ಮಂದೀಪ್ ಸಿಂಗ್

ವಿಕಿಪೀಡಿಯ ಇಂದ
Jump to navigation Jump to search

ಮಂದೀಪ್ ಸಿಂಗ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಮದ್ಯಮ ವೇಗದ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡಕ್ಕೆ ಆಡುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಮಂದೀಪ್ ರವರು ದಶಂಬರ ೦೧೮, ೧೯೯೧ರಂದು ಜಲಂಧರ್, ಪಂಜಾಬ್‌‌‍ನಲ್ಲಿ ಜನಿಸಿದರು. ಇವರು ೨೦೧೦ರಲ್ಲಿ ಭಾರತೀಯ ೧೯ರ ವಯೋಮಿತಿ ತಂಡದ ಪರವಾಗಿ ಅತೀ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರು. ನಂತರ ೨೦೧೦-೧೧ ರಣಜಿ ಟ್ರೋಫೀಯಲ್ಲಿ ಪಂಜಾಬ್‌‌‍ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು.[೧]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಮಾರ್ಚ್ ೨೨, ೨೦೧೦ರಂದು ಮುಂಬೈನಲ್ಲಿ ನಡೆದ ೧೭ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರಿಗೆ ಬ್ಯಾಟಿಂಗ್‍ಗೆ ಅವಕಾಶ ಲಭಿಸಲಿಲ್ಲ. ನಂತರ ಇವರು ಕಿಂಗ್ಸ್ ೧೧ ಪಂಜಾಬ್ ತಂಡಕ್ಕೆ ಸೇರಿಕೊಂಡರು. ೨೦೧೨ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರನಾಗಿ ಹೊರಹೊಮ್ಮಿದರು. ಅದೇ ವರ್ಷ ಇವರಿಗೆ ಟೂರ್ನಮೆಂಟ್‍ನ ರೈಸಿಂಗ್ ಸ್ಟಾರ್ ಎಂಬ ಪ್ರಶಸ್ತಿಯನ್ನು ಪಡೆದರು. ನಂತರ ಕೆಲ ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇವೆ ಸಲ್ಲಿಸಿದರು. ಈಗ ೨೦೧೯ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ [ಕಿಂಗ್ಸ್ ೧೧ ಪಂಜಾಬ್]] ತಂಡಕ್ಕೆ ಆಡುತ್ತಾರೆ.[೨][೩][೪][೫][೬]


ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜೂನ್ ೧೮, ೨೦೧೬ರಲ್ಲಿ ಹರಾರೆ, ಜಿಂಬಾಬ್ವೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ ಇವರು, ೨೭ ಎಸೆತಗಳ ಮೂಲಕ ಇವರು ೦೫ ಬೌಂಡರಿ ಸಹಿತ ೩೧ ರನ್ ಕಲೆ ಹಾಕಿದರು.[೭][೮]


ಪಂದ್ಯಗಳು[ಬದಲಾಯಿಸಿ]

 • ಟಿ-೨೦ ಕ್ರಿಕೆಟ್ : ೦೩ ಪಂದ್ಯಗಳು[೯]
 • ಐಪಿಎಲ್ ಕ್ರಿಕೆಟ್ : ೮೪ ಪಂದ್ಯಗಳು


ಅರ್ಧ ಶತಕಗಳು[ಬದಲಾಯಿಸಿ]

 1. ಟಿ-೨೦ ಪಂದ್ಯಗಳಲ್ಲಿ : ೦೧
 2. ಐಪಿಎಲ್ ಪಂದ್ಯಗಳಲ್ಲಿ : ೦೫

ಉಲ್ಲೇಖಗಳು[ಬದಲಾಯಿಸಿ]

 1. http://www.espncricinfo.com/india/content/player/398506.html
 2. https://www.cricbuzz.com/live-cricket-scorecard/10624/mumbai-indians-vs-kolkata-knight-riders-17th-match-indian-premier-league-2010
 3. https://www.cricbuzz.com/profiles/6319/mandeep-singh#/profile
 4. http://www.espncricinfo.com/indian-premier-league-2011/content/squad/495843.html
 5. https://www.royalchallengers.com/mandeep-singh
 6. https://www.ensuddi.com/blog/2018/10/28/ipl-cricket-swap-royal-challengers-bengaluru-players-mandeep-singh-marcus-stoinis-kxip/
 7. https://www.cricbuzz.com/live-cricket-scorecard/16610/zimbabwe-vs-india-1st-t20i-india-tour-of-zimbabwe-2016
 8. http://www.espncricinfo.com/series/10638/scorecard/1007655/zimbabwe-vs-india-1st-t20i-india-tour-of-zimbabwe-2016
 9. https://sports.ndtv.com/cricket/players/1429-mandeep-singh-playerprofile