ವಿಷಯಕ್ಕೆ ಹೋಗು

ಪೆರ್ಡೂರು

ನಿರ್ದೇಶಾಂಕಗಳು: 13°23′02″N 74°54′14″E / 13.384°N 74.904°E / 13.384; 74.904
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೆರ್ಡೂರು
ಪಟ್ಟಣ
ಪೆರ್ಡೂರು is located in Karnataka
ಪೆರ್ಡೂರು
ಪೆರ್ಡೂರು
ಪೆರ್ಡೂರು ಇರುವ ಗುರುತು
Coordinates: 13°23′02″N 74°54′14″E / 13.384°N 74.904°E / 13.384; 74.904
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ ಜಿಲ್ಲೆ
Named forಪೇರ್ ಉಂಡು ಎಂದು ಕೂಗಿದ ದನಗಾಹಿ. ಇನ್ನೊಂದು ಮೂಲದ ಪ್ರಕಾರ ತುಳು ಭಾಷೆಯಲ್ಲಿ ಪೇರ್ ಎಂದರೆ ಎತ್ತರದ ಜಾಗ ಎಂಬರ್ಥದಲ್ಲಿ. ಸುತ್ತಲೂ ನದಿಗಳಿಂದ ಸುತ್ತುವರಿದು ಎತ್ತರದ ಜಾಗದಲ್ಲಿರುವ ಊರು ಎಂಬ ಅರ್ಥದಲ್ಲಿ
ಸಂಪರ್ಕ ಭಾಷೆಗಳು
 • ಭಾಷೆಗಳುಕನ್ನಡ ಭಾಷೆ, ತುಳು ಭಾಷೆ, ಆಂಗ್ಲ
Time zoneUTC+೫.೩೦ (ಭಾರತೀಯ ಕಾಲಮಾನ)
ಪಿನ್ ಕೋಡ್ ಸಂಕೇತ
೫೭೬ ೧೨೪
ದೂರವಾಣಿ ಸಂಕೇತ೦೮೨೫೨
Vehicle registrationಕೆಎ ೨೦

ಪೆರ್ಡೂರು ಭಾರತ ದೇಶದ ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಉಡುಪಿಯಿಂದ ಹೆಬ್ರಿಗೆ ಹೋಗುವ ಮಾರ್ಗದಲ್ಲಿ ಸುಮಾರು ೨೦ ಕಿ.ಮೀ ದೂರದಲ್ಲಿದೆ.

ಸ್ಥಳಗಳು

[ಬದಲಾಯಿಸಿ]

ಪೆರ್ಡೂರು ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಅನಂತಪದ್ಮನಾಭ ದೇವರ ಪುರಾತನ ದೇವಾಲಯವಿದ್ದು, ಇದು ೧೦೦೦ ವರ್ಷಗಳಿಗಿಂತಲೂ ಹಳೆಯದ್ದಾಗಿದೆ ಎಂದು ಹೇಳಲಾಗುತ್ತದೆ [] ಈ ದೇವಸ್ಥಾನಕ್ಕೆ ಹೊಂದಿಕೊಂಡು ಒಂದು ಪುಷ್ಕರಣಿ (ಎಲ್ಲಾ ಕಡೆ ಮೆಟ್ಟಿಲುಗಳಿರುವ ನೀರಿನ ತೊಟ್ಟಿ) ಇದೆ. ಈ ದೇವಸ್ಥಾನದಲ್ಲಿ, ಜನರು ತಮ್ಮ ಇಷ್ಟಾರ್ಥಗಳ ಪೂರೈಕೆಯಾದ ಮೇಲೆ ಹರಕೆ ಸೇವೆಯ ರೂಪದಲ್ಲಿ ದೇವರಿಗೆ ೧೦೦೧ ಬಾಳೆಹಣ್ಣುಗಳನ್ನು ಅರ್ಪಿಸುತ್ತಾರೆ. ಶ್ರೀ ಅನಂತಪದ್ಮನಾಭ ಜಾತ್ರಾ ಉತ್ಸವವು ಸಾಮಾನ್ಯವಾಗಿ ಮಾರ್ಚ್ ೧೬ರಂದು ನಡೆಯುತ್ತದೆ. ಶ್ರೀ ಅನಂತಪದ್ಮನಾಭ ಸ್ವಾಮಿಗೆ ಜಾತ್ರೆಯ ಸಮಯದಲ್ಲಿ ಸಾವಿರಪರ್ಂದ್ ಅಂದರೆ ಸಾವಿರ ಹಣ್ಣುಗಳನ್ನು ಅರ್ಪಿಸಲಾಗುತ್ತದೆ. ಪ್ರತಿ ತಿಂಗಳ ಪೆರ್ಡೂರು ಸಂಕ್ರಾಂತಿ ಪ್ರಸಿದ್ಧವಾಗಿದೆ.

ಸಂಪರ್ಕ

[ಬದಲಾಯಿಸಿ]

ಉಡುಪಿ ಜಿಲ್ಲಾ ಕೇಂದ್ರದಿಂದ ಬಸ್ ಸೇವೆ ಲಭ್ಯವಿದೆ. ಉಡುಪಿಯಿಂದ ಆಗುಂಬೆ ಮಾರ್ಗವಾಗಿ ಶಿವಮೊಗ್ಗ, ಭದ್ರಾವತಿ ಸೇರಿದಂತೆ ಹಲವು ಕಡೆ ಸಂಚರಿಸುವ ಬಸ್ಸುಗಳು ಹೆಬ್ರಿ ಮಾರ್ಗವಾಗಿ, ಸೋಮೇಶ್ವರ ಮಾರ್ಗವಾಗಿ ಪೆರ್ಡೂರಿನ ಮೂಲಕ ಹಾದು ಹೋಗುತ್ತವೆ. ಸ್ಥಳೀಯ ಸಾರಿಗೆಗಳಾದ ಆಟೋರಿಕ್ಷಾ ಮತ್ತು ಜೀಪ್‍ಗಳ ಮೂಲಕ ಪೆರ್ಡೂರನ್ನು ತಲುಪಬಹುದು. ಬಸ್‍ನ ಮೂಲಕ ಉಡುಪಿಯಿಂದ ಪೆರ್ಡೂರಿಗೆ ಸರಾಸರಿ ೩೫ ನಿಮಿಷದಲ್ಲಿ ತಲುಪಬಹುದು. ಸುತ್ತಮುತ್ತಲಿನ ಗ್ರಾಮಗಳು ಬೈರಂಪಲ್ಲಿ, ಬೆಳ್ಳಂಪಲ್ಲಿ, ಬನ್ನಪಲ್ಲಿ ಇತ್ಯಾದಿಗಳಾಗಿವೆ.

ಶಿಕ್ಷಣ ವ್ಯವಸ್ಥೆ

[ಬದಲಾಯಿಸಿ]

ಮಣಿಪಾಲ ಎಜುಕೇಶನ್ ಅಕಾಡೆಮಿಯಿಂದ ಪ್ರಾರಂಭವಾದ ಪ್ರೌಢಶಾಲೆಯು ಹಲವು ದಶಕಗಳಿಂದ ಗ್ರಾಮದ ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಪೆರ್ಡೂರಿನಲ್ಲಿ ೧೦೦ ವರ್ಷಗಳ ಹಿಂದೆ ಪ್ರಾರಂಭವಾದ ಬಿ.ಎಂ ಪ್ರಾಥಮಿಕ ಶಾಲೆ ಇದೆ ಮತ್ತು ಇಲ್ಲಿ ೭ನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲಾಗುತ್ತದೆ. ಗ್ರಾಮದಲ್ಲಿ ಎಪಿ ಶಾಲೆ ಎಂಬ ಇನ್ನೊಂದು ಪ್ರಾಥಮಿಕ ಶಾಲೆಯೂ ಇದೆ. ಹಿಂದಿನ ಬಿ.ಎಂ. ಪ್ರಾಥಮಿಕ ಶಾಲೆಯನ್ನು ನವೀಕರಿಸಿ, ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತಿಸಲಾಗಿದೆ. ಪೆರ್ಡೂರಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯು ಸಹ ಸ್ಥಾಪಿತವಾಗಿದೆ. ೨೦೧೧-೧೨ರ ಶೈಕ್ಷಣಿಕ ವರ್ಷದಲ್ಲಿ, ವಿಜ್ಞಾನ ಮತ್ತು ಕಲಾ ಪದವಿಗಳೊಂದಿಗೆ ಪೂರ್ಣ ಸಮಯದ ಕಾಲೇಜನ್ನು ಸ್ಥಾಪಿಸಲಾಯಿತು. ಬಾಲೆಬೈಲು ಪ್ರಾಥಮಿಕ ಶಿಕ್ಷಣ ಶಾಲೆ ಪೆರ್ಡೂರು ಗ್ರಾಮದಲ್ಲಿ ಪ್ರಸಿದ್ಧವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]