ವಿಷಯಕ್ಕೆ ಹೋಗು

ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಂಬಿಕುಲಂ ಹುಲಿ ಸಂರಕ್ಷಿತ ಅಭಯಾರಣ್ಯ
IUCN category IV (habitat/species management area)
ಪರಂಬಿಕುಲಂ ಹುಲಿ ಸಂರಕ್ಷಿತ ಪ್ರದೇಶ
Map showing the location of ಪರಂಬಿಕುಲಂ ಹುಲಿ ಸಂರಕ್ಷಿತ ಅಭಯಾರಣ್ಯ
Map showing the location of ಪರಂಬಿಕುಲಂ ಹುಲಿ ಸಂರಕ್ಷಿತ ಅಭಯಾರಣ್ಯ
Map showing the location of ಪರಂಬಿಕುಲಂ ಹುಲಿ ಸಂರಕ್ಷಿತ ಅಭಯಾರಣ್ಯ
Map showing the location of ಪರಂಬಿಕುಲಂ ಹುಲಿ ಸಂರಕ್ಷಿತ ಅಭಯಾರಣ್ಯ
ಸ್ಥಳಪಾಲಕ್ಕಾಡ್ ಜಿಲ್ಲೆ, ಕೇರಳ, ಭಾರತ ಮತ್ತು ತ್ರಿಶೂರ್ ಜಿಲ್ಲೆ, ಕೇರಳ, ಭಾರತ
ಹತ್ತಿರದ ನಗರಪಾಲಕ್ಕಾಡ್ (90 km)[]
ನಿರ್ದೇಶಾಂಕಗಳು10°23′0″N 76°42′30″E / 10.38333°N 76.70833°E / 10.38333; 76.70833
ಪ್ರದೇಶ೬೪೩.೬೬ ಚದರ ಕಿ.ಮೀ
ಸ್ಥಾಪನೆ೨೦೦೯
ಸಂದರ್ಶಕರು೧೦೦೦೦೦ (in ೨೦೧೯)
ಆಡಳಿತ ಮಂಡಳಿಕೇರಳ ಅರಣ್ಯ ಇಲಾಖೆ
ವ್ಯಾಸಕ್ ಸಸಿಕುಮಾರ್, ಭಾ.ಅ.ಸೇ, ಉಪನಿರ್ದೇಶಕರು (ಹುಲಿ ಯೋಜನೆ)
ಜಾಲತಾಣwww.parambikulam.org
ಪರಂಬಿಕುಲಂ ಜಲಾಶಯದ ನೋಟ

ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ ವು ದಕ್ಷಿಣ ಭಾರತದ ಕೇರಳ ರಾಜ್ಯದ ಪಾಲಕ್ಕಾಡ್‌ ಜಿಲ್ಲೆಯಲ್ಲಿನ ಚಿತ್ತೂರು ತಾಲ್ಲೂಕಿನಲ್ಲಿರುವ ೮೯ ಚದರ ಕಿ.ಮೀ. ವಿಸ್ತೀರ್ಣದ ಒಂದು ಸಂರಕ್ಷಿತ ಪ್ರದೇಶವಾಗಿದೆ. ೧೯೭೩ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂರಕ್ಷಿತ ಪ್ರದೇಶವು ಆನೈಮಲೈ ಬೆಟ್ಟಗಳು ಮತ್ತು ನೆಲ್ಲಿಯಂಪತ್ತಿ ಬೆಟ್ಟಗಳ ನಡುವಿನ ಸುಂಗಮ್‌ ಬೆಟ್ಟಗಳ ಶ್ರೇಣಿಯಲ್ಲಿದೆ.[],[],[] ಪಶ್ಚಿಮ ಘಟ್ಟಗಳು, ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯದ ಎಲ್ಲ ಭಾಗವನ್ನು ಒಳಗೊಂಡಿರುವ ಆನೈಮಲೈ ಅಧೀನದ-ಸಮುದಾಯವು ಒಂದು ವಿಶ್ವ ಪರಂಪರೆ ತಾಣದ ಆಯ್ಕೆಗೆ ಸಂಬಂಧಿಸಿದಂತೆ UNESCO ವಿಶ್ವ ಪರಂಪರೆ ಸಮಿತಿಯ ಪರಿಗಣನೆಯ ಅಡಿಯಲ್ಲಿದೆ.[] ಆರು ನೆಲಸುನಾಡುಗಳಲ್ಲಿ ನೆಲೆಗೊಂಡಿರುವ ಸ್ಥಳೀಯ ಜನರ ೪ ವಿಭಿನ್ನ ಬುಡಕಟ್ಟುಗಳಿಗೆ ಈ ಅಭಯಾರಣ್ಯವು ನೆಲೆಯಾಗಿದ್ದು, ಅವುಗಳಲ್ಲಿ ಕದಾರ್‌, ಮಾಲಾಸರ್‌, ಮುದುವರ್‌ ಮತ್ತು ಮಾಲಾ ಮಾಲಾಸರ್‌ ಬುಡಕಟ್ಟುಗಳು ಸೇರಿವೆ. ೨೦೧೦ರ ಫೆಬ್ರುವರಿ ೧೯ರಂದು ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯವು 390.88 square kilometres (150.9 mi2)[] ಪರಾಂಬಿಕುಲಂ ಹುಲಿ ಮೀಸಲು ಪ್ರದೇಶದ ಭಾಗವೆಂಬುದಾಗಿ ಘೋಷಿಸಲ್ಪಟ್ಟಿತು.[] |[] []

ಭೌಗೋಳಿಕತೆ

[ಬದಲಾಯಿಸಿ]

೭೬° ೩೫’- ೭೬° ೫೦’ E ರೇಖಾಂಶ ಮತ್ತು ೧೦° ೨೦’ – ೧೦° ೨೬’ N ಅಕ್ಷಾಂಶದ ನಡುವೆ ಈ ಅಭಯಾರಣ್ಯವು ನೆಲೆಗೊಂಡಿದೆ. ಇದು ಪಾಲಕ್ಕಾಡ್‌ ಪಟ್ಟಣದಿಂದ ೧೩೫ ಕಿ.ಮೀ.ಗಳಷ್ಟು ದೂರದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ತಮಿಳುನಾಡಿನಲ್ಲಿ ಇರುವ ಅಣ್ಣಾಮಲೈ ವನ್ಯಜೀವಿಗಳ ಅಭಯಾರಣ್ಯವು ಪೂರ್ವಭಾಗಕ್ಕಿದೆ. ಇದರ ಉತ್ತರದ ಗಡಿಯಲ್ಲಿ ನೆಮ್ಮಾರ ಅರಣ್ಯ ವಿಭಾಗವಿದ್ದರೆ, ದಕ್ಷಿಣದ ಗಡಿಯಲ್ಲಿ ವಳಾಚಲ್‌ ಅರಣ್ಯ ವಿಭಾಗ ಮತ್ತು ಪಶ್ಚಿಮದಲ್ಲಿ ಚಾಲಕುಡಿ ಅರಣ್ಯ ವಿಭಾಗಗಳಿವೆ. ಈ ಅಭಯಾರಣ್ಯವು ಹಾರ್ನ್‌ಬ್ಲೆಂಡ್‌ (ಮುಖ್ಯವಾಗಿ ಕ್ಯಾಲ್ಷಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಸಿಲಿಕೇಟುಗಳಿಂದಾದ, ಗ್ರಾನೈಟಿನ ಒಂದು ಘಟಕವಾದ, ದಟ್ಟ ಕಂದು, ಕಪ್ಪು ಅಥವಾ ಹಸಿರು ಬಣ್ಣದ ಒಂದು ಖನಿಜ), ಬಯೋಟೈಟ್‌, ಗ್ನೈಸ್‌ (ಕ್ವಾರ್ಟ್ಸ್‌, ಫೆಲ್‌ಸ್ಪಾರ್‌ ಮತ್ತು ಆಭ್ರಕಗಳಿರುವ ಒಂದು ಬಗೆಯ ಪದರ ಪದರವಾದ ರೂಪಾಂತರಿತ ಶಿಲೆ) ಮತ್ತು ಚಾರ್ನೋಕೈಟ್‌ ಇವೇ ಮೊದಲಾದವುಗಳನ್ನು ಒಳಗೊಂಡಿರುವ ಒಂದು ಭೂವೈಜ್ಞಾನಿಕ ಲಕ್ಷಣವನ್ನು ಹೊಂದಿದೆ.

೩೦೦ ಮೀ. ಮತ್ತು ೧೪೩೮ ಮೀ. ನಡುವಿನ ಉನ್ನತಿಯನ್ನು ಇದು ಹೊಂದಿದೆ. ಅಭಯಾರಣ್ಯದ ಉತ್ತರದ ಸೀಮಾಸ್ತರದ ಆನೈಮಲೈ ಬೆಟ್ಟಗಳಿಂದ ನೆಲ್ಲಿಯಂಪತ್ತಿ ಬೆಟ್ಟಗಳನ್ನು ಹಾದುಹೋಗುವಂತಿರುವ ೬೦೦ ಮೀ.ನಷ್ಟಿರುವ ಒಂದು ಮೇಲೆತ್ತಿದ ಸ್ಥಿತಿ ಅಥವಾ ಚಾಚುವಿಕೆಯು ಥೂಟಂಪಾರಾದಲ್ಲಿದೆ. ಅಭಯಾರಣ್ಯದಲ್ಲಿರುವ ಪ್ರಮುಖ ಶಿಖರಗಳೆಂದರೆ ಅಭಯಾರಣ್ಯದ ದಕ್ಷಿಣದ ಸೀಮಾಸ್ತರದಲ್ಲಿರುವ ಕರಿಮಲಾ (೧೪೩೮ ಮೀ.), ಉತ್ತರದಲ್ಲಿರುವ ಪಂಡಾರವಾರೈ (೧೨೯೦ ಮೀ.), ಪೂರ್ವದ ಸೀಮಾಸ್ತರದಲ್ಲಿರುವ ಕೂಚಿಮುಡಿ, ವೆಂಗೋಲಿ ಮಲೈ (೧೧೨೦ ಮೀ.) ಮತ್ತು ಪಶ್ಚಿಮದಲ್ಲಿರುವ ಪುಲಿಯಾರಾಪಾದಂ (೧೦೧೦ ಮೀ.) ಆಗಿವೆ. ಪರಾಂಬಿಕುಲಂ, ಥುನಾಕಡವು ಮತ್ತು ಪೆರುವಾರಿಪಲ್ಲಂ ಎಂದು ಕರೆಯಲ್ಪಡುವ ಮಾನವ-ನಿರ್ಮಿತವಾದ ಮೂರು ಜಲಾಶಯಗಳನ್ನು ಈ ಅಭಯಾರಣ್ಯವು ಹೊಂದಿದ್ದು, ಅವುಗಳ ಸಂಯೋಜಿತ ವಿಸ್ತೀರ್ಣವು ೨೦.೬೬ ಚದರ ಕಿ.ಮೀ.ನಷ್ಟಿದೆ. ಈ ಜಲಾಶಯಗಳ ಪೈಕಿ ಒಂದರೊಳಗೆ ಥುವೈಯಾರ್‌ ಜಲಪಾತವು ಧುಮ್ಮಿಕ್ಕುತ್ತದೆ. ೭ ಪ್ರಮುಖ ಕಣಿವೆಗಳು ಮತ್ತು ಪರಾಂಬಿಕುಲಂ, ಶೋಲಯಾರ್‌ ಹಾಗೂ ಥೆಕ್ಕಾಡಿ ಎಂಬ ೩ ಪ್ರಮುಖ ನದಿಗಳು ಅಲ್ಲಿವೆ. ಕರಪ್ಪಾರ ನದಿ ಮತ್ತು ಕುರಿಯಾರ್‌ಕುಟ್ಟಿ ನದಿಗಳೂ ಸಹ ಈ ಪ್ರದೇಶದಲ್ಲಿ ಹರಿಯುತ್ತವೆ. ನೋಡಿ: ಸ್ಥಳದ ಸ್ವರೂಪಕ್ಕೆ ಸಂಬಂಧಿಸಿದ 3-D ನಕ್ಷೆಗಳು

ಸಂದರ್ಶಕರಿಗೆ ಮಾಹಿತಿ

[ಬದಲಾಯಿಸಿ]

ಪೂರ್ವಾನುಮತಿಯೊಂದಿಗೆ ಅರಣ್ಯದಲ್ಲಿ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ.ಇದಕ್ಕೆ ಸಂಬಂಧಿಸಿದ ಸಂಪರ್ಕದ ವಿವರಗಳು ಹೀಗಿವೆ: ಇಕೋಕೇರ್‌ ಸೆಂಟರ್‌, ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ, ಅನಪ್ಪಾಡಿ, ಥುನಾಕಡವು (PO), ಪೊಲ್ಲಾಚಿ (ಮಾರ್ಗವಾಗಿ), ಪಾಲಕ್ಕಾಡ್‌, ಕೇರಳ – ೬೭೮ ೬೬೧.ದೂರವಾಣಿ : ೦೪೨೫೩ – ೨೪೫೦೨೫ ಜಲಾಶಯದಲ್ಲಿ ದೋಣಿವಿಹಾರವನ್ನು ಮಾಡಬಹುದಾಗಿದೆ. ಏಷ್ಯಾದಲ್ಲೇ ಅತಿದೊಡ್ಡದು ಎಂದು ಹೇಳಲಾಗುವ ಕ್ಯಾನ್ನಿಮರೆ ಸಾಗವಾನಿ ಮರ ವು ಇಲ್ಲಿನ ಥೂನಕಡವು ಹಳ್ಳಿಯ ಸಮೀಪದಲ್ಲಿದೆ.

ಥೂನಕಡವುವಿನಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಮರದ-ಮನೆಯೊಂದಿದ್ದು, ಅದು ಪರಾಂಬಿಕುಲಂನ ಕೇಂದ್ರಕಾರ್ಯಾಲಯವಾಗಿದೆ ಹಾಗೂ ಅದನ್ನು ಮುಂಗಡವಾಗಿ ಕಾದಿರಿಸಬೇಕಾಗುತ್ತದೆ. ಥೂನಕಡವು, ಥೆಲ್ಲಿಕ್ಕಳ್‌ ಮತ್ತು ಎಲಥೋಡ್‌‌ಗಳಲ್ಲಿರುವ ರಾಜ್ಯ ಅರಣ್ಯ ಇಲಾಖೆಯ ವಿಶ್ರಾಂತಿಗೃಹಗಳು ಆರಾಮದಾಯಕವಾದ ವಸತಿ ವ್ಯವಸ್ಥೆಯನ್ನು ಒದಗಿಸುತ್ತವೆ.[೧೦]

ಪರಂಬಿಕುಲಂ ಅಭಯಾರಣ್ಯದೊಳಗೆ ಸಾಗುತ್ತಿರುವ ಸಾರಿಗೆ ಸಂಸ್ಥೆ ಬಸ್ಸು

ತಮಿಳುನಾಡಿನ ಪೊಲ್ಲಾಚಿಯಿಂದ ರಸ್ತೆಯ ಮಾರ್ಗವಾಗಿ ಪರಾಂಬಿಕುಲಂಗೆ ಪ್ರವೇಶಸಬಹುದು. ಪಾಲಕ್ಕಾಡ್‌ನಿಂದ ಪೊಲ್ಲಾಚಿಗೆ ಸುಮಾರು ೪೫ ಕಿ.ಮೀ.ಗಳಿದ್ದು, ನಂತರ ಪೊಲ್ಲಾಚಿಯಿಂದ ಪರಾಂಬಿಕುಲಂಗೆ ಸುಮಾರು ೬೫ ಕಿ.ಮೀ.ಗಳಷ್ಟು ಅಂತರವಿದೆ. ಅತ್ಯಂತ ಸಮೀಪದ ರೈಲು ನಿಲ್ದಾಣವು ಪೊಲ್ಲಾಚಿಯಲ್ಲಿದೆ ಮತ್ತು ಅತ್ಯಂತ ಸಮೀಪದ ವಿಮಾನ ನಿಲ್ದಾಣವು ತಮಿಳುನಾಡಿನ ಕೊಯಂಬತ್ತೂರ್‌‌‌ನಲ್ಲಿದೆ; ಇಲ್ಲಿಗೆ ಪಾಲಕ್ಕಾಡ್‌ ಮಾರ್ಗವಾಗಿ ಸುಮಾರು ೧೨೦ ಕಿ.ಮೀ.ಗಳಾಗುತ್ತವೆ.

ಪ್ರಾಣಿ ಸಂಕುಲ

[ಬದಲಾಯಿಸಿ]

ಈ ಅಭಯಾರಣ್ಯವು ಪ್ರಾಣಿ ಸಂಕುಲದ ಒಂದು ಸಮೃದ್ಧ ವೈವಿಧ್ಯತೆಯನ್ನು ಹೊಂದಿದ್ದು, ೩೯ ಜಾತಿಗಳ ಸಸ್ತನಿಗಳು, ೧೬ ಜಾತಿಗಳ ಉಭಯವಾಸಿಗಳು, ೨೬೮ ಜಾತಿಗಳ ಪಕ್ಷಿಗಳು, ೬೧ ಜಾತಿಗಳ ಸರೀಸೃಪಗಳು, ೪೭ ಜಾತಿಗಳ ಮೀನುಗಳು, ೧೦೪೯ ಜಾತಿಗಳ ಕೀಟಗಳು ಮತ್ತು ೧೨೪ ಜಾತಿಗಳ ಚಿಟ್ಟೆಗಳನ್ನು ಅದು ಒಳಗೊಂಡಿದೆ.

  • ಸಸ್ತನಿಗಳು - ಪ್ರಮುಖ ಸಸ್ತನಿಗಳಲ್ಲಿ ಇವು ಸೇರಿವೆ: ಸಿಂಹದ-ಬಾಲದ ಮಕಾಕ ಕೋತಿಗಳು, ನೀಲಗಿರಿಯ ಕಾಡುಜಿಂಕೆ, ಆನೆಗಳು, ಬಂಗಾಳಿ ಹುಲಿಗಳು, ಚಿರತೆಗಳು, ಕಾಡುಹಂದಿ, ಸ್ಯಾಂಬರ್‌ ಜಿಂಕೆ, ಟೋಪಿಯಂತೆ ಜುಟ್ಟುಳ್ಳ ಮಕಾಕ ಕೋತಿಗಳು, ನೀಲಗಿರಿಯ ಮುಸುವಗಳು, ಸ್ಲಾತ್‌ ಕರಡಿಗಳು, ನೀಲಗಿರಿಯ ಮಾರ್ಟಿನ್‌ ಟ್ರಾವಂಕೋರ್‌ನ ಸಣ್ಣ ಹಾರುವ ಅಳಿಲು ಮತ್ತು ಕಾಡೆತ್ತು.
  • ಸರೀಸೃಪಗಳು - ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯದಲ್ಲಿನ ಅತ್ಯುನ್ನತ ಪ್ರಾಮುಖ್ಯತೆಯ ಸರೀಸೃಪಗಳಲ್ಲಿ ಇವು ಸೇರಿವೆ: ಕಾಳಿಂಗಸರ್ಪ, ಕೇರಳದ ಗುರಾಣಿಬಾಲದ ಹಾವು Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ., ಟ್ರಾವಂಕೋರ್‌ನ ಕೊಂಕು ಕಠಾರಿಯಂಥ ಹಾವು, ಟ್ರಾವಂಕೋರ್‌ನ ತೋಳ ಹಾವು, ಕೊಚಿನ್‌ನ ಬೆತ್ತದಂಥ ಕಡಲಾಮೆ, ಟ್ರಾವಂಕೋರ್‌ನ ಆಮೆ, ಭಾರತದ ದಿನದ ಮನೆಯಹಲ್ಲಿ ಮತ್ತು ಪಶ್ಚಿಮ ಘಟ್ಟಗಳ ಹಾರುವ ಹಲ್ಲಿ. ಇತರ ಪ್ರಮುಖ ಸರೀಸೃಪಗಳಲ್ಲಿ ಭಾರತದ ಬಂಡೆ ಹೆಬ್ಬಾವು, ಮಲಬಾರಿನ ಕುಳಿಮೂತಿ ಹಾವು, ಟ್ರಾವಂಕೋರ್‌ನ ಆಮೆ, ದಕ್ಷಿಣ ಭಾರತದ ಅರಣ್ಯ ನೆಲವಾಸಿ ಹಲ್ಲಿ, ದಕ್ಷಿಣ ಭಾರತದ ಬಂಡೆ ಹಲ್ಲಿ, ಬೆಟ್ಟದ ಸ್ಕಿಂಕ್‌ ಎಂಬ ಸಣ್ಣ ಹಲ್ಲಿ, ಅಗಲಮುಸುಡಿಯ ಮೊಸಳೆ, ವರಾನಸ್‌, ಕೊಳದ ಟೆರಾಪಿನ್‌, ಗೋಸುಂಬೆ ಮತ್ತು ಹಾವುಗಳಲ್ಲಿ ನಾಗರಹಾವು, ಕಟ್ಟುಹಾವು, ಹಸಿರು ನೀರುಹಾವು, ಆಲಿವ್‌ ಹಸಿರು ಬಣ್ಣದ ನೀರುಹಾವು, ಪಶ್ಚಿಮ ಭಾಗದ ಇಲಿ ಹಾವು ಮತ್ತು ಬಳ್ಳಿ ಹಾವು ಮೊದಲಾದವು ಸೇರಿವೆ. ನೋಡಿ: ಸರೀಸೃಪ ಜಾತಿಗಳ ತಾಳೆಪಟ್ಟಿ.
  • ಮೀನುಗಳು - ಅಭಯಾರಣ್ಯದಲ್ಲಿ ಮೀನುಗಳ ೪೭ ಜಾತಿಗಳು ದಾಖಲಿಸಲ್ಪಟ್ಟಿದ್ದು ಅವುಗಳ ಪೈಕಿ ಏಳು ಜಾತಿಗಳು ಅಪಾಯದಂಚಿಗೆ ಸಿಲುಕಿರುವ ಜಾತಿಗಳೆಂಬುದಾಗಿ ಪಟ್ಟಿಮಾಡಲ್ಪಟ್ಟಿವೆ ಹಾಗೂ ೧೭ ಜಾತಿಗಳು ಪಶ್ಚಿಮ ಘಟ್ಟಗಳಿಗೆ ಸ್ಥಳೀಕವಾಗಿವೆ. ಕೆಲವೊಂದು ಮೀನುಗಳಲ್ಲಿ ಇವು ಸೇರಿವೆ: ಅರಲ್‌, ಬ್ರಾಲ್‌, ವಟ್ಟುಡಿ, ಟಿಲಾಪಿಯಾ, ನೂರಿ, ಮೂಷು, ಪೂಚುಟ್ಟಿ, ಕೊಲ್ಲೊಟ್ಟಿ, ಎಕ್ಸಿಪ್ರಿಯಸ್‌ ಮತ್ತು ಟಾರಲ್‌‌. ನೋಡಿ: ಮೀನುಗಳ ಸಂಪೂರ್ಣ ಪಟ್ಟೀಕರಣ.
  • ಪಕ್ಷಿಗಳು - ಅಭಯಾರಣ್ಯದಲ್ಲಿ ೨೬೮ ಪಕ್ಷಿ ಜಾತಿಗಳು ದಾಖಲಿಸಲ್ಪಟ್ಟಿವೆ. ೧೩೪ ಜಾತಿಗಳು ಅಪರೂಪದ ಜಾತಿಗಳಾಗಿ ಪಟ್ಟಿಮಾಡಲ್ಪಟ್ಟಿವೆ ಮತ್ತು ೧೮ ಜಾತಿಗಳು ಪಶ್ಚಿಮ ಘಟ್ಟಗಳಿಗೆ ಸ್ಥಳೀಕವಾಗಿವೆ. ಚಿಕ್ಕ ಹೆಬ್ಬಕ ಕೊಕ್ಕರೆ, ತಲೆ-ನರೆತ ಮೀನು-ಹದ್ದು ಪರ್ಯಾಯ ದ್ವೀಪವಾಸಿ ಕೊಲ್ಲಿಯ ಗೂಬೆ, ಅಗಲವಾದ-ಕೊಕ್ಕಿನ ಹೊಳಪು ಬಾಲದ ಹಕ್ಕಿ ಮತ್ತು ದೊಡ್ಡ ಚಿತ್ರವರ್ಣದ ಕೊಕ್ಕುಕೊಂಬಿನ ಹಕ್ಕಿ ಇವು ಇದರಲ್ಲಿ ಸೇರಿವೆ. ಇತರ ಪಕ್ಷಿಗಳಲ್ಲಿ ಇವು ಸೇರಿವೆ: ಮೀಂಚುಳ್ಳಿ, ಪುಟ್ಟ ನೀರುಕಾಗೆ, ಕಪ್ಪು ಹದ್ದು, ತಲೆಯಮೇಲೆ ಕಪ್ಪುಗರಿಯಿರುವ ಮೀಂಚುಳ್ಳಿ, ದೊಡ್ಡ ಭಾರತದ ಕೊಕ್ಕುಕೊಂಬಿನ ಹಕ್ಕಿ, ಮತ್ತು ಕಪ್ಪು ಮರಕುಟಿಗ.[೧೧] ನೋಡಿ: ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯದ ಪಕ್ಷಿಗಳ ಸಂಪೂರ್ಣ ತಾಳೆಪಟ್ಟಿ: PDF
  • ಚಿಟ್ಟೆಗಳು - ಅಭಯಾರಣ್ಯದಲ್ಲಿ ಚಿಟ್ಟೆಗಳ ೧೨೪ ಜಾತಿಗಳು ದಾಖಲಿಸಲ್ಪಟ್ಟಿದ್ದು ಅವುಗಳ ಪೈಕಿ ೩೪ ಜಾತಿಗಳು ಅಪರೂಪದವು ಮತ್ತು ಸ್ಥಳೀಕ ಜಾತಿಗಳಾಗಿವೆ. ನೋಡಿ: ಪರಾಂಬಿಕುಲಂನಲ್ಲಿ ಕಂಡುಬರುವ ಚಿಟ್ಟೆಗಳ ತಾಳೆಪಟ್ಟಿ PDF
  • ಭಾರತದ ಕಾಡೆಮ್ಮೆ
    ಪರಂಬಿಕುಲಂ ಅಭಯಾರಣ್ಯದಲ್ಲಿ ಕಂಡ ಜಿಂಕೆಗಳು
    ಉಭಯವಾಸಿಗಳು - ಅಭಯಾರಣ್ಯದಲ್ಲಿನ ೨೩ ಉಭಯವಾಸಿ ಜಾತಿಗಳಲ್ಲಿ ಇವು ಸೇರಿವೆ: ಏಣುಗಳನ್ನುಳ್ಳ ಕಾಡುಗಪ್ಪೆಯಾದ ಬಫೊ ಪೇರಿಯೆಟಾಲಿಸ್‌, ಏಷ್ಯಾದ ಸಾಮಾನ್ಯ ಕಾಡುಗಪ್ಪೆಯಾದ ಬಫೊ ಮೆಲಾನೊಸ್ಟಿಕ್ಟಸ್‌, ಸುಕ್ಕುಗಟ್ಟಿದ ಚರ್ಮದ ದೊಡ್ಡ ಕಪ್ಪೆಯಾದ ನಿಕ್ಟಿಬ್ಯಾಟ್ರಾಕಸ್‌ ಮೇಜರ್‌, ಸುಕ್ಕುಗಟ್ಟಿದ ಚರ್ಮದ ಸಣ್ಣ ಕಪ್ಪೆಯಾದ ನಿಕ್ಟಿಬ್ಯಾಟ್ರಾಕಸ್‌ ಮೈನರ್‌, ರಾನಾ ಟೈಗರಿನಾ, ಗಂತಿಯಂಥ ಕಪ್ಪೆಯಾದ ರಾನಾ ಕೇರಲೆನ್ಸಿಸ್‌, ರಾನಾ ಸಯನೊಫ್ಲೈಕ್ಟಿಸ್‌, ಬೌಲೆಂಜರ್‌'s ಭಾರತದ ಕಪ್ಪೆ ರಾನಾ ಲೆಪ್ಟೊಡ್ಯಾಕ್ಟೈಲಾ, ರಾನಾ ಲಿಮ್ನೊಕ್ಯಾರಿಸ್‌, ಬೆಡ್ಡೋಮ್‌ನ ಜಿಗಿಯುವ ಕಪ್ಪೆಯಾದ ರಾನಾ ಬೆಡ್ಡೊಮಿಲ್‌, ದಕ್ಷಿಣ ಭಾರತದ ಕಪ್ಪೆಯಾದ ರಾನಾ ಸೆಮಿಪಾಮೇಟಾ, ಜೋಡಿವರ್ಣದ ಕಪ್ಪೆಯಾದ ರಾನಾ ಕರ್ಟಿಪೆಸ್‌, ಕಂಚಿನ ಬಣ್ಣದ ಕಪ್ಪೆಯಾದ ರಾನಾ ಟೆಂಪೊರಾಲಿಸ್‌, ಬಿಲವನ್ನು ಕೊರೆಯುವ ನಸುಗೆಂಪು ಕಪ್ಪೆಯಾದ ಟೋಮೊಪ್ಟರ್ನಾ ರಫೆಸೆನ್ಸ್‌, ಪರಾಂಬಿಕುಲಂನ ಸಣ್ಣಗಂತಿಯ ಕಪ್ಪೆಯಾದ ಪರಾಂಬಿಕುಲಂ ಕಪ್ಪೆ ಟೋಮೊಪ್ಟರ್ನಾ ಪರಾಂಬಿಕುಲಮಾನಾ, ಬಿಳಿ-ಮೂಗಿನ ಪೊದೆ ಕಪ್ಪೆಯಾದ ಫಿಲೌಟಸ್‌ ಲ್ಯೂಕೋರೈನಸ್‌, ಬಿಳಿಯ-ಚುಕ್ಕೆಗಳನ್ನುಳ್ಳ ಪೊದೆ ಕಪ್ಪೆಯಾದ ಫಿಲೌಟಸ್‌ ಚಾಲಜೋಡ್ಸ್‌, ಕೇರಳದ ಚರ್ಮದ ಮೇಲೆ ಗಂಟುಗಳನ್ನುಳ್ಳ ಕಪ್ಪೆಯಾದ ಲಿಮ್ನೊನೆಕ್ಟಸ್‌ ಕೇರಳೆನ್ಸಿಸ್‌, ಭಾರತದ ಜಿಗಿಜೀರುಂಡೆ ಜಾತಿಯ ಕಪ್ಪೆಯಾದ ಯೂಫ್ಲೈಕ್ಟಿಸ್‌ ಸಯನೊಫ್ಲೈಕ್ಟಿಸ್‌, ಚಿಮ್ಮಂಡೆ ಕಪ್ಪೆಯಾದ ಲಿಮ್ನೊನೆಕ್ಟಸ್‌ ಲಿಮ್ನೊಕ್ಯಾರಿಸ್‌, ಬೆಡ್ಡೋಮ್‌ನ ಜಿಗಿಯುವ ಕಪ್ಪೆಯಾದ ಇಂಡಿರಾನಾ ಬೆಡ್ಡೊಮಿಲ್‌, ಮೋಟು ಬಲೆಚರ್ಮವುಳ್ಳ ಜಿಗಿಯುವ ಕಪ್ಪೆಯಾದ ಇಂಡಿರಾನಾ ಬ್ರಾಕಿಟಾರ್ಸಸ್‌ ಮತ್ತು ಸಾಮಾನ್ಯ ಕಪ್ಪೆಯಾದ ಮಿಕ್ರಿಕ್ಸಾಲಸ್‌ ಫಸ್ಕಸ್‌ [೧೨]. ಇದು ಕೇರಳದ ಸಮೀಪವಿದೆ.

ಸಸ್ಯಸಂಪತ್ತು

[ಬದಲಾಯಿಸಿ]
ಕನ್ನಿಮಾರ ತೇಗ

ಈ ಅಭಯಾರಣ್ಯವು ವೈವಿಧ್ಯಮಯವಾದ ಮರಗಳನ್ನು ಹೊಂದಿದ್ದು, ಮುಖ್ಯವಾಗಿ ಸಾಗವಾನಿ, ಬೇವು, ಶ್ರೀಗಂಧದ ಮರ ಮತ್ತು ಬೀಟೆಮರಗಳು ಅವುಗಳಲ್ಲಿ ಸೇರಿವೆ. ಅತಿಹಳೆಯ ಸಾಗವಾನಿ ಮರವೆಂದು ಹೇಳಲಾಗುವ ಕನ್ನಿಮರ ಸಾಗವಾನಿಯೂ (KANNIMARA TEAK) ಸಹ ಇಲ್ಲಿ ಕಂಡುಬರುತ್ತದೆ. ಇದು ಸುಮಾರು ೪೫೦ ವರ್ಷಗಳಷ್ಟು ಹಳೆಯದಾಗಿದ್ದು, ನಂಬಲಸಾಧ್ಯವಾಗಿರುವ ೬.೮ ಮೀಟರುಗಳಷ್ಟು ಸುತ್ತಳತೆ ಹಾಗೂ ೪೯.೫ ಮೀಟರುಗಳಷ್ಟು ಎತ್ತರವನ್ನು ಹೊಂದಿದೆ. ಭಾರತದ ಸರ್ಕಾರದ ವತಿಯಿಂದ ನೀಡಲ್ಪಡುವ ಮಹಾವೃಕ್ಷ ಪುರಸ್ಕಾರವನ್ನು ಇದು ಗೆದ್ದುಕೊಂಡಿದೆ.

ಬೆದರಿಕೆಗಳು

[ಬದಲಾಯಿಸಿ]

೨೦೦೭ರ ಏಪ್ರಿಲ್‌ನಲ್ಲಿ, ರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯದ ಭಾಗಗಳಲ್ಲಿ ಹಾಗೂ ಹೊಂದಿಕೊಂಡಿರುವ ನೆಲ್ಲಿಯಂಪತ್ತಿ ಅರಣ್ಯಗಳಲ್ಲಿ ಕಂಡುಬಂದ ಒಂದು ಕಾಳ್ಗಿಚ್ಚು ನೂರಾರು ಎಕರೆಗಳಷ್ಟಿರುವ ವಿಶಾಲ ಅರಣ್ಯ ಪ್ರದೇಶಗಳು ಮತ್ತು ನೆಡುತೋಪುಗಳನ್ನು ನಾಶಪಡಿಸಿತು. ನಿರುದ್ಯೋಗಿ ಬೆಂಕಿ-ಕಾವಲುಗಾರರು ಮತ್ತು ಜೇನುತುಪ್ಪದ ಸಂಗ್ರಾಹಕರಿಂದ ಸದರಿ ಕಾಳ್ಗಿಚ್ಚುಗಳು ಉಂಟಾಗಿದ್ದವು.

ಈ ಪ್ರದೇಶದಲ್ಲಿ ಮಳೆಗಾಲಕ್ಕೆ-ಮುಂಚಿನ ಮಳೆಯ ಒಂದು ಕೊರತೆ ಕಂಡುಬಂದಿದ್ದುದು ಸದರಿ ಕಾಳ್ಗಿಚ್ಚುಗಳಿಗೆ ಸಂಬಂಧಿಸಿದ ಕಾರಣಗಳ ಪೈಕಿ ಒಂದಾಗಿತ್ತು. ಈ ಪ್ರದೇಶದಲ್ಲಿ ಜನವರಿ, ಫೆಬ್ರುವರಿ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳುಗಳ ಅವಧಿಯಲ್ಲಿ ಮಳೆಬರುವುದು ವಾಡಿಕೆ. ಈ ವರ್ಷ, ಜನವರಿ ತಿಂಗಳಲ್ಲಿ ಅಲ್ಲಿ ಕೇವಲ ೪ ಮಿ.ಮೀ.ನಷ್ಟು ಮಳೆಯಾಗಿತ್ತು ಮತ್ತು ಅದಾದ ನಂತರ ಮಳೆಯೇ ಇರಲಿಲ್ಲ. ಈ ಬೇಸಿಗೆಯಲ್ಲಿ ನೆಲ್ಲಿಯಂಪತ್ತಿಯು ಒಂದು ಅಭೂತಪೂರ್ವವಾದ ಬರಗಾಲವನ್ನು ಎದುರಿಸುತ್ತಿತ್ತು. ತಾಪಮಾನದ ಸರಾಸರಿ ಉನ್ನತ ಮಟ್ಟವು ಸಾಮಾನ್ಯವಾಗಿ ೨೬oCನಷ್ಟು ಇರಬೇಕಿದ್ದ ಸಂದರ್ಭದಲ್ಲಿ, ಇಲ್ಲಿನ ತಾಪಮಾನವು ಏಪ್ರಿಲ್‌ನಲ್ಲಿ ೩೪oCನಷ್ಟು ಮಟ್ಟವನ್ನು ತಲುಪಿತ್ತು.[೧೩]

ಪ್ರಶಸ್ತಿ/ಗೌರವಗಳು

[ಬದಲಾಯಿಸಿ]
  1. ಅರ್ಥ್ ಗಾರ್ಡಿಯನ್ ಅವಾರ್ಡ್[೧೪]
  2. ಕನ್ಸರ್ವೇಷನ್ ಅಸ್ಸ್ಯುರಡ್ ಟೈಗರ್ ಸ್ಟ್ಯಾಂಡರ್ಡ್ಸ್[೧೫]
  3. ಪರಿಸರ ಪ್ರವಾಸೋದ್ಯಮದಲ್ಲಿ ಸಮುದಾಯದ ಭಾಗವಹಿಸುವಿಕೆ[೧೬]

ಟಿಪ್ಪಣಿಗಳು

[ಬದಲಾಯಿಸಿ]
  1. "Map", GMap
  2. ಪರಾಂಬಿಕುಲಂ ಅರಣ್ಯ ಅಭಿವೃದ್ಧಿ ಸಂಸ್ಥೆ.ಅಧಿಕೃತ ವೆಬ್‌ಸೈಟ್
  3. ವೈಲ್ಡ್‌ಲೈಫ್‌ ಇನ್‌‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, "ಸ್ಟೇಟ್‌/UT ವೈಸ್‌ ಟೀಟೇಲ್ಸ್‌ ಆಫ್‌ ಪ್ರೊಟೆಕ್ಟೆಡ್‌ ಏರಿಯಾಸ್‌ " ENVIS Archived 2007-08-13 at Archive.is
  4. T.R. ಶಂಕರ್‌ ರಾಮನ್‌, ಸೆಂಟರ್‌ ಫಾರ್‌ ಇಕಲಾಜಿಕಲ್‌ ಸೈನ್ಸಸ್‌, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರುರೀಡಿಸ್ಕವರಿ ಆಫ್‌ ದಿ ಓರಿಯೆಂಟಲ್‌ ಬೇ-ಔಲ್‌
  5. UNESCO, ವರ್ಲ್ಡ್‌ ಹೆರಿಟೇಜ್‌ ಸೈಟ್ಸ್‌, ಟೆಂಟಟಿವ್‌ ಲಿಸ್ಟ್ಸ್‌, ವೆಸ್ಟರ್ನ್‌ ಘಾಟ್ಸ್‌ ಸಬ್‌‌ ಕ್ಲಸ್ಟರ್‌, ನೀಲಗಿರೀಸ್‌. ೪/೨೦/೨೦೦೭ರಂದು ಮರುಸಂಪಾದಿಸಲಾಯಿತು ವರ್ಲ್ಡ್‌ ಹೆರಿಟೇಜ್‌ ಸೈಟ್ಸ್‌, ಟೆಂಟಟಿವ್‌ ಲಿಸ್ಟ್ಸ್
  6. "Parambikulam-Wildlife-sanctuary-to-be-made-Tiger-Reserve", environment/flora-fauna, Time of India, archived from the original on 2019-05-14, retrieved 2011-02-07 {{citation}}: Cite has empty unknown parameter: |5= (help)
  7. staff (2010-2-20), "Parambikulam Tiger Reserve opened", The Hindu, retrieved 2011-1-19 {{citation}}: Check date values in: |accessdate= and |date= (help)CS1 maint: deprecated archival service (link)
  8. "Parambikulam Tiger Reserve to be inaugurated on Feb. 17". Palakkad: The Hindu. 11-24-2009. Archived from the original on 1 ಜುಲೈ 2010. Retrieved 24 November 2009. {{cite news}}: Check date values in: |date= (help)
  9. "Parambikkulam likely to become a tiger reserve soon". The Hindu. 9/3/2008. Retrieved 2008-09-02. {{cite web}}: Check date values in: |date= (help)CS1 maint: deprecated archival service (link)
  10. ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ "ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ ", ೨೦೦೭ರ ಮಾರ್ಚ್‌ ೨೪ರಂದು ಮರುಸಂಪಾದಿಸಲಾಯಿತುಪ್ರವಾಸೋದ್ಯಮ ಇಲಾಖೆ Archived 2015-01-11 ವೇಬ್ಯಾಕ್ ಮೆಷಿನ್ ನಲ್ಲಿ.
  11. ಕೇರಳ ಮಾಹಿತಿ & ಸಾರ್ವಜನಿಕ ಸಂಪರ್ಕಗಳ ಇಲಾಖೆ, PARAMBIKULAM WILDLIFE SANCTUARY, ೫/೧೧/೨೦೦೭ರಂದು ಮರುಸಂಪಾದಿಸಲಾಯಿತುPARAMBIKULAM WILDLIFE SANCTUARY Archived 2011-06-10 ವೇಬ್ಯಾಕ್ ಮೆಷಿನ್ ನಲ್ಲಿ.
  12. ಉಭಯವಾಸಿಗಳು
  13. ಪ್ರಭಾಕರನ್‌ G. (೪/೯/೨೦೦೭) ಫೈರ್‌ ಎಂಗಲ್ಫ್ಸ್‌ ಪರಾಂಬಿಕುಲಂ, ನೆಲ್ಲಿಯಂಪತ್ತಿ ಫಾರೆಸ್ಟ್ಸ್‌, ದಿ ಹಿಂದೂ, ೬/೧೨/೨೦೦೭ರಂದು ಮರುಸಂಪಾದಿಸಲಾಯಿತುಬೆಂಕಿ Archived 2012-10-24 ವೇಬ್ಯಾಕ್ ಮೆಷಿನ್ ನಲ್ಲಿ.
  14. "Parambikulam Tiger Conservation Foundation wins Earth Guardian Award". ಬಿಸಿನೆಸ್ ಲೈನ್. ಅಕ್ಟೋಬರ್ ೨೧, ೨೦೨೧. Retrieved ೧೭/೦೬/೨೦೨೫. {{cite news}}: Check date values in: |access-date= and |date= (help)CS1 maint: url-status (link)
  15. Gangopadhyay, Uttara (೦೭ ಅಕ್ಟೋಬರ್ ೨೦೨೧). "Global Recognition for 14 Indian Tiger Reserves". ಔಟ್ ಲುಕ್ ಟ್ತಾವಲರ್. Retrieved ೧೭/೦೬/೨೦೨೫. {{cite news}}: Check date values in: |access-date= and |date= (help)CS1 maint: url-status (link)
  16. "Need to consider Tigers as natural capital, define conservation as a means to achieve development: Prime Minister". ಪಿ.ಐ.ಬಿ. ೧೨/೦೪/೨೦೧೬. Retrieved ೧೭/೦೬/೨೦೨೫. {{cite news}}: Check date values in: |access-date= and |date= (help)CS1 maint: url-status (link)

ಟೆಂಪ್ಲೇಟು:Tiger Reserves Of India