ಪೀಟರ್ ಪ್ಯಾನ್
Peter Pan | |
---|---|
Peter Pan character | |
ಮೊದಲು ಚಿತ್ರಣ | The Little White Bird (1902) |
ಕರ್ತೃ | J. M. Barrie |
Information | |
Aliases | The Boy Who Wouldn't Grow Up |
ಲಿಂಗ | Male |
Significant other(s) | Wendy Darling, Tinker Bell |
ರಾಷ್ಟ್ರೀಯತೆ | Neverland |
ಪೀಟರ್ ಪ್ಯಾನ್ ಎನ್ನುವುದು ಸ್ಕಾಟಿಶ್ ಕಾದಂಬರಿಕಾರ ಮತ್ತು ನಾಟಕಕಾರ ಜೆ.ಎಂ.ಬ್ಯಾರಿ (1860–1937)ಅವರು ರಚಿಸಿದ ಒಂದು ಪಾತ್ರವಾಗಿದೆ. ಒಬ್ಬ ತುಂಟ ಹುಡುಗ ಹಾರಬಲ್ಲ ಮತ್ತು ಜಾದೂ ಅನ್ನುವಂತೆ ಬೆಳೆಯಲು ನಿರಾಕರಿಸುತ್ತಾನೆ.ಹೀಗೆ ಪೀಟರ್ ಪ್ಯಾನ್ ತನ್ನ ಎಂದೂ ಮುಗಿಯದ ಬಾಲ್ಯವನ್ನು ಸಣ್ಣ ದ್ವೀಪ ನೆವರ್ ಲ್ಯಾಂಡ್ ನಲ್ಲಿ ಕಳೆದುಹೋದ ಹುಡುಗರ ನಾಯಕನಾಗಿ ಇರುತ್ತಾನೆ.ಅಲ್ಲಿನ ಮತ್ಸ್ಯ ಕನ್ಯೆಯರು,ಭಾರತೀಯರು,ಯಕ್ಷಯಕ್ಷಿಣಿಯರು ಮತ್ತು ಕಡಲ್ಗಳ್ಳರೊಂದಿಗೆ ವಿನೋದ ಮಾತನ್ನಾಡುತ್ತಾ ಇರುತ್ತಾನೆ.ಅದರೊಟ್ಟಿಗೆ ತನ್ನ ಜಗದ ಹೊರಗಿರುವ ಮಕ್ಕಳೊಂದಿಗೆಯೂ ಆಗಾಗ ಭೇಟಿಮಾಡುತ್ತಾ ಇರುತ್ತಾನೆ. ಬ್ಯಾರಿಯ ಇನ್ನೆರಡು ಕೃತಿಗಳ ವಿಶಿಷ್ಟತೆಯು ಹಲವಾರು ಮಾಧ್ಯಮ ಮತ್ತು ವ್ಯಾಪಾರಿವಲಯದಲ್ಲಿ ಸಾಕಷ್ಟು ಪ್ರಭಾವ ಬೀರಿವೆ.ಬ್ಯಾರಿಯ ಕೃತಿಗಳನ್ನೇ ವಿಸ್ತರಿಸಿ ಮತ್ತು ಆಧರಿಸಿ ವಿಭಿನ್ನ ಪಾತ್ರಗಳ ಸೃಷ್ಟಿಸಲಾಗಿದೆ.
ಇತಿಹಾಸ
[ಬದಲಾಯಿಸಿ]ದಿ ಲಿಟಲ್ ವೈಟ್ ಬರ್ಡ್ ವಯಸ್ಕರಿಗಾಗಿ ರಚಿಸಿದ ಕೃತಿಯಲ್ಲಿ ಪೀಟರ್ ಪ್ಯಾನ್ ಪಾತ್ರ 1902 ರ ಕಾದಂಬರಿಯಲ್ಲಿ ಕಾಣಿಸಿಕೊಂಡಿತು. ಪೀಟರ್ ಪ್ಯಾನ್ ನ ಬಗ್ಗೆ ಬರೆದ ನಾಟಕವು 1904 ರಲ್ಲಿ ಚೊಚ್ಚಿಲ ಕೃತಿಯಾಗಿ ಅತ್ಯಂತ ಯಶಸ್ವಿಯಾಯಿತು.ಬ್ಯಾರಿಯ ಪ್ರಕಾಶಕರಾದ ಹೊಡರ್ ಮತ್ತು ಸ್ಟೌಟನ್ ಅವರುಗಳು ದಿ ಲಿಟಲ್ ವೈಟ್ ಬರ್ಡ್ ನಲ್ಲಿನ 13-18 ಅಧ್ಯಾಯಗಳನ್ನು ಹೊರತೆಗೆದು 1906 ರಲ್ಲಿ ಮರುಪ್ರಕಟನೆ ಮಾಡಿದರು.ಇದಕ್ಕೆ ಪೀಟರ್ ಪ್ಯಾನ್ ಇನ್ ಕೆನ್ಸಿಂಗ್ಟನ್ ಗಾರ್ಡನ್ಸ್ ಎಂಬ ಶೀರ್ಷಿಕೆ ಇಟ್ಟರು.ಅದೇ ಸಂದರ್ಭದಲ್ಲಿ ಪೂರಕವಾಗಿ ಆರ್ಥರ್ ರಾಖಮ್ ನಿಂದ ಅರ್ಥವಿವರಣೆಯನ್ನೂ ಬಿಡುಗಡೆ [೧] ಮಾಡಿದರು.
ಈ ಪಾತ್ರವು ತನ್ನ ಸಾಹಸ ಪ್ರವೃತ್ತಿಯಿಂದ ಖ್ಯಾತಿ ಪಡೆಯಿತು.ಡಿಸೆಂಬರ್ 27,1904 ರಲ್ಲಿ ಇದನ್ನು ರಂಗಮಂಚದ ಮೇಲೆ ತರಲಾಯಿತು.ಇದಕ್ಕೆ ಪೀಟರ್ ಪ್ಯಾನ್ ಅಥವಾ ದಿ ಬಾಯ್ ಹೂ ವುಡ್ ನಾಟ್ ಗ್ರೊ ಅಪ್ ಎಂಬ ಹೆಸರಿಡಲಾಯಿತು. ಈ ನಾಟಕವನ್ನು ಹಾಗೂ ಹೀಗೂ ಅಳವಡಿಸಿ ಮತ್ತು ವಿಸ್ತರಿಸಿ ಕಾದಂಬರಿಗೆ ಪರಿವರ್ತಿಸಲಾಯಿತು.ಅದನ್ನೇ 1911 ರಲ್ಲಿ ಪೀಟರ್ ಅಂಡ್ ವೆಂಡಿ ಎಂದು ಪ್ರಕಟಿಸಲಾಯಿತು,ನಂತರ ಪೀಟರ್ ಪ್ಯಾನ್ ಅಂಡ್ ವೆಂಡಿ ಆದರೆ ಇತ್ತೀಚಿನ ವರೆಗೆ ಸರಳವಾಗಿ ಪೀಟರ್ ಪ್ಯಾನ್ ಎನ್ನಲಾಗುತ್ತದೆ.'
ಪೀಟರ್ ಪ್ಯಾನ್ ಹಲವಾರು ಧಾರಾವಾಹಿಗಳು,ಘಟನೆಗಳು ಮತ್ತು ರಂಗಮಂಚದ ಅಳವಡಿಕೆಗಳು ಇದನ್ನು ಆಧರಿಸಿವೆ. ಅದರಲ್ಲೂ 1953 ರಲ್ಲಿ ಬಂದ ಎನಿಮೇಟೆಡ್ ಚಲನಚಿತ್ರ ವಾಲ್ಟ್ ಡಿಸ್ನೆಸ್ ಪೀಟರ್ ಪ್ಯಾನ್ ಪ್ರಸಿದ್ದಿ ಪಡೆಯಿತು.ಹಲವಾರು ರಂಗಮಂಚದ ಸಂಗೀತ ಕಚೇರಿಗಳು (ಜೆರೊಮ್ ರಾಬಿನ್ಸ್ ,ಸಿರಿಲ್ ರಿಚರ್ಡ್ ಮತ್ತು ಮೇರಿ ಮಾರ್ಟಿನ್ ಇವರುಗಳ ಕೊಡುಗೆಯಲ್ಲಿ ಟೆಲೆವಿಜನ್ ಕಾರ್ಯಕ್ರಮಕ್ಕಾಗಿ ಚಿತ್ರೀಕರಣವಾಯಿತು)ಇದಲ್ಲದೇ ನೈಜ ಕ್ರಿಯಾತ್ಮಕ ಚಿತ್ರಗಳೆಂದರೆ ಹುಕ್ (1991) ಮತ್ತು ಪೀಟರ್ ಪ್ಯಾನ್ 2003) ಅದರ ಜೊತೆಗೆ ಘಟನೆ ಆಧರಿಸಿದ ಕಾದಂಬರಿ ಪೀಟರ್ ಪ್ಯಾನ್ ಇನ್ ಸ್ಕಾರ್ಲೆಟ್ (2006)ಕೂಡಾ ಬೆಳಕುಕಂಡಿತು. ಆತ ಹಲವಾರು ಅಧಿಕೃತ ಹಕ್ಕು ಸ್ವಾಮ್ಯವಿಲ್ಲದ ಕೃತಿಗಳಲ್ಲೂ ಕಾಣಿಸಿಕೊಂಡಿದ್ದಾನೆ.ಆದರೆ ಈ ಬಳಕೆಯ ಸ್ವಾಮ್ಯ ವಿಶ್ವದ ಬಹಳಷ್ಟು ಭಾಗಗಳಲ್ಲಿ ರದ್ದಾಗಿದೆ. ನೋಡಿ: ಪೀಟರ್ ಪ್ಯಾನ್ ಆಧಾರಿತ ಕೃತಿಗಳ ಪಟ್ಟಿ .
ಪ್ರಮುಖ ಕಥಾಹಂದರಗಳು
[ಬದಲಾಯಿಸಿ]ಪೀಟರ್ ಪ್ಯಾನ್ ಬಗ್ಗೆ ಹೆಣೆದ ಹಲವಾರು ಕಥಾಹಂದರಗಳು ವಿಶಾಲವ್ಯಾಪ್ತಿಯಲ್ಲಿ ತಮ್ಮ ಉತ್ತಮ ಪ್ರತಿಕ್ರಿಯೆ ಪಡೆದಿವೆ. ನೋಡಿ ಪೀಟರ್ ಪ್ಯಾನ್ ಆಧಾರಿತ ಕೃತಿಗಳುಪುಸ್ತಕಗಳ ಪಟ್ಟಿಗಾಗಿ,ಚಲನಚಿತ್ರಗಳು ಅಲ್ಲದೇ ಇನ್ನಿತರ ಪೀಟರ್ ಪ್ಯಾನ್ ಕಥೆ ಆಧಾರಯುಳ್ಳದ್ದಾಗಿವೆ.
- ಪೀಟರ್ ಪ್ಯಾನ್ ಇನ್ ಕೆನ್ಸಿಂಗ್ಟನ್ ಗಾರ್ಡನ್ಸ್ -ಮಗು ಪೀಟರ್ ಪ್ಯಾನ್ ಮನೆಯಿಂದ ಹಾರುತ್ತಾನೆ,ಯಕ್ಷಯಕ್ಷಣಿಯರೊಂದಿಗೆ ಸ್ನೇಹ ಮಾಡುತ್ತಾನೆ,ನಂತರ ಆತ ಕೆನ್ಸಿಂಗ್ಟನ್ ಗಾರ್ಡನ್ಸ್ ನಲ್ಲಿ ನಿವಾಸ ಸ್ಥಾನ ಮಾಡಿಕೊಳ್ಳುತ್ತಾನೆ. ಒಂದು "ಬುಕ್ -ಉಯಿದಿನ್ -ಎ ಬುಕ್ " ಇದನ್ನು ಬ್ಯಾರಿಯ ದಿ ಲಿಟಲ್ ವೈಟ್ ಬರ್ಡ್ ನಲ್ಲಿ ಪ್ರಕಟಿಸಿತು.
- ಪೀಟರ್ ಪ್ಯಾನ್ ಅಥವಾ ದಿ ಬಾಯ್ ಹೂ ವುಡ್ ನಾಟ್ ಗ್ರೊ ಅಪ್ ಪೀಟರ್ ಅಂಡ್ ವೆಂಡಿ -ಪೀಟರ್ ನಂತರ ವೆಂಡಿ ಮತ್ತು ಆಕೆಯ ಸಹೋದರರನ್ನು ನೆವರ್ ಲ್ಯಾಂಡ್ ಗೆ ಕರೆದುಕೊಂಡು ಬಂದ.ತನ್ನ ಕಡು ವೈರಿ ಕ್ಯಾಪ್ಟನ್ ಹುಕ್ ನೊಂದಿಗೆ ತಾನು ನೊಂದಿದ್ದೇನೆ ಎಂದು ಪೀಟರ್ ಪ್ಯಾನ್ ಹೇಳುತ್ತಾನೆ. ಮೂಲ ಬ್ಯಾರಿಯ ರಂಗಮಂಚದ ಮೇಲಿನ ನಾಟಕದ ಮೇಲೆ ಈ ಕಾದಂಬರಿಯನ್ನು ಹಲವಾರು ವಿವಿಧ ಮಾಧ್ಯಗಳಿಗಾಗಿ ಬಳಸಿಕೊಳ್ಳಲಾಯಿತು.
- ಹುಕ್ -ಪೀಟರ್ ಪ್ಯಾನ್ ಈಗ ದೊಡ್ಡವನಾಗಿದ್ದಾನೆ,ನೆವರ್ ಲ್ಯಾಂಡ್ ನಲ್ಲಿನ ತನ್ನ ಬದುಕನ್ನು ಆತ ಮರೆತಿದ್ದಾನೆ.ಅವನಿಗೀಗ ಹೆಂಡತಿ ಮಕ್ಕಳಿದ್ದಾರೆ. ಹಿರಿಯ ವೆಂಡಿಯನ್ನು ಲಂಡನ್ ನಲ್ಲಿ ಭೇಟಿ ಮಾಡಲು ಕುಟುಂಬ ಹೊರಟಿತು.ಕ್ಯಾಪ್ಟನ್ ಹುಕ್ ಪೀಟರ್ ನ ಮಕ್ಕಳು ಅಪಹರಿಸಿ ಆತನನ್ನು ಮತ್ತೆ ಸಾವಿನೊಂದಿಗಿನ ಸರಸಕ್ಕೆ ಕರೆ ತರಲಾಯಿತು. ಸ್ಟೆವೆನ್ ಸ್ಪೆಲ್ ಬರ್ಗ್ಅವರಿಂದ ಒಂದು ಚಲನಚಿತ್ರಕ್ಕೆ ಕೈಹಾಕಿದರು.
- ರಿಟರ್ನ್ ಟು ನೆವರ್ ಲ್ಯಾಂಡ್ -ವಿಶ್ವ ಸಮರ II ಸಮಯದಲ್ಲಿ ವೆಂಡಿಯ ಯುದ್ದದ ಬಗ್ಗೆ ಒಲವಿರುವ ಪುತ್ರಿ ಜೇನ್ ಳನ್ನು ಕ್ಯಾಪ್ಟನ್ ಹುಕ್ ನೆವರ್ ಲ್ಯಾಂಡ್ ಗೆ ಕರೆದುಕೊಂಡು ಬರುತ್ತಾನೆ.ಅವಳನ್ನು ರಕ್ಷಿಸಿದ ಪೀಟರ್ ಪ್ಯಾನ್ ಅವಳಿಗೆ ಕಳೆದುಹೋದ ಹುಡುಗರಿಗೆ ಹೊಸ "ತಾಯಿ"ಯಾಗಿರುವಂತೆ ಹೇಳುತ್ತಾನೆ, ಡಿಸ್ನಿಯಿಂದ ಒಂದು ಚಿತ್ರ.
- ಪೀಟರ್ ಅಂಡ್ ದಿ ಸ್ಟಾರ್ ಕ್ಯಾಚರ್ಸ್ , ಪೀಟರ್ ಅಂಡ್ ದಿ ಶಾಡೊ ಥೀವ್ಸ್ , ಪೀಟರ್ ಅಂಡ್ ದಿ ಸೀಕ್ರೆಟ್ ಆಫ್ ರುಂಡೂನ್ , ಪೀಟರ್ ಅಂಡ್ ದಿ ಸ್ವೊರ್ಡ್ ಆಫ್ ಮರ್ಸಿ –ನಂತರ ಪೀಟರ್ ಲಂಡನ್ ಅನಾಥಾಲಯವನ್ನು ಬಿಟ್ಟು ತನ್ನ ಸರಣಿಗಳ ಸಾಹಸವನ್ನು ತೋರಿದ.ಇದರಲ್ಲಿ ಕ್ಯಾಪ್ಟನ್ ಹುಕ್ ಯಕ್ಷಯಕ್ಷಿಣಿಯರು,ಆತನ ಸಾಮರ್ಥ್ಯಗಳು ಮತ್ತು ಕಳೆದುಹೋದ ಹುಡುಗರು ಸಲುವಾಗಿ ಮೂಲ ಕಥೆಯನ್ನು ಇದರಲ್ಲಿ ಒದಗಿಸಲಾಗಿದೆ. ಡೇವ್ ಬ್ಯಾರಿ ಮತ್ತು ರೈಡ್ಲಿ ಪಿಯರ್ಸನ್ಇವುರುಗಳಿಂದ ಕಾದಂಬರಿಗಳಿಗೆ ಕರ್ತೃ ಆದರು.
- ಪೀಟರ್ ಪ್ಯಾನ್ ಇನ್ ಸ್ಕಾರ್ಲೆಟ್ – ವೆಂಡಿ,ಜೊನ್ ಮತ್ತು ಬಹಳಷ್ಟು ಕಳೆದುಹೋದ ಹುಡುಗರು ನೆವರ್ ಲ್ಯಾಂಡ್ ಗೆ ಮರಳುತ್ತಾರೆ,ಅಲ್ಲಿ ಪೀಟರ್ ಕ್ಯಾಪ್ಟನ್ ಹುಕ್ ನ ಜಾಗವನ್ನು ಆಕ್ರಮಿಸಿಕೊಳ್ಳುತ್ತಾನೆ. ಗೆರಾಲ್ಡೈನ್ ಮೆಕ್ ಕಾಘ್ರೆನ್ ರಿಂದ ಒಂದು ಕಾದಂಬರಿ, ಇದು ಪೀಟರ್ ಅಂಡ್ ವೆಂಡಿ ಗೆ ಒಂದು ಅಧಿಕೃತ ಕಥಾಹಂದರದ ಘಟನೆ.
ಕಾಣಿಸಿಕೊಳ್ಳುವಿಕೆ
[ಬದಲಾಯಿಸಿ]ಬ್ಯಾರಿಯು ಪೀಟರ್ ನ ಕಾಣಿಸುಕೊಳ್ಳುವಿಕೆಯ ವಿವರಗಳನ್ನು ವರ್ಣಿಸಿಲ್ಲ,ಇದು ಪೀಟರ್ ಅಂಡ್ ವೆಂಡಿ ಕಾದಂಬರಿಯಲ್ಲೂ ಇಲ್ಲ.ಇದನ್ನು ಓದುಗರು ಮತ್ತು ಅದನ್ನು ಆಯಾ ಮಾಧ್ಯಮಕ್ಕೆ ಅಳವಡಿಸುವವರ ಅರ್ಥೈಸುವಿಕೆಗೆ ಆತ ಬಿಟ್ಟುಬಿಟ್ಟಿದ್ದಾನೆ. ಬ್ಯಾರಿ ತನ್ನ "ಪೀಟರ್ ಅಂಡ್ ವೆಂಡಿ"ಯಲ್ಲಿ ಪೀಟರ್ ಪ್ಯಾನ್ ಇನ್ನೂ ತನ್ನ ಹಾಲುಹಲ್ಲುಗಳನ್ನು ಹೊಂದಿದ್ದಾನೆ. ಆತನೊಬ್ಬ ಸುಂದರ ಹುಡುಗ ಮತ್ತು ಸುಂದರ ಮುಗಳನಗೆಯುಳ್ಳವ ಎಂದು ಆತ ವರ್ಣಿಸಿದ್ದಾನೆ."ಆತ ಎಲೆಗಳ ಗಟ್ಟಿ ಭಾಗ ಧರಿಸಿದ್ದಾನೆ ಅದರಲ್ಲಿ ಗಿಡಮರದಿಂದ ಸೋರುವ ರಸ ಅಲ್ಲಿ ಸುರಿಯುತ್ತಿದೆ." ನಾಟಕದಲ್ಲಿನ ಪೀಟರ್ ಪಾತ್ರವು ವಸಂತ ಕಾಲದ ಎಲೆಗಳು ಮತ್ತು ಜೇಡನ ಬಲೆಯಂತಹ ಉಡುಪು ಧರಿಸಿದೆ. ಆತನ ಹೆಸರು ಮತ್ತು ನಿರಂತರವಾಗಿ ಕೊಳಲು ನುಡಿಸುವಿಕೆಯು ಪ್ಯಾನ್ ಎಂಬ ಪೌರಾಣಿಕ ಪಾತ್ರವನ್ನು ನೆನಪಿಗೆ ತರುತ್ತದೆ.
ಈ ಪಾತ್ರವನ್ನು ಸಾಂಪ್ರದಾಯಿಕವಾಗಿ ಯುವ ಮಹಿಳೆಯೊಬ್ಬಳು ರಂಗದ ಮೇಲೆ ಕೊಳಲು ನುಡಿಸುತ್ತಿದ್ದಳು.ಈ ನಾಟಕದ ಸಂದರ್ಭದಲ್ಲಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳನ್ನು ಸೃಷ್ಟಿಸಲು ನಾಟಕ ಅವಕಾಶ ನೀಡುತ್ತದೆ.ಆದರೆ ಈ ಪೀಟರ್ ಎನ್ನುವ ಪಾತ್ರ "ನಿಜವಾಗಿ"ಯೂ ಹೇಗೆ ಕಾಣಿಸುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ ಆದರೆ ಇದಕ್ಕೆ ಸೂಕ್ತ ನ್ಯಾಯ ಒದಗಿಸಲು ಯತ್ನಿಸಲಾಗಿದೆ.
ಪೀಟರ್ ಪ್ಯಾನ್ ಇನ್ ಸ್ಕಾರ್ಲೆಟ್ , ಗೆರಾಲ್ಡೈನ್ ಮೆಕ್ ಕಾಘ್ರಿಯನ್ ಗಳಲ್ಲಿ ಈತ ಹೇಗೆ ಕಾಣಿಸಬೇಕೆಂಬುದರ ಬಗ್ಗೆ ವರ್ಣನೆ ಇದೆ.ಇದರಲ್ಲಿ ಆತನ ನೀಲಿ ಕಣ್ಣುಗಳು ಅಲ್ಲದೇ ಆತನ ತೆಳು ಕೂದಲು (ಅಥವಾ ಯಾವುದೇ ಬಣ್ಣ ಕಪ್ಪಿಗಿಂತ ಕಡಿಮೆ)ಇತ್ಯಾದಿಗಳ ಬಗ್ಗೆ ವಿವರಿಸಲಾಗಿದೆ. ಈ ಕಾದಂಬರಿಯಲ್ಲಿ ನೆವರ್ ಲ್ಯಾಂಡ್ ಗೆ ವಸಂತ ಋತು ಬಂದಾಗ ಪೀಟರ್ ಪಾತ್ರವು ಮೋಟು ಜಾಕೆಟ್ ಮತ್ತು ಮೇಪಲ್ ಎಲೆಗಳ ಟೋಪಿ ಧರಿಸುತ್ತಾನೆ.ತನ್ನ ಬೇಸಿಗೆ ಉಡುಪಿಗಿಂತ ಇದನ್ನೇ ಬಳಸಿದ್ದಾನೆ. ಆದರೆ ಸ್ಟಾರ್ ಕ್ಯಾಚರ್ ಕಥೆಗಳಲ್ಲಿ ಡೇವ್ ಬ್ಯಾರಿ ಮತ್ತು ರೈಡ್ಲಿ ಪಿಯರ್ಸನ್ ಅವರುಗಳು ಪೀಟರ್ ನು ಕಿತ್ತಳೆ ಬಣ್ಣದ ಕೂದಲನ್ನು ಹೊಂದಿದ್ದಾನೆ. ಅಲ್ಲದೇ ಹೊಳಪಿನ ನೀಲಿಕಣ್ಣುಗಳಿವೆ ಎಂದು ಅವರು ವರ್ಣಿಸಿದ್ದಾರೆ.
ಆದರೆ ಡಿಸ್ನಿ ಚಿತ್ರಗಳಲ್ಲಿ ಪೀಟರ್ ತೊಡುವ ಉಡುಪುಗಳು ಎನಿಮೇಶನ್ ಚಿತ್ರಗಳಿಗೆ ಅನುರೂಪವಾಗಿವೆ.ಸಣ್ಣ ತೋಳುಗಳ ಹಸಿರು ಜುಬ್ಬಾ ಮತ್ತು ಬಟ್ಟೆಯಿಂದ ಮಾಡಿದ ಪೈಜಾಮುಗಳ ತೊಡಿಸಲಾಗಿದೆ.ಜೊತೆಗೆ ಗರಿಯುಳ್ಳ ಟೋಪಿಯೂ ಸಹ ಇದರಲ್ಲಿ ಹಾಕಲಾಗಿದೆ. ಆತನನ್ನು ಪುಟ್ಟ ತುಂಟ ಮಗುವಿನಂತೆ-ಕಿವಿಗಳು ಮತ್ತು ಆತನ ಕೂದಲು ಬಹು ಕೆಂಪಾದ ಹೊನ್ನಿನ ಬಣ್ಣ ಹೊಂದಿರುವಂತೆ ಚಿತ್ರಿಸಲಾಗಿದೆ. ಆಗಿನ ಕ್ರಿಯಾತ್ಮಕ ಚಿತ್ರ 2003 ಚಿತ್ರದಲ್ಲಿ ಜೆರೆಮಿ ಸಂಪಟರ್ ಅವರಿಂದ ಚಿತ್ರಣ ಮಾಡಲಾಗಿದೆ.ಉದ್ದ ಕೂದಲು ಮತ್ತು ನೀಲಿ ಕಣ್ಣುಗಳು;ಅಲ್ಲದೇ ಆತನ ಪೋಷಾಕನ್ನು ಎಲೆಗಳು ಮತ್ತು ಬೇರುಗಳಿಂದ ಮಾಡಲಾಗಿದೆ. ಆದರೆ ಹುಕ್ ಅವರ ಕಾದಂಬರಿಯಲ್ಲಿ ಆತ ಯುವ ರಾಬಿನ್ ವಿಲಿಯಮ್ಸ್ ನಂತೆ ಕಾಣಿಸುತ್ತಾನೆ.ಕಪ್ಪು-ಕಂದು ಬಣ್ಣದ ಕೂದಲು,ಆದರೆ ಫ್ಲಾಶ್ ಬ್ಯಾಕ್ ಸನ್ನಿವೇಶ ತೋರಿಸುವಾಗ ಆತನ ಕೂದಲು ಹೆಚ್ಚು ಕಿತ್ತಳೆ ಬಣ್ಣದೆಂದು ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಮಾತ್ರ ಯಾವಾಗ ಆತ "ಪೀಟರ್ ಪ್ಯಾನ್ "ಬಂದಾಗ ಮಾತ್ರ ಆತನ ಕಿವಿಗಳನ್ನು ಅಗಲವಾಗಿರುವಂತೆ ಇದನ್ನು ಡಿಸ್ನಿ ಉಡುಪಿನಿಂದ ತೋರಿಸಲಾಗಿದೆ.
ಕಾಲಾವಧಿ
[ಬದಲಾಯಿಸಿ]ಎಂದೂ ಬೆಳೆಯದ ಹುಡುಗ ಎಂಬ ಪರಿಕಲ್ಪನೆಯು ಜೆ.ಎಂ.ಬ್ಯಾರಿಯ ಕಾದಂಬರಿಯಲ್ಲಿ ಬಂದಿದೆ.ಯಾಕೆಂದರೆ ಬ್ಯಾರಿಯ್ ಹಿರಿಯ ಸಹೋದರ ಮಂಜುಗಡ್ಡೆಯ ಸ್ಕೇಟಿಂಗ್ ನಲ್ಲಿ ಮೃತಪಟ್ಟಿದ್ದ ಆತನಿಗೆ ಕೇವಲ 14 ವರ್ಷ ವಯಸ್ಸು,ಆದ್ದರಿಂದ ಆತ ತನ್ನ ತಾಯಿಯ ಮನಸ್ಸಿನಲ್ಲಿ ಯಾವಾಗಲೂ ಮಗುವಾಗೇ ಉಳಿದುಹೋದ. ನಂತರ "ಬಾಯ್ ಹೂ ವುಡ್ ನಾಟ್ ಗ್ರೊ ಅಪ್ "ಬೇರೆ ಬೇರೆ ವಿಧಗಳಲ್ಲಿ ಆಯಾ ವಯೋಮಾನಕ್ಕೆ ಅನುಗುಣವಾಗಿ ಚಿತ್ರಿಸಲಾಗಿದೆ. ಆತನ ಮೂಲ ಗೋಚರತೆಯಲ್ಲಿ ದಿ ಲಿಟಲ್ ವೈಟ್ ಬರ್ಡ್ ನಲ್ಲಿ ಆತ ಕೇವಲ ಏಳು ದಿನಗಳ ವಯಸ್ಸಿನವನಾಗಿದ್ದಾನೆ. ಆದರೆ ಬ್ಯಾರಿಯ ನಂತರದ ನಾಟಕ ಮತ್ತು ಕಾದಂಬರಿಗಳಲ್ಲಿ ವಯಸ್ಸನ್ನು ನಿಖರವಾಗಿ ನಮೂದಿಸಿಲ್ಲವಾದರೂ ಆತನ ಪಾತ್ರದ ನಡವಳಿಕೆ ಗಮನಿಸಿದರೆ ಎಷ್ಟು ವಯೆಸ್ಸೆಂದು ಹೇಳಬಹುದು. ಈ ಪುಸ್ತಕದಲ್ಲಿ ಆತನ ಮಗುವಿನ ಹಾಲುಹಲ್ಲುಗಳನ್ನು ಬ್ಯಾರಿಯ ಪೀಟರ್ ಮಾದರಿಯು ಕೆನ್ಸಿಂಗ್ಟನ್ ಗಾರ್ಡನ್ಸ್ ನಲ್ಲಿರುವ ವಿಗ್ರಹದ ಛಾಯಾಚಿತ್ರಗಳನ್ನು ಮೈಕೆಲ್ ಲೆವೆಲಿನ್ ಆರು ವರ್ಷ ವಯಸ್ಸಿನವನಿದ್ದಾಗ ತೆಗೆದ ಛಾಯಾಚಿತ್ರಗಳಾಗಿವೆ. ಆದರೆ ಆರಂಭಿಕ ಪಾತ್ರಗಳಲ್ಲಿ ಕಾಣಿಸುವ ವಯಸ್ಸು ಕೆಲ ವರ್ಷಗಳ ಹೆಚ್ಚನ್ನೇ ತೋರಿತ್ತದೆ. ಡಿಸ್ನಿಯ 1953 ರ ಅಳವಡಿಕೆ ಮತ್ತು ಅದರ 2002 ರ ಸರಣಿ ಕಥಾಹಂದರವು ಪೀಟರ್ ಸುಮಾರು 10 ರಿಂದ 13 ವರ್ಷ ವಯಸ್ಸಿನ ಬಾಲಕನಂತೆ ಕಾಣುತ್ತಾನೆ. (ಅದಕ್ಕಾಗಿ ನಟಿಸಿದ ನಟ 1953 ರಲಿ ಈ ಪಾತ್ರಕ್ಕಾಗಿ ತನ್ನ ಧ್ವನಿ ದಾನ ಮಾಡಿದ,ಆತ 15 ವರ್ಷ ವಯಸ್ಸಿನ ಬಾಬಿ ಡ್ರಿಸ್ಕೊಲ್ .)ಎಂಬಾತ. ಅದೇ 2003 ರ ಚಲನಚಿತ್ರದಲ್ಲಿ ಅದರೆ ಚಿತ್ರೀಕರಣ ಆರಂಭವಾದಾಗ ಜೆರ್ಮಿ ಸಂಪ್ಟರ್ 13 ವರ್ಷ ವಯಸ್ಸಿನವನಾಗಿದ್ದ.ಆದರೆ ಚಿತ್ರೀಕರಣ ಮುಗಿದಾಗ ಆತ 14 ವರ್ಷದವನಾಗಿದ್ದನಲ್ಲದೇ ಸ್ವಲ್ಪ ಎತ್ತರ ಬೆಳೆದಿದ್ದ. ಹುಕ್ ಚಲನಚಿತ್ರದಲ್ಲಿ ಪೀಟರ್ ನೆವರ್ ಲ್ಯಾಂಡ್ ನ್ನು ಕೆಲವರ್ಷಗಳ ಮೊದಲೇ ಬಿಟ್ಟು ಹೋಗಿದ್ದ.ಯಾಕೆಂದರೆ ತನ್ನ ಯೌವನ ಮತ್ತು ಸಾಮಾನ್ಯ ವಯಸ್ಸಾಗುವಿಕೆಯು ಇದನ್ನು ಮಾಡಿಸಿತ್ತೆನ್ನಬಹುದು. ಹಿಂದಿನದನ್ನು ವಿಚಾರಿಸಿದಾಗ ಪೀಟರ್ ನನ್ನು ಒಂದು ಮಗು ಮತ್ತು ಸಣ್ಣ ಹುಡುಗ ಹಾಗು ಅಪ್ರಾಪ್ತ ವಯಸ್ಸಿನವನಂತೆ ತೋರಿಸಲಾಗಿದೆ.ಯಾಕೆಂದರೆ ನೆವರ್ ಲ್ಯಾಂಡ್ ನಲ್ಲಿ ಆತ ವಯಸ್ಸಿನವನಾಗಲಾರದೇ ಇದ್ದದ್ದನು ಚಿತ್ರಿಸಲಾಗಿದೆ.ಯಾವಾಗಲೂ ಆತ ನೆವರ್ ಲ್ಯಾಂಡ್ ಬಿಟ್ಟು ನೈಜ ಜಗತ್ತಿಗೆ ಬಂದಾಗೊಮ್ಮೆ ಅವನಿಗೆ ಪ್ರೌಢಾವಸ್ಥೆ ಬಂದದ್ದನ್ನು ತೋರಿಸಲೂ ಯತ್ನಿಸಲಾಗಿದೆ. "ಯಾವಾಗ ಪೀಟರ್ ಹೇಳುತ್ತಾನೆ,"ನೀನು ದೊಡ್ಡವನಿದ್ದಿಯಾ ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ,"ಕೊನೆಯಲ್ಲಿ ಹುಕ್ ಉತ್ತರಿಸುವಂತೆ "10 ವರ್ಷ ವಯಸ್ಸಿಗೆ ನಾನು ದೊಡ್ಡವನಾಗಿ ಕಾಣಿಸುತ್ತೇನೆ. ಆಗ ರಾಬಿನ್ ವಿಲಿಯಮ್ಸ್ ಈ ಪೀಟರ್ ಪಾತ್ರ ಮಾಡುತಿದ್ದ,ಆದರೆ ಚಿತ್ರನಿರ್ಮಾಣದ ಸಂದರ್ಭದಲ್ಲಿ ಆತ 40 ವರ್ಷ ವಯಸ್ಸಿನವನಾಗಿದ್ದ.
ವ್ಯಕ್ತಿತ್ವ
[ಬದಲಾಯಿಸಿ]ಪೀಟರ್ ಎನ್ನುವ ಪಾತ್ರವು ಮುಖ್ಯವಾಗಿ ಅತಿರೇಕದ ಬಲ ತೋರಿಸಿದ ಮತ್ತು ನಿಷ್ಕಾಳಜಿ ಹುಡುಗನಾಗಿದ್ದ. ಆತ ತಾನು ಹೇಗೆ ದೊಡ್ಡವನು ಎಂಬುದನ್ನು ಬಹು ತೀಕ್ಷ್ಣದಲ್ಲಿಯೇ ತೋರಿಸುವ ಸಾಮರ್ಥ್ಯ ಹೊಂದಿದ್ದ,ಆತ ಹೇಳುವ ಕೆಲವು ವಿಷಯಗಳು ಪ್ರಶ್ನೆಗಳ ಹುಟ್ಟು ಹಾಕುತ್ತಿದ್ದವು.(ಉದಾಹರಣೆಗೆ ವೆಂಡಿ ಯ ನೆರಳು ಯಶಸ್ವಿಯಾಗಿ ಮರು ಹೊಂದಾಣಿಕೆ ಅದಾಗ ತನಗೇ ತಾನೇ ಅಭಿನಂದಿಸಿಕೊಳ್ಳುವುದು)
ಪೀಟರ್ ನಲ್ಲಿ ಸಹಜ ಸಾಮಾನ್ಯ ಗುಣವಿದ್ದಿತು,ಆತ ಸಮಯ ಸಂದರ್ಭಗಳ ನೋಡದೇ ಅಪಾಯಗಳ ತಂದೊಡ್ಡುತ್ತಿದ್ದ. ಬ್ಯಾರಿ ಬರೆಯುವ ಪ್ರಕಾರ ಯಾವಾಗ ಪೀಟರ್ ಮ್ಯಾರೂನರ್ ಬಂಡೆ ಮೇಲೆ ಸಾವಿನಂಚಿನಲ್ಲಿದ್ದನೋ ಆತ ಭಯಭೀತನಾಗಿದ್ದ ಆಗ ಆತನ ದೇಹದಲ್ಲಿ ಒಂದೇ ಒಂದು ನಡುಕ ಹರಿದು ಹೋಯಿತು ಆದರೆ ಆ ಸನ್ನಿವೇಶ ನೋಡಿದ್ದರೆ ಯಾರಾದರೂ ಸಾವಿನ ವರೆಗೂ ನಡಗುತ್ತಿದ್ದರು. ಸಾವಿನ ದುರಂತದ ಬಗ್ಗೆ ಅರಿವಿರದ ಆತ ಕೇವಲ ಸಂತೋಷ ಎನ್ನುವ ಹಾಗೆ "ಸಾಯುವುದೂ ಕೂಡಾ ಒಂದು ದೊಡ್ಡ ಸಾಹಸವೇ ಸರಿ,"ಎಂದಿದ್ದ.
ಕಥೆಯಲ್ಲಿನ ಕೆಲವು ತಿರುವುಗಳು ಮತ್ತು ಹೊಳವುಗಳ ಪ್ರಕಾರ ಪೀಟರ್ ಕೂಡಾ ಒಬ್ಬ ತುಂಟ(ಕಳಪೆ) ಮತ್ತು ಸ್ವಾರ್ಥಿ ಎಂದೇ ಹೇಳಬಹುದು. ಆದರೆ ಡಿಸ್ನಿಯ ಅಳವಡಿಸಿದ ಕಥೆಯಲ್ಲಿ ಪೀಟರ್ ಬಹು ಸಮತೋಲನದ,ನ್ಯಾಯಯುತ ಮತ್ತು ಥಳುಕಿನ ವ್ಯಕ್ತಿತ್ವವಾಗಿ ಬಿಂಬಿಸಲಾಗಿದೆ.(ಉದಾಹರಣೆಗೆ,ಆತ ಕಳೆದು ಹೋದ ಹುಡುಗರನ್ನು ಹೆಡ್ಡರೆಂದು ಕರೆದ.ಯಾವಾಗ ಮಕ್ಕಳು ಮನೆಗೆ ಹೋಗುತ್ತೇವೆ ಎಂದರೋ ಆಗ ಆತ ಅವರು ಆಗಿಂದಾಗಲೇ ಮನೆಗೆ ತೆರಳಬೇಕಲ್ಲದೇ ಆತನೊಂದು ತಪ್ಪು ಸಂದೇಶದೊಂದಿಗೆ ಅವರೆಲ್ಲಾ ದೊಡ್ಡವರಾಗಿ ಬೆಳೆಯಬೇಕೆನ್ನುತ್ತಾರೆ ಎಂಬ ಭಾವನೆ ಅವನಲ್ಲಿ ಬರುತಿತ್ತು.)
ನೈಜವಾದ ಕ್ರಿಯಾತ್ಮಕ ಚಿತ್ರ 2003 ರಲ್ಲಿ ಬಂದಾಗ ಪೀಟರ್ ಪ್ಯಾನ್ "ಬೆಳೆಯುವ" ವಿಷಯದಲ್ಲಿ ಬಹಳಷ್ಟು ಭಾವನಾತ್ಮಕವಾಗಿತ್ತು. ಹುಕ್ ಚಿತ್ರಿಸಿದ ವೆಂಡಿಯ ಪಾತ್ರ ಬೆಳೆಯುತ್ತಿರುವಾಗ,ಅದು ಮದುವೆಯಾಗಿ ಬರಬರುತ್ತಾ ಪೀಟರ್ ಪಾತ್ರಕ್ಕೆ "ಹೊರಗಿನ ಕಿಟಕಿ ಮುಚ್ಚಿದಾಗ" ಕೊನೆಯಲ್ಲಿ ಆತ ತುಂಬಾ ಖಿನ್ನನಾಗಿ ಮುಂದೆ ಹೋರಾಟ ಮಾಡುವ ಇಚ್ಛೆಯನ್ನೇ ಇದು ಕಳೆದುಕೊಳ್ಳುವಂತೆ ಇಲ್ಲಿ ಚಿತ್ರಿಸಲಾಗಿದೆ.
ಸಾಮರ್ಥ್ಯಗಳು
[ಬದಲಾಯಿಸಿ]ಪೀಟರ್ ನ ಕೊನೆಗಾಣದ ಯುವ ಅವಸ್ಥೆಯೇ ಒಂದು ಆ ಪಾತ್ರದ ಮೂಲ ಸಾಮರ್ಥ್ಯದ ರೂಪವಾಗಿದೆ. "ಪೀಟರ್ ಅಂಡ್ ವೆಂಡಿ"ಯಲ್ಲಿ ಪೀಟರ್ ತಾನು ಮಾಡಿದ ಸಾಹಸಗಳನ್ನು ಮರೆಯಬೇಕು ಮತ್ತು ಈ ವಿಶ್ವದ ಬಗ್ಗೆ ಏನೇ ತಿಳಿದುಕೊಂಡರೂ ಇನ್ನೂ ಬಾಲ್ಯ ಅವಸ್ಥೆಯನ್ನೇ ಪಡೆಯಬೇಕೆಂದು ಅದರಲ್ಲಿ ವಿವರಿಸಲಾಗಿದೆ. ಬರೆಹಗಾರ ಒರ್ಲಿನ್ ಜಾನ್ಸನ್ ವಾದಿಸುವ ಪ್ರಕಾರ ಪ್ಯಾನ್ ನ ಕಥೆಗಳು ಜರ್ಮನ್ -ಇಂಗ್ಲಿಷ್ Totenkindergeschichte ಸಾಂಪ್ರದಾಯಕ ಕಥೆಗಳಲ್ಲಿದೆ,(ಸುಮಾರಾಗಿ "ಟೇಲ್ಸ್ ಆಫ್ ಡೆಡ್ ಚಿಲ್ಡ್ರನ್ ")ಇಲ್ಲಿ ಕೂಡಾ ಪೀಟರ್ ಮತ್ತು ಕಳೆದುಹೋದ ಹುಡುಗರು ನೆವರ್ ಲ್ಯಾಂಡ್ ನಲ್ಲಿ ಮೃತಪಟ್ಟರೆಂದು ವಿವರಿಸಲಾಗುವ ಕಥೆಯು ಬ್ಯಾರಿಯ ಸ್ವತಹದ ಬದುಕಿನಲ್ಲಿ ನಡೆದ [ಸಾಕ್ಷ್ಯಾಧಾರ ಬೇಕಾಗಿದೆ]ಘಟನೆಯಾಗಿದೆ. ನಿಜವಾದ ಕಥೆಯೆಂದರೆ ಇನ್ನುಳಿದ ಕಳೆದುಹೋದ ಹುಡುಗರು ಪೀಟರ್ ಅಂಡ್ ವೆಂಡಿ ಯಲ್ಲಿ ಕೊಲ್ಲಲ್ಪಟ್ಟರು ಎಂಬುದು; ಈ ಕಥೆಯ ವಿಚಾರಕ್ಕೆ ಒಮ್ಮೊಮ್ಮೆ ವ್ಯತಿರಿಕ್ತವಾಗಿ ಕಾಣುತ್ತದೆ. ಆದರೆ ಬ್ಯಾರಿ ಮತ್ತು ಪಿಯರ್ಸನ್ ರ ಅನಧಿಕೃತ ಅದನ್ನೇ ಹೋಲುವ ಘಟನೆಗಳು ಪೀಟರ್ ನ ಹಚ್ಚ ಹಸಿರಾದ ಯೌವನವನ್ನು ನಿರಂತರವಾಗಿ ಹೊರಗೆಡುವುತ್ತವೆ,ಇಲ್ಲಿ ಇದೊಂದು ಮಾಯದ ಶಕ್ತಿ ಮೇಲಿನಿಂದ ಭೂಮಿಗೆ ಬಿದ್ದಿದೆ ಎಂಬುದನ್ನು ಚಿತ್ರಿಸುತ್ತದೆ.
ಪೀಟರ್ ನ ಹಾರುವ ಸಾಮರ್ಥ್ಯವನ್ನು ವಿವರಿಸಲಾಗಿದೆ ಆದರೆ ಅದು ಸ್ಥಿರವಾಗಿಲ್ಲ. ಆದರೆ ದಿ ಲಿಟಲ್ ವೈಟ್ ಬರ್ಡ್ ನಲ್ಲಿ ಆತ ಹಾರಲು ಶಕ್ತನಾಗಿರುತ್ತಾನೆ. ಯಾಕೆಂದರೆ ಎಲ್ಲಾ ಕೂಸುಗಳಂತೆ ಅವನೂ ಭಾಗಶಃ ಹಕ್ಕಿಯಾಗಿರುತ್ತಾನೆ. ನಾಟಕ ಮತ್ತು ಕಾದಂಬರಿಗಳಲ್ಲಿ ಆತ ಮೆಚ್ಚಿನ ಮಕ್ಕಳಿಗೆ "ವಿಸ್ಮಯಕಾರಿ ಪ್ರೀತಿಯ ವಿಚಾರ"ಗಳೊಂದಿಗೆ ಹಾರುವುದನ್ನು ಕಲಿಸುತ್ತಾನೆ.(ಇದು ಡಿಸ್ನಿ ಚಿತ್ರಗಳಲ್ಲಿ "ಸಂತಸದ ವಿಚಾರಗಳಾ"ಗಿವೆ)ಇಲ್ಲಿ ಹೇಳಿರುವಂತೆ ಆತ ಇಂಥ ವಿಚಾರಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದಾನೆಯೇ ಎಂಬ ಅನುಮಾನವೂ ಬರುತ್ತದೆ.(ಆದ್ದರಿಂದ ಕಾದಂಬರಿಯಲ್ಲಿ ಇದೊಂದು ಕ್ಷುಲ್ಲಕ ವಿಚಾರವೆನಿಸಿ ಮಂಡಿಸಲಾಗಿದೆ,ಅದರ ಕಥಾವಿಷಯವನ್ನು ಬೇರೆ ಮೂಲದಿಂದ ಆಯ್ದುಕೊಳ್ಳಲಾಗಿದೆ ಎಂದೆನಿಸುತ್ತದೆ) ಆದರೆ ಹುಕ್ ನಲ್ಲಿ ಪೀಟರ್ ತನ್ನ 'ಸಂತಸದ ವಿಚಾರ'ವನ್ನು ನೆನಪಿಸಿಕೊಳ್ಳುವ ವರೆಗೂ ಆತ ಹಾರಲು ಅಸಮರ್ಥನಾಗುತ್ತಾನೆ. ಹಾರುವ ಸಾಮರ್ಥ್ಯ ಮತ್ತು ತಾರಾ ವರ್ಚಸ್ಸು ಉಳಿಸುವ ಯತ್ನ ಇಲ್ಲಿ ಯಕ್ಷಯಕ್ಷಣಿಯರ ಕಥಾಮಾಲಿಕೆಯಂತೆ ಸಾಕಾರಗೊಳಿಸುತ್ತದೆ.
ಪೀಟರ್ ನೆವರ್ ಲ್ಯಾಂಡ್ ನಲ್ಲಿರುವವರೆಗೂ ಅಲ್ಲಿನ ವಾಸಿಗಳ ಮೇಲೆ ತನ್ನ ಪ್ರಭಾವ ಬೀರಲು ಸಮರ್ಥನಾಗುತ್ತಾನೆ. ಬ್ಯಾರಿ ಹೇಳುವ ಪ್ರಕಾರ ನೆವರ್ ಲ್ಯಾಂಡ್ ಪ್ರತಿ ಮಗುವಿಗೆ ಭಿನ್ನವಾಗಿ ಕಾಣುತ್ತದೆ.ಈ ದ್ವೀಪಕ್ಕೆ ಆತ ಯಾವಾಗ ತಾನು ಲಂಡನ್ ಪ್ರವಾಸದಿಂದ ಬರುತ್ತಾನೋ ಆಗ "ಜಾಗೃತಿ "ಮೂಡುತ್ತದೆ. .ಪೀಟರ್ ಅಂಡ್ ವೆಂಡಿ ಯಲ್ಲಿ ಬ್ಯಾರಿಯು "ದಿ ಮೆರಿಮೇಡ್ ಲ್ಯಾಗೂನ್ "ಅಧ್ಯಾಯದಲ್ಲಿ ಬರೆಯುವಂತೆ ಪೀಟರ್ ಎಲ್ಲಾ ಕೆಲಸವನ್ನೂ ಮಾಡಲು ಸಮರ್ಥನಾಗಿದ್ದಾನೆ. ಆತ ಅತ್ಯುತ್ತಮ ಕತ್ತಿ ವರಸೆಗಾರ ಕ್ಯಾಪ್ಟನ್ ಹುಕ್ ನನ್ನು ಸಹ ಎದುರು ಹಾಕೊಂಡು ಆತನ ಕೈಯನ್ನೇ ಕತ್ತರಿಸಿದ ಘಟನೆ ಬರುತ್ತದೆ. ಆತನಲ್ಲಿ ಅತ್ಯುತ್ತಮ ತೀಕ್ಷ್ಣ ದೃಷ್ಟಿ ಮತ್ತು ಆಲಿಸುವ ತೀಕ್ಷ್ಣ ಮತಿ ಇದೆ. ಆತ ಅಣಕು ಮಾಡುವುದರಲ್ಲಿ,ಹುಕ್ ನ ಧ್ವನಿ ನಕಲು ಮಾಡುವುದು ಮತ್ತು ಮೊಸಳೆಯ ಟಿಕ್ -ಟೊಕ್ ಸದ್ದಿಲ್ಲದೇ ಇರುವ ಸ್ವಭಾವದವನಾಗಿದ್ದಾನೆ.
ಎರಡೂ ಕೃತಿಗಳಾದ ಪೀಟರ್ ಪ್ಯಾನ್ ಅಂಡ್ ವೆಂಡಿ ಮತ್ತು ಪೀಟರ್ ಪ್ಯಾನ್ ಇನ್ ಸ್ಕಾರ್ಲೆಟ್ ನಲ್ಲಿ ಅಸ್ತಿತ್ವದಲ್ಲಿರುವ ವಸ್ತುಗಳ ಬಗ್ಗೆ ಪೀಟರ್ ಊಹಿಸುವ ಸಾಮರ್ಥ್ಯವನ್ನು ಸಹ ವರ್ಣಿಸಲಾಗಿದೆ,ಅಂದರೆ ಪೀಟರ್ ಪ್ಯಾನ್ ಇನ್ ಸ್ಕಾರ್ಲೆಟ್ ನಲ್ಲಿ ಉತ್ತಮ ವಿಚಾರಗಳಿಗೆ ಆಹಾರ ಸಹ ಪ್ರಮುಖ ಪಾತ್ರವಹಿಸುತ್ತದೆ. ಈ ಸಂದರ್ಭದಲ್ಲಿ ಆತ ಬೇಡವಾದ ಸಂಗತಿಗಳನ್ನು ಮುಚ್ಚಲು ಕಾಲ್ಪನಿಕ ಕಿಟಕಿಗಳು ಮತ್ತು ಬಾಗಿಲುಗಳ ನಿರ್ಮಿಸುತ್ತಾನೆ,ಇದು ಒಂದು ಭೌತಿಕ ಉಪಮೇಯವಾಗಿ ಇಲ್ಲಿ ಕೆಲಸ ಮಾಡುತ್ತದೆ. ಯಾವಾಗ ಅಪಾಯ ಹತ್ತಿರವಾಗುತ್ತದೆಯೆಂಬುದನ್ನೂ ಆತ ಗ್ರಹಿಸಬಲ್ಲವನಾಗಿದ್ದಾನೆ. ಇಲ್ಲಿ ಪೀಟರ್ ಪ್ಯಾನ್ ಇನ್ ಸ್ಕಾರ್ಲೆಟ್ ಹೇಳಿದಂತೆ ಕರ್ಲಿಯ ನಾಯಿ ಮರಿಯೊಂದು ಪೀಟರ್ ನನ್ನು ನಾಲಿಗೆಯಿಂದ ಉಜ್ಜಿ ಅಂದರೆ ನೆಕ್ಕುವ ಮೂಲಕ ಆತನಲ್ಲಿನ ದೇವಲೋಕದ ಒಂದು ಪುಡಿಯನ್ನು ಅದು ಕೆಳಕ್ಕೆ ಹಾಕುತ್ತದೆ.ಅಂದರೆ ಇಲ್ಲಿ ಪೀಟರ್ ತನ್ನದೇ ಆದ ಸುಗಂಧದ ಪುಡಿಯನ್ನು ಹೊರಸೂತ್ತಾನೆಂಬ ಅರ್ಥ ಬರುವಂತೆ ಲೇಖಕ ಚಿತ್ರಿಸಿದ್ದಾನೆ.ಪೀಟರ್ ಸಾಮಾನ್ಯವಾಗಿ ಯಕ್ಷಲೋಕದ ಯಕ್ಷ ಯಕ್ಷಿಣಿಯವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾನೆಂಬುದನ್ನೂ ಇಲ್ಲಿ ವಿವರಿಸಲಾಗಿದೆ.
ಪೀಟರ್ ಅಂಡ್ ವೆಂಡಿ ಯಲ್ಲಿ ಬ್ಯಾರಿ ಹೇಳುವಂತೆ ಪೀಟರ್ ಪ್ಯಾನ್ ಪ್ರಸಿದ್ದ ಮಾತೆ ಡಾರ್ಲಿಂಗ್ ಯಾವಾಗಲಾದರೂ ಮಕ್ಕಳ ಸಾವನ್ನು ಕಂಡರೆ ತಾನೇ ಅವರೊಂದಿಗೆ ಹೋಗಿ ಅವರನ್ನು ಹೆದರದಂತೆ ಸಮಾಧಾನಪಡಿಸುತ್ತಾಳೆ.ಇದು ಗ್ರೀಕ್ ದೇವತೆ ಹೆರ್ಮೆಸ್ ನೆನಪಿಗೆ ತರುತ್ತದೆಯಲ್ಲದೇ ಈ ಪಾತ್ರವು ಮನೋಸಾಂತ್ವನ ನೀಡುವಲ್ಲಿ ಪ್ರಮುಖವಾಗಿದೆ.
ಸಂಬಂಧಗಳು
[ಬದಲಾಯಿಸಿ]ಪೀಟರ್ ಗೆ ತನ್ನ ಪೋಷಕರ ಬಗ್ಗೆ ಗೊತ್ತಿಲ್ಲ ಕೆನ್ಸಿಂಗ್ಟನ್ ಗಾರ್ಡನ್ಸ್ ನಲ್ಲಿ ಬ್ಯಾರಿ ಹೇಳುವಂತೆ ಆತ ಮಗುವಿರುವಾಗಲೇ ಅವರನ್ನು ತೊರೆದಿದ್ದಾನೆ.ಆತ ಕೂಸಿದ್ದಾಗಲೇ ಮನೆಯ ಬಾಗಿಲು ಕಿಟಕಿಗಳ ಹಾಕಿ ಎಲ್ಲರೂ ಅಲ್ಲಿಂದ ಹೋದಾಗ ತಾನು ಅವರಿಗೆ ಬೇಡವಾಗಿರಬಹುದೆಂಬ ಸೂಚನೆಯನ್ನು ಕಾದಂಬರಿಗಾರ ಸಾಂಕೇತಿಸುತ್ತಾನೆ. ಸ್ಟಾರ್ ಕ್ಯಾಚರ್ಸ್ ನಲ್ಲಿಯೂ ಸಹ ಆತ ಅನಾಥ ಎಂದು ವಿವರಿಸಲಾಗಿದೆ.ಆತನ ಗೆಳೆಯರಾದ ಮೊಲ್ಲಿ ಮತ್ತು ಜಾರ್ಜ ರುಂಡೂಸ್ ನಲ್ಲಿ ಆತನ ತಂದೆ-ತಾಯಿಗಳ್ಯಾರೆಂದು ಪತ್ತೆಹಚ್ಚಲು ಯತ್ನಿಸುತ್ತಾರೆ. ಆದರೆ ಹುಕ್ ಕಥಾನಕದಲ್ಲಿ ಪೀಟರ್ ತನ್ನ ತಾಯಿಯನ್ನು ನೆನಪಿಸಿಕೊಳ್ಳುತ್ತಾನೆ.ಆತನ ತಾಯಿ ತಾನು ಲಂಡನ್ ಗೆ ಹೋಗಿ ಓದಿ ತನ್ನ ತಂದೆಯಂತೆಯೇ ಉತ್ತಮ ನ್ಯಾಯಾಧೀಶನಾಗಬೇಕೆಂಬ ಇಚ್ಛೆ ಹೊಂದಿರುತ್ತಾಳೆ.ಅದಲ್ಲದೇ ಆತ ತನ್ನದೇ ಆದ ಸ್ವಂತ ಕುಟುಂಬವನ್ನು ಹೊಂದಬೇಕೆಂಬ ಆಸೆ ಆತನ ತಾಯಿಗಿರುತ್ತದೆ. ಪೀಟರ್ ನೆವರ್ ಲ್ಯಾಂಡ್ ಗೆ "ಓಡಿ ಹೋದ" ನಂತರ ಆತನ ತಂದೆತಾಯಿಗಳು ಆತನನ್ನು ಮರೆತು ಬಿಡುತ್ತಾರೆ.ಅಲ್ಲದೇ ಇನ್ನೊಂದು ಮಗುವನ್ನೂ ಸಹ ಪಡೆಯುತ್ತಾರೆ.(ನಂತರ "ಪೀಟರ್ ಅಂಡ್ ವೆಂಡಿ"ಯಲ್ಲಿ ಈ ಎರಡನೆಯ ಮಗುವೂ ಗಂಡು ಮಗುವೆಂಬ ಅಂಶವನ್ನು ವಿವರಿಸಲಾಗಿದೆ)
ಪೀಟರ್ ಕಳೆದುಹೋದ ಮಕ್ಕಳ ನಾಯಕನಾಗುತ್ತಾನೆ.ಈ ಮಕ್ಕಳು ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ನೆವರ್ ಲ್ಯಾಂಡ್ ಗೆ ಬಂದು ವಾಸಿಸುತ್ತಿರುತ್ತಾರೆ.ಯಾವಾಗ ಅವರು ಬೆಳೆಯಲು ಆರಂಭಿಸುತ್ತಾರೋ ಆಗ ಆತ ಅವರನ್ನು "ತೆಳ್ಳ"ಗಾಗುವಂತೆ ಮಾಡುತ್ತಾನೆ. ಆತ ಟಿಂಕರ್ ಬೆಲ್ಲ್ ಜೊತೆ ಉತ್ತಮ ಗೆಳೆಯನಾಗುತ್ತಾನೆ,ಈತ ಹಲವಾರು ಸಲ ಅಸೂಹೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸ್ವಾರ್ಥ ಪ್ರದರ್ಶಿಸುತ್ತಾನೆ.
ಆತನ ವೈರಿಯೆಂದರೆ ಕ್ಯಾಪ್ಟನ್ ಹುಕ್ ಹಣಾಹಣಿಯಲ್ಲಿ ಆತನ ಕೈಯೊಂದನ್ನು ಈತ ಕತ್ತರಿಸುತ್ತಾನೆ. ಹುಕ್ ನ ತಂಡದವರಾದ ಸ್ಮೀ ಮತ್ತು ಸ್ಟಾರ್ಕೆಯ್ ಕೂಡಾ ಈತನನ್ನು ವೈರಿಯೆಂದೇ ತಿಳಿಯುತ್ತಾರೆ. ಇದರಲ್ಲಿ ಸ್ಟಾರ್ ಕ್ಯಾಚರ್ಸ್ ಪುಸ್ತಕಗಳು ಕೂಡಾ ವೈರಿಗಳ ಪಟ್ಟಿಗೆ,ಸ್ಲ್ಯಾಂಕ್ ,ಲಾರ್ಡ್ ಒಂಬ್ರಾ ಮತ್ತು ಕ್ಯಾಪ್ಟನ್ ನೆರೆಝಾ ಅವರನ್ನೂ ಸೇರಿಸುತ್ತವೆ.
ಆಗಾಗ್ಗೆ ಪೀಟರ್ ನಿಜ ಜಗತ್ತಿಗೆ ಭೇಟಿ ನೀಡುತ್ತಾನೆ,ಬಹುತೇಕ ಕೆನ್ಸಿಂಗ್ಟನ್ ಗಾರ್ಡನ್ಸ್ ಗೆ ಬರುತ್ತಾನೆ ಅಲ್ಲಿನ ಮಕ್ಕಳೊಂದಿಗೆ ಸ್ನೇಹ ಬೆಳೆಸುತ್ತಾನೆ. ವೆಂಡಿ ಡಾರ್ಲಿಂಗ್ ಳನ್ನು ಆತ ತನ್ನ "ತಾಯಿ" ಆಗಿ ನೇಮಕ ಮಾಡುತ್ತಾನೆ.ಅಲ್ಲದೇ ಆಕೆಯ ಸಹೋದರರಾದ ಜೊನ್ ಮತ್ತು ಮೈಕೆಲ್ ಅವರನ್ನು ಆಕೆಯ ಮನವಿಯ ಮೇರೆಗೆ ನೆವರ್ ಲ್ಯಾಂಡ್ ಗೆ ಕರೆತರುತ್ತಾನೆ.ನಂತರ ಆತ ವೆಂಡಿಯ ಪುತ್ರಿ ಜೇನ್ ಜೊತೆ ಸ್ನೇಹ ಸಂಪಾದಿಸುತ್ತಾನೆ.(ಅವಳ ನಂತರದ ಪುತ್ರಿ ಮಾರ್ಗ್ರೆಟ್ )ಹೀಗೆ ಪೀಟರ್ ಅಂಡ್ ವೆಂಡಿ ಹೇಳುವಂತೆ ಮುಂದೆ ಈ ಪ್ರಕಾರದ ಬದುಕು ಅನಿರ್ಧಿಷ್ಟವಾಗಿ ಮುಂದುವರಿಯುತ್ತದೆ. ಸ್ಟಾರ್ ಕ್ಯಾಚರ್ಸ್ ನಲ್ಲಿ ಆತ ಮೊದಲೇ ಮೊಲ್ಲಿ ಆಸ್ಟರ್ ಮತ್ತು ಯುವ ಜಾರ್ಜ ಡಾರ್ಲಿಂಗ್ ಜೊತೆ ಸ್ನೇಹ ಸಂಪಾದಿಸಿರುತ್ತಾನೆ.
ಪೀಟರ್ ನೆವರ್ ಲ್ಯಾಂಡಿನ ಎಲ್ಲರಿಗೂ ಪರಿಚಿತನಾಗಿರುತ್ತಾನೆ,ಭಾರತೀಯ ಮಹಾರಾಣಿ ಟೈಗರ್ ಲಿಲಿ ಮತ್ತು ಅವಳ ಗುಂಪಿನ ಜನಾಂಗ,ಮತ್ಸ್ಯಕನ್ಯೆಯರು ಮತ್ತು ಯಕ್ಷಯಕ್ಷಿಣಿಯರೂ ಇದರಲ್ಲಿದ್ದಾರೆ.
ಹುಕ್ ,ನಲ್ಲಿ ಪೀಟರ್ ತಾನು ಏಕೆ ಬೆಳೆದು ದೊಡ್ಡನಾಗಬೇಕು ಮತ್ತು ತಂದೆಯಾಗಬೇಕೆಂಬುದರ ಕಾರಣ ಹೇಳಿದ್ದಾನೆ. ಆತ ವೆಂಡಿಯ ಮೊಮ್ಮಗಳು ಮೊಯಿರಾಳನ್ನು ಮದುವೆಯಾಗಿ ಮ್ಯಾಗಿ ಮತ್ತು ಜಾಕ್ ಮಕ್ಕಳನ್ನು ಪಡೆದ.
ಪ್ರಸಿದ್ಧ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಪೀಟರ್ ಪ್ಯಾನ್ ಪಾತ್ರ (ಅಥವಾ ಸಾಮಾನ್ಯವಾಗಿ ಆತನ ವೇಷದಲ್ಲಿರುವ)ಅಸಂಖ್ಯಾತ ಅಭಿನಂದನೆಗಳು ಮತ್ತು ವಿಡಂಬನೆಗಳಲ್ಲಿ ಇದನ್ನು ಬಳಸಲಾಗಿದೆ.ಅದಲ್ಲದೇ ಹಲವಾರು ಕಾಲ್ಪನಿಕ ಬರೆಹಗಳಲ್ಲಿಯೂ ಇದರ ಉಲ್ಲೇಖವಿದೆ. (ನೋಡಿ ಪೀಟರ್ ಪ್ಯಾನ್ ಮೇಲೆ ಆಧಾರಿತ ಕೃತಿಗಳು ಟಿಪ್ಪಣಿ ಮಾಡಬಹುದಾದ ಉದಾಹರಣೆಗಳು.) ಜೆ.ಆರ್ .ಆರ್ ಟೊಲ್ಕಿನ್ ನ ಚರಿತ್ರೆಗಾರ ಹಂಫ್ರಿ ಕಾರ್ಪೆಂಟರ್ ಪ್ರಕಾರ ಟೊಲ್ಕನ್ ನ ಪ್ರಭಾವಗಳು ಬ್ಯಾರಿಯ ಪೀಟರ್ ಪ್ಯಾನ್ ಮೇಲಾದ ಬಗ್ಗೆ ವಿವರಿಸಿದ್ದಾನೆ.ಬರ್ಮಿಂಗ್ ಹ್ಯಾಮ್ ನಲ್ಲಿ 1910 ರ ಸುಮಾರಿನಲ್ಲಿ "ಇದರ ಮೂಲದ ವಿಷಯದೊಂದಿಗೆ ಅಂತಹ ಸಂಬಂಧಗಳಿಲ್ಲ.ಆದರೆ ಎಲ್ವಿಸ್ ಆಫ್ ಮಿಡಲ್ ಅರ್ಥ್ ನಲ್ಲಿ ಕೆಲಮಟ್ಟಿನ ಪರಿಕಲ್ಪನೆಗೆ [೨] ಹತ್ತಿರವಿದೆ. ವಾಲ್ಟ್ ಡಿಸ್ನಿಯವರು 1953 ರಿಂದಲೂ ಈತನನ್ನು ಸಾಂಪ್ರದಾಯಿಕವಾಗಿ ತಮ್ಮದೇ ಪಾತ್ರವಿಶೇಷತೆ ಎನ್ನುವಂತೆ ಭಾವಿಸುತ್ತಾರೆ.ಮತ್ತೆ ಪೀಟರ್ ನೆವರ್ ಲ್ಯಾಂಡಿಗೆ ಹೋಗಿ ಅಲ್ಲಿ ಬದುಕು ನಡೆಸಿದ ಹಾಗೆ ಚಿತ್ರ ನಿರ್ಮಿಸುವ ಉತ್ಸಾಹ ತೋರುತ್ತಾರೆ.ಮತ್ತೆ ಆತ ಪಾರ್ಕ್ಸ್ ಗೆ ಹೋಗಿ ಮತ್ತೆ ಮತ್ತೆ ಭೇಟಿನೀಡುವ ಪಾತ್ರವನ್ನಾಗಿ ಚಿತ್ರಿಸುತ್ತಾರೆ.ಅವರದು ಡಾರ್ಕ್ ರೈಡ್ ಪೀಟರ್ ಪ್ಯಾನ್ಸ್ ಫ್ಲೈಟ್ ಆತ ಹೌಸ್ ಆಫ್ ಮೌಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಾನೆ.ಮಿಕಿಸ್ ಮ್ಯಾಜಿಕಲ್ ಕ್ರಿಸ್ ಮಸ್ ಕಿಂಗ್ಡಮ್ ಹಾರ್ಟ್ ವಿಡಿಯೊ ಗೇಮ್ಸನಲ್ಲಿಯೂ ಆತ ನುಸುಳುತ್ತಾನೆ.
ಹಲವಾರು ವರ್ಷಗಳಿಂದ "ಪೀಟರ್ ಪ್ಯಾನ್ "ಎಂಬ ಹೆಸರನ್ನು ಹಲವಾರು ಉದ್ದೇಶಗಳಿಗೆ ಬಳಸಲಾಗಿದೆ ಥ್ರೀ ಥೊರೊಬ್ರೆಡ್ ರೇಸ್ ಹಾರ್ಸಿಸ್ ಎಂಬ ಹೆಸರನ್ನು 1904 ರಲ್ಲಿ ಮೊದಲು ಜನಿಸಿದ ಕುದರೆಗೆ ಇಡಲಾಗಿದೆ. ಈ ಹೆಸರನ್ನು ಹಲವಾರು ಉದ್ಯಮಗಳೂ ಇಟ್ಟುಕೊಂಡಿವೆ.ಪೀಟರ್ ಪ್ಯಾನ್ ಬಟಾಣಿ ಬೆಣ್ಣೆ(ಪೀನಟ್ ಬಟರ್ )ಪೀಟರ್ ಪ್ಯಾನ್ ಬಸ್ ಲೈನ್ಸ್ ಮತ್ತು ಪೀಟರ್ ಪ್ಯಾನ್ ರೆಕಾರ್ಡ್ಸ್ ಇತ್ಯಾದಿ. ಆಗ 1960 ರಲ್ಲಿ ಕ್ಯುಬನ್ ಮಕ್ಕಳು ನಿವ್ ಕ್ಯಾಸ್ಟ್ರೊ ಕಾಲದಲ್ಲಿ ನಡೆದ ಆಪರೇಶನ್ ಪೀಟರ್ ಪ್ಯಾನ್ (ಅಥವಾ "ಆಪರೇಶನ್ ಪೆಡ್ರೊ ಪ್ಯಾನ್ )ಕಾರ್ಯಕ್ರಮವೊಂದರಲ್ಲಿ ಭಾಗವಹಿಸದೇ ಹೆದರಿಕೆಯಿಂದ ವಾಪಸಾದ ಪ್ರಸಂಗವೂ ಇಲ್ಲಿ ನೆನಪಿಸಬಹುದಾಗಿದೆ. ಈ ಪೀಟರ್ ಪ್ಯಾನ್ ಸಿಂಡ್ರೊಮ್ ಶಬ್ದವು 1983 ರಲ್ಲಿ ಹೆಚ್ಚು ಜನಪ್ರಿಯವಾಯಿತು.ಅದೇ ಹೆಸರಿನ ಪುಸ್ತಕವೊಂದು ಪ್ರಕಟಗೊಂಡಿತು.ಇದರಲ್ಲಿ ಪ್ರೌಢತೆ ಇಲ್ಲದೇ ಪುರುಷರ(ಸಾಮಾನ್ಯವಾಗಿ ಪುರುಷರೇ) ಬಗ್ಗೆ ಈ ಕಥಾ ಹಂದರ ತೋರಿಸುತ್ತದೆ. ಇಂಡೊನೇಶಿಯನ್ ನ ಪಾಪ್ -ರಾಕ್ ಬಾಂಡ್ ನ ಹೆಸರು ಕೂಡಾ ಪೀಟರ್ ಪ್ಯಾನ್ ಎಂದು ಪ್ರಸಿದ್ದವಾಗಿದೆ.
ಪೀಟರ್ ಪ್ಯಾನ್ ನನ್ನು ಸಾರ್ವಜನಿಕ ಶಿಲಾ ಕೆತ್ತನೆಗಳಲ್ಲೂ ಬಳಸಲಾಗುತ್ತದೆ ಶಿಲ್ಪ ಕಲೆಗಾರ ಜಾರ್ಜ್ ಫ್ರಾಂಪ್ಟನ್ ಕೆತ್ತಿದ ಒಟ್ಟು ಏಳು ಮೂರ್ತಿಗಳಿವೆ.ಮೂಲದಲ್ಲಿ 1912 ರಲ್ಲಿ ಬ್ಯಾರಿ ರೂಪಿಸಿದ ಚಿತ್ರವನ್ನು ಇಲ್ಲಿ ಅಳವಡಿಸಲಾಗಿದೆ. ಆ ಮೂರ್ತಿಗಳು ಕೆನ್ಸಿಂಗ್ಟನ್ ಗಾರ್ಡನ್ಸ್ ಲಂಡನ್ ನಲ್ಲಿ, ಇಂಗ್ಲೆಂಡ್; ಲೈವರ್ ಪೂಲ್ ಇಂಗ್ಲೆಂಡ್;[೩] ಬ್ರುಸೆಲ್ಸ್, ಬೆಲ್ಜಿಯಮ್;[೪] ಕ್ಯಾಮ್ ಡೆನ್, ನಿವ್ ಜರ್ಸಿ,[೫] ಯುನೈಟೆಡ್ ಸ್ಟೇಟ್ಸ್; ಪರ್ಥ್, ವೆಸ್ಟರ್ನ್ ಆಸ್ಟ್ರೇಲಿಯಾ;[೬] ಟೊರೆಂಟೊ, ಒಂಟಾರಿಯೊ,[೭] ಕೆನಡಾ; ಮತ್ತುಸೇಂಟ್ ಜಾನ್ಸ್ ನ ನಿವ್ ಫೌಂಡ್ ಲ್ಯಾಂಡ್ , ಕೆನಡಾ.[೮] ಮುಂತಾದೆಡೆ ಸ್ಥಾಪಿತಗೊಂಡಿವೆ. ಇನ್ನೆರಡು ಮೂರ್ತಿಗಳು (ಫ್ರಾಂಪ್ಟನ್ ನ ಕೃತಿಗಳಲ್ಲದಿದ್ದರೂ) ಕೆರ್ರಿಮುವರ್ ,ಸ್ಕಾಟ್ ಲ್ಯಾಂಡ್ ಇದು ಜೆ.ಎಂ.ಬ್ಯಾರಿಯ [೯][೧೦] ಜನ್ಮಸ್ಥಳವಾಗಿದೆ. ಹೊಸ ಕಂಚಿನ ಮೂರ್ತಿಯೊಂದನ್ನು ಲಂಡನ್ ನ ಗ್ರೇಟ್ ಒರ್ಮೊಂಡ್ ಸ್ಟ್ರೀಟ್ ಹಾಸ್ಪಿಟಲ್ ಬಳಿ ಸ್ಥಾಪಿಸಲಾಯಿತು. ಡೈರ್ಮುಡ್ ಬೈರೊನ್ ಒ ಕೊನ್ನರ್ ರಿಂದ ನಿರ್ಮಿತ ಇದನ್ನು ಅದೇ ಆಸ್ಪತ್ರೆಯು ಸ್ಥಾಪನೆಯ ಉಸ್ತುವಾರಿ ವಹಿಸಿತು.ಇದನ್ನು 2000 ರಲ್ಲಿ ಉದ್ಘಾಟಿಸಲಾಗಿದ್ದು ಪೀಟರ್ ಬಾಯಿಂದ ಹೊಸ ಪರಿಮಳ ಸೂಸುವ ಈ ಮೂರ್ತಿಯ ಜೊತೆಗೆ ಟಿಂಕರ್ ಬೆಲ್ ನ್ನು 2005ರಲ್ಲಿ [೧೧] ಸೇರಿಸಲಾಗಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಪ್ಯಾನ್ ಕೊಳಲು
- ಪೀಟರ್ ಅಂಡ್ ವೆಂಡಿ#ಕಾಪಿರೈಟ್ ಸ್ಟೇಟಸ್
ಆಕರಗಳು
[ಬದಲಾಯಿಸಿ]- ↑ Birkin, Andrew (2003). J.M. Barrie & the Lost Boys. Yale University Press. p. 47. ISBN 0300098227.
- ↑ ಟೆಂಪ್ಲೇಟು:ME-ref/CARPENTER
- ↑ "Peter Pan". Liverpoolmuseums.org.uk. 1928-06-16. Retrieved 2010-05-08.
- ↑ "File:Bruxelles Parc d'Egmont 803.jpg - Wikimedia Commons". Commons.wikimedia.org. Retrieved 2010-05-08.
- ↑ "Johnson Park Restoration". Johnson-park.camden.rutgers.edu. 1926-09-24. Retrieved 2010-05-08.
- ↑ "Perth Vista-Queens Gardens". Globe Vista. 2008. Archived from the original on 2010-03-11. Retrieved 2010-08-16.
- ↑ Lostrivers.ca
- ↑ "Bowring Park (St. John's) - Wikipedia, the free encyclopedia". En.wikipedia.org. Retrieved 2010-05-08.
- ↑ "File:Kirriemuir, Peter Pan Statue.jpg - Wikimedia Commons". Commons.wikimedia.org. 2008-08-13. Retrieved 2010-05-08.
- ↑ "Peter Pan House J M Barrie Birthplace Kirriemuir Scotland". Aboutaberdeen.com. Retrieved 2010-05-08.
- ↑ "Tinker Bell statue dedication press release". Ich.ucl.ac.uk. Archived from the original on 2006-09-24. Retrieved 2010-05-08.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Peter Pan at Project Gutenberg (1991 ಮಿಲೆನಿಯಮ್ ಫಾಲ್ಕ್ರುಮ್ ಎಡಿಶನ್ಸ್)