ಭಂಡಿಗಡಿ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಭಂಡಿಗಡಿ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಚಿಕ್ಕಮಗಳೂರು |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 763 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೪೦೦೦ - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೭೧೫೦ - + - KA18 |
ಭಂಡಿಗಡಿ ಕೊಪ್ಪ ತಾಲೂಕು ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖ ಊರು. ತುಂಗಾ ನದಿಯ ತೀರದಲ್ಲಿರುವ ಈ ಊರು ಶಕಟಪುರ ಸಂಸ್ಥಾನ ಮಠಕ್ಕೆ ಹೆಸರುವಾಸಿಯಾಗಿದೆ. ಮಲೆನಾಡಿನ ಮಧ್ಯದಲ್ಲಿ ತುಂಗಾ ಮೇಲ್ದಂಡೆಯಲ್ಲಿರುವ ಈ ಊರಿನಲ್ಲಿ ತೆಂಗು, ಅಡಿಕೆ,ಭತ್ತ,ಏಲಕ್ಕಿ ಮತ್ತು ಬಾಳೆ ಬೆಳೆಯಲಾಗುತ್ತದೆ. ಹರಿಹರಪುರ ಹೋಬಳಿಯ ಭಾಗವಾಗಿರುವ ಈ ಊರು ಜಿಲ್ಲೆಯ ಒಂದು ಮಾದರಿ ಗ್ರಾಮವಾಗಿದೆ. ಎರಡು ಶಾಲೆಗಳು, ಸಾಕಷ್ಟು ಅಂಗಡಿ ಮುಂಗಟ್ಟುಗಳನ್ನು ಹೊಂದಿದ್ದು, ಪ್ರಗತಿಯ ಹಾದಿಯಲ್ಲಿದೆ
ಹೆಸರು
[ಬದಲಾಯಿಸಿ]ಭಂಡಿಗಡಿಗೆ ಹೆಸರು ಬಂಡಿ ಮತ್ತು ಗಡಿ ಶಬ್ದಗಳಿಂದ ಉಗಮವಾಗಿದ್ದು ,ಈ ಹೆಸರಿಗೆ ಮಹಾಭಾರತದ ಉಪಕಥೆಯಿದೆ. ಮಹಾಭಾರತದ ಪಾಂಡವರು ಶಕಟಪುರ ಬಳಸಿ ಹೊಗುವಾಗ,ಅಲ್ಲಿನ ಜನರಿಗೆ ಏಕಚಕ್ರನಗರದ ಬಕಾಸುರ ಎಂಬ ರಾಕ್ಷಸನು ತೊಂದರೆ ಕೊಡುತಿರುತ್ತಾನೆ. ಅಲ್ಲಿನ ಜನರನ್ನು ಉಳಿಸಲು ಭೀಮ ತಾನೇ ರಾಕ್ಷಸನನ್ನು ಎದುರಾಗುತ್ತೇನೆ ಎಂದು ಬಂಡಿ ತುಂಬಾ ಆಹಾರ ತುಂಬಿಕೊಂಡು ಹೊರಡುತ್ತಾನೆ. ಈ ಊರೇ ಭಂಡಿಗಡಿ ಎಂದು ಪ್ರತೀತಿ.
ಜನ-ಜನತೆ
[ಬದಲಾಯಿಸಿ]ಭಂಡಿಗಡಿ ಹಿಂದೂ ಹಾಗು ಮುಸ್ಲಿಮ್ ಜನರಿಂದ ಕೂಡಿದೆ. ಒಕ್ಕಲಿಗ ಹಾಗೂ ಬ್ರಾಹ್ಮಣ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಶಕಟಪುರ ಸಂಸ್ಥಾನ ಮಠ
[ಬದಲಾಯಿಸಿ]ಶಕಟಪುರ ಸಂಸ್ಥಾನದ ಮುಖ್ಯ ಮಠ ಭಂಡಿಗಡಿಯಲ್ಲಿದೆ. ಶ್ರೀ ಕೃಷ್ಣಾನಂದ ಸರಸ್ವತಿಯವರ ಸಾರಥ್ಯದಲ್ಲಿ ಮಠವು ಅಸಾಧಾರಣ ಅಭಿವೃದ್ಧಿ ಹೊಂದಿದೆ. ಕಲೆ, ಸಂಸ್ಕೃತಿಗಳ ಬೀಡಾಗಿದೆ. ಶ್ರೀ ರಾಜರಾಜೇಶ್ವರಿ ಅಮ್ಮನವರು ಸಂತಾನ ಗೋಪಾಲಕೃಷ್ಣಸ್ವಾಮಿ ಹಾಗೂ ವಿಷ್ಣು ಇಲ್ಲಿಯ ಮುಖ್ಯಗುಡಿಯಲ್ಲಿರುವ ದೇವತಾ ವಿಗ್ರಹಗಳಾಗಿವೆ. ಉಳಿದ ಹಲವು ದೇವಸ್ಥಾನಗಳನ್ನೂ ಮುಖ್ಯಗುಡಿಯ ಅಕ್ಕಪಕ್ಕದಲ್ಲಿ ನಿರ್ಮಿಸಲಾಗಿದೆ.