ವಿಷಯಕ್ಕೆ ಹೋಗು

ಮಿಶ್ರ ಆರ್ಥಿಕ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಶ್ರ ಆರ್ಥಿಕ ವ್ಯವಸ್ಥೆ ಎನ್ನುವುದು ಒಂದು ಆರ್ಥಿಕ ವ್ಯವಸ್ಥೆಯಾಗಿದ್ದು ಅದು ವಿವಿಧ ಬಗೆಯ ಖಾಸಗಿ ಮತ್ತು ಸರ್ಕಾರಿ ನಿಯಂತ್ರಣವನ್ನು ಅಥವಾ ಬಂಡವಾಳಶಾಹಿ ಮತ್ತು ಸಮಾಜವಾದಿ ನೀತಿಯ ಮಿಶ್ರಣವನ್ನು ಒಳಗೊಂಡಿರುತ್ತದೆ.[]

ಮಿಶ್ರ ಆರ್ಥಿಕ ವ್ಯವಸ್ಥೆಗೆ ಯಾವುದೇ ಒಂದು ವ್ಯಾಖ್ಯಾನವಿಲ್ಲ, ಆದರೆ ಸಂಬಂಧಿತ ಅಂಶಗಳು ಇವುಗಳನ್ನು ಒಳಗೊಂಡಿರಬಹುದು: ಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯ ಯೋಜನೆ ಮತ್ತು ಸರ್ಕಾರಿ ನಿಯಂತ್ರಣಗಳೊಂದಿಗೆ (ಇವುಗಳು ಪರಿಸರಕ್ಕೆ ಸಂಬಂಧಿಸಿದ ಕಾಳಜಿಗಳನ್ನು, ಸಾಮಾಜಿಕ ಕಲ್ಯಾಣ ಅಥವಾ ದಕ್ಷತೆ, ಅಥವಾ ಸರ್ಕಾರಿ ಮಾಲೀಕತ್ವ ಮತ್ತು ರಾಷ್ಟ್ರೀಯ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಕೆಲವು ಉತ್ಪಾದನೆಯ ಮಾರ್ಗಗಳುಗಳನ್ನು ಒಳಗೊಂಡಿರಬಹುದು) ಬೆರೆತಿರುವ ಖಾಸಗಿ ಆರ್ಥಿಕ ಸ್ವಾತಂತ್ರ್ಯ (ಖಾಸಗಿ ಮಾಲೀಕತ್ವದ ಉದ್ಯಮವನ್ನು ಒಳಗೊಂಡು) ದ ಸ್ಥಿತಿ.

ಕೆಲವು ರಾಷ್ಟ್ರಗಳಿಗೆ, ಅವುಗಳು ಬಂಡವಾಳವಾದಿಯೇ , ಸಮಾಜವಾದಿಯೇ ಅಥವಾ ಮಿಶ್ರ ಆರ್ಥಿಕ ವ್ಯವಸ್ಥೆಯೇ ಎಂಬ ಬಗ್ಗೆ ಒಮ್ಮತ ಇಲ್ಲ. ಅಮೇರಿಕ[] ದಿಂದ ಕ್ಯೂಬಾ[] ದವರೆಗಿನ ಆರ್ಥಿಕ ವ್ಯವಸ್ಥೆಗಳನ್ನು ಮಿಶ್ರ ಆರ್ಥಿಕ ವ್ಯವಸ್ಥೆಗಳೆಂದು ಕರೆಯಲಾಗಿದೆ.

ಆರ್ಥಿಕ ಪರಿಪೂರ್ಣ ಮಾದರಿಯಾಗಿ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಸೋಷಿಯಲ್ ಡೆಮೋಕ್ರಾಟಿಕನ್ನರು ಸಾಂಪ್ರದಾಯಿಕ ಸಮಾಜವಾದಿ ನೀತಿ (ಉತ್ಪಾದನೆಯ ಸರ್ಕಾರಿ ಮಾಲೀಕತ್ವದ ಮೂಲಕ) ಮತ್ತು ಮುಕ್ತ ಮಾರುಕಟ್ಟೆ ಬಂಡವಾಳವಾದಿಯ ನಡುವೆ ಇತರವುಗಳಲ್ಲಿ ಒಪ್ಪಂದವಾಗಿ ಬೆಂಬಲಿಸಿದರು[].

ಇತಿಹಾಸ

[ಬದಲಾಯಿಸಿ]

"ಮಿಶ್ರ ಆರ್ಥಿಕ ವ್ಯವಸ್ಥೆ" ಪದದೊಂದಿಗೆ ನಂತರ ಹೊಂದಿಕೊಂಡ ಹಲವು ನೀತಿಗಳನ್ನು ಕನಿಷ್ಠ 1930 ರಿಂದ ಸಮರ್ಥಿಸುವುದಾದರೂ, ಈ ಪದವು ಯುದ್ಧಾನಂತರದ ಅವಧಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ನಲ್ಲಿನ ರಾಜಕೀಯ ಚರ್ಚೆಯ ಸನ್ನಿವೇಶದಲ್ಲಿ ಹುಟ್ಟಿಕೊಂಡಿತು.[] ಆರ್. ಹೆಚ್. ಟಾನಿ,[] ಆಂತೋನಿ ಕ್ರಾಸ್‌ಲ್ಯಾಂಡ್[] ಮತ್ತು ಆಂಡ್ರೂ ಶೋನ್‌ಫೀಲ್ಡ್ ಅವರನ್ನು ಒಳಗೊಂಡು ಮಿಶ್ರ ಆರ್ಥಿಕ ವ್ಯವಸ್ಥೆಯ ಬೆಂಬಲಿಗರು ಬಹುಪಾಲು ಬ್ರಿಟಿಷ್ ಲೇಬರ್ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದರು. ಆದರೂ ಅಂತಹುದೇ ಭಾವನೆಗಳನ್ನು ಹಾರೋಲ್ಡ್ ಮ್ಯಾಕ್‌ಮಿಲನ್ ಅವರನ್ನು ಒಳಗೊಂಡು ಹಲವು ಕನ್ಸರ್ವೇಟಿವ್‌ಗಳು ಸಹ ವ್ಯಕ್ತಪಡಿಸಿದ್ದರು.

ಲುಡ್‌ವಿಂಗ್ ವೋನ್ ಮೈಸಸ್ ಮತ್ತು ಫ್ರೀಡ್ರಿಕ್ ವಾನ್ ಹೇಯ್ಕ್ ಅವರನ್ನು ಒಳಗೊಂಡು ಬ್ರಿಟಿಷ್ ಮಿಶ್ರ ಆರ್ಥಿಕ ವ್ಯವಸ್ಥೆಯ ವಿಮರ್ಶಕರು ಮಿಶ್ರ ಆರ್ಥಿಕ ವ್ಯವಸ್ಥೆ ಎಂದು ಕರೆಯಲ್ಪಡುವುದು ಸಾಮಾಜಿಕ ನೀತಿಯತ್ತ ಬದಲಾವಣೆಯಾಗುವುದು ಮತ್ತು ಸರ್ಕಾರದ ಪ್ರಭಾವವು ಹೆಚ್ಚಾಗುತ್ತಿರುವುದು ಎಂದು ವಾದಿಸಿದರು.[]

ಸಿದ್ಧಾಂತ

[ಬದಲಾಯಿಸಿ]

ಮಿಶ್ರ ಆರ್ಥಿಕ ವ್ಯವಸ್ಥೆ ಪದವನ್ನು ಮಾರುಕಟ್ಟೆ, ಅಥವಾ ವಿವಿಧ ಯೋಜಿತ ಆರ್ಥಿಕ ವ್ಯವಸ್ಥೆಗಳ ಪರಿಪೂರ್ಣ ಮಾದರಿಯಿಂದ ದಾರಿ ತಪ್ಪುವ ಆರ್ಥಿಕ ವ್ಯವಸ್ಥೆಗಳನ್ನು ಮತ್ತು ಪರಸ್ಪರದ ಘಟಕಗಳ "ಮಿಶ್ರಣ"ವನ್ನು ವಿವರಿಸಲು ಬಳಸಲಾಗುತ್ತದೆ. ಹೆಚ್ಚಿನ ರಾಜಕೀಯ-ಆರ್ಥಿಕ ಸಿದ್ಧಾಂತಗಳನ್ನು ಆದರ್ಶೀಕರಿಸಿದ ಅರಿವಿನಲ್ಲಿ ವ್ಯಾಖ್ಯಾನಿಸಲಾಗಿರುವುದರಿಂದ, ಅಪರೂಪಕ್ಕೆ ವಿವರಿಸಲಾಗಿರುವುದು ಬಳಕೆಯಲ್ಲಿ ಎಂದೂ ಅಸ್ತಿತ್ವದಲ್ಲಿರಲಿಲ್ಲ. ಪರಿಪೂರ್ಣವಾದ ಪ್ರಾತಿನಿಧಿತ್ವ ಹೊಂದದಿರುವ, ಆ ಆದರ್ಶವನ್ನು ಸೂಚಿಸುವ ಸಂಪ್ರದಾಯವನ್ನು ಅನ್ವಯಿಸುವ ಮೂಲಕ ಆದರ್ಶವೊಂದಕ್ಕೆ ಅತೀ ಹತ್ತಿರದಿಂದ ಸರಿಹೊಂದುವ ಆರ್ಥಿಕ ವ್ಯವಸ್ಥೆಯನ್ನು ಗುರುತು ಪಟ್ಟಿ ಮಾಡುವುದು ನ್ಯಾಯವಲ್ಲದೆಂದು ಹೆಚ್ಚಿನವರು ಪರಿಗಣಿಸುವುದಿಲ್ಲ. ಆದರೆ, ಪ್ರಶ್ನಾರ್ಹವಾದ ವ್ಯವಸ್ಥೆಯು ಆದರ್ಶೀಕರಿಸಿದ ಆರ್ಥಿಕ ಮಾದರಿ ಅಥವಾ ಸಿದ್ಧಾಂತದಿಂದ ಪ್ರಮುಖವಾಗಿ ಬೇರೆಯಾದಾಗ, ಅದನ್ನು ಗುರುತಿಸುವ ಕಾರ್ಯವು ಸಮಸ್ಯೆಯಾಗಬಹುದು. ಆದ್ದರಿಂದ, "ಮಿಶ್ರ ಆರ್ಥಿಕ ವ್ಯವಸ್ಥೆ" ಎಂಬ ಪದವನ್ನು ಸೃಷ್ಟಿಸಲಾಯಿತು. ಯಾವುದೇ ಆರ್ಥಿಕ ವ್ಯವಸ್ಥೆಯು ಸಮನಾದ ಮಿಶ್ರಣವನ್ನು ಹೊಂದಿರುವ ಸಾಧ್ಯತೆ ಕಡಿಮೆ ಇರುವುದರಿಂದ, ಸಾಮಾನ್ಯವಾಗಿ ಮಿಶ್ರ ಆರ್ಥಿಕ ವ್ಯವಸ್ಥೆಗಳನ್ನು ಬದಲಾಗುವ ಕೋನಗಳಲ್ಲಿ ಖಾಸಗಿ ಮಾಲೀಕತ್ವ ಅಥವಾ ಸಾರ್ವಜನಿಕ ಮಾಲೀಕತ್ವದತ್ತ, ಬಂಡವಾಳಶಾಹಿ ಅಥವಾ ಸಮಾಜವಾದಿ ತತ್ವದತ್ತ, ಅಥವಾ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಅಥವಾ ಯೋಜಿತ ಆರ್ಥಿಕ ವ್ಯವಸ್ಥೆಯತ್ತ ವಾಲಿರುವುದು ಎಂಬರ್ಥದಲ್ಲಿ ಪರಿಗಣಿಸಲಾಗುತ್ತದೆ.[]

ಯಾವ ಆರ್ಥಿಕ ವ್ಯವಸ್ಥೆಗಳು ಬಂಡವಾಳಶಾಹಿ, ಸಮಾಜವಾದಿ ಅಥವಾ ಮಿಶ್ರವಾದವು ಎಂಬುದರ ಬಗ್ಗೆ ಯಾವುದೇ ಒಮ್ಮತವಿಲ್ಲ. ಅಧಿಕಾರ ನಿರ್ವಹಣೆಗಾರರ ಐತಿಹಾಸಿಕ ಪ್ರವೃತ್ತಿ ಮತ್ತು ಮಾರುಕಟ್ಟೆ ಕಾರ್ಯಭಾಗಿಗಳ ಚಟುವಟಿಕೆಗಳನ್ನು ಮಿತಿಗೊಳಿಸಲು ಸ್ಥಳಗಳನ್ನು ಎಲ್ಲಾ ಮಾರುಕಟ್ಟೆ ಕಾರ್ಯಭಾಗಿಗಳನ್ನು ಉಸ್ತುವಾರಿ ಮಾಡುವ ಮತ್ತು ನಿರ್ಬಂಧಪಡಿಸುವ ಸ್ವಾಭಾವಿಕ ಅಸಾಧ್ಯತೆಯು ನಾವು ತಿಳಿದಂತೆ " ಮಿಶ್ರ ಆರ್ಥಿಕ ವ್ಯವಸ್ಥೆ"ಯು ಸರ್ಕಾರಿ ಉದ್ಯಮ ಮತ್ತು ಮುಕ್ತ ಉದ್ಯಮದ ಒಟ್ಟುಗೂಡುವಿಕೆಯಾಗಿ, ಮಾನವವ ಇತಿಹಾಸವನ್ನು ಅಭಿವೃದ್ಧಿಗೊಳಿಸುವ ಪ್ರತಿ ಆರ್ಥಿಕ ವ್ಯವಸ್ಥೆಯು ಈ ಹೇಳಿಕೆಯನ್ನು ಪೂರೈಸುತ್ತದೆ; ಕೆಲವು ವ್ಯವಸ್ಥೆಗಳನ್ನು ಮಿಶ್ರಿತ ಎಂದು ಕರೆಯಲು ಸಂಪೂರ್ಣವಾಗಿ ಅಥವಾ ಒಂದು ಅಥವಾ ಮತ್ತೊಂದು ವಿಧದಲ್ಲಿ ಹತ್ತಿರವಾಗಿದ್ದರೂ, ಅವುಗಳನ್ನು ಕೇವಲ ಮುಕ್ತ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಅಥವಾ ಯೋಜಿತ ಆರ್ಥಿಕ ವ್ಯವಸ್ಥೆ ಎಂದು ಕರೆಯುವುದು ಸೂಕ್ತ ಮತ್ತು ಅದು ಹೆಚ್ಚು ಅರ್ಥಪೂರ್ಣವಾಗಿದೆ.

ಮಿಶ್ರ ಆರ್ಥಿಕ ವ್ಯವಸ್ಥೆಯ ಅಂಶಗಳು

[ಬದಲಾಯಿಸಿ]

ಪ್ರಾತಿನಿಧಿಕವಾಗಿ ಮಿಶ್ರ ಆರ್ಥಿಕ ವ್ಯವಸ್ಥೆಯ ಅಂಶಗಳು[according to whom?] ವಿವಿಧ ಬಗೆಯ ಸ್ವಾತಂತ್ರ್ಯಗಳನ್ನು ಒಳಗೊಳ್ಳುತ್ತವೆ:

ಸಾರ್ವಜನಿಕ ಮಾಲೀಕತ್ವದ ಎಸ್ಎನ್‌ಸಿಎಫ್ ನಿರ್ವಹಣೆ ಮಾಡುವ ಟಿಜಿವಿ ರೈಲು. ಹಲವು ರಾಷ್ಟ್ರಗಳಲ್ಲಿ, ರೈಲು ವ್ಯವಸ್ಥೆಯು ಭಾಗಶಃ ಅಥವಾ ಸಂಪೂರ್ಣವಾಗಿ ಸರ್ಕಾರದ ಮಾಲೀಕತ್ವದಲ್ಲಿರುತ್ತದೆ ಅಥವಾ ನಿಯಂತ್ರಣದಲ್ಲಿರುತ್ತದೆ.
ಅಂಚೆ ಟ್ರಕ್. ಮಿಶ್ರ ಆರ್ಥಿಕ ವ್ಯವಸ್ಥೆ ಸರ್ಕಾರಗಳಿಂದ ಕೆಲವೊಮ್ಮೆ ನಿಯಂತ್ರಣಗಳನ್ನು ಖಾಸಗಿ ಅಂಚೆ ವ್ಯವಸ್ಥೆಗಳಲ್ಲಿ ಇರಿಸಲಾಗುತ್ತದೆ. ಉದಾಹರಣೆಗೆ, ಯು.ಎಸ್.ನಲ್ಲಿ, ಪ್ರೈವೇಟ್ ಎಕ್ಸ್‌ಪ್ರೆಸ್‌ನಲ್ಲಿ ವಿವರಿಸಿದಂತೆ ತುರ್ತು ಅಲ್ಲದ ಅಂಚೆಗಳ ಮೇಲೆ ಸರ್ಕಾರಿ ಏಕಸ್ವಾಮ್ಯತೆಯನ್ನು ಯುಎಸ್‌ಪಿಎಸ್ ಹೊಂದಿಗೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಈ ಆಸ್ಪತ್ರೆಯನ್ನು ರಾಷ್ಟ್ರೀಯ ಆರೋಗ್ಯ ಸೇವೆಯು ನಿರ್ವಹಣೆ ಮಾಡುತ್ತಿದೆ. ಹೆಚ್ಚಿನ ರಾಷ್ಟ್ರಗಳಲ್ಲಿ ಆರೋಗ್ಯ ಸೇವೆಯನ್ನು ನೀಡುವಲ್ಲಿ ಸರ್ಕಾರವು ಸ್ವಲ್ಪ ಪಾತ್ರವನ್ನು ವಹಿಸುತ್ತದೆ.
  • ಉತ್ಪಾದನೆಯ ಮಾರ್ಗಗಳನ್ನು ಹೊಂದುವುದು (ಜಮೀನುಗಳು, ಕಾರ್ಖಾನೆಗಳು, ಅಂಗಡಿಗಳು, ಇತರವುಗಳು.)
  • ನಿರ್ವಹಣಾ ನಿರ್ಧಾರಗಳಲ್ಲಿ ಭಾಗವಹಿಸಲು (ಸಹಕಾರಿ ಮತ್ತು ಸಹಯೋಗದ ಆರ್ಥಿಕ ವ್ಯವಸ್ಥೆ)
  • ಪ್ರಯಾಣ ಮಾಡಲು (ವಾಣಿಜ್ಯದಲ್ಲಿ ಎಲ್ಲಾ ವಸ್ತುಗಳನ್ನು ಸಾಗಿಸಲು, ವೈಯಕ್ತಿಕವಾಗಿ ಒಪ್ಪಂದಗಳನ್ನು ಮಾಡಲು, ಅಗತ್ಯವಾದೆಡೆ ಕೆಲಸಗಾರರು ಮತ್ತು ಮಾಲೀಕರಿಗೆ ತೆರಳಲು ಅಗತ್ಯವಿದೆ)
  • ಖರೀದಿ ಮಾಡಲು (ವೈಯಕ್ತಿಕ ಬಳಕೆಗೆ, ಮರುಮಾರಾಟಕ್ಕೆ; ಸಂಪತ್ತಿನ ಪ್ರಕಾರದಂತೆಯೇ ಸಂಪತ್ತನ್ನು ಸೃಷ್ಟಿಸುವ ಸಂಸ್ಥೆಯನ್ನು ಮಾಡಲು ಸಂಪೂರ್ಣ ಉದ್ಯಮಗಳನ್ನು ಖರೀದಿಸಿ)
  • ಮಾರಾಟ ಮಾಡಲು (ಖರೀದಿಯಂತೆಯೇ)
  • ನೇಮಕಾತಿ ಮಾಡಿಕೊಳ್ಳಲು (ಸಂಪತ್ತನ್ನ ಸೃಷ್ಟಿಸುವ ಸಂಸ್ಥೆಯನ್ನು ನಿರ್ಮಿಸಲು)
  • ಉತ್ತೇಜಿಸಲು (ಸಂಪತ್ತನ್ನು ಸೃಷ್ಟಿಸುವ ಸಂಸ್ಥೆಯನ್ನು ಕಾಪಾಡಿಕೊಳ್ಳಲು)
  • ಸಂಘಟಿಸಲು (ಲಾಭ, ಕಾರ್ಮಿಕ ಸಂಘಟನೆಗಳು, ಕಾರ್ಮಿಕರು ಮತ್ತು ವೃತ್ತಿಪರ ಸಹಯೋಗಿಗಳು, ಲಾಭ-ರಹಿತ ಸಮೂಹಗಳು, ಧರ್ಮಗಳು ಇತರೆಯವುಗಳಿಗಾಗಿ ಖಾಸಗಿ ಉದ್ಯಮ)
  • ಸಂವಹನ ಮಾಡಲು (ಮುಕ್ತ ಮಾತು, ಸುದ್ದಿಪತ್ರಿಕೆಗಳು, ಪುಸ್ತಕಗಳು, ಜಾಹೀರಾತುಗಳು, ಒಪ್ಪಂದಗಳನ್ನು ಮಾಡುವುದು, ಉದ್ಯಮ ಪಾಲುದಾರರನ್ನು ಸೃಷ್ಟಿಸುವುದು, ಮಾರುಕಟ್ಟೆಗಳನ್ನು ನಿರ್ಮಿಸುವುದು)
  • ಶಾಂತಿಯುತವಾಗಿ ಪ್ರತಿಭಟನೆ ಮಾಡಲು (ಮೆರವಣಿಗೆಗಳು, ಮನವಿಗಳು, ಸರ್ಕಾರದ ಮೇಲೆ ಮೊಕದ್ದಮೆ ಹೂಡುವುದು, ಲಾಭ ಮಾಡುವುದು ಮತ್ತು ಕಾರ್ಮಿಕರನ್ನು ಒಂದೇ ತೆರನಾಗಿ ಮಾಡಲು ಕಾನೂನುಗಳನ್ನು ಸ್ನೇಹಪರವಾಗಿ ಮಾಡುವುದು, ಸಂಪತ್ತಿನ ಸೃಷ್ಟಿಯನ್ನು ಗರಿಷ್ಠಗೊಳಿಸಲು ಅನಗತ್ಯವಾದ ಅಸಮರ್ಥತೆಯನ್ನು ತೆಗೆದುಹಾಕುವುದು)

ತೆರಿಗೆ-ಹಣದೊಂದಿಗೆ, ಉತ್ಪಾದನೆ, ಮೂಲಭೂತ ಸೌಕರ್ಯಗಳು ಮತ್ತು ಸೇವೆಗಳ ಸಹಾಯ ಧನ ನೀಡುವಿಕೆ ಅಥವಾ ಸರ್ಕಾರಿ- ಮಾಲೀಕತ್ವದ ಸಂಗತಿಗಳು:

  • ಗ್ರಂಥಾಲಯಗಳು ಮತ್ತು ಇತರ ಮಾಹಿತಿ ಸೇವೆಗಳು
  • ರಸ್ತೆಗಳು ಮತ್ತು ಇತರ ಸಾಗಾಣಿಕೆ ಸೇವೆಗಳು
  • ಶಾಲೆಗಳು ಮತ್ತು ಇತರ ಶೈಕ್ಷಣಿಕ ಸೇವೆಗಳು
  • ಆಸ್ಪತ್ರೆಗಳು ಮತ್ತು ಇತರ ಆರೋಗ್ಯ ಸೇವೆಗಳು
  • ಬ್ಯಾಂಕುಗಳು ಮತ್ತು ಇತರ ಹಣಕಾಸು ಸೇವೆಗಳು
  • ದೂರವಾಣಿ, ಮೇಲ್ ಮತ್ತು ಇತರ ಸಂವಹನ ಸೇವೆಗಳು
  • ವಿದ್ಯುತ್ ಮತ್ತು ಇತರ ಇಂಧನ ಸೇವೆಗಳು (ಉದಾ. ತೈಲ, ಅನಿಲ)
  • ಕುಡಿಯುವ ನೀರು, ಕೃಷಿ ಮತ್ತು ತ್ಯಾಜ್ಯ ವಿಲೇವಾರಿಗಾಗಿ ನೀರಿನ ವ್ಯವಸ್ಥೆಗಳು
  • ಕೃಷಿ ಮತ್ತು ಇತರ ವ್ಯವಹಾರಗಳಿಗೆ ಸಹಾಯಧನಗಳು
  • ಬೇರೆಯ ಖಾಸಗಿ ವ್ಯವಹಾರಗಳಿಗೆ ಸರ್ಕಾರಿ-ಅನುದಾನದ ಏಕಸ್ವಾಮ್ಯತೆ
  • ಕಾನೂನು ಸಹಾಯ
  • ಸರ್ಕಾರಿ ಬಂಡವಾಳದ ಅಥವಾ ಸರ್ಕಾರವು ನಡೆಸುವ ಸಂಶೋಧನೆ ಮತ್ತು ಅಭಿವೃದ್ಧಿ ಏಜೆನ್ಸಿಗಳು

ಮತ್ತು ಇದರಂತಹ ವರ್ಗಾವಣೆ ಪಾವತಿಗಳು ಮತ್ತು ಇತರ ಹಣಕಾಸು ಲಾಭಗಳಂತಹ ಅನೈಚ್ಛಿಕ ಖರ್ಚು ಮತ್ತು ಹೂಡಿಕೆಗಳನ್ನು ಒಳಗೊಂಡು ವೈಯಕ್ತಿಕ ಹಣಕಾಸುಗಳಿಗೆ ಕೆಲವು ಸ್ವಾಯತ್ತತೆಯನ್ನು ಒದಗಿಸುವುದು:

  • ಬಡವರ ಜನಕಲ್ಯಾಣ
  • ವೃದ್ಧರು ಮತ್ತು ದುರ್ಬಲರಿಗೆ ಸಾಮಾಜಿಕ ಭದ್ರತೆ
  • ಉದ್ಯಮಗಳಿಗೆ ಸರ್ಕಾರಿ ಸಹಾಯ ಧನಗಳು
  • ಕಡ್ಡಾಯ ವಿಮೆ (ಉದಾಹರಣೆ: ಆಟೋಮೊಬೈಲ್)

ಮತ್ತು ವಿವಿಧ ಕಾನೂನುಗಳು, ನಿಯಂತ್ರಣಗಳಿಂದ ನಿಯಂತ್ರಣ:

  • ಪರಿಸರ ನಿಯಂತ್ರಣ (ಉದಾಹರಣೆ: ಭೂಮಿ, ನೀರು ಮತ್ತು ವಾಯುವಿನಲ್ಲಿ ವಿಷ)
  • ಕನಿಷ್ಠ ವೇತನ ಕಾನೂನುಗಳನ್ನು ಒಳಗೊಂಡು ಕಾರ್ಮಿಕ ನಿಯಂತ್ರಣ
  • ಗ್ರಾಹಕ ನಿಯಂತ್ರಣ (ಉದಾಹರಣೆ: ಉತ್ಪಾದನೆ ಸುರಕ್ಷತೆ)
  • ಏಕಸ್ವಾಮ್ಯ ವಿರೋಧಿ ಕಾನೂನುಗಳು
  • ಬೌದ್ಧಿಕ ಆಸ್ತಿ ಕಾನೂನುಗಳು
  • ಸಂಘಟನ ಕಾನೂನುಗಳು
  • ಆರ್ಥಿಕ ರಕ್ಷಣಾ ನೀತಿ
  • ಸುಂಕ ಪಟ್ಟಿ ಮತ್ತು ಸರಕಿನ ಮೊತ್ತದಂತಹ ಆಮದು ಮತ್ತು ರಫ್ತು ನಿಯಂತ್ರಣಗಳು

ಮತ್ತು ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅದರ ಕುಶಲ ನಿರ್ವಹಣೆಯೊಂದಿಗೆ ಬರೆದ ಅಥವಾ ಜಾರಿಗೊಳಿಸಿದ ತೆರಿಗೆಗಳು ಮತ್ತು ಶುಲ್ಕಗಳು.

ಸರ್ಕಾರದ ಕಾರ್ಯವಿಧಾನಗಳು ಮತ್ತು ಇತರ ಯೋಚನೆಗಳಿಗೆ ಸಂಬಂಧಗಳು

[ಬದಲಾಯಿಸಿ]

ಮಿಶ್ರ ಆರ್ಥಿಕ ವ್ಯವಸ್ಥೆಯು ಹೆಚ್ಚು ಸಾಮಾನ್ಯವಾಗಿ ಸರ್ಕಾರದ ಸಾಮಾಜಿಕ ಪ್ರಜಾಪ್ರಭುತ್ವ ಕಾರ್ಯವಿಧಾನಗಳೊಂದಿಗೆ ಸಂಯೋಜಿತವಾಗಿರುತ್ತದೆ[ಸೂಕ್ತ ಉಲ್ಲೇಖನ ಬೇಕು]. ಆದರೆ, ವ್ಯಾಪಕ ಶ್ರೇಣಿಯ ಆರ್ಥಿಕ ವ್ಯವಸ್ಥೆಗಳನ್ನು ಪದದಿಂದ ವಿವರಿಸಬಹುದಾಗಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು, ಸರ್ಕಾರದ ಹೆಚ್ಚಿನ ಪ್ರಕಾರಗಳು ಕೆಲವು ಪ್ರಕಾರದ ಮಿಶ್ರ ಆರ್ಥಿಕ ವ್ಯವಸ್ಥೆಯೊಂದಿಗೆ ಸ್ಥಿರವಾಗಿದೆ.

ನೋಟ್ರೆ ಡೇಮ್ನ ಲೇಖಕರಾದ ಜಾನ್ ಡಬ್ಲೂ, ಹೌಕ್ ಮತ್ತು ಓಲಿವರ್ ಎಫ್. ವಿಲಿಯಮ್ಸ್ ಅವರುಗಳು ಕ್ಯಾಥೋಲಿಕ್ ಸಾಮಾಜಿಕ ಬೋಧನೆಗಳು ಸ್ವಾಭಾವಿಕವಾಗಿ ನೀತಿಗೆ ಸಂಬಂಧಿಸಿದಂತೆ ಮಿಶ್ರ ಆರ್ಥಿಕ ವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ವಾದಿಸಿದರು. ಸರ್ಕಾರವು "ಸಾಮಾಜಿಕ ಸಮುದಾಯದ ಸದಸ್ಯರಿಗೆ ಸಹಾಯವನ್ನು ಪೂರೈಸಬೇಕು, ಆದರೆ ಅವುಗಳನ್ನು ಎಂದಿಗೂ ನಾಶಪಡಿಸಬಾರದು ಅಥವಾ ಒಳಗೊಳ್ಳಬಾರದು" ಎಂಬ ಪೋಪ್ ಜಾನ್ ಪಾಲ್ VI ಅವರ ಹೇಳಿಕೆಯನ್ನು ಅವರು ಉಲ್ಲೇಖಿಸಿದರು. ಸಾಮಾಜಿಕವಾಗಿ ಮಿಶ್ರಗೊಂಡ ಆರ್ಥಿಕ ವ್ಯವಸ್ಥೆಯು ಕಾರ್ಮಿಕರು, ಆಡಳಿತ ಮಂಡಳಿ ಮತ್ತು ಸರ್ಕಾರವು ಆರ್ಥಿಕ ಬಲವನ್ನು ವ್ಯಾಪಕವಾಗಿ ಹಂಚುವ ಬಹು ಸಾಂಸ್ಕೃತಿಕ ಸಿದ್ಧಾಂತದ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಅವರು ಬರೆದರು.[೧೦]

ಐತಿಹಾಸಿಕ ಉದಾಹರಣೆಗಳು

[ಬದಲಾಯಿಸಿ]

ಅಮೇರಿಕನ್ ಸ್ಕೂಲ್‌‌ (ನ್ಯಾಷನಲ್ ಸಿಸ್ಟಮ್ ಎಂದೂ ಕರೆಯಲಾಗುತ್ತದೆ)[೧೧] ಆರ್ಥಿಕ ತತ್ವ ಚಿಂತನೆಯಾಗಿದ್ದು ಅದು ಅಮೇರಿಕನ್ ನಾಗರಿಕ ಯುದ್ಧದ ಕಾಲದಿಂದ ರಾಷ್ಟ್ರದ ನೀತಿಗಳು ಮುಕ್ತ ಮಾರುಕಟ್ಟೆ ನಿರ್ದೇಶನದಲ್ಲಿ ವಿಕಸನಗೊಂಡಂತೆ ಇಪ್ಪತ್ತನೇ ಶತಮಾನದ ಮಧ್ಯಭಾಗದವೆರಗೂ ಯುನೈಟೆಡ್ ಸ್ಟೇಟ್ಸ್ನ ರಾಷ್ಟ್ರೀಯ ನೀತಿಗಳಲ್ಲಿ ಪ್ರಭಾವ ಬೀರಿತು. ಅದು ಮೂರು ತಿರುಳಿನ ನೀತಿ ಕ್ರಮಗಳನ್ನು ಒಳಗೊಂಡಿತ್ತು: ಉದ್ಯಮವನ್ನು ಹೆಚ್ಚಿನ ದರ ಪಟ್ಟಿಯ ಮುಖಾಂತರ ರಕ್ಷಿಸುವುದು (1861-1932) (1932-1970 ರವರೆಗೆ ಸಹಾಯಧನಗಳು ಮತ್ತು ಪರಸ್ಪರ ಕ್ರಿಯೆಗೆ ಬದಲಾಯಿಸುವುದು), ಆಂತರಿಕ ಸುಧಾರಣೆಗಳ ಮುಖಾಂತರ ಮೂಲಭೂತ ಸೌಕರ್ಯಗಳಲ್ಲಿ ಸರ್ಕಾರದ ಹೂಡಿಕೆ, ಮತ್ತು ಉತ್ಪಾದಕತೆಯ ಉದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲು ರಾಷ್ಟ್ರೀಯ ಬ್ಯಾಂಕ್. ಈ ಕಾಲಾವಧಿಯಲ್ಲಿ 1880 ರೊಳಗೆ ಇಂಗ್ಲೆಂಡ್ ಅನ್ನು ಹಿಮ್ಮೆಟ್ಟಿಸಿ (ಬ್ರಿಟಿಷ್ ಸಾಮ್ರಾಜ್ಯ ದ ಮೂಲಕ ಅಲ್ಲ) ವಿಶ್ವದ ಅತೀದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಯುನೈಟೆಡ್ ಸ್ಟೇಟ್ಸ್ ಬೆಳೆಯಿತು.[೧೨][೧೩][೧೪]

ನಿಯಂತ್ರಣ ನೀತಿ ಎನ್ನುವುದು ಫ್ರಾನ್ಸ್ನ ಚಾರ್ಲ್ಸ್ ಡಿ ಗೌಲೆ ಅವರ ಅಡಿಯಲ್ಲಿ ಪ್ರಾರಂಭಿಸಿದ ಆರ್ಥಿಕ ನೀತಿಯಾಗಿದ್ದು, ಸರ್ಕಾರವು ಬಲವಾದ ನಿರ್ದೇಶಕ ಪ್ರಭಾವವನ್ನು ಪ್ರಯೋಗಿಸುವ ಆರ್ಥಿಕ ಸ್ಥಿತಿಯನ್ನು ಉದ್ದೇಶಿಸಿದೆ. ಇದು ಸಾರಿಗೆ, ಇಂಧನ ಮತ್ತು ಟೆಲಿಕಮ್ಯೂನಿಕೇಶನ್ ಮೂಲ ಸೌಕರ್ಯಗಳು, ಜೊತೆಗೆ ಕೆಲವು ಯೋಜನೆಗಳಲ್ಲಿ ವಿಲೀನಗೊಳ್ಳಲು ಅಥವಾ ತೊಡಗಿಸಿಕೊಳ್ಳಲು ಖಾಸಗಿ ಕಾರ್ಪೊರೇಶನ್‌ಗಳಿಗೆ ವಿವಿಧ ಸಹಾಯಧನಗಳಂತಹ ಉದ್ಯಮದ ಅಲ್ಪಭಾಗದ ಸರ್ಕಾರಿ ನಿಯಂತ್ರಣವನ್ನು ಒಳಗೊಂಡಿರುತ್ತದೆ. ಅದರ ಪ್ರಭಾವದಲ್ಲಿ "ಮೂವತ್ತು ಅದ್ಭುತ ವರ್ಷಗಳು" ಎಂದು ಕರೆಯಲಾಗುವ ಗಂಭೀರವಾದ ಆರ್ಥಿಕ ಬೆಳವಣಿಗೆಯನ್ನು ಫ್ರಾನ್ಸ್ ಅನುಭವಿಸಿತು.[೧೫]

ಸಾಮಾಜಿಕ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಎನ್ನುವುದು ಆಧುನಿಕ ಜರ್ಮನಿಯ ಆರ್ಥಿಕ ನೀತಿಯಾಗಿದ್ದು, ಅದು ಸಮಾಜವಾದ ಮತ್ತು ಬಂಡವಾಳವಾದದ ನಡುವಿನ ಮಧ್ಯದ ಹಾದಿಯನ್ನು ಮುನ್ನಡೆಸುತ್ತದೆ ಮತ್ತು ಹೆಚ್ಚಿನ ದರದ ಆರ್ಥಿಕ ಬೆಳವಣಿಗೆ ,ಕಡಿಮೆ ಹಣದುಬ್ಬರ, ಕಡಿಮೆ ಪ್ರಮಾಣದ ನಿರುದ್ಯೋಗ, ಉತ್ತಮ ಕಾರ್ಯನಿರ್ವಹಣೆ ಸ್ಥಿತಿಗಳು, ಸಾರ್ವಜನಿಕ ಜನಕಲ್ಯಾಣ ಮತ್ತು ಸರ್ಕಾರದ ಮಧ್ಯಪ್ರವೇಶವನ್ನು ಬಳಸಿಕೊಂಡು ಸಾರ್ವಜನಿಕ ಸೇವೆಗಳ ನಡುವಿನ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಪ್ರಭಾವದಲ್ಲಿ, ಜರ್ಮನಿಯು ವಿನಾಶ ಮತ್ತು ಸೋಲಿನಿಂದ ಹೊರಬಂದು ಯುರೋಪಿನ ಒಕ್ಕೂಟದ ಒಳಗೆ ಕೈಗಾರಿಕಾ ಮಹಾಶಕ್ತಿಯಾಗಿ ಬೆಳೆಯಿತು.[೧೫]

ಸಾಮಾನ್ಯವಾಗಿ ಹೆಸರಿಗೆ ಸಮಾಜವಾದಿಯಾದರೂ ಸಿರಿಯಾದ ಆರ್ಥಿಕ ಸ್ಥಿತಿಯು ದೊಡ್ಡ ಸರ್ಕಾರದ ಉದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳನ್ನು ಒಳಗೊಂಡಿರುವ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ರೂಢಿಯಲ್ಲಿರಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ

[ಬದಲಾಯಿಸಿ]
ಗಮನಿಸಿ: ಈ ವಿಭಾಗದಲ್ಲಿರುವ ಉಲ್ಲೇಖಗಳು ಪ್ರಶ್ನಾರ್ಹವಾದ ಲೇಖನದಿಂದ ತೆಗೆದುಕೊಂಡ ವಿಷಯವನ್ನು ಸೂಚಿಸುತ್ತದೆ.
  • ಥರ್ಡ್ ವೇ
  • ಮೂಲಭೂತ ಕೇಂದ್ರ
  • ಮಧ್ಯಮಾರ್ಗ
  • ಡಿಸ್ಟ್ರಿಬ್ಯೂಟಿಸಂ
  • ಸಂವಿಧಾನಾತ್ಮಕ ಆರ್ಥಿಕತೆ
  • ರಾಜಕೀಯ ಆರ್ಥಿಕತೆ
  • ಉಚ್ಚ ಕಾನೂನಿನ ಪ್ರಕಾರ ಆಡಳಿತ
  • ಸಾಮಾಜಿಕ ಪ್ರಜಾಪ್ರಭುತ್ವ "ಖಾಸಗಿ ಮತ್ತು ಸಾರ್ವಜನಿಕ ಮಾಲೀಕತ್ವದ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಜನಕಲ್ಯಾಣ ಸರ್ಕಾರದೊಡನೆ ಸೇರಿಕೊಂಡು ಸಮರ್ಥಿಸುವ ಸಾಮಾಜಿಕ ಚಳುವಳಿ."
  • ಸಂಸ್ಥಾ-ಸೂತ್ರ " ಐತಿಹಾಸಿಕವಾಗಿ, ಸಂಸ್ಥಾ ಸೂತ್ರ ಅಥವಾ ಸಂಸ್ಥೆಗಳನ್ನಾಗಿ ವ್ಯವಸ್ಥೆಗೊಳಿಸುವ ಸೂತ್ರಗಳು (ಇಟಾಲಿಯನ್ ಕಾರ್ಪೋರೇಟಿವಿಸ್ಮೋ) ಎನ್ನುವುದು ರಾಜಕೀಯ ವ್ಯವಸ್ಥೆಯಾಗಿದ್ದು, ಅದರಲ್ಲಿ ಆರ್ಥಿಕ, ಕೈಗಾರಿಕಾ ಮತ್ತು ವೃತ್ತಿಪರ ಸಮೂಹಗಳನ್ನು ಪ್ರತಿನಿಧಿಸುವ ಸಂಸ್ಥೆಗಳಿಗೆ ಶಾಸನಾತ್ಮಕ ಅಧಿಕಾರವನ್ನು ನೀಡಲಾಗುವುದು."
  • ರಾಷ್ಟ್ರೀಕರಣ ಎನ್ನುವುದು "ಸ್ವತ್ತುಗಳನ್ನು ಸರ್ಕಾರಿ ಮಾಲೀಕತ್ವ ಕ್ಕೆ ತೆಗೆದುಕೊಳ್ಳುವ ಕ್ರಮವಾಗಿದೆ."
  • ಖಾಸಗೀಕರಣ ಎನ್ನುವುದು ರಾಜ್ಯದ ಸಾರ್ವಜನಿಕರ ಅಥವಾ ಸಾಮಾನ್ಯ ಸ್ವತ್ತುಗಳನ್ನು ವ್ಯವಹಾರದ ರೂಪದಲ್ಲಿ ಖಾಸಗಿ ಮಾಲೀಕತ್ವಕ್ಕೆ ಮಾರುವ ಕ್ರಮವಾಗಿದೆ."
  • ಬಹು ಸಾಂಸ್ಕೃತಿಕತೆ " ಬಹು ಸಾಂಸ್ಕತಿಕ ಸಮಾಜದಲ್ಲಿ ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯು (ಮತ್ತು ಅಧಿಕಾರ ಚಲಾಯಿಸುವ ಫಲಿತಾಂಶದ ಮಾಲೀಕತ್ವ) ಹೆಚ್ಚು ಹರಡಿರುತ್ತದೆ."
  • ಸಾರ್ವಜನಿಕ ರಂಗ "ಎನ್ನುವುದು ಆರ್ಥಿಕ ಮತ್ತು ನಿರ್ವಹಣಾ ಜೀವನದ ಭಾಗದವಾಗಿದ್ದು, ಅದು ಸರ್ಕಾರದಿಂದ ಮತ್ತು ಸರ್ಕಾರಕ್ಕೆ ಸರಕುಗಳ ವಿತರಣೆಯ ಕುರಿತು ನಿರ್ವಹಣೆ ಮಾಡುತ್ತದೆ."
  • ಸಾರ್ವಜನಿಕ-ಖಾಸಗಿ ಪಾಲುದಾರಿಕೆ "ಪದ್ಧತಿಯಾಗಿದ್ದು, ಇದರಲ್ಲಿ ಸರ್ಕಾರಿ ಸೇವೆ ಅಥವಾ ಖಾಸಗಿ ವ್ಯವಹಾರವನ್ನು ಸರ್ಕಾರಿ ಮತ್ತು ಒಂದು ಅಥವಾ ಹೆಚ್ಚು ಖಾಸಗಿ ರಂಗದ ಕಂಪನಿಗಳ ಪಾಲುದಾರಿಕೆಯ ಮೂಲಕ ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಮತ್ತು ನಿರ್ವಹಣೆ ಮಾಡಲಾಗುತ್ತದೆ."
  • ಸರ್ಕಾರಿ ನಿಯಂತ್ರಣ " ಎಂಬ ಪದವನ್ನು ಸರ್ಕಾರವು ಪ್ರಮುಖವಾದ ಕೇಂದ್ರೀಕೃತ ಆರ್ಥಿಕ ಯೋಜನೆಯನ್ನು ಜಾರಿಗೊಳಿಸಿದಲ್ಲಿ ಯಾವುದೇ ಆರ್ಥಿಕ ವ್ಯವಸ್ಥೆಯನ್ನು ವಿವರಿಸಲು ಬಳಸಲಾಗುತ್ತದೆ
  • ಜನಕಲ್ಯಾಣ ರಾಜ್ಯ " ಹಲವು "ಜನಕಲ್ಯಾಣ ರಾಜ್ಯಗಳಲ್ಲಿ", ಜನಕಲ್ಯಾಣವನ್ನು ರಾಜ್ಯವು ನಿಜವಾಗಿ ಒದಗಿಸುವುದಿಲ್ಲ, ಆದರೆ ಸ್ವತಂತ್ರ್ಯ, ಸ್ವಯಂಸೇವಾ, ಪರಸ್ಪರತೆಯ ಮತ್ತು ಸರ್ಕಾರಿ ಸೇವೆಗಳ ಸಂಯೋಜನೆಯಿಂದ ಒದಗಿಸಲಾಗುತ್ತದೆ."
  • ಸಾಮಾಜಿಕ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ "ಸಾಮಾಜಿಕ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯು ಸಮಾಜವಾದಿ ಮತ್ತು ಬಂಡವಾಳವಾದಿಗಳ ನಡುವಿನ ಹಾದಿಯನ್ನು ಅನ್ವೇಷಿಸುತ್ತದೆ (ಅಂದರೆ ಮಿಶ್ರ ಆರ್ಥಿಕ ವ್ಯವಸ್ಥೆ)."

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ರೋಸಿನ್, ಕರ್ಕ್ (“ಆರ್ಥಿಕ ಸಿದ್ದಾಂತ ಮತ್ತು ಜನಕಲ್ಯಾಣ ಸರ್ಕಾರ: ಸಮೀಕ್ಷೆ ಮತ್ತು ವ್ಯಾಖ್ಯಾನ.” ಜರ್ನಲ್ ಆಫ್ ಎಕನಾಮಿಕ್ ಲಿಟರೇಚರ್ , 30(2): 741-803. 1992, ಅರ್ಥಶಾಸ್ತ್ರದ ಸಾಹಿತ್ಯದೆಡೆಗೆ ನೋಟದ ವಿಮರ್ಶಾತ್ಮಕ ಪ್ರಬಂಧ
  • ಬಕ್‌ವಿಚ್, ಜಾರ್ಜ್ ಡಿ. (1991) ಅಮೇರಿಕನ್ಸ್ ವೆಲ್‌ಫೇರ್ ಸ್ಟೇಟ್: ಫ್ರೊಮ್ ರೂಸ್‌ವೆಲ್ಟ್ ಟು ರೇಗನ್. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಪ್ರೆಸ್.
  • ಬುಚನನ್, ಜೇಮ್ಸ್ ಎಮ್. (1986) ಲಿಬರ್ಟಿ, ಮಾರ್ಕೆಟ್ ಎಂಡ್ ಸ್ಟೇಟ್: ಪೊಲಿಟಿಕಲ್ ಎಕಾನಮಿ ಇನ್ ದಿ 1980s ನ್ಯೂಯಾರ್ಕ್ ವಿಶ್ವವಿದ್ಯಾನಿಲಯ ಪ್ರೆಸ್.
  • ಗ್ರಾಸ್, ಕೈಲ್ ಬಿ. (1991) ದಿ ಪೊಲಿಟಿಕ್ಸ್ ಆಫ್ ಸ್ಟೇಟ್ ಎಕ್ಸ್‌ಪಾನ್ಶನ್: ವಾರ್, ಸ್ಟೇಟ್ ಎಂಡ್ ಸೊಸೈಟಿ ಇನ್ ಟ್ವಂಟಿಯತ್-ಸೆಂಚುರಿ ಬ್ರಿಟನ್. ನ್ಯೂಯಾರ್ಕ್: ರೌಟ್ಲೆಡ್ಜ್.
  • ಡರ್ತಿಕ್, ಮಾರ್ಥಾ ಎಂಡ್ ಪೌಲ್ ಜೆ.ಕ್ಲಾರ್ಕ್ (1985) ದಿ ಪೊಲಿಟಿಕ್ಸ್ ಆಫ್ ಡೀರೆಗ್ಯುಲೇಶನ್. ವಾಶಿಂಗ್ಟನ್, ಡಿಸಿ: ದಿ ಬುಕ್ಕಿಂಗ್ಸ್ ಇನ್‌ಸ್ಟಿಟ್ಯೂಶನ್.
  • ಸ್ಸಾನ್‌ಫೋರ್ಡ್ ಇಕೆಡಾ; ಡೈನಾಮಿಕ್ಸ್ ಆಫ್ ದಿ ಮಿಕ್ಸಡ್ ಎಕಾನಮಿ: ಟುವರ್ಡ್ ಎ ಥಿಯರಿ ಆಫ್ ಇಂಟರ್‌ವೆನ್ಶನ್ ಲಂಡನ್: ರೌಡ್ಲೆಡ್ಜ್ 1997
Third way

ಮೂಲಗಳು ಮತ್ತು ಟಿಪ್ಪಣಿಗಳು

[ಬದಲಾಯಿಸಿ]
  1. (DC) (ಶ್ರೀಶೈಲ. ಬ .ಕೌಟಕೊಪ್ಪ)
    • ಅಲಾನ್ ಮತ್ತು ಟ್ರೋಂಬ್ಲೀ, ಡಬ್ಲೂ. ಡಬ್ಲೂ. ನಾರ್ಟನ್ ಎಂಡ್ ಕಂಪನಿ (1999) ಯವರ ಆಧುನಿಕ ಯೋಚನೆಯ ನಾರ್ಟನ್ ಶಬ್ಧಕೋಶದ ನಮೂದು ಪುಟ 535. "ಉತ್ಪಾದನೆ, ವಿತರಣೆ ಮತ್ತು ವಿನಿಮಯದ ಚಟುವಟಿಕೆಯ ಗಣನೀಯವಾದ ಭಾಗವನ್ನು, ಯಾವುದೇ ಮಾರ್ಗವಿಲ್ಲದೇ ಸರ್ಕಾರವು ವಹಿಸಿಕೊಳ್ಳುವ ಆರ್ಥಿಕ ವ್ಯವಸ್ಥೆಯಾಗಿದೆ, ಮತ್ತು ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿರುವುದಕ್ಕಿಂತ ಹೆಚ್ಚಾಗಿ ರಾಜ್ಯದಿಂದ ಹೆಚ್ಚು ಹಸ್ತಕ್ಷೇಪವಿರುತ್ತದೆ. ಆದ್ದರಿಂದ ಮಿಶ್ರ ಆರ್ಥಿಕ ವ್ಯವಸ್ಥೆಯು ಈ ಮೂಲಕ ಬಂಡವಾಳಶಾಹಿ ಮತ್ತು ಸಮಾಜವಾದಿ ನೀತಿಯ ಗುಣಲಕ್ಷಣಗಳನ್ನು ಒಂದುಗೂಡಿಸುತ್ತದೆ."
    • ದಿ ನ್ಯೂ ಡಿಕ್ಷನರಿ ಆಫ್ ಕಲ್ಚರ್ ಲಿಟರಸಿ, ಮೂರನೇ ಆವೃತ್ತಿ, ಹೌಟನ್ ಮಿಫ್ಲಿನ್ ಕಂಪನಿ (2002) ರಲ್ಲಿನ ಮಿಶ್ರ ಆರ್ಥಿಕ ವ್ಯವಸ್ಥೆಯ Archived 2009-03-12 ವೇಬ್ಯಾಕ್ ಮೆಷಿನ್ ನಲ್ಲಿ. ನಮೂದು. "ಬಂಡವಾಳ ಶಾಹಿ ಮತ್ತು ಸಮಾಜವಾದಿ ನೀತಿಯ ಅಂಶಗಳನ್ನು ಒಂದುಗೂಡಿಸುವ, ಕೆಲವು ವೈಯಕ್ತಿಕ ಮಾಲೀಕತ್ವ ಮತ್ತು ನಿಯಂತ್ರಣವನ್ನು ಮಿಶ್ರ ಮಾಡುವ ಒಂದು ಆರ್ಥಿಕ ವ್ಯವಸ್ಥೆ." -
    • ಡ್ಲಾಮಿನಿ, ಬೋಂಗೈಲ್ ಪಿ. ಏನೇ ಆಗಲಿ ಆರ್ಥಿಕ ವ್ಯವಸ್ಥೆ ಎಂದರೇನು? Archived 2008-10-01 ವೇಬ್ಯಾಕ್ ಮೆಷಿನ್ ನಲ್ಲಿ.ಅದು ಹೇಗೆ ಕಾರ್ಯನಿರ್ವಹಿಸುತ್ತದೆ? Archived 2008-10-01 ವೇಬ್ಯಾಕ್ ಮೆಷಿನ್ ನಲ್ಲಿ. "ಮಿಶ್ರ ಆರ್ಥಿಕ ವ್ಯವಸ್ಥೆಯು ಬಂಡವಾಳಶಾಹಿ ಮತ್ತು ಸಮಾಜವಾದಿ ನೀತಿಗಳೆರಡರ ಗುಣಲಕ್ಷಣಗಳನ್ನು ಒಳಗೊಂಡಿರುವ ಒಂದು ಆರ್ಥಿಕ ವ್ಯವಸ್ಥೆಯಾಗಿದೆ. ಇತರ ಪದಗಳಲ್ಲಿ, ಇದು ಖಾಸಗಿ ಮತ್ತು ಸಾರ್ವಜನಿಕ ಮಾಲೀಕತ್ವದ ಉತ್ಪಾದನೆಗಳೆರಡರ ಸಂಯೋಜನೆಯೊಂದಿಗಿನ, ಹಾಗೂ ಕೇಂದ್ರ ಸರ್ಕಾರದಿಂದ ನಿಯಂತ್ರಣದ ಕೆಲವು ಕ್ರಮಗಳ ಆರ್ಥಿಕ ವ್ಯವಸ್ಥೆಯಾಗಿದೆ."
    • ಎಡ್ನಾ ಕ್ಯಾರೂ ಅವರ ದಿ ಲ್ಯಾಂಗ್ವೇಜ್ ಆಫ್ ಮನಿ ಯಲ್ಲಿನ ಮಿಶ್ರ ಆರ್ಥಿಕ ವ್ಯವಸ್ಥೆ ಯ ನಮೂದು. "ಬಂಡವಾಳಶಾಹಿ ಮತ್ತು ಸಮಾಜವಾದಿ ನೀತಿಗಳೆರಡರ ವೈಶಿಷ್ಟ್ಯಗಳನ್ನು ಒಳಗೊಂಡಿರುವಂತಹುದು. ಸಂವಹನಗಳು, ಸಾರಿಗೆ, ಬ್ಯಾಂಕಿಂಗ್, ಇಂಧನ ತಯಾರಿಕೆ ಮತ್ತು ಆರೋಗ್ಯ ಸೇವೆಗಳಲ್ಲಿ ಪ್ರಮುಖವಾಗಿ ಸರ್ಕಾರಿ-ಮಾಲೀಕತ್ವದ ಉದ್ಯಮಗಳೊಡನೆ ಜೊತೆಗೆ ಅದೇ ಪ್ರದೇಶದಲ್ಲಿ ಖಾಸಗಿ ಮಾಲೀಕತ್ವದ ಉದ್ಯಮಗಳೊಂದಿಗೆ ಆಸ್ಟ್ರೇಲಿಯವು ಮಿಶ್ರ ಆರ್ಥಿಕ ವ್ಯವಸ್ಥೆಯಾಗಿದೆ. ಬ್ರಿಟನ್ ಮತ್ತು ನ್ಯೂಜಿಲೆಂಡ್‌ನಂತಹ ಬಂಡವಾಳವಾದಿ ಆರ್ಥಿಕ ವ್ಯವಸ್ಥೆಗಳೊಂದಿಗೆಸಮಾನವಾಗಿ, ಆಸ್ಟ್ರೇಲಿಯದ ಸರ್ಕಾರಗಳು ಸರ್ಕಾರಿ- ನಿರ್ವಹಣೆಯ ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಮೂಲಕ ಈ ಚಟುವಟಿಕೆಗಳನ್ನು ಕಡಿಮೆಗೊಳಿಸುತ್ತಿದ್ದಾರೆ. ಪೂರ್ವ ಯೋರೋಪ್ ಮತ್ತು ಹಿಂದಿನ ಸೋವಿಯತ್ ಯೂನಿಯನ್‌ನಲ್ಲಿ ಇತರ ಉದಾಹರಣೆಗಳನ್ನು ಕಾಣಬಹುದು, ಅಲ್ಲಿ ಹೊಸತಾದ ಸ್ವತಂತ್ರ ರಾಷ್ಟ್ರಗಳು ಖಾಸಗಿ ಉದ್ಯಮದ ತತ್ವಗಳನ್ನು ಒಪ್ಪಿಕೊಂಡಿವೆ. ಚೀನಾವೂ ಸಹ ಮಿಶ್ರ ಆರ್ಥಿಕ ವ್ಯವಸ್ಥೆಗೆ ಪರಿವರ್ತನೆಗೊಂಡ ಗಮನಾರ್ಹವಾದ ದೃಷ್ಟಾಂತವನ್ನು ಒದಗಿಸುತ್ತದೆ."
    • ಡಯಾ್ ಕೆಂಡಾಲ್, ಜೇನ್ ಲೋಥಿಯಾನ್ ಮುರ್ರೇ, ರಿಕ್ ಲಿಂಡನ್. ಸೋಷಿಯಾಲಜಿ ಇನ್ ಅವರ್ ಟೈಮ್ಸ್‌ಸಿಕ್ಶನರಿ, ಅಧ್ಯಾಯ 13 Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ., ನೆಲ್ಸನ್, ಥಾಮ್ಸನ್ ಕೆನಡಾ ಲಿಮಿಟೆಡ್‌ನ ವಿಭಾಗಗಳು (2004). "ಮಿಶ್ರ ಆರ್ಥಿಕ ವ್ಯವಸ್ಥೆಯು ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಒಂದುಗೂಡಿಸುತ್ತದೆ (ನಿರ್ಲಕ್ಷದ ವಿಶಿಷ್ಟದಿಂದ ಬುದ್ಧಿಜೀವಿಗಳವರೆಗೆ ಮತ್ತು ಪಶ್ಚಿಮದಲ್ಲಿ ತಮ್ಮ ಲೇಖನಗಳು, ಶೈಕ್ಷಣಿಕ ಮತ್ತು ರಾಜಕೀಯದ ಗಣ್ಯರಿಗೆ ಸಮಯಾನುಕೂಲವಾಗಿ ಅಂಟಿಕೊಳ್ಳುವ ರಾಜಕಾರಣಿಗಳು ಹೆಚ್ಚಿನದಾಗಿ ತಮ್ಮ ಬಯಕೆಯಿಂದಲೇ "ಸಮಾಜವಾದಿ ನೀತಿಯು ದೂರದೃಷ್ಟಿಯಿಂದ ಅನ್ವಯಿತವಾಗಿದೆ" ಎಂದು ವಾದಿಸುತ್ತಾರೆ, ಇದು ಅಪ್ಪಟ ಸಮಾಜವಾದಿ ನೀತಿ ಮತ್ತು ಬಂಡವಾಳ ಶಾಹಿಯ ಮಧ್ಯೆ "ಮೂರನೇ ಹಾದಿ" ಯನ್ನು ಒದಗಿಸಬಹುದು. "ಮಿಶ್ರ ಆರ್ಥಿಕ ವ್ಯವಸ್ಥೆ" ಯೆಂದು ಕರೆಯಲಾದ ಈ ಮೂರನೇ ಹಾದಿಯಲ್ಲಿ, ಸರ್ಕಾರವು ಮುಕ್ತ ಮಾರುಕಟ್ಟೆಯನ್ನು "ಸುಧಾರಿಸಲು" ಆಯ್ಕೆಯಿಂದ ಮತ್ತು ಎಚ್ಚರಿಕೆಯಿಂದ ಮಧ್ಯ ಪ್ರವೇಶಿಸುತ್ತದೆ
    • ಶ್ಲೇಸಿಂಗರ್, ಆರ್ಥರ್ ಜೂನಿಯರ್. ಅಮೇರಿಕದಲ್ಲಿ ಉದಾರವಾದ: ಯುರೋಪಿಯನ್ನರಿಂದ ಒಂದು ಟಿಪ್ಪಣಿ ಪೊಲಿಟಿಕ್ಸ್ ಆಫ್ ಹೋಪ್ ಇವರಿಂದ, ಬೋಸ್ಟನ್: ರಿವರ್‌ಸೈಡ್ ಪ್ರೆಸ್ (1962). "ವ್ಯಾಪಕವಾದ ಪ್ರಗತಿಪರ ಉದ್ದೇಶವು ಸಮತೋಲನದ ಮತ್ತು ಹೊಂದಿಕೊಳ್ಳುವ "ಮಿಶ್ರ ಆರ್ಥಿಕ ವ್ಯವಸ್ಥೆ" ಯಾಗಿದೆ, ಈ ಮೂಲಕ ಬಂಡವಾಳಶಾಹಿ ಮತ್ತು ಸಮಾಜವಾದಿ ನೀತಿಯ ನಡುವಿನ ಮಧ್ಯದ ಬುನಾದಿಯನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ, ಅದರ ಜೀವಶಕ್ತಿಯನ್ನು ಇಷ್ಟು ದೀರ್ಘಕಾಲದವರೆಗೆ ಬಂಡವಾಳಶಾಹಿಗಳು ಮತ್ತು ಸಮಾಜವಾದಿಗಳು ನಿರಾಕರಿಸಿದ್ದರು
    • ಗೊರಾನ್ ,ಟೋಮ್. ದಿ ಕಂಪ್ಲೀಟ್ ಈಟಿಯಟ್ಸ್ ಗೈಡ್ ಟು ಎಕನಾಮಿಕ್ಸ್ , ಆಲ್ಫಾ ಬುಕ್ಸ್ (2003), ಪು 9 "ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ, ಖಾಸಗಿ ಕ್ಷೇತ್ರದ ಉದ್ಯಮಗಳು ಮತ್ತು ಗ್ರಾಹಕರುಗಳು ಸ್ವಲ್ಪ ಮಟ್ಟಿಗಿನ ಸರ್ಕಾರದ ಮಧ್ಯಪ್ರವೇಶದೊಂದಿಗೆ ಅವರು ಏನನ್ನು ಉತ್ಪಾದಿಸುತ್ತಾರೆ ಮತ್ತು ಖರೀದಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ...ಯೋಜಿತ ಆರ್ಥಿಕ ವ್ಯವಸ್ಥೆ ಎಂದೂ ಕರೆಯಲಾಗುವ ನಿಯಂತ್ರಣ ಆರ್ಥಿಕ ವ್ಯವಸ್ಥೆಯಲ್ಲಿ, ಸರ್ಕಾರವು ಯಾವುದನ್ನು ಉತ್ಪಾದಿಸಲಾಗಿದೆ ಮತ್ತು ಯಾವ ಪ್ರಮಾಣದಲ್ಲಿ ಎಂಬುದನ್ನು ಬಹು ಪ್ರಮಾಣದಲ್ಲಿ ನಿರ್ಧರಿಸುತ್ತದೆ. ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿ, ಮಾರುಕಟ್ಟೆ ಸಾಮರ್ಥ್ಯಗಳು ಮತ್ತು ಸರ್ಕಾರದ ನಿರ್ಧಾರಗಳೆರಡೂ ಯಾವ ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸಲಾಗಿದೆ ಮತ್ತು ಅವುಗಳನ್ನು ಹೇಗೆ ವಿತರಣೆ ಮಾಡಲಾಗಿದೆ ಎಂಬುದನ್ನು ನಿರ್ಧರಿಸುತ್ತದೆ."
  2. ಹೌ ದಿ ಯು.ಎಸ್. ಎಕಾನಮಿ ವರ್ಕ್ಸ್ Archived 2008-06-12 ವೇಬ್ಯಾಕ್ ಮೆಷಿನ್ ನಲ್ಲಿ. ಲೇಖನವು ಹೇಳುವಂತೆ "ಖಾಸಗಿ ಮಾಲೀಕತ್ವದ ವ್ಯಾಪಾರಗಳು ಮತ್ತು ಸರ್ಕಾರಗಳೆರಡೂ ಪ್ರಮುಖವಾದ ಪಾತ್ರಗಳನ್ನು ವಹಿಸುವುದರಿಂದ ಯುನೈಟೆಡ್ ಸ್ಟೇಟ್ಸ್ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ನಿಜವಾಗಿಯೂ, ಅಮೇರಿಕದ ಆರ್ಥಿಕ ಇತಿಹಾಸದ ಬಗೆಗಿನ ಹೆಚ್ಚು ದೀರ್ಘಕಾಲದ ಚರ್ಚೆಗಳು ಸಾರ್ವಜನಿಕ ಮತ್ತು ಖಾಸಗಿ ವಿಭಾಗಗಳ ಸಂಬಂಧಿತ ಪಾತ್ರಗಳ ಕುರಿತಂತೆ ಕೇಂದ್ರೀಕರಿಸುತ್ತದೆ. ಅಮೇರಿಕದ ಮುಕ್ತ ಉದ್ಯಮ ವ್ಯವಸ್ಥೆಯು ಖಾಸಗಿ ಮಾಲೀಕತ್ವಕ್ಕೆ ಪ್ರಾಶಸ್ತ್ಯ ನೀಡುತ್ತದೆ. ಖಾಸಗಿ ವ್ಯಾಪಾರಗಳು ಹೆಚ್ಚಿನ ಸರಕುಗಳು ಮತ್ತು ಸೇವೆಗಳನ್ನು ಉತ್ಪನ್ನ ಮಾಡುತ್ತದೆ, ಮತ್ತು ರಾಷ್ಟ್ರದ ಒಟ್ಟು ಆರ್ಥಿಕ ಉತ್ಪಾದನೆಯು ಮೂರನೇ ಎರಡರಷ್ಟು ಭಾಗವು ವೈಯಕ್ತಿಕ ಬಳಕೆಗಾಗಿ ಒಬ್ಬರಿಗೆ ಹೋಗುತ್ತದೆ (ಉಳಿದ ಮೂರನೇ ಒಂದು ಭಾಗವನ್ನು ಸರ್ಕಾರ ಮತ್ತು ವ್ಯಾಪಾರವು ಕೊಂಡುಕೊಳ್ಳುತ್ತದೆ). ಗ್ರಾಹಕರ ಪಾತ್ರವು ಅತ್ಯುನ್ನತವಾಗಿದೆ, ನಿಜವಾಗಿಯೂ, ರಾಷ್ಟ್ರವನ್ನು ಕೆಲವೊಮ್ಮೆ 'ಗ್ರಾಹಕ ಆರ್ಥಿಕ ವ್ಯವಸ್ಥೆ' ಯನ್ನು ಹೊಂದಿರುವುದಾಗಿ ನಿರೂಪಿಸಲಾಗುತ್ತದೆ."
  3. ಕ್ಯೂಬಾ ಆರ್ಥಿಕ ವ್ಯವಸ್ಥೆಯ ಸವಾಲುಗಳು - 1998 ರಲ್ಲಿ ಡಾ. ಆಂಟೋನಿಯೋ ರೋಮೆರೋ ಅವರೊಂದಿಗಿನ ಸಂದರ್ಶನ Archived 2008-06-16 ವೇಬ್ಯಾಕ್ ಮೆಷಿನ್ ನಲ್ಲಿ."ಆಸ್ತಿ ಮಾಲೀಕತ್ವ, ಔದ್ಯೋಗಿಕ ವ್ಯವಸ್ಥೆಗಳು ಮತ್ತು ಆದಾಯ ಮಟ್ಟಗಳಲ್ಲಿ ಪರಿವರ್ತನೆಗಳು ಇಂದು ನಾವು ನಿರ್ದಿಷ್ಟ ಪ್ರಕಾರದ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದುವ ತನಕ ಪರಿವರ್ತನೆಗಳು ಸಂಭವಿಸಿದೆ."
  4. "ಸಾಮಾಜಿಕ ಪ್ರಜಾಪ್ರಭುತ್ವ" ಜೇಸನ್ ಪಿ. ಅಬ್ಬೋಟ್. ಅಂತರಾಷ್ಟ್ರೀಯ ರಾಜಕೀಯ ಆರ್ಥಿಕ ವ್ಯವಸ್ಥೆ ಬಗ್ಗೆ ರೌಟ್ಲೆಡ್ಜ್ ವಿಶ್ವಕೋಶ. ಎಡ್ ಆರ್.ಜೆ. ಬ್ಯಾರಿ ಜೋನ್ಸ್. ಟೇಲರ್ & ಫ್ರಾನ್ಸಿಸ್, 2001. 1410
  5. Reisman, David A. Theories of the Mixed Economy (Theories of the mixed economy). Pickering & Chatto Ltd. ISBN 1-85196-214-X.
  6. Tawney, R. H. (1964). Equality. London: Allen and Unwin. ISBN 0-04-323014-8.
  7. Crosland, A. (1977). The Future of socialism. Westport, Conn: Greenwood Press. ISBN 0-8371-9586-1.
  8. ಗಾರ್ಡನರ್, ಮಾರ್ಟಿನ್. ವೈಸ್ ಆಫ್ ಎ ಫಿಲಾಸೋಫಿಕಲ್ ಸ್ಕ್ರೀವೆನರ್ , ಸೇಂಟ್. ಮಾರ್ಟಿನ್ಸ್ ಪ್ರೆಸ್ (1991), ಪು. 126
  9. ವೋಂಗ್, ಕ್ವಾನ್-ಹೋಂಗ್. ಫೈನಾನ್ಶಿಯಲ್ ಮಾರ್ಕೆಟ್ಸ್ ಇನ್ ವಿಯೆಟ್ನಾಮ್ಸ್ ಟ್ರಾನ್ಸಿಶನ್ ಎಕಾನಮಿ: ಫ್ಯಾಕ್ಟ್ಸ್, ಇನ್‌ಸೈಟ್ಸ್, ಇಂಪ್ಲಿಕೇಶನ್ಸ್. ಐಎಸ್‌ಬಿಎನ್ 978-3-639-23383-4, ವಿಡಿಎಮ್ ವರ್ಲಾಗ್, ಫೆಬ್ರವರಿ. 2010, 66123 ಸಾರ್‌ಬ್ರುಕೆನ್, ಜರ್ಮನಿ.
  10. John W. Houck; Oliver F. Williams (1984). Catholic social teaching and the United States economy: working papers for a bishops' pastoral. University Press of America. pp. 132–133.
  11. ದಿ ಲೈಬ್ರರಿ ಆಪ್ ಎಕನಾಮಿಕ್ಸ್ ಎಂಡ್ ಲಿಬರ್ಟಿ ಆನ್‌ಲೈನ್ ಪುಸ್ತಕ ಶೀರ್ಷಿಕೆ ದಿ ನ್ಯಾಷನಲ್ ಸಿಸ್ಟಮ್ ಆಫ್ ಪೊಲಿಟಿಕಲ್ ಎಕಾನಮಿ ಫ್ರೆಡ್ರಿಕ್ ಲಿಸ್ಟ್ ಅವರಿಂದ
  12. ದಿ ಮೇಕಿಂಗ್ ಆಫ್ ಮಾಡರ್ನ್ ಬ್ರಿಟಿಷ್ ಪೊಲಿಟಿಕ್ಸ್, ಮಾರ್ಟಿನ್ ಪುಗ್
  13. ಗ್ಲೋಬಲ್ ಪೊಲಿಟಿಕಲ್ ಎಕಾನಮಿ, ರಾಬರ್ಟನ್ ಓಬ್ರಿಯನ್ ಮತ್ತು ಮಾರ್ಕ್ ವಿಲಿಯಮ್ಸ್
    • ಗಿಲ್: "1880 ರೊಳಗೆ ಅಮೇರಿಕ ಸಂಯುಕ್ತ ಸಂಸ್ಥಾನವು ಇಂಗ್ಲೆಂಡ್ ಅನ್ನು ಹಿಂದಿಕ್ಕಿ ವಿಶ್ವದ ಕೈಗಾರಿಕೆಯ ಅಗ್ರಗಣ್ಯವಾಯಿತು.: ("ಟ್ರೇಡ್ ವಾರ್ಸ್ ಅಗೈನೆಸ್ಟ್ ಅಮೇರಿಕ: ಎ ಹಿಸ್ಟರಿ ಆಫ್ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ಎಂಡ್ ಮಾನೆಟರಿ ಪಾಲಿಸಿ" ಅಧ್ಯಾಯ 6 ರ "ಅಮೇರಿಕ ಬಿಕಮ್ಸ್ ನಂಬರ್ 1" ಶೀರ್ಷಿಕೆಯ ಪುಟ 39-40 -1990 ರಲ್ಲಿ ಯುಎಸ್ಎನಲ್ಲಿ ಪ್ರೇಗರ್ ಪಬ್ಲಿಷರ್ಸ್ ಅವರಿಂದ ಪ್ರಕಟಣೆ - ಐಎಸ್‌ಬಿಎನ್ 0-275-93316-4)
    • ಲಿಂಡ್: "ಯುನೈಟೆಡ್ ಸ್ಟೇಟ್‌ನ ಕೈಗಾರೀಕರವನ್ನು ಮೆಟ್ಟಿ ನಿಂತ 1865-1932 ರ ರಿಪಬ್ಲಿಕನ್ ಪಾರ್ಟಿಯ ಲಿಂಕನ್ ಮತ್ತು ಅವರ ಉತ್ತರಾಧಿಕಾರಿಗಳು, ಹಲವು ಜೆಫರ್‌ಸೋನಿಯನ್ನರು ನಿರೀಕ್ಷಿಸಿದಂತೆ ಭೂಸ್ವಾಮ್ಯದ ಆರ್ಥಿಕ ವ್ಯವಸ್ಥೆಯೊಂದಿಗೆ ಯುನೈಟೆಡ್ ಸ್ಟೇಟ್ಸ್ ಗ್ರಾಮೀಣ ಸಮಾಜವಾಗಿ ಉಳಿಯುವ ಆಯ್ಕೆಯನ್ನು ಕಿತ್ತುಕೊಂಡರು, ." ಮತ್ತು"...ಹ್ಯಾಮಿಲ್ಟೋನಿಯನ್ ಪರ...ಫೆಡರಲಿಸ್ಟ್ಸ್; ನ್ಯಾಷನಲ್ ರಿಪಬ್ಲಿಕನ್ನರು; ವಿಗ್ಸ್, ರಿಪಬ್ಲಿಕನ್ನರು; ಸುಧಾರಣಾವಾದಿಗಳು."("ಹ್ಯಾಮಿಲ್ಟನ್ಸ್ ರಿಪಬ್ಲಿಕ್" ಪರಿಚಯ ಪುಟ xiv-xv -1997 ರಲ್ಲಿ ಫ್ರೀ ಪ್ರೆಸ್, ಅಮೇರಿಕದ ಸೈಮನ್ & ಶುಸ್ಟರ್ ವಿಭಾಗದಿಂದ ಪ್ರಕಟಣೆ -ಐಎಸ್‌ಬಿಎನ್ 0-684-83160-0)
    • ಲಿಂಡ್: "ಹತ್ತೊಂಬತ್ತನೇ ಶತಮಾನದಲ್ಲಿ ಪ್ರಭಾವಶಾಲಿ ಅಮೇರಿಕದ ರಾಜಕೀಯ ಅರ್ಥಶಾಸ್ತ್ರದ ಶಾಲೆಯು ಅಭಿವೃದ್ಧಿಯ ಆರ್ಥಿಕ ವ್ಯವಸ್ಥೆಯ ರಾಷ್ಟ್ರೀಯತೆಯ "ಅಮೇರಿಕನ್ ಶಾಲೆ" ಯಾಗಿತ್ತು...ಅಮೇರಿಕನ್ ಸ್ಕೂಲ್‌ನ ಪೋಷಕ ಪುಣ್ಯಪುರುಷರು ಅಲೆಕ್ಸಾಂಡರ್ ಹ್ಯಾಮಿಲ್ಟನ್ ಅವರಾಗಿದ್ದರು, ಮ್ಯಾನುಫ್ಯಾಕ್ಚರರ್ಸ್ (1791) ರಲ್ಲಿ ಅವರ ವರದಿಯು ಬ್ರಿಟಿಷ್ ಉತ್ಪಾದನೆಯ ಸರಕುಗಳನ್ನು ಹೊರಗಿಡುವ ದರಪಟ್ಟಿಯ ಹಿಂದಿನ ಮೂಲ ಸೌಕರ್ಯದ ಅಭಿವೃದ್ಧಿ ಮತ್ತು ಕೈಗಾರೀಕರಣವನ್ನು ಪ್ರಾಯೋಜಿಸುವ ಫೆಡರಲ್ ಸರ್ಕಾರದ ಸಿದ್ಧಾಂತಕ್ಕೆ ಕರೆ ನೀಡಿತ್ತು...ಅರ್ಥಶಾಸ್ತ್ರಜ್ಞರಾದ ಹೆನ್ರಿ ಕ್ಯಾರೀ (ಇವರು ಅಧ್ಯಕ್ಷ ಲಿಂಕನ್ ಅವರಿಗೆ ಸಲಹೆ ನೀಡಿದ್ದರು) ಅವರಿಂದ ಹತ್ತೊಂಬತ್ತನೇ ಶತಮಾನದಲ್ಲಿ ಬೆಳೆದ ಅಮೇರಿಕನ್ ಸ್ಕೂಲ್, ಹೆನ್ರಿ ಕ್ಲೇ ಅವರ "ಅಮೇರಿಕನ್ ಸಿಸ್ಟಮ್" ಗೆ ಮತ್ತು ಇಪ್ಪತ್ತನೇ ಶತಮಾನದವರೆಗೆ ರಿಪಬ್ಲಿಕನ್ ಪಾರ್ಟಿಯಲ್ಲಿ ಲಿಂಕನ್ ಮತ್ತು ಅವರ ಉತ್ತರಾಧಿಕಾರಿಗಳ ಆರ್ಥಿಕ ರಕ್ಷಣಾ ವಾದಿಯ ಆಮದು- ಬದಲಿ ನೀತಿಗಳಿಗೆ ಪ್ರೇರೇಪಣೆ ನೀಡಿತು. ("ಹ್ಯಾಮಿಲ್ಟನ್ಸ್ ರಿಪಬ್ಲಿಕ್" ಭಾಗ III "ದಿ ಅಮೇರಿಕನ್ ಸ್ಕೂಲ್ ಆಫ್ ನ್ಯಾಷನಲ್ ಎಕನಾಮಿ" ಪುಟ 229-230, ಯುಎಸ್ಎನಲ್ಲಿ ಫ್ರೀ ಪ್ರೆಸ್, ಸೈಮನ್ & ಶುಸ್ಟರ್ ಅವರಿಂದ 1997 ರಲ್ಲಿ ಪ್ರಕಟಿತ - ಐಎಸ್‌ಬಿಎನ್ 0-684-83160-0)
    • ರಿಚರ್ಡ್ಸನ್: "1865 ರೊಳಗೆ, ರಿಪ್ಲಬಿಕನ್ನರು ಹೆಚ್ಚಿನ ದರಪಟ್ಟಿಗಳ ಮತ್ತು ತೆರಿಗೆಗಳ ಸರಣಿಯನ್ನೇ ಅಭಿವೃದ್ಧಿಗೊಳಿಸಿದರು ಮತ್ತು ಅದು ಕಾರ್ವೇ ಮತ್ತು ವೇಲ್ಯಾಂಡ್ ಅವರ ಆರ್ಥಿಕ ನಿಯಮಗಳಲ್ಲಿ ಪ್ರತಿಬಿಂಬಿತವಾಯಿತು ಮತ್ತು ಅವುಗಳನ್ನು ಪ್ರತಿಯೊಬ್ಬರಿಗೆ ಜೀವನಮಟ್ಟವನ್ನು ಹೆಚ್ಚಿಸುವ ಮೂಲಕ ಅಮೇರಿದ ಆರ್ಥಿಕ ವ್ಯವಸ್ಥೆಯ ಎಲ್ಲಾ ಭಾಗಗಳನ್ನು ಬಲಗೊಳಿಸುವುದು ಮತ್ತು ಲಾಭ ತರುವುದಾಗಿತ್ತು. ರಿಪಬ್ಲಿಕನ್ ಓರ್ವರು ಹೇಳಿದಂತೆ..."ಸರ್ಕಾರದ ಸಾಮಾನ್ಯವಾದ ವೆಚ್ಚಗಳಿಗಾಗಿ ಕೈಗಾರಿಕೆಯ ಎಲ್ಲಾ ಶಾಖೆಗಳಿಗೆ ಪ್ರಾಸಂಗಿಕವಾಗಿ ಬೆಂಬಲ ನೀಡಲು, ಜನರ ಏಳಿಗೆಯನ್ನು ಮಾಡಲು ಮತ್ತು ಅವರು ತೆರಿಗೆಯನ್ನು ಪಾವತಿಸುವಂತೆ ಮಾಡಲು ಕಾಂಗ್ರೆಸ್ ತನ್ನ ಮಸೂದೆಯನ್ನು ರೂಪಿಸಬೇಕು...."("ದಿ ಗ್ರೇಟೆಸ್ಟ್ ನೇಷನ್ ಆಫ್ ದಿ ಅರ್ಥ್" ಅಧ್ಯಾಯ 4 ರಿಂದ "ಡೈರೆಕ್ಟಿಂಗ್ ದಿ ಲೆಜಿಸ್ಲೇಷನ್ ಆಫ್ ದಿ ಕಂಟ್ರಿ ಟು ದಿ ಇಂಪ್ರೂವ್‌ಮೆಂಟ್ ಆಫ್ ದಿ ಕಂಟ್ರಿ" ಶೀರ್ಷಿಕೆಯ: ಟ್ಯಾರಿಫ್ ಎಂಡ್ ಟ್ಯಾಕ್ಸ್ ಲೆಜಿಸ್ಲೇಷನ್" ಪುಟ 136-137, ಯುಎಸ್ಎ‌ಯ ಹಾರ್ವಡ್ ಕಾಲೇಜಿನ ಅಧ್ಯಕ್ಷರು ಮತ್ತು ಫೆಲೋಗಳಿಂದ 1997 ರಲ್ಲಿ ಪ್ರಕಟಿತ - ಐಎಸ್‌ಬಿಎನ್ 0-674-36213-6)
    • ಬೋರಿಟ್: "ಹೀಗೆ ಲಿಂಕನ್ ಅವರು ತಮ್ಮ ರಾಜಕೀಯ ಜೀವನದ ಏಳ್ಗೆಯ ಕಾಲದಲ್ಲಿ ಕಾರ್ಯನಿರ್ವಹಿಸಿದ ಹಲವು ಕಾರ್ಯಕ್ರಮಗಳಿಗೆ ಸಹಿ ಮಾಡಲು ಸಂತೋಷ ಪಟ್ಟರು. ಮತ್ತು, ಮಸೂದೆಯ ಇತಿಹಾಸತಜ್ಞರಾದ ಲಿಯೋನಾರ್ಡ್ ಪಿ ಕರ್ರಿ, ಅವರು ಯೋಗ್ಯವಾಗಿ ಬರೆದಿರುವಂತೆ , "ಆಧುನಿಕ ಅಮೇರಿಕದ ನೀಲಿನಕ್ಷೆ" ಗೆ ಕಾರಣವಾಯಿತು, ಮತ್ತು "ಲಿಂಕನ್ ಅವರು ಸೂಕ್ಷ್ಮ ಹುದ್ದೆಯಾದ ಸರ್ಕಾರಿ ಖಜಾನೆಯ ಕಾರ್ಯದರ್ಶಿ ಹುದ್ದೆಗೆ ಮಾಜಿ ಡೆಮೋಕ್ರಾಟ್‌ ಆಗಿದ್ದ ಸ್ಯಾಲೋಮನ್ ಪಿ ಅವರನ್ನು ಆಯ್ಕೆಮಾಡಿದರು, ಆದರೆ ಅರ್ಥಶಾಸ್ತ್ರದ ಮಧ್ಯಮಾರ್ಗಿ ಕ್ಯಾರಿಟಿಯಲ್ಲಿ, ಜೋಸೆಫ್ ಡೋರ್ಫಿಮ್ಯಾನ್ ಅವರಿದ್ದರು, ಅವರನ್ನು 'ಉತ್ತಮವಾದ ಹ್ಯಾಮಿಟೋನಿಯನ್ ಮತ್ತು ದರಪಟ್ಟಿಯಿಂದ ರಾಷ್ಟ್ರೀಯ ಬ್ಯಾಂಕ್‌ವರೆಗೆ ಪ್ರತಿಯೊಂದರಲ್ಲೂ ಲಿಂಕನ್ ಅವರ ಮುದ್ರೆಯ ಪಶ್ಚಿಮದ ಪ್ರಗತಿಶೀಲ" ಎಂದು ವಿವರಿಸಬಹುದು. ("ಲಿಂಕನ್ ಎಂಡ್ ದಿ ಎಕನಾಮಿಕ್ಸ್ ಆಫ್ ದಿ ಅಮೇರಿಕನ್ ಡ್ರೀಮ್" ನಿಂದ, ಅಧ್ಯಾಯ 14 "ದಿ ವಿಗ್ ಇನ್ ದಿ ವೈಟ್ ಹೌಸ್" ಶೀರ್ಷಿಕೆಯ, ಪುಟ 196-197, 1994 ರಲ್ಲಿ ಯುಎಸ್ಎಯ ಇಲ್ಲಿನೋಯ್ಸ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಿತ -ಐಎಸ್‌ಬಿಎನ್ 0252064453
  14. ೧೫.೦ ೧೫.೧ (ಗಾರ್ಡನರ್)