ಬೀಟೆ
ಬೀಟೆ | |
---|---|
![]() | |
Dalbergia latifolia growing as a street tree in Bogor, Java. | |
Conservation status | |
Egg fossil classification | |
Kingdom: | Plantae
|
(unranked): | |
(unranked): | Eudicots
|
(unranked): | |
Order: | |
Family: | |
Subfamily: | |
Genus: | |
Species: | D. latifolia
|
Binomial nomenclature | |
Dalbergia latifolia |
ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.ಶ್ರೀಗಂಧವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.
ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]
ಇದು ಫಾಬಸಿಯೆ(Fabaceae)ಕುಟುಂಬದಲ್ಲಿದೆ.ಡಲ್ಬೇರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು, ಡಲ್ಬೇರ್ಜಿಯ ನಿಯಗ್ರ ಮತ್ತು ಡಲ್ಬೇರ್ಜಿಯ ಲಾಟಿಫೊಲಿಯ ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.ಭಾರತದಲ್ಲಿ ಡಲ್ಬೇರ್ಜಿಯ ಲಾಟಿಫೊಲಿಯ ಪ್ರಭೇದ ಕಂಡುಬರುತ್ತದೆ.
ವೈಶಿಷ್ಟ್ಯಗಳು[ಬದಲಾಯಿಸಿ]
ಬೀಟೆ ಒಂದು ಪರ್ಣಪಾತಿ ಮರ.ಕರ್ನಾಟಕದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ವೃಕ್ಷವಾಗಿರುತ್ತದೆ.ಬಿಳಿಯ ಬಣ್ಣದ ಹೂ ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ಚೇಗುವು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.
ಉಪಯೋಗಗಳು[ಬದಲಾಯಿಸಿ]
ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು,ಅಲಮಾರುಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
ಆಧಾರ[ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ