ಅಖಿಲ ಭಾರತೀಯ ಹಿಂದೂ ಮಹಾಸಭಾ

ವಿಕಿಪೀಡಿಯ ಇಂದ
Jump to navigation Jump to search

ಅಖಿಲ ಭಾರತೀಯ ಹಿಂದೂ ಮಹಾಸಭಾ ಭಾರತದಲ್ಲಿನ ಒಂದು ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿ ರಾಜಕೀಯ ಪಕ್ಷ. ಅದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಸಮರ್ಥಿಸಲ್ಪಟ್ಟ ಜಾತ್ಯತೀತತೆಗೆ ಪರ್ಯಾಯವಾಗಿ, ಆದರೆ ಅಖಿಲ ಭಾರತ ಮುಸ್ಲಿಮ್ ಲೀಗ್ ಮತ್ತು ಇತರ ಇಸ್ಲಾಮಿ ಸಂಘಗಳು ಪ್ರಚಾರಮಾಡಿದ ಮುಸ್ಲಿಮ್ ಪ್ರತ್ಯೇಕತಾವಾದವನ್ನು ವಿರೋಧಿಸಲು ಪ್ರಯತ್ನಿಸುವ ಮತ್ತು ಅದಕ್ಕೆ ಆಕರ್ಷಿತವಾಗದ ಭಾರತದ ಧಾರ್ಮಿಕ ಬಹುಮತವಾದ ಹಿಂದೂಗಳಿಗಾಗಿ ಸ್ಥಾಪಿಸಲಾಯಿತು. ಅತ್ಯಂತ ಹಳೆಯ ಹಿಂದೂ ರಾಷ್ಟ್ರೀಯವಾದಿ ರಾಜಕೀಯ ಪಕ್ಷವಾದರೂ, ಭಾರತೀಯ ರಾಜಕೀಯದ ಮೇಲೆ ಅದರ ಪ್ರಭಾವದಲ್ಲಿ ಹಿಂದೂ ಮಹಾಸಭಾ ಪ್ರಮುಖವಾಗಿಲ್ಲದ್ದಾಗಿಯೇ ಉಳಿದಿದೆ, ಸ್ವಾತಂತ್ರ್ಯದ ಮೊದಲು ಮತ್ತು ಆಮೇಲೆ.