ಬಾಲಕೃಷ್ಣ ಸಿಂಗ್
Personal information | ||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|
ಜನನ |
ಪಟಿಯಾಲ, ಪಂಜಾಬ್, ಭಾರತ | ೧೦ ಮಾರ್ಚ್ ೧೯೩೩|||||||||||||||||||||
ಮರಣ |
೩೧ ಡಿಸೆಂಬರ್ ೨೦೦೪ (ವಯಸ್ಸು ೭೧) ಪಟಿಯಾಲ, ಪಂಜಾಬ್, ಭಾರತ | |||||||||||||||||||||
Medal record
|
ಬಾಲಕೃಷ್ಣ ಸಿಂಗ್ (೧೦ ಮಾರ್ಚ್ ೧೯೩೩ - ೩೧ ಡಿಸೆಂಬರ್ ೨೦೦೪) ಅವರು ೧೯೫೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಕ್ಷೇತ್ರ ಹಾಕಿ ಆಟಗಾರರಾಗಿದ್ದರು.[೧][೨][೩] ಆಟಗಾರನಾಗಿ ಮತ್ತು ತರಬೇತುದಾರನಾಗಿ ಚಿನ್ನದ ಪದಕವನ್ನು ಗೆದ್ದ ಏಕೈಕ ಆಟಗಾರ ಬಾಲಕೃಷ್ಣ ಸಿಂಗ್. ಅವರು ೧೯೫೬ ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದರು ಮತ್ತು ೧೯೮೦ ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತಂಡದ ಮುಖ್ಯ ತರಬೇತುದಾರರಾಗಿದ್ದರು.
ಆರಂಭಿಕ ಮತ್ತು ವೈಯಕ್ತಿಕ ಜೀವನ
[ಬದಲಾಯಿಸಿ]ಬಾಲಕೃಷ್ಣರು ೧೦ ಮಾರ್ಚ್ ೧೯೩೩ರಂದು ಪಂಜಾಬ್‍ನ ಪಟಿಯಾಲದಲ್ಲಿ ಜನಿಸಿದರು.ಅವರ ತಂದೆ, ಬ್ರಿಗೇಡಿಯರ್ ದಲೀಪ್ ಸಿಂಗ್ (೧೯೨೪ ಮತ್ತು ೧೯೨೮ ರ ಒಲಂಪಿಕ್ಸ್‌ನಲ್ಲಿ ಸುದೀರ್ಘ ಜಿಗಿತಗಾರನು) ಲಾಹೋರ್‌ನ ಎಫ್.ಸಿ ಕಾಲೇಜಿನಲ್ಲಿ ತನ್ನ ವಾರ್ಡ್ ಅನ್ನು ಇಟ್ಟಾಗ, "ನಾನು ಕ್ರೀಡೆಯಲ್ಲಿ ಗೌರವ ಗಳಿಸಿದಂತೆ ನೀವು ಕಾಲೇಜಿನಲ್ಲಿ ಗೌರವವನ್ನು ಗಳಿಸಬೇಕು" ಎಂದು ಹೇಳಿದರು. ಬಾಲಕೃಷ್ಣರು ತಮ್ಮ ತಂದೆಯ ಮಾತಿನಂತೆ ಅಥ್ಲೆಟಿಕ್ಸ್ ಮತ್ತು ಹಾಕಿಯಲ್ಲಿ ಉತ್ತಮ ಸಾಧನೆ ಮಾಡಿದರು.
ವೃತ್ತಿ ಜೀವನ
[ಬದಲಾಯಿಸಿ]ಆಟಗಾರ
[ಬದಲಾಯಿಸಿ]ಮುಖ್ಯ ತರಬೇತುದಾರರಾದ ಧ್ಯಾನ್ ಚಂದ್ ಅವರ ವ್ಯಕ್ತಿತ್ವದಿಂದ ಸ್ಫೂರ್ತಿ ಪಡೆದ ಬಾಲಕೃಷ್ಣರು ಎನ್ಐಎಸ್, ಪಟಿಯಾಲಾದಲ್ಲಿ ತರಬೇತಿ ಪಡೆದರು ಮತ್ತು ೯೩ ಪ್ರತಿಶತ ಅಂಕಗಳನ್ನು ಗಳಿಸಿದರು. ಹಾಕಿಯಲ್ಲಿಯೇ ತಮ್ಮ ನಂತರದ ಜೀವನವನ್ನು ಕಳೆದರು. ೧೯೫೫ ರಲ್ಲಿ, ಪೋಲೆಂಡ್‌ನ ವಾರ್ಸಾದಲ್ಲಿನ ಅಂತರಾಷ್ಟ್ರೀಯ ಹಾಕಿ ಉತ್ಸವಕ್ಕೆ ಬಾಲಕೃಷ್ಣರವರು ಪದಾರ್ಪಣೆ ಮಾಡಿದರು. ಮೆಲ್ಬರ್ನ್ ಒಲಂಪಿಕ್ಸ್‌ನಲ್ಲಿ, ಪ್ರತಿಸ್ಪರ್ಧಿಗಳಿಗೆ ವಿಸ್ಮಯವನ್ನುಂಟುಮಾಡುವಂತೆ ಆಡಿದರು. ಅವರು ಪಾಕಿಸ್ತಾನದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಆಡಿದರು. ಆಸ್ಟ್ರೇಲಿಯಾದಲ್ಲಿ ಇವರು ತಮ್ಮ ದೋಷರಹಿತ ತಂತ್ರಗಳಿಂದ ಆಕರ್ಷಿತರಾದರು, ನಂತರದ ವರ್ಷಗಳಲ್ಲಿ ಪ್ರಸಿದ್ಧ ಆಟಗಾರರಾಗಿ ಹೊರಹೊಮ್ಮಿದರು.
ಎರಡು ವರ್ಷಗಳ ನಂತರ, ಪಾಕಿಸ್ತಾನದ ವಿರುದ್ಧ ಆಡುವ ಅವರ ಮಹತ್ವಾಕಾಂಕ್ಷೆಯು ಟೋಕಿಯೊ ಏಷ್ಯನ್ ಕ್ರೀಡಾಕೂಟದಲ್ಲಿ ನೆರವೇರಿತು. ಗೋಲು-ಕಡಿಮೆ ಇದ್ದ ಕಾರಣ ಪಾಕಿಸ್ತಾನ ಪಂದ್ಯವು ಗೆದ್ದಿತು. ೧೯೬೦ ರ ರೋಮ್ ಒಲಿಂಪಿಕ್ಸ್‌ನಲ್ಲಿ ಸಹ ಪಾಕಿಸ್ತಾನ ಚಾಂಪಿಯನ್ ಆಯಿತು. ಆ ಎರಡು ಸೋಲುಗಳು ಬಾಲಕೃಷ್ಣರಿಗೆ ಬೇಸರ ಮೂಡಿಸಿತು.
ತರಬೇತುದಾರ
[ಬದಲಾಯಿಸಿ]ಇವರು ಹಾಕಿ ಆಟದಲ್ಲಿನ ಮೊದಲ ಆಟಗಾರ-ತರಬೇತುದಾರರಾಗಿದ್ದಾರೆ. ಇವರು, ಎರಡು ಒಲಿಂಪಿಕ್ ಪದಕಗಳನ್ನು (೧೯೫೬ ಚಿನ್ನ, ೧೯೬೦ ರ ಬೆಳ್ಳಿ) ಮತ್ತು ನಾಲ್ಕು ಒಲಿಂಪಿಕ್ ತಂಡಗಳಿಗೆ ತರಬೇತಿ ನೀಡಿದ ಏಕೈಕ ತರಬೇತುದಾರ.[೪] ಬಾಲಕೃಷ್ಣರವರು ೧೯೬೫ ರಲ್ಲಿ ಮಹಿಳಾ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡಲು ಆಸ್ಟ್ರೇಲಿಯಾಕ್ಕೆ ತೆರಳಿದರು. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಮಾಲ್ಕಮ್ ಫ್ರೇಸರ್ ಬಾಲಕೃಷ್ಣರವರ ಬಗ್ಗೆ ತುಂಬಾ ಪ್ರಭಾವಿತರಾಗಿ, ಅವರು ಬಾಲಕೃಷ್ಣ ಸಿಂಗ್ ಅವರ ತರಬೇತಿ ಸಾಮರ್ಥ್ಯಗಳನ್ನು ಶ್ಲಾಘಿಸಿದರು.
ಅವರು ಒಟ್ಟು ಹಾಕಿ ಪರಿಕಲ್ಪನೆಯನ್ನು ಪ್ರಯೋಗಿಸಿದ ಮೊದಲ ತರಬೇತುದಾರರಾಗಿದ್ದಾರೆ. ೧೯೯೨ ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಅವರು ಈ ಪರಿಕಲ್ಪನೆಯನ್ನು ಮೊದಲು ಬಳಕೆಗೆ ತಂದರು. ಅವರ ದೃಷ್ಟಿಯಲ್ಲಿ ಒಟ್ಟು ಹಾಕಿ ಅಂದರೆ, ಹಾಕಿ ಬ್ಯಾಸ್ಕೆಟ್‌ಬಾಲ್‌ನಂತೆ ಆಡಬೇಕು - ಒಟ್ಟಿಗೆ ದಾಳಿ ಮಾಡಿ ಮತ್ತು ಒಟ್ಟಿಗೆ ರಕ್ಷಿಸಿಕೊಳ್ಳುವುದು.
೧೯೬೭ ರಲ್ಲಿ ಬಾಲಕೃಷ್ಣರು ಆಸ್ಟ್ರೇಲಿಯಾದಲ್ಲಿ ಐದು ತಿಂಗಳುಗಳ ಕಾಲ ಹಾಕಿ ಜ್ಞಾನವನ್ನು ನೀಡಿದರು. ಆಸ್ಟ್ರೇಲಿಯದ ಪ್ರಧಾನ ಮಂತ್ರಿ, ಹಾಕಿ ಅಂಪೈರ್ ಆಗಿರುವ ಮಾಲ್ಕಮ್ ಫ್ರೇಸ್ ಅವರು ಕೌಂಟರ್ಪಾರ್ಟ್ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾದಾಗ ಬಾಲಕೃಷ್ಣರ ಸೇವೆಗಳನ್ನು ಶ್ಲಾಘಿಸಿದರು.
೩೫ ವರ್ಷದ ಬಾಲಕೃಷ್ಣರವರು ೧೯೬೮ ರ ಮೆಕ್ಸಿಕೋ ಒಲಂಪಿಕ್ಸ್‌ನಲ್ಲಿ ತಂಡಕ್ಕೆ ತರಬೇತುದಾರರಾಗಿ ಕಂಚಿನ ಪದಕವನ್ನು ಪಡೆದರು. ಅವರ ತಂಡದವರು ಮಾಸ್ಕೋ ಒಲಂಪಿಕ್ಸ್‌ನಲ್ಲಿ ಚಿನ್ನವನ್ನು ಗೆದ್ದರು. ಬಾಂಬೆ ವಿಶ್ವಕಪ್ ಮತ್ತು ದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ಕಳಪೆ ಪ್ರದರ್ಶನವನ್ನು ನೀಡಿದ ನಂತರವೇ ಅವರನ್ನು ಮುಂದಿನ ಒಲಿಂಪಿಕ್ಸ್‌ಗೆ ಪುನಃ ಕರೆಸಲಾಯಿತು. ಅವರು ದೆಹಲಿ ಏಷ್ಯನ್ ಗೇಮ್ಸ್‌ಗಾಗಿ ಬಾಲಕಿಯರ ತಂಡವನ್ನು ರಚಿಸಿ ಪಂದ್ಯದಲ್ಲಿ ಗೆದ್ದರು. ೧೯೯೨ ರ ಬಾರ್ಸಿಲೋನಾ ಒಲಂಪಿಕ್ಸ್‌ನಲ್ಲಿ ಅವರ ತಂಡವು ಅತ್ಯದ್ಭುತವಾದ ದಾಖಲೆಯನ್ನು ಸ್ಥಾಪಿಸಿತು, ಆದರೆ ಆಟಗಾರರ ದುರಾಸೆ ಮತ್ತು ಅಶಿಸ್ತು ಅವರ ಸಂಪೂರ್ಣ ಪ್ರದರ್ಶನವನ್ನು ಹಾಳುಮಾಡಿತು. ಇದು ಬಾಲಕೃಷ್ಣರವರ ಒಂದು ಶ್ರೇಷ್ಠ ವೃತ್ತಿಜೀವನಕ್ಕೆ ಒಂದು ವಿಷಾದಕರ ಅಂತ್ಯವಾಯಿತು.
ತಮ್ಮ ಸಂಶೋಧನೆಯ ಆಧಾರದ ಮೇಲೆ, ಬಾಲಕೃಷ್ಣರು ಆಟವನ್ನು ಸರಳಗೊಳಿಸುವ ಸಲುವಾಗಿ ಪೆನಾಲ್ಟಿ ಕಾರ್ನರ್‌ಗಳು ಮತ್ತು ಸ್ಟ್ರೈಕಿಂಗ್ ಸರ್ಕಲ್ ಅನ್ನು ರದ್ದುಗೊಳಿಸುವಂತೆ ಪ್ರಸ್ತಾಪಿಸಿದರು. ಕೃತಕ ಆಟದ ಮೇಲ್ಮೈಗಳ ಪರಿಚಯವನ್ನು ಅವರು ಪ್ರಾರಂಭಿಸಿದರು. ಅವರು ೪-೪-೨-೧ ಶೈಲಿಯನ್ನು ಅಳವಡಿಸಿಕೊಂಡ ಮೊದಲ ಭಾರತೀಯ ತರಬೇತುದಾರರಾಗಿದ್ದರು. ಅವರು ೮೦ ರ ದಶಕದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Hockey Olympian Balkishan Singh passes away". www.rediff.com. December 31, 2004. Retrieved January 7, 2022.
- ↑ Balkrishan Singh, Sports-Reference / Olympic Sports. Retrieved 2019-02-15.
- ↑ https://web.archive.org/web/20081204200248/http://www.sikhhockeyolympians.com/Player%20Profiles/BalkrishenSinghGrewal.html
- ↑ https://web.archive.org/web/20161203234800/http://www.sports-reference.com/olympics/athletes/si/balkrishan-singh-1.html