ಬ್ರೂನೋ ಕುಟಿನ್ಹೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರೂನೋ ಕುಟಿನ್ಹೊ
Personal information
Full name ಬ್ರೂನೋ ಕುಟಿನ್ಹೊ
Date of birth (1969-10-06) ೬ ಅಕ್ಟೋಬರ್ ೧೯೬೯ (ವಯಸ್ಸು ೫೪)
Place of birth ಪಣಜಿ, ಗೋವಾ, ಭಾರತ
Playing position ಫಾರ್ವರ್ಡ್ (ಅಸೋಸಿಯೇಷನ್ ಫುಟ್ಬಾಲ್)
Senior career*
Years Team Apps (Gls)
ಸಾಲ್ಗೋಕರ್ ಎಫ್ ಸಿ
ಡೆಂಪೊ ಎಸ್‌ಸಿ
National team
ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡ
  • Senior club appearances and goals counted for the domestic league only.
† Appearances (Goals).

ಬ್ರೂನೋ ಕುಟಿನ್ಹೊ (ಜನನ ೬ ಅಕ್ಟೋಬರ್ ೧೯೬೯) ಇವರು ಗೋವಾ ಮೂಲದ ಭಾರತೀಯ ಫುಟ್ಬಾಲ್ ಆಟಗಾರ. [೧] ಅವರು ತಮ್ಮ ಕ್ಲಬ್ ವೃತ್ತಿಜೀವನದ ಹೆಚ್ಚಿನ ಭಾಗವನ್ನು ಸಾಲ್ಗೋಕರ್‌ನಲ್ಲಿ ಕಳೆದರು. ಕುಟಿನ್ಹೊರವರು ೨೦೦೧ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಅವರ ಕ್ರೀಡೆಯಲ್ಲಿನ ಶ್ರೇಷ್ಠತೆಗಾಗಿ ನೀಡಲಾಗಿದೆ. [೨]

ವೈಯಕ್ತಿಕ ಜೀವನ[ಬದಲಾಯಿಸಿ]

ಕುಟಿನ್ಹೊರವರು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಹಾಗೂ ಇವರ ಸಹೋದರ ಜೆರೊನಿಮೊ ಕುಟಿನ್ಹೊರವರು ಗೋವಾದಲ್ಲಿ ಜೆ ೨೯ ಎಂಬ ಸ್ಪೋರ್ಟ್ಸ್ ಬಾರ್ ನಡೆಸುತ್ತಿದ್ದಾರೆ.

ಭಾರತದ ಮಾಜಿ ನಾಯಕ[ಬದಲಾಯಿಸಿ]

ಕುಟಿನ್ಹೊರವರು ಮಾಂಟೆ ಡಿ ಗುರಿಮ್‌ನಲ್ಲಿ ಅಧ್ಯಯನ ಮಾಡಿದರು. ಅವರನ್ನು ತರಬೇತುದಾರರಾದ ಪಾಲ್ ರಾಜ್ರವರು ಗುರುತಿಸಿದರು. ಅವರು ತಮ್ಮ ಮೊದಲ ಪಂದ್ಯವನ್ನು ಶಾಲಾ ಪ್ರತಿಸ್ಪರ್ಧಿಗಳಾದ ಎಸ್‌ಟಿ ಪಿಲಾರ್ ವಿರುದ್ಧ ಆಡಿದರು. ಪಿಲಾರ್, ೩ ಗೋಲುಗಳನ್ನು ಗಳಿಸಿದರು ಹಾಗೂ ಸುಬ್ರತೋ ಮುಖರ್ಜಿ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಅಂಡರ್ ೧೭ ನಲ್ಲಿ ಗೆದ್ದರು. [೩]

ಕುಟಿನ್ಹೊ ಅವರು ಭಾರತದ ಮಾಜಿ ಫುಟ್ಬಾಲ್ ನಾಯಕರೂ ಆಗಿದ್ದರು. ಅವರ ಬಹುನಿರೀಕ್ಷಿತ ವೃತ್ತಿಜೀವನವು ಸುಮಾರು ಒಂದೂವರೆ ದಶಕದವರೆಗೆ ವ್ಯಾಪಿಸಿದೆ. ೧೯೮೭ ರಲ್ಲಿ ಬ್ರೂನಿಯಲ್ಲಿ ನಡೆದ ಶಾಲಾ ಪಂದ್ಯಾವಳಿಯಲ್ಲಿ ಅವರು ಮೊದಲ ಬಾರಿಗೆ ಭಾರತಕ್ಕಾಗಿ ಆಡಿದರು. ೧೯೮೮ ರಲ್ಲಿ ಗೋವಾದ ಪ್ರಮುಖ ತಂಡ ಡೆಂಪೊ ಎಸ್‌ಸಿಗೆ ಸೇರಿದ ಅವರು ೧೯೮೭ ರಲ್ಲಿ ಮತ್ತೊಂದು ಪ್ರಮುಖ ಗಣಿಗಾರಿಕೆ-ಸಂಬಂಧಿತ ಸಾಲ್ಗೋಕರ್ ತಂಡಕ್ಕೆ ತೆರಳಿದರು. [೪]

ಒಲಿಂಪಿಕ್ಸ್

ಸಣ್ಣ ಸ್ಟ್ರೈಕರ್[ಬದಲಾಯಿಸಿ]

ಕುಟಿನ್ಹೊ ಅವರನ್ನು "ಸಣ್ಣ ಸ್ಟ್ರೈಕರ್" ಎಂದು ಕರೆಯಲಾಗುತ್ತದೆ. ೧೯೮೯-೯೦ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೀಮ್‌ಗೆ ಪಾದಾರ್ಪಣೆ ಮಾಡಿದ ಅವರು, ೨೦೦೧ ರ ಮಿಲೇನಿಯಂ ಕಪ್‌ನಲ್ಲಿ ಕೊನೆಯ ಪಂದ್ಯವನ್ನಾಡಿದ್ದರು. ೧೯೮೭ ರಲ್ಲಿ ಫೆಡರೇಶನ್ ಕಪ್, ೧೯೮೯ ಮತ್ತು ೧೯೯೬ ರಲ್ಲಿ ರೋವರ್ಸ್ ಕಪ್, ೯೮೯ ರಲ್ಲಿ ಟಾಕಾ ಗೋವಾ ಮತ್ತು ೧೯೯೮ ರಲ್ಲಿ ಭಾರತದಲ್ಲಿ ನಡೆದ ರಾಷ್ಟ್ರೀಯ ಫುಟ್ಬಾಲ್ ಲೀಗ್ ಅನ್ನು ಗೆಲ್ಲಲು ಸಾಲ್ಗೋಕರ್ ಅವರಿಗೆ ಸಹಾಯ ಮಾಡಿದ ಕೀರ್ತಿ ಬ್ರೂನೋರವರಿಗೆ ಸಲ್ಲುತ್ತದೆ.

ಬ್ರೂನೋ ಕುಟಿನ್ಹೊ

ಭಾರತವನ್ನು ಪ್ರತಿನಿಧಿಸುವುದು ಹಾಗೂ ಮುನ್ನಡೆಸುವುದು[ಬದಲಾಯಿಸಿ]

೧೯೮೯ ರಲ್ಲಿ ಢಾಕಾದಲ್ಲಿ ನಡೆದ ಪ್ರೆಸಿಡೆಂಟ್ಸ್ ಕಪ್‌ನಲ್ಲಿ ಕುಟಿನ್ಹೊ ಅವರು ಭಾರತವನ್ನು ಪ್ರತಿನಿಧಿಸಿದ್ದು, ೧೯೯೧ ರ ಪ್ರಿ-ಒಲಿಂಪಿಕ್ಸ್‌ಗೆ ಭಾರತದ ಅಂಡರ್-೨೩ ತಂಡವನ್ನು ಮುನ್ನಡೆಸಿದ್ದು, ೧೯೯೫ ಮತ್ತು ೧೯೯೬ ರಲ್ಲಿ ಸೌತ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಹಾಗೂ ಮಲೇಶಿಯದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು.

ಕುಟಿನ್ಹೊರವರು ೧೯೯೬ ರಲ್ಲಿ ಗೋವಾದ ಸಾಲ್ಗೋಕರ್ ಸ್ಪೋರ್ಟ್ಸ್ ಕ್ಲಬ್ ಪರ ಆಡಿದಾಗ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ವರ್ಷದ ಆಟಗಾರ ಆಗಿದ್ದರು. [೫]

ಫುಟ್ಬಾಲ್
ಗೋವಾ

ವರ್ಗಾವಣೆ[ಬದಲಾಯಿಸಿ]

ಆಗಸ್ಟ್ ೨೦೦೨ರಲ್ಲಿ ಕುಟಿನ್ಹೊರವರು ತನ್ನ ಕ್ಲಬ್‌ಗಳಾದ ಗೋವಾದಲ್ಲಿನ ಸಾಲ್ಗೋಕರ್ ಸ್ಪೋರ್ಟ್ಸ್ ಕ್ಲಬ್ ನಿಂದ ವಾಸ್ಕೋ ಸ್ಪೋರ್ಟ್ಸ್ ಕ್ಲಬ್ ಗೆ ವರ್ಗಾವಣೆಯಾಗುತ್ತಿದ್ದಾರೆ ಎಂದು ವರದಿಯಾಯಿತು. ಹಾಗೂ ಇವರು ೨೦೦೩ ರಲ್ಲಿ ಕೋಚ್ ಆದರು.

ಗೌರವಗಳು[ಬದಲಾಯಿಸಿ]

ಭಾರತ

ಸಾಲ್ಗೋಕರ್

ವ್ಯಕ್ತಿ

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Strack-Zimmermann, Benjamin. "Bruno Coutinho". www.national-football-teams.com. Archived from the original on 19 October 2021. Retrieved 2022-07-11.
  2. Mergulhao, Marcus (28 June 2023). "After 67 yrs, iconic Salgaocar FC hangs up its sr boots". timesofindia.indiatimes.com. Panaji: The Times of India. TNN. Archived from the original on 28 June 2023. Retrieved 29 June 2023.
  3. https://web.archive.org/web/20090217141248/http://the-aiff.com/awards.php
  4. https://en.wikipedia.org/wiki/Bruno_Coutinho
  5. "Honour for Bruno". The Indian Express. 29 December 1996. Archived from the original on 23 April 1997. Retrieved 25 October 2018.
  6. "Jeje Lalpekhlua is 2016 AIFF Player of the Year". the-aiff.com. Archived from the original on 27 December 2016. Retrieved 24 July 2018.
  7. "All India Football Federation Awards: Sunil Chhetri and Bala Devi win Player of the Year Trophy". India Today. 14 February 2015. Archived from the original on 26 September 2020. Retrieved 26 September 2020.
  8. "LIST OF ARJUNA AWARD WINNERS - Football | Ministry of Youth Affairs and Sports". yas.nic.in. Ministry of Youth Affairs and Sports. Archived from the original on 25 December 2007. Retrieved 25 December 2007.
  9. "List of Arjuna Awardees (1961–2018)" (PDF). Ministry of Youth Affairs and Sports (India). Archived from the original (PDF) on 18 ಜುಲೈ 2020. Retrieved 12 ಸೆಪ್ಟೆಂಬರ್ 2020.
  10. Chaudhuri, Arunava (2000). "National Award winning Footballers". indianfootball.de. IndianFootball. Archived from the original on 1 October 2018. Retrieved 25 January 2019.