ಪ್ರಕಾಶ್ ಜಿ. ಬುರ್ಡೆ
ಮುಂಬಯಿನಗರದ ಕನ್ನಡ ಪ್ರಿಯರಿಗೆ, ಸಂಘಟಕ, ಸಾಹಿತಿ, ಬಹುಭಾಷಾತಜ್ಞ, ಸಂಗೀತ ತಜ್ಞ, ವಿಮರ್ಶಕ, ಪ್ರಕಾಶ್ ಜಿ. ಬುರ್ಡೆ, (ನವೆಂಬರ್ ೨೪, ೧೯೩೮ - ಜನವರಿ ೪, ೨೦೧೬) ಪರಿಚಿತ ಹೆಸರು. ಬುರ್ಡೆಯವರು, ಮೂಲತಃ ಕುಮುಟಾದವರು. ನಂತರ ಮುಂಬಯಿನಲ್ಲಿ ನೆಲೆಸಿ .
ವಿದ್ಯಾಭ್ಯಾಸ, ಹಾಗೂ ವೃತ್ತಿಜೀವನ
[ಬದಲಾಯಿಸಿ]೧೯೫೯ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಪದವಿ ಗಳಿಸಿದರು. ಔಷಧಿ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಮುಂಬಯಿನಗರದ ವರ್ಲಿ ಜಿಲ್ಲೆಯಲ್ಲಿರುವ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕಂಪೆನಿ ಸೇರಿ ಮಾರುಕಟ್ಟೆ ಮ್ಯಾನೇಜರ್ ಕೆಲಸದ ನಿಮಿತ್ತ ಪುಣೆ, ನಾಗಪುರ ಮತ್ತು ಜಬಲ್‌ಪುರಗಳಲ್ಲಿಯೂ ನೆಲೆಸಿದ್ದರು. ಅಲ್ಲಿ ಸೇವೆ ಸಲ್ಲಿಸುತ್ತಾ ಹಲವು ವಿಭಾಗಗಳಲ್ಲಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೯೨ ರಲ್ಲಿ ನಿವೃತ್ತರಾದರು.
ಹಿಂದೂಸ್ತಾನಿ ಸಂಗೀತದಲ್ಲಿ ಒಲವು
[ಬದಲಾಯಿಸಿ]ಪ್ರಕಾಶರ ತಾಯಿಯವರಾದ ಭವಾನಿಯವರು, ಗದಗಿನ ಪಂಚಾಕ್ಷರಿ ಗವಾಯಿಯವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದರು. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ತಾಯಿಯವರ ಒಡನಾಟದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡರು. ಉಸ್ತಾದ್ ಗುಲಾಮ್ ರಸೂಲ್‌ರಿಂದ ಪುಣೆಯಲ್ಲಿ ತಬಲಾ ಶಿಕ್ಷಣ ಪಡೆದರು[೧]
ನಿಯತ ಕಾಲಿಕಗಳಲ್ಲಿ ವಿಮರ್ಶೆ
[ಬದಲಾಯಿಸಿ]ಇಂಗ್ಲೀಷ್, ಮರಾಠಿ, ಕನ್ನಡ, ಕೊಂಕಣಿ, ಸಂಸ್ಕೃತ, ಹಿಂದಿ ಮತ್ತು ಗುಜರಾತಿ ಭಾಷೆಯಲ್ಲಿ ಪ್ರಭುತ್ವಗಳಿಸಿದ ಪ್ರಕಾಶ್, ಮುಂಬಯಿನ ಕನ್ನಡ-ಮರಾಠಿಗರ ಮಧ್ಯೆ ಒಂದು ಸೇತುವೆಯಂತೆ ಕೆಲಸ ನಿರ್ವಹಿಸುತ್ತಿದ್ದರು. 'ಸಂಗೀತ ರಿಸರ್ಚ್ ಅಕ್ಯಾಡೆಮಿ ಕೊಲ್ಕತ್ತಾ', ಮತ್ತು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗಳಲ್ಲಿ ಸಂಗೀತದ ವಿಮರ್ಶೆಯ ಲೇಖನಗಳನ್ನು ಬರೆದರು.[೨]
೧೯೮೪-೯೪ ರವರೆಗೆ ಮುಂಬಯಿನಾಗರದ 'ಟೈಮ್ಸ್ ಆಫ್ ಇಂಡಿಯ', 'ಎಕೊನೊಮಿಕ್ಸ್ ಟೈಮ್ಸ್', ಮತ್ತು 'ಆಫ್ಟರ್ ನೂನ್'ಗಳಲ್ಲಿ ಅವರು ನಗರದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮಗಳನ್ನು ವೀಕ್ಷಿಸಿ, ತಮ್ಮ ವಿಮರ್ಶನಾತ್ಮಕ ಲೇಖನಗಳನ್ನು ಬರೆದರು.
ಮುಂಬಯಿ ಕರ್ನಾಟಕ ಸಂಘದಲ್ಲಿ
[ಬದಲಾಯಿಸಿ]೧೯೯೩ ಕರ್ನಾಟಕ ಸಂಘದ ಉಪ-ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದರು. ಸಮಿತಿಯ ಸದಸ್ಯರಾಗಿ ೩ ದಶಕಗಳ ಕಾಲ ಸೇವೆ ಸಲ್ಲಿಸಿದರು. ಕರ್ನಾಟಕ ಸಂಘದ ವಿಶ್ವಸ್ಥ ಮಂಡಳಿಯ ನಿರ್ದೇಶಕರಾಗಿ ೧೯೯೬ ರ ವರೆಗೆ ಸೇವೆಸಲ್ಲಿಸಿದ್ದಾರೆ. ಬುರ್ಡೆಯವರು, ಕಲಾಭಾರತಿ ಮ್ಯೂಜಿಕ್ ಪೋರಂ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾಭಾರತಿ ನಿರ್ದೇಶಕರಾಗಿ ಅವರು ಆಯೋಜಿಸಿದ ಸಂಗೀತ ಕಾರ್ಯಕ್ರಮಗಳು ದೇಶದಾದ್ಯಂತ ಮನ್ನಣೆ ಗಳಿಸಿತು. ಇಂಗ್ಲೀಷ್, ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ಅವರು ಕನ್ನಡ ಮರಾಠಿ ಸ್ನೇಹಸೇತುವಾಗಿ ಕೆಲಸ ಮಾಡುತ್ತಿದ್ದಾರೆ. ಸಂಗೀತ ರಿಸರ್ಚ್ ಅಕಾಡೆಮಿ ಕಲ್ಕತ್ತಾ, ಉದಯವಾಣಿ, ಪತ್ರಿಕೆಗಳಿಗೆ ಸಂಗೀತ ವಿಮರ್ಶನಾತ್ಮಕ ಲೇಖನಗಳನ್ನು ಬರೆದಿದ್ದಾರೆ ಹೊಸ ತಲೆಮಾರಿಗೆ ಸಂಗೀತವನ್ನು ಪರಿಚಯಿಸುವ ಅದರಲ್ಲಿ ಆಸಕ್ತಿ ಹುಟ್ಟುವಂತೆ ಕಾರ್ಯಕ್ರಮಗಳನ್ನು ಕಮ್ಮಟಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.ಉಪೇಕ್ಷೆಗೆ ಒಳಗಾದ ಹಿಂದೂಸ್ಥಾನಿ ಸಂಗೀತದ ಕಲಾವಿದರನ್ನು ನಾಡಿಗೆ ಪರಿಚಯಿಸುತ್ತಾ ಬಂದವರು ಬುರ್ಡೆ. ಮರಾಠಿಯಲ್ಲಿಯೂ ಅನೇಕ ಲೇಖನಗಳನ್ನು ರಚಿಸಿದ್ದಾರೆ. ಅವೆಲ್ಲಾ ನಗರದ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಣೆ ವಿಶ್ವವಿದ್ಯಾಲಯದಲ್ಲಿ, ಡಾ.ಎಸ್.ಎಲ್.ಬೈರಪ್ಪನವರ 'ಮಂದ್ರ', ಕಾದಂಬರಿಯನ್ನು ಕುರುತು ಉಪನ್ಯಾಸವನ್ನು ಕೊಟ್ಟಿದ್ದಾರೆ.
ಮುಂಬಯಿಯ ಕರ್ನಾಟಕ ಸಂಘದ ೨೦೧೩ರ ಸಾಲಿನ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರಾಗಿದ್ದರು.
ಪ್ರಕಟಿಸಿದ ಪುಸ್ತಕಗಳು
[ಬದಲಾಯಿಸಿ]- Basic principles of Hindustani music ( "ಸಂಗೀತ್ ಕೆ ಮೂಲ್ ತತ್ವ್" ದ ಅನುವಾದ)
- ಮಾನವನ ಅವತಾರ
- ವಾತ್ಸಲ್ಯ
ಗೌರವ ಪ್ರಶಸ್ತಿಗಳು
[ಬದಲಾಯಿಸಿ]- ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ
- ದೆಹಲಿ ಕನ್ನಡಿಗ ಪತ್ರಿಕೆ ಗೌರವ ಪ್ರಶಸ್ತಿ
- ಸಾಧನ ಶಿಖರ ಗೌರವ ಪ್ರಶಸ್ತಿ
ನಿಧನ
[ಬದಲಾಯಿಸಿ]ಪ್ರಕಾಶ್ ಜಿ.ಬುರ್ಡೆಯವರು,[೩] (೭೭ ವರ್ಷ) [೪] ೨೦೧೬, ರ ಜನವರಿ, ೪ ರಂದು ಮುಂಬಯಿನ ಸ್ವಗೃಹದಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ To live in hearts we leave behind is not to die, Mumbai Mirror, Jan 06, 2016
- ↑ ಕರ್ನಾಟಕ ಮಲ್ಲ, ೧೧,ಮೇ,೨೦೧೮, ಸಂಗೀತ ಸರಸಿ,ಪ್ರಕಾಶ್ ಬುರ್ಡೆಯವರ ವ್ಯಕ್ತಿ ಮತ್ತವರ ಬರಹ-ಕೃತಿ ಸಂಪಾದನೆ : ಡಾ.ಜ್ಯೋತ್ಸ್ನಾಕೆ.ಕಾಮತ್, ಡಾ.ಸುಷ್ಮ ಎ.ಅರೂರ್, ಡಾ.ಲೀಲಾ.ಬಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ "karnataka malla, 06-01-016, ಪುಟ-೧೦, 'ಕರ್ನಾಟಕ ಸಂಘ ಮುಂಬಯಿ,ಇದರ ಅಧ್ಯಕ್ಷ, ಸಂಗೀತ ವಿಮರ್ಶಕ ಪ್ರಕಾಶ್ ಜಿ.ಬುರ್ಡೆ ನಿಧನ'". Archived from the original on 2016-06-29. Retrieved 2016-01-06.
- ↑ Canara news, 05 Jan 2016 By : Rons Bantwal, ಪ್ರಕಾಶ್ ಬುರ್ಡೆ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಂತಾಪ