ಮುಂದುವರೆದ ಅಧ್ಯಾಯ (ಚಲನಚಿತ್ರ)
ಮುಂದುವರೆದ ಅಧ್ಯಾಯ | |
---|---|
Directed by | ಬಾಲು ಚಂದ್ರಶೇಖರ್ |
Written by | ಬಾಲು ಚಂದ್ರಶೇಖರ್ |
Produced by | ಕಣಜ ಎಂಟರ್ಪೈಸರ್ಸ್ |
Starring | ಆದಿತ್ಯ ಮುಖ್ಯಮಂತ್ರಿ ಚಂದ್ರು ಜೈಜಗದೀಶ್ ಅಜಯ್ ರಾಜ್ ಆಶಿಕಾ ಸೋಮಶೇಖರ್ |
Cinematography | ದಿಲೀಪ್ ಚಕ್ರವರ್ತಿ |
Edited by | Srikanth |
Music by | ಜಾನಿ-ನಿತಿನ್ |
Release date | ೧೯ ಮಾರ್ಚ್ ೨೦೨೧ |
Running time | ೧೨೦ ನಿಮಿಷಗಳು |
ಮುಂದುವರೆದ ಅಧ್ಯಾಯವು 2021 ರ ಕನ್ನಡ ಸಾಹಸ ಚಲನಚಿತ್ರವಾಗಿದ್ದು, ಬಾಲು ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಕಣಜ ಎಂಟರ್‌ಪ್ರೈಸಸ್ ನಿರ್ಮಿಸಿದೆ. [೧] ಡೆಡ್ಲಿ ಆದಿತ್ಯ ಪೋಲೀಸ್‌ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಜೈ ಜಗದೀಶ್, ಮುಖ್ಯಮಂತ್ರಿ ಚಂದ್ರು, ಆಶಿಕಾ ಸೋಮಶೇಖರ್ ಮತ್ತು ಇತರರು ತಾರಾಗಣದಲ್ಲಿದ್ದಾರೆ. [೨] ಜಾನಿ-ನಿತಿನ್ ಸಂಗೀತ ಸಂಯೋಜಿಸಿದ್ದು, ಅನೂಪ್ ಸೀಳಿನ್ ಹಿನ್ನೆಲೆ ಸಂಗೀತವನ್ನೂ ಮತ್ತು ದಿಲೀಪ್ ಚಕ್ರವರ್ತಿ ಛಾಯಾಗ್ರಹಣವನ್ನೂ ನಿರ್ವಹಿಸಿದ್ದಾರೆ. ಈ ಚಿತ್ರವು ಇಂಡಿಯಾ ಟುಡೆಯಿಂದ ಉತ್ತಮ ವಿಮರ್ಶೆಯನ್ನು ಪಡೆಯಿತು. [೩]
ಕಥಾವಸ್ತು
[ಬದಲಾಯಿಸಿ]ಅನುಭವಿ ಪೋಲೀಸ್ ಬಾಲಾ ಅವರು ಗುತ್ತಿಗೆದಾರ ವಿಶ್ವಾಸ್ ನಾರಾಯಣ್ ಎಂಬ ಪ್ರಮುಖ ವ್ಯಕ್ತಿಯ ಕೊಲೆಯನ್ನು ತನಿಖೆ ಮಾಡುತ್ತಾರೆ. ಆರಂಭದಲ್ಲಿ ಪ್ರಕರಣಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಮತ್ತು ಎಲ್ಲಾ ಬೆರಳುಗಳು ಶಾಸಕ ಶಾಂತ್ ಶಂಕರ್ ಕಡೆಗೆ ತೋರಿಸಲ್ಪಟ್ಟಿವೆ. ಬಾಲಾ ಪ್ರಕರಣದ ವಿಚಾರಣೆಗೆ ಇಳಿದು ಅಂತಿಮವಾಗಿ ಕೊಲೆಗಾರನನ್ನು ಗುರುತಿಸುತ್ತಾನೆ ಆದರೆ ಪ್ರಕರಣವು ಹೆಚ್ಚು ಜಟಿಲವಾಗಿದೆ ಎಂದು ಅರಿತುಕೊಳ್ಳುತ್ತಾನೆ, ಅಂತಿಮವಾಗಿ ಈತನು ನಿಜವಾದ ಅಪರಾಧಿಯನ್ನು ಹಿಡಿಯುತ್ತಾನೆಯೇ? ಎಂಬುದು ಕುತೂಹಲಕರ.
ಪಾತ್ರವರ್ಗ
[ಬದಲಾಯಿಸಿ]- ಎಸಿಪಿ ಬಾಲನಾಗಿ ಡೆಡ್ಲಿ ಆದಿತ್ಯ
- ಮುಖ್ಯಮಂತ್ರಿ ಚಂದ್ರು ಗೃಹ ಸಚಿವ
- ಆಯುಕ್ತರಾಗಿ ಜೈ ಜಗದೀಶ್
- ಗುತ್ತಿಗೆದಾರ ವಿಶ್ವಾಸ್ ನಾರಾಯಣ ಪಾತ್ರದಲ್ಲಿ ಭಾಸ್ಕರ್ ಶೆಟ್ಟಿ
- ನಟ ಚಿಂತನ್ ಪಾತ್ರದಲ್ಲಿ ಅಜಯ್ ರಾಜ್
- ವಿನಯ್ ಕೃಷ್ಣಸ್ವಾಮಿ ಶಾಸಕ ಶಾಂತಾ ಶಂಕರ್
- ಪತ್ರಕರ್ತೆ ಸಾಕ್ಷಿಯಾಗಿ ಆಶಿಕಾ ಸೋಮಶೇಖರ್
- ಡಾಕ್ಟರ್ ಆಚಾರಿಯಾಗಿ ಚಂದನ ಗೌಡ
- ಕರ್ಣನಾಗಿ ಸಂದೀಪ್ ಕುಮಾರ್
- ರಾಬರ್ಟ್ ಪಾತ್ರದಲ್ಲಿ ಶೋಭನ್
ಚಿತ್ರಸಂಗೀತ
[ಬದಲಾಯಿಸಿ]ಚಿತ್ರಗೀತೆಗಳ ಸಂಗೀತವನ್ನು ಜಾನಿ-ನಿತಿನ್ ಮತ್ತು ಚಿತ್ರದ ಹಿನ್ನೆಲೆ ಸಂಗೀತವನ್ನು ಅನೂಪ್ ಸೀಳಿನ್ ಸಂಯೋಜಿಸಿದ್ದಾರೆ . ಸಂಗೀತದ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ .
Tracklist | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಜಗದ ನಿಯಮ ಬರೆದ ಶಿವನೆ" | ಬಾಲು ಚಂದ್ರಶೇಖರ್ | ಹೇಮಂತ್ | 3:48 |
2. | "ನೀ ಮಾಯಾ ಸಂಚಾರಿ" | ಜಯಂತ ಕಾಯ್ಕಿಣಿ | ರಘು ದೀಕ್ಷಿತ್ | 3:50 |
3. | "ನಾ ಬರೆದಾಯಿತು" | ಜಯಂತ ಕಾಯ್ಕಿಣಿ | ಸಂಜಿತ್ ಹೆಗ್ಡೆ, ಸಂಗೀತಾ ರವೀಂದ್ರನಾಥ್ | 3:11 |
4. | "ನಿನಗೆಂದೆ" | ಬಾಲು ಚಂದ್ರಶೇಖರ್ | ಸಂಗೀತಾ ರವೀಂದ್ರನಾಥ್ | 3:40 |
ಉಲ್ಲೇಖಗಳು
[ಬದಲಾಯಿಸಿ]- ↑ "Deadly Aditya is back; a new chapter awaits the actor". Retrieved 16 March 2021.
- ↑ "Week's Releases". Retrieved 19 March 2021.
- ↑ "Balu Chandrashekar proves himself as a director with 'Munduvareda Adhyaya'". Retrieved 23 March 2021.