ಪಂಜ (ಅಂಗ)
ಗೋಚರ
ಪಂಜವು ಸಸ್ತನಿಯ, ಸಾಮಾನ್ಯವಾಗಿ ಉಗುರುಗಳನ್ನು ಹೊಂದಿರುವ ಚತುಷ್ಪಾದಿ ಪ್ರಾಣಿಯ ಮೃದು ಪಾದದಂತಹ ಭಾಗ.
ಸಾಮಾನ್ಯ ಲಕ್ಷಣಗಳು
[ಬದಲಾಯಿಸಿ]ಪಂಜವು ಚರ್ಮದ ಕೆಳಗಿನ ಕಾಲಜನ್ ಹಾಗೂ ಕೊಬ್ಬುಳ್ಳ ಊತಕಗಳನ್ನು ಮುಚ್ಚುವ ತೆಳು, ವರ್ಣದ್ರವ್ಯಗಳಿಂದ ಕೂಡಿದ, ರೋಮರಹಿತ ಹೊರಚರ್ಮವನ್ನು ವಿಶೇಷ ಲಕ್ಷಣವಾಗಿ ಹೊಂದಿರುತ್ತದೆ. ಇದು ಒತ್ತಿಗೆಗಳನ್ನು ರಚಿಸುತ್ತದೆ. ಈ ಒತ್ತಿಗೆಗಳು ಪ್ರಾಣಿಯ ಭಾರ ಹೊರುವ ಅವಯವಗಳಿಗೆ ಮೆತ್ತೆಯ ಕಾರ್ಯನಿರ್ವಹಿಸುತ್ತವೆ.
ಪಂಜಗಳಿರುವ ಪ್ರಾಣಿಗಳು
[ಬದಲಾಯಿಸಿ]- ಬೆಕ್ಕಿನ ಕುಟುಂಬದ ಸದಸ್ಯರು, ಉದಾ. ಬೆಕ್ಕುಗಳು ಹಾಗೂ ಹುಲಿಗಳು; ಇವುಗಳಲ್ಲಿ ಕೆಲವು ಬೆರಳು ರೋಮಗಳನ್ನು ಹೊಂದಿರಬಹುದು
- ನಾಯಿ ಕುಟುಂಬದ ಸದಸ್ಯರು, ಉದಾ. ನಾಯಿಗಳು ಹಾಗೂ ನರಿಗಳು
- ಮೊಲಗಳು ಬಹಳ ಚೂಪಾದ ಉಗುರುಗಳಿರುವ ಪಂಜಗಳನ್ನು ಹೊಂದಿರುತ್ತವೆ ಮತ್ತು ಅವುಗಳ ಕೆಳಗೆ ಒತ್ತಿಗೆಗಳನ್ನು ಹೊಂದಿರುವುದಿಲ್ಲ.
- ಕರಡಿಗಳು ಹಾಗೂ ರಕೂನ್‍ಗಳು
- ವೀಜ಼ಲ್‍ಗಳು ಹಾಗೂ ಈ ಕುಟುಂಬದ ಇತರ ಸದಸ್ಯರು
- ದಂಶಕಗಳು