ಚಿತ್ಪಾವನ

ವಿಕಿಪೀಡಿಯ ಇಂದ
Jump to navigation Jump to search
ಚಿತ್ಪಾವನ/ಕೊಂಕಣಸ್ಥ ಬ್ರಾಹ್ಮಣರು
Classification ಬ್ರಾಹ್ಮಣ
Religions ಹಿಂದೂ
Languages ಮರಾಠಿ, Chitpavani (a dialect of Konkani)[೧]
Populated States Maharashtra, Konkan (Goa and coastal Karnataka); some parts of Madhya Pradesh, Gujarat


ಚಿತ್ಪಾವನ[ಬದಲಾಯಿಸಿ]

ಚಿತ್ಪಾವನರು ಅಥವಾ ಕೋಕಣಸ್ಥರು ಎನ್ನುವುದು ಸ್ಮಾರ್ತ ಬ್ರಾಹ್ಮಣರ ಒಂದು ಸಮುದಾಯ. ಇವರು ಹೆಚ್ಚಾಗಿ ಪಶ್ಚಿಮ ಭಾರತದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. ಚಿತ್ಪಾವನ ಸಮುದಾಯದ ಪೌರಾಣಿಕ ಮೂಲವನ್ನು ಸ್ಕಂದ ಪುರಾಣದ ಸಹ್ಯಾದ್ರಿಕಾ೦ಡದಲ್ಲಿ ಪರಶುರಾಮರ ಕಥೆಯನ್ನು ಉಲ್ಲೇಖಿಸುತ್ತಾ ವಿವರಿಸಲಾಗಿದೆ. ಇವರು ಶಾತವಾಹನರ ಕಾಲದಲ್ಲಿ ರೂಪಗೊ೦ಡ ಪ೦ಗಡವೆ೦ದೂ ಹೇಳಲಾಗುತ್ತದೆ. ಅಲ್ಲದೆ, ಪ್ರಾಕೃತ ಮರಾಠಿಯಲ್ಲಿ ಬರೆಯಲಾದ ಚಿತ್ಪಾವನರ ಉಪನಾಮವಾದ ಘೈಸಾಸ್ ನ ಉಲ್ಲೆಖ ಕೋಕಣದ (ಮಹಾರಾಷ್ಟ್ರ) ದಿವೆಯಾಗರ್ ನಲ್ಲಿ ಸಿಕ್ಕ ತಾಮ್ರಪತ್ರವೊ೦ದರಲ್ಲಿ ಇದೆ. ಈ ತಾಮ್ರಪತ್ರವು ೧೦೬೦ ನೇ ವರ್ಷದಲ್ಲಿ ರಾಜ್ಯವಾಳಿದ್ದ ಶಿಲಾಹರ ರಾಜ್ಯದ ರಾಜ ಮುರುನಿಯ ಕಾಲದ್ದು.

ಆದಾಗ್ಯೂ , ಚಿತ್ಪಾವನರ ದಾಖಲಿತ ಇತಿಹಾಸವು 18 ನೇ ಶತಮಾನದಲ್ಲಿ ಆರಂಭವಾಗುತ್ತದೆ. ಛತ್ರಪತಿ ಶಾಹು ತನ್ನ ಐದನೇ ಮುಖ್ಯಮಂತ್ರಿಯಾಗಿ (ಪೇಶ್ವೆ) ಚಿತ್ಪಾವನರಲ್ಲಿ ಒಬ್ಬನಾದ ಬಾಲಾಜಿ ವಿಶ್ವನಾಥ ಭಟ್ ನನ್ನು ನೇಮಕ ಮಾಡಿದ ನಂತರ ಚಿತ್ಪಾವನರು ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಪಡೆದುಕೊ೦ಡರು. ತಮ್ಮ ಸತತ ಆಳ್ವಿಕೆಯ ಕಾಲದಲ್ಲಿ ಇವರಲ್ಲಿ ಕೆಲವರು ಉತ್ತಮ ಪ್ರಮುಖ ಪದವಿಗಳನ್ನು ಗಳಿಸಿದರು. ಪೇಶ್ವೆಯವರ ಆಳ್ವಿಕೆಯ ಕಾಲದಲ್ಲಿ ಇವರು ಬೇರೆ ಬೇರೆ ಪ್ರಾ೦ತ್ಯಗಳಲ್ಲಿ ನೆಲೆಗೊಂಡರು. ಚಿತ್ಪಾವನರು ಮಹಾರಾಷ್ಟ್ರ ಮೂಲದವರಾದರೂ ಭಾರತದಾದ್ಯ೦ತ ಹಾಗೂ ಅಮೆರಿಕ. ಯೂರೋಪ್ ಗಳಲ್ಲಿ ಕೂಡ ಹರಡಿಕೊ೦ಡಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ, ಕಾರ್ಕಳ ಈ ಊರುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಾಸಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವಂತಹ ದ.ರಾ.ಬೇಂದ್ರೆ ಯವರು ಸಹ ಚಿತ್ಪಾವನ ಕುಲದವರು.

ಚಿತ್ವಾವನರು ಭಾರತದ ಸ್ವಾತಂತ್ಯ ಸ೦ಗ್ರಾಮದಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಇವುಗಳಲ್ಲಿ ಪ್ರಮುಖರಾದವರು ವಾಸುದೇವ ಬಲವಂತ ಫಡ್ಕೆ, ವಿನಾಯಕ ದಾಮೋದರ ಸಾವರ್ಕರ್, ಗೋಪಾಲಕೃಷ್ಣ ಗೋಖಲೆ ಹಾಗೂ ಬಾಲ ಗಂಗಾಧರ ತಿಲಕ್.

ಉಲ್ಲೇಖಗಳು[ಬದಲಾಯಿಸಿ]