ಮಸೂದ್ ಹುಸೇನ್ ಖಾನ್
ಮಸೂದ್ ಹುಸೇನ್ ಖಾನ್ | |
---|---|
Born | ೨೮ ಜನವರಿ ೧೯೧೯ ಕೈಮ್‌ಗಂಜ್, ಫರೂಕಾಬಾದ್ |
Died | ೧೬ ಅಟ್ಟೋಬರ್ ೨೦೧೦ |
Nationality | ಭಾರತೀಯ |
Organization(s) | ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ,ಜಾಮಿಯಾ ಮಿಲಿಯಾ ಇಸ್ಲಾಮಿಯಾ,ಒಸ್ಮಾನಿಯಾ ವಿಶ್ವವಿದ್ಯಾಲಯದ ,ಕಾಶ್ಮೀರ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ |
Spouse | ನಜ್ಮಾ ಬೇಗಂ |
Children | ೫ |
Relatives | ಜಾಕಿರ್ ಹುಸೇನ್, ಯೂಸುಫ್ ಹುಸೇನ್ ಖಾನ್, ಮಹಮೂದ್ ಹುಸೇನ್, ಖುರ್ಷೆದ್ ಅಲಂ ಖಾನ್, ಸಲ್ಮಾನ್ ಖುರ್ಷಿದ್, ಅನುಷಾ ರಿಜ್ವಿ, ರಹಿಮುದ್ದೀನ್ ಖಾನ್ |
Awards | ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಲ್ ಹಿಂದ್ ಬಹದ್ದೂರ್ ಶಹಃ ಜಾಫರ್ ಪ್ರಶಸ್ತಿ, ಘಲಿಬ್ ಪ್ರಶಸ್ತಿ, ಕರಾಚಿ ನಿಯಾಜ್ ಫತೇಪುರಿಪ್ರಶಸ್ತಿ |
ಮಸೂದ್ ಹುಸೇನ್ ಖಾನ್‌ರವರು ಒಬ್ಬ ಉತ್ಕೃಷ್ಟ ಭಾಷಾಶಾಸ್ತ್ರಜ್ಞ. ಇವರು ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನದ ಮೊದಲ ಪ್ರಾಧ್ಯಾಪಕರಾಗಿದ್ದರು ಮತ್ತು ದೆಹಲಿಯಲ್ಲಿರುವ ಕೇಂದ್ರ ವಿಶ್ವವಿದ್ಯಾಲಯಕ್ಕೆ ಇಸ್ಲಾಮಿಯಾ ಐದನೇ ಉಪಕುಲಪತಿಗಳಾಗಿದ್ದರು.
ಕುಟುಂಬ
[ಬದಲಾಯಿಸಿ]ನಿವೃತ್ತ ಪ್ರಾಧ್ಯಾಪಕರಾದ ಮಸೂದ್ ಹುಸೇನ್ ಖಾನ್‌ರವರು ಫರೂಕಾಬಾದ್ ಜಿಲ್ಲೆಯ, ಉತ್ತರ ಪ್ರದೇಶದಲ್ಲಿರುವ ಕ್ಯೊಂಗಜ್‌ನಲ್ಲಿ ಜನಿಸಿದರು. ಅವರ ಕುಟುಂಬವು ಉತ್ಕೃಷ್ಟತೆಯ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅವರ ತಂದೆ ಮುಜಾಫರ್ ಹುಸೇನ್ ಖಾನ್ (1893-1921). ಮುಜಾಫರ್‌ರು ಆಲಿಘಢ್‌ನಲ್ಲಿರುವ ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ಮತ್ತು ಮೊಹಮ್ಮದ್ ಆಂಗ್ಲೋ ಓರಿಯಂಟಲ್ (ಎಮ್.ಎ.ಓ) ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದರು. ನಂತರ ಹೈದರಾಬಾದ್‌ನಲ್ಲಿ ತಮ್ಮ ನ್ಯಾಯಾಂಗ ವೃತ್ತಿಜೀವನವನ್ನು ಆರಂಭಿಸಿದರು ಆದರೆ ಇಪ್ಪತ್ತೆಂಟರ ಪ್ರಾಯದಲ್ಲಿ ಕ್ಷಯರೋಗದಿಂದ ಮರಣ ಹೊಂದಿದರು. ತಮ್ಮ ತಂದೆಯವರನ್ನು ಕಳೆದುಕೊಂಡಾಗ ಮಸೂದ್ ಹುಸೇನ್‍ರವರಿಗೆ ಕೇವಲ ಎರಡು ವರ್ಷ. ಮುಜಾಫರ್ ಹುಸೇನ್ ಖಾನ್‌ರವರು ಜಾಕಿರ್ ಹುಸೇನ್ ಖಾನ್, ಯೂಸುಫ್ ಹುಸೇನ್ ಖಾನ್, ಹಾಗು ಮಹಮೂದ್ ಹುಸೇನ್‌ರ ಹಿರಿಯ ಸಹೋದರನಾಗಿದ್ದರು.
- ಜಾಕಿರ್ ಹುಸೇನ್, ಮೂರನೇ ಭಾರತದ ರಾಷ್ಟ್ರಪತಿಯಗಿದ್ದರು. ಇವರು ಸಹ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾಗಿ ಕಾರ್ಯನಿವ೯ಹಿಸಿದರು.[೧]
- ಯೂಸುಫ್ ಹುಸೇನ್ ಖಾನ್‌ರವರು ಹೈದರಾಬಾದ್ನಲ್ಲಿರುವ ಒಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಪ್ರೊಫೆಸರ್ ಆಗಿದ್ದರು ಮತ್ತು ಉರ್ದು ಭಾಷೆಯ ಪ್ರಖ್ಯಾತವಾದ ವಿಮರ್ಶಕರಾಗಿದ್ದರು. ನಂತರ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದ ಪ್ರೊ-ಉಪಕುಲಪತಿಗಳಾಗಿ ಕಾರ್ಯನಿವ೯ಹಿಸಿದರು.
- ಮಹಮೂದ್ ಹುಸೇನ್ ೧೯೬೦ರಿಂದ ೧೯೬೩ರವರೆಗೆ ಢಾಕಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು ಮತ್ತು ಅವರು ಸಾಯುವವರೆಗೂ ಕರಾಚಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು. ಮೊದಲು ಪಾಕಿಸ್ತಾನದಲ್ಲಿ ೧೯೫೨-೧೯೫೩ ಶಿಕ್ಷಣ ಸಚಿವ, ೧೯೪೯ರಲ್ಲಿ ರಕ್ಷಣಾ ಮತ್ತು ವಿದೇಶಿ ವ್ಯವಹಾರಗಳ ಸಹಾಯಕ ಮಂತ್ರಿಯಾಗಿ ನೇಮಿಗೊಂಡಿದ್ದರು. ಇವರ ಅಳಿಯ ಜನರಲ್ ರಹಿಮ್ಮುದ್ದಿನ್,ಪಾಕಿಸ್ತಾನ ಸೇನೆ ಸಿಬ್ಬಂದಿ ಸಮಿತಿಯ ಅಧ್ಯಕ್ಷರು ಹಾಗೂ ಜಂಟಿ ಮುಖ್ಯಸ್ಥರು ಮತ್ತು ಬಲೂಚಿಸ್ಥಾನದಲ್ಲಿ ಗವನ೯ರ್ ಆಗಿ ಸೇವೆ ಸಲ್ಲಿಸಿದರು.
ಮಸೂದ್ ಹುಸೇನ್ ಖಾನ್‌ನ ತಾಯಿ ಫಾತಿಮಾ ಬೇಗಂ. ಇವರು ಸುಲ್ತಾನ್ ಆಲಂ ಖಾನ್, ಕುದ್ದಸ್ಸ್ ಆಲಂ ಖಾನ್,ಗುಲಾಂ ರಬ್ಬಾನಿ ಟ್ಯಾಬನ್, ಹಾಗೂ ಖುರ್ಷೆದ್ ಅಲಂ ಖಾನ್‌ರ ಹಿರಿಯ ಸಹೋದರಿ.
- ಸುಲ್ತಾನ್ ಆಲಂ ಖಾನ್‌ರವರು ಒಬ್ಬ ರಾಜ್ಯ ಸಚಿವೆಯಾಗಿದ್ದರು.
- ಕುದ್ದೂಸ್ ಆಲಂ ಖಾನ್‌ರವರು ಒಬ್ಬ ಜಮೀನ್‌ದಾರ, ಇವರ ಹೆಂಡತಿ ಹಾಗು ಮಸೂದ್ ಹುಸೇನ್ ಖಾನ್‌ರ ಅತ್ತೆ(ಬದ್ರುದ್-ದುಜ ಬೇಗಂ) ಬುರಾಸಿ ಮತ್ತು ದಾತವಲಿಯ ನವಾಬ್‌ರ ಮಗಳು.
- ಗುಲಾಂ ರಬ್ಬಾನಿ ಟ್ಯಾಬನ್, ಪ್ರಸಿದ್ಧ ಕವಿ ಮತ್ತು ಪ್ರಗತಿಪರ ಬರಹಗಾರ. ಇವರು ಒಬ್ಬ ಖ್ಯಾತಿ ಚಲನಚಿತ್ರಗಾರ್ತಿ ಅನುಶ ರಿಜ್ವಿಯ ತಾತ.
- ಖುರ್ಷೆದ್ ಅಲಂ ಖಾನ್,ಇವರು ಭಾರತ ಸರ್ಕಾರದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಮಾಜಿ ಭಾರತೀಯ ಸಚಿವರಾಗಿದ್ದರು. ಅವರನ್ನು ೧೯೮೯ ರಿ೦ದ ೧೯೯೧ ರವರೆಗೆ ಕೇರಳ ರಾಜ್ಯಾಪಾಲರನಾಗಿ ಅಧಿಕೃತ ಮಾಡಿದ್ದರು ಮತ್ತು ೧೯೯೧ ರಿ೦ದ ೧೯೯೯ ರವರೆಗೆ ಗೋವಾದಿ೦ದ ಕನಾ೯ಟಕದವರೆಗೆ ರಾಜ್ಯಪಾಲ ಮತ್ತು ಗವರ್ನರ್ ಆಗಿದ್ದರು.ಇವರು ಡಾ ಝಕೀರ್ ಹುಸೇನ್ ಮಗಳನ್ನು ಮದುವೆಯಾದರು.
೧೬ ಅಕ್ಟೋಬರ್, ೨೦೧೦ ರ೦ದು ಮಸೂದ್ ಹುಸೇನ್ ಖಾನ್ ಆಲಿಗಢದಲ್ಲಿ ನಿಧನರಾದರು. ಅವರು ತಮ್ಮ ಪತ್ನಿ ಹಾಗೂ ನಾಲ್ಕು ಹೆಣ್ಣುಮಕ್ಕಳು, ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.[೨]
ಶಿಕ್ಷಣ
[ಬದಲಾಯಿಸಿ]ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ, ಮಸೂದ್ ಹುಸೇನ್‌ರವರು ಸ್ವಲ್ಪ ದಿನಗಳಕಾಲ ಢಾಕಾದಲ್ಲಿ ಅಧ್ಯಯನ ಮಾಡಿದರು. ಅವರು ಜಾಕಿರ್ ಹುಸೇನ್ ಕಾಲೇಜಿನಲ್, ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯಲ್ಲಿ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಮತ್ತು ಬಿ.ಎ ಪದವಿಯನ್ನು ಮುಗಿಸಿದರು. ಅವರು ಪ್ರೊಫೆಸರ್ ರಶೀದ್ ಅಹ್ಮದ್ ಸಿದ್ಧಿಕಿ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಮಾಡಿದರು.
ವೃತ್ತಿ
[ಬದಲಾಯಿಸಿ]- ಮಸೂದ್ ಹುಸೇನ್ ಖಾನ್‌ರವರು ದಕ್ಷಿಣ ಏಷ್ಯಾದಲ್ಲಿ ಅಧ್ಯಯನ ಇಲಾಖೆಯ ಸಂದರ್ಶಕ ಪ್ರಾಧ್ಯಾಪಕರಾಗಿಯೂ, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಬರ್ಕ್ಲಿ, ಯುಎಸ್ಎಯಲ್ಲಿ ಕಾರ್ಯನಿರ್ವಹಿಸಿದರು.
- ೧೯೬೨ ರಲ್ಲಿ, ಅವರು ಒಸ್ಮಾನಿಯಾ ವಿಶ್ವವಿದ್ಯಾಲಯದ ಉರ್ದು ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡರು, ಇಲ್ಲಿ ೧೯೬೮ರವೆಗೆ ಸೇವೆ ಸಲ್ಲಿಸಿದರು. ನಂತರ ಅವರನ್ನು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಮಾಡಲಾಯಿತು.
- ೧೯೬೯-೧೯೭೦ ಅವಧಿಯಲ್ಲಿ ಅಂಜುಮನ್-ಐ ಟತಕ್ಕು-ಐ ಉರ್ದು ಹಿಂದಿ ನಾಟಕರಂಗಕ್ಕೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.
- ನಿವೃತ್ತಿಯ ನಂತರ ಮಸೂದ್ ಹುಸೇನ್ ಇಕ್ಬಾಲ್ ಇನ್ಸ್ಟಿಟ್ಯೂಟ್ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕಗೊಂಡರು, ಕಾಶ್ಮೀರ ವಿಶ್ವವಿದ್ಯಾಲಯ ಮತ್ತು ಶ್ರೀನಗರದಲ್ಲಿ ಸಂಶೋಧನಾ ವಿಧಾನವನ್ನು ಕಲಿಸುತ್ತಿದ್ದರು.
- ಮಸೂದ್ ಹುಸೇನ್‌ನರು ೧೯೯೦ ದಶಕದ ಮಧ್ಯಭಾಗದವರೆಗೂ ಜಾಮಿಯ ಉರ್ದು ಆಲಿಗಢದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು
- ಅವರು ೨೦೧೦ ರಲ್ಲಿ ತಮ್ಮ ಸಾವಿನ ತನಕ ಅಖಿಲ ಭಾರತ ಮುಸ್ಲಿಂ ಶೈಕ್ಷಣಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅವರ ಕೆಲಸಗಳು
[ಬದಲಾಯಿಸಿ]- ಮಸೂದ್ ಹುಸೇನ್‌ರ ಮಹತ್ವದ ಕಲಾತ್ಮಕ ಕೃತಿ, ಮುಕದ್ದಮ್ಮ-ಇ-ತರೀಕ್-ಇ-ಜ಼ಬಾನ್-ಇ-ಉರ್ದು. ಇದರಲ್ಲಿ ಉರ್ದು ಮೂಲಗಳು ಮತ್ತು ಅಭಿವೃದ್ಧಿಯ ಇತಿಹಾಸವನ್ನು ವಿವರಿಸಲಾಗಿದೆ. ಈ ಪುಸ್ತಕವು ಉರ್ದುವಿನ ಉಗಮ ಮತ್ತು ಅದರ ಅಭಿವೃದ್ಧಿಯನ್ನು ಹೆಚ್ಚು ಒಪ್ಪುವಂತಹ ಸಿದ್ಧಾಂತಗಳನ್ನು ಒಳಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.೧೯೪೮ರಲ್ಲಿ ಮೊದಲನೆಯ ಪ್ರಕಟನ.
- ೧೯೫೪ರಲ್ಲಿ ಬರೆದ ತಮ್ಮ ಎರಡನೆಯ ಪುಸ್ತಕ ಉರ್ದು ಜ಼ಬಾನ್-ಓ-ಅದಬ್ ಅಷ್ಟೇ ಜನಪ್ರಿಯವಾಗಿತ್ತು.
- ಮಸೂದ್‌ರ ಮತ್ತೊಂದು ವೈಶಿಷ್ಯ್ಟವೆಂದರೆ ಧ್ವನಿಶಾಸ್ತ್ರ. ಧ್ವನಿವಿಜ್ಞಾನದ ದೃಷ್ಠಿಯಿಂದ ಉರ್ದು ಪದಗಳನ್ನು ವಿಶ್ಲೇಷಿಸಿದವರಲ್ಲಿ ಇವರು ಮೊದಲಿಗರಾದರು.
- ಅವರು ಸಾಹಿತ್ಯ ವಿಮರ್ಶೆಯಲ್ಲಿ ಆಸಕ್ತಿ ಹೊಂದಿದ್ದರು.ಆದರೆ ತಮ್ಮ ಸಾಹಿತ್ಯಕ ವೃತ್ತಿಜೀವನದ ಆರಂಭದಲ್ಲಿ,ಟೀಕೆಯ ಪ್ರಚಲಿತ ಪ್ರವೃತ್ತಿಯನ್ನು ಹಿಯಾಲಿಸುತ್ತಿದ್ದರು.
- ಶಾಸ್ತ್ರೀಯ ಉರ್ದು ಗ್ರಂಥಗಳನ್ನು ಸಂಪಾದನೆ ಮಾಡುತ್ತಿರುವ ಉರ್ದು ಸಂಶೋಧಕರಿಗೆ ಗೌರವ ನೀಡಲು ಆದೇಶಿಸುತ್ತಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]- ೧೯೮೪ ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.[೩]
- ಉದು೯ ಅಕಾಡೆಮಿಯ ಗೌರವ ಪ್ರಶಸ್ತಿ.
- ಫೆಬ್ರವರಿ ೨೦೧೦ರಲ್ಲಿ ಘಾಲಿಬ್ ಇನ್ಸ್ಟಿಟ್ಯೂಟ್, ದೆಹಲಿ ಉರ್ದು ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಜಮೀನುದಾರ ಕೊಡುಗೆಗಾಗಿ ಮಹಾ ಕಾರ್ಯದಲ್ಲಿ ಅವರನ್ನು ಸನ್ಮಾನಿಸಲಾಯಿತು.[೪]
- ಸಮಾಜ ವಿಜ್ಞಾನ ಮೊದಲು ೧೯೮೭ ರಲ್ಲಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮೂಲಕ "ನಿವೃತ್ತ ಪ್ರಾಧ್ಯಾಪಕ" ಅಂಕಿತವನ್ನು ನೀಡಲಾಯಿತು.
- ೧೯೮೬ರಲ್ಲಿ ಕರಾಚಿ ನಿಯಾಜ್ ಫತೇಪುರಿ ಪ್ರಶಸ್ತಿ.
- ೧೯೭೪ರಲ್ಲಿ ಉರ್ದು ಕ ಅಲಾಮಿಯ ಪುಸ್ತಕಕ್ಕೆ ಉತ್ತರ ಪ್ರದೇಶದ ಉರ್ದು ಅಕಾಡೆಮಿ ಪ್ರಶಸ್ತಿ. ಈ ಪುಸ್ತಕವನ್ನು ಪ್ರೊಫೆಸರ್ ಮಿರ್ಜಾ ಖಲೀಲ್ ಅಹ್ಮದ್ ಬೇಗ್‌ರವರು ಸಂಪಾದಿಸಿದರು.
- ೧೯೮೬ರಲ್ಲಿ ಜಾಮಿಯಾ ಉರ್ದು, ಆಲಿಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೂದ್ ಹುಸೇನ್ ಖಾನ್‌ರ ೭೦ನೇ ಜನ್ಮ ವಾರ್ಷಿಕೋತ್ಸಕ್ಕೆ ನಸ೯-ಇ-ಮಸೂದ್(ಪ್ರೊಫೆಸರ್ ಮಿರ್ಜಾ ಖಲೀಲ್ ಅಹ್ಮದ್ ಬೇಗ್‌ರವರು ಸಂಪಾದಿಸಿರುವುದು) ನೀಡಿ ಗೌರವಿಸಲಾಗಿತ್ತು.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Wurud-e-Masud (An Autobiography) published in 1988.
- Prof. Masud Husain Khan's Interview on YouTube
- Prof. Masud Husain's lecture on "Urdu University: Concept & Implementation" on YouTube
- Religious & Cultural Transformation: Rise Mof Regional Languages & Literature
- Nazr-e-Masud (Felicitation Volume presented to Masud Husain Khan on his 70th Birth Anniversary in 1989) edited by Professor Mirza Khalil Ahmad Beg.
ಉಲ್ಲೇಖಗಳು
[ಬದಲಾಯಿಸಿ]- ↑ "ಭಾರತದ ರಾಷ್ಟ್ರಪತಿಗಳ ಪಟ್ಟಿ".
- ↑ "ಮಸೂದ್ ಹುಸೇನ್ ಖಾನ್ ನಿಧನರಾದರು". Archived from the original on 2015-02-12. Retrieved 2015-11-01.
{{cite web}}
: CS1 maint: bot: original URL status unknown (link) - ↑ "ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು".
- ↑ "ಮಸೂದ್ ಹುಸೇನ್‌ರವರ ಸನ್ಮಾನ ಕಾರ್ಯಕ್ರಮ". Archived from the original on 2014-02-08. Retrieved 2015-11-01.
{{cite web}}
: CS1 maint: bot: original URL status unknown (link)