ಆನ್ಲೈನ್ ವ್ಯಾಪಾರ
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
೧೯೯೮ ರಲ್ಲಿ ಐಬಿಯಂ ತನ್ನ ಸಂಸ್ಥೆ ಆಗಿಲ್ವಿ ಮತ್ತು ಮ್ಯಾಧರ್ ಜೊತೆ ಅಂತರಜಾಲ ವ್ಯವಹಾರ ನಡೆಸಲು ಪ್ರಾರಂಭಿಸಿದರು ಉನ್ನತ ಮಟ್ಟದಲ್ಲಿ ವ್ಯಾಪಾರವನ್ನು ಆರಂಭಿಸಿ ಅದ್ದನ್ನು "ಇ-ವ್ಯಾಪಾರ" ವೆಂದು ಸ್ಥಾಪಿಸಿದರು .ಈ ಸಂಸ್ಥೆಯ ಸಿ.ಇ.ಒ ಆಗಿ ಹುದ್ದೆಯಲ್ಲಿದ್ದ ವಿ.ಲೂಯಿಸ್.ಗರ್ಸ್ಟ್ನರ್ ಜೂನಿಯರ್ ಈ ಹೊಸ ಮಾರುಕಟ್ಟೆಗೆ/ಶತಕೋಟಿ ಹಣವನ್ನು ಹೂದಿಕೆ ಮಾಡಿದರು .ಅಕ್ಟೋಬರ್ ೧೯೯೭ ರಲ್ಲಿ ವಿಶ್ವಾದಾದ್ಯಂತ ಮಾರುಕಟ್ಟೆಯ ಬಗೆ ಸಂಶೋಧನೆ ನಡೆಸಿತು. ತದನಂತರ ಐಬಿಯಂ ಸಂಸ್ಥೆ "ಇ-ವ್ಯಾಪಾರ" ವನ್ನು ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಎಂಟು ಪುಟಗಳಿಂದ ಕೂಡಿದ ಜಾಹೀರಾತುವಿನ ಮೂಲಕ ಈ ಹೊಸ ಪರಿಣತಿಯನ್ನು ಪರಿಚಯಿಸಿದರು .ಐಬಿಯಂ ಸಂಸ್ಥೆ ತನ್ನ ವ್ಯಾಪಾರದಲ್ಲಿ "ಇ-ವ್ಯಾಪಾರ" ವೆಂಬ ಮುದ್ರೆಯನ್ನು ಉಪಯೋಗಿಸಲಿಲಲ್ಲ.ಕಾರಣವೆನೆಂದರೆ ಈ ಹೆಸರಿನಲ್ಲಿಯೇ ಬೇರೆ ಸಂಸ್ಥೆಗಳು ತಮ್ಮದೆಯಾದಂತಹ ಹೊಸ ಕೈಗಾರಿಕಾ ವ್ಯಾಪರವನ್ನು ಆರಂಭಿಸ ಬಹುದೆಂದೂ ಇ-ವ್ಯಾಪಾರ" ವೆಂಬ ಮುದ್ರೆಯನ್ನು ಉಪಯೋಗಿಸಲಿಲಲ್ಲ.ಆದಾಗ್ಯೂ ಈ ವ್ಯಾವಾರವು ವಿಪರೀತ ಯಶಸ್ಸು ಮಡುವುದರೊಂದಿಗೆ ೨೦೦೦ ಇಸವಿಯಲ್ಲಿ ಐಬಿಯಂ ಕಂಪನಿ ತನ್ನ "ಇ-ವ್ಯಾಪಾರ" ಮೂಲ ಸಾಮಥ್ಯಗಳಿಗೆ ೩೦೦ ಮಿಲಿಯನ್ ಹಣ ಊಡಿಕೆಯನ್ನು ಆರಂಭಿಸಿತು. ಅಂದಿನಿಂದ "ಇ-ವ್ಯಾಪಾರ" ಮತ್ತು "ಇ-ವಾಣಿಜ್ಯ" ಸಡಿಲವಾಗಿ ಪರಸ್ಪರ ಉಪಯೊಗಿಸಲಾಗಿದೆ ಮತ್ತು ಈ ಎರಡು ಹೆಸರುಗಳು ಸಾಮಾನ್ಯವಾಗಿ ದೇಶಿಯ ಒಂದು ಭಾಗವಾಗಿದೆ. ಆನ್ಲೈನ್ ವ್ಯಾಪಾರವನ್ನು ಇವ್ಯಾಪಾರ ಎಂದು ಕೂಡ ಕರೆಯಲೂಗುತ್ತದೆ. ಈ ವ್ಯಾಪರವನ್ನು ನಾವು ಆನ್ಲೈನ್ ಮುಕಾಂತರ ಮಾಡುತ್ತೇವೆ ( ಇಂಟರ್ನೆಟ್ ಬಳಸಿ ನಾವು ಈ ವ್ಯಾಪರವನ್ನು ಮಾಡು ತ್ತೇವೆ). ಯಾವುದೇ ವ್ಯಾಪಾರಿ ತನ್ನ ಯಾವುದಾದರೂ ಕೆಲಸ ಅತವ ತನ್ನ ಎಲ್ಲಾ ಕೆಲಸವನ್ನು ಇಂಟರ್ನೆಟ್ ಬಳಸಿ ಮಾಡಿದರೆ ಅವರನ್ನು ಆನ್ಲೈನ್ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಏಳಬಹುದು.ಆನ್ಲೈನ್ ವ್ಯಾಪಾರದಲ್ಲಿ ನಾವು ಆನ್ಲೈನ್ ಮುಕಾಂತರ ಖರೀದಿ ಮತ್ತು ಮಾರಟವನ್ನು ಮಾಡಬಹುದು ಮತ್ತು ಆನ್ಲೈನ್ ಸೇವೆಯಲ್ಲಿ ಕೂಡ ಒಳಗೊಳಬಹುದು. ಈ ಬ್ರಹತ ವೈವಿಧ್ಯಮಯ ವ್ಯಾವಹರವನ್ನು ನಾವು ವಿವಿದ ಕೈಗಾರಿಕಾ ಕೆಲಸದಲ್ಲಿ ಕಾಣಬಹುದು.ಯರೂಬೇಕಾದರೂ ಆನ್ಲೈನ್ ವ್ಯಾಪಾರವನ್ನು ಆರಂಭಿಸಬಹುದು.ನೀವು ಒಂದು ಉತ್ತಮ ,ಉತ್ಪನ್ನ ಅಥವಾ ಯೋಚನೆಯನ್ನು ಹೊಂದಿದರೆ , ನೀವು ಆನ್ಲೈನ್ನನಲ್ಲಿ ವ್ಯಾವಾಹಾರವನ್ನು ಮಡಲು ಒಂದು ದಾರಿಯನ್ನು ಕಾಣಬಹುದು.ಇದು ಸಾಂಪ್ರಾದಾಯಕ ವ್ಯಾವಾರದಂತೆ ಕಾಣುತ್ತದೆ .ಆದ್ದರೆ ಇದರಲ್ಲಿರುವ ಒಂದು ವ್ಯತ್ಯಾಸವೆನೆಂದರೆ ಇದರ ಅಂಗಡಿ ಅಥವಾ ಕಚೇರಿಯನ್ನು ನಾವು ಆನ್ಲೈನ್ ಮುಕಾಂತರ ಮಾತ್ರ ಕಾಣಬಹುದು.ಅದರಿಂದ ಈ ವ್ಯವಸ್ಥೆ ಗ್ರಾಹಕರ ಗಮನವನ್ನು ತಮ್ಮ ಕಡೆ ಸೆಳೆಯುವಂತಿರಬೇಕು. ಆನ್ಲೈನ್ ವ್ಯಾಪಾರ ವಿಧಗಳು (ಅಂತರಜಾಲ ಹೇಗೆ ಕಾಣಿಸುತ್ತದೆ) ವಿವಿದ ರೂಪದಲಿ ಕಾಣಬಹುದು ಇವುಗಳು ಯಾವುದ್ಯಾವುದೆಂದರೆ: ೧. ವೆಬ್ಸೈಟ್ಗಳು ೨. ಆನ್ಲೈನ್ ಅಂಗಡಿಗಳು ಅಥವಾ ವ್ಯಾಪಾರ ೩. ಬ್ಲಾಗ್ ೪. ಸಾಮಾಜಿಕ ಮಾಧ್ಯಮ . ಭದ್ರತಾ: ಇ ಉದ್ಯಮ ವ್ಯವಸ್ಥೆಗಳು ಸ್ವಾಭಾವಿಕವಾಗಿ ಇ- ವ್ಯಾಪಾರ ವ್ಯವಸ್ಥೆಗಳು ಸಂಪೂರ್ಣವಾಗಿ ಈ ಅಪಾಯಗಳ ವಿರುದ್ಧ ರಕ್ಷಣೆ ಆದ್ದರಿಂದ ಇದು ಮುಖ್ಯ, ಸಾಂಪ್ರದಾಯಿಕ ವ್ಯಾಪಾರ ವ್ಯವಸ್ಥೆಗಳು ಹೆಚ್ಚಿನ ಭದ್ರತಾ ಅಪಾಯಗಳನ್ನು ಹೊಂದಿವೆ. ಸಾಂಪ್ರದಾಯಿಕ ವ್ಯಾಪಾರ ಪ್ರವೇಶವನ್ನು ಹೊಂದಿರುತ್ತದೆ ಹೆಚ್ಚು ಜನರು ಅತೀವ ಸಂಖ್ಯೆ ಇಂಟರ್ನೆಟ್ ಮೂಲಕ ಇ- ವ್ಯವಹಾರಗಳು ಪ್ರವೇಶವನ್ನು ಹೊಂದಿರುತ್ತದೆ. ಗ್ರಾಹಕರು , ಸರಬರಾಜುದಾರರು, ನೌಕರರು , ಮತ್ತು ಇತರ ಹಲವಾರು ಜನರು ದೈನಂದಿನ ಯಾವುದೇ ನಿರ್ದಿಷ್ಟ ಇ- ವ್ಯಾಪಾರ ವ್ಯವಸ್ಥೆಯನ್ನು ಬಳಸಲು ಮತ್ತು ತಮ್ಮ ಗೌಪ್ಯ ಮಾಹಿತಿಯನ್ನು ಸುರಕ್ಷಿತ ಉಳಿಯಲು ನಿರೀಕ್ಷಿಸಬಹುದು . ಹ್ಯಾಕರ್ಸ್ ಇ- ವ್ಯವಹಾರಗಳು ಭದ್ರತೆಗೆ ದೊಡ್ಡ ಬೆದರಿಕೆ ಒಂದು. ಇ- ವ್ಯಾಪಾರಗಳು ಕೆಲವು ಸಾಮಾನ್ಯ ಸುರಕ್ಷೆಯ ವ್ಯಾಪಾರ ಮತ್ತು ಗ್ರಾಹಕ ಮಾಹಿತಿ ಖಾಸಗಿ ಮತ್ತು ಗೌಪ್ಯತೆ ಮತ್ತು ಮಾಹಿತಿಯ ಪ್ರಾಮಾಣಿಕತೆ ಮತ್ತು ಡೇಟಾ ಸಮಗ್ರತೆಯನ್ನು ಕೀಪಿಂಗ್ ಸೇರಿವೆ . ಇ- ವ್ಯಾಪಾರ ಭದ್ರತೆಯನ್ನು ರಕ್ಷಿಸಲು ಮತ್ತು ಸುರಕ್ಷಿತ ಮಾಹಿತಿಯನ್ನು ಕೀಪಿಂಗ್ ವಿಧಾನಗಳನ್ನು ಕೆಲವು ಕೆಲವು ಪಟ್ಟಿ ಭೌತಿಕ ಭದ್ರತೆ ಕ್ರಮಗಳು ಹಾಗೂ ಮಾಹಿತಿ ಸಂಗ್ರಹ, ಮಾಹಿತಿ ಪ್ರಸರಣ , ವಿರೋಧಿ ವೈರಸ್ ತಂತ್ರಾಂಶ , ಫೈರ್ವಾಲ್ಗಳು ಮತ್ತು ಗೂಢಲಿಪೀಕರಣ ಸೇರಿವೆ . ಆನ್ಲೈನ್ ವ್ಯಾಪಾರದ ಪ್ರಯೋಜನಗಳು ಮತ್ತು ಅನಾನುಕೂಲಗಳು: ನಾವು ಆನ್ಲೈನ್ ವ್ಯಾಪಾರವನ್ನು ಆರಂಭಿಸಸಲು ಅಥವಾ ಅದರಲ್ಲಿ ಒಂದು ಉನ್ನತ ಮಟ್ಟವನ್ನು ಪಡೆಯಬೇಕಾದರೆ ,ನಾವು ಅನೇಕ ವಿಷೆಯಗಳ ಬಗೆ ಪರಿಶೋಧನೆಯನ್ನು ಮಾಡಬೇಕು. ನಿಮ್ಮಗೆ ಗಣಕಯಂತ್ರ ಹಾಗೂ ನೇಯಿಗೆಯ ಬಗೆ ತಿಳಿಯದ್ದಿದ್ದರೆ ಅಥವ ಮೊದಲು ಯಾವುದೇ ರೀತಿಯ ವ್ಯಾಪಾರವನ್ನು ಮಡಲ್ಲಿಲದ್ದಿದ್ದರೆ ಈ ಆನ್ಲೈನ್ ವ್ಯಾಪಾರದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಆನ್ಲೈನ್ ವ್ಯಾಪಾರ ಮಾಡುವ ಪ್ರಯೋಜನಗಳು: ೧. ಬಾಡಿಗೆ ಮತ್ತು ಸಿಬ್ಬಂದಿ ವೆಚ್ಚ ಉಳಿತಾಯ. ೨. ಉತ್ಪನ್ನ ಮತ್ತು ವಿತರಣಾ ಸೇವೆಯಲ್ಲಿ ಹೆಚ್ಚಿನ ದಕ್ಷತೆ. ೩. ಗ್ರಾಹಕರಿಗೆ ವಾರದಾದ್ಯಂತ (೨೪*೭) ವಿಶ್ವಾದ್ಯದಂತ ಲಭ್ಯ ವಾಗಿರುತದೆ. ಆನ್ಲೈನ್ ವ್ಯಾಪಾರದಲ್ಲಿ ಅನೇಕ ಕುಂದುಕೊರತೆಗಳು ಕಂಡು ಬರುತ್ತದೆ ಅವುಗಳು ಯಾವುದೆಂದರೆ: ೧. ಕೆಲವು ತಾಂತ್ರಿಕ ಅಥವಾ ವೆಬ್ ಜಾನದ ಬಗೆ ತಿಳುವಳಿಕೆಯಿರಬೇಕು. ೨. ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ವೆಚ್ಚಗಳು. ೩. ಆನ್ಲೈನ್ ವಂಚನೆಗಳ ಮತ್ತು ವಂಚನೆ ಅಪಾಯ . ಆನ್ಲೈನ್ ವ್ಯಾಪಾರ ಪ್ರಾರಂಭಿಸುವ ಮೊದಲು ನಾವು ತಿಳಿದುಕೊಳ್ಳಬೇಕಾಂದತಹ ವಿಷೆಯಗಳು: ಮೊದಲು ನಾವು ಕಂಪ್ಯೂಟರ್ ಮತ್ತು ಸಾಫ್ಟ್ವೇರ್ ಏಗೆ ಉಪಯೋಗಿಸಬೇಕೆಂದು ತಿಳಿದುಕೊಳ್ಳಬೇಕು.ಇದು ತಿಳಿದು ಬರುವುದರಿಂದಹೆಚ್ಚು ಸರಾಗವಾಗಿ ವ್ಯಾವಾರವನ್ನು ಮಾಡಬಹುದು.ನಿಮ್ಮಗೆ ಕಂಪ್ಯೂಟರ್ ತಿಳುವಳಿಕೆ ಇಲ್ಲದಿದ್ದ ಪಕ್ಷದಲ್ಲಿ ನೀವು ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆ ಇಲ್ಲ ,ಏಕೆಂದರೆ ಕಂಪ್ಯೂಟರ್ ನ ವಿಚಾರವನ್ನು ತಿಳಿದುಕೊಳ್ಳಲು ಅನೇಕ ಶಿಕ್ಷಣ ತರಬೇತಿ ಸಂಸ್ಥೆಗಳು ಲಭ್ಯದಲ್ಲಿದೆ. ಮುಕ್ತಾಯ: ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಬೇಕಾದಂತಹ ಉತ್ತಮವಾದ ವಸ್ತುಗಳನ್ನು ನೀಡಬೇಕು . ಅವು ಗ್ರಾಹಕರಿಗೆ ಆತಿ ಬೇಗ,ಹಾಗು ಕಡಿಮೆ ವೆಚ್ಚಕ್ಕೆ ದೊರೆಯುವಂತೆ ಮಾಡಬೇಕು.ಈ ರೀತಿಯಲ್ಲಿ ತಮ್ಮ ವ್ಯಾವಾರವನ್ನು ಮುಂದುವರಿಸಿದರೆ ಗ್ರಾಹಕರು ಆ ಸಂಸ್ಥೆಯನ್ನು ಅಥವ "ಇ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿ ಅಧಿಕಾವಾಗಿ ವಸ್ತುಗಳನ್ನು ಖರೀದಿ ಮಾಡುತ್ತಾರೆ .ಈ ನವೀನ ದಿನಗಳಲ್ಲಿ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ವಸ್ತುಗಳನ್ನು ಹಾಗೂ ವ್ಯಾವರದ ಮಾದರಿಯಲ್ಲಿ ಉನ್ನತಗೊಳಿಸಬೇಕು ಈಗೆ ಮಾಡಿದರೆ ಮಾತ್ರ ತಮ್ಮ ವ್ಯಾಪಾರದಲ್ಲಿ ಉತ್ತಮ ಸ್ಥಾನದೊಂದಿಗೆ ಮುಂದುವರೆಯಬಹುದು .ಇ ವ್ಯಾಪಾರ ದಿನದಿಂದದಿನಕ್ಕೆ ಉತ್ತಮ ರೀತಿಯಲ್ಲಿ ಮುಂದುವರೆದು ಅಧಿಕವಾಗಿ ಜನಪ್ರೀಯವಾಗಿ ತನ್ನ ವ್ಯಾವಾರವನ್ನು ಮುಂದುವರಿಸುತ್ತಿದ್ದೆ.ಈ ರೀತಿಯ ವ್ಯಾವಾರದಿಂದ ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯುತ್ತವೆ .ಈ ವ್ಯಾವಾರದಲ್ಲಿ ಖರೀದಿಸುವವರಿಗೆ ಅಧಿಕ ಸಂಖೆಯಲ್ಲಿ ಅಯ್ಕೆಗಳಿವೆ .ಇದರಿಂದ ಗ್ರಾಹಕರು ತಮ್ಮಗೆ ಬೇಕಾದ ಮತ್ತು ಇಷ್ಟವಾದಂತಹ ವಸ್ತುಗಳನ್ನು ಖರೀದಿಸಬಹುದು. "ಇ ವ್ಯಾಪಾರವು " ಒಂದು ನಾಣ್ಯದ ಎರಡು ಮುಖದಂತೆ .ಇದರಲ್ಲಿ ಉಪಯೋಗಗಳು ಹಾಗೂ ದುರುಪಯೋಗಗಳು ಎರಡು ಇವೆ.ಆದರೆ ಒಳ್ಳೆಯ ರೀತಿಯಲ್ಲಿ ಜ್ಜಾನದಿಂದ ಉಪಯೋಗಿಸಿದರೆ ಯಾವ ರೀತೆಯಲು ತೊದರೆ ಹಗುವುದಿಲ ,ಉಪಯೋಗಗಳೆ ಹೆಚ್ಚು.
ಉಲ್ಲೇಖ
[ಬದಲಾಯಿಸಿ]http://searchcio.techtarget.com/definition/e-business http://zeendo.com/info/advantages-and-disadvantages-of-online-marketing/ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. http://www.business.gov.au/business-topics/business-structures-and-types/online-business/Pages/default.aspx Archived 2016-01-01 ವೇಬ್ಯಾಕ್ ಮೆಷಿನ್ ನಲ್ಲಿ. suggesstive reading : http://www.investopedia.com/terms/e/ecommerce.asp?layout=orig http://www.businessnewsdaily.com/4872-what-is-e-commerce.html