ಬಾಬಾಸಾಹೇಬ್ ಆಪ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಬಾಸಾಹೇಬ್ ಆಪ್ಟೆ ಎಂದೂ ಕರೆಯಲ್ಪಡುವ ಉಮಾಕಾಂತ್ ಕೇಶವ್ ಆಪ್ಟೆ (೨೯ ಏಪ್ರಿಲ್ ೧೯೦೩ - ೧೯೭೧), ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನ ಪ್ರಥಮ ಪ್ರಚಾರಕರು (ಪೂರ್ಣವದಿ ಪ್ರಚಾರಕರು), ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಅವರಿಂದ ದೀಕ್ಷೆಯನ್ನು ಪಡೆದವರು. ಇವರ ಮರಣದ ನಂತರ, ಬಾಬಾಸಾಹೇಬ್ ಆಪ್ಟೆ ಸ್ಮಾರಕ ಸಮಿತಿಯನ್ನು ಅವರ ಗೌರವಾರ್ಥವಾಗಿ ಆರ್‌ಎಸ್‌ಎಸ್ ಪ್ರಚಾರಕ್ ಮೋರೋಪಾಂತ್ ಪಿಂಗಳೆ ಸ್ಥಾಪಿಸಿದರು. ಈ ಸಮಿತಿಯು ಪ್ರಾಚೀನ ಭಾರತದ ಇತಿಹಾಸದ ಸಂಶೋಧನೆಯನ್ನು ನಿಯೋಜಿಸುವಲ್ಲಿ ಮತ್ತು ಪ್ರಕಟಿಸುವಲ್ಲಿ ಸಕ್ರಿಯವಾಗಿದೆ.

ಜೀವನ[ಬದಲಾಯಿಸಿ]

ಆಪ್ಟೆ ಅವರು ೨೯ ಏಪ್ರಿಲ್ ೧೯೦೩ ರಂದು ವಿದರ್ಭದ ಚಿತ್ಪಾವನ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರು ಬಾಲ್ಯದಿಂದಲೇ ದೇಶಪ್ರೇಮಿಯಾಗಿದ್ದರು. ಇವರ ತಂದೆ ೧೯೧೯ ರಲ್ಲಿ ನಿಧನರಾದರು. ಇವರು ಮೆಟ್ರಿಕ್ಯುಲೇಷನ್ ನಂತರ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇವರ ಮುಖ್ಯೋಪಾಧ್ಯಾಯರು, ಬಾಲಗಂಗಾಧರ ತಿಲಕರ ಪುಣ್ಯತಿಥಿಯನ್ನು ಆಚರಿಸುವುದನ್ನು ನಿಷೇಧಿಸಿದಾಗ ಅದನ್ನ ಪ್ರತಿಬಟಿಸಿ ಕೆಲಸಕ್ಕೆ ರಾಜೀನಾಮೆ ನೀಡಿದರು. ೧೯೨೪ ರಲ್ಲಿ ಅವರು ನಾಗ್ಪುರ ದಲ್ಲಿ ಉದ್ಯಮ ಪತ್ರಿಕೆಯ ಮುದ್ರಣಾಲಯಕ್ಕೆ ಕೆಲಸಕ್ಕೆ ಸೇರಿದರು. ಇವರು ಕ್ರಾಂತಿಕಾರಿ ವಿಚಾರಗಳನ್ನು ಚರ್ಚಿಸಲು ವಿದ್ಯಾರ್ಥಿ ಮಂಡಲವನ್ನು (ವಿದ್ಯಾರ್ಥಿ ಸಮಾಜ) ರಚಿಸಿದರು. ಹೆಡ್ಗೆವಾರ್ ೧೯೨೫ ರಲ್ಲಿಈ ಉದ್ಯಮ ಸಂಸ್ಥೆಗೆ ಭೇಟಿ ನೀಡಿದಾಗ ಆಪ್ಟೆ ಅವರಿಗೆ ತಮ್ಮ ಉದಯೋನ್ಮುಖ ಸಂಸ್ಥೆಯನ್ನು ಆರ್‌ಎಸ್‌ಎಸ್‌ನೊಂದಿಗೆ ವಿಲೀನಗೊಳಿಸಲು ಸ್ಫೂರ್ತಿ ನೀಡಿದರು. ೧೯೨೭ ರಲ್ಲಿ, ಮುಂದೆ ಅವರು ಆರ್‌ಎಸ್‌ಎಸ್ ನ ಮೊದಲ ಪ್ರಚಾರಕರಾದರು. ಅಗಿನ್ನು ಪ್ರಚಾರಕರು ಎಂಬ ತಂಡ ರಚನೆ ಅಗಿರಲಿಲ್ಲ[೧] [೨]

ಕ್ರಿಯಾಶೀಲತೆ[ಬದಲಾಯಿಸಿ]

೧೯೩೦ ರ ದಶಕದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಮತ್ತು ಮುಂದೆ ದೇಶದ ಉಳಿದ ಭಾಗಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳನ್ನು (ಸ್ಥಳೀಯ ಶಾಖೆಗಳು) ಪ್ರಾರಂಭ ಮಾಡಿ ಅದನ್ನ ವಿಸ್ತರಿಸುವಲ್ಲಿ ಆಪ್ಟೆ ಪ್ರಮುಖ ಪಾತ್ರ ವಹಿಸಿದ್ದರು. ಅವರು ಆರ್‌ಎಸ್‌ಎಸ್ ಪ್ರಚಾರಕ ಜಾಲದ ಸಮನ್ವಯದಲ್ಲಿ ಹೆಡ್ಗೆವಾರ್‌ ರಿಗೆ ಪ್ರಮುಖ ಸಹಾಯಕರಾದ್ದರು, ಕಾರ್ಯಸಾಧನೆಗೆ ಅವರು ನಿರಂತರವಾಗಿ ಪ್ರಯಾಣಿಸುತ್ತಿದ್ದರು. ಪ್ರಮುಖ ಮತ್ತು ಸಮರ್ಥ ವ್ಯಕ್ತಿಗಳಿಗೆ ಗುರುತಿಸಿ ಅವರುಗಳಿಗೆ ಸಂಘದ ವಿಚಾರವನ್ನು ತಿಳಿಸಿಕೊಡುತ್ತಾ, ಅವರುಗಳನ್ನು ಪ್ರಚಾರಕರಿಗೆ ಭೇಟಿಮಾಡಿಸಿ ಸಂಘದ ಕಾರ್ಯವನ್ನು ವಿಸ್ತರಿಸಲು ವಿಶೇಷವಾಗಿ ಶ್ರಮಿಸಿದರು. ೧೯೩೫ ರಲ್ಲಿ ಪಂಜಾಬ್ ಪ್ರಾಂತ್ಯಕ್ಕೆ ಪ್ರವಾಸ ಮಾಡಿ ಹಿಂದೂ ಮಹಾಸಭಾ ಮತ್ತು ಆರ್ಯ ಸಮಾಜ ಎರಡರೊಂದಿಗೂ ಸಂಪರ್ಕವನ್ನು ಸ್ಥಾಪಿಸಿದರು. ಪಂಜಾಬ್‌ನಲ್ಲಿ ಆರ್‌ಎಸ್‌ಎಸ್ ಹರಡಲು ಅಡಿಪಾಯ ಹಾಕಿದರು. [೩]

ಆಪ್ಟೆ ೧೯೭೧ ರಲ್ಲಿ ನಿಧನರಾದರು. ಅವರನ್ನು ಆರ್‌ಎಸ್‌ಎಸ್ ಕರ್ಮಯೋಗಿ ಎಂದು ಗೌರವಿಸಿದೆ. [೪] ಹಿಂದುತ್ವದ ಅಚ್ಚಿನಲ್ಲಿ ಭಾರತೀಯ ಇತಿಹಾಸವನ್ನು ಪುನಃ ಬರೆಯುವುದರ ಜೊತೆಗೆ ಸಂಸ್ಕೃತವನ್ನು ಜನಪ್ರಿಯಗೊಳಿಸುವುದರಲ್ಲಿ ಅವರಿಗಿದ್ದ ತೀವ್ರ ಆಸಕ್ತಿಯನ್ನು ಸ್ಮರಿಸಲು, ಮೋರೋಪಂತ್ ಪಿಂಗ್ಲೆಯವರು ಈ ವಿಷಯಗಳ ಕುರಿತು ಪುಸ್ತಕಗಳನ್ನು ನಿಯೋಜಿಸಲು ಮತ್ತು ಪ್ರಕಟಿಸಲು ೧೯೭೩ ರಲ್ಲಿ ಬಾಬಾಸಾಹೇಬ್ ಆಪ್ಟೆ ಸ್ಮಾರಕ ಸಮಿತಿಯನ್ನು ಸ್ಥಾಪಿಸಿದರು. [೫] ಈ ಸಂಸ್ಥೆಯು ಮುಂದೆ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. [೬] [೭] ಆರ್‌ಎಸ್‌ಎಸ್ ಸಂಸ್ಕೃತವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಗುರುತಿಸಿ ವಾರ್ಷಿಕವಾಗಿ ನೀಡಲಾಗುವ "ಬಾಬಾ ಸಾಹೇಬ್ ಆಪ್ಟೆ ಜನ್ಮ ಶತಮಾನೋತ್ಸವ ರಾಷ್ಟ್ರೀಯ ಸಂಸ್ಕೃತ ಪ್ರಶಸ್ತಿ" ಯನ್ನು ಸ್ಥಾಪಿಸಿದೆ. [೮]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • "Works published by Babasaheb Apte Smarak Samiti". granthalaya.org. Retrieved 2014-09-25.

ಉಲ್ಲೇಖಗಳು[ಬದಲಾಯಿಸಿ]

  1. "Babasaheb Apte". Archives of RSS. Retrieved 2014-09-25.
  2. Jaffrelot 1996, pp. 46–47.
  3. Jaffrelot 1996, pp. 64–67.
  4. Sahasrabuddhe 1982.
  5. "Prof. Madhok's selfless contribution lauded; 11th Dr Wakankar award presented to Prof. Balraj Madhok". Organiser. 5 October 2008. Retrieved 2014-10-10.[ಮಡಿದ ಕೊಂಡಿ]
  6. Berti, Daniela (1 January 2007). "Hindu nationalists and local History: From ideology to local lore". Rivista di Studi Sudasiatici. 2: 5–36. Retrieved 16 August 2014.
  7. Engineer, Asghar Ali (23 October 1998). "Communal Interpretation of History". The Hindu. Retrieved 2014-09-29.
  8. "Future of India in learning Sanskrit: K. S. Sudharshan". Organiser. 30 October 2005. Retrieved 2014-10-10.[ಮಡಿದ ಕೊಂಡಿ]