ಬಿಳಿಗಾರ
ಗೋಚರ
ಬಿಳಿಗಾರ (ಬೋರ‍್ಯಾಕ್ಸ್, ಸೋಡಿಯಮ್ ಬೋರೇಟ್) ಒಂದು ಮುಖ್ಯವಾದ ಬೊರಾನ್ ಸಂಯುಕ್ತ, ಖನಿಜ, ಮತ್ತು ಬೋರಿಕ್ ಆಮ್ಲದ ಲವಣವಾಗಿದೆ. ಪುಡಿಮಾಡಿದ ಬಿಳಿಗಾರ ಬಿಳಿಯಾಗಿದ್ದು, ನೀರಿನಲ್ಲಿ ಕರಗುವ ಮೃದು ವರ್ಣರಹಿತ ಸ್ಫಟಿಕಗಳನ್ನು ಹೊಂದಿರುತ್ತದೆ. ವಾಣಿಜ್ಯಿಕವಾಗಿ ಮಾರಾಟಮಾಡಲಾದ ಬಿಳಿಗಾರವನ್ನು ಭಾಗಶಃ ನಿರ್ಜಲೀಕರಿಸಲಾಗಿರುತ್ತದೆ.
ಬಿಳಿಗಾರವು ಅನೇಕ ಮಾರ್ಜಕಗಳು, ಸೌಂದರ್ಯವರ್ಧಕಗಳು, ಮತ್ತು ಇನ್ಯಾಮಲ್ ಲೇಪಗಳ ಘಟಕವಾಗಿದೆ. ಇದನ್ನು ಜೀವರಸಾಯನಶಾಸ್ತ್ರದಲ್ಲಿ ಕಾಪುದ್ರಾವಣಗಳನ್ನು ತಯಾರಿಸಲು, ಬೆಂಕಿನಿವಾರಕವಾಗಿ, ಶಿಲೀಂಧ್ರ ಪ್ರತಿರೋಧಕ ಸಂಯುಕ್ತವಾಗಿ, ನಾರುಗಾಜಿನ ತಯಾರಿಕೆಯಲ್ಲಿ, ಲೋಹಶಾಸ್ತ್ರದಲ್ಲಿ ಮಿಶ್ರಣ ಪದಾರ್ಥವಾಗಿ, ವಿಕಿರಣಶೀಲ ಮೂಲಗಳಿಗೆ ನ್ಯೂಟ್ರಾನ್ ಸೆಳೆ ಫಲಕಗಳಾಗಿ, ಅಡುಗೆಯಲ್ಲಿ ರಚನಾ ಪದಾರ್ಥವಾಗಿ, ಇತರ ಬೋರಾನ್ ಸಂಯುಕ್ತಗಳಿಗೆ ಪೂರ್ವವರ್ತಿಯಾಗಿ ಬಳಸಲಾಗುತ್ತದೆ. ಇದರ ವಿಲೋಮವಾದ ಬೋರಿಕ್ ಆಮ್ಲದೊಂದಿಗೆ ಸೇರಿಸಿದಾಗ ಕೀಟನಾಶಕವಾಗಿ ಉಪಯುಕ್ತವಾಗಿದೆ.