ವಿಷಯಕ್ಕೆ ಹೋಗು

ಮುಜಫರ್‌ಪುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಜಫರ್‌ಪುರ್
Muzaffarpur
ಚಿತ್ರ:Muzaffarpur.gif
Government
 • MayorVimla Devi Tulsyan
Population
 • Total೩,೭೩,೪೫೬
Websitewww.muzaffarpur.nic.in

ಮುಜಫರ್ ಪುರ್ (ಹಿಂದಿ:मुज़फ़्फ़रपुर, ಉರ್ದು: مُظفٌر پور pronunciation ) ಎಂಬುದು, ಭಾರತದ ರಾಜ್ಯ ವಾದ ಬಿಹಾರ ದ ಮುಜಫರ್ ಪುರ್ ಜಿಲ್ಲೆಯಲ್ಲಿರುವ ನಗರವಾಗಿದೆ. ಇದು ಜಿಲ್ಲೆಯ ಪ್ರಧಾನ ಕಾರ್ಯಸ್ಥಾನವಾಗಿದೆ.

ಮುಜಫರ್ ಪುರ್,ಲಿಚಿಹಣ್ಣಿಗೆ ಪ್ರಸಿದ್ಧವಾಗಿದ್ದು , ಉತ್ತರ ಬಿಹಾರದ ಅತ್ಯಂತ ದೊಡ್ಡ ನಗರವಾಗಿದೆ. ಇದು ಹಿಮಾಲಯ ಪರ್ವತದ ತಪ್ಪಲಿನ ಸೋಮೇಶ್ವರ ಪರ್ವತಶ್ರೇಣಿಯಲ್ಲಿ [೧] Archived 2010-09-10 ವೇಬ್ಯಾಕ್ ಮೆಷಿನ್ ನಲ್ಲಿ. ಹುಟ್ಟುವ ಸಾರ್ವವಾರ್ಷಿಕ ಹರಿಯುವ ಬುರಿ/ಬುಧಿ ಗಂಡಕ್ ನದಿಯ ತೀರದಲ್ಲಿದೆ. ಈ ನಗರವು, ಅದರ ರುಚಿಕರವಾದ ಷಾಹಿ ಲಿಚಿ ಮತ್ತು ಚೀನಾ ಲಿಚಿ ಎಂಬ ಹಣ್ಣುಗಳಿಗೆ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ. ಬ್ರಿಟಿಷ್ ಕಾಲದಲ್ಲಿ, ವಿಶ್ವವಿಖ್ಯಾತ ಅಮೇರಿಕನ್ ಬರಹಗಾರ ಮತ್ತು ಕಾದಂಬರಿಕಾರ ಮಾರ್ಕ್ ಟ್ವೈನ್, ಈ ನಗರವನ್ನು ವೀಕ್ಷಿಸಲು ಬಂದಾಗ ಅವನ ಪುಸ್ತಕವಾದ -ಫಾಲೋಯಿಂಗ್ ದಿ ಇಕ್ವೆಟರ್ , Ch LVII [೨]........."ನಲ್ಲಿ , ಇದು ಅತ್ಯಂತ ಶ್ರೇಷ್ಠವಾದ ಪ್ರದೇಶವಾಗಿದ್ದು, ಸುಂದರವಾದ ಹೂಗಳ ಅಂತ್ಯವಿಲ್ಲದ ತೋಟವನ್ನು ಹೊಂದಿದೆ. ಈ ಹೂಗಳ ರಸದಿಂದ ಅಫೀಮು ಬರುತ್ತದೆ. ಮುಜಫರ್ ಪುರ್ ನಲ್ಲಿ ನಾವು ಇಂಡಿಗೋ ಸಂಸ್ಕೃತಿಯ ಮಧ್ಯದಲ್ಲಿದ್ದೇವೆ." ಭಾರತದ ಪಿತಾಮಹ ಮಹಾತ್ಮ ಗಾಂಧಿಯವರು 1918 ರಲ್ಲಿ ಮುಜಫರ್ ಪುರ್ ಗೆ ಬಂದಿದ್ದರು. ಅವರು ಚಂಪಾರಣ್ ನ ಇಂಡಿಗೋ ಕೃಷಿಕರ ಕುಂದುಕೊರತೆಗಳನ್ನು ನಿವಾರಿಸಲು ಮೋತಿಹಾರಿಗೆ ಹೋಗುತ್ತಿದ್ದ ದಾರಿಯಲ್ಲಿ ಮುಜಫರ್‌ಪುರ್‌ಗೆ ಬಂದಿದ್ದರು. ಅವರ ಆತ್ಮಚರಿತ್ರೆಯಲ್ಲಿ [೩] Archived 2010-02-14 ವೇಬ್ಯಾಕ್ ಮೆಷಿನ್ ನಲ್ಲಿ., [೪] Archived 2009-12-08 ವೇಬ್ಯಾಕ್ ಮೆಷಿನ್ ನಲ್ಲಿ., ಅಧ್ಯಾಯ - "ದಿ ಜೆಂಟಲ್ ಬಿಹಾರಿ",ಯಲ್ಲಿ ಅವರು ಹೇಗೆ ಕೆಲವೊಂದು ಸಂತೋಷಕರ ದಿನಗಳನ್ನು ಮುಜಫರ್ ಪುರ್ ನಲ್ಲಿ ಕಳೆದಿರುವ ಬಗ್ಗೆ ಬರೆದಿದ್ದಾರೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಬಂಗಾಳಿ ಕವಿಯಾದ ರವೀಂದ್ರ ನಾಥ್ ಠಾಕೂರ್ ರವರಿಗೆ 1902ರಲ್ಲಿ, ಮುಜಫರ್ ಪುರ್ ನಗರದ ನಿವಾಸಿಗಳು ನಾಗರಿಕ ಸ್ವಾಗತ ನೀಡಿದರು. ಉಗ್ರವಾದಿರಾಷ್ಟ್ರೀಯತೆಯ ಸಂಕೇತವೆಂಬಂತೆ 1908ರಲ್ಲಿ ಮೊದಲನೆಯ ಬಾಂಬ್ ಅನ್ನು ಮುಜಫರ್ ಪುರ್ ನಲ್ಲಿ ಸ್ಪೋಟಿಸಲಾಯಿತು. ಖುದಿರಾಮ್ ಬೋಸ್, ಎಂಬ ಬಂಗಾಳಿ ಹುಡುಗ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನೇ ಅರ್ಪಿಸಿದ.

Dr. ರಾಜೇಂದ್ರ ಪ್ರಸಾದ್,ಇವರು ಭಾರತೀಯ ಗಣರಾಜ್ಯದ ಮೊದಲನೆಯ ರಾಷ್ಟ್ರಪತಿಯಾಗಿದ್ದು,. ಇವರು ಕೆಲಕಾಲದವರೆಗೆ ಇಲ್ಲಿನ ಸ್ಥಳೀಯ ಗ್ರೇಟ್ ಭೂಮಿಹಾರ್ ಬ್ರಾಹ್ಮಿನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು (ಈಗ ಇದು ಲಂಗತ್ ಸಿಂಗ್ ಕಾಲೇಜ್ ಆಗಿದೆ). ಈ ಕಾಲೇಜಿನಲ್ಲಿ ದಿವಂಗತ ಮಹಾದೇವಿ ವರ್ಮ ಮತ್ತು ಆಚಾರ್ಯ ಕೃಪಾಲಿನಿಯಂತಹವರು ಕೂಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ನೇಪಾಳಕ್ಕೆ ಇರುವಂತಹ ಅನೇಕ ಪ್ರವೇಶ ದ್ವಾರಗಳಲ್ಲಿ ಮುಜಫರ್ ಪುರ್ ಪಟ್ಟಣವು ಒಂದಾಗಿದೆ. ನೇಪಾಳ ಮತ್ತು ಮುಜಫರ್ ಪುರ್ ಗಳ ನಡುವೆ ಬಟ್ಟೆ ಮತ್ತು ಆಹಾರ ದವಸ ಧಾನ್ಯಗಳ ವ್ಯಾಪಾರ ನಡೆಯುತ್ತದೆ.

ಬೌಗೋಳಿಕತೆ[ಬದಲಾಯಿಸಿ]

ಮುಜಫರ್ ಪುರ್ ಪಟ್ಟಣವು 26°07′N 85°24′E / 26.12°N 85.4°E / 26.12; 85.4 ನಲ್ಲಿದೆ.[೧] ಈ ಪಟ್ಟಣವು ಭಾರತದ ಅತ್ಯಂತ ಕ್ರಿಯಾಶೀಲವಾದ ಭೂಕಂಪವಲಯದಲ್ಲಿದೆ. 1934 ರ ಜನವರಿ 15 ರಂದು ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಬಹುಪಾಲು ಪಟ್ಟಣಕ್ಕೆ ತೀವ್ರ ಹಾನಿ ಉಂಟಾಯಿತಲ್ಲದೇ , ಅನೇಕ ಜನರು ಸಾವಪ್ಪಿದರು.[೫]. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ 47 ಮೀಟರ್ ಗಳಷ್ಟು ಎತ್ತರದಲ್ಲಿದೆ(154 ಅಡಿ ಎತ್ತರ). ಬಟ್ಟಲಿನಾಕಾರದ, ಕೆಳಕೇಂದ್ರಿತವಾಗಿರುವ ಈ ಪಟ್ಟಣವು ಬಿಹಾರದ ಇಂಡೋ-ಗ್ಯಾಂಜೆಟಿಕ್(ಗಂಗಾನದಿ) ಬಯಲಿನಲ್ಲಿದೆ. ಇದು ಹಿಮಾಲಯದ ಮೆಕ್ಕಲು ಮಣ್ಣು(ಹೂಳು) ಮತ್ತು ಮರಳನ್ನು ಒಳಗೊಂಡಿದೆ. ಇವನ್ನು ಹಿಮನದಿಗಳು ಮತ್ತು ಮಳೆಆಶ್ರಯದ ಸುತ್ತಿಬಳಸಿ ಹರಿಯುವ ಹಿಮಾಲಯದ ನದಿಗಳು ತರುತ್ತವೆ. ಈ ಪಟ್ಟಣದ ಮಣ್ಣು ಅತ್ಯಂತ ಫಲವತ್ತಾಗಿದ್ದು, ಚೆನ್ನಾಗಿ ಒಣಗಿರುವ, ಮರಳಿನಂತಿರುತ್ತದೆ. ಇದು ಬಿಳಿಯ ಬಣ್ಣದಾಗಿದ್ದು ಮುಟ್ಟಲು ಮೃದುವಾಗಿರುತ್ತದಲ್ಲದೇ ಕೃಷಿಯೋಗ್ಯವಾಗಿರುತ್ತದೆ. ಈ ಭೂ ಪ್ರದೇಶದ ಹೊರಮೈ ದೃಶ್ಯ ಹಿತಕರವಾಗಿದ್ದು , ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಸಿಹಿನೀರಿನ ಕೊಳಗಳು ಮತ್ತು ಅರ್ಧಚಂದ್ರಾಕೃತಿಯ ಹಳೆಯ ನದಿ ಕಾಲುವೆಗಳು, ಹೊಳೆಯುವ ಬಿಳಿಯ ಮರಳಿನ ನದಿ ದಂಡೆಗಳು ಹಾಗೂ ಶುದ್ಧವಾದ ಗಾಳಿ, ನೀರಿನೊಂದಿಗೆ ಪಟ್ಟಣವು ಆವೃತವಾಗಿದೆ.

ಅಸಂಖ್ಯಾತ ಖಾಸಗಿ ಹಣ್ಣಿನ ತೋಟಗಳು ಮತ್ತು ಸಹಜವಾದ ನದಿಗಳು ವಿಹಾರ ಪ್ರವಾಸಗಳಿಗೆ/ಸಾಹಸಗಳಿಗೆ/ಬೀಡು ಬಿಡಲು/ಸುತ್ತಾಡಲು ಪ್ರಶಸ್ತವಾಗಿವೆ. ಆದರೂ ಸ್ಥಳೀಯ ಪ್ರವಾಸೋದ್ಯಮದ ಗೈರುಹಾಜರಿಯು ಎದ್ದುಕಾಣುತ್ತದೆ. ನಗರವು, ನೆಲಮಟ್ಟಕ್ಕಿಂತ ಕೇವಲ 20 ಅಡಿಗಳಷ್ಟು ಮಾತ್ರ ಕೆಳಗಿರುವ ನೀರಜಾರುಗಳನ್ನು ಹೊಂದಿದೆ. ಅಲ್ಲದೇ ಭೂ ಪ್ರದೇಶವು ವರ್ಷವಿಡೀ ಹಚ್ಚಹಸಿರಾಗಿರುತ್ತದೆ. ನಗರವು, ಕಾರ್ಯ ಚಟುವಟಿಕೆಯಿಲ್ಲದ ಪತಹಿ ಎಂಬ ನಾಗರಿಕ ವಿಮಾನ ನಿಲ್ದಾಣವನ್ನು ಹೊಂದಿದೆ. ಇದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ್ದು, 4000 ಅಡಿ ಉದ್ದದ ವಿಮಾನಹಾದಿಯನ್ನು ಹೊಂದಿದೆ[೬] Archived 2011-05-31 ವೇಬ್ಯಾಕ್ ಮೆಷಿನ್ ನಲ್ಲಿ..

ಪ್ರಸ್ತುತ ಮುಜಫರ್ ಪುರ್ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಹಿಂದಿನ ದಶಕದಲ್ಲಿ ಸಾಧಿಸಲಾದ ಅಭಿವೃದ್ಧಿ ಅಸಾಧಾರಣವಾಗಿದೆ. ಆದರೂ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಬೇಕಿದೆ. ಭಾರತದ ಸ್ವಾತಂತ್ರ್ಯದ ನಂತರ ಕ್ಷಿಪ್ರಗತಿಯ ನಗರೀಕರಣದಿಂದಾಗಿ , ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಗ್ರಾಮೀಣರು ಈ ಪಟ್ಟಣಕ್ಕೆ ವಲಸೆ ಬಂದರು. ಆದರೆ ಹಿಂದೆ ಇದು, ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಿತು. ಚರಂಡಿ ವ್ಯವಸ್ಥೆ ಮತ್ತು ಕಸವನ್ನು ಹೊರಹಾಕುವ ವ್ಯವಸ್ಥೆ ಈಗ ಅವ್ಯವಸ್ಥಿತವಾಗಿದ್ದು, ಹೆಚ್ಚುಕಡಿಮೆ ಅಸ್ತಿತ್ವದಲ್ಲಿಲ್ಲ. ಮುಜಫರ್ ಪುರ್ ನ ಮಧ್ಯಭಾಗದ ಪ್ರದೇಶಗಳನ್ನು ತಿಲಕ್ ಮೈದಾನ್ ರಸ್ತೆ ಕಲ್ಯಾಣಿ ಮತ್ತು ಸರೈಯಗುಂಜಿ ಎಂದು ಕರೆಯಲಾಗುತ್ತದೆ. ಈ ಎರಡು ಪ್ರದೇಶಗಳು ದಟ್ಟ ಜನಸಂಖ್ಯೆಯನ್ನು ಹೊಂದಿವೆ. ಯಥೇಚ್ಛವಾಗಿರುವ ಸರಕು ಮತ್ತು ಸರಂಜಾಮುಗಳ ಮಾರಾಟಮಾಡುವ ಚಿಕ್ಕ ಚಿಕ್ಕ ಅಂಗಡಿ ಮಳಿಗೆಗಳನ್ನು ಇವು ಹೊಂದಿವೆ. ಈ ಮಳಿಗೆಗಳು ವರ್ಣರಂಜಿತ ಸೆಟ್ ಗಳಲ್ಲಿ ಹಾಗು ಜನಜಂಗುಳಿಯೊಂದಿಗೆ ವ್ಯಾಪಾರ ಮಾಡುತ್ತವೆ. ಮೋತಿಹೀಲ್ ಎಂಬುದು ವ್ಯಾಪಾರ ವಹಿವಾಟು ನಡೆಯುವ ಅತ್ಯಂತ ಪ್ರಧಾನ ವಾಣಿಜ್ಯ ಪ್ರದೇಶವಾಗಿದೆ. ಚಕ್ಕರ್ ಮೈದಾನ್ (Oval) ಎಂಬುದು ಪ್ರಾದೇಶಿಕ ಸೈನ್ಯದ ಸಣ್ಣ ತುಕಡಿಯಿರುವಂತಹ ಪ್ರದೇಶವಾಗಿದೆ [೭]. ಇದು ಇಲಾಖೆಗೆ ಒಳಪಡದ ಘಟಕ 151 Inf Bn (TA) JAT ಆಗಿದೆ. ಮುಜಫರ್ ಪುರ್ ಪಟ್ಟಣವು, ಬಾಬಾ ಗರೀಬ್ ನಾಥ್ (ಶಿವನ ದೇವಾಲಯ) [೮], ಚತುರ್ಭುಜ್-ಸ್ಥಾನ್, ರಾಜ ರಾಜೇಶ್ವರ್ ದೇವಿ ಕಾಳಿ (ದುರ್ಗ), ರಾಜಾ ದರ್ಭಾಂಗ ಮತ್ತು ಕಾಳಿಬರಿಯ ದೇವಾಲಯ ಹಾಗು ಕಾಳಿ ದೇವಾಲಯಗಳಂತಹ ಪ್ರಾಚೀನ ದೇವಾಲಯಗಳನ್ನು ಹೊಂದಿದೆ. ಇಲ್ಲಿ ಸಿಖ್ಖರ (ರಮಣದಲ್ಲಿರುವ ಗುರುದ್ವಾರ), ರಾಮಕೃಷ್ಣ ಆಶ್ರಮ ( ಬೆಲಾ - ಮಿಥನ್ ಪುರದಲ್ಲಿ), ಮುಸಲ್ಮಾನರ ( ಕಂಪನಿ ಬಾಗ್ ನಲ್ಲಿರುವ ಬಡಿ ಮಸೀದಿ, ಪುರಾನಿ ಬಜಾರ್ ನ ಸಮೀಪದಲ್ಲಿರುವ ದಾತಾ ಕಂಬಲ್ ಷಾ ಮಜಾರ್, ಸರೈಯಗುಂಜ್ ನ ಬಡಾ ಕರ್ ಬಲಾ ಮತ್ತು ಬನಾರಸ್ ಬ್ಯಾಂಕ್ ಚೌಕ್ ನ ಬಳಿಯಿರುವ ಬಡಾ ಇಮಾಮ್ ಬರಾ), ಬೌದ್ಧರ , ಜೈನರ , ಕ್ರೈಸ್ತ ಇತ್ಯಾದಿ ಇತರ ಧಾರ್ಮಿಕ ಸಮುದಾಯದವರ ಅನೇಕ ದೊಡ್ಡ ಮತ್ತು ಸಣ್ಣ ಪ್ರಾರ್ಥನಾಮಂದಿರಗಳಿವೆ.

ಇತಿಹಾಸ[ಬದಲಾಯಿಸಿ]

‘ದಿ ಲ್ಯಾಂಡ್ ಆಫ್ ಲಿಚಿ’ ಎಂದು ಕರೆಯಲಾಗುವ ಮುಜಫರ್ ಪುರ್ ಜಿಲ್ಲೆಯನ್ನು 1875 ರಲ್ಲಿ ನಿರ್ಮಿಸಲಾಯಿತು. ಇದನ್ನು ಹಿಂದಿನ ತಿಹ್ರತ್ ಜಿಲ್ಲೆಯನ್ನು ವಿಭಜಿಸುವ ಮೂಲಕ ಆಡಳಿತಾತ್ಮಕ ಅನುಕೂಲಕ್ಕಾಗಿ ನಿರ್ಮಿಸಲಾಯಿತು. ಪ್ರಸಕ್ತ ಮುಜಫರ್ ಪುರ್ ನ ಜಿಲ್ಲೆ 18ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂತು. ಬ್ರಿಟಿಷ್ ಆಳ್ವಿಕೆಯಡಿಯಲ್ಲಿ ಆಮಿಲ್(ಕಂದಾಯದ ಅಧಿಕಾರಿ) ನಾಗಿ ಕಾರ್ಯನಿವಹಿಸುತ್ತಿದ್ದ ಮುಜಫರ್ ಖಾನ್ ನ ಹೆಸರನ್ನು ಈ ಪಟ್ಟಣಕ್ಕೆ ಇಡಲಾಯಿತು. ಮುಜಫರ್ ಪುರ್ ಪಟ್ಟಣವನ್ನು, ಉತ್ತರದಲ್ಲಿ ಪುರ್ಬಿ ಚಂಪಾರಣ್ ಮತ್ತು ಸೀತಾಮರಿ ಜಿಲ್ಲೆಗಳು, ದಕ್ಷಿಣದಲ್ಲಿ ವೈಶಾಲಿ ಮತ್ತು ಸರಾನ ಜೆಲ್ಲೆಗಳು, ಪೂರ್ವದಲ್ಲಿ ದರ್ಭಾಂಗ್ ಮತ್ತು ಸಮಸ್ಟಿಪುರ್ ಜಿಲ್ಲೆಗಳು , ಪಶ್ಚಿಮದಲ್ಲಿ ಸರನ್ ಮತ್ತು ಗೋಪಾಲ್ ಗಂಜ್ ಜಿಲ್ಲೆಗಳು ಸುತ್ತುವರೆದಿವೆ. ಈಗ ಇದು ಅದರ ರುಚಿಕರವಾದ ಷಾಹಿ ಲಿಚಿ ಮತ್ತು ಚೀನಾ ಲಿಚಿ ಎಂಬ ಹಣ್ಣಿಗಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದೆ.

ಈ ಪ್ರದೇಶದ ಹಿಂದಿನ ಮೂಲಗಳ ಇತಿಹಾಸವನ್ನು ಕಂಡುಹಿಡಿಯುವುದು ನಿಜವಾಗಿಯು ಅಸಾಧ್ಯ . ಆದರೆ ನಾವು ಇದರ ಪ್ರಬಲವಾದ ಪರಂಪರೆಯ ಹರಿವನ್ನು ಪ್ರಾಚೀನ ಭಾರತದ ಮಹಾಕಾವ್ಯವಾದ ರಾಮಾಯಣದ ಮೂಲಕ ಕಂಡುಹಿಡಿಯಬಹುದು. ಈ ಮಹಾಕಾವ್ಯವು ಇನ್ನೂ ಭಾರತೀಯ ನಾಗರಿಕತೆಯಲ್ಲಿ ಈಗಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಪುರಾಣ ಕಥೆಗಳಿಂದ ಆರಂಭಿಸುವ ಮೂಲಕ, ರಾಜರ್ಷಿ ಜನಕ್ ಎಂಬ ರಾಜಾ ವೈದೇಹವನ್ನು ಆಳುತ್ತಿದ್ದನು. ಇದು ಪೂರ್ವದ ನೇಪಾಳ ಮತ್ತು ಉತ್ತರದ ಬಿಹಾರ ವನ್ನು ಒಳಗೊಂಡಂತೆ ಈ ಇಡೀ ಭೌಗೋಳಿಕ ಪ್ರದೇಶದ ಪೌರಾಣಿಕ ಹೆಸರಾಗಿದೆ. ಈ ಪ್ರದೇಶದ ಸೀತಾಮರಿ ಎಂಬ ಸ್ಥಳದಲ್ಲಿ ರಾಜರ್ಷಿ ಜನಕರಾಜನು ಭೂಮಿಯನ್ನು ಉಳುವಾಗ ಸೀತೆ (ಮತ್ತೊಂದು ಹೆಸರು ವೈದೇಹಿ: ವಿದೇಹದ ರಾಣಿ) ಮಣ್ಣಿನ ಮಡಕೆಯಲ್ಲಿ ಹುಟ್ಟಿದಳು ಎಂಬ ಪವಿತ್ರವಾದ ಹಿಂದುಧರ್ಮದ ನಂಬಿಕೆಯಿದೆ .

ಈ ಜಿಲ್ಲೆಯ ದಾಖಲಿತ ಇತಿಹಾಸವು ವ್ರಿಜ್ಜನ್ ಗಣರಾಜ್ಯದ ಉದಯವನ್ನು ತಿಳಿಸುತ್ತವೆ. ರಾಜಕೀಯ ಶಕ್ತಿಯ ಕೇಂದ್ರವನ್ನು ಕೂಡ ಮಿಥಿಲಾ ದಿಂದ ವೈಶಾಲಿಗೆ ಬದಲಾಯಿಸಲಾಯಿತು. ವ್ರಿಜ್ಜನ್ ಗಣರಾಜ್ಯವು ಎಂಟು ವಂಶದವರ ಕೂಟವಾಗಿದೆ. ಇದರಲ್ಲಿ ಲಿಚ್ಛವಿಸ್‌ಗಳು ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿಗಳಾಗಿದ್ದರು. ಪ್ರಬಲವಾದ ಮಗಧ ಸಾಮ್ರಾಜ್ಯ ಕೂಡ ಲಿಚ್ಛವಿಸ್‌ನ ಸುತ್ತಮುತ್ತಲಿನ ಎಸ್ಟೇಟ್‌ಗಳೊಂದಿಗೆ ಕ್ರಿಸ್ತಪೂರ್ವ 519 ರಲ್ಲಿ ವೈವಾಹಿಕ ಸಂಬಂಧ ಬೆಳೆಸುವುದನ್ನು ನಿರ್ಧರಿಸಬೇಕಾಯಿತು. ಅಜಾತಶತ್ರು , ವೈಶಾಲಿಯನ್ನು ಆಕ್ರಮಿಸಿಕೊಂಡನು ಹಾಗು ತಿಹ್ರತ್ ನ ವರೆಗು ಅವನ ಪ್ರಭಾವವನ್ನು ಬೀರಿದನು. ಈ ಸಮಯದಲ್ಲಿ ಪಾಟಲಿ ಪುತ್ರ (ಈಗಿನ ಪಾಟ್ನಾ) ವನ್ನು , ಪವಿತ್ರ ಗಂಗಾನದಿಯ ತೀರದಲ್ಲಿದ್ದ ಪಾಟಲಿ ಎಂಬ ಗ್ರಾಮದಲ್ಲಿ ಸ್ಥಾಪಿಸಲಾಯಿತು ಹಾಗು ಅಜಾತಶತ್ರು ನದಿಯ ಮತ್ತೊಂದು ತೀರದ ಲಿಚ್ಛವಿಸ್‌ಗಳ ಮೇಲೆ ಕಣ್ಣಿಡಲೆಂದು ಇಲ್ಲಿ ಭೇದಿಸಲಾಗದ ಕೋಟೆಯನ್ನು ಕಟ್ಟಿಸಿದನು. ಮುಜಫರ್ ಪುರ್ ನಿಂದ 40 ಕಿಲೋ ಮೀಟರ್ ಗಳಷ್ಟು ದೂರವಿರುವ ಅಂಬರ್ತಿಯನ್ನು , ಆಮ್ರಪಾಲಿ ಹುಟ್ಟಿದ ಊರೆಂದು ನಂಬಲಾಗಿದೆ. ಇವಳು ವೈಶಾಲಿಯ ರಾಜಮನೆತನದ ಆಸ್ಥಾನದ ಪ್ರಸಿದ್ಧ ನರ್ತಕಿ.

ವೈಶಾಲಿ, ಧಾರ್ಮಿಕ ಪುನರುದಯದ ಕೇಂದ್ರವಾಗಿದ್ದು , ಬಸೊ ಕುಂದ್, ಮಹಾವೀರನ ಜನ್ಮಸ್ಥಳವಾಗಿದೆ. ಇವನು 24 ನೇ ಜೈನ ತೀರ್ಥಂಕರನಾಗಿದ್ದಾನೆ. ಅಲ್ಲದೇ ಬುದ್ಧದೇವನ ಸಮಕಾಲೀನನಾಗಿದ್ದು , ಅಂತಾರಾಷ್ಟ್ರೀಯ ಗಡಿಗಳಾಚೆಯಿಂದ ಭಕ್ತರನ್ನು ಆಕರ್ಷಿಸಿದನು.

ಹ್ಯುಯೆನ್ ತ್ಸಾಂಗ್ ನ ಭೇಟಿಯಿಂದ ಪಾಲಾ ರಾಜವಂಶ ಉದಯವಾಗುವ ವರೆಗು ಮುಜಫರ್ ಪುರ್ ಮಹಾರಾಜ ಹರ್ಷವರ್ಧನ ನ ನಿಯಂತ್ರಣಕ್ಕೆ ಒಳಪಟ್ಟಿತ್ತು. ಇವನು ಉತ್ತರ ಭಾರತದ ಪ್ರಬಲ ಸಾರ್ವಭೌಮನಾಗಿದ್ದಾನೆ. ಕ್ರಿಸ್ತಶಕ 647 ರ ನಂತರ , ಈ ಜಿಲ್ಲೆಯು ಸ್ಥಳೀಯ ಮುಖ್ಯಸ್ಥರ ಹಿಡಿತಕ್ಕೆ ಒಳಪಟ್ಟಿತು. ಕ್ರಿಸ್ತಶಕ 8 ನೇ ಶತಮಾನದಲ್ಲಿ ಪಾಲಾ ರಾಜವಂಶದ ರಾಜರು ತಿಹ್ರತ್ ನ ಮೇಲೆ ತಮ್ಮ ಹಿಡಿತವನ್ನು ಮುಂದುವರೆಸಿದರು. ಕ್ರಿಸ್ತಶಕ 1019 ರಲ್ಲಿ ಮಧ್ಯ ಭಾರತದ ಚೆಡಿ ರಾಜರು ತಿಹ್ರತ್ ನ ಮೇಲೆ ಪ್ರಭಾವವನ್ನು ಬೀರುವವರೆಗು ಹಾಗು 11 ನೇ ಶತಮಾನದ ಅಂತ್ಯದಲ್ಲಿ ಅವರ ಬದಲಿಗೆ ಸೇನಾ ರಾಜವಂಶದ ರಾಜರು ಬರುವವರೆಗು ಪಾಲಾ ರಾಜರ ಆಳ್ವಿಕೆ ಮುಂದುವರೆದಿತ್ತು.

1211 ಮತ್ತು 1226 ರ ನಡುವೆ ಬಂದಂತಹ ಬಂಗಾಳದ ರಾಜ ಗಾಯೈಸುದ್ಧೀನ್ ಐವಾಜ್ , ತಿಹ್ರತ್ ನ ಮೊದಲನೆಯ ಮುಸ್ಲಿಂ ಆಕ್ರಮಣಕಾರನಾಗಿದ್ದಾನೆ. ಆದರೂ ಅವನು ರಾಜ್ಯವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗದಿದ್ದರೂ, ಕಪ್ಪವನ್ನು ಸುಲಿಗೆ ಮಾಡಿದ. ಘಿಯಾಸುದ್ದೀನ್ ತುಗಲಕ್ 1323 ರಲ್ಲಿ ಜಿಲ್ಲೆಯ ಮೇಲೆ ಅವನ ಹಿಡಿತವನ್ನು ಸಾಧಿಸಿದ.

ಸಿಮ್ರಾಣ್ ರಾಜವಂಶವನ್ನು(ಚಂಪಾರಣ್ ನ ಈಶಾನ್ಯ ಭಾಗ ) ಮತ್ತು ಅದರ ಸಂಸ್ಥಾಪಕನಾದ ನಾನ್ಯುಪ ದೇವನ ಬಗ್ಗೆ ಉಲ್ಲೇಖಿಸದಿದ್ದಲ್ಲಿ ಮುಜಫರ್ ಪುರ್ ನ ಇತಿಹಾಸವು ಅಪೂರ್ಣವಾಗಿ ಉಳಿಯುತ್ತದೆ. ಇವನು ಸಂಪೂರ್ಣವಾಗಿ ಮಿಥಿಲಾ ಮತ್ತು ನೇಪಾಳದ ವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ. ರಾಜವಂಶದ ಕೊನೆಯ ರಾಜನಾದ ಹರಸಿಂಹ ದೇವನ ಆಳ್ವಿಕೆಯ ಸಂದರ್ಭದಲ್ಲಿ, ತಿಹ್ರತ್ ನ ಮೇಲೆ ತುಗಲಕ್ ಷಾಹ್ 1323 ರಲ್ಲಿ ಆಕ್ರಮಣ ಮಾಡಿದ ಹಾಗು ಅದರ ಮೇಲೆ ಅವನು ಹಿಡಿತ ಸಾಧಿಸಿದ. ತುಗಲಕ್ ಷಾಹ್ , ತಿಹ್ರತ್‌ ನ ಆಡಳಿತವನ್ನು ಕಾಮೇಶ್ವರ್ ಠಾಕೂರ್‌ನ ಕೈಗೊಪ್ಪಿಸಿದನು. ಈ ಮೂಲಕ , ತಿಹ್ರತ್ ನ ಪರಮಾಧಿಕಾರವು ಹಿಂದೂ ಮುಖ್ಯಸ್ಥರಿಂದ ಮುಸ್ಲಿಮರ ಕೈಸೇರಿತು. ಆದರೆ ಹಿಂದೂ ಮುಖ್ಯಸ್ಥರು ಅವಿಚ್ಛಿನ್ನವಾಗಿ ಸಂಪೂರ್ಣ ಸ್ವಾಯತ್ತತೆ ಅನುಭವಿಸುವುದನ್ನು ಮುಂದುವರೆಸಿದರು.

14ನೇ ಶತಮಾನದ ಕೊನೆಯ ವೇಳೆಗೆ ತಿಹ್ರತ್ ಒಳಗೊಂಡಂತೆ ಇಡೀ ಉತ್ತರ ಬಿಹಾರವು ಜಾನ್‌ಪುರದ ರಾಜರ ಕೈವಶವಾಯಿತು. ದೆಹಲಿಯ ಸಿಕಂದರ್ ಲೋದಿ ಎಂಬ ರಾಜ ಜಾನ್‌ಪುರ್‌ನ ರಾಜನನ್ನು ಸೋಲಿಸುವವರೆಗೂ ಒಂದು ದಶಕಗಳ ವರೆಗೆ ಅವರ ನಿಯಂತ್ರಣದಲ್ಲಿ ಉಳಿದುಕೊಂಡಿತ್ತು. ಈ ನಡುವೆ, ಬಂಗಾಳದ ನವಾಬ ಹುಸೇನ್ ಷಾ, ಅತ್ಯಂತ ಪ್ರಬಲನಾದನು ಹಾಗು ತಿಹ್ರತ್ ನನ್ನು ಒಳಗೊಂಡಂತೆ ದೂರಪ್ರದೇಶದವರೆಗೆ ನಿಯಂತ್ರಣ ಸಾಧಿಸಿದ. ದೆಹಲಿಯ ಸಾಮ್ರಾಟನು ಹುಸೇನ್ ಷಾ ನ ವಿರುದ್ಧ 1499 ರಲ್ಲಿ ದಂಡೆತ್ತಿ ಹೋಗಿ, ತಿಹ್ರತ್ ನ ರಾಜನನ್ನು ಸೋಲಿಸಿದ ನಂತರ ಅದರ ಮೇಲೆ ನಿಯಂತ್ರಣ ಸಾಧಿಸಿದ. ಬಂಗಾಳದ ನವಾಬರ ಶಕ್ತಿಯು ಕ್ಷೀಣಿಸಲು ಪ್ರಾರಂಭಿಸಿತು ಹಾಗು ಮಹೂದ್ ಷಾನ ಅವಸಾನ ಹಾಗೂ ಪತನದೊಂದಿಗೆ, ತಿಹ್ರತ್ ನನ್ನು ಒಳಗೊಂಡಂತೆ ಉತ್ತರ ಬಿಹಾರವು ಪ್ರಬಲ ಮೊಗಲ್ ಸಾಮ್ರಾಜ್ಯದ ಭಾಗವಾಯಿತು. ಆದರೂ, ಸಂಪೂರ್ಣ ಉತ್ತರ ಬಿಹಾರದೊಂದಿಗೆ ಮುಜಫರ್ ಪುರ್ ಸೇರಿದ್ದರೂ, ಸಣ್ಣ ಪ್ರಬಲ ಮುಖಂಡರು ಬಂಗಾಳದ ನವಾಬನಾದ, ಡೌದ್ ಖಾನ್ ದಿನಗಳವರೆಗೆ ಈ ಪ್ರದೇಶದ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಸಾಧಿಸುವುದನ್ನು ಮುಂದುವರಿಸಿದರು. ದೌದ್ ಖಾನ್ , ಪಾಟ್ನಾ ಮತ್ತು ಹಜಿ ಪುರ್ ನ ಮೇಲೆ ಪ್ರಬಲ ನಿಯಂತ್ರಣವನ್ನು ಹೊಂದಿದ್ದನು. ಅವನ ಪತನದ ನಂತರ ಮೊಗಲ್ ಸಾಮ್ರಾಜ್ಯದ ಪ್ರತ್ಯೇಕವಾದ ಬಿಹಾರ‌ನ ಸುಬಹ್ ನಿರ್ಮಿಸಲಾಯಿತು ಮತ್ತು ತಿಹ್ರತ್ ನನ್ನು ಅದರ ಭಾಗವಾಗಿಸಲಾಯಿತು.

1764 ರಲ್ಲಿ ನಡೆದ ಬುಕ್ಸಾರ್ ಕದನದಲ್ಲಿ, ಈಸ್ಟ್ ಇಂಡಿಯ ಕಂಪನಿಯ ಗೆಲುವಿನಿಂದಾಗಿ , ಅವರು ಇಡೀ ಬಿಹಾರದ ಮೇಲೆ ನಿಯಂತ್ರಣವನ್ನು ಸಾಧಿಸಿದರು. ಅಲ್ಲದೇ ಅವರು ಇಡೀ ಜಿಲ್ಲೆಯನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಇಂಗ್ಲೀಷರ ವಿರುದ್ಧ ದೆಹಲಿಯಲ್ಲಿ ನಡೆದ 1857 ರ ದಂಗೆಯ ಯಶಸ್ಸಿನಿಂದಾಗಿ ಈ ಜಿಲ್ಲೆಯ ಇಂಗ್ಲೀಷ್ ನಿವಾಸಿಗಳು ಆತಂಕಿತರಾದರು ಹಾಗು ಇಡೀ ಜಿಲ್ಲೆಯಲ್ಲಿ ದಂಗೆಯ ಕಿಚ್ಚು ಹರಡತೊಡಗಿತು. ಮುಜಫರ್ ಪುರ್ ಅದರ ಪಾತ್ರವನ್ನು ನಿರ್ವಹಿಸಿದೆ. ಅಲ್ಲದೇ ಇದು 1908ರ ಪ್ರಖ್ಯಾತ ಬಾಂಬ್ ಪ್ರಕರಣದ ಸ್ಥಳವಾಗಿದೆ. ಬಂಗಾಳದ ಯುವ ಕ್ರಾಂತಿಕಾರಿ, ಖುದಿ ರಾಮ್ ಬೋಸ್ ಎಂಬ ಕೇವಲ 18 ವರ್ಷದ ಬಾಲಕನನ್ನು ಪ್ರಿಂಗಲ್ ಕೆನಡಿ ಸಾರೋಟಿನ ಮೇಲೆ ಬಾಂಬ್ ಹಾಕಿದ ಆರೋಪದ ಮೇಲೆ ನೇಣುಗಂಬಕ್ಕೇರಿಸಲಾಯಿತು. ವಾಸ್ತವವಾಗಿ ಸಾರೋಟಿನಲ್ಲಿ ಇದ್ದವರು ಮುಜಫರ್ ಪುರ್‌ನ ಜಿಲ್ಲಾ ನ್ಯಾಯಾಧೀಶರಾದ ಕಿಂಗ್ಸ್ ಫೋರ್ಡ್ ಎಂದು ತಪ್ಪಾಗಿ ಭಾವಿಸಲಾಗಿತ್ತು. ಸ್ವಾತಂತ್ರ್ಯ ಪಡೆದ ನಂತರ, ಯುವ ಕ್ರಾಂತಿಕಾರಿ ದೇಶಭಕ್ತನ ನೆನಪಿಗಾಗಿ ಮುಜಫರ್ ಪುರ್ ನಲ್ಲಿ ಅವನ ಸ್ಮಾರಕವನ್ನು ನಿರ್ಮಿಸಲಾಯಿತು. ಇದು ಇಂದಿಗೂ ಇದೆ. ಮೊದಲನೆಯ ವಿಶ್ವಯುದ್ಧದ ನಂತರ ರಾಷ್ಟ್ರದಲ್ಲಿ ಉಂಟಾದ ರಾಜಕೀಯ ಜಾಗೃತಿಯು ಮುಜಫರ್ ಪುರ್ ಜಿಲ್ಲೆಯಲ್ಲೂ ಕೂಡ ರಾಷ್ಟ್ರೀಯವಾದಿ ಚಳುವಳಿಯನ್ನು ಚುರುಕುಗೊಳಿಸಿತು. 1920 ರ ಡಿಸೆಂಬರ್ ನಲ್ಲಿ ಮತ್ತು ಮತ್ತೊಮ್ಮೆ 1927 ರ ಜನವರಿಯಲ್ಲಿ ಮುಜಫರ್ ಪುರ್ ಜಿಲ್ಲೆಗೆ ಮಹಾತ್ಮ ಗಾಂಧಿಯವರ ಭೇಟಿಯು, ಜನರ ಸುಪ್ತ ಭಾವನೆಗಳನ್ನು ಬಡಿದೆಬ್ಬಿಸುವಲ್ಲಿ ಭಾರಿ ರಾಜಕೀಯ ಪ್ರಭಾವ ಬೀರಿದವು. ಅಲ್ಲದೇ ಈ ಜಿಲ್ಲೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದನ್ನು ಮುಂದುವರೆಸಿತು.

ಮುಜಫರ್ ಪುರ್, ಈಶಾನ್ಯ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಭಾರತೀಯ ನಾಗರಿಕತೆಯಲ್ಲಿ ಮುಜಫರ್‌ಪುರ್ ನ ವಿಶೇಷತೆಯು ಎರಡು ಅತ್ಯಂತ ಸ್ಪಂದನಶೀಲ ಧಾರ್ಮಿಕ ಪ್ರಭಾವಗಳ ನಡುವೆ ಗಡಿರೇಖೆಯಲ್ಲಿರುವ ಅದರ ಸ್ಥಾನದಿಂದ ಉದ್ಭವಿಸಿದೆ. ಅತ್ಯಂತ ಮಹತ್ವವಾಗಿ ಇದು ಇಂದಿನವರೆಗೆ ಹಿಂದು ಮತ್ತು ಮುಸ್ಲಿಂ ಸಂಸ್ಕೃತಿ ಹಾಗು ಚಿಂತನೆಗಳ ಸಮಾಗಮವಾಗಿದೆ. ಪರಸ್ಪರ ಹೊಂದಾಣಿಕೆ ಪ್ರತಿನಿಧಿಸುವ ಎಲ್ಲಾ ರೀತಿಯ ಬದಲಾದ ಸಂಸ್ಥೆಗಳು, ಗಡಿ ರೇಖೆಯಲ್ಲಿ ಉದ್ಭವಿಸುತ್ತವೆ. ಮುಜಫರ್ ಪುರ್, ಅದರ ಎಲ್ಲೆಗಳೊಳಗೆ ಅತ್ಯಂತ ವೈವಿಧ್ಯಮಯ ಅಂಶವನ್ನು ಹೊಂದಿರುವುದರಿಂದ ಯಾವುದೇ ಅನುಮಾನವಿಲ್ಲದೇ ಉನ್ನತ ಪ್ರತಿಭೆಗಳ ಜನ್ಮಸ್ಥಳವಾಗಿದೆ.

1934 ರ ಆಗಸ್ಟ್ ನಲ್ಲಿ, ಬೃಹತ್ ಪ್ರಮಾಣದ 8.1 ತೀವ್ರತೆಯ ಭೂಕಂಪ , ನಗರವನ್ನು ಸಂಪೂರ್ಣವಾಗಿ ನಾಶಮಾಡಿತು. ಆ ಪ್ರದೇಶದಲ್ಲಿ ವ್ಯಾಪಕ ಹಾನಿಯಾಯಿತಲ್ಲದೇಕೊಲ್ಕತ್ತ ಮತ್ತು ಕಠ್ಮಂಡು ವಿನಲ್ಲೂ ಕೂಡ ಭಾರಿ ಪ್ರಮಾಣದ ಹಾನಿಯುಂಟಾಯಿತು. ಈ ಪ್ರದೇಶವು 1988 ರ ಬಿಹಾರ ಭೂಕಂಪ ದಲ್ಲಿ ಮತ್ತೊಮ್ಮೆ ತೀವ್ರವಾಗಿ ಕಂಪಿಸಿತು.

ಹವಾಗುಣ[ಬದಲಾಯಿಸಿ]

ಬೇಸಿಗೆಯ ಏಪ್ರಿಲ್-ಜೂನ್ ತಿಂಗಳಿನಲ್ಲಿ ಅತ್ಯಂತ ಹೆಚ್ಚು ಉಷ್ಣದ ಮತ್ತು ಆರ್ದ್ರತೆ (28/40 deg C,90% ಗರಿಷ್ಠ)ಯ ಹವಾಮಾನವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ಹಿತಕರವಾದ ಹವಾಮಾನವಿದ್ದು, 06/20 deg C. ನಷ್ಟಿರುತ್ತದೆ. ವಾಯುಮಾಲಿನ್ಯವು ತುಲನಾತ್ಮಕವಾಗಿ ಕಡಿಮೆಯಿರುವುದರಿಂದ , ಗಾಳಿಯು ಹೋಲಿಕೆಯ ದೃಷ್ಟಿಯಿಂದ ಶುದ್ಧವಾಗಿರುತ್ತದೆ. ಅಕ್ಟೋಬರ್ ಮತ್ತು ಮಾರ್ಚ್ ಇಲ್ಲಿಗೆ ಭೇಟಿಕೊಡಲು ಪ್ರಶಸ್ತ ತಿಂಗಳುಗಳಾಗಿವೆ. ಬೇಸಿಗೆ ಮತ್ತು ಮುಂಗಾರುಋತುವಿನ (ಜೂನ್ ನ ಮಧ್ಯಾವಧಿ ಯಿಂದ ಸೆಪ್ಟೆಂಬರ್ ನವರೆಗೆ)ಕಾಲದಲ್ಲಿ ಕ್ರಮವಾಗಿ ಸುದೀರ್ಘ ವಿದ್ಯುತ್ ಕಡಿತ ,ಉಷ್ಣಾಂಶ ಮತ್ತು ಮಳೆಯ ಪ್ರವಾಹದಿಂದಾಗಿ ಅಲ್ಲಿಗೆ ಭೇಟಿಯನ್ನು ತಪ್ಪಿಸುವುದು ಒಳ್ಳೆಯದು.

ಆರ್ಥಿಕ ಸ್ಥಿತಿ[ಬದಲಾಯಿಸಿ]

ಲಿಚಿಯ ರಫ್ತಿಗೆ ಇದು ಪ್ರಸಿದ್ಧವಾಗಿದೆ. ಪ್ರಾಚೀನ ಕಾಲದಲ್ಲಿ, ಈ ಪ್ರದೇಶ ಕೈಯಿಂದ ನೇಯ್ದ ಬಟ್ಟೆ, ಕಬ್ಬು, ಇಂಡಿಗೋ, ಅಫೀಮು ಇತ್ಯಾದಿಗಳಿಗಾಗಿ ಪ್ರಸಿದ್ಧವಾಗಿತ್ತು. ಜಿಲ್ಲೆಯು ಕೆಲವು ಸಕ್ಕರೆ ಕಾರ್ಖಾನೆಗಳನ್ನು ಹೊಂದಿತ್ತು. ಈಗ ಇವು ಹಳೆಯದಾಗಿವೆ ಮತ್ತು ಪಾಳುಬಿದ್ದಿವೆ. ಇದು ಉತ್ತರ ಬಿಹಾರ ನ ವಾಣಿಜ್ಯ ಕೇಂದ್ರವಾಗಿದೆ. ಅಲ್ಲದೇ ಇದು ಮುಂಬಯಿ, ಸೂರತ್ ಮತ್ತು ಅಹಮದಾಬಾದ್ ನ ಎಲ್ಲಾ ವಿಧದ ಜವಳಿ ಕಾರ್ಖಾನೆಗಳಿಗೆ ಬೃಹತ್ ಮಾರುಕಟ್ಟೆಯಾಗಿದೆ. ಇವು ಪ್ರಖ್ಯಾತ ಮಾರ್ವಾಡಿ ಸಮುದಾಯ ಪ್ರಾಬಲ್ಯದ ಸುಟಾ ಪಟ್ಟಿಯಲ್ಲಿದೆ. ಸರಕುಗಳ ಸಗಟು ವ್ಯಾಪಾರಿಗಳು ಸರೈಯಗಂಜ್ ನ "ಗೋಲಾ" ಮಾರುಕಟ್ಟೆಯಲ್ಲಿರುತ್ತಾರೆ. ಮೋತಿಹೀಲ್ ಪಟ್ಟಣದ ವಾಣಿಜ್ಯ ಕೇಂದ್ರವಾಗಿದೆ.

ಮುಜಫರ್ ಪುರ್ ಪ್ರದೇಶವು ಬೃಹತ್ ಪ್ರಮಾಣದಲ್ಲಿ ಕೃಷಿಯಾಧಾರಿತ ಆರ್ಥಿಕ ಸ್ವರೂಪವಾಗಿದೆ. ಇಲ್ಲಿನ ಅತ್ಯಂತ ಪ್ರಧಾನ ಬೆಳೆಗಳೆಂದರೆ:ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳು, ಜೂಟ್, ಮುಸುಕಿನ ಜೋಳ ಮತ್ತು ಎಣ್ಣೆ ಬೀಜಗಳು. ಹೂಕೋಸು, ಎಲೆಕೋಸು, ಟೊಮೇಟೊ, ಮೂಲಂಗಿ, ಕ್ಯಾರೆಟ್, ಬೀಟ್ರೂಟ್ ಇತ್ಯಾದಿಗಳು ಇಲ್ಲಿ ಬೆಳೆಯುವ ಕೆಲವೊಂದು ತರಕಾರಿಗಳಾಗಿವೆ. ಒಟ್ಟು ಕೃಷಿ ಭೂಮಿಯ ಹೆಚ್ಚಿನ ಭಾಗದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಬೆಳೆಯಲಾಗುತ್ತದೆ. ಮುಸುಕಿನ ಜೋಳ ಜಿಲ್ಲೆಯ ನಂತರದ ಪ್ರಮುಖ ಬೆಳೆಯಾಗಿದೆ. ಕಬ್ಬು, ಆಲೂಗೆಡ್ಡೆ ಮತ್ತು ಬಾರ್ಲಿ ಇಲ್ಲಿ ಬೆಳೆಯುವ ಏಕದಳ ಧಾನ್ಯ ರಹಿತ ಬೆಳೆಗಳಾಗಿವೆ. ಜಿಲ್ಲೆಯು ರುಚಿಕರವಾದ ಮಾವಿನ ಹಣ್ಣು ಮತ್ತು ಲಿಚಿ ಗಾಗಿ ಪ್ರಸಿದ್ದವಾಗಿದ್ದು, ಇವುಗಳನ್ನು ದೇಶದ ಇತರ ಭಾಗಗಳಿಗು ಹಾಗು ವಿದೇಶಕ್ಕೂ ಕೂಡ ರಫ್ತು ಮಾಡಲಾಗುತ್ತದೆ.

ಹಸುಗಳು, ಎಮ್ಮೆಗಳು, ಹೋರಿಗಳು ಮತ್ತು ಎತ್ತುಗಳು,ಕುರಿ, ಮೇಕೆಗಳು, ಹಂದಿಗಳು ಮತ್ತು ಸಾಕುಕೋಳಿಗಳು ಈ ಪಟ್ಟಣದ ಪ್ರಮುಖ ಜಾನುವಾರುಗಳಾಗಿವೆ. ಮುಜಫರ್ ಪುರ್ ಪಟ್ಟಣವು ಬೃಹತ್ ಪ್ರಮಾಣದ ಮತ್ತು ಚಿಕ್ಕ ಕೈಗಾರಿಕೆಗಳನ್ನು ಹೊಂದಿದೆ. ಪ್ರಭಾತ್ ಜರ್ದಾ ಕಾರ್ಖಾನೆ [೯] Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ., ಮೆಹ್ರೊತ್ರ ಇಂಜಿನಿಯರಿಂಗ್ ವರ್ಕ್ಸ್ Pvt Ltd, ಭಾರತ್ ವ್ಯಾಗನ್ ಅಂಡ್ ಇಂಜಿನಿಯರಿಂಗ್ Ltd. [೧೦] Archived 2008-02-06 ವೇಬ್ಯಾಕ್ ಮೆಷಿನ್ ನಲ್ಲಿ.[೧೧] Archived 2008-02-06 ವೇಬ್ಯಾಕ್ ಮೆಷಿನ್ ನಲ್ಲಿ., 220 MW ಥರ್ಮಲ್ ಪವರ್ ಪ್ಲ್ಯಾಂಟ್ [೧೨] Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ., ಈಗ ಇದನ್ನು NTPC ನಡೆಸುತ್ತಿದೆ, ಬಿಹಾರ ಡ್ರಗ್ಸ್ ಅಂಡ್ ಆರ್ಗ್ಯಾನಿಕ್ ಕೆಮಿಕಲ್ಸ್ ಲಿ., ಮುಜಫರ್ ಪುರ್ - IDPL ನ ಘಟಕ [೧೩] Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ., ಲೆದರ್ ಡೆವಲಪ್ ಮೆಂಟ್ ಕಾರ್ಪೋರೇಷನ್‌ನ ಘಟಕಗಳು, ಮುಜಫರ್ ಪುರ್ ಡೈರಿ, ಬಿಹಾರ ಸ್ಟೇಟ್ ಡೈರಿ ಕಾರ್ಪೊರೇಷನ್‌ನ ಘಟಕ, ಬಿಹಾರ ಸ್ಟೇಟ್ ಕೊಪರೇಟಿವ್ ಮಿಲ್ಕ್ ಪ್ರೊಡ್ಯುಸರ್ಸ್' ಫೆಡರೇಶನ್ ಲಿ., ಮುಜಫರ್ ಪುರ್ ಉತ್ಪಾದಿಸುವ ಸುಧಾ ಬ್ರಾಂಡ್ ಪ್ಯಾಕೇಜ್ಡ್ ಹಾಲು, ಮುಜಫರ್ ಪುರ್ ಪಟ್ಟಣ ಮತ್ತು ಅದರ ಸುತ್ತಮುತ್ತಲಿನಲ್ಲಿರುವ ಪ್ರಮುಖ ಕೈಗಾರಿಕೆಗಳಾಗಿವೆ. ಮೇಲೆ ಹೆಸರಿಸಲಾಗಿರುವ ಕೈಗಾರಿಕೆಗಳು ಗಣನೀಯವಾದ ಉದ್ಯೋಗವಕಾಶಗಳನ್ನು ನೀಡಿವೆ. ಅಲ್ಲದೇ ಈ ಕೈಗಾರಿಕೆಗಳು ಕೆಲವು ಗೃಹಕೈಗಾರಿಕೆಯನ್ನು ಒಳಗೊಂಡಂತೆ ಅನೇಕ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಸಹಾಯಕವಾಗಿವೆ. ಮುಜಫರ್ ಪುರ್ ಪಟ್ಟಣದಲ್ಲಿ ತಯಾರಾಗುವ ವಸ್ತುಗಳಲ್ಲಿ ಅತ್ಯಂತ ಪ್ರಮುಖ ವಸ್ತು ರೈಲುಗಾಡಿಯ ವ್ಯಾಗನ್ (ಬಂಡಿ) ಆಗಿದೆ. ಮುಜಫರ್ ಪುರ್ ಪಟ್ಟಣವು ಬೃಹತ್ ಪ್ರಮಾಣದ ಬಟ್ಟೆ ವ್ಯಾಪಾರದ ಕೇಂದ್ರವಾಗಿದೆ. ಕೃಷಿ- ಆಧಾರಿತ ಕೈಗಾರಿಕೆಗಳನ್ನು ಕೂಡ ಈ ಪಟ್ಟಣದಲ್ಲಿ ಸ್ಥಾಪಿಸಲಾಗಿದೆ.

ಹೋಟೆಲ್ ಗಳು: ಇಲ್ಲಿ A.C. ಮತ್ತು -A.C. ಇಲ್ಲದ ಕೋಣೆಗಳಿರುವ ಕೆಲವು ಹೋಟೆಲ್ ಗಳಿವೆ.

ಲಿಚಿ[ಬದಲಾಯಿಸಿ]

ಮೇ ಯಿಂದ ಜೂನ್ ನ ವರೆಗೆ ದೊರೆಯುವಂತಹ ಲಿಚಿ ಬೆಳೆಯನ್ನು ಕೇವಲ ಮುಜಫರ್ ಪುರ್ ನ ಜಿಲ್ಲೆಗಳಾದ, ವೈಶಾಲಿ, ಸೀತಾಮರಿ, ಪಶ್ಚಿಮ ಮತ್ತು ಪೂರ್ವ ಚಂಪಾರಣ್ , ದರ್ಭಾಂಗ್ ಮತ್ತು ಸಮಸ್ಟಿಪುರ್ ನಲ್ಲಿ ಸುಮಾರು 25.27 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಸುಮಾರು ಒಟ್ಟು 3 ಲಕ್ಷ ಟನ್ ನಷ್ಟು ಉತ್ಪಾದಿಸಲಾಗುತ್ತದೆ. ಇದು ರಾಷ್ಟ್ರದಲ್ಲಿ ಲಿಚಿ ಬೆಳೆಯ 54% ಪ್ರದೇಶದಲ್ಲಿ ರಾಷ್ಟ್ರೀಯ ಉತ್ಪಾದನೆಯ ಸರಿಸುಮಾರು 70% ನಷ್ಟಾಗುತ್ತದೆ. ಭಾರತದಿಂದ ರಫ್ತು ಮಾಡಲಾಗುವ ಲಿಚಿ ಹಣ್ಣಿನ ಪಾಲು 1% ಕ್ಕಿಂತ ಕಡಿಮೆ ಇದ್ದರೂ ಅದು ಅತ್ಯುತ್ತಮ ಗುಣಮಟ್ಟದೆಂದು ಪರಿಗಣಿಸಲಾಗುತ್ತದೆ.

ಜನಸಂಖ್ಯಾ ವಿವರಣೆ[ಬದಲಾಯಿಸಿ]

2001 ರ ಭಾರತದ ಜನಗಣತಿ,[೨] ಯ ಸಂದರ್ಭದಲ್ಲಿ ಮುಜಫರ್ ಪುರ್ ನಗರ 305,465 ರಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 54 ರಷ್ಟು ಪುರುಷರು ಮತ್ತು ಶೇಕಡಾ 46 ರಷ್ಟು ಮಹಿಳೆಯರಿದ್ದಾರೆ. ಮುಜಫರ್ ಪುರ್ ಸರಿಸುಮಾರು ಶೇಕಡಾ 60 ರಷ್ಟು ಸಾಕ್ಷರತೆ ಪ್ರಮಾಣವನ್ನು ಹೊಂದಿದೆ. ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣ ಶೇಕಡಾ 59.5 ಕ್ಕಿಂತ ಹೆಚ್ಚಾಗಿದೆ: ಇದರಲ್ಲಿ ಶೇಕಡ 62 ರಷ್ಟು ಪುರುಷರ ಮತ್ತು ಶೇಕಡಾ 57 ರಷ್ಟು ಮಹಿಳೆಯರ ಸಾಕ್ಷರತೆಯನ್ನು ನೋಡಬಹುದಾಗಿದೆ. ಮುಜಫರ್ ಪುರ್ ನಲ್ಲಿ ಜನಸಂಖ್ಯೆಯ ಶೇಕಡಾ 13% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ.

2001 ರ ಜನಗಣತಿಯಂತೆ, ಮುಜಫರ್ ಪುರ್ ಜಿಲ್ಲೆ [೧೪] ಸರಿಸುಮಾರು 3,743,836 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಒಟ್ಟು ಜನಸಂಖ್ಯೆಯಲ್ಲಿ 1,941,480 ರಷ್ಟು ಪುರುಷರು ಮತ್ತು 1802356 ರಷ್ಟು ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಮಹಿಳೆಯರು, ಪುರುಷರ ಜನಸಂಖ್ಯಾ ಅನುಪಾತವು 1000:928 ನಷ್ಟಿದೆ. ಜಿಲ್ಲೆಯು ಸರಿಸುಮಾರು [೧೫] ಶೇಕಡಾ 48.15 ರಷ್ಟು ಸಾಕ್ಷರತೆಯ ಪ್ರಮಾಣವನ್ನು ಹೊಂದಿದೆ:ಶೇಕಡಾ 60.19 ರಷ್ಟು ಪುರುಷರ ಮತ್ತು ಶೇಕಡಾ 35.20 ರಷ್ಟು ಮಹಿಳೆಯರ ಸಾಕ್ಷರತೆಯನ್ನು ಹೊಂದಿದೆ.

ಮುಜಫರ್ ಪುರ್ ನಲ್ಲಿ ಅನೇಕ ಭಾಷೆಗಳನ್ನು ಮಾತನಾಡಲಾಗುತ್ತದೆ. ಈ ಪ್ರದೇಶದ ಪ್ರಧಾನ ಉಪಭಾಷೆ ವಜ್ಜಿಕ,- ಇದು ಮೈಥಿಲಿ ಮತ್ತು ಬೊಜ್ ಪುರಿ ಭಾಷೆಯ ಸಂಯೋಗವಾಗಿದೆ. ಹಿಂದಿ, ಉರ್ದು ಅಧಿಕೃತ ಭಾಷೆಗಳಾಗಿವೆ. ಬಿಹಾರ ನ ಇತರ ಪ್ರದೇಶಗಳಲ್ಲಿ ಮಾತನಾಡುವ ಇತರ ಭಾಷೆಗಳೆಂದರೆ: ಅಂಗಿಕ, ಬೊಜ್ ಪುರಿ, ಬಂಗಾಳಿ ಮತ್ತು ಮೈಥಿಲಿ.

ಅಡುಗೆಯ ವಿಧಾನ ಮತ್ತು ಪಾನೀಯಗಳು[ಬದಲಾಯಿಸಿ]

"ಮುಜಫರ್ ಪುರ್ ನ ಅಡುಗೆಯ ವಿಧಾನ" ವೆಂಬ ಯಾವುದೇ ನಿರ್ದಿಷ್ಟವಾದ, ಖಚಿತವಾದ ಮತ್ತು ಸಂಪೂರ್ಣವಾಗಿ ಅದರ ಶೈಲಿಯದೆಂದು ಕರೆಯಬಹುದಾದ ಪಾಕಪದ್ಧತಿ ಇಲ್ಲ. ಅಲ್ಲದೇ ಬಹುಪಾಲು ಅಡುಗೆಯ ವಿಧಾನವನ್ನು ಪ್ರಾದೇಶಿಕ ಅಡುಗೆಯ ವಿಧಾನವೆಂದು ಕರೆಯುವುದು ಸೂಕ್ತವಾಗಿದೆ. ಅಕ್ಕಿ, ಗೋಧಿ ಹಿಟ್ಟು, ವಿವಿಧ ಲೆಂಟಿಲ್ ಗಳನ್ನು, ಹಸಿರು, ಹಳದಿ, ಗೆಡ್ಡೆ ಮತ್ತು ಎಲೆಯ ತರಕಾರಿಗಳು , ಭಾರತೀಯ ಸಂಬಾರು ಪದಾರ್ಥಗಳು, ಕಡ್ಲೆ ಬೀಜದ ಎಣ್ಣೆ, ಸಾಸಿವೆ ಎಣ್ಣೆ, ತುಪ್ಪ, ಸಕ್ಕರೆ ಮತ್ತು ಬೆಲ್ಲ ಇತ್ಯಾದಿಗಳು ಅಡುಗೆಯಲ್ಲಿ ಬಳಸುವ ಮೂಲ ಪದಾರ್ಥಗಳಾಗಿವೆ. ಬೆಳಗಿನ ಹೊತ್ತಿನ ತಿಂಡಿಗೆ ಜನಾಂಗೀಯ ವೈವಿಧ್ಯತೆಯ - ಜಿಲೇಬಿ, ಪೂರಿ, ಸಮೋಸ, ಆಲೂಗೆಡ್ಡೆ ಕರಿ -ಎಲ್ಲವು ಬಿಸಿಯಾಗಿದ್ದು, ಹಬೆಯಾಡುತ್ತವೆ. ಇವುಗಳನ್ನು ವಿವಿಧ ಚಟ್ನಿಗಳೊಂದಿಗೆ ತಿನ್ನಲು ಬಡಿಸಲಾಗುತ್ತದೆ. ಹಾಲಿನ ಚಹಾದೊಂದಿಗೆ ಮುಕ್ತಾಯವಾಗುವ ಇವು ಕೆಲವು ರೆಸ್ಟೊರೆಂಟ್‌ಗಳಲ್ಲಿ ಲಭ್ಯವಿರುತ್ತದೆ.

ಭಾರತೀಯವೆನಿಸಿದ ಚೀನಿ ತಿನಿಸುಗಳಾದ, ಮುಖ್ಯವಾಗಿ ನೂಡಲ್ಸ್, ತಂದೂರಿ ಮತ್ತು ದಕ್ಷಿಣ ಭಾರತದ ತಿನಿಸುಗಳನ್ನು ಕೂಡ ತಿನ್ನಲಾಗುತ್ತದೆ ಹಾಗು ಅವನ್ನು ರುಚಿಯಾಗಿ ಮಾಡಲಾಗುತ್ತದೆ. ಬಹುಪಾಲು ಜನಾಂಗೀಯ ಅಡುಗೆಗಳನ್ನು ಮತ್ತು ವಿಶೇಷವಾದ ತಿನಿಸುಗಳನ್ನು ಹಬ್ಬಗಳ ಸಂದರ್ಭದಲ್ಲಿ, ಧಾರ್ಮಿಕ ಸಮಾರಂಭಗಳಲ್ಲಿ ಹಾಗು ಮದುವೆಗಳಲ್ಲಿ ಬೇಯಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನಾಂಗೀಯ ಅಡುಗೆಗಳು ಪಾನ್ -ಇಂಡಿಯ ರೀತಿಯ, ಮಸಾಲೆಯುಕ್ತ, ಕಾರವಾದ, ಎಣ್ಣೆ ಹೆಚ್ಚಿರುವ ಅಡುಗೆಗಳನ್ನು ಮಾಡಲು ಕಾರಣವಾಗಿವೆ.

ಹೆಂಡವು ಈಚಲು ಮರದಿಂದ ಸಂಗ್ರಹಿಸಲಾದ ಪಾನೀಯವಾಗಿದ್ದು, ಸರಿಸುಮಾರು 5%-8% v/v ಯಷ್ಟು ಆಲ್ಕಹಾಲ್ ಅನ್ನು ಹೊಂದಿರುತ್ತದೆ. ಇದು ಮುಜಫರ್ ಪುರ್ ಪಟ್ಟಣದಲ್ಲಿ ಬಡವನ ಬಿಯರ್ ಎಂದೇ ಅತ್ಯಂತ ಪ್ರಸಿದ್ಧವಾಗಿದೆ.

ಸಿಹಿತಿಂಡಿ- ಖಾಜ, ಮೋತಿಚೂರ್ ಕ ಲಡ್ಡು, ಕಾಲಾ ಜಾಮೂನ್, ಕೇಸರಿಯಾ ಪೇಡಾ ಮತ್ತು ಪರ್ವಾಲ್ ಕಿ ಮಿಠಾಯಿ ಇತ್ಯಾದಿಗಳು. ಆದರೆ ಇವು ಈ ಪ್ರದೇಶದಲ್ಲೆಲ್ಲಾ ಅತ್ಯಂತ ಸಾಮಾನ್ಯವಾಗಿವೆ. ಅಕ್ಕಿಹಿಟ್ಟಿನ ಪರೋಟ ಇದು ಚಪ್ಪಟ್ಟೆ ರೊಟ್ಟಿಯಂತಹ ಖಾದ್ಯವಾಗಿದ್ದು, ಇದನ್ನು ಕುದಿಯುವ ನೀರಿನಲ್ಲಿ ನಾದಿರುವ ಮತ್ತು ಬೆಣ್ಣೆ /ತುಪ್ಪದಿಂದ ಕರಿಯಲಾದ ಅಕ್ಕಿ ಹಿಟ್ಟಿನಿಂದ ಮಾಡಲಾಗುತ್ತದೆ. ನೋನಿ ಕಾ ಸಾಗ್‌ನೊಂದಿಗೆ ಮಾರುಚಪಾತಿ ಯು ಸ್ಥಳೀಯ ಖಾದ್ಯವಾಗಿದ್ದು ,ಇದನ್ನು ಶ್ರೀಮಂತರು ಮತ್ತು ಬಡವರೂ ತಿನ್ನುತ್ತಾರೆ. ಪಿತ್ತಹ್ , ಇದನ್ನು ಪುಡಿಮಾಡಿದ ಅಕ್ಕಿ/ಗೋಧಿ ಹಿಟ್ಟಿನೊಂದಿಗೆ ತುಂಬಲಾಗುವ ಕಡಲೆ ಬೀಜ (ಚನ್ನ) ಅಥವಾ ಹಾಲಿನ ಕೋಯಾ ಇತ್ಯಾದಿಗಳಿಂದ ಮಾಡಲಾಗುತ್ತದೆ. ಬಗ್ಡಿ , ಇದು ಗುಬ್ಬಿ ಗಾತ್ರದ ಚಿಕ್ಕ ಹಕ್ಕಿಯಾಗಿದ್ದು, ಎಣ್ಣೆಹಾಕದೆ ಅಥವಾ ಮಸಾಲೆ ಕರಿಯೊಂದಿಗೆ ಬೇಯಿಸಿದರೆ ರುಚಿಕರವಾಗಿರುತ್ತದೆ. ಈಗ ಇವುಗಳ ಸಂರಕ್ಷಣೆಗೆ ಘೋಷಣೆ ಹೊರಡಿಸಲಾಗಿದೆ. ಚಿವ್ರಾ ,ಬಡಿದ ಅಕ್ಕಿಯಾಗಿದ್ದು, (a) ಕೆನೆಯುಳ್ಳ ಮೊಸರನ್ನು ಮತ್ತು ಸಕ್ಕರೆ ಅಥವಾ ಬೆಲ್ಲ ಅಥವಾ ಉಪ್ಪನ್ನು ಹಾಕಿ ಬಡಿಸಲಾಗುತ್ತದೆ. (b) ಕಂದುಬಣ್ಣಕ್ಕೆ ತಿರುಗುವ ತನಕ ಚೆನ್ನಾಗಿ ಕರಿದು, ಕೆಂಪು ಮೆಣಸು, ಉಪ್ಪು ಇತ್ಯಾದಿಗಳೊಂದಿಗೆ ಸೇವಿಸಲಾಗುತ್ತದೆ. ಮಖನಾ , ಕೀರು- ಮಖನಾ ಎಂಬ ಜಲಸಸ್ಯದ ಬೀಜಗಳಿಂದ ತಯಾರಿಸಲಾದ ಹಾಲು-ಸಕ್ಕರೆಯ ಮೊಟ್ಟೆಭಕ್ಷ್ಯವಾಗಿದೆ. (ಇದು ಒಂದು ರೀತಿಯ ಒಣಹಣ್ಣಾಗಿದೆ)- ಇದನ್ನು ಪಕ್ಕದಲ್ಲಿರುವ ದರ್ಭಾಂಗ್ ಜಿಲ್ಲೆಯಿಂದ ತರಲಾಗುತ್ತದೆ. ಇದನ್ನು ಪಫ್(ಉಬ್ಬಿಸುವುದು) ಮಾಡಿಯೂ ಸೇವಿಸಲಾಗುತ್ತದೆ. ಮಕುನಿ , ಮಸಾಲೆ ತುಂಬಿದ ಪರೋಟ: ಇದನ್ನು ಬೇಯಿಸಲಾದ ಕಡ್ಲೆಹಿಟ್ಟಿನಿಂದ ಮಾಡಲಾಗುತ್ತದೆ. ಉದಾಹರಣೆಗೆ ಸತ್ತು, ಈರುಳ್ಳಿ, ಮೆಣಸಿನಕಾಯಿ, ಉಪ್ಪಿನಕಾಯಿ, ಸಾಸಿವೆ, ಉಪ್ಪು, ಇತ್ಯಾದಿ ಇದರಲ್ಲಿ ಬಳಸುವ ಸಾಮಗ್ರಿಗಳಾಗಿವೆ. ದಾಲ್ ಪಿಥಿ ಎಂಬುದು ರುಚಿಕರವಾದ ಮಸಾಲೆಯುಕ್ತ ದಾಲ್, ಉದಾ ಲೆಂಟಿಲ್ನಲ್ಲಿ ಬೇಯಿಸಲಾದ ಗೋಧಿ ಹಿಟ್ಟಿನ ಕೇಕ್ ಆಗಿದೆ. ಚಕ್ಕಾ, ಬಚ್ಕ, ಕಚ್ರಿ (ಕಚೋರಿಯಲ್ಲ), ಫುಲೋರಿ-ಇವೆಲ್ಲವು ಪಕೋಡವನ್ನು ಹೋಲುತ್ತವೆ. ಇವುಗಳು ಸಾಮಾನ್ಯ ಎಣ್ಣೆಯಲ್ಲಿ ಕರಿಯಲಾದ ತರಕಾರಿ ಮತ್ತು ಲೆಂಟಿಲ್ ಪುಡಿಯ ಮಿಶ್ರಣವಾಗಿದೆ. ಸಾವಾ/ಕೌನಿ ಅಕ್ಕಿಯ ಕೀರು (ಕಡುಬು) ಕೂಡ ಅತ್ಯಂತ ಪ್ರಖ್ಯಾತವಾಗಿದೆ. ವಿವಿಧ ಮಸಾಲೆಯ, ಬೇಯಿಸಿದ, ಕರಿದ, ಹೆಚ್ಚಾಗಿ ಕರಿದ,ಮಸಾಲೆಯ ಕುರಿಯ ಮಾಂಸಆಡಿನ ಮಾಂಸ ಕೋಳಿ, ಮೀನು ಮತ್ತು ಚಿಪ್ಪುಮೀನುಗಳ ಭಕ್ಷ್ಯ ತಯಾರಿಸಿ ತಿನ್ನಲಾಗುತ್ತದೆ. ಮೊಗಲೈ ಮತ್ತು ಕೆಲವು ಖಂಡೀಯ ಖಾದ್ಯಗಳು, ಉದಾಹರಣೆಗೆ ಮ್ಯಾಕ್ರೋನಿ, ಸ್ಪಗೆಟಿ,ಯಂತಹ ಖಾದ್ಯಗಳನ್ನು ಭಾರತೀಯವಾಗಿಸಿ ಮನೆಯಲ್ಲಿ ತಯಾರಿಸಲಾಗುತ್ತದೆ ಹಾಗು ಕೆಲವು ಜನರು ಇದನ್ನು ತಿನ್ನುತ್ತಾರೆ. ರಾತ್ರಿ ಭೋಜನದ ಮುಂಚೆ ಹಾಗು ನಂತರ ಬೀಟಲ್ (ಪಾನ್) ನನ್ನು ಅಗಿಯುವುದು-ಪ್ರಧಾನವಾಗಿ (ಜರ್ದಾ)ದೊಂದಿಗೆ ಸುವಾಸನೆಯುಕ್ತ ಹಾಗು ನಯವಾಗಿ ಕತ್ತರಿಸಲಾಗುತ್ತದೆ. ಇದನ್ನು ಪರಿಮಳಯುಕ್ತ ವಾಗಿಸಲಾಗುತ್ತದೆ. ಇಲ್ಲಿ ಮುಖ್ಯ ವಿಧದ ತಂಬಾಕು ಅತ್ಯಂತ ಜನಪ್ರಿಯವಾಗಿದೆ.

ಶಿಕ್ಷಣ[ಬದಲಾಯಿಸಿ]

ಮುಜಫರ್ ಪುರ್ ,ಬಿಹಾರ ದಲ್ಲಿ ಪಾಟ್ನಾದ ನಂತರ ಶಿಕ್ಷಣದ ಎರಡನೆಯ ಪ್ರಧಾನ ಕೇಂದ್ರವಾಗಿದೆ. ಇದು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜನ್ನು ಹೊಂದಿದ್ದು, ಬಿಹಾರ ನ ಹಳೆಯ ವಿಶ್ವವಿದ್ಯಾನಿಲಯಗಳಲ್ಲಿ ಒಂದು ವಿಶ್ವವಿದ್ಯಾನಿಲಯವನ್ನು ಹೊಂದಿದೆ.(ಬಿಹಾರ ವಿಶ್ವವಿದ್ಯಾನಿಲಯ, ಈಗ ಇದನ್ನು B. R. ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯವೆಂದು ಕರೆಯಲಾಗುತ್ತದೆ. ಮುಜಫರ್ ಪುರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗು L.S.ಕಾಲೇಜು ,ಇಲ್ಲಿನ ಅತ್ಯಂತ ಹಳೆಯ ಕಾಲೇಜ್ ಆಗಿದೆ. ಭಾರತೀಯ ಗಣರಾಜ್ಯದ ಮೊದಲನೆಯ ರಾಷ್ಟ್ರಪತಿಯಾದ "Dr ರಾಜೇಂದ್ರ ಪ್ರಸಾದ್" ಮುಜಫರ್ ಪುರ್ ನ ಗ್ರೀರ್ ಭೂಮಿಹಿರ್ ಬ್ರಹ್ಮನ್ ಕಾಲೇಜು ನ ಶಿಕ್ಷಕರಾಗಿದ್ದರು.

ಈ ಕಾಲೇಜನ್ನು 1979 ರಲ್ಲಿ ಸ್ಥಾಪಿಸಲಾಯಿತು.[೩] ಪೂರ್ವ ಮತ್ತು ಪಶ್ಚಿಮದ ಶ್ರೇಷ್ಟ ಕಾಲೇಜು ಹಾಗೂ ನೈತಿಕತೆಯ ಮೂಲಕ ಮಾನವಕುಲಕ್ಕೆ ಸೇವಾಮನೋಭಾವದಿಂದ ಕೂಡಿರುವ ಸಾಮಾಜಿಕ ಪರಿವರ್ತನೆಯ ಪ್ರವರ್ತಕರನ್ನು ಉತ್ಪಾದಿಸುವ ಗುರಿಯೊಂದಿಗೆ ಕಾಲೇಜನ್ನು ಸ್ಥಾಪಿಸಲಾಯಿತು. http://www.homoeopathicmedicalcollege.9f.com Archived 2016-03-28 ವೇಬ್ಯಾಕ್ ಮೆಷಿನ್ ನಲ್ಲಿ.

ಮುಜಫರ್ ಪುರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ , ರಘುನಾಥ್ ಪಾಂಡೆ ನಾಗರ್, ರಾಹು ಅಪುಚ್ಚ್, M.I.C. ಬೆಲಾ, ಮುಜಫರ್ ಪುರ್, ಬಿಹಾರ ಸರ್ಕಾರದ ಮಂತ್ರಿಯಾಗಿದ್ದ ದಿವಂಗತ ರಘುನಾಥ್ ಪಾಂಡೆ ಮತ್ತು ಕಾಲೇಜಿನ ಕಾರ್ಯದರ್ಶಿ ಅಮರ್ ನಾಥ್ ಪಾಂಡೆಯ ದಾನಶೀಲ ಆಲೋಚನೆಗಳ ಫಲಿತಾಂಶವಾಗಿದೆ. ಸಂಕಷ್ಟದ ಮಾನವಕುಲಕ್ಕಾಗಿ ಔಷಧ ಶಾಸ್ತ್ರದ ಹೋಮಿಯೋಪತಿ ಚಿಕಿತ್ಸೆಯ ವ್ಯಾಪ್ತಿಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಈ ಸಂಸ್ಥೆಯನ್ನು ಆದರ್ಶ ಸಂಸ್ಥೆಯಾಗಿ ಬೆಳೆಸಲು ದೃಢಸಂಕಲ್ಪ ಹೊಂದಿದ್ದರು. ಕಾಲೇಜಿನ ಆಡಳಿತ ಮಂಡಳಿಯು ಈ ಪ್ರದೇಶವನ್ನು ಸಾಂಸ್ಥಿಕ ಪ್ರದೇಶವಾಗಿ ಬದಲಾಯಿಸುವ ಯೋಜನೆಯನ್ನು ಹೊಂದಿತ್ತು. ಕ್ಯಾಂಪಸ್‌ನ ದೊಡ್ಡ ಆವರಣದಲ್ಲಿ ದಂತವೈದ್ಯಕೀಯ, ಕಾನೂನು ಕಾಲೇಜು ಹಾಗು ಇತರ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳನ್ನು ನಿರ್ಮಿಸುವ ಆಲೋಚನೆ ಹೊಂದಿತ್ತು. ಈ ಕಾಲೇಜನ್ನು ಶಾಶ್ವತವಾಗಿ ಮುಜಫರ್ ಪುರ್‌ನ ಬಿಹಾರ ವಿಶ್ವವಿದ್ಯಾನಿಲಯ B.R.A. ಗೆ ಸೇರಿಸಲಾಯಿತು. ಅಲ್ಲದೇ ಭಾರತ ಸರ್ಕಾರದ AYUS ವಿಭಾಗ , ನವದೆಹಲಿ ಯಿಂದ ಮಾನ್ಯತೆ ಪಡೆಯಿತು. ಅಬ್ದುಲ್ ಮುಗ್ನಿ ಖಾನ್ ರ ಮಾಹಿತಿ '

ಶೈಕ್ಷಣಿಕ ಸಂಸ್ಥೆಗಳು

 • ಮುಜಫರ್ ಪುರ್ ತಂತ್ರಜ್ಞಾನ ಸಂಸ್ಥೆ (1954) - ಮುಜಫರ್ ಪುರ್ ತಂತ್ರಜ್ಞಾನ ಸಂಸ್ಥೆಯು ಪೂರ್ವ ಭಾರತದ ಮೊದಲನೆಯ ತಂತ್ರಜ್ಞಾನ ಸಂಸ್ಥೆಯಾಗಿದ್ದು , ಇದನ್ನು 1954 ರಲ್ಲಿ ಸ್ಥಾಪಿಸಲಾಯಿತು. MIT, ಮುಜಫರ್ ಪುರ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಅಲ್ಲದೇ ಇದಕ್ಕೆ ಬಿಹಾರ ಸರ್ಕಾರ ಸಂಪೂರ್ಣ ಧನ ಸಹಾಯಮಾಡಿದೆ. ಇದನ್ನು B.R.A. ಬಿಹಾರ ವಿಶ್ವವಿದ್ಯಾನಿಲಯಕ್ಕೆ ಸೇರಿಸಲಾಯಿತು ಹಾಗು ಇಂಜಿನಿಯರಿಂಗ್ ನ ಏಳು ಗುಂಪುಗಳಲ್ಲಿ UG ವಿಷಯಗಳ ಅಧ್ಯಯನಕ್ಕೆ ಅವಕಾಶ ನೀಡಿದೆ. ಇದರ ಜೊತೆಯಲ್ಲಿ ಯಂತ್ರ ವಿನ್ಯಾಸ ಮತ್ತು ಥರ್ಮಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ತಜ್ಞತೆಯನ್ನು ಹೊಂದಿದೆ. ಸಂಸ್ಥೆಯು ಬಿಹಾರ ರಾಜ್ಯದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಹಾಯಮಾಡುತ್ತದೆ. [೧೬]
 • S.K.ವೈದ್ಯಕೀಯ ಕಾಲೇಜು (1969)
 • B. R. ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯ (ಹಿಂದಿನ ಬಿಹಾರ ವಿಶ್ವವಿದ್ಯಾನಿಲಯ)[೧೭] - ಬಿಹಾರ ವಿಶ್ವವಿದ್ಯಾನಿಲಯವು , ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದ್ದು ಭಾರತದ ಬಿಹಾರ ರಾಜ್ಯದ ಉತ್ತರ ಭಾಗದಲ್ಲಿರುವ ಮುಜಫರ್ ಪುರ್ ನಗರದಲ್ಲಿದೆ. ಇದನ್ನು 1952 ರಲ್ಲಿ ಸ್ಥಾಪಿಸಲಾಯಿತು. ಇದರ ಪ್ರಧಾನ ಕಾರ್ಯಾಲಯವು ಪಾಟ್ನಾದಲ್ಲಿದೆ.ಮುಜಫರ್‌ಪುರ್ ನ ಪ್ರಜೆಗಳು , ಬಿಹಾರ ವಿಶ್ವವಿದ್ಯಾನಿಲಯದ ಪ್ರಧಾನ ಕಾರ್ಯಾಲಯವನ್ನು ಪಾಟ್ನಾ ದಿಂದ ಮುಜಫರ್ ಪುರ್ ಗೆ ಬದಲಾಯಿಸಬೇಕೆಂಬ ಬೇಡಿಕೆ ಇಟ್ಟರು. ಈ ಉದ್ದೇಶಕ್ಕಾಗಿ ಸಂಚಾಲಕ ಸಮಿತಿಯನ್ನು ರಚಿಸಲಾಯಿತು. Dr ಮಗ್ಫೂರ್ ಅಹ್ಮದ್ ಅಜಾಸಿ ಈ ಸಮಿತಿಯ ಸಂಚಾಲಕರಾದರು. ಆಚಾರ್ಯ J.B. ಕೃಪಲಾನಿ, ಅಶೋಕ್ ಮೆಹ್ತ, ಮಹಾಮಾಯ ಪ್ರಸಾದ್ ಸಿನ್ಹ್ ಮತ್ತು ಮಹೇಶ್ ಪ್ರಸಾದ್ ಸಿನ್ಹ್ ಈ ಸಮಿತಿಯ ಇತರ ಸದಸ್ಯರಾಗಿದ್ದರು. ಅಂತಿಮವಾಗಿ ಸಾರ್ವಜನಿಕರ ಕೂಗು ಯಶಸ್ವಿಯಾಯಿತು ಹಾಗು UGC ಕೇಂದ್ರಾಲಯವನ್ನು ಪಾಟ್ನಾ ದಿಂದ ಮುಜಫರ್ ಪುರ್ ಗೆ ಬದಲಾಯಿಸುವಂತೆ ನಿರ್ದೇಶಿಸಿತು. ಇದಾದ ನಂತರ ವಿಶ್ವವಿದ್ಯಾನಿಲಯಕ್ಕೆ B.R. ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯ ಎಂದು ಪುನರ್ನಾಮಕರಣ ಮಾಡಲಾಯಿತು. ಈ ವಿಶ್ವವಿದ್ಯಾನಿಲಯವು 37 ಅಂಗ ಕಾಲೇಜುಗಳನ್ನು ಒಳಗೊಂಡಿದೆ. ದೂರ ಶಿಕ್ಷಣ ಕೋರ್ಸ್‌ಗಳಿಗೂ ಅವಕಾಶ ನೀಡಲಾಯಿತು. ಇದರ ಹೊರತಾಗಿ, ವಿಶ್ವವಿದ್ಯಾನಿಲಯ ವಿಚಾರ ಸಂಕಿರಣ, ವಿಚಾರಗೋಷ್ಠಿ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತದೆ. ವಿಶ್ವವಿದ್ಯಾನಿಲಯವು ನಗರದಲ್ಲಿ ಭೋಧನೆ ಮತ್ತು ಕಲಿಕೆಯ ಪ್ರಥಮ ಸಂಸ್ಥೆಯಾಗಿದೆ. ಅಲ್ಲದೇ ಪದವಿಯಿಂದ ಸ್ನಾತಕೋತ್ತರ ಮತ್ತು ಸಂಶೋಧನ ಮಟ್ಟದ ವರೆಗು ಪೂರ್ಣಾವಧಿಯ ಮತ್ತು ಅರೆಕಾಲಿಕ ವಿಷಯಗಳ ಅಧ್ಯಯನಕ್ಕೆ ಅವಕಾಶ ನೀಡಿದೆ. ವಿಶ್ವವಿದ್ಯಾನಿಲಯವು ಉನ್ನತ ಮಟ್ಟದ ಶಿಕ್ಷಣವನ್ನು ಒದಗಿಸಲು, ರಾಜ್ಯದಲ್ಲಿರುವ ಇತರ ಅನೇಕ ಕಾಲೇಜುಗಳೊಂದಿಗೆ ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿ ಕಾರ್ಯನಿರ್ವಹಿಸುತ್ತಿದೆ. ಈ ಕಾಲೇಜುಗಳು ಕೆಳಕಂಡಂತಿವೆ:
 • ಲಂಗತ್ ಸಿಂಗ್ ಕಾಲೇಜ್ (ಸ್ಥಾಪನೆ : 1899 ರ ಜುಲೈ 3 ರಂದು) - ಇದು ಮುಜಫರ್ ಪುರ್ ನ ಅತ್ಯಂತ ಹಳೆಯ ಕಾಲೇಜ್ ಆಗಿದೆ. ಬಿಹಾರ ವಿಶ್ವವಿದ್ಯಾನಿಲಯಕ್ಕೆ ಸೇರಿದ ಲಂಗತ್ ಸಿಂಗ್ ಕಾಲೇಜ್ ದಿನಕರ್ (ಪ್ರಸಿದ್ಧ ಹಿಂದಿ ಕವಿ), Dr. ರಾಜೇಂದ್ರ ಪ್ರಸಾದ್ ( ಭಾರತ ದೇಶದ ಮೊದಲನೆಯ ರಾಷ್ಟ್ರಪತಿ), ಮತ್ತು ಆಚಾರ್ಯ J. B. ಕೃಪಲಾನಿಯಂತವರನ್ನು ಅದರ ಭೋಧನಾ ವಿಭಾಗದ ಸದಸ್ಯರಾಗಿ ಹೊಂದಿತ್ತು.
 • ವೈಶಾಲಿ ವಾಣಿಜ್ಯ ಮತ್ತು ಗ್ರಾಮೀಣ ಆಡಳಿತದ ಸಂಸ್ಥೆ .
 • L.N.ಮಿಶ್ರಾ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ .
 • M.D.D.M. ಕಾಲೇಜು - "ಮಹಂತ್ ದರ್ಶನ್ ದಾಸ್ ಮಹಿಳಾ ಮಹಾವಿದ್ಯಾಲಯ".
 • R.D.S. ಕಾಲೇಜು -"ರಾಮ್ ದಯಾಳು ಸಿಂಗ್ ಕಾಲೇಜು"
 • R.M.L ಕಾಲೇಜು - ಈ ಕಾಲೇಜಿಗೆ Dr. ರಾಮ್ ಮನೋಹರ್ ಲೋಹಿಯ ರವರ ಹೆಸರನ್ನು ಇಡಲಾಯಿತು.
 • S.K.J. ಲಾ ಕಾಲೇಜು - ಈ ಕಾಲೇಜಿಗೆ ಶ್ರೀಕೃಷ್ಣ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಇವರು ಬಿಹಾರದ ಮೊದಲನೆಯ ಮುಖ್ಯಮಂತ್ರಿ. ಇದನ್ನು 1948 ರಲ್ಲಿ ಸ್ಥಾಪಿಸಲಾಗಿದ್ದು, ಇದು ಬಿಹಾರ ರಾಜ್ಯದ ಪ್ರಥಮ ಕಾನೂನು ಕಾಲೇಜು ಎನಿಸಿದೆ. ಪ್ರಮೋದ್ ಕುಮಾರ್ ಷಾಹಿಯಂತಹ ಬಿಹಾರದ ಶ್ರೇಷ್ಠ ವಕೀಲರು , ಈ ಕಾಲೇಜಿನ ಭೋದನಾಂಗದ ಸದಸ್ಯರಾಗಿದ್ದರು.
 • ನಿತಿಶ್ವರ್ ಕಾಲೇಜು - ಈ ಕಾಲೇಜಿಗೆ ನಿತಿಶ್ವರ್ ಸಿಂಗ್ ಅವರ ಹೆಸರನ್ನು ಇಡಲಾಯಿತು.
 • ಸೆಂಟ್ ಕ್ಸೇವಿಯರ್ಜೂನಿಯರ್/ಸೀನಿಯರ್.ಶಾಲೆ Archived 2014-04-02 ವೇಬ್ಯಾಕ್ ಮೆಷಿನ್ ನಲ್ಲಿ. ರಮ್ನ ಮುಜಫರ್ ಪುರ್. ಸೆಂಟ್ ಕ್ಸೇವಿಯರ್ ನ ಜೂನಿಯರ್/ ಸೀನಿಯರ್ ಶಾಲೆಯು ನರ್ಸರಿಯಿಂದ 10+2 ವರೆಗಿನ ತರಗತಿಗಳನ್ನು ಹೊಂದಿರುವ ಇಂಗ್ಲೀಷ್ ಮಾಧ್ಯಮದ ಸಹಶಿಕ್ಷಣವಿರುವ ಏಕೈಕ ಶಾಲೆಯಾಗಿದೆ. ಈ ಶಾಲೆಯು +2 ಮಟ್ಟದವರೆಗೆ ನವ ದೆಹಲಿಯ CBSE ಗೆ ಸೇರಿದೆ.

ಈ ಶಾಲೆಯನ್ನು 1976 ರಲ್ಲಿ ಸ್ಥಾಪಿಸಲಾಯಿತು. ಅಲ್ಲದೇ ಇದರ ಆಡಳಿತವನ್ನು ಚಂದ್ರ ಚಿಲ್ಡ್ರನ್ ವೆಲ್ ಫೇರ್ ಸೊಸೈಟಿ ನೋಡಿಕೊಳ್ಳುತ್ತಿತ್ತು. ಈ ಶಾಲೆಯನ್ನು 1860 ರ ಸೊಸೈಟಿಯ Reg. ACT XXI ಅಡಿಯಲ್ಲಿ Mr. S.ಚಂದ್ರರವರ ಅಧ್ಯಕ್ಷತೆಯಲ್ಲಿ ನೋಂದಾಯಿಸಲಾಯಿತು. ಇವರ ಸೂಕ್ತ ನಿರ್ದೇಶನದೊಂದಿಗೆ ಮತ್ತು ಮಾರ್ಗದರ್ಶನದೊಂದಿಗೆ ಮೂರು ದಶಕಗಳಿಗಿಂತಲು ಹೆಚ್ಚು ಕಾಲದ ವರೆಗೆ U.P.,BIHAR & NEPALನ ಬೇರೆ ಬೇರೆ ಭಾಗಗಳಲ್ಲಿ ಅನೇಕ ಶಾಲೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಕೆಲವೊಂದು ಶಾಲೆಗಳನ್ನು ಈಗಾಗಲೇ CBSE/ICSCE, ನವದೆಹಲಿ (ಭಾರತ) ಮತ್ತು ನೇಪಾಳ್ ಸೆಕೆಂಡರಿ ಬೋರ್ಡ್ ಆಫ್ ಎಕ್ಸಾಮಿನೇಷನ್ HMG(ನೇಪಾಳ) ಗೆ ಸೇರಿಸಲಾಗಿದೆ.

ಶಾಲೆಯು ವ್ಯಕ್ತಿಯ ಮೌಲ್ಯ ಮತ್ತು ಆತನ ಅಸದೃಶತೆಯಲ್ಲಿ ನಂಬಿಕೆ ಇರಿಸಿದೆ. ಯುವಜನರು ಸ್ವತಃ ಕಲಿತು ಆಲೋಚಿಸುವ ಮೂಲಕ ಅವರ ವ್ಯಾಪ್ತಿಯನ್ನು ವಿಸ್ತರಿಸಲು ನಾವು ನೆರವಾಗುತ್ತೇವೆ. ನಾವು ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣದ ಮೂಲಕ ನೈತಿಕ, ಸಾಮಾಜಿಕ, ಬೌದ್ಧಿಕ ,ಆಧ್ಯಾತ್ಮಿಕ ಮತ್ತು ಭೌತಿಕ ಮೌಲ್ಯಗಳನ್ನು ಕಲಿಸಿಕೊಡಲು ಶ್ರಮಿಸುತ್ತೇವೆ.

ಶಾಲೆಯ ಒಟ್ಟಾರೆ ಧ್ಯೇಯಗಳೇನೆಂದರೆ ಅದರ ವಿದ್ಯಾರ್ಥಿಗಳಲ್ಲಿ ಈ ಕೆಳಕಂಡ ಗುಣಗಳನ್ನು ಬೆಳಸುವುದು:-

i.ಆತ್ಮ ಗೌರವ ಮತ್ತು ಇತರರ ಹಕ್ಕುಗಳಿಗೆ ಸಲ್ಲಿಸ ಬೇಕಾದ ಗೌರವ. ii.ಪ್ರಾಮಾಣಿಕತೆ, ಸತ್ಯತೆ, ಉದಾರತೆ ಮತ್ತು ಸಹಿಷ್ಣುತೆ. iii.ಸತ್ಯವನ್ನು ಎದುರಿಸುವ ಧೈರ್ಯ, ಆಶಾವಾದ ಮತ್ತು ಕಾಯಕಕ್ಕೆ ಗೌರವ. iv. ನ್ಯಾಯ ಮತ್ತು ಸಮಾನತೆಯ ಕುರಿತು ಬದ್ಧತೆಯ ಆಳವಾದ ಪ್ರಜ್ಞೆ v. ವೀಕ್ಷಣೆ, ಪರಿಶೋಧನೆ, ವಿಶ್ಲೇಷಣೆ ಮತ್ತು ಮೌಲ್ಯ ಮಾಪನದ ಮೂಲಕ ಜ್ಞಾನದ ಅನ್ವೇಷಣೆ.

ಈ ಗುರಿಯನ್ನು ಸಾಧಿಸಲು, ಸೂಕ್ತವಾದ ಪರಿಸರವನ್ನು ಸೃಷ್ಟಿಸಲಾಗಿದೆ. ಇಂತಹ ಪರಿಸರದಲ್ಲಿ ಯುವ ಮನಸ್ಸುಗಳು ಅವರ ವೈಯಕ್ತಿಕ ಮತ್ತು ಸಾಮಾಜಿಕ ಗುಣಗಳನ್ನು ಶಿಸ್ತಿನಿಂದ ಮಾತ್ರವಲ್ಲದೇ - ಪ್ರೀತಿಯ ಮಾರ್ಗದರ್ಶನದಿಂದಲೂ ಬೆಳೆಸಿಕೊಳ್ಳ ಬಹುದಾಗಿದೆ.


 • JAWAHAR NAVODAYA VIDYALAYA -A cbse +2 ಆಧರಿತ ಶಾಲೆಯಾಗಿದ್ದು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿಯ ಇಲಾಖೆಯಡಿ ಬರುತ್ತದೆ ಹಾಗು , ಇದನ್ನು 1987 ರಲ್ಲಿ ಸ್ಥಾಪಿಸಲಾಯಿತು.ಅದರ ಪ್ರವೇಶ ಪರೀಕ್ಷೆಯ ಮೂಲಕ ಜಿಲ್ಲೆಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತದೆ. ಇದರ ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದಿರುತ್ತಾರೆ. ಆದರೆ ಅವರಿಗೆ ಎಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆಂದರೆ , ಈಗ ಅವರಲ್ಲಿ ಬಹುಪಾಲು ಜನರು ಉನ್ನತ ಮಟ್ಟಕ್ಕೇರಿದ್ದಾರೆ ಅಥವಾ ಅವರ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಗೈದಿದ್ದಾರೆ.
 • D.A.V. ಪಬ್ಲಿಕ್ ಸ್ಕೂಲ್ - ಈ ಶಾಲೆಯ ಅನೇಕ ವಿದ್ಯಾರ್ಥಿಗಳು ಭಾರತದಲ್ಲಿ ಮತ್ತು ವಿದೇಶದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. 2007-08 ನೇ ಸಾಲಿನಲ್ಲಿ ಶಾಲೆಯು 10TH ಬೋರ್ಡ್ ನಲ್ಲಿ ಅತ್ಯುತ್ತಮ ದಾಖಲೆ ನಿರ್ಮಿಸುವ ಮೂಲಕ ABHISHAKE ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಅನೇಕ ವಿದ್ಯಾರ್ಥಿಗಳು ಶೇಕಾಡ 90 ಕ್ಕಿಂತ ಹೆಚ್ಚು ಗಳಿಸಿದ್ದಾರೆ.
 • ಸನ್ ಶೈನ್ ಪ್ರೆಪ್/ಹೈ ಸ್ಕೂಲ್ - C.B.S.E ನಿಂದ ಅಂಗೀಕೃತಗೊಂಡ ಮುಜಫರ್ ಪುರ್ ನ ಪ್ರಮುಖ ಶಾಲೆಯಾಗಿದೆ.
 • ಸಿಲಾ ಸ್ಕೂಲ್ -ಅನ್ನು ಬ್ರಿಟಿಷ್ ರಾಜ್ ನ ಸಂದರ್ಭದಲ್ಲಿ ಸ್ಥಾಪಿಸಲಾಯಿತು, ಅಸಂಖ್ಯಾತ ಹಳೆಯ ವಿದ್ಯಾರ್ಥಿಗಳನ್ನು ಸೃಷ್ಟಿಸಿದ್ದು, ಈಗ ಇದು ಪ್ರಪಂಚದಾದ್ಯಂತ ವಿಸ್ತಾರಗೊಂಡಿದೆ. ವಿಶೇಷವಾಗಿ ಅದರ ಘಟಿಕೋತ್ಸವದ ಸಭಾಂಗಣ ಬ್ರಿಟಿಷ್ ವಾಸ್ತುಶಿಲ್ಪದ ಉತ್ತಮ ನಿದರ್ಶನವಾಗಿದೆ.
 • ಕೇಂದ್ರೀಯ ವಿದ್ಯಾಲಯ ಮುಜಫರ್ ಪುರ್- ಭಾರತದಲ್ಲಿ ಇದನ್ನು ಸೆಂಟ್ರಲ್ ಸ್ಕೂಲ್ ಎಂದು ಹೆಚ್ಚಾಗಿ ಕರೆಯಲಾಗುತ್ತದೆ. ಇದು ಮುಜಫರ್ ಪುರ್ ನಲ್ಲಿರುವ ಗನ್ನಿಪುರ್ ನಲ್ಲಿದೆ ಇದನ್ನು ಸರ್ಕಾರಿ ನೌಕರರ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗಾಗಿ ತೆರೆಯಲಾಯಿತು. ಇದು ರಾಯಭಾರ ಕಛೇರಿಗಳಂತೆ ಪ್ರಪಂಚದಲ್ಲೆಲ್ಲ ಅದರ ಶಾಖೆಗಳನ್ನು ಒಳಗೊಂಡಿದೆ. ಇದು CBSE ವ್ಯಾಸಂಗ ಕ್ರಮವನ್ನು ಅನುಸರಿಸುತ್ತದೆ. [೧೮][ಶಾಶ್ವತವಾಗಿ ಮಡಿದ ಕೊಂಡಿ]
 • NORTH POINT CHILDREN’S SCHOOL - ಇದು I.C.S.E ಯಿಂದ ಅಂಗೀಕೃತವಾಗಿರುವ ಮುಜಫರ್ ಪುರ್ ನ ಮೊದಲ ಶಾಲೆಯಾಗಿದೆ.ಇದನ್ನು ದಿವಂಗತ P.K. ಮಿತ್ರ ಎಂಬುವವರು ಸ್ಥಾಪಿಸಿದರು . ಇದು ನಗರದ ಅತ್ಯಂತ ಉತ್ತಮ ಶಾಲೆಯಾಗಿದೆ.ಇದು ನಗರದ ಮಧ್ಯಭಾಗದಲ್ಲಿ ರಮಣದ DEVI MATA MANDIR(ದೇವಿ ಮಾತ ಮಂದಿರ)ದ ಬಳಿ ಇದೆ.ಈ ಶಾಲೆಯು ಪ್ರತಿಭಾವಂತ ವ್ಯಕ್ತಿಗಳನ್ನು ಸೃಷ್ಟಿಸಿದೆ. ಇವರು ಭಾರತದಲ್ಲಿ ಆಯಾ ಕ್ಷೇತ್ರಗಳಲ್ಲಿ ಉತ್ತಮ ಮನ್ನಣೆ ಗಳಿಸಿ ಗುರುತಿಸಿಕೊಂಡಿದ್ದಾರೆ. ಉದಾಹರಣೆಗೆ ರಮೇಶ್ ಚಂದ್ರ -AIIMS,.ಪಲ್ಲಬ್ ಭಟ್ಟಾಚಾರ್ಯ-IIT, Dr.ಷಗುಫ್ತ,Dr.ಗೌರವ್,ಪ್ರತಿಕ್ ಕೆಹ್ ನಾನಿ-IIT, ಅಕಂಚ ಪಾಂಡೆ-IIT, ಅಶಿಶ್ ಗೌರವ್ -ICAT ಮತ್ತು ಹಲವರು.
 • ಪ್ರಭಾತ್ ತಾರ ಸ್ಕೂಲ್ ಚರ್ಚ್ ರನ್ - ಇದು ಹಳೆಯ ಶಾಲೆಗಳಲ್ಲಿ ಒಂದಾಗಿದ್ದು, ಅತ್ಯಂತ ಪ್ರಸಿದ್ಧ ಶಾಲೆಯಾಗಿದೆ. ಅಲ್ಲದೇ ಭಾರತದಲ್ಲಿ ಮತ್ತು ವಿದೇಶದಲ್ಲಿರುವ ಅನೇಕ ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳನ್ನು ಹೊಂದಿದೆ. . ಈ ಶಾಲೆಯು ಮುಜಫರ್ ಪುರ್ ನಲ್ಲಿರುವ ಎಲ್ಲಾ ಶಾಲೆಗಳಿಗಿಂತ ಅತ್ಯಂತ ದೊಡ್ಡ ಮತ್ತು ಅತ್ಯಂತ ಸುಂದರವಾದ ಕ್ಯಾಂಪಸ್ ಹೊಂದಿದೆ.
 • ಪ್ರಿಸ್ಟೀನ್ ಚಿಲ್ಡ್ರನ್ಸ್ ಹೈ ಸ್ಕೂಲ್ (ಪ್ರಿಸ್ಟೀನ್ ಮಕ್ಕಳ ಪ್ರೌಢ ಶಾಲೆ), ಮಜೋಲಿಯ ರಸ್ತೆ - ಈ ಶಾಲೆಯು C.B.S.E. ಗೆ ಸೇರಿದ್ದು ಇದು ಪಟ್ಟಣದಲ್ಲಿ 25ಕ್ಕಿಂತ ಹೆಚ್ಚು ವರ್ಷ ಗಳ ವರೆಗೆ ಉತ್ತಮ ಶಿಕ್ಷಣವನ್ನು ಒದಗಿಸುತ್ತಿದೆ.
 • ಶಾಂತಿ ನಿಕೇತನ್ ಅವಸಿಯ ಬಾಲ ವಿದ್ಯಾಲಯ - ಇದು C.B.S.E ಯಿಂದ ಅಂಗೀಕೃತವಾದ ಮುಜಫರ್ ಪುರ್ ನ ಮೊದಲನೆಯ ಶಾಲೆಯಾಗಿದೆ.
 • ಸೆಂಟ್ ಮೈಕೆಲ್ಸ್ ಸ್ಕೂಲ್- ಇನ್ನೂ 60 ಪ್ರತಿಶತದಷ್ಟು ಜನರು ಅನಕ್ಷರಸ್ಥರಾಗಿದ್ದ ಸಂದರ್ಭದಲ್ಲಿ 90ರ ಪೂರ್ವಾರ್ಧದಲ್ಲಿ ಇದ್ದಂತಹ ಪ್ರಮುಖ ಶಾಲೆಗಳಲ್ಲಿ ಇದೂ ಒಂದಾಗಿದೆ.

*ದಿ JPS (ದಿ ಜಯಂತ್ ಪುರ್ ಪಬ್ಲಿಕ್ ಸ್ಕೂಲ್), ಮರಿ ಪುರ್ - ಮುಜಫರ್ ಪುರ್ ನ ಅತ್ಯುತ್ತಮ ಶಾಲೆಗಳಲ್ಲಿ ಇದೂ ಒಂದಾಗಿದೆ. ಈ ಶಾಲೆಯ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದಾರಲ್ಲದೇ, ಅವರಲ್ಲಿ ಕೆಲವರು ಅವರ ಶಿಕ್ಷಣವನ್ನು IIT ಗಳಿಂದ ವೈದ್ಯಕೀಯ ಮತ್ತು ಇತರ ಇಂಜಿನಿಯರಿಂಗ್ ಕಾಲೇಜುಗಳಿಂದ ಪಡೆದಿದ್ದಾರೆ. ಈ ಶಾಲೆಯ ಅಧ್ಯಕ್ಷರು (ಶ್ರೀಮತಿ. ಉಷಾ ಸಿನ್ಹ) ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ಬಿಹಾರದ ಶಿಕ್ಷಣ ಸಚಿವರಾಗಿದ್ದರು.

 • IGNOU ಸ್ಟಡಿ ಸೆಂಟರ್ - 0504
 • ಸೆಂಟ್ ಮೇರಿಸ್ ಸ್ಕೂಲ್

R.D.S.ಕಾಲೇಜು- ಬಾಬು ರಾಮ್ ದಯಾಳು ಸಿಂಗ್ ರವರ ನಂತರ ಇದಕ್ಕೆ ಅವರ ಹೆಸರಿಡಲಾಯಿತು. ಇವರು ಬಿಹಾರದ ಶಾಸನ ಸಭೆಯ ಮೊದಲ ಸಭಾಧ್ಯಕ್ಷರಾಗಿದ್ದರು. ಈಗ ಇದು ಬಿಹಾರದ ಪ್ರಮುಖ ಕಾಲೇಜ್ ಗಳಲ್ಲಿ ಒಂದಾಗಿದೆ. ಈ ಕಾಲೇಜು ಸಾಲಾಗಿರುವ ಕಟ್ಟಡಗಳನ್ನು ಮತ್ತು ಮೂರು ಕೊಳಗಳನ್ನು ಹೊಂದಿದೆ. ಇಲ್ಲಿ ವಿಜ್ಞಾನ, ಕಲೆ , ವಾಣಿಜ್ಯ , ಮತ್ತು ಭೂಗೋಳ ಶಾಸ್ತ್ರ ಸೇರಿದಂತೆ ನಾಲ್ಕು ಭೋದನಾಂಗಗಳಿವೆ. ಇಲ್ಲಿಗೆ ಇನ್ನೂ ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ ಮತ್ತು ಕೇರಳದಿಂದ ವಿದ್ಯಾರ್ಥಿಗಳು ವಾಣಿಜ್ಯ ಮತ್ತು ಇಂಗ್ಲೀಷ್ ಅನ್ನು ಕಲಿಯಲು ಬರುತ್ತಾರೆ.

ರಾಮ್‌ಶ್ರೇಷ್ಠ ಸಿಂಗ್ ಕಾಲೇಜು- ಚುಚಾಹನ್, ಮುಜಫರ್ ಪುರ್ . ಈ ಕಾಲೇಜು ನಗರದಿಂದ 22 ಕಿಲೋ ಮೀಟರ್ ಗಳಷ್ಟು ದೂರದಲ್ಲಿರುವ ಚುಚಾಹನ್ ಎಂಬ ಗ್ರಾಮದಲ್ಲಿದೆ. ಇದನ್ನು ಗ್ರಾಮದ ಜನರು ಅವರ ಶಿಕ್ಷಣವನ್ನು ಮುಂದುವರೆಸಲು ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು ಅನುದಾನರಹಿತ ಕಾಲೇಜಾಗಿದ್ದು, ಯಾವಾಗಲು ಉತ್ತಮ ಫಲಿತಾಂಶ ಕೊಡುತ್ತದೆ.

ಮುಜಫರ್ ಪುರ್ ನಲ್ಲಿ ಹುಟ್ಟಿದ ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

 • ಸ್ವಾತಂತ್ರ್ಯ ಹೋರಾಟಗಾರರಾದ ಖುದಿ ರಾಮ್ ಬೋಸ್ , ಗುಬ್ಬಾ ಸಹ್ನಿ, ಭಾಮ ಸಾಹ್
 • ಸರ್ ಚಂದೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್ ,ಇವರು ಭಾರತದಿಂದ ನೇಪಾಳಕ್ಕೆ ಹೋದ ಮೊದಲನೆಯ ರಾಯಭಾರಿ ಹಾಗು ಅನಂತರ ಜಪಾನ್ ನ ರಾಯಭಾರಿಯಾದರು(1958 ರಿಂದ). ಅಲ್ಲದೇ 1953 ರಲ್ಲಿ ಪಂಜಾಬ್ ನ ಎರಡನೆಯ ರಾಜ್ಯಪಾಲರಾದರು ಹಾಗು ತರುವಾಯ 1980 ರಿಂದ 1985 ರವರೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದರು.[೪]
 • ದಿವಂಗತ Dr. ಜಗದೀಶ್ ಶಾಹು RMLS ಕಾಲೇಜಿನ ಸಂಸ್ಥಾಪಕರಾಗಿದ್ದಾರೆ.
 • ರಾಮೇಶ್ವರ್ ಪ್ರಸಾದ್ ಸಿನ್ಹ್, ರಾಜಕಾರಣಿಯಾಗಿದ್ದು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿದ್ದರು.
 • Dr.ಶ್ಯಾಮನಂದನ್ ಸಹಾಯ್, ಬಿಹಾರ ವಿಶ್ವವಿದ್ಯಾನಿಲಯಯ ಮೊದಲನೆಯ V.C. ಆಗಿದ್ದರು. B.R.ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯದ ಒಂದು ಕಾಲೇಜಿಗೆ ಶ್ಯಾಮನಂದನ್ ಸಹಾಯ್ ಕಾಲೇಜು ಎಂದು ಹೆಸರಿಡಲಾಗಿದೆ.
 • ಶಿಕ್ಷಣ ಉಪೇಂದ್ರ ಪ್ರಸಾದ್ ಶ್ರೀವಾತ್ಸವ್, ಬಿಹಾರ ರಾಜ್ಯದ ಪ್ರಸಿದ್ಧ ಶಿಕ್ಷಣತಜ್ಞರಾಗಿದ್ದರು. ಶ್ರೀ. ಶ್ರೀವಾತ್ಸವ್ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಅವರು ಗೈದ ಸಾಧನೆಗಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಬಿಹಾರ ಸ್ಕೂಲ್ ಸರ್ವೀಸ್ ಕಮಿಷನ್ ನ ಸದಸ್ಯರಾಗಿದ್ದರು ಹಾಗು ಮುಜಫರ್ ಪುರ್ ನ ಚಂದ್ವಾರದ ಮಾರ್ವಾರಿ ಪ್ರೌಢ ಶಾಲೆಯ ಪ್ರಾಂಶುಪಾಲರಾಗಿದ್ದರು.
 • Dr. ಶಬೀರ್ ಅಹಮದ್, ಇವರು ಪ್ರಸಿದ್ಧ ಲೋಕೋಪಕಾರಿಯಾಗಿದ್ದು ಹೋಮಿಯೋಪತಿ ವೈದ್ಯರಾಗಿದ್ದರು. ಇವರು ಮುಜಫರ್ ಪುರ್ ನ ಬಟ್ಲರ್ ರಸ್ತೆಯ ಭಾಗದಿಂದ ಬಂದವರು.
 • ಸಾಹಬ್ ಶಬೀರ್ ,ಇವರು Dr. ಶಬೀರ್ ರವರ ಮಗನಾಗಿದ್ದು, ಅಲಿಗಢ್ ಮುಸ್ಲೀಂ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿದ್ದರು. ಅಲ್ಲದೇ ಅಂತಾರಾಷ್ಟ್ರೀಯ ಪರಿಸರ ನಿಯಮಗಳ ಮೇಲೆ ಸಂಶೋಧನೆ ಮಾಡಿದ ಕೆಲವೇ ಕೆಲವು ಭಾರತೀಯರಲ್ಲಿ ಇವರೂ ಒಬ್ಬರಾಗಿದ್ದಾರೆ.
 • ರಾಯ್ ಬಹದೂರ್ ತುಂಕಿ ಸಹ್, ಅವರ ಕಾಲದ ಅತ್ಯಂತ ಪ್ರಸಿದ್ದ ವ್ಯಾಪಾರಿಯಾಗಿದ್ದರು.
 • Mr.K.P.ಠಾಕೂರ್,ಇವರು ಪ್ರಸಿದ್ಧ, ಪುಸ್ತಕ ಬರಹಗಾರರಾಗಿದ್ದು, ಬಿಹಾರ ಕ್ಕೆ ವ್ಯಾಕರಣ ಮತ್ತು ವಾಕ್ಯ ರಚನೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಿರುವ ಪುಸ್ತಕವನ್ನು ನೀಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. ಫಾಲಿಂಗ್ ರೇನ್ ಜಿನಾಮಿಕ್ಸ್, Inc - ಮುಜಫರ್ ಪುರ್
 2. GRIndia
 3. "ಆರ್ಕೈವ್ ನಕಲು". Archived from the original on 2016-03-28. Retrieved 2021-08-10.
 4. "Shri. Chandeshwar Prasad Narayan Singh". Raj Bhavan (Uttar Pradesh) web site. Raj Bhavan (Uttar Pradesh). Archived from the original on 2009-01-05. Retrieved 2008-08-19.

ವಾಟ್ ಅಬೌಟ್ ಮೌಲಾನ ಶಫಿ ದೌಡಿ ,ಮಗ್ಫುರ್ ಅಹ್ಮದ್ ಇಜಾಸಿ, ನವಾಬ್ ಸೈದ್ ಮೊಹಮದ್ ತಾಕಿ ಖಾನ್ ಇತ್ಯಾದಿ. ಪ್ರಭಾಶ್ ಪ್ರವೀಣ್

ಆಚಾರ್ಯ ಜಾನಕಿ ವಲ್ಲಬ್ ಶಾಸ್ತ್ರಿ - ಆಧುನಿಕ ಯುಗದ ಶ್ರೇಷ್ಠ ಕವಿ ಶ್ರೀಧರ್ ಪ್ರಸಾದ್ ಯಾದವ್ - ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸೇವಕ....

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Tirhut Division

=