ಭೀಮ್ ಸಿಂಗ್ (ಕ್ರೀಡಾಪಟು)
ಭೀಮ್ ಸಿಂಗ್ (ಜನನ ೧೩ ಏಪ್ರಿಲ್ ೧೯೪೫) ಅವರು ಒಬ್ಬ ಭಾರತೀಯ ಮಾಜಿ ಹೈಜಂಪರ್. ಅವರ ಹೆಸರಿನಲ್ಲಿ "ಹರಿಯಾಣದ ಅತ್ಯುನ್ನತ ಕ್ರೀಡಾ ಪ್ರಶಸ್ತಿ" ಭೀಮ್ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಈ ಬಹುಮಾನದಲ್ಲಿ 5 ಲಕ್ಷ ನೀಡಲಾಗುತ್ತದೆ.[೧]
ಜನನ
[ಬದಲಾಯಿಸಿ]ಭೀಮ್ ಸಿಂಗ್ ಅವರು ೧೩ ಏಪ್ರಿಲ್ ೧೯೪೫ ರಲ್ಲಿ ಹರಿಯಾಣದ ಭಿವಾನಿ ಜಿಲ್ಲೆಯ ಧನನಾ ಎಂಬ ಗ್ರಾಮದಲ್ಲಿ ಜನಿಸಿದರು.[೨] ಇವರು ಒಬ್ಬ ನಿವೃತ್ತ ಭಾರತೀಯ ಹೆವಿವೇಯ್ಟ್ ಫ್ರೀಸ್ಟೈಲ್ ಕುಸ್ತಿಪಟು ಮತ್ತು ಹೈಜಂಪರ್ ಆಗಿದ್ದರು.[೩] ಇವರು ಒಬ್ಬ ಭಾರತಿಯ ಹೈಜಂಪರ್ ಆಗಿದ್ದು ಅವರು ೧೯೬೮ ಬೇಸಿಗೆ ಒಲಂಪಿಕ್ಸ್ನಲ್ಲಿ ಸ್ಪರ್ಧಿಸಿದರು. ಹೈಜಂಪರ್ ಆದ ಭೀಮ್ ಸಿಂಗ್ ೨.೦ ಮೀಟರ್ ಎತ್ತರದಲ್ಲಿರುವ ಗುರುತನ್ನು ತಲಪುವ ಮೊದಲ ಭಾರತೀಯರಾಗಿದ್ದಾರೆ. ರಾಷ್ಟ್ರೀಯ ದಾಖಲೆಯನ್ನು ದಾಖಲಿಸಲು ೨.೦೯ ಮೀಟರ್ ಎತ್ತರವನ್ನು ತಲುಪಿದ್ದಾರೆ. ಒಂದು ದಶಕದ ತಮ್ಮ ವೃತ್ತಿಜೀವನದಲ್ಲಿ ಅವರು ಒಲಿಂಪಿಕ್ ಗೇಮ್ಸ್, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷಿಯನ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು.
ವೃತಿಜೀವನ
[ಬದಲಾಯಿಸಿ]ಭೀಮ್ ಸಿಂಗ್ ಅವರು ೧೯೬೬ ರಲ್ಲಿ ಜಮೈಕಾದ ಕಿಂಗ್ಸ್ಟನ್ನಲ್ಲಿ ನಡೆದ ೮ ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಅದೇ ವರ್ಷ ಅವರು ಬ್ಯಾಂಕಾಕ್‌ನಲ್ಲಿರುವ ೫ ನೇ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು "ಮೋಸ್ಟ್ ಕಾನ್ಫಿಡೆಂಟ್ ಅಥ್ಲೆಟ್ ಆಫ್ ದ ಗೇಮ್ಸ್" ಎಂಬ ಹೆಸರನ್ನು ಪಡೆದರು. ಸುಮಾರು ಒಂದು ದಶಕದ ವೃತ್ತಿಜೀವನದಲ್ಲಿ ಭೀಮ್ ಸಿಂಗ್ ಅವರು ಯುಎಸ್ಎಸ್ಆರ್, ಜರ್ಮನಿ, ಜೆಕೊಸ್ಲೊವಾಕಿಯಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಈ ಸ್ಥಳಗಳಲ್ಲಿ ನಡೆದ ಪಂದ್ಯಗಳಲೆಲ್ಲಾ ಅವರು ಯಾವಾಗಲೂ ಅಗ್ರ ಮೂರು ಸ್ಥಾನಗಳಲ್ಲೇ ಯಾವುದಾದರು ಒಂದು ಸ್ಥಾನವನ್ನು ಗಳಿಸುತ್ತಿದ್ದರು.
ಭೀಮ್ ಸಿಂಗ್ ಮೆಕ್ಸಿಕೊ ಒಲಿಂಪಿಕ್ಸ್ನಲ್ಲಿ (೧೯೬೮) ಭಾರತವನ್ನು ಪ್ರತಿನಿಧಿಸಿದರು. ಬ್ಯಾಂಕಾಕ್‌ನಲ್ಲಿ ನಡೆದ ೧೯೭೦ ರ ಏಷಿಯನ್ ಕ್ರೀಡಾಕೂಟದಲ್ಲಿ ಭೀಮ್ ಸಿಂಗ್ ಮೂರನೇ ಸ್ಥಾನವನ್ನು ಪಡೆದುಕೊಂಡರು. ನಾಲ್ಕು ವರ್ಷಗಳ ನಂತರ ಅದೇ ಸ್ಥಳದಲ್ಲಿ ಕಂಚಿನ ಪದಕ ಗೆದ್ದರು.
ಸಾಧಾನೆಗಳು
[ಬದಲಾಯಿಸಿ]ಭೀಮ್ ಸಿಂಗ್ ಅವರು ೧೯೬೩ ರಲ್ಲಿ ಸರ್ವೀಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ೧೯೬೪ ರಲ್ಲಿ ನಡೆದ ತನ್ನ ಮೊದಲ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಎರಡನೇ ಸ್ಥಾನವನ್ನು ಪಡೆದರು. ೧೯೬೫ ರಲ್ಲಿ ಬೆಂಗಳೂರಿನಲ್ಲಿ ಮುಂದಿನ ಆವೃತ್ತಿಯಲ್ಲಿ ೨.೦೧ ಮೀಟರ್ಗಳಷ್ಟು ತೆರವುಗಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ೨.೦೬ ಮೀಟರ್ ಅನ್ನು ತೆರವುಗೊಳಿಸಿದರು ಮತ್ತು ನಾಲ್ಕನೇ ಸ್ಥಾನವನ್ನು ಗಳಿಸಿದರು. ಅವರು ೧೯೬೯- ೭೦ ರಲ್ಲಿ ಅತ್ಯುತ್ತಮ ಸೇವೆಗಳ ವಿಜೇತ ಕ್ರೀಡಾಪಟು ಎಂಬ ಪ್ರಶಸ್ತಿಯನ್ನು ಪಡೆದರು. ೧೯೬೭ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಅವರು ತರಬೇತಿಯನ್ನು ನೀಡುತ್ತೆದ್ದರು. ಅವರು ಸೇವ ಮತ್ತು ರಾಷ್ಟ್ರೀಯ ತಂಡಗಳೆರಡಕ್ಕೂ ಹೈಜಂಪ್ ತರಬೇತುದಾರರಾಗಿದ್ದರು. ಸ್ವಲ್ಪ ಸಮಯದವರೆಗೆ ಕಿರಿಯ ಇಂಡಿಯನ್ ತಂಡಕ್ಕೆ ತರಬೇತಿ ನೀಡಿದರು. ನಂತರ ಅವರು ಹರಿಯಾಣದ ರಾಯನ್‌ನಲ್ಲಿ ಮೋತಿಲಾಲ್ ನೆಹರು ಸ್ಕೂಲ್ ಆಫ್ ಸ್ಪೋರ್ಟ್ಸ್ನನಲ್ಲಿ ಸಿಬ್ಬಂದಿಯಾಗಿ ಸೇರಿದರು.