ಪವಿತ್ರ ಶಿಲುಬೆ ಚರ್ಚ್,ಪಾವೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪವಿತ್ರ ಶಿಲುಬೆ ಚರ್ಚ್',ರೋಮನ್ ಕಥೋಲಿಕ ಚರ್ಚ್ (ಲ್ಯಾಟಿನ್ ವಿಧಿ), ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪಾವೂರುಗ್ರಾಮದಲ್ಲಿದ್ದು, ಪ್ರಪಂಚದಲ್ಲಿಯೇ ಏಕೈಕ ಕಥೋಲಿಕ ಚರ್ಚ್ ಸೇವೆಗಳನ್ನು ತುಳು ಭಾಷೆಯಲ್ಲಿಯೇ ನೆರವೇರಿಸಲಾಗುತ್ತದೆ.[೧]

ಅನನ್ಯ ಗುರುತು[ಬದಲಾಯಿಸಿ]

ಪವಿತ್ರ ಶಿಲುಬೆ ಚರ್ಚ್, ಕೇರಳದಲ್ಲಿದ್ದು ಕಾಸರಗೋಡು ನಿಕಾಯಕದ ಹಲವಾರು ಚರ್ಚ್-ಗಳಲ್ಲಿ ಒಂದಾಗಿದ್ದು,ಕಥೋಲಿಕ ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಕ್ಕೆ ಒಳಪಟ್ಟಿದೆ. ಇದು ತುಳುನಾಡುಪ್ರದೇಶದ, ಭಾರತದ ನೈಋತ್ಯಕರಾವಳಿ ತೀರದಲ್ಲಿದೆ. ಇಲ್ಲಿನ ತುಳು ಭಾಷೆಯನ್ನು ಪ್ರಾಧಾನ್ಯವನ್ನು ಪಡೆದಿದೆ. ಈ ಭಾಷೆ ದಕ್ಷಿಣ ಕನ್ನಡ ಮತ್ತು ಉಡುಪಿ ಕರ್ನಾಟಕದ ಜಿಲ್ಲೆಗಳು ಇಲ್ಲಿಂದ ಹರಡಿ ಕೇರಳರಾಜ್ಯದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿ ತೀರದವರೆಗೂ ಹಬ್ಬಿದೆ..[೨] The Chandragiri river is traditionally considered to be a boundary between Tulu Nadu and Kerala.[೩]

ಇತರೆ ಚರ್ಚ್-ಗಳಲ್ಲಿ ಸೇವೆಗಳನ್ನು ಕೊಂಕಣಿಕೊಂಕಣಿ, ಆಂಗ್ಲ ಇಂಗ್ಲೀಷ್ ಮತ್ತು ಕನ್ನಡಕನ್ನಡ ಭಾಷೆಗಳಲ್ಲಿ ಸಲ್ಲಿಸಲಾಗುತ್ತಿದ್ದು, ಪಾವೂರು ಚರ್ಚ್-ನಲ್ಲಿ ಪ್ರಮುಖ ಪೂಜೆಯನ್ನು ತುಳು ಭಾಷೆಯಲ್ಲಿ ಪ್ರತಿ ಭಾನುವಾರ ಬೆಳಗ್ಗಿನ ೭:೩೦ (ಐ.ಎಸ್.ಟಿ)ಗೆ ನೆರವೇರಿಸಲಾಗುತ್ತದೆ. ಬೆಳಗ್ಗಿನ ೧೧ ಘಂಟೆಯ ಪೂಜಾವಿಧಿಗಳನ್ನು ಮಕ್ಕಳಿಗಾಗಿ ಮಿಶ್ರಿತ ಭಾಷೆಯಲ್ಲಿ ನಡೆಸಲಾಗುತ್ತದೆ. ತಿಂಗಳ ಮೊದಲ ಭಾನುವಾರದಂದು ಕೊಂಕಣಿ ಭಅಷೆಯಲ್ಲಿ ಪೂಜೆಯನ್ನು ಸಲ್ಲಿಸಲಾಗುತ್ತಿದ್ದು, ದ್ವಿತೀಯ ಭಾನುವಾರ ತುಳು ಹಾಗೂ ತೃತೀಯ ಹಾಗೂ ನಾಲ್ಕನೇ ಭಾನುವಾರದಂದು ಕನ್ನಡದಲ್ಲಿ ಬಲಿಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ಪ್ರಮುಖ ಬಲಿಪೂಜೆಗಾಗಿ ಭಕ್ತಿಗೀತೆಗಳನ್ನು ತುಳುವಿನಲ್ಲಿ ಹಾಡಲಾಗುತ್ತಿದ್ದು, ಪ್ರಾರ್ಥನಾವಿಧಿಗಳನ್ನು ತುಳು ಭಾಷೆಗೆ ಭಾಷಾಂತರಿಸಲಾಗಿದೆ, ಅಲ್ಲದೇ ಭೋಧನೆಯನ್ನೂ ತುಳು ಭಾಷೆಯಲ್ಲಿ ಮಾಡಲಾಗುತ್ತದೆ.

ಇತಿಹಾಸ[ಬದಲಾಯಿಸಿ]

""ಧ್ಯಾನೊದ ಪುಸ್ತಕ" ಎಂಬ ತುಳು ಭಾಷೆಯ ಪ್ರಾರ್ಥನಾ ಪುಸ್ತಕವಿದೆ(lit. ಜ್ಞಾನದ ಪುಸ್ತಕ). "ಭಕ್ತಿಗೀತೆಲು" ಎಂಬ ಭಕ್ತಿಗೀತೆಗಳ ಪುಸ್ತಕವೂ ಇದೆ(lit. ಭಕ್ತಿಗೀತೆಗಳು).

ತುಳು ಭಾಷೆ ಈ ಚರ್ಚಿನ ಆಧುನಿಕತೆಯಲ್ಲ.ಇದರ ಸಂಪೂರ್ಣ ಗೌರವವು ೧೮೯೭ರಲ್ಲಿ ಮಂಗಳುರಿಗೆ ಬಂದ ಇಟಲಿಯ ಯೇಸುಸಭೆಯ ಗುರುಗಳಾದ ವಂ. ಅಲೆಕ್ಸಾಂಡರ್ ಕಾಮಿಸ್ಸಾ ಅವರಿಗೆ ಸಲ್ಲುತ್ತದೆ. ಇವರು ೧೮೬೮ರಲ್ಲಿ ಇಟಲಿಯಲ್ಲಿ ಜನಿಸಿ, ಭಾರತಕ್ಕೆ ಬಂದ ವರ್ಷದಲ್ಲಿ ಮಂಗಳೂರು ತಾಲ್ಲೂಕು-ನ ಸುರತ್ಕಲ್ ಪ್ರದೇಶದಲ್ಲಿ ತುಳು ಭಾಷೆಯನ್ನು ಕಲಿತರು. ಇವರು ಜೆಪ್ಪುವಿನ ಸೆಮಿನರಿಯಲ್ಲಿ ಅಧ್ಯಾಪಕರಾಗಿದ್ದ ಕಾಲದಲ್ಲಿ ತುಳು ಭಾಷೆಯನ್ನು ಅಭ್ಯಸಿಸಿದರು. ಈ ಸಮಯದಲ್ಲಿ ಅವರು ಬುಟ್ಟಿಗಳನ್ನು ನೇಯುವ ಬುಡಕಟ್ಟು ಜನಾಂಗದ ಶೋಚನೀಯ ಸ್ಥಿತಿಗಯಲ್ಲಿ ತಮ್ಮ ಜೀವನವನ್ನು ಸಾಗಿಸುವ ಜನರ ಬಗ್ಗೆ ತಿಳಿದುಕೊಂಡರು.

೧೯೧೩ರಲ್ಲಿ ವಂ. ಅಲೆಕ್ಸಾಂಡರ್ ಅವರು ಪಾವೂರಿನಲಲ್ಇ ತಮ್ಮ ಕಾರ್ಯಗಳನ್ನು ಆರಂಭಿಸಿದಾಗ ಅದೊಂದು ಬಂಜರು ಭೂಮಿಯಾಗಿತ್ತು. ಅವರು ಸರ್ಕಾರದಿಂದ ೩೦೦ ಎಕರೆ ಜಾಗವನ್ನು ಪಡೆದು ಟೆಂಪ್ಲೇಟು:ಪರಿರ್ವತಿತ ಈ ಬುಡಕಟ್ಟು ಜನರನ್ನು ಅಲ್ಲಿಗೆ ಸ್ಥಳಾಂತರಿಸಿದರು. ಮೊತ್ತಮೊದಲ ಬಾರಿಗೆ ಈ ಅಲೆಮಾರಿ ಜನರು ತಮ್ಮದೇ ಆದ ಒಂದೇ ಪ್ರದೇಶದಲ್ಲಿ ನೆಲೆವೂರಲು ಸ್ವಂತ ಭೂಮಿಯನ್ನು ಪಡೆದರು.

ಹೀಗಾಗಿ, ಇವರು ಇಲ್ಲಿ ಮೂಲ ನಿವಾಸಿಗಳಾಗಿ, ಅನಕ್ಷರಸ್ಥರಾದ ಕಾರಣದಿಂದಾಗಿ ಅವರ ಆಡು ಭಾಷೆಯಾದ ತುಳ ಭಾಷೆಯಲ್ಲಿಯೇ ಪಾವೂರು ಚರ್ಚ್ ತನ್ನ ಸೇವೆಗಳನ್ನು ಆರಂಭಿಸಿತು. ಈ ಚರ್ಚ್-ನಲ್ಲಿ ಮೂಲ ನಿವಾಸಿಗಳ ಪೈಕಿ ೯೫% ದಷ್ಟು ತುಳು ಭಾಷಿಕರಾಗಿ ೧೧೦ ಕುಟುಂಬಗಳನ್ನು ಹೊಂದಿದ್ದು ಉಳಿದ ೧೦ ಕುಟುಂಬಗಳು ಕೊಂಕಣಿ ಭಾಷಿಕರಾಗಿದ್ದರು. ಆದರೆ, ಪ್ರಸ್ತುತ ಇಲ್ಲಿ ನೆಲೆವೂರಿದ ನಿವಾಸಿಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಿದ್ದಾರೆ.

ಟಿಪ್ಪಣಿಗಳು[ಬದಲಾಯಿಸಿ]

  1. John B. Monteiro (2005-05-11). "Pavoor — The Only Place for Church Services in Tulu". Daijiworld Media Pvt Ltd Mangalore. Archived from the original on 2008-01-22. Retrieved 2009-06-04.
  2. "Tulu Nadu movement gaining momentum". Chennai, India: ದಿ ಹಿಂದೂ. 2006-08-13. Archived from the original on 2012-03-02. Retrieved 2009-06-04. {{cite news}}: Italic or bold markup not allowed in: |publisher= (help)
  3. Parpola 2000, p. 386

ಉಲ್ಲೇಖಗಳು[ಬದಲಾಯಿಸಿ]

  • Parpola, Marjatta (2000). Kerala Brahmins in transition: a study of a Nampūtiri family. Finnish Oriental Society. ISBN 978-951-9380-48-3.