವಾಭಾವಿಕವಾಗಿ ಒದಗುವ ಬಯೋಪಾಲಿಮರ್ (BCM, "ಬ್ಲ್ಯಾಕ್ ಸೆಲ್ ಮ್ಯಾಟರ್") ಈ ರಚನೆಯನ್ನು ಅನುಸರಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದಾಗ್ಯೂ, ಸ್ವಾಭಾವಿಕ ಮೆಲನಿನ್ ಪಾಲ್ಯರಿನ್ ಗಳು ಹಾಗು ಪಾಲಿಕ್ಯಾಟಿಯೋನಿಕ್ ಪಾಲೀನ್ ಗಳ ವರ್ಗಕ್ಕೆ ಸೇರುತ್ತವೆಂಬುದಕ್ಕೆ ಯಾವುದೇ ಕಾರಣ ದೊರೆತಿಲ್ಲ. ಪೈರ್ರೋಲ್ ಬ್ಲ್ಯಾಕ್ ಹಾಗು ಅಸೆಟಿಲಿನ್ ಬ್ಲ್ಯಾಕ್ ನ ಮಾದರಿಯಲ್ಲಿ ಸ್ವಾಭಾವಿಕ ಮೆಲನಿನ್ ಗಳ ಅಧ್ಯಯನದಲ್ಲಿ ಎಲ್ಲ ರಾಸಾಯನಿಕ ಹಾಗು ಜೀವವಿಜ್ಞಾನದ ಬಗ್ಗೆ ಸಂಗ್ರಹವಾದ ವಿಶ್ಲೇಷಿತ ದತ್ತಾಂಶವನ್ನು ವರ್ಗೀಕರಿಸುವ ಅಗತ್ಯವಿದೆ.(ಯುಮೆಲನಿನ್ ಗಳು, ಫಿಯೋಮೆಲ್ ನಿನ್ ಗಳು, ಅಲ್ಲೋಮೆಲನಿನ್ ಗಳು)."[೨೮]

ಅಧಿಕವಾಗಿ ಅಡ್ಡಬಂಧ ಹೊಂದಿರುವ ಕೊವೆಲೆನ್ಸಿ ಮಾದರಿಯ ಹೆಟಿರೋಪಾಲಿಮರ್ ಪರಿಮಿತಿಯಿಂದ ಮ್ಯಾಟ್ರಿಕ್ಸ್ ಕಾಲಾವಧಿಯ ಮೆಲನೋಪ್ರೋಟೀನ್ ಗಳವರೆಗೂ ಸಾಕ್ಷ್ಯಗಳು ಅಸ್ತಿತ್ವದಲ್ಲಿವೆ.[೨೯] ಆಂಟಿಆಕ್ಸಿಡೆಂಟ್ ಆಗಿ (ಆಮ್ಲಜನಕದ ಪ್ರತಿಕ್ರಿಯಾತ್ಮಕವಾಗಿ)ಕಾರ್ಯನಿರ್ವಹಿಸುವ ಸಾಮರ್ಥ್ಯವು ಅದರ ಪಾಲಿಮರೀಕರಣದ ಹಂತ ಅಥವಾ ಆಣ್ವಿಕ ತೂಕಕ್ಕೆ ನೇರವಾಗಿ ಪ್ರಮಾಣಾನುಗುಣವಾಗಿದೆಯೆಂದು ಪ್ರಸ್ತಾಪಿಸಲಾಗಿದೆ.[೩೦] ಮೆಲನಿನ್ ಮಾನೋಮರ್ ಗಳ ಪರಿಣಾಮಕಾರಿ ಪಾಲಿಮರೀಕರಣಕ್ಕೆ ಇರುವ ಮಧ್ಯಸ್ಥ ಸ್ಥಿತಿಯು ಕಡಿಮೆ ಆಣ್ವಿಕ ತೂಕದ ರಚನೆಗೆ ಕಾರಣವಾಗಬಹುದು, ಪ್ರೊ-ಆಕ್ಸಿಡೆಂಟ್ ಮೆಲನಿನ್ ಪ್ರೊ-ಆಕ್ಸಿಡೆಂಟ್ ಹಂತದಲ್ಲಿ, ಮೆಲನಿನ್, ಕಪ್ಪುಮಚ್ಚೆಯ ಅವನತಿ ಹಾಗು ಮೆಲನೋಮದ ಫಲೋತ್ಪಾದನೆ ಹಾಗು ಪ್ರಗತಿಯನ್ನು ಒಳಗೊಳ್ಳುತ್ತದೆಂದು ಸೂಚಿಸಲಾಗಿದೆ.[೩೧] ರೆಟಿನಲ್ ಪಿಗ್ಮೆಂಟ್ ಎಪಿತೀಲಿಯಂ(RPE)ನಲ್ಲಿ (ಕಣ್ಣು ಪೊರೆಯ ಕೆಳಭಾಗದಲ್ಲಿನ ದ್ರವ್ಯ) ಮೆಲನೈಸೇಶನ್ ನನ್ನು ಅಧಿಕ ನಿಯಂತ್ರಣಕ್ಕೊಳಪಡಿಸುವ ಸಿಗ್ನಲಿಂಗ್ ಪ್ರತಿಕ್ರಿಯಾಸರಣಿಗಳನ್ನು ಫಾಗೋಸೈಟೋಸಿಸ್ ನ ಹೊರ ಭಾಗದ ರಾಡ್ ನಿಂದ RPE ಕಡಿಮೆ ನಿಯಂತ್ರಣಗೊಳಿಸಬಹುದು. ಈ ಸಂಗತಿಯನ್ನು ಭಾಗಶಃ ಕಪ್ಪುಮಚ್ಚೆಯ ಅವನತಿಯಲ್ಲಿ ಕುಳಿಯ ಹಿಡಿತವೆಂದು ಹೇಳಲಾಗುತ್ತದೆ.[೩೨] `

ಇವನ್ನೂ ನೋಡಿ[ಬದಲಾಯಿಸಿ]

 • ಮೆಲನಿನ್ ಸಿದ್ಧಾಂತ, ಮೆಲನಿನ್ ಗೆ ಪ್ರಕೃತ್ಯತೀತ ಸಾಮರ್ಥ್ಯಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುವ ಒಂದು ಅವೈಜ್ಞಾನಿಕ ಸಿದ್ಧಾಂತ
 • ಮೆಲನೋಜೆನಿಸಿಸ್ ಮೆಲನಿನ್ ನ ಅಧಿಕ ಉತ್ಪತ್ತಿ
 • ಕ್ಯಾರಟೀನ್
 • ಮಾನವನ ಚರ್ಮದ ಬಣ್ಣ
 • SLC24A5
 • Mc1r
 • ಮೆಲನಿಸಂ(ಕಪ್ಪು ಬಣ್ಣ)
 • ಮೆಲನೋಮ
 • ಜೈವಿಕ ಅರೆವಾಹಕ
 • ಪಾರ್ಕಿನ್ಸನ್ ರೋಗ
 • D ಜೀವಸತ್ವ
 • ಬಿಳಿಚ
 • ಗ್ರಿಸೆಲ್ಲಿ ಸಿಂಡ್ರೋಮ್ ಹೈಪೋಪಿಗ್ಮೆನ್ಟೇಶನ್ ನಿಂದ ಉಂಟಾಗುವ ರೋಗಲಕ್ಷಣ
 • ಸೂರ್ಯನ ಕಿರಣಕ್ಕೆ ಒಡ್ಡಿಕೊಂಡರೆ ಉಂಟಾಗುವ ಅಪಾಯಗಳು ಹಾಗು ಅನುಕೂಲಗಳು

ಉಲ್ಲೇಖಗಳು[ಬದಲಾಯಿಸಿ]

 1. Agar N, Young AR (April 2005). "Melanogenesis: a photoprotective response to DNA damage?". Mutation research 571 (1-2): 121–32. doi:10.1016/j.mrfmmm.2004.11.016. PMID 15748643. 
 2. ಟ್ಯಾನಿಂಗ್ ಟಿಪ್ಸ್
 3. Meredith P, Riesz J (February 2004). "Radiative relaxation quantum yields for synthetic eumelanin". Photochemistry and photobiology 79 (2): 211–6. doi:10.1562/0031-8655(2004)079<0211:RCRQYF>2.0.CO;2. PMID 15068035. 
 4. V.ಕೃಷ್ಣರಾಜ್, M.D, ಚರ್ಮದ ಪದರಗಳು [೧] 2008-03-14ರಲ್ಲಿ ಮರುಸಂಪಾದಿಸಲಾಗಿದೆ
 5. Hamilton AJ, Gomez BL. (2002). "Melanins in fungal pathogens". J. Med. Microbiol 53 (3): 189. PMID 11871612. 
 6. Cerenius L, Söderhäll K (April 2004). "The prophenoloxidase-activating system in invertebrates". Immunological reviews 198: 116–26. doi:10.1111/j.0105-2896.2004.00116.x. PMID 15199959. 
 7. ಸೈನ್ಸ್ ನ್ಯೂಸ್, ಡಾರ್ಕ್ ಪವರ್: ಪಿಗ್ಮೆನ್ಟೆಶನ್ ಸೀಮ್ಸ್ ಟು ಪುಟ್ ರೇಡಿಯೇಶನ್ ಟು ಗುಡ್ ಯೂಸ್, ಮೇ 26ರ ಒಂದು ವಾರದಲ್ಲಿ, 2007; ಸಂಪುಟ. 171, ಸಂಖ್ಯೆ. 21 , ಪುಟ. 325 ಡೆವಿಡೆ ಕ್ಯಾಸ್ಟೆಲ್ವೆಚ್ಚಿ ಯಿಂದ
 8. Dadachova E, Bryan RA, Huang X, Moadel T, Schweitzer AD, Aisen P, Nosanchuk JD, Casadevall A. (2007). "Ionizing radiation changes the electronic properties of melanin and enhances the growth of melanized fungi". PLoS ONE 2 (5): e457. doi:10.1371/journal.pone.0000457. PMC 1866175. PMID 17520016. 
 9. ಆಕ್ಯುಲೋಕ್ಯುಟೆನಿಯಸ್ ಆಲ್ಬಿನಿಸಂ
 10. ೧೦.೦ ೧೦.೧ ೧೦.೨ "ಆಕ್ಯುಲರ್ ಮ್ಯಾನಿಫೆಸ್ಟೇಶನ್ಸ್ ಆಫ್ ಆಲ್ಬಿನಿಸಂ"
 11. ಟರ್ಮಿನೇಶನ್ ಆಫ್ ಬ್ರಿಟಿಶ್ ಲೈಬ್ರರಿ ನೆಟ್ ಇಂಟರ್ನೆಟ್ ಸರ್ವೀಸ್
 12. OMIM ರಿಸಲ್ಟ್
 13. Omim - ಟೈರೋನೇಸ್; ಟೈರ್
 14. Cable J, Huszar D, Jaenisch R, Steel KP (February 1994). "Effects of mutations at the W locus (c-kit) on inner ear pigmentation and function in the mouse". Pigment Cell Research 7 (1): 17–32. doi:10.1111/j.1600-0749.1994.tb00015.x. PMID 7521050. 
 15. ಲೆವಿ ಬಾಡಿ ಡಿಸೀಸ್
 16. http://www.ncbi.nlm.nih.gov/pubmed/15949901
 17. Meyskens FL, Farmer P, Fruehauf JP (June 2001). "Redox regulation in human melanocytes and melanoma". Pigment Cell Research 14 (3): 148–54. doi:10.1034/j.1600-0749.2001.140303.x. PMID 11434561. 
 18. ಕಿಂಗ್ G, ಯರ್ಗರ್ VB, ವೆಂಬೊಲ GL, ಬೆಂಡೆಲ್ RB, ಕಿಟ್ಲೆಸ್ R, ಮೂಲ್ಚನ್ ET. ಆಫ್ರಿಕನ್ ಅಮೇರಿಕನ್ ರಲ್ಲಿ ಹೊಗೆಸೊಪ್ಪಿನ ಬಳಕೆ ಹಾಗು ಐಚ್ಚಿಕ ಮೆಲನಿನ್ ನಡುವಿನ ಸಂಬಂಧ.2009). ಫರ್ಮಕಾಲ್ ಬಯೊಕೆಂ ಬಿಹೇವ್. 92(4):589-96. doi:10.1016/j.pbb.2009.02.011PMID 19268687
 19. Tishkoff SA, Reed FA et al. (April 2009). "The Genetic Structure and History of Africans and African Americans". Science Xpress 324 (5930): 1035–44. doi:10.1126/science.1172257. PMID 19407144. 
 20. Harding RM, Healy E, Ray AJ et al. (April 2000). "Evidence for variable selective pressures at MC1R". American journal of human genetics 66 (4): 1351–61. doi:10.1086/302863. PMC 1288200. PMID 10733465. 
 21. Lamason RL, Mohideen MA, Mest JR et al. (December 2005). "SLC24A5, a putative cation exchanger, affects pigmentation in zebrafish and humans". Science (New York, New York.) 310 (5755): 1782–6. doi:10.1126/science.1116238. PMID 16357253. 
 22. Liu Y, Hong L, Kempf VR, Wakamatsu K, Ito S, Simon JD (June 2004). "Ion-exchange and adsorption of Fe(III) by Sepia melanin". Pigment Cell Research 17 (3): 262–9. doi:10.1111/j.1600-0749.2004.00140.x. PMID 15140071. 
 23. ೨೩.೦ ೨೩.೧ ಪಾಲಿಮರ್ ಗಳಲ್ಲಿ ವಿದ್ಯುತ್ ವಹನ. I. ದಿ ಕೆಮಿಕಲ್ ಸ್ಟ್ರಕ್ಚರ್ ಆಫ್ ಪಾಲಿಪೈರ್ರೋಲ್, R. ಮ್ಯಾಕ್ನೀಲ್, R. ಸಿಯುಡಕ್, J.H. ವಾರ್ಡ್ಲಾ ಹಾಗು D.E. ವೆಯಿಸ್ಸ್,(1963) ಆಸ್ಟ್ರೇಲಿಯನ್ ಜರ್ನಲ್ ಆಫ್ ಕೆಮಿಸ್ಟ್ರಿ ಸಂಪುಟ 16 ಸಂಚಿಕೆ 663,ಪುಟಗಳು 1056-1075, http://www.organicsemiconductors.com/polypyrrole1.pdf
 24. ೨೪.೦ ೨೪.೧ ಪಾಲಿಮರ್ ಗಳಲ್ಲಿ ವಿದ್ಯುತ್ ವಹನ. II. ದಿ ಎಲೆಕ್ಟ್ರೋಕೆಮಿಕಲ್ ರಿಡಕ್ಷನ್ ಆಫ್ ಪಾಲಿಪೈರ್ರೋಲ್ ಅಟ್ ಕಂಟ್ರೋಲ್ಡ್ ಪೊಟೆನ್ಶಿಯಲ್, BA ಬೋಲ್ಟೋ ಹಾಗು DE ವೆಯಿಸ್ಸ್,(1963) ಆಸ್ಟ್ರೇಲಿಯನ್ ಜರ್ನಲ್ ಆಫ್ ಕೆಮಿಸ್ಟ್ರಿ ಸಂಪುಟ 16 ಸಂಚಿಕೆ 6, ಪುಟಗಳು 1076-1089, http://www.organicsemiconductors.com/polypyrrole2.pdf
 25. ೨೫.೦ ೨೫.೧ ಪಾಲಿಮರ್ ಗಳಲ್ಲಿ ವಿದ್ಯುತ್ ವಹನ. III. ಎಲೆಕ್ಟ್ರಾನಿಕ್ ಪ್ರಾಪರ್ಟೀಸ್ ಆಫ್ ಪಾಲಿಪೈರ್ರೋಲ್, BA ಬೋಲ್ಟೋ, R ಮ್ಯಾಕ್ನೀಲ್ ಹಾಗು DE ವೆಯಿಸ್ಸ್,(1963) ಆಸ್ಟ್ರೇಲಿಯನ್ ಜರ್ನಲ್ ಆಫ್ ಕೆಮಿಸ್ಟ್ರಿ, ಸಂಪುಟ 16 ಸಂಚಿಕೆ 6, ಪುಟಗಳು 1090 - 1103, http://www.organicsemiconductors.com/polypyrrole3.pdf
 26. ಅನಾಮಲಾಸ್ ಅಬ್ಸಾರ್ಪ್ಶನ್ ಆಫ್ ಸೌಂಡ್ ಇನ್ DBA ಮೆಲನಿನ್ಸ್ . J. ಆನ್ವಯಿಕ ಭೌತಶಾಸ್ತ್ರ, 50(3): 1236-1244, 1979
 27. [೨]
 28. [೩]
 29. Donatien PD, Orlow SJ (August 1995). "Interaction of melanosomal proteins with melanin". European journal of biochemistry / FEBS 232 (1): 159–64. doi:10.1111/j.1432-1033.1995.tb20794.x. PMID 7556145. 
 30. Sarangarajan R, Apte SP (2005). "Melanin aggregation and polymerization: possible implications in age-related macular degeneration". Ophthalmic research 37 (3): 136–41. doi:10.1159/000085533. PMID 15867475. 
 31. Meyskens FL, Farmer PJ, Anton-Culver H (April 2004). "Etiologic pathogenesis of melanoma: a unifying hypothesis for the missing attributable risk". Clinical cancer research : an official journal of the American Association for Cancer Research 10 (8): 2581–3. PMID 15102657. 
 32. Sarangarajan R, Apte SP (2005). "Melanization and phagocytosis: implications for age related macular degeneration". Molecular vision 11: 482–90. PMID 16030499. 
 • "ಲಿಂಕ್ 4-ಮೆಲನಿನ್ 95-97," R.A.ನಿಕೊಲೌಸ್,G.ಸ್ಚೆರಿಲ್ಲೋ ಅವರಲಾ ಮೆಲನಿನ ದಿಂದ ಆಯ್ದುಕೊಳ್ಳಲಾಗಿದೆ Un riesame su struttura,proprietà e sistemi , Atti della Accademia Pontaniana, Vol.XLIV,265-287, ನಪೋಲಿ 1995.[೪]
 • ಡಾ. ಮೊಹಮ್ಮದ್ ಒ.ಪೆರಾಚ, ಡೀನ್ ಎಲಿಯಟ್, ಹಾಗು ಎನ್ರೀಕ್ ಗಾರ್ಶಿಯ-ವಾಲೆನ್ಜುವೆಲ,"ಆಕ್ಯುಲರ್ ಮ್ಯಾನಿಫೆಸ್ಟೆಶನ್ಸ್ ಆಫ್ ಆಲ್ಬಿನಿಸಂ"(emedicine.comನ ಸಂಗ್ರಹ, ಸೆಪ್ಟೆಂಬರ್ 13,2005).

ಬಾಹ್ಯ ಕೊಂಡಿಗಳು[ಬದಲಾಯಿಸಿ]