ಪಲ್ಲವಿ ಅನುಪಲ್ಲವಿ
ಪಲ್ಲವಿ ಅನುಪಲ್ಲವಿ | |
---|---|
![]() | |
ಪಲ್ಲವಿ ಅನುಪಲ್ಲವಿ | |
ನಿರ್ದೇಶನ | ಮಣಿರತ್ನಂ |
ನಿರ್ಮಾಪಕ | ಎಸ್.ಕೃಷ್ಣಮೂರ್ತಿ |
ಚಿತ್ರಕಥೆ | ಮಣಿರತ್ನಂ |
ಕಥೆ | ಮಣಿರತ್ನಂ |
ಪಾತ್ರವರ್ಗ | ವಿಕ್ರಂ ಲಕ್ಷ್ಮಿ ಕಿರಣ್, ಅನಿಲ್ ಕಪೂರ್, ಭಾರ್ಗವಿ ನಾರಾಯಣ್ |
ಸಂಗೀತ | ಇಳಯರಾಜ |
ಛಾಯಾಗ್ರಹಣ | ಬಾಲು ಮಹೇಂದ್ರ |
ಬಿಡುಗಡೆಯಾಗಿದ್ದು | ೧೯೮೩ |
ಚಿತ್ರ ನಿರ್ಮಾಣ ಸಂಸ್ಥೆ | ವೀನಸ್ ಪಿಕ್ಚರ್ಸ್ |
ಸಾಹಿತ್ಯ | ಆರ್.ಎನ್.ಜಯಗೋಪಾಲ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಎಸ್.ಪಿ.ಶೈಲಜ |
ಇತರೆ ಮಾಹಿತಿ | ಮಣಿರತ್ನಂ ನಿರ್ದೇಶನದ ಮೊದಲ ಚಲನಚಿತ್ರ ಅನಿಲ್ ಕಪೂರ್ ನಟಿಸಿರುವ ಏಕೈಕ ಕನ್ನಡ ಚಲನಚಿತ್ರ. |
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ಓ ಪ್ರೇಮಿ | ಆರ್.ಎನ್.ಜಯಗೋಪಾಲ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ನಗುವ ನಯನ ಮಧುರ ಮೌನ | ಆರ್.ಎನ್.ಜಯಗೋಪಾಲ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ನಗೂ ಎಂದಿದೆ | ಆರ್.ಎನ್.ಜಯಗೋಪಾಲ್ | ಎಸ್.ಜಾನಕಿ |
ಹೃದಯ ರಂಗೋಲಿ | ಆರ್.ಎನ್.ಜಯಗೋಪಾಲ್ | ಎಸ್.ಪಿ.ಶೈಲಜ |
ಪಲ್ಲವಿ ಅನುಪಲ್ಲವಿ - ಕನ್ನಡ ಚಲನಚಿತ್ರಗಳಲ್ಲೊಂದು.
ಮಣಿರತ್ನಂ ಅವರ ನಿರ್ದೇಶನದ ಮೊದಲ ಚಲನಚಿತ್ರ ಪಲ್ಲವಿ ಅನುಪಲ್ಲವಿ. ಈ ಚಿತ್ರದಲ್ಲಿ ಅನಿಲ್ ಕಪೂರ್, ಕಿರಣ್ ಮತ್ತು ಲಕ್ಷ್ಮಿ ನಟಿಸಿದ್ದಾರೆ. ಅನು (ಲಕ್ಷ್ಮಿ) ಅವಳ ಗಂಡನಿಂದ ದೂರವಾಗಿ ತನ್ನ ಸಣ್ಣ ಮಗನೊಂದಿಗೆ ಮಡಿಕೇರಿಯಲ್ಲಿ ವಾಸವಾಗಿದ್ದಾಳೆ. ಬೆಂಗಳೂರಲ್ಲಿ ವಿಜಯ್ (ಅನಿಲ್) ಮಧು (ಕಿರಣ್) ಅನ್ನು ಒಂದು ಸಮಾರಂಭದಲ್ಲಿ ಬೇಟಿಯಾಗುತ್ತಾನೆ. ಬೇಟಿ ಪ್ರೀತಿಯಾಗಿ ಅರಳುತ್ತದೆ. ಮಧು ತನ್ನ ಕ್ಯಾಲಿಫೋರ್ನಿಯಾದಲ್ಲಿ ಓದುವ ಹಂಬಲವನ್ನು ಕೈಬಿಡುತ್ತಾಳೆ. ವಿಜಯ್ ತನ್ನ ತಂದೆಯ ಎಸ್ಟೇಟ್ ವ್ಯವಹಾರವನ್ನು ನೋಡಿಕೊಳ್ಳಲು ಮಡಿಕೇರಿಗೆ ಹೋಗುತ್ತಾನೆ. ಅಲ್ಲಿ ಅನುವನ್ನು ಬೇಟಿಮಾಡುತ್ತಾನೆ. ಅವಳ ದುಃಖ ನೋಡಿ ಅವಳೊಂದಿಗೆ ಸ್ನೇಹ ಬೆಳಸುತ್ತಾನೆ. ವಿಜಯ್, ಮಧು, ಅನು, ಈ ಪ್ರೇಮ ತ್ರಿಕೋಣದಲ್ಲಿ ಮುಂದೆ ಏನು ಕಾದಿದೆ ಎಂಬುದು ಚಿತ್ರದ ತಿರುಳು.
ಸ್ವಾರಸ್ಯ
- ಮಣಿರತ್ನಂ ನಿರ್ದೇಶನದ ಮೊದಲ ಚಲನಚಿತ್ರ
- ಮಣಿರತ್ನಂ ನಿರ್ದೇಶನದ ಏಕೈಕ ಕನ್ನಡ ಚಲನಚಿತ್ರ
- ಅನಿಲ್ ಕಪೂರ್ ನಟಿಸಿರುವ ಏಕೈಕ ಕನ್ನಡ ಚಲನಚಿತ್ರ