ವಿಷಯಕ್ಕೆ ಹೋಗು

ಕುರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುರ್ತಿ ಎನ್ನುವುದು ಭಾರತೀಯ ಮಹಿಳೆಯರು ಧರಿಸುವ ಮೇಲಿನ ಉಡುಪಾಗಿದ್ದು, ಸೊಂಟದ ಕೋಟುಗಳು,[]ಜಾಕೇಟ್‍ಗಳು ಮತ್ತು ಬ್ಲೌಸ್‍ಗಳನ್ನು ಇದು ಒಳಗೊಂಡಿದೆ. ಆಧುನಿಕ ಬಳಕೆಯಲ್ಲಿ, ಕುರ್ತಾವನ್ನು ಕುರ್ತಿ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ, ಕುರ್ತಿ ಎಂಬ ಪದವು ಸೊಂಟದ ಮೇಲೆ ಕುಳಿತುಕೊಳ್ಳುವ ಸೊಂಟದ ಕೋಟುಗಳು ಜಾಕೆಟ್‍ಗಳು ಮತ್ತು ಬ್ಲೌಸ್‍ನ್ನು ಸೂಚಿಸುತ್ತದೆ, ಇದು ಕುರ್ತಿಯ ಪಾರ್ಶ ಸೀಳುಗಳು ಇಲ್ಲದೆ ಸೊಂಟದ ಮೇಲೆ ಕೂರುತ್ತದೆ ಮತ್ತು ಷುಂಗಾ ಅವಧಿಯ ಟ್ಯೂನಿಕ್ನಿಂದ (ಕ್ರಿ. ಶ. 2ನೇ ಶತಮಾನದ)[]ವಂಶಸ್ಥರೆಂದು ನಂಬಲಾಗಿದೆ. ಕುರ್ತಿಸ್‍ಗಳು ಸಾಮಾನ್ಯವಾಗಿ ಬಹಳಕಡಿಮೆ ಉದ್ದ ಮತ್ತು ಬಿಗಿಯಾಗಿರುತ್ತದೆ. ಆದರೆ ಕುರ್ತಾಗಳು ಉದ್ದ ಮತ್ತು ಸಡಿಲವಾಗಿರುತ್ತದೆ. ಈ ಮಹಿಳೆಯರ ಕುರ್ತಿಗಳನ್ನು ಆನ್ ಲೈನ್‍ಗಳಲ್ಲಿ ಮತ್ತು ವೆಬ್ ಸೈಟ್‍ಗಳಲ್ಲಿ ನೋಡಬಹುದಾಗಿದೆ. ಸಾಮಾನ್ಯವಾಗಿ ಕುರ್ತಿಸ್‍ಗಳು ಪಂಜಾಬಿ ಶೈಲಿಯಲ್ಲಿದ್ದು ಮತ್ತು ಹೆಚ್ಚಾಗಿ ಮಹಿಳೆಯರು ಮಾತ್ರ ಧರಿಸುತ್ತಾರೆ.[] ಆದರೆ ಕುರ್ತಾಗಳನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಧರಿಸುತ್ತಾರೆ. ಈ ಕುರ್ತಾಗಳು ಹಿಂದಿನ ಕಾಲದಲ್ಲಿ ಕೇವಲ ಪುರುಷರಿಗೆ ಅಷ್ಟೇ ಸೀಮಿತವಾಗಿದ್ದ ಈ ಕುರ್ತಾಗಳು ಆಧುನಿಕ ಬಳಕೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಜನಪ್ರೀಯ ಆಗುತ್ತಿದೆ. ಫ್ಯಾಷನ್ ಮುಂಚೂಣಿಯಲ್ಲಿರುವ ವಿಶ್ವದಾದ್ಯಂತ ಬದಲಾಗುತ್ತಿರುವ ಈ ಕುರ್ತಿಗಳು ಬೇಡಿಕೆಗಳಿಗೆ ಸರಿ ಹೊಂದುವಂತೆ ಮಡುತ್ತಿದೆ.

ಕುರ್ತಿಯನ್ನು ಚೋಲಿಯಿಂದ ಪ್ರತ್ಯೇಕಿಸಲಾಗಿದೆ, ನಂತರದಲ್ಲಿ ಮಿಡ್ರಿಫ್‍ನ್ನು ತೆರೆದು ಬಿಡಲಾಗುತ್ತದೆ. ಕುರ್ತಿಸ್‍ಗಳು ಸಾಮಾನ್ಯವಾಗಿ ಉಡುಪುಗಳಿಗಿಂತ ಕಡಿಮೆ ಮತ್ತು ಹಗುರವಾದ ವಸ್ತುಗಳೊಂದಿಗೆ ತಯಾರಿಸಲಾಗುತ್ತದೆ, ಕಮೀಜ್‍ನ್ನು ಹೊಲಿಯುವಲ್ಲಿ ಬಳಸಲಾಗುತ್ತದೆ. ವಿವಿಧ ಗಾತ್ರಗಳು ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಕುರ್ತಿಯು ಇರುತ್ತದೆ.  ಇದು ಸಂಕೀರ್ಣ ವಿನ್ಯಾಸ ಮತ್ತು ಆಕರ್ಷಣೆಯ ಮಾದರಿಗಳನ್ನು ಹೊಂದಿರುತ್ತದೆ. ಇದರಲ್ಲಿ ಕುತ್ತುಗೆಯ ಮಾದರಿಯು ಹೆಚ್ಚಾಗಿ ಇರುತ್ತದೆ. ಕುರ್ತಿಯನ್ನು ಹತ್ತಿ ಮತ್ತು ಇತರೆ ಬಟ್ಟೆಗಳನ್ನು ಬಳಸಿ ತಯಾರಿಸಿರುತ್ತಾರೆ.

ಸ್ಲಿವ್ ಕುರ್ತಿ, ಹಾಫ್ ಸ್ಲಿವ್ ಕುರ್ತಿ, ಫೂಲ್ ಕೈ ಕುರ್ತಿ, ಎಂಬ್ರಾಯಿಡರಿ ಡಿಸೈನ್ ಕುರ್ತಿ, ಸಿಲ್ಕ್ ಕುರ್ತಿ, ಕಾಟನ್ ಕುರ್ತಿ ಹೀಗೆ ವಿವಿಧ ರೀತಿಯ ಕುರ್ತಿಗಳಿವೆ. ಈ ರೆಡಿಮೆಡ್ ಕುರ್ತಿಗಳು ಹೆಚ್ಚಾಗಿ ಕಡಿಮೆ ದರದಲ್ಲಿಯು ದೊರೆಯುತ್ತವೆ. ಇದರಿಂದಾಗಿ ಇವು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಾಮಾನ್ಯ ಉಡುಗೆಗಳಾಗಿದೆ. ಕೇವಲ ಇವುಗಳಷ್ಟೇ ಅಲ್ಲದೇ ಇನ್ನೂ ಅನೇಕ ರೀತಿಯ ಕುರ್ತಿಗಳಿವೆ. ಕುರ್ತಿಗಳನ್ನು ವಿಭಿನ್ನ ರೀತಿಯ ಜಿನ್ಸ್, ಚುಡಿದಾರ್ ಪೈಜಾಮ್‍ಗಳು, ಸಲ್ವಾರ್‍ಗಳು ಮತ್ತು ಕಾಟ್ರಾಸ್ಟ ಬಣ್ಣದ ಲೆಗಿಂಗ್ಸಗಳ ಜೊತೆ ಧರಿಸಬಹುದಾಗಿದೆ.

ಪಂಜಾಬಿ ಕುರ್ತಿ

[ಬದಲಾಯಿಸಿ]

ಪಂಜಾಬ್ ಪ್ರಾಂತ್ಯದಲ್ಲಿ, ಕುರ್ತಿ ಒಂದು ಸಣ್ಣ ಹತ್ತಿ ಸೊಂಟದ ಕೋಟ್‍ನಿಂದ ಆಗಿದೆ, ಈ ಕೋಟು ಚಿಕ್ಕದಿದ್ದು ಕುರ್ತಿ ಉದ್ದನೆಯದಾಗಿರುತ್ತದೆ. ಮತ್ತು ಆ ಕೋಟಿನ ಮುಂಭಾಗವು ತೆರೆದುಕೊಂಡಿರುತ್ತದೆ. ಹಿಂದೆ, ಪಂಜಾಬಿ ಮಹಿಳೆಯರು ಬಟನ್‍ಗಳ ಸುತ್ತಲೂ ಜಂಜಿರಿ ಎಂಬ ಚಿನ್ನ ಅಥವಾ ಬೆಳ್ಳಿ ಸರಪಳಿನ್ನು ಧರಿಸಿದ್ದರು. ಪುರುಷರು ಪಂಜಾಬ್ ಪ್ರದೇಶದ ಕುರ್ತಾದಲ್ಲಿ ಜಂಜಿರ ಧರಿಸಿದ್ದರು. ಪಂಜಾಬಿ ಕುರ್ತಿಯ ಇನ್ನೊಂದು ಶೈಲಿ ಎಂದರೆ ಚಿಕ್ಕದಾದ ಆಂಗ (ರೂಬ್) ಆವೃತ್ತಿಯಾಗಿದೆ.[] ಮುಂಭಾಗ ಅಥವಾ ಹಿಂಭಾಗದ ತೆರೆಯುವಿಕೆಯಿಲ್ಲದೆ ಕುರ್ತಿ ಅರ್ಧ ಅಥವಾ ಪೂರ್ಣ ತೋಳಿನ ಮತ್ತು ಹಿಪ್ ಉದ್ದವಾಗಿರುತ್ತದೆ. ಪುರುಷರ ಕುರ್ತಿಯನ್ನು ಪಂಜಾಬಿ ಭಾಷೆಯಲ್ಲಿ ಫತುಯಿ ಅಥವಾ ವೇಸ್ಟ್ಕೋಟ್ ಎಂದು ಕರೆಯಲಾಗುತ್ತದೆ. ದಕ್ಷಿಣ ಪಂಜಾಬಿನ ಕುರ್ತಿ ಪಾಕಿಸ್ತಾನವನ್ನು ಸಾರಾಕಿ ಕುರ್ತಿ ಎಂದು ಕರೆಯಲಾಗುತ್ತದೆ.

ಕುರ್ತಿಯು 11 ನೇ ಶತಮಾನದ ಮಹಿಳಾ ಕುರ್ತಕಾದ ಅವಶೇಷ ಆಗಿದೆ. ಇದು ಉತ್ತರ ಭಾರತದ ಭಾಗಗಳಲ್ಲಿ ಧರಿಸಿರುವ ಪಾಶ್ರ್ವ ಸೀಳುಗಳನ್ನು ಹೊಂದಿರುವ ಶರ್ಟ್ ದೇಹವನ್ನು ವಿಸ್ತರಿಸುತ್ತದೆ. ಇದು ಪಂಜಾಬಿನ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆಗಳಾಗಿದೆ. ಇದು ಉಳಿದ ಉಡುಗೆಗಳಿಗಿಂತ ಉದ್ದವಾಗಿರುತ್ತದೆ. ಕುರ್ತಾವನ್ನು ಸಾಂಪ್ರದಾಯಿಕವಾಗಿ ಸುಥಾನೊಂದಿಗೆ ಧರಿಸಲಾಗುತ್ತಿತ್ತು. ಆದರೆ ಇದನ್ನು ಸಣ್ಣ ಕುರ್ತಿಯೊಂದಿಗೆ ಧರಿಸಬಹುದಾಗಿದೆ. ಕುರ್ತಿಯ ಆಧುನಿಕ ಆವೃತ್ತಿಗಳು ಮೊಣಕಾಲಿಗಿಂತಲೂ ಉದ್ದವಾಗಿರಬೇಕು.

ಬಿಹಾರಿ ಕುರ್ತಿ

[ಬದಲಾಯಿಸಿ]

ಬಿಹಾರದಲ್ಲಿ ಕುರ್ತಿ ಎಂಬ ಶಬ್ದವನ್ನು ಬೊಲಿಸ್ ಎಂದು ಉಲ್ಲೇಖಿಸಲು ಬಳಸಲಾಗುತ್ತದೆ. ಇದು ಚೋಲಿ ಮತ್ತು ಜಾಕೇಟ್ಗಳ ಸಂಯೋಜನೆಯಾಗಿದೆ.[]

ಉತ್ತರ ಪ್ರದೇಶ ಕುರ್ತಿ

[ಬದಲಾಯಿಸಿ]

ಉತ್ತರ ಪ್ರದೇಶ ಕುರ್ತಿ ಮತ್ತು ಪಕ್ಕದ ಹಿಮಾಲಯ ಪ್ರದೇಶವು ಸಣ್ಣ ಕುಪ್ಪಸವಾಗಿದೆ.

ಗುಜರಾತಿ ಕುರ್ತಿ

[ಬದಲಾಯಿಸಿ]

ಗುಜರಾತ್ ಮತ್ತು ಕತಿಯಾವಾರ್ನಲ್ಲಿ, ಕುರ್ತಿ (ಕೋಟ್) ವಿಧವು ಸೊಂಟದ ಕೆಳಗಿರುತ್ತದೆ.

ಕಚ್ ಕುಪ್ಪಸ ರಾಜಸ್ಥಾನ

[ಬದಲಾಯಿಸಿ]

ರಾಜಸ್ಥಾನದ ಪುರುಷರ ಕರ್ಟ್ ಒಂದು ಪೂರ್ಣ ತೋಳು, ಬಿಗಿಯಾದ ಹೊಂದಿಕೊಳ್ಳುವ, ಗುಂಡುಗಳಿಲ್ಲದ ವೆಸ್ಟ್.

ಏಷ್ಯಾದ ಟ್ಯೂನಿಕ್

[ಬದಲಾಯಿಸಿ]

ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ ಸೇರಿದಂತೆ ಭಾರತೀಯ ಉಪಖಂಡಗಳಲ್ಲಿ ಧರಿಸುತ್ತಾರೆ. ಟ್ಯೂನಿಕ್ ಅನ್ನು ಸಾಮಾನ್ಯವಾಗಿ ಕುರ್ತಾ ಎಂದು ಕರೆಯಲಾಗುತ್ತದೆ ಮತ್ತು ಈಗ ಪಶ್ಚಿಮದಲ್ಲಿ ಅನೇಕರು ಇಷ್ಟಪಡುವ ಉದಯೋನ್ಮಖ ಮಹಿಳಾ ಶೈಲಿಯನ್ನು ಇಷ್ಟ ಪಡುತ್ತಾರೆ . ಏಷ್ಯಾದ ಟ್ಯೂನಿಕ್ ವಿಶಿಷ್ಟವಾಗಿ ಸೂಕ್ಷ್ಮವಾ ಕಸೂತಿ, ಮಣಿ - ಕೆಲಸ ಅಥವಾ ಸಂಕೀರ್ಣವಾದ ಥ್ರೆಡ್ ವರ್ಕ್‍ನಿಂದ ಕೂಡ ಅಲಂಕರಿಸಲ್ಪಟ್ಟಿದೆ. ಇಂತಹ ಕಲಾಕೃತಿಗಳ ಮೇಲೆ ಕಸೂತಿ ಅಥವಾ ಎಳೆ ಕೆಲಸ ಸಾಮಾನ್ಯವಾಗಿ ವಿವಿಧ ಬಣ್ಣಗಳ ಎಳೆಗಳನ್ನು ಸಂಯೋಜಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. https://books.google.co.uk/books?id=WfYCAAAAQAAJ&pg=PA260&dq=kurti+waistcoat&hl=en&sa=X&ved=0CEAQ6AEwAmoVChMI9N_qvdbuxgIVRLwUCh1megCb#v=onepage&q=kurti%20waistcoat&f=false
  2. //books.google.co.uk/books?ei=PgKHVa7dK8arUazcgLgD&id=nvE7AQAAIAAJ&dq=kurtaka+punjabi+kurti&focus=searchwithinvolume&q=Shunga
  3. https://en.wikipedia.org/wiki/Kurti_top#cite_note-3
  4. https://books.google.co.uk/books?id=6eY2AQAAMAAJ&q=punjab++kurti&dq=punjab++kurti&hl=en&sa=X&ei=6BWHVZL0Dou9UeetgOgP&ved=0CGEQ6AEwCQ
  5. https://books.google.co.uk/books?ei=QMKHVZ7-OsTD7gav66PgDA&id=G0JXAAAAMAAJ&dq=kurti+bodice+bihar&focus=searchwithinvolume&q=kurti+
"https://kn.wikipedia.org/w/index.php?title=ಕುರ್ತಿ&oldid=841429" ಇಂದ ಪಡೆಯಲ್ಪಟ್ಟಿದೆ