ಮುತ್ತಿನ ಹಾರ (ಚಲನಚಿತ್ರ)
ಗೋಚರ
(ಮುತ್ತಿನ ಹಾರ ಇಂದ ಪುನರ್ನಿರ್ದೇಶಿತ)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮುತ್ತಿನ ಹಾರ (ಚಲನಚಿತ್ರ) | |
---|---|
ಮುತ್ತಿನಹಾರ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಚಿತ್ರಕಥೆ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಪಾತ್ರವರ್ಗ | ವಿಷ್ಣುವರ್ಧನ್ ಸುಹಾಸಿನಿ ಅಶ್ವಿನಿ, ರಾಮಕುಮಾರ್, ಕಾವ್ಯ, ಅಶ್ವಥ್, ಮಾ.ಆನಂದ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ರೋಹಿಣಿ ಪಿಕ್ಚರ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ಬಾಲಮುರಳಿಕೃಷ್ಣ, ಚಿತ್ರಾ |
೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಯುದ್ಧದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಕಥಾ ಹಂದರವುಳ್ಳದ್ದಾಗಿದೆ. ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ.
ಯುದ್ಧಭೂಮಿಯಲ್ಲಿ ನಡೆಯುವ ಚಕಮಕಿಗಳನ್ನು, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಕೆಲವೆಡೆ ತೋರಿಸಲಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ವಿಷ್ಣುವರ್ಧನ್ ಅಚ್ಚಪ್ಪ ಆಗಿ
- ಸುಹಾಸಿನಿ ಅನ್ನಪೂರ್ಣ ಆಗಿ
- ಕೆ.ಎಸ್. ಅಶ್ವಥ್ ಬೆಳ್ಳಿಯಪ್ಪ
- ರಾಮ್ ಕುಮಾರ್ ನಾಯಕ್ ಮೋಹನ್ ಆಗಿ
- ಮಾಸ್ಟರ್ ಆನಂದ್ ವೀರರಾಜು ಆಗಿ
- ಪ್ರಕಾಶ್ ರಾಜ್ ಒಬ್ಬ ಸಿಪಾಯಿ ಆಗಿ
- ಸಿಹಿ ಕಹಿ ಚಂದ್ರು ಕ್ಷೌರಿಕ ಮೆಣಸಿನಕಾಯಿ ಪಾತ್ರದಲ್ಲಿ
- ಸದಾಶಿವ ಬ್ರಹ್ಮಾವರ್ ಅನ್ನಪೂರ್ಣಳ ತಂದೆ ರಂಗಪ್ಪನ ಪಾತ್ರದಲ್ಲಿ
- ಕಾವ್ಯ
- ಮುಖ್ಯಮಂತ್ರಿ ಚಂದ್ರು
ಹಿನ್ನೆಲೆ ಸಂಗೀತ
[ಬದಲಾಯಿಸಿ]ಹಂಸಲೇಖಾ ಅವರು ಈಚಲನಚಿತ್ರಕ್ಕೆ ಗೀತೆಗಳನ್ನು ಬರೆದು ಅವುಗಳಿಗೆ ಸಂಗೀತವನ್ನೂ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಚಲನಚಿತ್ರದಲ್ಲಿ 5 ಹಾಡುಗಳಿವೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಮಡಿಕೇರಿ ಸಿಪಾಯಿ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ | 4:40 |
2. | "ಕೊಡಗಿನೋಳು ಬೆಡಗಿನೋಳು" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ | 5:13 |
3. | "ಸಾರು ಸಾರು ಮಿಲ್ಟ್ರಿ ಸಾರು" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಲತಾ ಹಂಸಲೇಖ | 5:01 |
4. | "ಕೊಡಗಿನ ವೀರ" | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ | 5:56 |
5. | "ದೇವರು ಹೊಸೆದ ಪ್ರೇಮದ ದಾರ" | ಹಂಸಲೇಖ | ಎಂ. ಬಾಲಮುರಳಿ ಕೃಷ್ಣ, ಕೆ. ಎಸ್. ಚಿತ್ರಾ | 6:01 |
ಒಟ್ಟು ಸಮಯ: | 26:51 |
ಸ್ವಾರಸ್ಯ
[ಬದಲಾಯಿಸಿ]- ಈ ಚಿತ್ರದ ಕೆಲವು ದೃಶ್ಯಗಳಿಗಾಗಿ ವಿಷ್ಣುವರ್ಧನ್ ತಮ್ಮ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಕೊಂಡಿದ್ದರು.