ಮರ್ಡಿ ಗ್ರಾಸ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mardi Gras
(Also known as Shrove Tuesday or Fat Tuesday)
Costumed musicians, New Orleans
ರೀತಿLocal, cultural, Catholic
ಮಹತ್ವCelebration prior to fasting season of Lent.
ಆಚರಣೆಗಳುParades, parties
ದಿನಾಂಕEaster − 47 daysಟೆಂಪ್ಲೇಟು:Infobox holiday/wd
Related toCarnival

"ಮರ್ಡಿ ಗ್ರಾಸ್‌ ‌" (pronounced /ˈmɑrdi ɡrɑː/), "ಮರ್ಡಿ ಗ್ರಾಸ್‌‌ ಋತು ", ಹಾಗೂ "ಕಾರ್ನೀವಲ್‌ ಋತು ",[೧][೨][೩][೪][೫][೬] ಎಂಬ ಆಂಗ್ಲ ಪಾರಿಭಾಷಿಕ ಪದಗಳು ಸಾಕ್ಷಾತ್ಕಾರ ದಿನದಂದು ಅಥವಾ ನಂತರ ಆರಂಭವಾಗಿ ಬೂದಿ ಬುಧವಾರದ ಹಿಂದಿನ ದಿನದಂದು ಕೊನೆಗೊಳ್ಳುವ ಕಾರ್ನೀವಲ್‌ ಉತ್ಸವಾಚರಣೆಗಳ ವಿದ್ಯಮಾನಗಳಿಗೆ ಅನ್ವಯಿಸುತ್ತವೆ. ಮರ್ಡಿ ಗ್ರಾಸ್‌‌ ಎಂಬುದು "ಫ್ಯಾಟ್‌‌ ಮಂಗಳವಾರ"ಕ್ಕೆ (ಮೂಲ ಆಂಗ್ಲ ಸಂಪ್ರದಾಯದಲ್ಲಿ, ಪಾಪ ವಿಮೋಚನ ಮಂಗಳವಾರ) ಫ್ರೆಂಚ್‌‌ ಪಾರಿಭಾಷಿಕ ಪದವಾಗಿದ್ದು, ಬೂದಿ ಬುಧವಾರದಂದು ಆರಂಭವಾಗುವ ಲೆಂಟ್‌ ಹಬ್ಬದ ಋತುವಿನ ಧಾರ್ಮಿಕ ಉಪವಾಸ ಆರಂಭವಾಗುವ ಹಿಂದಿನ ರಾತ್ರಿಯಂದು ನಡೆಸುವ ಸಾರಯುಕ್ತ, ಕೊಬ್ಬಿ/ಮೇದಸ್ಸಿನಿಂದ ಕೂಡಿದ ಆಹಾರವನ್ನು ಸೇವಿಸುವ ಪದ್ಧತಿಗೆ ಇದನ್ನು ಬಳಸಲಾಗುತ್ತದೆ. ಲೆಂಟ್‌ ಪ್ರಾಯಶ್ಚಿತ್ತದ ಋತುವಿಗೆ ಸಂಬಂಧಿಸಿದಂತೆ ಉಪವಾಸದ ಹಾಗೂ ಧಾರ್ಮಿಕ ಕಟ್ಟುಪಾಡುಗಳಿಗೊಳಪಡುವ ಮುನ್ನಾ ನಡೆಸುವ ಸಂಭ್ರಮಾಚರಣೆಗಳು/ಆಚರಣೆಗಳಿಗೆ ಸಂಬಂಧಪಟ್ಟ ಜನಪ್ರಿಯ ಪದ್ಧತಿಗಳಿಗೂ ಇದನ್ನು ಅನ್ವಯಿಸಲಾಗುತ್ತದೆ. ಮುಖವಾಡಗಳು ಹಾಗೂ ವೇಷಭೂಷಣಗಳು/ಪೋಷಾಕುಗಳನ್ನು ಧರಿಸುವುದು, ವ್ಯತಿರೇಕ ಸಾಮಾಜಿಕ ಆಚರಣೆಗಳು, ನೃತ್ಯಗಳು, ಕ್ರೀಡಾ ಸ್ಪರ್ಧೆಗಳು, ಮೆರವಣಿಗೆಗಳು, etc. ಇದರಲ್ಲಿ ಸೇರಿರುವ ಜನಪ್ರಿಯ ಪದ್ಧತಿಗಳಾಗಿವೆ. ಕ್ರೈಸ್ತ ಸಂಪ್ರದಾಯವನ್ನು ಪಾಲಿಸುವ ಇತರೆ ಐರೋಪ್ಯ ಭಾಷೆಗಳಲ್ಲಿಯೂ ಮರ್ಡಿ ಗ್ರಾಸ್‌‌ನ ಸದೃಶ ಅಭಿವ್ಯಕ್ತಿಗಳು ಕಾಣಿಸಿಕೊಳ್ಳುತ್ತವೆ. ಆಂಗ್ಲದಲ್ಲಿ, ಈ ದಿನವನ್ನು ಲೆಂಟ್‌ ಆರಂಭವಾಗುವ ಮುನ್ನ ಪಾಪ ನಿವೇದನೆ ಮಾಡಿಕೊಳ್ಳುವ ಧಾರ್ಮಿಕ ನಿಬಂಧನೆ ಪಾಲನೆಗೆ ಸಂಬಂಧಿಸಿದಂತೆ ಪಾಪ ವಿಮೋಚನ ಮಂಗಳವಾರ ಎಂದು ಕರೆಯುತ್ತಾರೆ.

ಅನೇಕ ಪ್ರದೇಶಗಳಲ್ಲಿ, "ಮರ್ಡಿ ಗ್ರಾಸ್‌‌" ಎಂಬ ಪದಪುಂಜವನ್ನು ಅದೊಂದೇ ದಿನವಲ್ಲದೇ ಸಂಭ್ರಮಾಚರಣೆ ವಿದ್ಯಮಾನಗಳ ಚಟುವಟಿಕೆಯ ಇಡೀ ಅವಧಿಗೆ ಬಳಸಲಾಗುತ್ತದೆ. ಕೆಲ US ನಗರಗಳಲ್ಲಿ, ಇದನ್ನು ಈಗ "ಮರ್ಡಿ ಗ್ರಾಸ್‌‌ ದಿನ" ಅಥವಾ "ಫ್ಯಾಟ್‌‌ ಮಂಗಳವಾರ"ವೆಂದು ಕರೆಯಲಾಗುತ್ತಿದೆ.[೧][೨][೩][೪][೫][೬] ಹಬ್ಬದ ಋತು ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತದೆ, ಸಾಕ್ಷಾತ್ಕಾರ ದಿನ ಅಥವಾ ಹನ್ನೆರಡನೇ ರಾತ್ರಿಯಿಂದ ಬೂದಿ ಬುಧವಾರದವರೆಗಿನ ಇಡೀ ಅವಧಿಯನ್ನು ಕೆಲ ಸಂಪ್ರದಾಯಗಳು ಮರ್ಡಿ ಗ್ರಾಸ್‌‌ ಎಂದು ಪರಿಗಣಿಸುತ್ತವೆ.[೭] ಇತರೆ ಸಂಪ್ರದಾಯಗಳು ಬೂದಿ ಬುಧವಾರದ ಹಿಂದಿನ ಅಂತಿಮ ಮೂರು ದಿನದ ಅವಧಿಯನ್ನು ಮರ್ಡಿ ಗ್ರಾಸ್‌‌ ಎಂದು ಪರಿಗಣಿಸುತ್ತವೆ.[೮] ಮೊಬೈಲ್‌, ಅಲಬಾಮಾಗಳಲ್ಲಿ, ಮರ್ಡಿ ಗ್ರಾಸ್‌‌-ಸಂಬಂಧಿತ ಸಾಮಾಜಿಕ ಚಟುವಟಿಕೆಗಳು ನವೆಂಬರ್‌ನಲ್ಲಿ ಆರಂಭಗೊಂಡು, ಕೃತಜ್ಞತಾ ನಿವೇದನ ದಿನದಂದು ಮಿಸ್ಟಿಕ್‌ ಸೊಸೈಟಿ ಬಾಲ್ಸ್‌ ನೃತ್ಯಾಚರಣೆ,[೭][೯] ನಂತರ ನವವರ್ಷದ ಮುನ್ನಾದಿನದ ಆಚರಣೆ, ನಂತರ ಜನವರಿ ಹಾಗೂ ಫೆಬ್ರವರಿಗಳಲ್ಲಿ ಮೆರವಣಿಗೆಗಳು ಹಾಗೂ ಬಾಲ್ಸ್‌ ನೃತ್ಯಗಳನ್ನು ನಡೆಸುತ್ತಾ, ಬೂದಿ ಬುಧವಾರದ ಹಿಂದಿನ ಮಧ್ಯರಾತ್ರಿವರೆಗೂ ಆಚರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮೆರವಣಿಗೆಗಳನ್ನು ನವವರ್ಷದ ದಿನದಂದು ಹಮ್ಮಿಕೊಳ್ಳಲಾಗುತ್ತಿತ್ತು.[೭] ಮರ್ಡಿ ಗ್ರಾಸ್‌ ಸಂಭ್ರಮಾಚರಣೆಗಳಿಗೆ ಹೆಸರಾದ ಇನ್ನಿತರ ನಗರಗಳೆಂದರೆ ಬ್ರೆಝಿಲ್‌ನ ರಿಯೋ ಡಿ ಜನೈರೋ, ಕೆನಡಾದ ಕ್ವಿಬೆಕ್‌ನಲ್ಲಿನ ಕ್ವಿಬೆಕ್‌ ನಗರ; ಮೆಕ್ಸಿಕೋದ ಮೆಝಟ್ಲಾನ್‌; ಹಾಗೂ ಯುನೈಟೆಡ್‌ ಸ್ಟೇಟ್ಸ್‌ನ ನ್ಯೂ ಅರ್ಲಿಯಾನ್ಸ್‌‌, ಲ್ಯೂಸಿಯಾನಾಗಳು. ಇನ್ನೂ ಅನೇಕ ಸ್ಥಳಗಳು ಕೂಡಾ ಪ್ರಮುಖ ಮರ್ಡಿ ಗ್ರಾಸ್‌ ಸಂಭ್ರಮಾಚರಣೆಗಳನ್ನು ಹೊಂದಿವೆ.

ಕ್ಯಾಥೊಲಿಕ್‌ ರಾಷ್ಟ್ರಗಳಲ್ಲಿ ಕಾರ್ನಿವಲ್‌ ಎಂಬುದು ಪ್ರಮುಖ ಸಂಭ್ರಮಾಚರಣೆಯಾಗಿರುತ್ತದೆ. ಯುನೈಟೆಡ್‌ ಕಿಂಗ್‌ಡಮ್‌ ಹಾಗೂ ಐರ್‌ಲೆಂಡ್‌ಗಳಲ್ಲಿ, ಪಾಪವಿಮೋಚನ ಮಂಗಳವಾರದಂದು ಕೊನೆಗೊಳ್ಳುವ ಬೂದಿ ಬುಧವಾರದ ಹಿಂದಿನ ವಾರವನ್ನು ಪಾಪವಿಮೋಚನ ಅವಧಿಯೆಂದು ಕರೆಯಲಾಗುತ್ತದೆ. ಅದು ತನ್ನದೇ ಆದ ಜನಪ್ರಿಯ ಸಂಭ್ರಮಾಚರಣೆಗಳ ಅಂಶಗಳನ್ನೂ ಒಳಗೊಂಡಿದೆ. ತೆಳುಕೇಕ್‌ಗಳು ಈ ಕಾಲದ ಸಾಂಪ್ರದಾಯಿಕ ತಿನಿಸಾಗಿವೆ. ತೆಳು ಕೇಕ್‌ಗಳು ಹಾಗೂ ಸಂಬಂಧಿತ ಹುರಿದ ಬ್ರೆಡ್‌ಗಳು ಅಥವಾ ಸಕ್ಕರೆ, ಕೊಬ್ಬು ಹಾಗೂ ಮೊಟ್ಟೆಗಳನ್ನು ಸೇರಿಸಿ ತಯಾರಿಸಿದ ಪಿಷ್ಟಭಕ್ಷ್ಯಗಳನ್ನೂ ಕೂಡಾ ಈ ಸಮಯದಲ್ಲಿ ಸಾಂಪ್ರದಾಯಿಕವಾಗಿ ಲ್ಯಾಟಿನ್‌ ಅಮೇರಿಕಾ ಹಾಗೂ ಕೆರಿಬಿಯನ್‌ ಪ್ರದೇಶಗಳ ಅನೇಕ ಸ್ಥಳಗಳಲ್ಲಿ ಸೇವಿಸಲಾಗುತ್ತದೆ.

ಬೆಲ್ಜಿಯಂ[ಬದಲಾಯಿಸಿ]

ಬೆಲ್ಜಿಯಂನ ನಗರವಾದ ಬಿಂಚೆಯಲ್ಲಿ ಮರ್ಡಿ ಗ್ರಾಸ್‌‌ ಉತ್ಸವದ ದಿನವು ವರ್ಷದ ಪ್ರಮುಖ ದಿನವಾಗಿರುವುದಲ್ಲದೇ ಬಿಂಚೆಯ ಕಾರ್ನಿವಲ್‌ ನ ಸಮಾರೋಪದ ದಿನವೂ ಆಗಿರುತ್ತದೆ. ಸುಮಾರು ೧೦೦೦ ಮಂದಿ ಗಿಲ್ಲೆಗಳು ಬೆಳಗಿನಿಂದ ಮುಸ್ಸಂಜೆ ಕಳೆಯುವವರೆಗೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕಾರ್ನಿವಲ್‌ ಗೀತೆಗಳು ಕೇಳಿಬರುತ್ತಿರುವ ಹಾಗೆ ನಗರದುದ್ದಕ್ಕೂ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ೨೦೦೩ರಲ್ಲಿ, "ಬಿಂಚೆಯ ಕಾರ್ನಿವಲ್‌"ಅನ್ನು ಮೌಖಿಕ ಹಾಗೂ ಅವ್ಯಕ್ತ ಮಾನವ ಸಂಸ್ಕೃತಿಗಳ ಮೇರುಸಂಸ್ಕೃತಿಗಳಲ್ಲಿ ಒಂದೆಂದು UNESCO ಶ್ಲಾಘಿಸಿದೆ.

ಬ್ರೆಜಿಲ್‌[ಬದಲಾಯಿಸಿ]

ಬ್ರೆಝಿಲ್‌ನಲ್ಲಿ ಕಾರ್ನಿವಲ್‌‌ ವಾರ್ಷಿಕ ಲೆಂಟ್‌ ಅವಧಿಯ ಸಂಭ್ರಮಾಚರಣೆಯಾಗಿದೆ. ರೆಸಿಫೆ ಹಾಗೂ ಸಾಲ್ವಡಾರ್‌ ಎರಡೂ ನಗರಗಳು ತಮ್ಮ ಕಾರ್ನಿವಾಲ್‌ಗೆಂದು ಪ್ರಸಿದ್ಧವಾಗಿದ್ದರೂ ಹೆಚ್ಚು ಪ್ರಸಿದ್ಧವಾಗಿರುವುದು ರಿಯೋ ಡಿ ಜನೈರೋನಲ್ಲಿ ಹಮ್ಮಿಕೊಳ್ಳಲಾಗುವಂತಹುದು. ಮರ್ಡಿಗ್ರಾಸ್‌ನ ಕಾರ್ನಿವಲ್‌ಗಳು ಅಂತ್ಯಗೊಳ್ಳುವ ವೇಳೆಗೆ ದಶಲಕ್ಷಗಳಷ್ಟು ಮಂದಿ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ[೧೦][೧೧][೧೨].

ರೆಸಿಫೆ[ಬದಲಾಯಿಸಿ]

ರೆಸಿಫೆನಲ್ಲಿನ ಪಟಿಯೋ ಡೆ ಸಾವೋ ಪೆಡ್ರೋ ಚೌಕದಲ್ಲಿ ನಡೆದ 2007ರ ಕಾರ್ನೀವಲ್‌

ರೆಸಿಫೆ'ಯ ಕಾರ್ನೀವಲ್‌ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದ್ದು ಪ್ರತಿ ವರ್ಷ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಬೋವಾ ವಯಾಗೆ/ಜೆಮ್‌ ಜಿಲ್ಲೆಯಲ್ಲಿ ವಿದ್ಯುತ್‌ ತ್ರಯದೀಪಗಳು "ಕುಣಿಯುವುದು" ಆರಂಭವಾಗುವುದರೊಂದಿಗೆ ಅಧಿಕೃತ ದಿನಾಂಕದ ಒಂದು ವಾರ ಮುಂಚೆಯೇ ಪಾರ್ಟಿ ಆರಂಭವಾಗುತ್ತದೆ. ಶುಕ್ರವಾರದಂದು, ಫ್ರೆವೋ ಸಂಗೀತವನ್ನು ಆಸ್ವಾದಿಸಲು ಹಾಗೂ ಮರಕಾಟು, ಸಿರಾಂಡಾ, ಕಾಬೋಕ್ಲಿನ್ಹಾಸ್‌, ಅಫೋಕ್ಸೆ, ರೆಗ್ಗೇ ಮತ್ತು ಮ್ಯಾಂಗ್ಯೂ ಬಿಟ್‌ ಗುಂಪುಗಳೊಂದಿಗೆ ನೃತ್ಯ ಮಾಡಲು ಜನರು ಬೀದಿಗಿಳಿಯುತ್ತಾರೆ. ಗಾಲೊ ಡಾ ಮಡ್ರುಗಡ ಗುಂಪನ್ನು ದಶಲಕ್ಷಕ್ಕೂ ಹೆಚ್ಚಿನ ಜನರು ಅನುಸರಿಸುವಂತಹಾ ಸಮಯದಲ್ಲಿ ನಗರದಾದ್ಯಂತ ಮನರಂಜನೆ ಏರ್ಪಟ್ಟಿರುತ್ತದೆ. ಭಾನುವಾರದಂದು ಮರಕಾಟುಗಳು ಸೆರೆಯಲ್ಲಿ ಮಡಿದ ಗುಲಾಮರುಗಳಿಗೆ ಗೌರವ ಸೂಚಿಸುವ ಸ್ಥಳವಾದ ನೊಯ್ಟೆ ಡಾಸ್‌ ಟಾಂಬೋರ್ಸ್‌ ಸೈಲೆನ್ಷಿಯೋಸಾಸ್‌ ನಲ್ಲಿ ಪೇಟಿಯೋ ಡೊ ಟೆರ್ಕೋನ ದೃಶ್ಯವು ಕಂಡುಬರುತ್ತದೆ.

ರಿಯೊ ಡಿ ಜನೈರೊ[ಬದಲಾಯಿಸಿ]

ರಿಯೋ ಡಿ ಜನೈರೋಯು ಸಾಂಬೋಡ್ರಾಮೋ ಪ್ರದರ್ಶನ ಕೇಂದ್ರದಲ್ಲಿನ ಪ್ರಸಿದ್ಧ ಎಸ್ಕೋಲಾಸ್‌ ಡೇ ಸಾಂಬಾ (ಸಾಂಬಾ ಶಾಲೆಗಳ) ಮೆರವಣಿಗೆಗಳು ಹಾಗೂ ನಗರದ ಬಹುತೇಕ ಎಲ್ಲಾ ಮೂಲೆಗಳಲ್ಲೂ ಮೆರವಣಿಗೆ ನಡೆಸುವ ಜನಪ್ರಿಯ 'ಬ್ಲಾಕೋಸ್‌ ಡೆ ಕಾರ್ನವಾಲ್‌'ಗಳೂ ಸೇರಿದಂತೆ ಅನೇಕ ಮಾದರಿಯ ಕಾರ್ನೀವಲ್‌ ಆಯ್ಕೆಗಳನ್ನು ಹೊಂದಿದೆ. ಪ್ರಮುಖ ಪ್ರಸಿದ್ಧ ಮೆರವಣಿಗೆಗಳೆಂದರೆ ಕಾರ್ಡಾವೋ ಡೊ ಬೊಲಾ ಪ್ರೆಟಾ ನಗರ ಕೇಂದ್ರದಲ್ಲಿ ನಡೆಯುವ ಸಾಂಪ್ರದಾಯಿಕ ಕಾರ್ನೀವಲ್‌ ಮೆರವಣಿಗೆಗಳು, ಸಸ್ಯೋದ್ಯಾನದಲ್ಲಿ ನಡೆಯುವ ಸುವಾಕೋ ಡೊ ಕ್ರಿಸ್ಟೋ ಮೆರವಣಿಗೆಗಳು, ಸಂತ ತೆರೇಸಾರ ಗುಡ್ಡಗಳಲ್ಲಿ ನಡೆಯುವ ಕಾರ್ಮೆಲಿಟಾಸ್‌ ಮೆರವಣಿಗೆಗಳು, ಸಿಂಪಟಿಯಾ ಎ ಕ್ವೇಸ್‌ ಆಮರ್‌ ಇಪನೆಮಾನಲ್ಲಿನ ಅತ್ಯಂತ ಜನಪ್ರಿಯ ಮೆರವಣಿಗೆಗಳಲ್ಲಿ ಒಂದಾಗಿದೆ, ಅಷ್ಟೇ ಅಲ್ಲದೇ ಬಂಡಾ ಡೆ ಇಪನೆಮಾ ಕುಟುಂಬಗಳು ಹಾಗೂ ಸಲಿಂಗಕಾಮಿಗಳು/ಥಳಕುಪಳುಕಿನ ಮಹಿಳೆಯರಿಂದ ಕೂಡಿದ ಸಂಭ್ರಮಿಸುವವರ ವ್ಯಾಪಕ ಸಮೂಹವನ್ನು ಇದು ಆಕರ್ಷಿಸುತ್ತದೆ(ಗಮನಾರ್ಹವಾಗಿ ಆಕರ್ಷಣೀಯ ಡ್ರಾಗ್‌ ರಾಣಿಯರು/ವಿಲಾಸಿನಿಯರಿಂದ ಕೂಡಿದ).

ಸಾಲ್ವಡಾರ್‌[ಬದಲಾಯಿಸಿ]

ಗಿನ್ನೆಸ್‌ ಬುಕ್‌ನ ಪ್ರಕಾರ, ಕಾರ್ನೀವಲ್‌ ಅಥವಾ ಸಾಲ್ವಡಾರ್‌ ಡೆ ಬಾಹಿಯಾ ಕಾರ್ನವಲ್‌ ಭೂಮಿಯ ಮೇಲೆ ನಡೆಯುವ ಅತಿ ದೊಡ್ಡ ರಸ್ತೆಗಳಲ್ಲಿ ನಡೆಸುವ ಪಾರ್ಟಿಯಾಗಿದೆ. ಒಂದು ಇಡೀ ವಾರದ ಕಾಲ ಬಹುತೇಕ ಎರಡು ದಶಲಕ್ಷ ಜನರು ಬಾರ್ರಾ/ಒಂಡಿನಾ, ಕ್ಯಾಂಪೋ ಗ್ರಾಂಡೆ ಹಾಗೂ ಪೆಲೌರಿನ್‌ಹೋ ಎಂಬ ಮೂರು ಮಾರ್ಗಗಳಲ್ಲಿ ವಿಭಜಿತವಾಗಿ ನಗರ'ದ ರಸ್ತೆಗಳಲ್ಲಿ ನಡೆಯುವ ಸಂಭ್ರಮಾಚರಣೆಗಳು/ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಕಾರ್ನವಾಲ್‌ನ ಸಮಯದಲ್ಲಿ ನುಡಿಸುವ ಸಂಗೀತಗಳಲ್ಲಿ ಏಕ್ಸ್‌ ಹಾಗೂ ಸಾಂಬಾ-ರೆಗ್ಗೇಗಳು ಸೇರಿವೆ. ಕಾರ್ನವಾಲ್‌ನಲ್ಲಿ ಭಾಗವಹಿಸುವ ಅನೇಕ "ಬ್ಲೋಕೋಸ್‌"ಗಳಲ್ಲಿ "ಬ್ಲೋಕೋಸ್‌ ಆಫ್ರೋಸ್‌" ಮೇಲ್‌ ಡೆಬೇಲ್‌, ಒಲೋಡಮ್‌ ಹಾಗೂ ಫಿಲ್‌ಹಾಸ್‌ ಡೆ ಗಾಂಧಿಗಳಿ ಬಹು ಪ್ರಸಿದ್ಧವಾಗಿವೆ.

ಕೆನಡಾ[ಬದಲಾಯಿಸಿ]

ಇಡೀ ರಾಷ್ಟ್ರದುದ್ದಕ್ಕೂ ಮರ್ಡಿ ಗ್ರಾಸ್‌‌ಅನ್ನು ಪ್ರಧಾನವಾಗಿ ಅದರಲ್ಲೂ ವಿಶೇಷವಾಗಿ ಪ್ರಮುಖ ನಗರಗಳಾದ ಟೊರೊಂಟೋ, St. ಜಾನ್ಸ್‌, ವಾಂಕೂವರ್‌, ಹಾಗೂ ಮಾಂಟ್ರಿಯಲ್‌ಗಳಲ್ಲಿ ಆಚರಿಸಲಾಗುತ್ತದೆ.

ಕ್ವಿಬೆಕ್[ಬದಲಾಯಿಸಿ]

ಕೆನಡಾದಲ್ಲಿ ಬಹು ವ್ಯಾಪಕವಾಗಿ ಮರ್ಡಿ ಗ್ರಾಸ್‌ ‌ಅನ್ನು ಆಚರಿಸಲಾಗುವ ಪ್ರಾಂತ್ಯವೆಂದರೆ ಫ್ರೆಂಚ್‌‌ -ಭಾಷಿಕ ಕ್ವಿಬೆಕ್‌ ಆಗಿದೆ. ಸಂಗೀತೋತ್ಸವಗಳು, ಹಾಸ್ಯೋತ್ಸವಗಳು, ಆಹಾರೋತ್ಸವಗಳು, ಹಾಗೂ ರಸ್ತೆ ಪಾರ್ಟಿಗಳಂತಹಾ ಸಂಗತಿಗಳೊಂದಿಗೆ ಕ್ವಿಬೆಕ್‌ ನಗರ ಹಾಗೂ ಮಾಂಟ್ರಿಯಲ್‌ ಮರ್ಡಿ ಗ್ರಾಸ್‌‌ ಸಂಭ್ರಮಾಚರಣೆಗಳು/ಆಚರಣೆಗಳನ್ನು ಹಮ್ಮಿಕೊಳ್ಳುತ್ತವೆ.[೧೩]

ವಾಡಿಕೆಯಾಗಿ ಜನವರಿಯ ಮೊದಲನೇ ಶುಕ್ರವಾರದಂದು ಆರಂಭವಾಗಿ ೧೭ ದಿನಗಳ ಕಾಲ ಮುಂದುವರೆಯುವ ಕ್ವಿಬೆಕ್‌ ಚಳಿಗಾಲದ ಕಾರ್ನೀವಲ್‌ನ ವಿಚಾರದಲ್ಲೂ ಕ್ವಿಬೆಕ್‌ ನಗರವು ಪ್ರಸಿದ್ಧವಾಗಿದೆ. ಬಹುತೇಕ ಒಂದು ದಶಲಕ್ಷ ಮಂದಿಯ ಭಾಗವಹಿಸುವಿಕೆಯೊಂದಿಗೆ, ಇದು ವಿಶ್ವದಲ್ಲೇ ಅತಿ ದೊಡ್ಡ ಚಳಿಗಾಲದ ಸಂಭ್ರಮಾಚರಣೆಗಳಲ್ಲಿ ಒಂದಾಗುವಷ್ಟು ಬೆಳೆದಿದೆ.[೧೪] ಉತ್ಸವದ ಆಚರಣೆಗಳಲ್ಲಿ ಚಳಿಗಾಲದ ಸ್ಕೀಯಿಂಗ್‌, ಹಿಮದಲ್ಲಿ ತೆಪ್ಪ ಹಾಯುವಿಕೆ, ಹಾಗೂ ಹಿಮದ ಜಾರುಬಂಡಿಗಳಂತಹಾ ಆಕರ್ಷಣೆಗಳಿರುವ ಮನರಂಜನಾ ಉದ್ಯಾನ/ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳೂ ಸೇರಿವೆ.

ವೆಸ್ಟ್‌ಇಂಡೀಸ್‌ ರಾಷ್ಟ್ರಗಳು[ಬದಲಾಯಿಸಿ]

ಹೈಟಿಯಲ್ಲಿನ ಜಾಕ್‌ಮೆಲ್‌ ಮರ್ಡಿ ಗ್ರಾಸ್‌‌ ಪೇಪಿಯರ್‌-ಮಾಷೆ ಮುಖವಾಡಗಳು.

ವೆಸ್ಟ್‌ಇಂಡೀಸ್‌ ದ್ವೀಪಗಳಲ್ಲಿ, ಅನೇಕ ದ್ವೀಪಗಳಲ್ಲಿ ಕಾರ್ನೀವಲ್‌ ಅನ್ನು ಆಚರಿಸಲಾಗುತ್ತದೆ: ಆಂಟಿಗುವಾ, ಅರುಬಾ, ಬಾರ್ಬಡೋಸ್‌, ಬೊನೈರೆ, ಕುರಕಾವೋ, ಡಾಮಿನಿಕಾ, ಡೊಮಿನಿಕ್‌ ಗಣರಾಜ್ಯ, ಗ್ರೆನಾಡಾ, ಗ್ವಾಡೆಲೋಪ್‌, ಗಯಾನಾ, ಹೈಟಿ, ಜಮೈಕಾ, ಪೋರ್ಟೋರಿಕೋ, ಸೇಂಟ್‌ ಕಿಟ್ಸ್‌ ಹಾಗೂ ನೆವಿಸ್‌, St. ಲೂಸಿಯಾ, ಸೇಂಟ್‌ ವಿನ್ಸೆಂಟ್‌ ಹಾಗೂ ಗ್ರೆನಾಡೈನ್ಸ್‌, St. ಮಾರ್ಟಿನ್‌, ಸುರಿನೇಮ್‌, ಟ್ರಿನಿಡಾಡ್‌ ಹಾಗೂ ಟೊಬಾಗೋ ಮತ್ತು ಯುನೈಟೆಡ್‌‌ ಸ್ಟೇಟ್ಸ್‌ ವಿರ್ಜಿನ್‌ ದ್ವೀಪಗಳು ಈ ಆಚರಣೆಗಳಲ್ಲಿ ಪಾಲ್ಗೊಳ್ಳುವ ಕೆಲವು ರಾಷ್ಟ್ರಗಳು.

ಕೊಲಂಬಿಯಾ[ಬದಲಾಯಿಸಿ]

ಅನೇಕ ಕೊಲಂಬಿಯನ್‌ ನಗರಗಳು ಹನ್ನೆರಡನೇ ರಾತ್ರಿಯಿಂದ ಮರ್ಡಿ ಗ್ರಾಸ್‌‌ನವರೆಗೆ ಅವಧಿಯಲ್ಲಿ ಕಾರ್ನೀವಲ್‌ಗಳನ್ನು ಆಚರಿಸುತ್ತವೆ. ಈ ಸಂಭ್ರಮಾಚರಣೆಗಳು/ಆಚರಣೆಗಳಲ್ಲಿ ಬಹು ಮುಖ್ಯವಾದುದೆಂದರೆ ಬೂದಿ ಬುಧವಾರದ ಹಿಂದಿನ ಶನಿವಾರದಂದು ಆರಂಭಗೊಂಡು ಮರ್ಡಿ ಗ್ರಾಸ್‌‌ನ ದಿನದಂದು ಕೊನೆಗೊಳ್ಳುವ ಬಾರ್ರನ್‌ಕ್ವಿಲ್ಲಾ'ದ ಕಾರ್ನೀವಲ್‌ (ಸ್ಪ್ಯಾನಿಷ್‌ : ಕಾರ್ನವಾಲ್‌ ಡೆ ಬಾರ್ರನ್‌ಕ್ವಿಲ್ಲಾ ). ಬಾರ್ರನ್‌ಕ್ವಿಲ್ಲಾ'ದ ಕಾರ್ನೀವಲ್‌ನ ಮೂಲಗಳು ೧೯ನೇ ಶತಮಾನದಷ್ಟು ಹಳೆಯದಾಗಿದ್ದು, ಗಾತ್ರದಲ್ಲಿ ರಿಯೋನ ನಂತರ ಎರಡನೇ ಸ್ಥಾನದ್ದಾದರೂ ವಾಣಿಜ್ಯಿಕವಾಗಿ ಬಹಳಷ್ಟು ಕಡಿಮೆ ಮಹತ್ವವನ್ನು ಪಡೆದುಕೊಂಡಿದೆ. ಬಾರ್ರನ್‌ಕ್ವಿಲ್ಲಾದ ಕಾರ್ನೀವಲ್‌ ಅನ್ನು ನವೆಂಬರ್‌ ೨೦೦೩ರಲ್ಲಿ, ಮೌಖಿಕ ಹಾಗೂ ಅವ್ಯಕ್ತ ಮಾನವ ಸಂಸ್ಕೃತಿಗಳ ಮೇರುಸಂಸ್ಕೃತಿಗಳಲ್ಲಿ ಒಂದೆಂದು UNESCO ಶ್ಲಾಘಿಸಿದೆ.

ಕ್ರೊಯೇಷಿಯಾ[ಬದಲಾಯಿಸಿ]

ಆಚರಣೆಗಳನ್ನು ಪ್ರದೇಶಗಳ ಮೇಲೆ ಆಧಾರಿತವಾಗಿ ಕಾರ್ನೆವಲ್‌ , ಮೆಸೋಪಸ್ಟ್‌ , ಪೋಕ್‌ಲೇಡ್‌ ಅಥವಾ ಫಾಸ್ನಿಕ್‌ ಎಂದು ಕರೆಯಲಾಗುತ್ತದೆ. ವಿಶ್ವದಲ್ಲೇ ಅತಿ ದೊಡ್ಡ ಕಾರ್ನೀವಲ್‌ಗಳಲ್ಲಿ ಒಂದಾದ ರಿಜೇಕಾ ಕಾರ್ನೀವಲ್‌ ಇಲ್ಲಿನ ಬಹು ಪ್ರಸಿದ್ಧ ಸಂಗತಿ.

ಡೆನ್ಮಾರ್ಕ್‌[ಬದಲಾಯಿಸಿ]

ಡೆನ್‌ಮಾರ್ಕ್‌ನಲ್ಲಿ ನಡೆದ ಅಂತಹುದೇ ಆಚರಣೆಗೆ ಫಾಸ್ಟೆವ್ಲಾನ್‌ ಎಂದು ಕರೆಯಲಾಗುತ್ತದೆ. ಲೆಂಟ್‌ನ ಕೆಲ ದಿನಗಳ ಮುಂಚೆ ಆಚರಿಸುವ ರೋಮನ್‌ ಕ್ಯಾಥೊಲಿಕ್‌ ಪರಂಪರೆಯಿಂದ ಫಾಸ್ಟೆವ್ಲಾನ್‌ ವಿಕಾಸಗೊಂಡಿದೆ. ನಂತರ ಡೆನ್‌ಮಾರ್ಕ್‌ ಪ್ರೊಟೆಸ್ಟೆಂಟ್‌ ರಾಷ್ಟ್ರವಾಗಿ ಮಾರ್ಪಟ್ಟಾಗ ಈ ಪವಿತ್ರ ದಿವಸವು ತನ್ನ ಧಾರ್ಮಿಕತೆಯ ಮಹತ್ವವನ್ನು ಸಾಕಷ್ಟು ಕಳೆದುಕೊಂಡಿತು.

ಈಸ್ಟರ್‌ ಭಾನುವಾರಕ್ಕೆ ಏಳು ವಾರಗಳ ಮುಂಚೆ ಈ ಪವಿತ್ರ ದಿನವು ಬರುತ್ತದಲ್ಲದೇ ಫಾಸ್ಟೆವ್ಲಾನ್‌ ಉತ್ಸವಕ್ಕೆ ಉಡುಗೊರೆಗಳನ್ನು ಸಂಗ್ರಹಿಸುವುದು ಹಾಗೂ ಮಕ್ಕಳು ವೇಷಭೂಷಣಗಳು/ಪೋಷಾಕುಗಳನ್ನು ಧರಿಸುವುದು ಮುಂತಾದ ಚಟುವಟಿಕೆಗಳಿಂದಾಗಿ ಕೆಲವೊಮ್ಮೆ ಇದನ್ನು ನಾರ್ಡಿಕ್‌ ಹಾಲೊವಿನ್‌ ಎಂದೂ ಹೇಳಲಾಗುತ್ತದೆ. ಈ ಪವಿತ್ರ ದಿನವನ್ನು ಸಾಧಾರಣವಾಗಿ ಮಕ್ಕಳು ಮೋಜು ಹಾಗೂ ಕೌಟುಂಬಿಕ ಆಟಗಳಲ್ಲಿ ಮೈಮರೆಯುವ ದಿನ ಎಂದು ಪರಿಗಣಿಸಲಾಗುತ್ತದೆ. "ಫಾಸ್ಟೆವ್ಲಾನ್‌" ಎಂಬ ಪದವು ಉತ್ತರ ಜರ್ಮನಿಯಿಂದ ಆಮದು ಮಾಡಿಕೊಂಡ ಕೆಳ ಸ್ಯಾಕ್ಸನ್‌ ಎರವಲುಪದವಾಗಿದ್ದು : ಫಾಸ್ಟೆಲಾವೆಂಡ್‌ , ಫಾಸ್ಟೆಲಾಬೆಂಡ್ [ˈfastl̩.ˌɒːbm̩t], ಹಾಗೂ ಫಾಸ್ಟ್‌ಲಾಮ್‌ (ಫಾಸ್ಟ್‌ಲಮ್‌ ಎಂದೂ ಉಚ್ಚರಿಸಲಾಗುತ್ತದೆ) [ˈfastl̩ɒːm], ನೆದರ್‌ಲೆಂಡ್ಸ್‌ನ ಪೂರ್ವಭಾಗಗಳಲ್ಲಿನ ಕೆಳ ಸ್ಯಾಕ್ಸನ್‌ ಪದ ವಾಸ್ಟೆಲಾವೊವೆಂಡ್‌ ಹಾಗೂ ಡಚ್‌ ಪದ ವಾಸ್ಟೆನಾವೊಂಡ್‌‌ ಗಳಿಗೆ ಸಂಬಂಧಿಸಿದ ಪದವಾಗಿದೆ.

ಫ್ರಾನ್ಸ್‌‌[ಬದಲಾಯಿಸಿ]

2007ರ ನೈಸ್‌ನ ಕಾರ್ನವಾಲ್‌ ರಾಜ, ಜಾಕ್ವೆಸ್‌ ಚಿರಾಕ್‌ರನ್ನು ಪ್ರತಿನಿಧಿಸುವ ತೆಪ್ಪ

ಫ್ರಾನ್ಸ್‌ನ ನೈಸ್‌ ನಗರವು ‌೧೨೯೪ರ ಇಸವಿಯಲ್ಲಿ, ಕಾಂಟೆ ಡೆ ಪ್ರಾವೆನ್ಸ್‌‌ ಚಾರ್ಲ್ಸ್‌‌ II, ಡ್ಯೂಕ್‌ d’ಅಂಜೌ ಕಾರ್ನೀವಲ್‌ನ ಆಚರಣೆಗಳಲ್ಲಿ ಅನುವಾಗುವಂತೆ ತನ್ನ ಬಿಡುವಿನ/ರಜಾದಿನಗಳನ್ನು ನೈಸ್‌ನಲ್ಲಿ ಕಳೆಯಲು ಆರಂಭಿಸಿದನು ಎಂಬುದನ್ನು ದಾಖಲಿಸಿದೆ. ಈ ಆಚರಣೆಗಳಲ್ಲಿ ಬಾಲ್ಸ್‌ ನೃತ್ಯಗಳು, ಮುಖವಾಡದ ನೃತ್ಯಗಳು, ದೀಪೋತ್ಸವಗಳು, ಇಂದ್ರಜಾಲ ಪ್ರದರ್ಶನಗಳು ಹಾಗೂ ಅಣಕನಾಟಕ ಹಾಗೂ ಮತ್ತೂ ಮನರಂಜನೆಗಳೂ ಒಳಗೊಂಡಿದ್ದವು. ಅವುಗಳಲ್ಲಿ ಪಾಲ್ಗೊಳ್ಳಲು ಬೇಕಾದವುಗಳೆಂದರೆ ವೇಷಭೂಷಣ ಹಾಗೂ ಮುಖವಾಡ ಮಾತ್ರ. ಇವುಗಳಲ್ಲಿ ಎಷ್ಟರಮಟ್ಟಿಗೆ ಆಮೋಪ-ಪ್ರಮೋದಗಳಿದ್ದವೆಂದರೆ ಚರ್ಚ್‌ ಕೂಡಾ ಹೆಚ್ಚು ಅಶ್ಲೀಲ ಅಂಶಗಳನ್ನು ತಡೆಯಲಾಗಲಿಲ್ಲ. ಆದಾಗ್ಯೂ ನಗರದ ದಾಖಲೆಗಳು ತೋರಿಸುವಂತೆ ವಿಶ್ವ ಸಮರಗಳ ಮುಂಚಿನ ಬೆಲ್ಲೆ ಎಪೋಕ್‌ ಎಂದು ಅವರು ಕರೆಯುವ ೧೯ನೇ ಶತಮಾನದ ಕೊನೆಯಿಂದ ಹಿಡಿದು ೨೦ನೇ ಶತಮಾನದ ಆದಿಯವರೆಗಿನ ಅವಧಿಯಲ್ಲಿ ಈ ಆಚರಣೆಗಳು ಉತ್ತುಂಗಕ್ಕೇರಿದ್ದವು.

ನೈಸ್‌ ನಗರವು ಕಾರ್ನವಾಲ್‌ಅನ್ನು ಎರಡು ವಾರಗಳಿಗೂ ಹೆಚ್ಚಿನ ಕಾಲ ಕಾರ್ಯಕ್ರಮಗಳನ್ನು ನಡೆಸುತ್ತಾ, ಕೊನೆ ದಿನದಂದು ಮರ್ಡಿ ಗ್ರಾಸ್‌‌ಅನ್ನು ಆಚರಿಸುವ ಮೂಲಕ ಆಚರಿಸುತ್ತದೆ. ನೈಸ್‌ ಕಾರ್ನವಾಲ್‌ ಹೂವಿನಿಂದಾವೃತವಾದ ತೆಪ್ಪಗಳು ಹಾಗೂ ದೇದೀಪ್ಯಮಾನ್ಯವಾದ ರಾತ್ರಿ-ಕಾಲದ ದೀಪದ ಪ್ರದರ್ಶನಗಳನ್ನು ಹೊಂದಿರುವ ಮೆರವಣಿಗೆಗಳನ್ನು ಒಳಗೊಂಡಿರುತ್ತದೆ.[೧೫]

ಇತರೆ ಫ್ರೆಂಚ್‌‌ ನಗರಗಳೂ ಕೂಡಾ ಕಾರ್ನವಾಲ್‌ಗಳನ್ನು ಹಮ್ಮಿಕೊಳ್ಳುತ್ತವೆ.

ಪ್ಯಾರಿಸ್‌ ಕೂಡಾ ಒಂದು ಕಾರ್ನೀವಲ್‌ಅನ್ನು ಆಚರಿಸುತ್ತಿದ್ದು ಅದನ್ನು ಪ್ಯಾರಿಸ್‌ ಕಾರ್ನೀವಲ್‌ ಎಂದು ಕರೆಯಲಾಗುತ್ತದೆ.

ಜರ್ಮನಿ[ಬದಲಾಯಿಸಿ]

ಜರ್ಮನಿಯಲ್ಲಿ ಮರ್ಡಿ ಗ್ರಾಸ್‌‌ನ ಆಚರಣೆಯನ್ನು ಕಾರ್ನೆವಲ್‌, ಫಾಸ್ಟ್‌ನಾಚ್ಟ್‌, ಅಥವಾ ಫಾಸ್ಚಿಂಗ್‌ ಎಂದು ಕರೆಯಲಾಗುತ್ತದೆ.[೧೬] ಫಾಸ್ಟ್‌ನಾಚ್ಟ್‌ ಎಂದರೆ "ಉಪವಾಸದ ಆರಂಭದ ಮುನ್ನಾದಿನ", ಎಂಬುದಾಗಿದ್ದು ಇದನ್ನು ಬೂದಿ ಬುಧವಾರದ ಹಿಂದಿನ ದಿನದಂದು ಆಚರಿಸಲಾಗುತ್ತದೆ.

ಬಹು ಪ್ರಸಿದ್ಧ ಮೆರವಣಿಗೆಗಳನ್ನು ಕೊಲೋನ್‌, ಮೈನ್ಜ್‌ ಹಾಗೂ ಡಸ್ಸೆಲ್‌ಡಾರ್ಫ್‌ಗಳಲ್ಲಿ ರೋಸೆನ್‌ಮಾಂಟ್ಯಾಗ್‌ ಎಂದು ಕರೆಯಲ್ಪಡುವ ಬೂದಿ ಬುಧವಾರದ ಮುನ್ನಾ ಸೋಮವಾರದಂದು ನಡೆಸಲಾಗುತ್ತದೆ.

ಗ್ವಾಟೆಮಾಲಾ[ಬದಲಾಯಿಸಿ]

ಗ್ವಾಟೆಮಾಲಾದಲ್ಲಿನ ಕಾರ್ನೀವಲ್‌ನ ಪ್ರಮುಖ ಆಚರಣೆಯು ಮಜಾಟೆನಾಂಗೋನಲ್ಲಿ ನಡೆಯುವ ಎಂಟು-ದಿನಗಳ ಆಚರಣೆ.

ಭಾರತ[ಬದಲಾಯಿಸಿ]

ಭಾರತದಲ್ಲಿ ೧೯೬೧ರವರೆಗೆ ಪೋರ್ಚುಗೀಸರ ಪೂರ್ವ ಕ್ಯಾಥೊಲಿಕ್‌ ವಸಾಹತುವಾಗಿದ್ದ ಗೋವಾದಲ್ಲಿ ಕಾರ್ನೀವಲ್‌ ಫ್ಯಾಟ್‌‌ ಮಂಗಳವಾರದಂದು ಕೊನೆಗೊಳ್ಳುವ ಹಾಗೆ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.

ಕೇರಳ ರಾಜ್ಯದಲ್ಲಿ ಕಾರ್ನೀವಲ್‌ ಮೆರವಣಿಗೆಯನ್ನು ರಾಸ[ಸೂಕ್ತ ಉಲ್ಲೇಖನ ಬೇಕು](ಸಂಸ್ಕೃತದಲ್ಲಿ ಮೋಜು) ಎಂದು ಕರೆಯಲಾಗುತ್ತದಲ್ಲದೇ ಬೂದಿ ಬುಧವಾರದ ಮುನ್ನಾ ರಾತ್ರಿಯಂದು ನಡೆಯುತ್ತದೆ. ಗೋವಾದ ಹಾಗಿಲ್ಲದೇ ಇಲ್ಲಿ ಸಾಂಕೇತಿಕವಾಗಿ ಆಚರಣೆಗಳಲ್ಲಿ ಮುಖವಾಡಗಳ ಬಳಕೆ ಇಲ್ಲ.

ಇಟಲಿ[ಬದಲಾಯಿಸಿ]

ಇಟಲಿಯಲ್ಲಿ ಕಾರ್ನೆವಾಲೆಯು ಸಾಂಪ್ರದಾಯಿಕ ಲೆಂಟ್‌-ಪೂರ್ವಿಕ ಆಚರಣೆಯಾಗಿದೆ. ಮುಖವಾಡವನ್ನು ಧರಿಸಿದವರ ಮೆರವಣಿಗೆಗಳು, ಮುಖವಾಡದ ಬಾಲ್ಸ್‌ ನೃತ್ಯಗಳು, ಮೆರವಣಿಗೆಗಳು, ದೃಶ್ಯೋತ್ಸವಗಳು, ಐಂದ್ರಜಾಲಿಕರು, ಜಾದೂಗಾರರು, ಮರಗಾಲುಗಳಿಂದ ನಡೆಯುವವರು, ಅಂದವಾದ ವೇಷಭೂಷಣಗಳು/ಪೋಷಾಕುಗಳು ಹಾಗೂ ಭವ್ಯವಾದ ಮುಖವಾಡಗಳು, ಹಾಡುವಿಕೆ ಹಾಗೂ ನೃತ್ಯ, ಬಾಣಬಿರುಸು ಪ್ರದರ್ಶನಗಳು ಹಾಗೂ ಹೊರಗಿನ ಔತಣಕೂಟಗಳಿಂದ ಕೂಡಿದ ಬೂದಿ ಬುಧವಾರಕ್ಕೆ ಮುಂಚಿನ ವಾರಗಳ ಆಮೋದ-ಪ್ರಾಮೋದಗಳಿಂದ ಕೂಡಿದ ಅವಧಿಯಾಗಿದೆ. ಕಾರ್ನೆವಾಲೆಯು ಬೂದಿ ಬುಧವಾರದ ಮುಂಚಿನ ತಮ್ಮ ಶೇಷಪಾಪಕ್ಷಮೆಯ ಎಂದರೆ (ಹಾಗೂ ಮಾಂಸವನ್ನು ತಿನ್ನುವ ಕಡೆಯ ಅವಕಾಶ), ಲೆಂಟ್‌ನ ಅವಧಿಯ ಪ್ರಾಯಶ್ಚಿತ್ತ ಹಾಗೂ ಉಪವಾಸಗಳನ್ನು ಮುನ್ಸೂಚಿಸುವ ಸಮಯವಾಗಿರುತ್ತದೆ. ಕಾರ್ನೆವಾಲೆಯು ಪ್ರತಿ ನಗರ, ಪಟ್ಟಣ ಹಾಗೂ ಹಳ್ಳಿಯು ತನ್ನದೇ ಆದ ಸಾಂಪ್ರದಾಯಿಕ ವಾಡಿಕೆಯ ಆಚರಣೆಗಳನ್ನು ನಡೆಸಿಕೊಂಡು ಇಡೀ ಇಟಲಿಯುದ್ದಕ್ಕೂ ನಡೆಯುವುದು. ವಿಯಾರೆಜ್ಜಿಯೋ, ಇವ್ರಿಯಾ, ಸ್ಚಿಯಾಕ್ಕಾ, ನಾಪೊಲಿ, ರೋಮಾ, ಕ್ಯಾಲಬ್ರಿಯಾ ಹಾಗೂ ವೆನೆಝಿಯಾಗಳಂತಹಾ ಸ್ಥಳಗಳು ವಿಶ್ವಪ್ರಸಿದ್ಧವಾದ ಅನನ್ಯ ಹಾಗೂ ಸವಿಸ್ತಾರವಾದ ಸಂಭ್ರಮಾಚರಣೆಗಳು/ಆಚರಣೆಗಳನ್ನು ಹೊಂದಿವೆ.

ಮಾರ್ಟೆಡಿ ಗ್ರಾಸೋ (ಮರ್ಡಿ ಗ್ರಾಸ್‌‌ ಅಥವಾ ಪಾಪ ವಿಮೋಚನ ಮಂಗಳವಾರ)ದಂದು ಕೊನೆಗೊಳ್ಳುವ ಕಾರಣ ಕಾರ್ನೆವಾಲೆಯ ಅಂತಿಮ ದಿನಗಳ ಸಂಭ್ರಮಾಚರಣೆಗಳು ಅತ್ಯಂತ ಹೆಚ್ಚು ತೀವ್ರತೆಯನ್ನು ಹೊಂದಿರುತ್ತವೆ. ಫ್ರಿಟೆಲ್ಲೆ, ಕ್ರೆಸ್ಟೆಲ್ಲೆ , ಸ್ಫಿಂಗಿ, ಕ್ಯಾಸ್ಟಗ್ನೋಲ್‌, ಸೆನ್ಸಿ, ನೋಡಿ, ಚಿಯಾಚ್ಛೆರೆ, ಬೂಗಿ, ಗಲನಿ, ಫ್ರಿಟೋಲ್‌, ಬರ್ಲಿಂಗಾಕ್ಕಿಯೋ, ಸ್ಯಾಂಗ್ವಿನಾಕ್ಕಿಯೋ ಹಾಗೂ ಟಾರ್ಟೆಲ್ಲಿಗಳೊಂದಿಗೆ ಇತರವೂ ಸೇರಿದಂತೆ ಕಾರ್ನೆವಾಲೆಯೊಂದಿಗೆ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ಕೆಲ ಸಾಂಪ್ರದಾಯಿಕ ತಿನಿಸು ಹಾಗೂ ಡೋಲ್ಷಿ/ಲ್ಸಿ (ಸಿಹಿ)ಗಳಿವೆ.

ಕೆಳಕಂಡ ಮಕ್ಕಳ ಕವಿತೆ/ಗೀತೆ ಕಾರ್ನೆವಾಲೆಯ ಸಮಯದಲ್ಲಿನ ಹೇಗೆ ಆಟಗಳು, ತಮಾಷೆಗಳು ಅಥವಾ ಫೆಸ್ಟಾ ದ ಚಮತ್ಕಾರಗಳು ಇತ್ಯಾದಿ ಆಚರಣೆಗಳು ನಡೆಯುತ್ತವೆ ಎಂಬುದನ್ನು ತಿಳಿಸುತ್ತದೆ.

A ಕಾರ್ನೆವಾಲೆ, ಆಗ್ನಿ ಷೆರ್ಜೋ ವಾಲೆ, ಎವ್ವಿವಾ, ಎವ್ವಿವಾ ಇಲ್‌ ಕಾರ್ನೆವಾಲೆ ! ಎ ಕಾರ್ನೆವಾಲೆ, ಆಗ್ನಿ ಷೆರ್ಜೋ ವಾಲೆ ಎವ್ವಿವಾ, ಎವ್ವಿವಾ ಇಲ್‌ ಕಾರ್ನೆವಾಲೆ! ಕ್ಯಾಂಟಿಯಂ , ಬಾಲ್ಲಿಯಾಮೊ ಎ ಕಾರ್ನೆವಾಲೆ, ಮಾ.... ಡೊಮನಿ ಎ ಸ್ಕುವೊಲಾ (ಪರ್ಟ್ರೊಪ್ಪೋ) ಸಿ ಡೆವೆ ಅಂಡರೆ ಎ ಸ್ಟುಡಿಯರೆ... A ಕಾರ್ನೆವಾಲೆ, ಆಗ್ನಿ ಷೆರ್ಜೋ ವಾಲೆ ಎವ್ವಿವಾ, ಎವ್ವಿವಾ ಇಲ್‌ ಕಾರ್ನೆವಾಲೆ!'

ಮಿಲನ್‌ನಲ್ಲಿ ಮರ್ಡಿ ಗ್ರಾಸ್‌‌ ದಿನವು ಕಾರ್ನೀವಲ್‌ನ ಅಂತ್ಯದ ದಿನವಾಗಿರುವುದಿಲ್ಲ, ಏಕೆಂದರೆ ಕಾರ್ನೀವಲ್‌ ಆಂಬ್ರೋಸಿಯನ್‌ ಧಾರ್ಮಿಕ ವಿಧಿಯ ಆಚರಣೆಯಿಂದಾಗಿ ಬೂದಿ ಬುಧವಾರದ ನಂತರದ ಶನಿವಾರದಂದು ಕೊನೆಗೊಳ್ಳುವ ಹಾಗೆ ಹೆಚ್ಚುವರಿ ನಾಲ್ಕು ದಿನಗಳ ನಡೆಯುತ್ತದೆ. ಹಾಗಾಗಿ ಕಾರ್ನೀವಲ್‌ನ ಕೊನೆಯ ದಿನ, "ಸಬಾಟೊ ಗ್ರಾಸ್ಸೋ" (ಪಾಪ ವಿಮೋಚನ ಅಥವಾ ಫ್ಯಾಟ್‌‌ ಶನಿವಾರ) ಆಗಿರುತ್ತದೆ.

ಇಟಲಿಯಲ್ಲಿ ನಡೆಯುವ ಬಹು ಪ್ರಸಿದ್ಧ ಕಾರ್ನೀವಲ್‌ಗಳೆಂದರೆ ವೆನಿಸ್‌, ವಿಯಾರೆಜ್ಜಿಯೋ, ಇವ್ರಿಯಾ, ಸೆಂಟೋ, ಪುಟಿಗ್ನಾನೋ, ಬಾರ್ಡಿಘೆರಾಗಳಲ್ಲಿ ನಡೆಯುವಂತಹವು ಹಾಗೂ ಒರಿಸ್ಟಾನೋದ "ಸಾರ್ಟಿಗ್ಲಿಯಾ".

ವೆನಿಸ್‌[ಬದಲಾಯಿಸಿ]

ಕಾರ್ನೀವಲ್‌ ಮುಖವಾಡಗಳನ್ನು ಹೊಂದಿರುವ ವೆನಿಸ್‌ನ ಅಂಗಡಿ

ವಿಶ್ವದಲ್ಲೇ ಅತ್ಯಂತ ಹಳೆಯದಾಗುವುದರೊಂದಿಗೆ ಬಹು ಪ್ರಸಿದ್ಧವೂ ಆದ ಕಾರ್ನೀವಲ್‌ ಸಂಭ್ರಮಾಚರಣೆಗಳು/ಆಚರಣೆಗಳಿಗೆ ವೆನಿಸ್‌ ನೆಲೆಯಾಗಿದೆ. ವೆನಿಸ್‌ನ ಕಾರ್ನೀವಲ್‌ (ಅಥವಾ ಇಟಾಲಿಯನ್‌ ಭಾಷೆಯಲ್ಲಿ ಕಾರ್ನೆವಾಲೆ ಡಿ ವೆನೆಝಿಯಾ )ನ ಬಗ್ಗೆ ೧೨೬೮ರಲ್ಲಿ ಮೊದಲು ದಾಖಲಾಗಿದೆ. ಈ ಹಬ್ಬ ಅಥವಾ ಉತ್ಸವದ ವಿಧ್ವಂಸಕ ಪ್ರಕೃತಿಯು ಶತಮಾನಗಳ ಕಾಲದ ರಚನೆಯಾದ ಸಂಭ್ರಮಾಚರಣೆಗಳು/ಆಚರಣೆಗಳನ್ನು ನಿಯಂತ್ರಣಕ್ಕೆ ಯತ್ನಿಸಿದ ಹಾಗೂ ಅನೇಕ ವೇಳೆ ಮುಖವಾಡಗಳನ್ನು ಧರಿಸುವುದನ್ನು ಪ್ರತಿಬಂಧಿಸಿ ರಚಿಸಿದ ಅನೇಕ ಕಾನೂನುಗಳ ಮೂಲಕ ತಿಳಿದುಬರುತ್ತದೆ.

ಮುಖವಾಡಗಳು ಯಾವಾಗಲೂ ವೆನಿಸ್‌ನ ಕಾರ್ನೀವಲ್‌ನ ಪ್ರಮುಖ ಆಕರ್ಷಣೆಯಾಗಿರುತ್ತಿದ್ದವು; ಸಾಂಪ್ರದಾಯಿಕವಾಗಿ ಸ್ಯಾಂಟೋ ಸ್ಟೆಫಾನೊ ಹಬ್ಬದ ನಡುವಿನ ಅವಧಿಯಲ್ಲಿ ಜನರು ಇವನ್ನು ಧರಿಸಲು ಅನುಮತಿಸಲಾಗುತ್ತಿತ್ತು (ಕಾರ್ನೀವಲ್‌ ಋತುವಿನ ಆರಂಭದಲ್ಲಿನ St. ಸ್ಟೀಫನ್‌ರ ದಿನದಿಂದ ಪಾಪ ವಿಮೋಚನ ಮಂಗಳವಾರದ ಮಧ್ಯರಾತ್ರಿಯ ನಡುವೆ). ಸ್ವರ್ಗಾವರೋಹಣದ ಸಮಯದಲ್ಲಿ ಹಾಗೂ ಅಕ್ಟೋಬರ್‌‌ ೫ರಿಂದ ಕ್ರಿಸ್‌ಮಸ್‌ವರೆಗಿನ ಅವಧಿಯಲ್ಲಿ ಕೂಡಾ ಮುಖವಾಡಗಳಿಗೆ ಅನುಮತಿ ಇದ್ದುದರಿಂದ, ಜನರು ವರ್ಷದ ಬಹುಭಾಗವನ್ನು ಛದ್ಮವೇಷಗಳಲ್ಲಿ ಇದ್ದುಕೊಂಡು ತಮ್ಮ ನಡವಳಿಕೆಗಳು ಗೊತ್ತಾಗದಿರುವಂತೆ ಕಳೆಯಬಹುದಾಗಿತ್ತು.[೧೭].

ಮುಖವಾಡ ತಯಾರಕರು (ಮಾಸ್ಚೆರಾರಿ ) ತಮ್ಮದೇ ಆದ ಕಾನೂನುಗಳು ಹಾಗೂ ಸ್ವಂತ ಸಮಾನೋದ್ದೇಶ ಸಂಘಗಳಿಂದಾಗಿ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದರು. ವೆನಿಸ್‌ ನಗರವು ೧೭೯೭ರಲ್ಲಿ ನೆಪೋಲಿಯನ್‌ ಕ್ಯಾಂಪೋ ಫಾರ್ಮಿಯೋದ ಒಪ್ಪಂದಕ್ಕೆ ಸಹಿ ಹಾಕಿದಾಗ ಆಸ್ಟ್ರಿಯನ್‌ ಸ್ವಾಮ್ಯದ ಲಾಂಬಾರ್ಡಿ-ವೆನೆಷಿಯಾ ಸಾಮ್ರಾಜ್ಯದ ಭಾಗವಾಯಿತು. ಜನವರಿ ೧೮, ೧೭೯೮ರಂದು ಆಸ್ಟ್ರಿಯನ್ನರು, ನಗರದ ನಿಯಂತ್ರಣವನ್ನು ಪಡೆದುಕೊಂಡಾಗ ಇದು ಇಳಿಮುಖಗೊಂಡುದರ ಪರಿಣಾಮವಾಗಿ ಕಾರ್ನೀವಲ್‌ ಸಂಭ್ರಮಾಚರಣೆಗಳು/ಆಚರಣೆಗಳು ಬಹುತೇಕ ಎರಡು ಶತಮಾನಗಳ ಕಾಲ ನಿಂತುಹೋದವು. ಕಾರ್ನೀವಲ್‌ ಅನ್ನು ೧೯೩೦ರ ಹಾಗೂ ೧೯೪೦ರ ದಶಕಗಳಲ್ಲಿ ಬೆನಿಟೊ ಮುಸ್ಸೋಲಿನಿ'ಯ ಫ್ಯಾಸಿಸ್ಟ್‌ ಸರಕಾರ ನಿಷೇಧಿಸಿತ್ತು. ೧೯೮೦ರ ದಶಕದಲ್ಲಿ ಆಧುನಿಕ ಮುಖವಾಡ ಅಂಗಡಿಗಳ ಸ್ಥಾಪನೆಯು ವೆನಿಸ್‌ನಲ್ಲಿ ಕಾರ್ನೀವಲ್‌ನ ಪುನರುತ್ಥಾನಕ್ಕೆ ಕಾರಣವಾಯಿತು.[೧೮]

ನೆದರ್ಲೆಂಡ್ಸ್‌[ಬದಲಾಯಿಸಿ]

ನೆದರ್‌ಲೆಂಡ್ಸ್‌ ಕೂಡಾ ಮರ್ಡಿ ಗ್ರಾಸ್‌‌ಗೆ ಸದೃಶವಾದ ಉತ್ಸವ/ಹಬ್ಬವೊಂದನ್ನು ಹೊಂದಿದೆ. ಇದನ್ನು ಕಾರ್ನವಾಲ್‌ ಎಂದು ಕರೆಯಾಗುತ್ತದಲ್ಲದೇ ವೆನಿಸ್‌ನ ಕಾರ್ನೀವಲ್‌ಗೆ ಸದೃಶವಾಗಿರುತ್ತದೆ. ಕಾರ್ನವಾಲ್‌ ಪದದ ಅರ್ಥ 'ಕಾರ್ನೆ ವಾಲೆ' ಎಂದು ಲ್ಯಾಟಿನ್‌ನಲ್ಲಿ ಹೀಗೆಂದರೆ ಮಾಂಸಕ್ಕೆ ವಿದಾಯ ಎಂದರ್ಥ. ಇದು ಈಸ್ಟರ್‌ನಲ್ಲಿ ಕೊನೆಗೊಳ್ಳುವ ಪವಿತ್ರ ಅವಧಿಯ ಆರಂಭವನ್ನು ಸೂಚಿಸುತ್ತದೆ.

ವಾಸ್ತವ ಉತ್ಸವಾಚರಣೆಯನ್ನು ನೆದರ್‌ಲೆಂಡ್ಸ್‌ನ ದಕ್ಷಿಣದ ಪ್ರಾಂತ್ಯಗಳಲ್ಲಿ ನಡೆಸಲಾಗುತ್ತಿದ್ದು, ಅವುಗಳ ಹೆಸರು ಲಿಂಬರ್ಗ್‌‌ & ನೂರ್ಡ್‌-ಬ್ರಾಬಂಟ್‌ ಎಂಬುದಾಗಿದೆ.

ಪನಾಮ[ಬದಲಾಯಿಸಿ]

ಕಾರ್ನೀವಲ್‌ಅನ್ನು ಲಾಸ್‌‌ ಟಬ್ಲಾಸ್‌, ಒಕು,ಚಿಟ್ರೆ, ಪೆನೆನೊಮೆ ಹಾಗೂ ಪನಾಮಾ ನಗರಗಳಂತಹಾ ಅನೇಕ ಪನಾಮಾದ ನಗರಗಳಲ್ಲಿ ಆಚರಿಸಲಾಗುತ್ತದೆ. ಈ ರಾಷ್ಟ್ರದಲ್ಲಿ ಕಾರ್ನೀವಲ್‌ಅನ್ನು ಪ್ರಮುಖವಾಗಿ ನೀರಿನ ಟ್ರಕ್‌ಗಳು ಹಾಗೂ ನೀರ್ಕೊಳವಿಗಳಿಂದ ಜನರನ್ನು ನೆನೆಸುವ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಸಂಭ್ರಮಾಚರಣೆಗಳು/ಆಚರಣೆಗಳು ಸಾಧಾರಣವಾಗಿ ನಾಲ್ಕು-ದಿನಗಳ ರಜಾ ವಾರಾಂತ್ಯದ ಕಾಲ ನಡೆಯುವುದು ವಾಡಿಕೆಯಾಗಿದೆ.

ಸ್ಪೇನ್‌[ಬದಲಾಯಿಸಿ]

ಸ್ಪೇನ್‌ನಲ್ಲಿ ಇದನ್ನು ಕಾರ್ನವಾಲ್‌ ಎಂದು ಕರೆಯಲಾಗುತ್ತದೆ. ಸ್ಪೇನ್‌ನಲ್ಲಿ ಕಾರ್ನವಾಲ್‌ ಡೆ ಕ್ಯಾಡಿಜ್‌ನ ನಂತರ ಸಾಂತಾ ಕ್ರೂಜ್‌ ಡೆ ಟೆನೆರೈಫ್‌ನಲ್ಲಿ ನಡೆಯುವ ಕಾರ್ನೀವಲ್‌ ಎರಡನೇ ಅತಿ ಹೆಚ್ಚು ಜನಮನ್ನಣೆ ಪಡೆದ ಕಾರ್ನೀವಲ್‌ ಆಗಿದೆ. ಸಾಧಾರಣವಾಗಿ ಇವನ್ನು ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುವುದಲ್ಲದೇ ಕ್ಯಾಥೊಲಿಕ್‌ ಮರ್ಡಿ ಗ್ರಾಸ್‌‌ ನ ಪವಿತ್ರ/ರಜಾದಿನಗಳು ಹಾಗೂ ಬೂದಿ ಬುಧವಾರದೊಂದಿಗೆ ಇದನ್ನು ತಳುಕು ಹಾಕಲಾಗುತ್ತದೆ. ಟೆನೆರೈಫ್‌ನಲ್ಲಿ ಎರಡು ವಾರಗಳ ಕಾಲ ಮುರ್ಗಾಸ್‌ ಆಚರಣೆಯು ನಡೆಯುತ್ತದಲ್ಲದೇ ಬರ್ಲೆಸ್ಕ್‌ ಗೀತೆಗಳನ್ನು ಆಗ ಹಾಡಲಾಗುತ್ತದಲ್ಲದೇ ಇದೇ ಸಮಯದಲ್ಲಿ ಕಾರ್ನೀವಲ್‌ನ ರಾಣಿಯನ್ನು ಕೂಡಾ ಆಯ್ಕೆ ಮಾಡಲಾಗುತ್ತದೆ. ಕ್ಯಾಡಿಜ್‌ನಲ್ಲಿ, ಬೀದಿಸಂಗೀತಗಾರರು, ಕಂಪಾರ್ಸಾಗಳು ಹಾಗೂ ಕಾರ್ನೀವಲ್‌ ನ ಬೃಹತ್‌ ಟಿಯಾಟ್ರೋ ಫಾಲ್ಲಾದಲ್ಲಿ ಅತಿ ಹೆಚ್ಚು ಬೆಲೆ ಸಿಗುವ ಹಾಗೆ ಇಡೀ ವರ್ಷ ತಮ್ಮ ಗೀತೆಗಳು ಹಾಗೂ ಸಂಗೀತದ ತಯಾರಿಯಲ್ಲಿ ಮುಳುವ ಚಿರಿಗೋಟಾಗಳ ನ್ನು ಕಾರ್ನೀವಲ್‌ ಹೊಂದಿರುತ್ತದೆ.

ಸ್ವೀಡನ್‌[ಬದಲಾಯಿಸಿ]

ಸ್ವೀಡನ್‌ನಲ್ಲಿ ಈ ಆಚರಣೆಯನ್ನು ಫೆಟ್ಟಿಸ್‌ಡಾಗೆನ್‌ ಎಂದು ಕರೆಯಲಾಗುತ್ತದೆ. ಈ ಪದವು "ಫೆಟ್ಟ್‌‌‌" (ಕೊಬ್ಬು/ಮೇದಸ್ಸು) ಹಾಗೂ "ಟಿಸ್‌ಡಾಗ್‌"(ಮಂಗಳವಾರ) ಪದಗಳಿಂದ ವ್ಯುತ್ಪನ್ನಗೊಂಡಿದೆ. ಮೂಲತಃ, ಇದೊಂದೇ ಸೆಮ್ಲರ್‌ಗಳನ್ನು(ತೆಳುವಾದ ಮಂಗಳವಾರ ಬನ್‌ಗಳು) ತಿನ್ನಬಹುದಾದ ಏಕೈಕ ದಿನವಾಗಿದೆ. ಇವುಗಳನ್ನು ಈಗ ಈ ಸಮಯದ ಹಿಂದಿನ ರಜಾದಿನದಿಂದ ಈಸ್ಟರ್‌ನವರೆಗೆ ಬಹುತೇಕ ದಿನಸಿ ಅಂಗಡಿಗಳಲ್ಲಿ ಹಾಗೂ ಬೇಕರಿಗಳಲ್ಲಿ ಮಾರಾಟಕ್ಕಿಡಲಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್[ಬದಲಾಯಿಸಿ]

ಫ್ರೆಂಚ್‌‌ ವಿಭಾಗ, ನ್ಯೂ ಅರ್ಲಿಯಾನ್ಸ್‌, ಲೂಸಿಯಾನಾದಲ್ಲಿನ ಮರ್ಡಿ ಗ್ರಾಸ್‌‌ನ 2009ರ ಸಂಭ್ರಮಾಚರಣೆಗಳು/ಆಚರಣೆಗಳು USA (ಡೆಕಾಟೆರ್‌ ರಸ್ತೆಯ ಮಾಲ್ಲಿಸ್‌ ಪಬ್‌ನ ಹೊರಗೆ ತೆಗೆದಿರುವ ಚಿತ್ರಗಳು)

ಯುನೈಟೆಡ್‌‌ ಸ್ಟೇಟ್ಸ್‌ನುದ್ದಕ್ಕೂ ರಾಷ್ಟ್ರೀಯವಾಗಿ ಆಚರಿಸದೇ ಹೋದರೂ, ಸಾಕಷ್ಟು ಸಂಖ್ಯೆಯ ದೇಶದಲ್ಲಿ ಸಾಂಪ್ರದಾಯಿಕವಾಗಿ ಫ್ರೆಂಚ್‌‌ ಜನಾಂಗೀಯರಿರುವ ನಗರಗಳ ಹಾಗೂ ಪ್ರದೇಶಗಳಲ್ಲಿ ಗಮನಾರ್ಹವಾಗಿ ಸಂಭ್ರಮಾಚರಣೆಗಳು/ಆಚರಣೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ೧೭ನೇ ಶತಮಾನದ ಕೊನೆಭಾಗದಲ್ಲಿ ಈಗಿನ U.S.ನ ಅಲಬಾಮಾ, ಮಿಸ್ಸಿಸಿಪ್ಪಿ, ಹಾಗೂ ಲೂಸಿಯಾನಾ ರಾಜ್ಯಗಳನ್ನೊಳಗೊಂಡ ಲೂಸಿಯಾನೆ ಪ್ರಾಂತ್ಯದ ಮೇಲಿನ ಫ್ರಾನ್ಸ್‌‌‌'ನ ಸ್ವಾಮ್ಯವನ್ನು ಕಾಪಾಡಿಕೊಳ್ಳಲು ಮಹಾರಾಜ ಲೂಯಿಸ್‌ XIV ಪಿಯೆರ್ರೆ ಲೆ ಮೊಯ್ನೆ d'ಇಬರ್‌ವಿಲ್ಲೆ ಹಾಗೂ ಜೀನ್‌-ಬಾಪ್ಟಿಸ್ಟೆ ಲೆ ಮೊಯ್ನೆ ಡೆ ಬಿಯೆನ್‌ವಿಲ್ಲೆ ಎಂಬ ಸಹೋದರರನ್ನು ಕಳಿಸಿದಾಗ ಉತ್ತರ ಅಮೇರಿಕಾಗೆ ಮರ್ಡಿ ಗ್ರಾಸ್‌‌ ಫ್ರೆಂಚ್‌‌ ಕ್ಯಾಥೊಲಿಕ್‌ ಸಂಪ್ರದಾಯವಾಗಿ ಲೆ ಮೊಯ್ನೆ ಸಹೋದರರ,[೧೯] ಮೂಲಕ ಪ್ರವೇಶಿಸಿತ್ತು.[೧೯]

ಇಬರ್‌ವಿಲ್ಲೆ ನೇತೃತ್ವದ ದಂಡಯಾತ್ರೆಯು ಮಿಸ್ಸಿಸಿಪ್ಪಿ ನದೀಮುಖದಲ್ಲಿರುವ ಲುಂಡಿ ಗ್ರಾಸ್‌ ಪ್ರದೇಶವನ್ನು ಮಾರ್ಚ್‌ ೨, ೧೬೯೯ರ ಸಂಜೆಗೆ ಪ್ರವೇಶಿಸಿತು. ೧೬೮೩ರಲ್ಲಿ ರೆನೆ-ರಾಬರ್ಟ್‌ ಕ್ಯಾವೆಲಿಯರ್‌, ಸಿಯುರ್‌ ಡೆ ಲಾ ಸಾಲ್ಲೆರಿಂದ ವಶಪಡಿಸಿಕೊಂಡು ಫ್ರಾನ್ಸ್‌‌‌ಗೆ ಈಗಾಗಲೇ ಸೇರಿದೆಯೆಂದು ಅವರಿಗೆ ಇನ್ನೂ ಗೊತ್ತಿರಲಿಲ್ಲ. ತಂಡವು ನದಿಯಲ್ಲಿ ೬೦ ಮೈಲುಗಳಷ್ಟು ದೂರ ಕೆಳಗೆ ಪ್ರವಾಹಕ್ಕೆ ವಿರುದ್ಧ ದಿಕ್ಕಿನಲ್ಲಿ ನದಿಯ ಪಶ್ಚಿಮ ದಂಡೆಯಲ್ಲಿರುವ ಈಗ ನ್ಯೂ ಅರ್ಲಿಯಾನ್ಸ್‌ ಎಂದು ಕರೆಸಿಕೊಳ್ಳುವ ಸ್ಥಳದಲ್ಲಿ ಮೊಕ್ಕಾಂ ಹೂಡಿದರು. ಇದು ನಡೆದಿದ್ದು ಮಾರ್ಚ್‌ ೩, ೧೬೯೯ರ, ಮರ್ಡಿ ಗ್ರಾಸ್‌‌ನ ದಿನದಂದು, ಹಾಗಾಗಿ ಈ ಪವಿತ್ರ ದಿನದ ಸ್ಮರಣೆಗಾಗಿ, ಇಬರ್‌ವಿಲ್ಲೆ ಈ ಸ್ಥಳಕ್ಕೆ ಪಾಯಿಂಟ್‌ ಡು ಮರ್ಡಿ ಗ್ರಾಸ್‌ ‌ (ಫ್ರೆಂಚ್‌‌ : "ಮರ್ಡಿ ಗ್ರಾಸ್‌‌ ಪಾಯಿಂಟ್‌") ಎಂದೂ ಹಾಗೂ ಸಮೀಪದ ಉಪನದಿಯನ್ನು ಬೇಯೌ ಮರ್ಡಿ ಗ್ರಾಸ್‌‌ ಎಂದೂ ಕರೆದನು. ಬಿಯೆನ್‌ವಿಲ್ಲೆ ಇನ್ನೂ ಮುಂದುವರೆದು ಹೋಗಿ ೧೭೦೨ರಲ್ಲಿ ಫ್ರೆಂಚ್‌‌ ಲೂಸಿಯಾನಾದ ಮೊದಲ ರಾಜಧಾನಿಯಾದ ಮೊಬೈಲ್‌, ಅಲಬಾಮಾಗಳ ವಸಾಹತುಗಳನ್ನು ಕಂಡುಹಿಡಿದರು.[೨೦] ೧೭೦೩ರಲ್ಲಿ ಮೊಬೈಲ್‌ನಲ್ಲಿನ ಫ್ರೆಂಚ್‌‌ ವಸತಿದಾರರು ಮರ್ಡಿ ಗ್ರಾಸ್‌‌ ಆಚರಣೆಯ ಪರಂಪರೆಗೆ ನಾಂದಿ ಹಾಡಿದರು.[೧೯][೨೧][೨೨] ೧೭೨೦ರ ಹೊತ್ತಿಗೆ, ಬೈಲಾಕ್ಸಿಯನ್ನು ಲೂಸಿಯಾನಾದ ರಾಜಧಾನಿಯನ್ನಾಗಿ ಮಾಡಲಾಯಿತು. ಫ್ರೆಂಚ್‌‌ ಧಾರ್ಮಿಕ ವಿಧಿಗಳನ್ನು ಅಲ್ಲಿ ವಾಸಿಸುತ್ತಿರುವ ವಸತಿದಾರರ ಮೇಲೆ ಆಗಲೇ ಹೇರಲಾಗಿತ್ತು.[೧೯]

೧೭೨೩ರಲ್ಲಿ, ಲೂಸಿಯಾನಾದ ರಾಜಧಾನಿಯನ್ನು ೧೭೧೮ರಲ್ಲಿ ಕಂಡುಹಿಡಿಯಲಾದ ನ್ಯೂ ಅರ್ಲಿಯಾನ್ಸ್‌ಗೆ ಸ್ಥಳಾಂತರಿಸಲಾಯಿತು.[೨೦] ಈ ಪರಂಪರೆಯು ಎಷ್ಟರಮಟ್ಟಿಗೆ ವಿಸ್ತರಿಸಿದೆಯೆಂದರೆ ಫ್ರೆಂಚ್‌‌ ಅಥವಾ ಕ್ಯಾಥೊಲಿಕ್‌ ಪರಂಪರೆಗಿಂತ ಹೆಚ್ಚಾಗಿ ನ್ಯೂ ಅರ್ಲಿಯಾನ್ಸ್‌ನ ನಿವಾಸಿಗಳು ಆದರದಿಂದ ಸ್ವೀಕರಿಸಿರುವ ಮಟ್ಟಿಗೆ ಜನಪ್ರಿಯ ಕಾಣ್ಕೆಯಲ್ಲಿ ನಗರದೊಂದಿಗೆ ಬೆಸೆದುಕೊಂಡಿದೆ. ಮರ್ಡಿ ಗ್ರಾಸ್‌‌ ಸಂಭ್ರಮಾಚರಣೆಗಳು/ಆಚರಣೆಗಳು ಲೈಸೆಜ್‌ ಲೆಸ್‌ ಬಾನ್‌ ಟೆಂಪ್ಸ್‌ ರೌಲರ್ ‌‌, (ಉತ್ತಮ ಕಾಲವು ಬರಲಿ) ಎಂಬ ಘೋಷವಾಕ್ಯ ಹಾಗೂ "ಬಿಗ್‌ ಈಸಿ" ಎಂಬ ಅಡ್ಡ ಹೆಸರುಗಳಿಗೆ ಮೂಲವಾಗಿವೆ.[೧೯] ನ್ಯೂ ಫ್ರಾನ್ಸ್‌‌‌ನ ಪೂರ್ವ ರಾಜಧಾನಿಯಾಗಿದ್ದ ಮೊಬೈಲ್‌, ಅಲಬಾಮಾ ಕೂಡಾ ಮರ್ಡಿ ಗ್ರಾಸ್‌‌ಅನ್ನು ಆಚರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿವೆ. ಫ್ಲಾರಿಡಾದ ಪೆನ್ಸಾಕೋಲಾ ಹಾಗೂ ಅದರ ಉಪನಗರಗಳಿಂದ ಹಿಡಿದು ಲೂಸಿಯಾನಾದ ಲಾಪಾಯೆಟ್ಟೆವರೆಗಿನ ಹಿಂದೆ ಫ್ರೆಂಚರಿಂದ ಆಕ್ರಮಿಸಲ್ಪಟ್ಟು ಆಳಲ್ಪಟ್ಟಿದ್ದ ಕೊಲ್ಲಿ ಕರಾವಳಿಯ/ಗಲ್ಫ್‌ ಕೋಸ್ಟ್‌‌ನುದ್ದಕ್ಕೂ ಇರುವ ಇತರೆ ನಗರಗಳಲ್ಲಿ ಮರ್ಡಿ ಗ್ರಾಸ್‌‌ ಸಂಭ್ರಮಾಚರಣೆಗಳು/ಆಚರಣೆಗಳು ಸಕ್ರಿಯವಾಗಿ ನಡೆಯುತ್ತವೆ. ಗ್ರಾಮೀಣ/ರುವಾಲ್‌ ಅಕಾಡಿಯಾನಾ ಪ್ರದೇಶದಲ್ಲಿ, ಅನೇಕ ಕಾಜುನ್‌ಗಳು ಕೂರಿರ್‌ ಡೆ ಮರ್ಡಿ ಗ್ರಾಸ್‌ ಎಂಬ, ಫ್ರಾನ್ಸ್‌‌‌ನಲ್ಲಿನ ಮಧ್ಯಯುಗೀಯ ಅವಧಿಯ ಸಂಭ್ರಮಾಚರಣೆಗಳು/ಆಚರಣೆಗಳಷ್ಟು ಹಿಂದಿನ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ.[೨೩] ತೀರಾ ಇತ್ತೀಚಿನ ಅವಧಿಯಲ್ಲಿ ಫ್ರೆಂಚ್‌‌ ಪರಂಪರೆಯ ಹಿನ್ನೆಲೆಯಿಲ್ಲದ ಅನೇಕ ಇತರೆ U.S. ನಗರಗಳು ಕೂಡಾ ಒಂದು ವಿಧದ ಮರ್ಡಿ ಗ್ರಾಸ್‌‌ ಆಚರಣೆಯನ್ನು ಹಮ್ಮಿಕೊಳ್ಳುತ್ತಿವೆ; ಉದಾಹರಣೆಗೆ, ಟೆಕ್ಸಾಸ್‌ನ ಲಾರೆಡೊನಲ್ಲಿ ಜನವರಿಯ ಕೊನೆಯಲ್ಲಿ ನಡೆಸಲಾಗುವ UETA ಜಂಬೂಜೀ ಉತ್ಸವ.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ೧.೦ ೧.೧ ಆಸ್ಟ್ರೇಲಿಯಾದಲ್ಲಿ, ಮರ್ಡಿ ಗ್ರಾಸ್‌‌ ಋತು: "NSW: ಮರ್ಡಿ ಗ್ರಾಸ್‌‌ ಈಗಲೂ ಚಾಲನೆಯಲ್ಲಿ ಹಾಗೂ ಉತ್ತಮ ಸ್ಥಿತಿಯಲ್ಲಿದೆ, ಎಂದು ಆಯೋಜಕರು ಹೇಳುತ್ತಾರೆ", encyclopedia.com, ೨೦೦೩, ಜಾಲಪುಟ: ency-596.
  2. ೨.೦ ೨.೧ ಲಂಡನ್‌ನಲ್ಲಿ, ಮರ್ಡಿ ಗ್ರಾಸ್‌‌ ಋತು: "ಪಾಲ್ಸ್‌ ಪೇಸ್ಟ್ರಿ ಷಾಪ್‌ ನೀಡ್ಸ್‌ ಎ ಟನ್‌ ಆಫ್‌ ಡಫ್‌ ಇನ್‌ ಪಿಕಾಯುನೆ", Allbusiness.com, ೨೦೦೮, ಜಾಲಪುಟ: Allbusiness-35 Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ..
  3. ೩.೦ ೩.೧ ನ್ಯೂ ಅರ್ಲಿಯಾನ್ಸ್‌ನಲ್ಲಿ, ಮರ್ಡಿ ಗ್ರಾಸ್‌‌ ಋತು: "ಮರ್ಡಿ ಗ್ರಾಸ್‌‌ ಇನ್‌ ನ್ಯೂ ಅರ್ಲಿಯಾನ್ಸ್‌ | Metro.co.uk", Metro.co.uk, ೨೦೦೯, ಜಾಲಪುಟ: Metro.co.uk-2315[ಶಾಶ್ವತವಾಗಿ ಮಡಿದ ಕೊಂಡಿ].
  4. ೪.೦ ೪.೧ ಮೊಬೈಲ್‌ ನಗರದಲ್ಲಿ, ಮರ್ಡಿ ಗ್ರಾಸ್‌‌ ಋತು: "ನ್ಯೂ ಅರ್ಲಿಯಾನ್ಸ್‌ ಹ್ಯಾಸ್‌ ಕಾಂಪೆಟಿಷನ್‌ ಫಾರ್‌ ಮರ್ಡಿ ಗ್ರಾಸ್‌‌", USATODAY.com, ಫೆಬ್ರವರಿ ೨೦೦೬, ಜಾಲಪುಟ: USATODAY-com-mardi Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ..
  5. ೫.೦ ೫.೧ ಸ್ಯಾನ್‌ ಡಿಯಾಗೋದಲ್ಲಿ, ಮರ್ಡಿ ಗ್ರಾಸ್‌‌ ಋತು: "sandiego.com - ಮರ್ಡಿ ಗ್ರಾಸ್‌‌ ಇನ್‌ ಸ್ಯಾನ್‌ ಡಿಯಾಗೋ : FAQ'ಗಳು", SanDiego.com, ೨೦೦೮, ಜಾಲಪುಟ: SanDiego.com-SD Archived 2009-02-02 ವೇಬ್ಯಾಕ್ ಮೆಷಿನ್ ನಲ್ಲಿ..
  6. ೬.೦ ೬.೧ ಟೆಕ್ಸಾಸ್‌ನಲ್ಲಿ, ಮರ್ಡಿ ಗ್ರಾಸ್‌‌ ಋತು: "ಲೆಟ್ಸ್‌ ಸೆಲೆಬ್ರೇಟ್‌ : ಮರ್ಡಿ ಗ್ರಾಸ್‌‌ ೨೦೦೮", Southernbyways.com, ಜನವರಿ ೨೦೦೮, ಜಾಲಪುಟ: southernbyways-com-TX Archived 2009-02-02 ವೇಬ್ಯಾಕ್ ಮೆಷಿನ್ ನಲ್ಲಿ..
  7. ೭.೦ ೭.೧ ೭.೨ ""Mardi Gras Terminology"". "Mobile Bay Convention & Visitors Bureau". Archived from the original on 2007-12-09. Retrieved 2007-11-18.
  8. ಲೆಂಟ್‌ ಋತು
  9. "ಮೊಬೈಲ್‌ ಕಾರ್ನೀವಲ್‌ ಅಸೋಸಿಯೇಷನ್‌, ೧೯೨೭", MardiGrasDigest.com, ೨೦೦೬, ಜಾಲಪುಟ: mardigrasdigest-Mobile Archived 2006-03-07 ವೇಬ್ಯಾಕ್ ಮೆಷಿನ್ ನಲ್ಲಿ..
  10. ಕಾರ್ನೀವಲ್‌ ಅರ್ಧ ದಶಲಕ್ಷದಷ್ಟು ಪ್ರವಾಸಿಗರನ್ನು ಆಕರ್ಷಿಸಿದೆ Archived 2010-02-24 ವೇಬ್ಯಾಕ್ ಮೆಷಿನ್ ನಲ್ಲಿ. (ಬಾಹಿಯಾಗೆ)
  11. ಗಾಲೊ ಡಾ ಮಡ್ರುಗಡದ ಆಚರಣೆಯು ರೆಸಿಫೆಗೆ ಒಂದು ದಶಲಕ್ಷ ಜನರನ್ನು ಕರೆತಂದಿದೆ (ಪರ್ನಾಂಬುಕೋ)
  12. ಬೋಲಾ ಪ್ರೆಟಾ ಆಚರಣೆಯು ರಿಯೋದ ರಸ್ತೆಗಳಿಗೆ ಒಂದು ದಶಲಕ್ಷ ಜನರನ್ನು ಕರೆತಂದಿದೆ (ರಿಯೋ ಡಿ ಜನೈರೋ)
  13. ಫ್ಲರ್ಟಿಂಗ್‌ ವಿತ್‌ ಮಾಂಟ್ರಿಯಲ್‌ - ದ ಗ್ಲೋಬ್‌ ಅಂಡ್‌ ಮೇಲ್‌[ಶಾಶ್ವತವಾಗಿ ಮಡಿದ ಕೊಂಡಿ]
  14. "Statistics", Quebec Winter Carnival (Carnaval de Québec), archived from the original on 2009-11-01, retrieved 2009-01-14
  15. ಹಿಸ್ಟಾಯಿರ್‌ ಎಟ್‌ ಟ್ರೆಡಿಷನ್‌ - ಕಾರ್ನವಾಲ್‌
  16. http://www.serve.com/shea/germusa/karneval.htm[ಶಾಶ್ವತವಾಗಿ ಮಡಿದ ಕೊಂಡಿ]
  17. "ಆರ್ಕೈವ್ ನಕಲು". Archived from the original on 2009-02-20. Retrieved 2021-08-10.
  18. "2008ರ ವೆನಿಸ್‌ ಕಾರ್ನೀವಲ್‌ /ಕಾರ್ನೆವಾಲೆ ವೆನಿಸ್‌". Archived from the original on 2010-06-10. Retrieved 2010-05-26.
  19. ೧೯.೦ ೧೯.೧ ೧೯.೨ ೧೯.೩ ೧೯.೪ "ನ್ಯೂ ಅರ್ಲಿಯಾನ್ಸ್‌ & ಮರ್ಡಿ ಗ್ರಾಸ್‌‌ ಇತಿಹಾಸದ ಘಟನಾವಳಿ" (ಸಂಗತಿಗಳ ಪಟ್ಟಿ), ಮರ್ಡಿ ಗ್ರಾಸ್‌‌ ಡೈಜೆಸ್ಟ್‌, ೨೦೦೫, ಜಾಲಪುಟ: MG-ಟೈಮ್‌/ಕಾಲ Archived 2010-11-24 ವೇಬ್ಯಾಕ್ ಮೆಷಿನ್ ನಲ್ಲಿ..
  20. ೨೦.೦ ೨೦.೧ "ಟೈಮ್‌ಲೈನ್‌ ೧೮ತ್‌ ಸೆಂಚುರಿ:" (ಸಂಗತಿಗಳು), ಟೈಮ್‌ಲೈನ್ಸ್‌ ಆಫ್‌ ಹಿಸ್ಟರಿ, ೨೦೦೭, ಜಾಲಪುಟ: TLine-1700-1724 Archived 2010-07-01 ವೇಬ್ಯಾಕ್ ಮೆಷಿನ್ ನಲ್ಲಿ.: ಮೊಬೈಲ್‌ನ "೧೭೦೨-೧೭೧೧"ರಲ್ಲಿ.
  21. "ಮರ್ಡಿ ಗ್ರಾಸ್‌‌ ಇನ್‌ ಮೊಬೈಲ್‌ " (ಇತಿಹಾಸ), ಜೆಫ್‌ ಸೆಷನ್ಸ್‌, ಸೆನೆಟರ್‌‌, ಲೈಬ್ರರಿ ಆಫ್‌ ಕಾಂಗ್ರೆಸ್‌‌, ೨೦೦೬, ಜಾಲಪುಟ: LibCongress-2665.
  22. "ಮರ್ಡಿ ಗ್ರಾಸ್‌‌" (ಇತಿಹಾಸ), ಮೊಬೈಲ್‌ ಬೇ ಕನ್‌ವೆನ್ಷನ್‌ & ವಿಸಿಟರ್ಸ್‌‌ ಬ್ಯೂರೋ, ೨೦೦೭, ಜಾಲಪುಟ: MGಮೊಬೈಲ್‌.
  23. "Mardi Gras in Rural Acadiana". Archived from the original on 2010-01-20. Retrieved 2010-05-26. {{cite web}}: Unknown parameter |accessed= ignored (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]