ಬಿಂಧ್ಯಾವಾಸಿನಿ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಂಧ್ಯಾವಾಸಿನಿ ದೇವಿ (ಮರಣ ೨೦೦೬) ಒಬ್ಬ ಭಾರತೀಯ ಜಾನಪದ ಸಂಗೀತಗಾರ್ತಿ. ಬಿಹಾರ ಕೋಕಿಲಾ ಎಂದು ಜನಪ್ರಿಯವಾಗಿ ಗುರುತಿಸಿಕೊಂಡಿದ್ದಳು. ಅವರು ಪಾಟ್ನಾ ಮೂಲದ ಸಂಗೀತ ಅಕಾಡೆಮಿ, ಜಾನಪದ ಸಂಗೀತವನ್ನು ಉತ್ತೇಜಿಸುವ ವಿಂಧ್ಯಾ ಕಲಾ ಮಂದಿರದ ಸ್ಥಾಪಕರು. ಅಕಾಡೆಮಿಯು ಲಕ್ನೋದ ಭಾತಖಾ೦ಡೆ ವಿಶ್ವವಿದ್ಯಾಲಯದೊಂದಿಗೆ ೫೫ ವರ್ಷಗಳಿಂದ ಸಂಬಂಧ ಹೊಂದಿದ್ದು, ಇದನ್ನು ಈಗ ಬಿಂಧ್ಯಾವಾಸಿನಿಯವರ ಸೊಸೆ ಶೋಭಾ ಸಿನ್ಹಾ, ಮಗ ಸುಧೀರ್ ಕುಮಾರ್ ಸಿನ್ಹಾ ನಡೆಸುತ್ತಿದ್ದಾರೆ. [೧] ಇವರು ಭಾರತದ ಬಿಹಾರ ರಾಜ್ಯದ ಮುಝಾಫರ್‌ಪುರದಲ್ಲಿ ಜನಿಸಿದರು ಮತ್ತು ಮೈಥಿಲಿ, ಭೋಜ್‌ಪುರಿ ಮತ್ತು ಮಗಾಹಿ ಜಾನಪದ ಸಂಗೀತದಲ್ಲಿ ಪರಿಣತಿ ಪಡೆದರು. [೨] ಅವರು ವಿವಾಹ ಗೀತ್ [೩] ಚಲನಚಿತ್ರದಲ್ಲಿ ಜನಪ್ರಿಯ ಗೀತೆ, ಛೋಟೆ ದುಲ್ಹಾ ಕೆ ಹಾಡಿದ್ದಾರೆ ಮತ್ತು ಅವರ ಅನೇಕ ಹಾಡುಗಳನ್ನು ಸಿಡಿ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. [೪]

ಭಾರತ ಸರ್ಕಾರವು ೧೯೭೪ ರಲ್ಲಿ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. [೫] ಸಂಗೀತ ನಾಟಕ ಅಕಾಡೆಮಿಯು ಆಕೆಗೆ ೧೯೯೧[೬] [೭] ನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ನೀಡಿತು ಮತ್ತು ೨೦೦೬ ರಲ್ಲಿ ಅಕಾಡೆಮಿ ಫೆಲೋಶಿಪ್‌ ಸಹ ದೊರಕಿತು. [೮] [೯] ಅವರು ೧೯೯೮ ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಅಹಲ್ಯಾ ಬಾಯಿ ಪ್ರಶಸ್ತಿಯನ್ನು ಪಡೆದರು. [೭] ಬಿಂಧ್ಯಾವಾಸಿನಿ ದೇವಿ ಅವರು ತಮ್ಮ ೮೬ ನೇ ವಯಸ್ಸಿನಲ್ಲಿ ೧೮ ಏಪ್ರಿಲ್ ೨೦೦೬ ರಂದು ತಮ್ಮ ಕಂಕರ್‌ಬಾಗ್ ನಿವಾಸದಲ್ಲಿ ನಿಧನರಾದರು. [೧೦] [೭]

 

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2022-06-29. Retrieved 2022-06-29.
  2. "ಆರ್ಕೈವ್ ನಕಲು". Archived from the original on 2022-06-29. Retrieved 2022-06-29.
  3. "Chhote Dulha Ke". Saavn. 2015. Retrieved 14 June 2015.
  4. "ITunes". ITunes. 2015. Retrieved 14 June 2015.
  5. "Padma Shri" (PDF). Padma Shri. 2015. Archived from the original (PDF) on 15 November 2014. Retrieved 11 November 2014.
  6. "Folk singer Bindhyabasini Devi is dead". One India. 18 April 2006. Retrieved 14 June 2015.
  7. ೭.೦ ೭.೧ ೭.೨ "Nitish condoles Bindhyavasini Devi's death". Web India News. 19 April 2006. Archived from the original on 26 ಜೂನ್ 2015. Retrieved 14 June 2015."Nitish condoles Bindhyavasini Devi's death" Archived 2015-06-26 ವೇಬ್ಯಾಕ್ ಮೆಷಿನ್ ನಲ್ಲಿ.. Web India News. 19 April 2006. Retrieved 14 June 2015.
  8. "Sangeet Natak Akademi Ratna Puraskar". Sangeet Natak Akademi. 2015. Archived from the original on 4 March 2016. Retrieved 14 June 2015.
  9. Mahendra Gaur (2007). Indian Affairs Annual 2005. Gyan Publishing House. p. 2813. ISBN 9788178354347.
  10. https://books.google.co.in/books?id=N2gZRxXfQesC&q=Bindhya+Basini+Devi&pg=PA46&redir_esc=y