ಮಿಲಾಗ್ರಿಸ್ ಚರ್ಚು (ಕಲ್ಯಾಣಪುರ)

Coordinates: 13°23′45″N 74°44′10″E / 13.395729°N 74.736224°E / 13.395729; 74.736224
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಲಾಗ್ರಿಸ್ ಕ್ಯಾಥೆಡ್ರಲ್
Igreja Nossa Senhora do Milagres
ಪವಾಡ ಮಾತೆಯ ಚರ್ಚು
ರಾತ್ರಿ ವೇಳೇಯಲ್ಲಿ ಉದ್ಘಾಟಿಸಿದ ಮಿಲಾಗ್ರಿಸ್ ಕ್ಯಾಥೆಡ್ರಲ್
ಮಿಲಾಗ್ರಿಸ್ ಕ್ಯಾಥೆಡ್ರಲ್ is located in Karnataka
ಮಿಲಾಗ್ರಿಸ್ ಕ್ಯಾಥೆಡ್ರಲ್
ಮಿಲಾಗ್ರಿಸ್ ಕ್ಯಾಥೆಡ್ರಲ್
13°23′45″N 74°44′10″E / 13.395729°N 74.736224°E / 13.395729; 74.736224
Locationಕಲ್ಯಾಣಪುರ, ಉಡುಪಿ ಜಿಲ್ಲೆ, ಕರ್ನಾಟಕ
Countryಭಾರತ
Denominationರೋಮನ್ ಕಥೋಲಿಕ (Latin rite)
Websitewww.milagrescathedralkallianpur.com
History
Founded೧೬೭೮
Architecture
Statusಕ್ಯಾಥೆಡ್ರಲ್
Functional statusಸಕ್ರೀಯ
Designated೨೦೧೨
Specifications
Bells
Administration
Parishಕಲ್ಯಾಣಪುರ
Deaneryಕಲ್ಯಾಣಪುರ
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಉಡುಪಿ
Provinceಬೆಂಗಳೂರು ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ
Clergy
Bishop(s).ಜೆರಾಲ್ಡ್ ಐಸಾಕ್ ಲೋಬೊ
Rectorವಂ.ಸ್ಟ್ಯಾನಿ ಬಿ ಲೋಬೊ
Vicar(s)ವಂ.ಸ್ಟ್ಯಾನಿ ಬಿ ಲೋಬೊ
Priest(s)ವಂ.‍ಫರ್ಡಿನಾಂಡ್ ಗೊನ್ಸಾಲ್ವಿಸ್
Assistant priestವಂ.ಮಹೇಶ್ ಡಿ'ಸೋಜಾ
Chaplain(s)ವಂ.ಡಾ

ಮಿಲಾಗ್ರಿಸ್ ಕ್ಯಾಥೆಡ್ರಲ್ ರೋಮನ್ ಕಥೋಲಿಕ ಕ್ಯಾಥೆಡ್ರಲ್ ಆಗಿದ್ದು, ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿನ ಕಲ್ಯಾಣಪುರ ಗ್ರಾಮದಲ್ಲಿದೆ(ಪೋರ್ಚುಗೀಸ್:Igreja Nossa Senhora do Milagres, ಆಂಗ್ಲ:ಪವಾಡ ಮಾತೆಯ ಚರ್ಚು).

ಬೆದ್ನೂರು ರಾಜ್ಯದ ರಾಣಿ ಚೆನ್ನಮ್ಮ ಮತ್ತು ಪೋರ್ಚುಗೀಸ್ ಇವರ ಜೊತೆಯಲ್ಲಿ ನಡೆದ ಒಪ್ಪಂದದ ಫಲಿತಾಂಶವಾಗಿ, ಮಿಲಾಗ್ರಿಸ್ ಚರ್ಚು ೧೬೮೦ರಲ್ಲಿ ಸ್ಥಾಪಿತವಾಗಿದ್ದು, ಮತ್ತು ೧೮೮೧ರಲ್ಲಿ ಇದರ ಪುನರುಜ್ಜೀವನ ಮಾಡಲಾಯಿತು. ಚರ್ಚನ್ನು ೨೦೧೨ರಲ್ಲಿ ಕೊಂಕಣಿ ಕಥೋಲಿಕರ ಅಪೇಕ್ಷಣೆಯ ಮೇರೆಗೆ ಕ್ಯಾಥೆಡ್ರಲ್ ಎಂದು ಭಡ್ತಿಗೊಳಿಸಲಾಯಿತು.[೧]

ಇತಿಹಾಸ[ಬದಲಾಯಿಸಿ]

ಕೆಳದಿ ನಾಯಕರ ಆಡಳಿತದ ಅವಧಿಯಲ್ಲಿ ಕಲ್ಯಾಣಪುರ ಪ್ರದೇಶವು ದಕ್ಷಿಣ ಕರಾವಳಿ ಯಲ್ಲಿ ಕ್ರೈಸ್ತರ ವಾಸ್ತವ್ಯದ ಪ್ರಮುಖ ಪ್ರದೇಶವಾಗಿ ಮಾರ್ಪಟ್ಟಿತ್ತು.[೨] ಚರ್ಚ್ ಅನ್ನು ೧೬೭೮ ರಲ್ಲಿ ಪೋರ್ಚುಗೀಸ್ ನಿರ್ಮಿಸಲಾಯಿತು ಮತ್ತು "ಅವರ್ ಲೇಡಿ ಆಫ್ ಮಿರಾಕಲ್ಸ್" ಗೆ ಸಮರ್ಪಿಸಲಾಗಿದೆ.[೩] ರಾಣಿ ಚೆನ್ನಮ್ಮ ಮತ್ತು ಮೊದಲನೆಯ ಸೋಮಶೇಖರ ನಾಯಕ ಅವರು ಈ ಚರ್ಚು ಕಟ್ಟಲು ಸ್ಥಳವನ್ನು ಸ್ಥಳೀಯ ಕ್ರೈಸ್ತರಿಗೆ ದಾನವಾಗಿ ನೀಡಿದರು.[೨]

ಪವಾಡ ಪ್ರತಿಮೆಯನ್ನು ೧೯೮೨ರ ಶ್ರೀ. ಚಾರ್ಲ್ಸ್ ಇ.ಜಿ. ಕಲ್ಯಾಣಪುರ ಅವರ ಬರಹಗಳಿಂದ ಪಡೆಯಲಾಗಿದೆ. ಕಲ್ಯಾಣಪುರ, ಮಿಲಾಗ್ರಿಸ್ ಮಾತೆಯ ಪ್ರತಿಮೆಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವಾಡ ಸದೃಶ್ಯ ಪ್ರತಿಮೆ ಎಂದೇ ಪ್ರಖ‍್ಯಾತಿಯನ್ನು ಹೊಂದಿತ್ತು. ಇಂಗ್ಲೀಷರು ೧೭೮೪ರ ಯುದ್ಧದಲ್ಲಿ ಸೋಲನ್ನು ಕಂಡಾಗ ಕರಾವಳಿ ಕ್ರೈಸ್ತರ ಶತ್ರುಗಳಿಗೆ ಅವರನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ಯುವಂತೆ ಗುಪ್ತವಾಗಿ ಆದೇಶವನ್ನು ಹೊರಡಿಸಲಾಯಿತು. ಕರಾವಳಿಯ ಉದ್ದಗಲಕ್ಕೂ ನೆಲೆಸಿರುವ ಎಲ್ಲಾ ಕ್ರೈಸ್ತ ಸಮುದಾಯಗಳಿಗೆ ಗುಪ್ತ ಆದೇಶದ ಸಮೇತ ಬಂದರು. ಮಕ್ಕಳನ್ನೂ ಸೇರಿಸಿ ಕುಟುಂಬ ಸಮೇತ ಹಿಂಸೆ ನೀಡಿ, ಅವರನ್ನು ಪಶ್ಚಿಮ ಘಟ್ಟಗಳ ಮುಖಾಂತರ ರಾಜಧಾನಿಗೆ ಕಾಳುದಾರಿಯಲ್ಲಿಯೇ ಕೊಂಡೊಯ್ಯಲಾಯಿತು. ಕೆಲವೇ ಕೆಲವು ಮಂದಿ ಅವಿತು ಕುಳಿತು ತಮ್ಮ ನೆಲೆಗಳಲ್ಲಿಯೇ ಉಳಿದರು. ಚರ್ಚುಗಳನ್ನು ಕೆಡವಿ ಹಾಕಿದರಲ್ಲದೇ ಬಾರ್ಕೂರು ಮತ್ತು ಪೇತ್ರಿ ಚರ್ಚುಗಳನ್ನು ಧ್ವಂಸಗೊಳಿಸಲಾಯಿತು. ಧರ್ಮಗುರುಗಳು ಅವಿತು ಕುಳಿತಿದ್ದರು ಅಥವಾ ಅವರನ್ನು ಹಿಡಿದು ಗೋವಾಕ್ಕೆ ಕಳುಹಿಸಲಾಗಿತ್ತು. ಶತ್ರು ಸೈನಿಕರು ಎಲ್ಲೆಂದರಲ್ಲಿ ಓಡಾಡಿ ಚರ್ಚುಗಳನ್ನು ಕೆಡವಿ ಹಾಕಿದಾಗ ಪ್ರಮುಖ ಬಲಿಪೀಠದಲ್ಲಿದ್ದ ಮಾತೆಯ ಪ್ರತಿಮೆಯನ್ನೂ ಕೆಡವಲು ಪ್ರಯತ್ನಿಸಿದರು. ಆದರೆ ಅದನ್ನು ಕೈಗಳಿಂದ ಎತ್ತಲು ಅವರಿಂದ ಸಾಧ್ಯವಾಗಲಿಲ್ಲ. ಮಾತೆ ಕದಲಿಲ್ಲ. ಅವರನ್ನು ಕೀಳಲು ಸಹ ಆಗಲಿಲ್ಲ. ಅವರು ಅನೇಕ ಆಯುಧಗಳನ್ನು ಬಳಸಿದರೂ ಪ್ರತಿಮೆ ಅಲ್ಲಾಡದೇ ಅಲ್ಲೇ ಸ್ಥಿರವಾಗಿ ನಿಂತಿತು. ಆ ಕ್ಷಣವೇ ಎಲ್ಲಿಂದ ಹೇಗೆ ಬಂತು ಎಂದು ತಿಳಿಯಲಾರದೇ ವಿಷಪೂರಿತ ಹೆಜ್ಜೇನು ನೊಣಗಳು ಬಂದು ಅವರನ್ನು ಆಕ್ರಮಿಸಿದವು. ಈ ಆಕ್ರಮಣಕ್ಕೆ ತುತ್ತಾದ ಸೈನಿಕರು ಆಶ್ರಯ ಹುಡುಕುತ್ತಾ ಎಲ್ಲೆಂದರಲ್ಲಿ ಓಡಾಡಿದರೂ, ನೊಣಗಳು ಅವರ ಬೆನ್ನು ಹತ್ತಿದವು. ಸುವರ್ಣ ನದಿ ತೀರದವರೆಗೂ ಅವರು ಓಡಿದರು; ಸೈನಿಕರು ನೀರಿನಲ್ಲಿ ಮುಳುಗುವವರೆಗೂ ನೊಣಗಳು ಅವರನ್ನು ಬಿಡಲಿಲ್ಲ. ಈ ವಿಚಾರವು ಸುತ್ತಲಿನ ಪ್ರದೇಶಗಳಿಗೆಲ್ಲಾ ಹರಡಿ ಕ್ರೈಸ್ತರಲ್ಲದವರಲ್ಲಿಯೂ 'ಮಿಲಾಗ್ರಿ ಅಮ್ಮ' ಎಂದು ಮಾನ್ಯತೆ ಮತ್ತು ವಿಸ್ಮಯಕಾರಿಯಾಗಿ ಪ್ರಸಿದ್ಧಗೊಂಡಿತು. ಹಲವಾರು ದಿವಸಗಳ ಪ್ರಾರ್ಥನೆ ಹಾಗೂ ಪ್ರಸ್ತುತ ಇರುವ ಅಗ್ನಿಪರೀಕ್ಷೆಯು ಕಳೆದ ನಂತರ ಸಕಲ ಗೌರವಗಳೊಂದಿಗೆ ಮತ್ತೆ ಪ್ರತಿಮೆಯನ್ನು ಇದ್ದ ಸ್ಥಳದಲ್ಲೇ ಪ್ರತಿಷ್ಠಾಪನೆ ಮಾಡುವುದಾಗಿ ಭರವಸೆ ನೀಡಿದ ನಂತರ ಶ್ರೀರಂಗಪಟ್ಟಣದ ಆಕ್ರಮಣದ ವೇಳೇಯಲ್ಲಿ ಅವಿತು ಕುಳಿತ್ತಿದ್ದರವರಲ್ಲಿ ಒಬ್ಬರಾದ ನಾಡು ಕುದ್ರುವಿನ ಶ್ರೀ ಮೆನಿನೊ ಫ್ರಾನ್ಸಿಸ್ ಲುಯಿಸ್ ಅವರಿಗೆ ಮಾತೆ ಪ್ರತಿಮೆ ಅಲ್ಲಿಂದ ಗೌಪ್ಯವಾಗಿ ಎತ್ತಲು ಸಾಧ್ಯವಾಯ್ತು. ಅವರು ಅದನ್ನು ಅವರ ಥೋಣ್ಸೆಯಲ್ಲಿರುವ ತಮ್ಮ ಪೂರ್ವಜರ ಮನೆಗೆ ತಮ್ಮ ಕುಟುಂಬ ಸದಸ್ಯ ಮತ್ತು ಉಳಿದ ಕ್ರೈಸ್ತರೊಂದಿಗೆ ರಾತ್ರಿ ಪಾಳಿಯಲ್ಲಿ ರಹಸ್ಯವಾಗಿ ಪೂಜಿಸಿ, ಜಪಮಾಲೆ ಹಾಗೂ ವಂ. ಥೋಮಸ್ ಸ್ತೀವನ್ಸ್ ಯೆ.ಸ. ಅವರು ಬರೆದ ಕ್ರೈಸ್ತ ಪುರಾಣಗಳನ್ನು ಓದುತ್ತಿದ್ದರು. ಇವರಲ್ಲಿ ಒಬಬ್ ಹಿಂದೂ ಧರ್ಮದವರೂ ಆಗಿದ್ದು ಅವರು ಮಾತೆಯ ಪರಮ ಭಕ್ತರಾಗಿದ್ದಾರೆ. ಅವರ ಕುಟುಂಬವನ್ನು ಈಗಲೂ ಚರ್ಚ್ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಗೌರವ ಆದರಗಳಿಂದ ಸತ್ಕರಿಸಲಾಗುತ್ತದೆ. ಶ್ರೀರಂಗಪಟ್ಟಣದಿಂದ ಕ್ರೈಸ್ತರು ಹಿಂತಿರುಗಿ ಬಂದ ಮೇಲೆ ಮತ್ತು ಇಲ್ಇ ಧರ್ಮಗುರುಗಳೂ ಬಂದ ನಂತರ, ಪವಾಡ ಪ್ರತಿಮೆಯನ್ನು ಅತ್ಯಂತ ಗೌರವ ಹಾಗೂ ಆನಂದದಿಂದ ಎರಡು ಮೈಲಿಗಳ ವರ್ಣರಂಜಿತ ನದಿ ದೋಣಿ ಹಾಗೂ ರಸ್ತೆ ಮಾರ್ಗವಾಗಿ ಇಲ್ಲಿಗೆ ತಂದು ಬಲಿಪೀಠದ ಪ್ರಧಾನ ವೇದಿಕೆಯಲ್ಲಿ ಪುನರ್ ಪ್ರತಿಷ್ಠಾಪಿಸಾಲಾಯಿತು(ಪ್ರಸ್ತುತ ಇದು ಪುಣ್ಯಕ್ಷೇತ್ರದಲ್ಲಿದೆ). ಇದರ ನೆನಪಿಗಾಗಿ ಈಗಲೂ ಸಹ ಮಾತೆಯ ಪ್ರತಿಮೆಯನ್ನು ಅಲಂಕೃತವಾದ ಸಿಂಹಾಸನದಲ್ಲಿ ಗೌರವ ಹಾಗೂ ಭಕ್ತಿಯಿಂದ ನಾಡು ಕುದ್ರುವಿನ ಶ್ರೀ ಮೆನಿನೊ ಫ್ರಾನ್ಸಿಸ್ ಲುಯಿಸ್ ಅವರ ಪೂರ್ವಜರ ಮನೆಯಿಂದ ಚರ್ಚ್-ವರೆಗೆ ಮೊದಲು ದೋಣಿ ಮೆರವಣಿಗೆ ಮಾಡಲಾಗುತ್ತಿತ್ತು; ಕಾಳಕ್ರಮೇಣ ಅಂದರೆ ಒಂದು ದಶಕಗಳಿಗೆ ಅನ್ವಯವಾಗುವಂತೆ ಅವರದೇ ಪೂರ್ವಜರ ಮನೆಯಿರುವ ನೆರೆಯ ಹೊನ್ನಪ್ಪ ಕುದ್ರುವಿನಿಂದ ಮೆರವಣಿಗೆ ನಡೆಸಲಾಗಿತ್ತು. ಆದರೆ ಕಾಲ ಬದಲಾದಂತೆ ಥೋಣ್ಸೆಯಿಂದ ಬರುವ ಅಲೆಗಳ ಅನಿಶ್ಚಿತತೆಯಿಂದಾಗಿ ಮತ್ತು ಹಲವಾರು ಕಾರಣಗಳಿಂದಾಗಿ ಪ್ರಸತುತ ಮಾತೆಯ ಮೆರವಣಿಗೆಯು ಬರಿಕುದ್ರುವಿನಲ್ಲಿರುವ ನಮ್ಮ ಮಾತೆಯ ದ್ವೀಪ ಪ್ರದೇಶದಿಂದಲೇ ನಡೆಯುತ್ತಿದೆ. ಆ ದಿನಗಳ ವಾರ್ಷಿಕ ಸಂಜೆ ಹಬ್ಬದ ಮೆರವಣಿಗೆಯಲ್ಲಿನ ಭವ್ಯತೆ ಮತ್ತು ಎಲ್ಲಾ ಸಮುದಾಯಗಳು ತರುವ ಅಲಂಕಾರಿಕ ದೀಪಗಳು, ಕಮಾನುಗಳು ಮತ್ತು ಮೆರವಣಿಗೆ ಮಾರ್ಗದಲ್ಲಿ ತೋರಣ ಈ ಆಚರಣೆಗಳ ಸೇರಿದಾಗ ರಚಿತವಾದ ಭಕ್ತಿ ಬೆಳಗುತ್ತಿರುವ ಮಾತೆಯ ಮೇಲಿನ ಪ್ರೀತಿಯನ್ನು ಪೀಳಿಗೆಯ ಪುರುಷರಿಂದ ಕೇಳಿ ನಿರೂಪಿಸಲಾಗಿದೆ. ಇಲ್ಲಿನ ಮತ್ತೊಂದು ಸ್ಂಸ್ಕೃತಿಯ ವಿಚಾರವನ್ಉ ತಿಳಿಯುವುದೂ ಸ್ವಾರಸ್ಯಕರವಾಗಿದೆ. ಪ್ರತಿಮೆಯನ್ನು ಚರ್ಚಿನ ಚೆರೆಲ್ ಮೆರವಣೀಗೆ ಮತ್ತು ಹಬ್ಬದ ದಿನಗಳ ಮೆರವಣಿಗೆಯಲ್ಲೂ ಉಪಯೋಗಿಸಲಾಗುತಿತ್ತು. ಈ ಪ್ರತಿಮೆ ಯು ಮಲ್ಪೆಯ ಸಮುದ್ರ ತೀರದಲ್ಲಿ ಕಂಡುಬಂದಿದ್ದು ಅಲ್ಲಿನ ಮೀನುಗಾರರು ಇದನ್ನು ಚರ್ಚ್-ಗೆ ನೀಡಿದ್ದರು. ಥೋಣ್ಸೆ ಪಾರ್ ದ್ವೀಪದಲ್ಲಿ ಪ್ರತಿಮೆಯನ್ನು ವಾಸ್ಕೋ ಡ ಗಾಮ ಅವರು ಬಂದಿಳಿದ ನೆನಪಿಗಾಗಿ ಪ್ರತಿಷ್ಠಾಪಿಸಿದ್ದರು ಎಂದು ನಂಬಲಾಗಿದೆ ಸಂ. ಮೇರಿ ದ್ವೀಪ.

ಹೊಸ ಧರ್ಮಪ್ರಾಂತ್ಯಕ್ಕೆ ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಉಡುಪಿ ಇಲ್ಲಿನ ಕ್ಯಾಥೆಡ್ರಲ್ ಎಂದು ೨೦೧೨ರಲ್ಲಿ ಭಡ್ತಿಗೊಳಿಸಲಾಯಿತು ಕ್ಯಾಥೆಡ್ರಲ್ ಚರ್ಚ್.,[೪] ಇದನ್ನು ಅಕ್ಟೋಬರ್ ೧೫, ೨೦೧೨ ರಂದು ಚರ್ಚ್‌ನಲ್ಲಿ ಉದ್ಘಾಟಿಸಲಾಯಿತು.[೫][೬]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Shet, I J S (30 December 2014). "Kallianpur gets a cathedral". No. Bangalore. Deccan Herald. Retrieved 16 January 2015.
  2. ೨.೦ ೨.೧ Pinto 1999, p. 157
  3. Farias 1999, p. 222
  4. Erection Of The Diocese Of Udupi (India) And Appoints First Bishop catholica.va.
  5. "History in the Making: Erection Ceremony of Udupi Diocese Gets Under Way". Daiji World. October 15, 2012. Archived from the original on ಡಿಸೆಂಬರ್ 22, 2012. Retrieved ಅಕ್ಟೋಬರ್ 27, 2016.
  6. "Udupi becomes 9th Diocese under Bangalore Archdiocese". Indian Express. 16 October 2012. Archived from the original on 4 ಮಾರ್ಚ್ 2016. Retrieved 27 ಅಕ್ಟೋಬರ್ 2016.
  • Farias, Kranti K. (1999). "The Christian impact in South Kanara". Mumbai: Church History Association of India. {{cite journal}}: Cite journal requires |journal= (help); Invalid |ref=harv (help).
  • Pinto, Pius Fidelis (1999). "History of Christians in coastal Karnataka, 1500–1763 A.D.". Mangalore: Samanvaya Prakashan. {{cite journal}}: Cite journal requires |journal= (help); Invalid |ref=harv (help).

ಬಾಹ್ಯ ಕೊಂಡಿಗಳು[ಬದಲಾಯಿಸಿ]