ಭಾಗ್ ಮಿಲ್ಖಾ ಭಾಗ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾಗ್ ಮಿಲ್ಖಾ ಭಾಗ್
ನಿರ್ದೇಶನರಾಕೇಶ್ ಓಂಪ್ರಕಾಶ್ ಮೆಹ್ರಾ[೧][೨]
ನಿರ್ಮಾಪಕರಾಜೀವ್ ಟಂಡನ್
ರಾಘವ್ ಬೆಹೆಲ್
ಮೈತ್ರೇಯು ದಾಸ್‍ಗುಪ್ತಾ
ಮಾಧವ್ ರಾಯ್ ಕಪೂರ್
ರಚ್ವಿನ್ ನರೂಲಾ
ಶ್ಯಾಮ್ ಪಿ.ಎಸ್
ನವ್ಮೀತ್ ಸಿಂಗ್
ಪಿ. ಎಸ್. ಭಾರತಿ
ಲೇಖಕಪ್ರಸೂನ್ ಜೋಶಿ
ಆಧಾರಮಿಲ್ಖಾ ಸಿಂಗ್ ಮತ್ತು ಸೋನಿಯಾ ಸನ್ವಾಲ್ಕಾರ ದ ರೇಸ್ ಆಫ಼್ ಮೈ ಲೈಫ಼್
ಪಾತ್ರವರ್ಗಫ಼ರ್ಹಾನ್ ಅಖ್ತರ್
ಸೋನಮ್ ಕಪೂರ್
ದಿವ್ಯಾ ದತ್ತಾ
ಮೀಶಾ ಶಫ಼ಿ
ಪವನ್ ಮಲ್ಹೋತ್ರಾ
ಆರ್ಟ್ ಮಲಿಕ್
ಸಂಗೀತಶಂಕರ್-ಎಹಸಾನ್-ಲಾಯ್
ಛಾಯಾಗ್ರಹಣಬಿನೋದ್ ಪ್ರಧಾನ್
ಸಂಕಲನಪಿ. ಎಸ್. ಭಾರತಿ
ಸ್ಟುಡಿಯೋರಾಂಪ್ ಪಿಕ್ಚರ್ಸ್
ವಿತರಕರುವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು೧೨-೭-೨೦೧೩
ಅವಧಿ189 ನಿಮಿಷಗಳು[೩]
ದೇಶಭಾರತ
ಭಾಷೆಹಿಂದಿ ಮತ್ತು ಪಂಜಾಬಿ
ಬಂಡವಾಳ30 ಕೋಟಿ ರೂಪಾಯಿಗಳು[೪]
ಬಾಕ್ಸ್ ಆಫೀಸ್ರೂ. 164 ಕೋಟಿಗಳು[೫]

ಭಾಗ್ ಮಿಲ್ಖಾ ಭಾಗ್[೬] (ಅನುವಾದ: ಓಡು ಮಿಲ್ಖಾ ಓಡು) ೨೦೧೩ರ ಭಾರತೀಯ ಜೀವನಚಾರಿತ್ರಿಕ ಕ್ರೀಡಾ ನಾಟಕೀಯ ಚಲನಚಿತ್ರ. ಇದನ್ನು ಪ್ರಸೂನ್ ಜೋಶಿ ಬರೆದ ಸಾಹಿತ್ಯದಿಂದ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದರು. ಕಥೆಯು ರಾಷ್ಟ್ರೀಯ ಚ್ಯಾಂಪಿಯನ್ ಹಾಗೂ ಒಲಿಂಪಿಕ್ ಸ್ಪರ್ಧಿಯಾಗಿದ್ದ ಭಾರತೀಯ ಕ್ರೀಡಾಪಟುವಾದ ಮಿಲ್ಖಾ ಸಿಂಗ್‌‍ರ ಜೀವನವನ್ನು ಆಧರಿಸಿದೆ. ನಾಮಸೂಚಕ ಪಾತ್ರದಲ್ಲಿ ಫರಾನ್ ಅಖ್ತರ್ ನಟಿಸಿದ್ದಾರೆ ಮತ್ತು ಸೋನಮ್ ಕಪೂರ್, ದಿವ್ಯಾ ದತ್ತಾ, ಮೀಶಾ ಶಫ಼ಿ, ಪವನ್ ಮಲ್ಹೋತ್ರಾ ಹಾಗೂ ಆರ್ಟ್ ಮಲಿಕ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ರೀಡೆಯನ್ನು ರೀಲ್‍ಸ್ಪೋರ್ಟ್ಸ್‌ನ ಅಮೇರಿಕದ ಸಾಹಸ ನಿರ್ದೇಶಕ ರಾಬ್ ಮಿಲರ್ ಸಮನ್ವಯಗೊಳಿಸಿದ್ದರು.[೭]

₹410 ಮಿಲಿಯನ್‍ನ ಬಂಡವಾಳದಲ್ಲಿ ತಯಾರಾದ ಈ ಚಿತ್ರವು, ೧೨ ಜುಲೈ ೨೦೧೩ರಂದು ಬಿಡುಗಡೆಗೊಂಡಿತು ಮತ್ತು ವಿಮರ್ಶಕರು ಹಾಗೂ ಪ್ರೇಕ್ಷಕರು ಇಬ್ಬರಿಂದಲೂ ಸಮಾನವಾಗಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಇದು ಬಾಕ್ಸ್ ಆಫ಼ಿಸ್‍ನಲ್ಲಿ ಬಹಳ ಚೆನ್ನಾಗಿ ಪ್ರದರ್ಶನಗೊಂಡು, ಅಂತಿಮವಾಗಿ ಸ್ವದೇಶದಲ್ಲಿ "ಸೂಪರ್ ಹಿಟ್" ಮತ್ತು ವಿದೇಶದಲ್ಲಿ ಹಿಟ್ ಎಂದು ಘೋಷಿಸಲ್ಪಟ್ಟಿತು.[೮][೯] ಭಾಗ್ ಮಿಲ್ಖಾ ಭಾಗ್ ವಿಶ್ವಾದ್ಯಂತ ೨೦೧೩ರಲ್ಲಿ ಆರನೇ ಅತಿ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಲನಚಿತ್ರವಾಗಿದೆ ಮತ್ತು ₹1 ಬಿಲಿಯನ್ ಗಳಿಸಿದ ೨೧ನೇ ಚಲನಚಿತ್ರವಾಯಿತು.

ಸಿಂಗ್ ಮತ್ತು ಅವರ ಮಗಳು, ಸೋನಿಯಾ ಸನ್ವಾಲ್ಕಾ, ದ ರೇಸ್ ಆಫ಼್ ಮೈ ಲೈಫ಼್ ಎಂಬ ಶೀರ್ಷಿಕೆಯ ಅವರ ಆತ್ಮಚರಿತ್ರೆಯನ್ನು ಒಟ್ಟಾಗಿ ಬರೆದರು.[೧೦] ಈ ಪುಸ್ತಕವು ಭಾಗ್ ಮಿಲ್ಖಾ ಭಾಗ್ ಚಿತ್ರಕ್ಕೆ ಸ್ಫೂರ್ತಿ ನೀಡಿತು.[೧೧][೧೨][೧೩] ಸಿಂಗ್ ಚಲನಚಿತ್ರದ ಹಕ್ಕುಗಳನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರು ಮತ್ತು ಲಾಭಗಳಲ್ಲಿ ಒಂದು ಪಾಲನ್ನು ಮಿಲ್ಖಾ ಸಿಂಗ್ ಧರ್ಮಾರ್ಥ ನ್ಯಾಸಕ್ಕೆ ನೀಡಲಾಗುವುದೆಂದು ಹೇಳಿದ ಷರತ್ತನ್ನು ಸೇರಿಸಿದರು.[೧೪] ನ್ಯಾಸವನ್ನು ಬಡ ಮತ್ತು ನಿರ್ಗತಿಕ ಕ್ರೀಡಾಪಟುಗಳಿಗೆ ನೆರವಾಗುವ ಗುರಿಯೊಂದಿಗೆ ೨೦೦೩ರಲ್ಲಿ ಸ್ಥಾಪಿಸಲಾಗಿತ್ತು.[೧೫]

ಕಥಾವಸ್ತು[ಬದಲಾಯಿಸಿ]

ಚಲನಚಿತ್ರವು ರೋಮ್‍ನಲ್ಲಿನ ೧೯೬೦ರ ಬೇಸಿಗೆ ಒಲಿಂಪಿಕ್ಸ್‌ನಿಂದ ಶುರುವಾಗುತ್ತದೆ. ಒಬ್ಬ ತರಬೇತುದಾರನು "ಭಾಗ್ ಮಿಲ್ಖಾ ಭಾಗ್" ಎಂದು ಹೇಳುತ್ತಾನೆ. ಓಟಗಾರನು ತನ್ನನ್ನು ಕಾಡುವ ತನ್ನ ಬಾಲ್ಯದ ದಿನಗಳ ನೆನಪುಗಳಿಗೆ ಹೋಗುತ್ತಾನೆ, ಪರಿಣಾಮವಾಗಿ ನಾಲ್ಕನೇ ಸ್ಥಾನದೊಂದಿಗೆ ಓಟ ಮುಗಿಸುತ್ತಾನೆ. ೧೯೪೭ರಲ್ಲಿನ ಭಾರತದ ವಿಭಜನೆಯು ಅವ್ಯವಸ್ಥೆಯನ್ನು ಉಂಟುಮಾಡಿತು. ಪರಿಣಾಮವಾಗಿ, ಬ್ರಿಟಿಷ್ ಭಾರತದ ಪಂಜಾಬ್‍ನಲ್ಲಿ ಸಾಮೂಹಿಕ ಧಾರ್ಮಿಕ ಹಿಂಸಾಚಾರ ಉಂಟಾಯಿತು, ಮತ್ತು ಮಿಲ್ಖಾ ಸಿಂಗ್‍ನ (ಫ಼ರ್ಹಾನ್ ಅಖ್ತರ್) ತಂದೆತಾಯಿಗಳು ಹತ್ಯೆಗೀಡಾದರು. ಅವನು ದೆಹಲಿ ತಲುಪಿ ಅಲ್ಲಿ ತನ್ನ ಅಕ್ಕನನ್ನು ಭೇಟಿಯಾಗುತ್ತಾನೆ. ಬಡತನವಿರುವ ನಿರಾಶ್ರಿತರ ಶಿಬಿರಗಳಲ್ಲಿ ಇದ್ದು, ಮಿಲ್ಖಾ ಸ್ನೇಹಿತರನ್ನು ಮಾಡಿಕೊಂಡು ಅವರೊಂದಿಗೆ ಕಳ್ಳತನ ಮಾಡಿ ಬದುಕುತ್ತಿರುತ್ತಾನೆ. ಅವನು ಬೀರೊಳನ್ನು (ಸೋನಮ್ ಕಪೂರ್) ಪ್ರೀತಿಸತೊಡಗುತ್ತಾನೆ, ಆದರೆ ಅವನು ಪ್ರಾಮಾಣಿಕತೆಯ ಜೀವನ ಬದುಕಬೇಕೆಂದು ಅವಳು ಅವನಿಗೆ ಕೇಳಿಕೊಳ್ಳುತ್ತಾಳೆ.

ಮಿಲ್ಖಾ ಸೇನೆಗೆ ಸೇರಿಕೊಳ್ಳುತ್ತಾನೆ. ಅಲ್ಲಿ ಅವನು ಒಂದು ಓಟದ ಪಂದ್ಯವನ್ನು ಗೆದ್ದ ನಂತರ ಒಬ್ಬ ಹವಾಲ್ದಾರನ ಗಮನ ಸೆಳೆಯುತ್ತಾನೆ. ಮೊದಲನೇ ೧೦ ಓಟಗಾರರಿಗೆ ಹಾಲು, ಎರಡು ಮೊಟ್ಟೆಗಳು ಸಿಗುತ್ತದೆ ಮತ್ತು ವ್ಯಾಯಾಮದಿಂದ ಮನ್ನಿಸಲಾಗುತ್ತದೆ ಎಂದು ಹೇಳಲಾಗಿರುತ್ತದೆ. ಅವನು ಸೇವಾ ಆಯೋಗಕ್ಕೆ ಆಯ್ಕೆಯಾಗುತ್ತಾನೆ. ಅಲ್ಲಿ, ಒಲಿಂಪಿಕ್ಸ್‌ಗೆ ಭಾರತೀಯ ತಂಡದ ಆಯ್ಕೆಯ ಹಿಂದಿನ ದಿನದಂದು, ಹಿಂದೆ ತಾನು ಸೋಲಿಸಿದ್ದ ಹಿರಿಯ ಆಟಗಾರರು ಅವನನ್ನು ರೇಗಿಸಿ ಹೊಡೆಯುತ್ತಾರೆ. ಗಾಯಗೊಂಡಿದ್ದರೂ, ಅವನು ಓಟದಲ್ಲಿ ಭಾಗವಹಿಸುತ್ತಾನೆ. ತನ್ನ ನೋವನ್ನು ಜಯಿಸಿ, ಓಟವನ್ನು ಗೆದ್ದು ರಾಷ್ಟ್ರೀಯ ದಾಖಲೆಯನ್ನು ಮುರಿಯುತ್ತಾನೆ.

ಮೆಲ್ಬರ್ನ್ ೧೯೫೬ರ ಒಲಿಂಪಿಕ್ಸ್‌ನಲ್ಲಿ, ಅವನು ತನ್ನ ಆಸ್ಟ್ರೇಲಿಯನ್ ತಾಂತ್ರಿಕ ತರಬೇತುದಾರನ ಮೊಮ್ಮಗಳಿಗೆ ಆಕರ್ಷಿತನಾಗುತ್ತಾನೆ. ಒಂದು ಬಾರ್‌ನಲ್ಲಿ ಉಲ್ಲಾಸದ ರಾತ್ರಿಯನ್ನು ಕಳೆದ ನಂತರ, ಒಂದು ರಾತ್ರಿಯ ಸಂಭೋಗವನ್ನು ಆನಂದಿಸುತ್ತಾರೆ. ಮುಂದಿನ ದಿನ ಅವನಿಗೆ ರಾತ್ರಿಯ ಚಟುವಟಿಕೆಗಳಿಂದ ಆಯಾಸವೆನಿಸಿ ಅಂತಿಮ ಓಟದಲ್ಲಿ ಸೋಲುತ್ತಾನೆ. ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತಪ್ಪಿತಸ್ಥ ಮನೋಭಾವದಿಂದ ನರಳು, ಕನ್ನಡಿಯ ಮುಂದೆ ತನ್ನನ್ನು ತಾನು ಕಪಾಳಕ್ಕೆ ಹೊಡೆದುಕೊಳ್ಳುತ್ತಾನೆ. ಭಾರತಕ್ಕೆ ಮರಳುವ ವಿಮಾನದಲ್ಲಿ ಅವನು ತನ್ನ ತರಬೇತುದಾರನಿಗೆ ೪೦೦ ಮೀ. ಓಟದ ವಿಶ್ವದಾಖಲೆ ಎಷ್ಟು ಎಂದು ಕೇಳಿದಾಗ ೪೫.೯ ಸೆಕೆಂಡುಗಳು ಎಂದು ತಿಳಿದುಕೊಳ್ಳುತ್ತಾನೆ. ಅವನು ಕಷ್ಟಪಟ್ಟು ತರಬೇತಿಪಡೆದು ಹಲವಾರು ಸ್ಥಳಗಳಲ್ಲಿ ಗೆಲ್ಲುತ್ತಾನೆ. ನಂತರ ಅವನು ೪೫.೮೦ ಸೆಕೆಂಡುಗಳ ಸಮಯದಿಂದ ೪೦೦ ಮೀ. ಓಟದ ಹಿಂದಿನ ವಿಶ್ವದಾಖಲೆಯನ್ನು ಮುರಿಯುತ್ತಾನೆ.

ಏಷ್ಯಾದ ಅತ್ಯಂತ ವೇಗದ ಪುರುಷನೆಂದು ಪರಿಚಿತನಾಗಿದ್ದ ಅಬ್ದುಲ್ ಖಾಲಿಕ್‍ನೊಂದಿಗೆ ಸ್ನೇಹಭಾವದ ಓಟಕ್ಕಾಗಿ ಭಾರತೀಯ ತಂಡವನ್ನು ಪಾಕಿಸ್ತಾನದಲ್ಲಿ ಮುನ್ನಡೆಸುವುದಕ್ಕೆ ಅವನನ್ನು ಪ್ರಧಾನಿ ಜವಾಹರ‌ಲಾಲ್ ನೆಹರು (ದಲಿಪ್ ತಾಹಿಲ್) ಒಪ್ಪಿಸುತ್ತಾರೆ. ಪಾಕಿಸ್ತಾನದಲ್ಲಿ, ಅವನು ಸುದ್ದಿಗೋಷ್ಠಿಗೆ ಗೈರುಹಾಜರಾಗಿ ತನ್ನ ಹಳ್ಳಿಗೆ ಹೋಗುತ್ತಾನೆ. ಹಿನ್ನೋಟದ ನಿರೂಪಣೆಯಲ್ಲಿ, ಅವನ ತಂದೆತಾಯಿಗಳನ್ನು ಹೇಗೆ ಕೊಲ್ಲಲಾಯಿತು ಮತ್ತು ಅವನ ತಂದೆಯ ಕೊನೆಯ ಶಬ್ದಗಳು "ಭಾಗ್ ಮಿಲ್ಖಾ ಭಾಗ್" ಎಂದಾಗಿದ್ದವು ಎಂದು ತೋರಿಸಲಾಗುತ್ತದೆ. ಅವನು ಅಳುವುದಕ್ಕೆ ಆರಂಭಿಸುತ್ತಾನೆ ಮತ್ತು ಮುಂದೆ ಅವನ ಬಾಲ್ಯದ ಸ್ನೇಹಿತನ ಮಗನೆಂದು ಗೊತ್ತಾದ ಒಬ್ಬ ಹುಡುಗನು ಅವನಿಗೆ ಸಮಾಧಾನ ಹೇಳುತ್ತಾನೆ. ಅವನು ತನ್ನ ಮಿತ್ರ ಸಂಪ್ರೀತ್‍ನನ್ನೂ ಭೇಟಿಯಾಗುತ್ತಾನೆ.

ಕೂಟದಲ್ಲಿ, ಆರಂಭದಲ್ಲಿ ಪಾಕಿಸ್ತಾನಿ ನೆಚ್ಚಿನ ಒಟಗಾರನು ಮುಂದಿರುತ್ತಾನೆ, ಆದರೆ ಮಿಲ್ಖಾ ಸ್ಪರ್ಧಿಗಳನ್ನು ಒಬ್ಬೊಬ್ಬರಂತೆ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಮುನ್ನಡೆದು ಓಟವನ್ನು ಗೆದ್ದು ಎರಡೂ ರಾಷ್ಟ್ರಗಳ ಗೌರವವನ್ನು ಗಳಿಸುತ್ತಾನೆ. ಪಾಕಿಸ್ತಾನದ ರಾಷ್ಟ್ರಪತಿ ಜನರಲ್ ಅಯೂಬ್ ಖಾನ್, ಮಿಲ್ಖಾರ ಪ್ರಯತ್ನದಿಂದ ಪ್ರಭಾವಿತರಾಗಿ ಅವರಿಗೆ ದ ಫ಼್ಲೈಯಿಂಗ್ ಸಿಖ್ ಎಂಬ ಬಿರುದನ್ನು ನೀಡುತ್ತಾರೆ. ಮಿಲ್ಖಾ ಬಯಸಿದಂತೆ ಜವಾಹರ್‌ಲಾಲ್ ನೆಹರು ಮಿಲ್ಖಾರ ಹೆಸರಿನಲ್ಲಿ ಒಂದು ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸುತ್ತಾರೆ.

ನಿರ್ಮಾಣ[ಬದಲಾಯಿಸಿ]

ಬೆಳವಣಿಗೆ[ಬದಲಾಯಿಸಿ]

ಡೆಲಿ-ಸಿಕ್ಸ್ ಚಿತ್ರದ ಬಿಡುಗಡೆಯ ನಂತರ, ಓಂ ಪ್ರಕಾಶ್ ಮೆಹ್ರಾ ಮಿಲ್ಖಾ ಸಿಂಗ್‍ರ ಜೀವನಾಧಾರಿತ ಚಿತ್ರದ ಬೆಳವಣಿಗೆಯನ್ನು ಆರಂಭಿಸಿದರು. ಮೆಹ್ರಾ ಜೊತೆಗೆ ಡೆಲಿ-ಸಿಕ್ಸ್ ಚಿತ್ರವನ್ನು ಬರೆದಿದ್ದ ಪ್ರಸೂನ್ ಜೋಶಿ, ಕಥೆಯ ಮೇಲೆ ಕೆಲಸಮಾಡಲು ಆರಂಭಿಸಿದರು.[೧೬] ಚಿತ್ರದ ಶೀರ್ಷಿಕೆ ಭಾಗ್ ಮಿಲ್ಖಾ ಭಾಗ್ ಅನ್ನು ವಾಸ್ತವವಾಗಿ ಮಿಲ್ಖಾರ ತಂದೆ ಎಂದೂ ಹೇಳಿದ್ದಿಲ್ಲ ಎಂದು ನಂತರ ಜೋಶಿ ಸ್ಪಷ್ಟಪಡಿಸಿದರು. ಬದಲಾಗಿ, ಅದು ಅವರು ಸೃಷ್ಟಿಸಿದ ಪದಸಮುಚ್ಚಯವಾಗಿತ್ತು ಮತ್ತು ಕಥೆಯಾದ್ಯಂತ ಧಾರಾಳವಾಗಿ ಬಳಸಲ್ಪಟ್ಟಿತ್ತು.[೧೭]


ಸಂಶೋಧನೆಗಾಗಿ, ಮೆಹ್ರಾ ಹಲವಾರು ಬಾರಿ ಚಂಡೀಗಡಕ್ಕೆ ಭೇಟಿನೀಡಿ ಗಂಟೆಗಟ್ಟಲೆ ಸಿಂಗ್‍ರೊಂದಿಗೆ ಮಾತನಾಡಿದರು. ಮಿಲ್ಖಾ ಸಿಂಗ್‍ರ ಮಗ ಮತ್ತು ಪ್ರಖ್ಯಾತ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಕುಟುಂಬದ ಸದಸ್ಯರೊಂದಿಗೆ ಅವರ ಭೇಟಿಗಳನ್ನು ಏರ್ಪಡಿಸಿದರು.[೧೬]

ಕಥೆ ಬರೆಯಲು ಮುಂದಿನ ಎರಡೂವರೆ ವರ್ಷ ಹಿಡಿಯಿತು.[೧೮] ನಿರ್ದೇಶಕನ ಪ್ರಕಾರ, ಇದು ಕ್ರೀಡಾಪ್ರಧಾನ ಚಿತ್ರವಲ್ಲ, ಬದಲಾಗಿ ಮಾನವ ಚೈತನ್ಯದ ಬಗ್ಗೆಗಿನ ಚಲನಚಿತ್ರ.[೧೯]

ಪಾತ್ರ ನಿರ್ಧಾರಣ[ಬದಲಾಯಿಸಿ]

೨೦೧೦ರಲ್ಲಿ, ಅಭಿಷೇಕ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಮುಖ್ಯ ಪಾತ್ರದ ಮುಂಚಿನ ಪೈಪೋಟಿಗಾರರಾಗಿದ್ದರು. ಆದರೆ, ಅಂತಿಮ ಕಥೆಯು ಮುಗಿಯುವವರೆಗೆ ಪಾತ್ರವರ್ಗದ ಅಂತಿಮ ನಿರ್ಧಾರವನ್ನು ಮೆಹ್ರಾ ಮುಂದೂಡಿದರು.[೨೦] ತಿಂಗಳುಗಟ್ಟಲಿನ ಹುಡುಕಾಟದ ನಂತರ,[೧೮] ಸೆಪ್ಟೆಂಬರ್ ೨೦೧೧ರಲ್ಲಿ, ಪ್ರಧಾನ ಪಾತ್ರವರ್ಗವನ್ನು ಘೋಷಿಸಲಾಯಿತು. ಫರಾನ್ ಅಖ್ತರ್ ಮತ್ತು ಸೋನಮ್ ಕಪೂರ್ ಮುಖ್ಯ ಪಾತ್ರಗಳನ್ನು ಪಡೆದರು. ಅದಾದ ನಂತರ, ಅಖ್ತರ್ ಮಿಲ್ಖಾ ಸಿಂಗ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಲು ಪಂಜಾಬ್‍ಗೆ ಭೇಟಿನೀಡಿದರು.[೨೧] ಅಖ್ತರ್ ಮಿಲ್ಖಾ ಸಿಂಗ್‍ರ ಜೀವನದಿಂದ ಸ್ಫೂರ್ತಿ ಪಡೆದು ಪಾತ್ರಕ್ಕಾಗಿ ವಿಸ್ತೃತ ದೈಹಿಕ ತರಬೇತಿಗೆ ಒಳಗಾದರು.[೧೯]

ಪಾಕಿಸ್ತಾನಿ ನಟಿ ಮತ್ತು ಗಾಯಕಿ ಮೀಶಾ ಶಫ಼ಿಯನ್ನು ಪೆರಿಜ಼ಾದ್‍ಳ (ಮಿಲ್ಖಾ ಸಿಂಗ್‍ರ ನೆಚ್ಚಿನ ಗೆಳತಿ) ಪಾತ್ರಕ್ಕಾಗಿ ಆಯ್ಕೆ ಮಾಡಲಾಯಿತು.

ಚಿತ್ರೀಕರಣ[ಬದಲಾಯಿಸಿ]

ಪ್ರಧಾನ ಛಾಯಾಗ್ರಹಣವು ಫ಼ೆಬ್ರುವರಿ ೨೦೧೨ ರಲ್ಲಿ ಶುರುವಾಯಿತು ಮತ್ತು ಮುಖ್ಯವಾಗಿ ಪಂಜಾಬ್‍ನಲ್ಲಿ ನಡೆಯಿತು. ಕೆಲವು ದೃಶ್ಯಗಳನ್ನು ದೆಹಲಿ, ಟೋಕ್ಯೊ, ಮೆಲ್ಬರ್ನ್ ಹಾಗೂ ರೋಮ್‍ಗಳಲ್ಲಿ ಚಿತ್ರೀಕರಿಸಲಾಯಿತು.[೨೨][೨೩][೨೪]

ಧ್ವನಿವಾಹಿನಿ[ಬದಲಾಯಿಸಿ]

ಶಂಕರ್-ಎಹಸಾನ್-ಲಾಯ್ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಇದು ರಾಕೇಶ್ ಓಂಪ್ರಕಾಶ್ ಮೆಹ್ರಾರೊಂದಿಗೆ ಅವರ ಮೊದಲ ಚಲನಚಿತ್ರ ಸಹಯೋಗವಾಗಿತ್ತು. ಧ್ವನಿವಾಹಿನಿಯಲ್ಲಿ ಏಳು ಹಾಡುಗಳಿವೆ. ಗೀತಸಾಹಿತ್ಯವನ್ನು ಪ್ರಸೂನ್ ಜೋಶಿ ಬರೆದಿದ್ದಾರೆ. ಆಡಿಯೋವನ್ನು ೧೪ ಜೂನ್ ೨೦೧೩ ರಂದು ಬಿಡುಗಡೆ ಮಾಡಲಾಯಿತು.

ಬಿಡುಗಡೆ[ಬದಲಾಯಿಸಿ]

ಭಾಗ್ ಮಿಲ್ಖಾ ಭಾಗ್ ೧೨ ಜುಲೈ ೨೦೧೩ರಂದು ವಿಶ್ವಾದ್ಯಂತ ೧೨೦೦ ಪರದೆಗಳಲ್ಲಿ ಬಿಡುಗಡೆಗೊಂಡಿತು.[೨೫]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ಭಾಗ್ ಮಿಲ್ಖಾ ಭಾಗ್ ವಿಶ್ವಾದ್ಯಂತ ₹1.64 ಬಿಲಿಯನ್‍ನಷ್ಟು ಹಣಗಳಿಸಿತು ಮತ್ತು ೨೦೧೩ರ ಐದನೇ ಅತಿ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಿತ್ರವಾಗಿದೆ.

ವಾಸ್ತವಿಕ ದೋಷಗಳು[ಬದಲಾಯಿಸಿ]

ಮಿಲ್ಖಾ ಸಿಂಗ್ ಪುರುಷರ ೪೦೦ ಮೀಟರ್ ವಿಶ್ವದಾಖಲೆಯನ್ನು ಹೊಂದಿದ್ದರು ಎಂದು ಕಥೆಯು ಹೇಳುತ್ತದಾದರೂ, ಪುರುಷರ ೪೦೦ ಮೀಟರ್ ವಿಶ್ವದಾಖಲೆಯ ಶ್ರೇಣಿಯು ವಿಶ್ವದಾಖಲೆ ಹೊಂದಿದವರ ಪಟ್ಟಿಯಲ್ಲಿ ಮಿಲ್ಖಾ ಸಿಂಗ್‍ರ ಹೆಸರನ್ನು ಹೇಳುವುದಿಲ್ಲ. ೧೯೫೨ ರ ಒಲಿಂಪಿಕ್ಸ್‌ನ ನಂತರ ವಿಶ್ವದಾಖಲೆಯನ್ನು ೪೫.೯ ಸೆಕೆಂಡುಗಳು ಎಂದು ರಣ್‌ಬೀರ್ ಸಿಂಗ್‍ರು (ಮಿಲ್ಖಾ ಸಿಂಗ್‍ರ ತರಬೇತುದಾರ) ಹೇಳುವುದನ್ನು ತೋರಿಸಲಾಗಿದೆ; ಆದರೆ ಅಂತಿಮವಾಗಿ ಮಿಲ್ಖಾ ೪೫.೭೩ ಸೆಕೆಂಡುಗಳ ವೈಯಕ್ತಿಕ ದಾಖಲೆಯೊಂದಿಗೆ ಆ ಸಮಯವನ್ನು ೧೯೫೬ರ ಒಲಿಂಪಿಕ್ಸ್‌ನಲ್ಲಿ ಮೀರಿಸಿದರು. ಅದೇ ಓಟದಲ್ಲಿ ಮೊದಲ ಸ್ಥಾನದ ವಿಜಯಿ ಅಮೇರಿಕದ ಲೂ ಜೋನ್ಸ್ ೪೫.೨ ಸೆಕೆಂಡುಗಳ ಅತ್ಯಂತ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದರು.[೨೬]

ಮಿಲ್ಖಾ ಸಿಂಗ್ ೪೦೦ ಮೀಟರ್ ಓಟದಲ್ಲಿ ಮುಂದಿದ್ದರು ಮತ್ತು ಅವರು ಹಿಂದೆ ನೋಡಿದಾಗ ಓಟವನ್ನು ಸೋತರು ಎಂದು ಚಲನಚಿತ್ರದಲ್ಲಿ ಮಾಡಲಾದ ದೃಢವಾಕ್ಯವು ತಪ್ಪು ಎಂದು ರೋಮ್ ಓಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಪ್ರಖ್ಯಾತ ಕ್ರೀಡಾಪಟು ಗುರ್ಬಚನ್ ಸಿಂಗ್ ರಂಧಾವಾ ಹೇಳುತ್ತಾರೆ. ಅವರು ಓಟದಲ್ಲಿ ಎಂದೂ ಮುಂದಿರಲಿಲ್ಲ ಮತ್ತು ೩೦೦ ಮೀಟರ್ ಆಗಿದ್ದಾಗ ಐದನೇ ಸ್ಥಾನದಲ್ಲಿದ್ದರು.[೨೬]

ಅಂತಿಮ ಓಟದ ಸ್ಪರ್ಧೆಯಲ್ಲಿ ಲಾಹೋರ್‌ನಲ್ಲಿನ ಘಟನೆಗಳನ್ನು ನೇರವಾಗಿ ಅನುಸರಿಸಲು ರೇಡಿಯೊವನ್ನು ನಿರ್ದಿಷ್ಟ ಸಂಕೇತಕ್ಕೆ ಅಳವಡಿಸಿದಾಗ, ರೇಡಿಯೊ ವಿವರಣೆಕಾರನು "ಸಂಪೂರ್ಣ ಪಾಕಿಸ್ತಾನವು ಲಾಹೋರ್‌ನಲ್ಲಿ ಗಡ್ಡಾಫಿ ಕ್ರೀಡಾಂಗಣದೊಳಗೆ ನೆಲೆಸಿದೆ ಎಂದು ತೋರುತ್ತದೆ", ಎಂದು ಘೋಷಿಸುವುದನ್ನು ಕೇಳಬಹುದು. ಮೂಲತಃ ೧೯೫೯ರಲ್ಲಿ ನಿರ್ಮಿಸಲ್ಪಟ್ಟ ಲಾಹೋರ್ ಕ್ರೀಡಾಂಗಣವನ್ನು ಗದ್ದಾಫ಼ಿ ಕ್ರೀಡಾಂಗಣವೆಂದು ೧೯೭೪ರವರೆಗೆ ಮರುನಾಮಕರಣ ಮಾಡಲಾಗಲಿಲ್ಲ.[೨೭]

ಮಲೇಷ್ಯಾದ ಧ್ವಜವು ೧೯೫೭ ರವರೆಗೆ ಅಸ್ತಿತ್ವದಲ್ಲಿರಲಿಲ್ಲ. ೧೯೫೬ರ ಮೇಲ್ಬೋರ್ನ್ ಕ್ರೀಡಾಕೂಟದಲ್ಲಿನ ಒಂದು ದೃಶ್ಯದಲ್ಲಿ ಮಲೇಷ್ಯಾದ ಧ್ವಜವಿದೆ.

ಚಲನಚಿತ್ರಕ್ಕೆ ೧೯೫೦ರ ದಶಕದ ಹಿನ್ನೆಲೆಯನ್ನು ನಿಗದಿಮಾಡಲಾಗಿದೆಯಾದರೂ, ಫ಼ರ್ಹಾನ್ ಅಖ್ತರ್ "ನನ್ಹಾ ಮುನ್ನಾ ರಾಹಿ ಹ್ಞೂ" ಹಾಡನ್ನು ಹಾಡುತ್ತಾರೆ. ಈ ಹಾಡು ೧೯೬೨ರಲ್ಲಿ ಬಿಡುಗಡೆಯಾದ ಸನ್ ಆಫ಼್ ಇಂಡಿಯಾ ಚಿತ್ರದ್ದಾಗಿದೆ.[೨೮]

ಉಲ್ಲೇಖಗಳು[ಬದಲಾಯಿಸಿ]

 1. "News on HT". Hindustan Times. Archived from the original on 9 December 2011. Retrieved Jan 2012. {{cite news}}: Check date values in: |accessdate= (help); Unknown parameter |deadurl= ignored (help)
 2. "Official Website". Bhag Milkha Bhag Website. Archived from the original on 28 January 2012. Retrieved Jan 2012. {{cite news}}: Check date values in: |accessdate= (help); Unknown parameter |dead-url= ignored (help)
 3. "BHAAG MILKHA BHAAG (12A)". British Board of Film Classification. Archived from the original on 15 ಜುಲೈ 2013. Retrieved 11 ಜುಲೈ 2013. {{cite web}}: Unknown parameter |deadurl= ignored (help)
 4. "UTV pulls out of 'Bhaag Milkha Bhaag' for 'Paan Singh Tomar'". Ibnlive.com. Archived from the original on 3 ನವೆಂಬರ್ 2013. Retrieved 14 August 2013.
 5. "Boxofficeindia.com". boxofficeindia.com. Archived from the original on 4 January 2014. Retrieved 11 May 2015.
 6. "IIFA Awards: 'Bhaag Milkha Bhaag' sweeps the top honours". Mid Day. 28 April 2014. Retrieved 28 April 2014.
 7. "Winning Ways". The Indian Express. 1 September 2013. Retrieved 11 May 2015.
 8. "Bhaag Milkha Bhaag Grosses 96 Crore In Three Weeks". Box Office india. Archived from the original on 6 August 2013. Retrieved 2 August 2013.
 9. "Bhaag Milkha Bhaag Overseas". boxofficeindia.com. Retrieved 26 July 2013.
 10. "Milkha Singh: 'My God, my religion, my beloved'". Livemint/Hindustan Times. 10 July 2013. Retrieved 15 July 2013.
 11. "I don't know how much people know about Milkha Singh: Farhan Akhtar". Hindustan Times. 12 July 2013. Archived from the original on 14 July 2013. Retrieved 15 July 2013.
 12. "Bhaag Milkha Bhaag Picks Up Well On Day One". Box Office India. 12 July 2013. Retrieved 13 July 2013.
 13. Ramnath, Nandini (1 July 2013). "When Milkha Singh ran for his life". Livemint/Hindustan Times. Retrieved 13 July 2013.
 14. Koshie, Nihal (30 June 2013). "'If Milkha Singh was born in present times, no one would be able to break his record in 100 yrs'". Indian Express. Retrieved 14 July 2013.
 15. "The Race of My Life: An Autobiography". Rupa Publications. Archived from the original on 12 July 2013. Retrieved 15 July 2013.
 16. ೧೬.೦ ೧೬.೧ "`Bhaag Milkha Bhaag`: Scripting the amazing Milkha Singh story". Zee News. 12 May 2010. Retrieved 30 July 2013.[ಶಾಶ್ವತವಾಗಿ ಮಡಿದ ಕೊಂಡಿ]
 17. "Milkha's father never said Bhaag Milkha Bhaag: Prasoon". Times of India. 19 June 2013. Archived from the original on 9 ಜುಲೈ 2013. Retrieved 4 July 2013.
 18. ೧೮.೦ ೧೮.೧ "Who to cast in Milkha's role, gave Rakeysh Mehra sleepless nights". Ibnlive.in.com. Archived from the original on 2013-06-29. Retrieved 4 July 2013.
 19. ೧೯.೦ ೧೯.೧ "'Bhaag Milkha Bhaag' not a sports film: Rakeysh Omprakash Mehra". Mid-day.com. 20 June 2013. Retrieved 4 July 2013.
 20. "Is it Akshay or Abhishek for Bhag Milkha Bhag?". The Times of India. 22 March 2010. Archived from the original on 1 ನವೆಂಬರ್ 2013. Retrieved 30 July 2013.
 21. "Farhan and Sonam to star in Rakeysh's 'Bhaag Milkha Bhaag'". Indian Express. 23 September 2011. Retrieved 30 July 2013.
 22. "Location". IBN Live. Archived from the original on 2013-01-26. Retrieved Feb 2012. {{cite news}}: Check date values in: |access-date= (help)
 23. "Shooting date". Indian express. Retrieved Feb 2012. {{cite news}}: Check date values in: |access-date= (help)[ಶಾಶ್ವತವಾಗಿ ಮಡಿದ ಕೊಂಡಿ]
 24. Singh, Prashant. "Farhan refuses to wear fake lungi for Bhaag Milkha Bhaag". Hindustan Times. Archived from the original on 1 July 2013. Retrieved 8 December 2011.
 25. "Specialty B.O. Preview: 'Fruitvale Station', 'Crystal Fairy', 'The Hunt', 'Still Mine', 'Bhaag Milkha Bhaag', 'Pawn Shop Chronicles'". Deadline.com. Retrieved 24 July 2013.
 26. ೨೬.೦ ೨೬.೧ "Milkha claimed he bettered world record, but he has never done so: Gurbachan Singh Randhawa". NDTV. 11 August 2013. Retrieved 19 August 2013.
 27. "The Factually Inaccurate Bhaag Milkha Bhaag". 8 Sep 2014. Archived from the original on 18 July 2014. Retrieved 19 August 2013.
 28. "7- mistakes in movie Bhaag Milkha Bhaag".

ಬಾಹ್ಯ ಸಂಪರ್ಕಗಳು[ಬದಲಾಯಿಸಿ]