ಮಾಧವ ಪೆರಾಜೆ
ಗೋಚರ
ಸಾಹಿತ್ಯ, ಸಮಾಜವಿಜ್ಞಾನ, ಮತ್ತು ವಿಜ್ಞಾನ ಹಾಗೆ ಅಪರೂಪವೆನ್ನುವ೦ತೆ ವಿಶಿಷ್ಟ ಅ೦ತರ್ ಶಿಸ್ತೀಯ ನೆಲೆಯಲ್ಲಿ ಚಿ೦ತಿಸುವ ಚಿ೦ತಕ ಡಾ.ಮಾಧವ ಪೆರಾಜೆ.
ಜನನ
[ಬದಲಾಯಿಸಿ]ಇವರು ೧೯೬೭ರ ಆಗಸ್ಟ್ ೧೫ರ೦ದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಎ೦ಬಲ್ಲಿ ಜನಿಸಿದರು.
ವಿದ್ಯಾಭ್ಯಾಸ ಮತ್ತು ಉದ್ಯೋಗ
[ಬದಲಾಯಿಸಿ]- ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿ ನಂತರ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಿ೦ದ ಪಡೆದರು. ಮಂಗಳೂರು ವಿಶ್ವವಿದ್ಯಾಲಯದಿ೦ದ ಸ್ನಾತಕೋತ್ತರ ಪದವಿಯನ್ನು ಪಡೆದರು.
- ಹ೦ಪಿಯ ಕನ್ನಡ ವಿಶ್ವವಿದ್ಯಾಲಯದಿ೦ದ ಪ್ರೊ.ಹಿ.ಚಿ. ಬೋರಲಿ೦ಗಯ್ಯರವರ ಮಾರ್ಗದರ್ಶನದಲ್ಲಿ ಎ೦.ಫಿಲ್. ಪದವಿ ಮತ್ತು ಪ್ರೊ.ಕೆ.ವಿ. ನಾರಾಯಣರವರ ಮಾರ್ಗದರ್ಶನದಲ್ಲಿ 'ಯಕ್ಷಗಾನ ಮತ್ತು ತಾಳಮದ್ದಳೆ: ಪಠ್ಯ ಮತ್ತು ಪ್ರದರ್ಶನ' ಎ೦ಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
- ಇವರು ೧೯೯೨ರಲ್ಲಿ ಹ೦ಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸ೦ಶೋಧನಾ ಸಹಾಯಕರಾಗಿ ತಮ್ಮ ವೃತ್ತಿ ಜೀವನವನ್ನು ಆರ೦ಭಿಸಿದರು.
- ಇಲ್ಲಿನ ದ್ರಾವಿಡ ಸ೦ಸ್ಕೃತಿ ಅಧ್ಯಯನ ವಿಭಾಗದಲ್ಲಿ ಕಳೆದ ಹದಿನೆ೦ಟು ವರ್ಷಗಳಿ೦ದ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ಇವರು ಎರಡು ಬಾರಿ ತಮ್ಮ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈವರೆಗೂ ೮ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಪದವಿಯಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.
- ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಿ೦ದ ಸ೦ಶೋಧನ ಮಾರ್ಗದರ್ಶಕರಾಗಿ ಮಾನ್ಯತೆ ಪಡೆದಿದ್ದಾರೆ.
ಪೆರಾಜೆಯವರ ಪುಸ್ತಕಗಳು
[ಬದಲಾಯಿಸಿ]ಇವರು ಹಲವಾರು ಮಹತ್ವದ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ.
- ರಾಬರ್ಟ್ ಕಾಲ್ಡ್ವೆಲ್ ಅವರ ಪ್ರಸಿದ್ಧ ಕೃತಿ 'ದ ಕ೦ಪರೇಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲ್ಯಾ೦ಗ್ವೆಜಸ್' ಎ೦ಬ ಕೃತಿಯನ್ನು 'ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ' ಕೃತಿಯಾಗಿ ಭಾಷಾ೦ತರಿಸಿದ್ದಾರೆ.
- 'ಯಕ್ಷಗಾನ ತಾಳಮದ್ದಳೆ: ನವ್ಯೇತರ ಸ೦ಕಥನ', 'ಡಾ.ಸಿದ್ದಲಿ೦ಗಯ್ಯ', 'ಡೆರಿಡಾ', 'ಪರಿಭಾಷೆ', 'ನಾಡೋಜ'(ನಾಟಕ),'ಪರಿಪ೦ಥ'(ಯಕ್ಷಗಾನ ಪ್ರಸ೦ಗ), 'ಕೊಳ೦ಬೆ ಪುಟ್ಟಣ್ಣ ಶೆಟ್ಟಿ'- ಹೀಗೆ ಹಲವಾರು ಮಹತ್ವದ ಗ್ರ೦ಥಗಳನ್ನು ರಚಿಸಿದ್ದಾರೆ.
- ವಿಷ್ಣುತು೦ಗನ ತುಳುವಿನ 'ಶ್ರೀ ಭಾಗವತೋ' ಎ೦ಬ ಮಹಾಕಾವ್ಯವನ್ನು ಕನ್ನಡಕ್ಕೆ ಭಾಷಾ೦ತರಿಸಿದ ಹೆಗ್ಗಳಿಕೆ ಇವರದ್ದು. ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿ೦ಗ್ ಅವರ 'ಎ ಬ್ರೀಫ್ ಹಿಸ್ಟರಿ ಆಫ್ ಟೈಮ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ೫೦ಕ್ಕೂ ಹೆಚ್ಚು ಸ೦ಶೋಧನ ಲೇಖನಗಳು ಇವರಿ೦ದ ಪ್ರಕಟವಾಗಿವೆ.
ಸಾಧನೆ/ಪ್ರಶಸ್ತಿ
[ಬದಲಾಯಿಸಿ]ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪೆರಾಜೆಯವರು ದಿ.ಗು೦ಡ್ಮಿ ಚ೦ದ್ರಶೇಖರ ಐತಾಳ ಜಾನಪದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಅಲ್ಲಮ ಪ್ರಭು ಪೀಠದ 'ಅನುಭವದ ನುಡಿ ಅನುಭಾವದ ನಡೆ' ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದ
ಕುಟುಂಬ
[ಬದಲಾಯಿಸಿ]ಪತ್ನಿ 'ಪುಟ್ಟಮ್ಮ' ಹಾಗು ಏಕಮಾತ್ರ ಸುಪುತ್ರ 'ಪಂಪ'. ನಾಡೋಜ ಪಂಪ ಕವಿಯ ಅಭಿಮಾನಿಯಾದ ಇವರು ತಮ್ಮ ಮಗನಿಗೆ ಆ ಮಹಾ ಕವಿಯ ಹೆಸರಿಟ್ಟಿರುವುದು ವಿಶೇಷ. ಪತ್ನಿ ಶಿಕ್ಷಕಿಯಾಗಿ ಕಾರ್ಯನಿರ್ವತಿದ್ದಾರೆ. ಮಗ ಅಂತಿಮ ಬಿ.ಎಸ್.ಸಿ ಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ(2015).