ವಿಷಯಕ್ಕೆ ಹೋಗು

ಬಳ್ಪ ಗ್ರಾಮ

ನಿರ್ದೇಶಾಂಕಗಳು: Coordinates: Unable to parse latitude as a number:12.3374.830200
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಳ್ಪ
ಗ್ರಾಮ
Coordinates: Coordinates: Unable to parse latitude as a number:12.3374.830200
{{#coordinates:}}: invalid latitude
ದೇಶ India
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ತಾಲೂಕುಗಳುಸುಳ್ಯ
Government
 • Bodyಗ್ರಾಮ ಪಂಚಾಯತ್
Population
 (2011)
 • Total೨,೯೭೩
ಭಾಷೆಗಳು
 • ಐಚ್ಚಿಕಕನ್ನಡ, ತುಳುlತುಳು and ಅರೆಭಾಷೆ, ಹವ್ಯಕ
Time zoneUTC+5:30 (IST)
ಪಿನ್
574232
ಟೆಲಿಪೋನ್ ಕೋಡು08257
ISO 3166 codeIN-KA
Vehicle registrationKA 21
ಹತ್ತಿರದ ಪಟ್ಟಣಮಂಗಳೂರು
Sex ratio1:1 /
ಸಾಕ್ಷರತೆ83.96 %
ಲೋಕ ಸಭೆ constituencyಮಂಗಳೂರು
ವಿಧಾನ ಸಭೆ constituencyಸುಳ್ಯ
ಹವಾಮಾನತಂಪು

ಬಳ್ಪ ಸುಳ್ಯ ತಾಲೂಕಿನ ಉತ್ತರದ ಗಡಿ ಗ್ರಾಮಗಳಲ್ಲೊಂದು. ಈ ಗ್ರಾಮದ ಹೊರ ಪ್ರದೇಶದಲ್ಲಿ ಕುಮಾರಧಾರ ನದಿ ಹರಿಯುತ್ತದೆ. ಪೂರ್ವಕ್ಕೆ ಯೇನೆಕಲ್ಲು ಗ್ರಾಮ, ಪಶ್ಚಿಮಕ್ಕೆ ಕೇನ್ಯ ಗ್ರಾಮ ಮತ್ತು ದಕ್ಷಿಣಕ್ಕೆ ಗುತ್ತಿಗಾರು ಗ್ರಾಮಗಳಿವೆ. ಇದು ಕೃಷಿ ಪ್ರಧಾನ ಗ್ರಾಮಗಳಲ್ಲೊಂದು. ಪಂಜದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಮುಖ್ಯ ರಸ್ತೆಯ ಉತ್ತರಕ್ಕೆ ಈ ಗ್ರಾಮವು ಹರಡಿಕೊಂಡಿದೆ. ಗ್ರಾಮದೊಳಗಿರುವ ರಸ್ತೆಗಳು ಕಚ್ಚಾ ರಸ್ತೆಗಳು. ಮುಖ್ಯ ರಸ್ತೆಯಲ್ಲಿರುವ ಬಳ್ಪ ಪೇಟೆಯೇ ಗ್ರಾಮಕೇಂದ್ರ. ಪಂಚಾಯತ್, ಕಂದಾಯ ಇಲಾಖೆಯ ಕಛೇರಿ, ಅಂಗಡಿ ಮುಂಗಟ್ಟುಗಳು ಇಲ್ಲಿ ಕೇಂದ‍್ರೀಕೃತವಾಗಿದೆ. ಬಳ್ಪದಲ್ಲಿ ಅಡಿಕೆ, ತೆಂಗು, ಕರಿಮೆಣಸು, ಬಾಳೆ ಮೊದಲಾದ ವಾಣಿಜ್ಯ ಬೆಳೆಗಳು ಜನಪ್ರಿಯಗೊಂಡಿದೆ. ಬಳ್ಪ ಗ್ರಾಮದ ಒಂದಷ್ಟು ಭಾಗ ಮಾತ್ರ ಅರಣ್ಯದಿಂದಾವೃತವಾಗಿದೆ. ಮುಖ್ಯ ರಸ್ತೆಯ ಉತ್ತರಕ್ಕೆ ಯೇನೆಕಲ್ಲು ಗ್ರಾಮಕ್ಕೆ ತಾಗಿಕೊಂಡಿರುವ ಭಾಗವನ್ನು ಬಳ್ಪ ರಕ್ಷಿತಾರಣ್ಯವೆಂದು ಗುರುತಿಸಲಾಗಿದೆ. ಉತ್ತಮ ವನ್ಯಜೀವಿ ಸಂಕುಲದೊಂದಿಗೆ ಬೆತ್ತದ ನಡುತೋಪು ಇಲ್ಲಿದೆ. ಅಲ್ಲದೇ ಸರಕಾರಿ ಸಾಗುವಾನಿ ತೋಟವಿದೆ. []

ಸಾರಿಗೆ ಸೌಲಭ್ಯಗಳು

[ಬದಲಾಯಿಸಿ]

ಬೀದಿಗುಡ್ಡೆಗೆ ಸರಕಾರಿ ಬಸ್ಸಿನ ಸೌಕರ್ಯವಿದೆ. ಅಲ್ಲದೇ ಖಾಸಗಿ ವಾಹನಗಳು ಜನರಿಗೆ ಅನುಕೂಲತೆ ಒದಗಿಸಿವೆ.

ಪ್ರವಾಸಿ ತಾಣ

[ಬದಲಾಯಿಸಿ]

ಬಳ್ಪ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಮಧ್ಯಯುಗಕ್ಕೆ ಸೇರಿದ ವಿಶಾಲವಾದ ಕೆರೆ ಇದೆ. ಇದನ್ನುಭೋಗಾಯನ ಕೆರೆ ಎಂದು ಕರೆಯುತ್ತಾರೆ. ಬಳ್ಪ ಗ್ರಾಮದ ಬೀದಿಗುಡ್ಡೆಯಲ್ಲಿ ತ್ರಿಶೂಲಿನಿ ದೇವಾಲಯವಿದೆ. [] ಪ್ರಾಚೀನ ಕಾಲಕ್ಕೆ ಸೇರಿದ ಈ ದೇವಾಲಯ ಸಂಪೂರ್ಣ ಶಿಲಾಮಯವಾಗಿದೆ. ಶಿಥಿಲಾವಸ್ಥೆಯಲ್ಲಿರುವುದಾದರೂ ಇಲ್ಲಿಯ ಶಿಲ್ಪಕಲೆ ನೈಪುಣ್ಯ ಉನ್ನತ ಮಟ್ಟದ್ದಾಗಿದೆ. ಸುಳ್ಯ ತಾಲೂಕಿನೊಳಗಿರುವ ಶಾಸನಗಳಲ್ಲಿ ಅತ್ಯಂತ ಹಳೆಯದಾದ್ದು ಬಳ್ಪ ಶಾಸನ.

ವಿಸ್ತೀರ್ಣ

[ಬದಲಾಯಿಸಿ]

ಬಳ್ಪ ಗ‍್ರಾಮದ ವಿಸ್ತೀರ್ಣ ಸುಮಾರು ೧೫೫೨.೨೨ ಹೆಕ್ಟೇರ್. ಗ್ರಾಮದಲ್ಲಿ ವಾಸಿಸುವ ೨೮೯೯ ಜನರಲ್ಲಿ ಸುಮಾರು ೨೦೩೦ ಜನರು ಅಕ್ಷರಸ್ಥರು. []

ಸಂಸ್ಥೆಗಳು

[ಬದಲಾಯಿಸಿ]

ಪಂಜ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇಲ್ಲಿದೆ. ಬಳ್ಪದಲ್ಲಿ ಹಿ.ಪ್ರಾ. ಶಾಲೆಯಿದ್ದು, ಬೀದಿಗುಡ್ಡೆ ಎಣ್ಣೆಮಜಲುಗಳಲ್ಲಿ ಕಿ. ಪ‍್ರಾ. ಶಾಲೆಗಳಿದ್ದು, ಬೀದಿಗುಡ್ಡೆ, ಬಳ್ಪ, ಎಣ್ಣೆಮಜಲುಗಳಲ್ಲಿ ಅಂಗನವಾಡಿ ಕೇಂದ್ರಗಳು ಇವೆ. ಹೈಸ್ಕೂಲು ಕಾಲೇಜುಗಳಿಗೆ ಸುಬ್ರಹ್ಮಣ್ಯ, ಪಂಜ, ಯೇನೆಕಲ್ಲುಗಳಿಗೆ ಹೋಗುತ್ತಾರೆ. ಪ್ರಾಥಮಿಕ ಆರೋಗ್ಯ ಸಹಾಯಕಿಯರ ವಸತಿಗೃಹ ಇಲ್ಲಿದೆ. ಹೆಚ್ಚಿನ ಚಿಕಿತ್ಸೆಗಳಿಗೆ ಪಂಜಕ್ಕೆ ತೆರಳುತ್ತಾರೆ. ಊರಿನಲ್ಲಿ ಅಂಗಡಿ, ಹೋಟೇಲುಗಳಿದ್ದು ಹೆಚ್ಚಿನ ವ್ಯವಹಾರಕ್ಕೆ ಪಂಜ, ಸುಬ್ರಹ್ಮಣ್ಯಕ್ಕೆ ಹೋಗುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://villageinfo.in/karnataka/dakshina-kannada/sulya/balpa.html
  2. ಬಳ್ಪ ತ್ರಿಶೂಲಿನೀ ದೇವಸ್ಥಾನದಲ್ಲಿ ಬ್ರಹ್ಮರಥ ಸಮರ್ಪಣೆ ನಿಖರ ನ್ಯೂಸ್ April 05 2018
  3. ಸುದ್ದಿ ಮಾಹಿತಿ ಸುಳ್ಯ. ಸುಳ್ಯ: ಯು.ಪಿ.ಶಿವಾನಂದ, ಸುದ್ದಿ ಮಾಹಿತಿ ಕೇಂದ್ರ ಸುಳ್ಯ. 2004. pp. ೬೪೪-೬೪೫.