ಪತಂಜಲಿ ಆಯುರ್ವೇದ

ವಿಕಿಪೀಡಿಯ ಇಂದ
Jump to navigation Jump to search

ಪತಂಜಲಿ ಆಯುರ್ವೇದ ನಿಯಮಿತ ಒಂದು ಭಾರತೀಯ ಎಫ್ಎಮ್‍ಸಿಜಿ ಕಂಪನಿ. ತಯಾರಿಕಾ ಘಟಕಗಳು ಮತ್ತು ಪ್ರಧಾನ ಕಛೇರಿ ಹರಿದ್ವಾರದ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿವೆ ಮತ್ತು ನೋಂದಾಯಿತ ಕಛೇರಿ ದೆಹಲಿಯಲ್ಲಿದೆ. ಈ ಕಂಪನಿ ಖನಿಜ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸುತ್ತದೆ. ಅದು ನೇಪಾಳದಲ್ಲೂ ತಯಾರಿಕಾ ಘಟಕಗಳನ್ನು ಹೊಂದಿದೆ. ಸಿಎಲ್ಎಸ್ಎ ಮತ್ತು ಎಚ್ಎಸ್‍ಬಿಸಿ ಪ್ರಕಾರ, ಪತಂಜಲಿ ಭಾರತದಲ್ಲಿನ ಅತ್ಯಂತ ತ್ವರಿತ ಬೆಳವಣಿಗೆಯ ಎಫ್ಎಮ್‍ಸಿಜಿ ಕಂಪನಿ. ಇದರ ಮಾರುಕಟ್ಟೆ ಮೌಲ್ಯ ರೂ ೩೦೦೦ ಕೋಟಿ ಮತ್ತು ಕೆಲವರು ೨೦೧೫-೧೬ರ ಆರ್ಥಿಕ ವರ್ಷಕ್ಕೆ ೫೦೦೦ ಕೋಟಿ ರೂ. ಆದಾಯ ಎಂದು ಅಂದಾಜಿಸುತ್ತಾರೆ. ಪತಂಜಲಿ ಉತ್ಪನ್ನಗಳಿಂದ ಬರುವ ಲಾಭ ಧರ್ಮಾರ್ಥ ಸಂಸ್ಥೆಗೆ ಹೋಗುತ್ತದೆ ಎಂದು ತಮ್ಮ ಸಂದರ್ಶನದಲ್ಲಿ ಬಾಬಾ ರಾಮ್‍ದೇವ್ ಹೇಳಿದ್ದಾರೆ. ಬಾಬಾ ರಾಮ್‍ದೇವ್ ಆಚಾರ್ಯ ಬಾಲಕೃಷ್ಣರ ಜೊತೆಗೆ ಪತಂಜಲಿ ಆಯುರ್ವೇದ ನಿಯಮಿತವನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಜ್ಞಾನಕ್ಕೆ ಅನುಗುಣವಾಗಿ ಮತ್ತು ಅದರ ಸಹಕಾರದಲ್ಲಿ ಆಯುರ್ವೇದದ ವಿಜ್ಞಾನವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ೨೦೦೬ರಲ್ಲಿ ಸ್ಥಾಪಿಸಿದರು.

ಪತಂಜಲಿ ಆಯುರ್ವೇದ ಪರ್ಸನಲ್ ಕೇರ್ ಮತ್ತು ಆಹಾರ ವರ್ಗಗಳಲ್ಲಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಕಂಪನಿ ಪ್ರಸಾದನಗಳ ೪೫ ಪ್ರಕಾರಗಳು ಮತ್ತು ಆಹಾರ ಉತ್ಪನ್ನಗಳ ೩೦ ಪ್ರಕಾರಗಳನ್ನು ಒಳಗೊಂಡಂತೆ ೪೪೪ ಉತ್ಪನ್ನಗಳನ್ನು ತಯಾರಿಸುತ್ತದೆ. ಪತಂಜಲಿ ಸೌಂದರ್ಯ ಮತ್ತು ಶಿಶು ಉತ್ಪನ್ನಗಳನ್ನು ಸಹ ಪ್ರಾರಂಭಿಸಿದೆ. ನೆಗಡಿ ಮತ್ತು ದೀರ್ಘಕಾಲದ ಪಾರ್ಶ್ವವಾಯುವರೆಗೆ ಅನೇಕ ಕಾಯಿಲೆಗಳು ಮತ್ತು ಶಾರೀರಿಕ ಪರಿಸ್ಥಿತಿಗಳನ್ನು ಗುಣಪಡಿಸಲು ಪತಂಜಲಿ ಆಯುರ್ವೇದಿಕ ತಯಾರಿಕಾ ವಿಭಾಗವು ೩೦೦ಕ್ಕಿಂತ ಹೆಚ್ಚು ಔಷಧಿಗಳನ್ನು ಹೊಂದಿದೆ.

ಪತಂಜಲಿ ನವೆಂಬರ್ ೨೦೧೫ರಲ್ಲಿ ಧಿಡೀರ್ ನೂಡಲ್ಸ್ಅನ್ನು ಪ್ರಾರಂಭಿಸಿತು.