ವಿಷಯಕ್ಕೆ ಹೋಗು

ಬಾಗೇಶ್ವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A bird's eyeview of Bageshwar
Bagnath Temple
Ghat on the Sarju River
Suspension Bridge on the Sarju River
Lord Shiva Statue
ಮೇಲಿನಿಂದ ಪ್ರದಕ್ಷಿಣಾಕಾರವಾಗಿ: ಬಾಗೇಶ್ವರ್‌ನ ಪಕ್ಷಿನೋಟ, ಸರ್ಜು ಘಾಟ್, ಶಿವನ ವಿಗ್ರಹ, ಸರ್ಜು ಮೇಲೆ ತೂಗುಸೇತುವೆಗಳು ಮತ್ತು ಬಾಗ್‍ನಾಥ್ ದೇವಾಲಯ

ಬಾಗೇಶ್ವರ್ ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ್ ಜಿಲ್ಲೆಯಲ್ಲಿನ ಒಂದು ಪಟ್ಟಣ ಮತ್ತು ಪುರಸಭೆ ಮಂಡಳಿಯಾಗಿದೆ. ಬಾಗೇಶ್ವರ್ ರಮಣೀಯ ಪರಿಸರ, ಹಿಮನದಿಗಳು, ನದಿಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು ಬಾಗೇಶ್ವರ ಜಿಲ್ಲೆಯ ಆಡಳಿತ ಕೇಂದ್ರವೂ ಆಗಿದೆ.[]

ಬಾಗೇಶ್ವರ್ ಟಿಬೆಟ್ ಮತ್ತು ಕುಮಾವ್ಞು ನಡುವಿನ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು ಮತ್ತು ಭೋಟಿಯಾ ವ್ಯಾಪಾರಿಗಳು ಇಲ್ಲಿಗೆ ಆಗಾಗ್ಗೆ ಬಂದು ರತ್ನಗಂಬಳಿಗಳು ಮತ್ತು ಬಾಗೇಶ್ವರ್‌ನ ಇತರ ಸ್ಥಳೀಯ ಉತ್ಪನ್ನಗಳಿಗೆ ಬದಲಾಗಿ ಟಿಬೆಟಿಯನ್ ಸರಕುಗಳು, ಉಣ್ಣೆ, ಉಪ್ಪು ಮತ್ತು ಬೊರಾಕ್ಸ್ ಅನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.[]

ನಗರವು ಬಹಳ ಧಾರ್ಮಿಕ, ಐತಿಹಾಸಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ. ಬಾಗೇಶ್ವರ್‌ವನ್ನು ವಿವಿಧ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಇದನ್ನು ಶಿವನೊಂದಿಗೆ ಸಂಬಂಧಿಸಲಾಗಿದೆ.[]

ದೇವಾಲಯಗಳು

[ಬದಲಾಯಿಸಿ]
ಬಾಗ್‍ನಾಥ್ ದೇವಾಲಯವನ್ನು 1640 ರಲ್ಲಿ ರಾಜ ಲಕ್ಷ್ಮಿ ಚಂದ್ ನಿರ್ಮಿಸಿದನು
ಬೈಜ್‍ನಾಥ್‍ನಲ್ಲಿ ದೇವಾಲಯಗಳ ಗುಂಪು; ಬಾಗೇಶ್ವರ್‌ನ ವಾಯವ್ಯಕ್ಕೆ 20 ಕಿ.ಮೀ. ದೂರದಲ್ಲಿದೆ.

ಹಿಂದೂ ಧರ್ಮವು ಬಹುಪಾಲು ಜನರ ಧರ್ಮವಾಗಿರುವುದರಿಂದ ವಿವಿಧ ದೇವಾಲಯಗಳು ಬಾಗೇಶ್ವರ್‌ನಲ್ಲಿವೆ.[] ಪ್ರಮುಖವಾದದ್ದವೆಂದರೆ:

  • ಬಾಗ್‍ನಾಥ್ ದೇವಸ್ಥಾನ

ಗೋಮತಿ ಮತ್ತು ಸರ್ಜು ನದಿಗಳ ಸಂಗಮದಲ್ಲಿ ಶಂಕುವಿನಾಕಾರದ ಗೋಪುರವಿರುವ ದೊಡ್ಡ ದೇವಾಲಯ ನಿಂತಿದೆ. ಇಲ್ಲಿ ಶಿವನ ಗುಣವಾಚಕವಾದ "ಹುಲಿ ಪ್ರಭು" ಎಂದು ಕರೆಯಲ್ಪಡುವ, ಬಾಗೇಶ್ವರ್ ಅಥವಾ ವ್ಯಾಗ್ರೇಶ್ವರ್‌ನ ದೇಗುಲವಿದೆ. ಈ ದೇವಾಲಯವನ್ನು ಕ್ರಿ.ಶ 1450 ರಲ್ಲಿ ಕುಮಾವ್ಞು ರಾಜ ಲಕ್ಷ್ಮಿ ಚಂದ್ ನಿರ್ಮಿಸಿದನು.[]

  • ಬೈಜ್‍ನಾಥ್ ದೇವಸ್ಥಾನ

ಬೈಜ್‍ನಾಥ್ ದೇವಾಲಯವು ಗೋಮತಿ ನದಿಯ ಎಡದಂಡೆಯಲ್ಲಿದೆ. ಇದು ಶಿವನ ದೇವಾಲಯವಾಗಿದ್ದು, ಇದನ್ನು ಬ್ರಾಹ್ಮಣ ವಿಧವೆಯೊಬ್ಬಳು ನಿರ್ಮಿಸಿದಳು.[]

  • ಚಂಡಿಕಾ ದೇವಸ್ಥಾನ

ಚಂಡಿಕಾ ದೇವಿಗೆ ಸಮರ್ಪಿತವಾದ ದೇವಾಲಯವು ಬಾಗೇಶ್ವರ್‌ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. [ ಉಲ್ಲೇಖದ ಅಗತ್ಯವಿದೆ ]

  • ಶ್ರೀಹಾರು ದೇವಸ್ಥಾನ

ಮತ್ತೊಂದು ಪ್ರಮುಖ ದೇವಾಲಯವಾದ ಶ್ರೀಹಾರು ದೇವಸ್ಥಾನವು ಬಾಗೇಶ್ವರ್‌ನಿಂದ ಸುಮಾರು 5 ದೂರದಲ್ಲಿದೆ.

  • ಗೌರಿ ಉಡಿಯಾರ್

ಇದು ಬಾಗೇಶ್ವರ್‌ನಿಂದ 8 ಕಿ.ಮಿ. ದೂರದಲ್ಲಿ. 20 ಮೀ. x 95 ಮೀ. ಅಳತೆಯ ಒಂದು ದೊಡ್ಡ ಗುಹೆ ಇಲ್ಲಿ ಸ್ಥಿತವಾಗಿದ್ದು ಇದರಲ್ಲಿ ಶಿವನ ವಿಗ್ರಹಗಳಿವೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Bageshwar PinCode". citypincode.in. Archived from the original on 2015-12-08. Retrieved 2014-03-17.
  2. Bageshwar, The Imperial Gazetter of India, 1909
  3. "Uttarayani fest to bring Kumaon, Garhwal together". ದಿ ಟೈಮ್ಸ್ ಆಫ್‌ ಇಂಡಿಯಾ. Almora. TNN. 3 January 2015. Retrieved 7 July 2017.
  4. Indusnettechnologies, Goutam Pal, Dipak K S, SWD. "Temples: District of Bageshwar, Uttarakhand, India". bageshwar.nic.in. Archived from the original on 20 July 2016. Retrieved 5 August 2016.{{cite web}}: CS1 maint: multiple names: authors list (link)
  5. "Bagnath Temple (Bageshwar)". onlytravelguide.com.
  6. "Temples in Bageshwar".