ಕಾಲಜನ್
ಕಾಲಜನ್ ನೈಸರ್ಗಿಕವಾಗಿ ಸಿಗುವ ಪ್ರೋಟೀನಿನ ಒಂದು ಗುಂಪು. ಪ್ರಕೃತಿಯಲ್ಲಿ ಇದು ಪ್ರಾಣಿಗಳಲ್ಲಿ ವಿಶೇಷವಾಗಿ ಕಾಣಿಸುತ್ತದೆ.[೧] ಇದು ನವಿರಾದ ನಾರುಳ್ಳ (ಕನೆಕ್ಟಿವ್ ಟಿಸ್ಯು, ಟಿಸ್ಯು- ಅಂಗಾಂಶ) ಮುಖ್ಯವಾದ ಪ್ರೋಟೀನು. ಇದು ಸಸ್ತನಿಗಳಲ್ಲಿ ಹೇರಳವಾಗಿ ಸಿಗುವ ಪ್ರೋಟೀನ್.[೨] ಸಸ್ತನಿಗಳ ಇಡೀ-ದೇಹದ ಪ್ರೋಟೀನ್ ಅಂಶದಲ್ಲಿ ಇದು ಶೇಕಡಾ 25ರಿಂದ 30ರಷ್ಟಿರುತ್ತದೆ. ಇದು ಸ್ನಾಯು ಅಂಗಾಂಶದ (ಮಸಲ್ ಟಿಸ್ಯು) ಎಂಡೋಮೈಸಿಯಮ್ ನ ಮುಖ್ಯವಾದ ಅಂಶ. ಸ್ನಾಯು ಸಂಬಂಧಿತ ಅಂಗಾಂಶದಲ್ಲಿ 1% ರಿಂದ 2% ಭಾಗ ಕಾಲಜನ್ ಇರುತ್ತದೆ; ಇದಲ್ಲದೆ,ಗಟ್ಟಿಮುಟ್ಟಾದ ಸ್ನಾಯು ತಂತುಗಳಿಂದ ಕೂಡಿದ ಸ್ನಾಯುಗಳ ತೂಕದ 6% ತೂಕಕ್ಕೆ ಕಾಲಜನ್ ಕಾರಣ.[೩] ಆಹಾರ ಮತ್ತು ಉದ್ಯಮಗಳಲ್ಲಿ ಬಳಸುವ ಜೆಲಟಿನ್ ಯನ್ನು ಕಾಲಜಿನ್ ನಿಂದ ಉತ್ಪತ್ತಿ ಮಾಡಲಾಗುತ್ತದೆ.
ಇತಿಹಾಸ ಮತ್ತು ಹಿನ್ನೆಲೆ
[ಬದಲಾಯಿಸಿ]ಕಾಲಜಿನಿನ ಅಣ್ವಿಕ ಮತ್ತು ಪ್ಯಾಕಿಂಗ್ (ಒಂದಕ್ಕೊಂದು ಕೂಡಿಕೊಂಡಿರುವ)ರಚನೆ, ವಿಜ್ಞಾನಿಗಳಿಗೆ ಹಲವಾರು ದಶಕಗಳಿಂದ ಮರೀಚಿಕೆಯಾಗಿತ್ತು; ಇದು ಅಣ್ವಿಕ ಹಂತದ ಕ್ರಮಬದ್ಧ ರಚನೆಯನ್ನು ಹೊಂದಿದೆಯೆಂದು 1930ನೆ ದಶಕದ ಮಧ್ಯಭಾಗದಲ್ಲಿ ನಿರೂಪಿಸಲಾಯಿತು.[೪][೫] ಅಲ್ಲಿಂದಾಚೆಗೆ, ಕ್ರಿಕ್, ಪಾಲಿಂಗ್, ರಿಚ್, ಯೊನಾತ್, ಬ್ರಾಡಸ್ಕಿ, ಬರ್ಮನ್ ಮತ್ತು ರಾಮಚಂದ್ರನ್ ರಂಥಹ ನೋಬಲ್ ಪುರಸ್ಕೃತರನ್ನೊಳಗೊಂಡ (ಅದರೆ ಅವರಿಗೆ ಮಾತ್ರ ಸೀಮಿತವಾಗಿರದ) ಪ್ರಖ್ಯಾತರಾದ ಬಹಳ ಜನ ವಿದ್ವಾಂಸರು ಕಾಲಜನಿನ(ಅಣುವಿನಲ್ಲಿನ ಪಾಲಿಮರ್ ಕರಣದ ಘಟಕ) ಮಾನೋಮರ್ ರಚನೆಯ ಬಗ್ಗೆ ಗಮನಹರಿಸಿದ್ದಾರೆ. ಪ್ರತಿ ಪೆಪಟೈಡ್ ಸರಣಿಯ ರಚನೆಯನ್ನು ಸರಿಯಾಗಿ ತೋರಿಸುವ ಒಂದಕ್ಕಿಂತ ಒಂದನ್ನು ಮೀರಿಸುವ ಅನೇಕ ಮಾದರಿಗಳಿದ್ದವು, ಇವುಗಳಲ್ಲಿ ಒಂದು, ಅಣುವಿನ (ಮಾಲಿಕ್ಯೂಲಿನ) ಚತುರ್ಥಕ ರಚನೆಯನ್ನು [೬][೭][೮] ಹೆಚ್ಚು ನಿಖರವಾಗಿ ತೋರಿಸುವ ಟ್ರಿಪಲ್-ಹೆಲಿಕಲ್ "ಮದರಾಸ್" ಮಾಡಲ್ ಎಂಬ ಮಾದರಿಯ ಅಭಿವೃದ್ಧಿಗೆ ಕಾರಣವಾದವು.[೯][೧೦][೧೧][೧೨] ಕಾಲಜನಿನ ಪ್ಯಾಕಿಂಗ್ ರಚನೆಯ ಅನೇಕ ವಿಧಗಳಲ್ಲಿ ಫೈಬ್ರಿಲ್ಲಾರ್ ಕಾಲಜನ್ ವಿಧದ ವಿಶ್ಲೇಷಣೆಯಾಗಿರುವ ರೀತಿಯಲ್ಲಿ, ಬಹಳ ಹಿಂದೆಯೆ ಗುರುತಿಸಲ್ಪಟ್ಟರೂ ಕೂಡ, ಅದರ ಷಟ್ಕೋನಿಯ (ಹೆಕ್ಸಾಗೊನಲ್) ಅಥವಾ ಸರಿಸುಮಾರು ಷಟ್ಕೋನಿಯ (ಕ್ವಾಸಿ-ಹೆಕ್ಸಾಗೊನಲ್)ವಿಧಗಳು ವಾಖ್ಯಾನವಾಗಿಲ್ಲ.[೧೩][೧೪][೧೫] ಮಾನೊಮೆರಿಕ್ ರಚನೆಯ ರೀತಿಯಲ್ಲಿ, ಹಲವು ವೈರುಧ್ಯದ ಮಾದರಿಗಳು ಕಾಲಜನ್ ಕಣಗಳ ಪ್ಯಾಪಿಂಗ್ ವ್ಯವಸ್ಥೆಯು "ಶೀಟ್-ಲೈಕ್" (ಹಾಳೆಯ ಹಾಗೆ) ಅಥವಾ ಮೈಕ್ರೊಫೈಬ್ರಿಲಾರ್ ಮಾದರಿಯಲ್ಲಿ ಇದೆ ಎಂದು ವಾದಿಸುತ್ತದೆ.[೧೬][೧೭] ಫ್ರೇಸರ್, ಮಿಲ್ಲರ್, ವೆಸ್ಸ್ (ಹಾಗು ಇತರರು) ಪ್ರತಿಪಾದಿಸಿದ ಮೈಕ್ರೊಫಿಬ್ರಿಲಾರ್ ರಚನೆಯು-ಕಾಲಜನಿನ ಗಮನಿಸಿದ ರಚನೆಗೆ ಬಹಳ ಹತ್ತಿರವಾಗಿದೆ, ಎಂದು ಇತ್ತೀಚೆಗೆ ನಿರ್ಣಯಿಸಲಾಯಿತು. ಹೀಗಿದ್ದರೂ, ಅದು ಹತ್ತಿರವಿರುವ ಕಾಲಜನಿನ ಕಣಗಳ ಮೇಲ್ಮೈ ಶ್ರೇಣಿಯನ್ನು ತೀರಾ ಸರಳ ಮಾಡಿದ ಕಾರಣ, ಅದು ವಿಚ್ಛಿನ್ನವಾಗಿರುವ (ಬಿಟ್ಟು-ಬಿಟ್ಟು) D-ಪಿರಿಯಾಡಿಕ್ ಪೆಂಟಾಮೆರಿಕ್ ವ್ಯವಸ್ಥೆ ಅಥವಾ ಸರಳವಾಗಿ ಮೈಕ್ರೊಫೈಬ್ರಿಲ್ ಎಂದು ಕರೆಯಲ್ಪಡುವುದರ ರಚನೆಯನ್ನು ಸರಿಯಾಗಿ ಬಿಂಬಿಸಲಿಲ್ಲ.[೧೮]
ಆಣ್ವಿಕ ವಿನ್ಯಾಸ/ರಚನೆ
[ಬದಲಾಯಿಸಿ]ಟ್ರೊಪೊಕಾಲಜನ್ ಅಥವಾ ಕಾಲಜನ್ ಮಾಲಿಕ್ಯುಲ್ - ಫೈಬ್ರಿಲ್ಗಳಂತಹ(ಸಣ್ಣ ಎಳೆ) ನಂತಹ ದೊಡ್ಡದಾದ ಕಾಲಜಿನಿನ ಸಂಯುಕ್ತದ ಉಪಘಟಕ. ಅದು ಸುಮಾರು 300 nm ಉದ್ದ ಹಾಗು 1.5 nm ಯಷ್ಟು ಸುತ್ತಳತೆ ಹೊಂದಿದ್ದು, ಮೂರು ಪಾಲಿಪೆಪ್ಟೈಡ್ ಎಳೆಗಳಿಂದ (ಅಲ್ಫಾ ಚೈನ್ ಎಂದು ಕರೆಯಲ್ಪಡುವ) ಮಾಡಲ್ಪಟ್ಟಿದೆ. ಇವುಗಳಲ್ಲಿ ಪ್ರತಿಯೊಂದು ಎಡಗಡೆಗೆ ತಿರುಗಿದ ಸುರಳಿಯ (ಲೆಫ್ಟ್-ಹಾಂಡೆಡ್ ಹೆಲಿಕ್ಸ್) ರಚನೆ ಪಡೆದಿವೆ. {ಇದು ಸಾಮಾನ್ಯವಾಗಿ ದೊರಕುವ ಬಲಗಡೆಗೆ ತಿರುಗಿದ ರಚನೆಯುಳ್ಳ ಅಲ್ಪಾ ಸುರಳಿಗಿಂತ ಭಿನ್ನ.(ರೈಟ್-ಹಾಂಡೆಡ್ ಅಲ್ಪಾ ಹೆಲಿಕ್ಸ್)}. ಎಡಗಡೆಗೆ ತಿರುಗಿದ ಈ ಮೂರು ಸುರಳಿಗಳು ಪರಸ್ಪರ ಸುತ್ತಿಕೊಂಡು ಬಲಗಡೆಗೆ ತಿರುಗಿದ ಸುರಳಿಯೊಳಗಿನ ಸುರಳಿ(ಕಾಯಿಲ್ಡ್ ಕಾಯಿಲ್),ತ್ರಿ ಸುರಳಿ ಅಥವಾ ಸೂಪರ್ ಸುರಳಿ ಎಂಬ ಹಲವಾರು ಹೈಡ್ರೋಜನ್ ಬಂಧ ಗಳಿಂದ ಗಟ್ಟಿಗೊಂಡ ಚತುರ್ಥಕ ರಚನೆ ಆಗುತ್ತದೆ. ಎಲ್ಲಾ ಕಾಲಜನ್ ಅಲ್ಲದಿದ್ದರೂ ಕಾಲಜನ್ I ಹಾಗು ಸುಮಾರು ಎಲ್ಲಾ ಫೈಬ್ರಿಲಾರ್ ಕಾಲಜನ್ ಗಳಲ್ಲಿ, ಪ್ರತಿ ತ್ರಿ-ಸುರಳಿಯು (ಟ್ರಿಪಲ್ ಹೆಲಿಕ್ಸ್), ಕಾಲಜನ್ ಮೈಕ್ರೊ ಫೈಬ್ರಿಲ್ ಎಂದು ಕರೆಯಲ್ಪಡುವ ಬಲಗಡೆಗೆ ತಿರುಗಿದ ಸೂಪರ್-ಸೂಪರ್-ಸುರಳಿ (ಸೂಪರ್-ಸೂಪರ್-ಕಾಯಿಲ್)ಗಳೊಂದಿಗೆ ಸಂಯೋಜನೆಗೊಳುತ್ತದೆ. ಪ್ರತಿಯೊಂದು ಮೈಕ್ರೊಫೈಬ್ರಿಲ್ ತನ್ನ ನಿಕಟದ ಮೈಕ್ರೊಫೈಬ್ರಿಲ್ ನೊಂದಿಗೆ ಎಷ್ಟರ ಮಟ್ಟಿಗೆ ಬೆಸೆದುಕೊಂಡಿರುತ್ತದೆಯೆಂದರೆ, ಅದು ಬೇರೆಬೇರೆಯಾದರೆ ಅತ್ಯಂತ ಅಸ್ಥಿರವಾದದ್ದು ಎಂಬ ಭಾವನೆ ಬರುತ್ತದೆ, ಆದರೆ ಕಾಲಜನಿನ ಫೈಬ್ರಿಲ್ ನಲ್ಲಿ ಇದು ಚೆನ್ನಾಗಿ ಒಪ್ಪವಾಗಿ ಸ್ಫಟಿಕದಂತಹ ರಚನೆ (ಕ್ರಿಸ್ಟಲೈನ್)ಅಗಿರುತ್ತದೆ. ಕಾಲಜನ್ ಉಪಘಟಕಗಳಲ್ಲಿ ಪ್ರತಿ ಮೂರು ಚೈನುಗಳಲ್ಲಿ ಅಮೀನೊ ಅಮ್ಲಗಳ ಕ್ರಮಬದ್ಧ ಜೋಡಣೆ ಕಾಲಜನ್ ನ ವಿಶಿಷ್ಟವಾದ ಅಂಶ. ಈ ಸರಣಿ ಸಾಮಾನ್ಯವಾಗಿ Gly-Pro-Y ಅಥವಾ Gly-X-Hyp ಅನುಕ್ರಮವನ್ನು ಅನುಸರಿಸುತ್ತದೆ, ಇಲ್ಲಿ 'X' ಮತ್ರು 'Y' ಗಳು ಯಾವುದೆ ಇತರೆ ಅಮೀನೊ ಅಮ್ಲದ ಶೇಷವಿರಬಹುದು. ಈ ಒಟ್ಟು ಸರಣಿಯ ಸುಮಾರು 1/6 ಭಾಗ ಪ್ರೊಲೀನ್ ಅಥವಾ ಹೈಡ್ರಾಕ್ಸಿಪ್ರೊಲೀನ್ ಗಳಿಂದ ಮಾಡಲ್ಪಟ್ಟಿದೆ. ಈ ಸರಣಿಯಲ್ಲಿ ಸುಮಾರು 1/3 ರಷ್ಟು ಭಾಗಕ್ಕೆ ಗ್ಲೈಸಿನ್ ಕಾರಣ. ಇದರ ಆರ್ಥ ಕಾಲಜನ್ ಸರಣಿಯ ಸರಿಸುಮಾರು ಅರ್ಧದಷ್ಟು ಭಾಗ ಗ್ಲೈಸೀನ್, ಪ್ರೋಲಿನ್ ಅಥವಾ ಹೈಡ್ರಾಕ್ಸಿಪ್ರೋಲಿನ್ ಗಳಲ್ಲ; ಆದರೆ ಈ ಅಂಶವನ್ನು ಕಾಲಜಿನಿನ ಅಲ್ಫಾ-ಪೆಪ್ಟೈಡ್ ಗಳ ಅಸಾಮಾನ್ಯವಾದ GXY ಲಕ್ಷಣ ತೋರುವುದರಿಂದಾಗಿ ಗೊಂದಲ ಗಮನಿಸುವುದಿಲ್ಲ. ಈ ರೀತಿ ಸತತವಾಗಿ ಪುನರಾವರ್ತನೆಯಾಗುವ ರಚನೆ ಹಾಗು ಹೆಚ್ಚಾದ ಗ್ಲೈಸೀನಿನ ಪ್ರಮಾಣ ಕೆಲವು ಇತರೆ ಫೈಬ್ರಸ್ ಪ್ರೋಟೀನುಗಳಾದ ರೇಷ್ಮೆ(ಸಿಲ್ಕ್), ಫೈಬ್ರಾಯಿನ್ ಗಳಲ್ಲಿ ಮಾತ್ರ ಕಾಣಸಿಗುತ್ತದೆ. ರೇಷ್ಮೆ ಯ 75-80% ಭಾಗ(ಹೆಚ್ಚುಕಡಿಮೆ)-Gly-Ala-Gly-Ala-, 10% ಸೇರಿನ್ ನಿಂದ— ಹಾಗು ಎಲಾಸ್ಟಿನ್- ಅಪಟುವಾದ {(ಇರ್ನಟ್)ರಾಸಾಯಿನಕ ಕ್ರಿಯೆಗಳಿಗೆ ಅತ್ಯಂತ ನಿಧಾನವಾಗಿ ಸ್ಪಂದಿಸುವ}, ಚಿಕ್ಕ ಮಿತೈಲ್ ಗುಂಪಿನ ಸೈಡ್ ಗ್ರೂಪ್ ಹೊಂದಿರುವ - ಗ್ಲೈಸೀನ್, ಪ್ರೋಲಿನ್ ಗಳಿಂದ ಸಮೃದ್ಧವಾಗಿದೆ. ಗ್ಲೈಸೀನಿನ ಇಷ್ಟು ಹೆಚ್ಚಿನ ಪ್ರಮಾಣವು ಹಾಗು ಸತತ ಪುನರಾವರ್ತನೆಗಳು ಗ್ಲಾಬುಲಾರ್ ಪ್ರೋಟೀನುಗಳಲ್ಲಿ ಕಂಡುಬರುವುದಿಲ್ಲ. (ಅದರ ಸರಣಿಯ ತುಂಬ ಸಣ್ಣ ಭಾಗಗಳಲ್ಲಿ ಹೊರತುಪಡಿಸಿ). ಎನಜೈಮು ಮತ್ತು ಟ್ರಾನ್ಸಪೋರ್ಟ್ ಪ್ರೋಟೀನುಗಳ ಹಾಗೆ ರಸಾಯಿನಕ-ಕ್ರಿಯೆಗೆ ಸ್ಪಂದಿಸುವ ಸೈಡ್ ಗ್ರೂಪ್ಸ್ ಗಳು, ಈ ರಚನೆಗೆ ಸಂಬಂಧಪಟ್ಟ ಪ್ರೋಟೀನುಗಳಲ್ಲಿ ಅವಶ್ಯಕತೆಯಿಲ್ಲ. ಆದರೆ, ಕಾಲಜನ್ ಕೇವಲ ರಚನೆಗೆ ಸಂಬಂಧಪಟ್ಟ ಪ್ರೋಟೀನ್ ಅಲ್ಲ. ಸೆಲ್ ಫಿನೊಟೈಪ್, ಸೆಲ್ ಅಡಹೆಸನ್, ಟಿಸ್ಯು ರೆಗುಲೇಷನ್ ಮತ್ತು ಇನ್ಫ್ರಾಸ್ಟರ್ಕಚರ್ ಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದರ ಪ್ರೋಲಿನೀನಂದ ಸಮೃದ್ಧವಾಗಿಲ್ಲದ ಭಾಗಗಳು ಸೆಲ್ ಅಥವಾ ಮಾಟ್ರಿಕ್ಸ್ ಅಸೋಸಿಯೇಷನ್/ರೇಗುಲೇಷನ್ ಕಾರ್ಯ ಮಾಡುತ್ತದೆ.ಇದರೊಳಗೆ ಜ್ಯಾಮಿತೀಯವಾಗಿ ನಿರ್ಬಂಧಕ್ಕೊಳಗಾಗಿರುವ ಕಾರ್ಬಿಕ್ಸಿಲ್ ಮತ್ತು (ಸೆಕೆಂಡರಿ) ಅಮೀನೊ ಗ್ರೂಪ್ ಗಳಿರುತ್ತವೆ. ಹೀಗೆ ರಚಿತ ಪ್ರೊಲೀನ್ ಮತ್ತು ಹೈಡ್ರಾಕ್ಸಿಪ್ರೊಲೀನ್ ಉಂಗುರಗಳ ತುಲನಾತ್ಮಕವಾಗಿ ಹೆಚ್ಚಿದೆ. ಇದರ ಜೊತೆಯಲ್ಲಿ ಗ್ಲೈಸೀನಿನ ಹೇರಳವಾದ ಪ್ರಮಾಣ ಪ್ರತಿ ಪಾಲಿಪೆಪ್ಟೈಡ್ ಎಳೆಯು, ಯಾವುದೇ ಅಂತರ್ಬಂಧ ಹೈಡ್ರೊಜನ್ ಬಂಧನವಿಲ್ಲದೆ, ಸ್ವಾಭಾವಿಕವಾಗಿ ಎಡಕ್ಕೆ-ತಿರುಗಿದ ಸುರಳಿಯನ್ನು ರೂಪಿಸುವ ಪ್ರವೃತ್ತಿಗೆ ಕಾರಣ. ಗ್ಲೈಸೀನ್ ಸೈಡ್ ಚೈನ್ ಇಲ್ಲದ ಆತಿ ಚಿಕ್ಕ ಅಮೀನೊ ಅಮ್ಲವಾದ ಕಾರಣ ಇದು ಫೈಬರಸ್ ಸ್ಟ್ರಕ್ಚರಲ್ ಪ್ರೋಟೀನ್ ಗಳಲ್ಲಿ ವೈಶಿಷ್ಠ್ಯಪೂರ್ಣ ಕೆಲಸಮಾಡುತ್ತದೆ. ಕಾಲಜನ್ ರಚನೆಯ ಸರಣಿಯ ತ್ರಿ-ಸರಣಿಯ ಕೂಟದ ಪ್ರತಿ ಮೂರನೆ ಸ್ಥಾನದಲ್ಲಿ Gly ಇರಬೇಕಾದ ಕಾರಣ ಇದರ ಶೇಷ ಸರಣಿಯ ಒಳಭಾಗದಲ್ಲಿ (ಅಕ್ಷ), ಗ್ಲೈಸೀನಿನ ಒಂದು ಜಲಜನಕದ ಅಣು (ಹೈಡ್ರೊಜಿನ್ ಆಟಂ)ದೊಡ್ಡ ಸೈಡ್ ಗ್ರೂಪಿಗೆ ಜಾಗವಿಲ್ಲದ ಭಾಗದಲ್ಲಿ, ಇರುತ್ತದೆ. ಇದೇ ಕಾರಣದಿಂದ, Pro ಮತ್ತು Hyp ಗಳ ಬಳೆಯಾಕಾರವು ಹೊರಗಡೆಗೆ ಚಾಚಿಕೊಂಡಿರಬೇಕು. ಈ ಎರಡು ಅಮೀನೊ ಅಮ್ಲ ತ್ರಿ ಸುರಳಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ (Pro ವಿಗಿಂತ Hyp ಜಾಸ್ತಿಯಾಗಿ). ಇದು ಅಲ್ಪಪ್ರಮಾಣದಲ್ಲಿ- ಮೀನುಗಳ ಹಾಗೆ ಶಾಖಪ್ರಕೃತಿಯುಳ್ಳ ಪ್ರಾಣಿಗಳಿಗಿಂತ ಕಡಿಮೆ ದೇಹದ ತಾಪಮಾನವಿರುವ ಪ್ರಾಣಿಗಳಲ್ಲಿ ಆಗತ್ಯ.
ಫೈಬ್ರಿಲ್ಲಾರ್ ರಚನೆ (ನಾರುಳ್ಳ ವಿನ್ಯಾಸ)
[ಬದಲಾಯಿಸಿ]ಟಿಸ್ಯುಗಳ ಎಕ್ಸಟ್ರಾಸೆಲುಲಾರ್ (ಕೋಶದ ಹೊರಗಡೆ) ಪ್ರದೇಶದಲ್ಲಿ ಟ್ರೊಪೊಕಾಲಜಿನಿನ ಉಪಘಟಕಗಳು ಅಂಕುಡೊಂಕಾದ ತುದಿಗಳಿಂದ ಕೂಡಿದ ಇನ್ನೂ ದೊಡ್ಡ ಸಮೂಹಗಳಾಗಿ ತಮ್ಮಷ್ಟಕ್ಕೆ ತಾವೆ ಸ್ವಯಂ-ಸಂಯೊಜನೆಗೊಳ್ಳುತ್ತವೆ.[೧೯][೨೦] ಫೈಬ್ರಿಲಾರ್ ಕಾಲಜನ್ ಗಳಲ್ಲಿ, ಅಂಕುಡೊಂಕಾಗಿ ರಚನೆಯಾಗಿರುವ ಅಣುಗಳ ಅಂತರ ಸುಮಾರು 67 nm. ( ಇದನ್ನು ‘D’ ಎಂದು ಕರೆಯಲಾಗುತ್ತದೆ ಹಾಗು ಸಮೂಹದ ಜಲಸಂಯೋಜನೆ (ಹೈಡ್ರೇಷನ್)ಸ್ಥಿತಿಗೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ; ಈ ಅಂತರವನ್ನು ಸ್ಟಾಗಾರ್ಡ್ ಡಿಸ್ಟೆನ್ಸ್ ಎಂದುಕರೆಯುತ್ತಾರೆ). ಪ್ರತಿ D-ಪಿರಿಯಡ್ ಕಾಲಜಿನಿನ 4 ಮತ್ತು ಸ್ವಲ್ಪ ಶೇಷ ಅಣುಗಳನ್ನು ಹೊಂದಿರುತ್ತದೆ. ಏಕೆಂದರೆ 300 nm ಅನ್ನು 67 nm ಭಾಗಿಸಿದಾಗ ಶೇಷವು ಉಳಿಯುತ್ತದೆ. (ಕಾಲಜನ್ ಅಣುವಿನ ಉದ್ದ, ಮತ್ತು ಸ್ಟಾಗಾರಡ್ ಡಿಸ್ಟೆನ್ಸ್ D). ಹೀಗಾಗಿ, ಪುನಾರಾವರ್ತನೆಯಾಗುವ ಮೈಕ್ರೊಫೈಬ್ರಿಲ್ ನ ಪ್ರತಿ D-ಪಿರಿಯಡ್ ನಲ್ಲಿ, ಅಡ್ಡಛೇದದಲ್ಲಿ (ಕ್ರಾಸ್ ಸೆಕ್ಷನ್)"ಒವರ್ಲ್ಯಾಪ್" ಎಂದು ಕರೆಯಲ್ಪಡುವ ಐದು ಕಣಗಳುಲ್ಲ ಮತ್ತು 'ಗ್ಯಾಪ್' ಎಂದು ಕರೆಯಲ್ಪಡುವ 4 ಕಣಗಳು ಮಾತ್ರ ಇರುವ ಭಾಗವನ್ನು ಹೊಂದಿರುತ್ತದೆ.[೧೮] ಅಡ್ದಛೇದದಲ್ಲಿ ತ್ರಿ ಸುರಳಿಗಳು ಗ್ಯಾಪ್ ಮತ್ತು ಒವರ್ ಲ್ಯಾಪ್ ಭಾಗ ಎರಡರಲ್ಲೂ ಷಟ್ಕೋನೀಯವಾಗಿ ಅಥವಾ ಸರಿಸುಮಾರು ಷಟ್ಕೋನೀಯವಾಗಿ (ಕ್ವಾಸಿ ಹೆಕ್ಸಾಗೊನಲ್) ಸಮೂಹವಾಗಿ ಕೂಡ ಜೋಡಿಸಲ್ಪಟ್ಟಿರುತ್ತದೆ.[೧೮][೨೧].ತ್ರಿ ಸುರಳಿಗಳಲ್ಲಿ ಒಂದು ರೀತಿಯ ಸಹವೇಲೆನ್ಸೀಯ ಅಡ್ಡಬಂಧವಿರುತ್ತದೆ, ಹಾಗು ಟ್ರೊಪೊಕಾಲಜನ್ ಸುರಳಿಗಳ ಬೇರೆಬೇರೆ ಪ್ರಮಾಣದ ಸಹವೇಲೆನ್ಸೀಯ ಅಡಬಂಧದಿಂದಾಗಿ ಸುಸಂಯೋಜಿತವಾದ ಸಮೂಹವಾಗುತ್ತದೆ. (ಫೈಬ್ರಿಲ್ ನಂತಹ).[೨೨] ದೊಡ್ಡದಾದ ಫೈಬ್ರಿಲ್ಲಾರ್ ಗೊಂಚಲುಗಳನ್ನು ಬೇರೆಬೇರೆ ಗುಂಪಿನ ಪ್ರೋಟೀನು (ವಿವಿಧ ಕಾಲಜನ್ ಮಾದರಿಯನ್ನೊಳಗೊಂಡು), ಗ್ಲೈಕೋಪ್ರೋಟೀನು ಮತ್ತು ಪ್ರೋಟೀಗ್ಲೈಕಾನ್ಸ್ ಗಳ ಸಹಾಯದಿಂದ ವಿವಿಧ ರೀತಿಯ ಪಕ್ವವಾದ ಟಿಸ್ಯುಗಳನ್ನು ಅದೇ ಆತ್ಯವಶ್ಯಕವಾದ ಅಂಶಗಳನ್ನು ಬಳಸಿ ರೂಪಿಸುತ್ತದೆ.[೨೦] ಟ್ರೊಪೊಕಾಲಜನ್ ,ಎಳೆಯ ಪ್ರಾಣಿಗಳಲ್ಲಿ ಪೂರ್ಣವಾಗಿ ಅಡ್ಡಬಂಧನವಾಗಿಲ್ಲದ ಕಾರಣ ಅದನ್ನು ಸಂಗ್ರಹ ಮಾಡಬಹುದು; ಎಂದು ಗೊತ್ತಾಗುವವರೆಗೂ ಕಾಲಜಿನಿನ ಕರಗದ ಆದ್ರಾವ್ಯ ಗುಣವು (ಇನಸಾಲುಬಿಲಿಟಿ) ಮಾನೊಮೆರಿಕ್ ಕಾಲಜನ್ ಅಧ್ಯಯನಕ್ಕೆ ಅಡಚಣೆಯಾಗಿತ್ತು. ಆದರೆ, ಸೂಕ್ಷ್ಮದರ್ಶಕ ತಂತ್ರದ ಮುಂದುವರಿದ ವಿಧಾನಗಳು (ಎಲೆಕ್ಟ್ರಾನ್ ಮೈಕ್ರೊಸ್ಕೋಪಿ (EM) ಮತ್ತು ಅಟಾಮಿಕ್ ಫೋರ್ಸ್ ಮೈಕ್ರೊಸ್ಕೋಪಿ (AFM))) ಮತ್ತು ಎಕ್ಸ್-ರೆ ವಿವರ್ತನೆಗಳು ಸಂಶೋಧಕರಿಗೆ ಕಾಲಜಿನಿನ ಹೆಚ್ಚು ವಿವರವಾದ ಚಿತ್ರಣವನ್ನು ಇನ್ ಸಿಟು , ಪಡೆಯಲು ಸಾಧ್ಯವಾಗಿದೆ. ಇಂತಹ ಅನೇಕ ಸುಧಾರಿತ ಬೆಳವಣಿಗಳಿಂದಾಗಿ ಕಾಲಜಿನಿನ ರಚನೆ ಹೇಗೆ ಕೋಶ-ಕೋಶ ಮತ್ತು ಕೋಶ-ಮಾತೃಕೆ ಯ ಸಂವಹನೆಯ ಮೇಲೆ ಪ್ರಭಾವಬೀರುತ್ತದೆ. ಹಾಗೆಯೇ ಬೆಳೆವಣಿಗೆ ಹಾಗು ಸುಧಾರಣೆಯ ಸ್ಥಿತಿಯಲ್ಲಿ ಟಿಸ್ಯುಗಳು ಹೇಗೆ ಉಂಟಾಗುತ್ತದೆ; ಮತ್ತು ಟಿಸ್ಯುಗಳು ರೋಗ ಮತ್ತು ಅಭಿವರ್ಧನೆಯ ಸ್ಥಿತಿಯಲ್ಲಿ ಹೇಗೆ ಬದಲಾವಣೆಗೊಳ್ಳುತ್ತದೆ; ಎಂದು ಅರ್ಥಮಾಡಿಕೊಳ್ಳಬಹುದು.[೨೩][೨೪] ಕಾಲಜನ್ ಫೈಬ್ರಿಲ್ ಗಳು ಕಾಲಜನ್ ಕಣಗಳ ಅರ್ಧ-ಸ್ಪಟಿಕದ ರೂಪ ಹೊಂದಿರುವ ಕಣರಾಶಿ. ಕಾಲಜನ್ ಫೈಬರ್ಗಳು ಫೈಬ್ರಿಲಿಗಳ ಗೊಂಚಲು.ನಾನಾಬಗೆಯ ಟಿಸ್ಯುಗಳಲ್ಲಿ ಕಾಲಜನ್ ಫೈಬ್ರಿಲ್ಗಳ/ಸಮೂಹಗಳು ವಿವಿಧ ಸಂಯೋಜನೆ ಮತ್ತು ಪ್ರಮಾಣದಲ್ಲಿ ಜೋಡನೆಯಾಗಿರುತ್ತದೆ, ಇದು ಅವುಗಳ ಬೇರೆಬೇರೆ ರೀತಿಯ ಲಕ್ಷನಗಳಿಗೆ ಕಾರಣ. ಮೂಳೆಗಳಲ್ಲಿ, ಕಾಲಜನ್ ತ್ರಿ ಸುರಳಿಯು ಸಮಾಂತರದ,ಅಂಕುಡೊಂಕಾದ ಸಮೂಹವಾಗಿರುತ್ತದೆ. ಟ್ರೊಪೊಕಾಲಜನ್ ಉಪಘಟಕಗಳ ತುದಿಗಳ 40 nm ಅಂತರವು (ಸರಿಸುಮಾರು ಗ್ಯಾಪ್ ಭಾಗದಷ್ಟೆ) ಖನಿಜ ಆಂಶ (ಹೆಚ್ಚು ಕಡಿಮೆ, ಹೈಡ್ರಾಕ್ಸಿಪಾಟೈಟ್, Ca10(PO4)6(OH)2 ಮತ್ತು ಕೆಲವು ಫಾಸ್ಪೇಟ್ ಗಳಿರುವ) ಉದ್ದವಾದ, ಗಟ್ಡಿಯಾದ, ಸೂಕ್ಷ್ಮವಾದ ಸ್ಪಟಿಕ(ಕ್ರಿಸ್ಟಲ್)) ನಿಕ್ಷೇಪನೆ ಆಗುವ ನುಕ್ಲೀಯೆಷನ್ ಸೈಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ರೀತಿಯಲ್ಲಿ ಕೆಲವು ರೀತಿಯ ಕಾರ್ಟಿಲೆಜ್ ಗಳು ಮೂಳೆಗಳಾಗುತ್ತದೆ. ವಿಧ I ಕಾಲಜನ್ ಮೂಳೆಗಳಿಗೆ ಕರ್ಷಕತ್ರಾಣ ಕೊಡುತ್ತದೆ.
ವಿಧಗಳು ಮತ್ತು ಸಂಬಂಧಿಸಿದ ರೋಗಗಳು
[ಬದಲಾಯಿಸಿ]ಕಾಲಜನ್ ದೇಹದಾದ್ಯಂತ ಅನೇಕ ಜಾಗದಲ್ಲಿ ಇರುತ್ತದೆ. ಇಲ್ಲಿಯವರೆಗೆ, ಕಾಲಜನ್ ನ 29 ವಿಧಗಳನ್ನು ಗುರತಿಸಿ, ವಿವರಿಸಲಾಗಿದೆ. ದೇಹದ ಕಾಲಜಿನಿನ 90% ಭಾಗ, ವಿಧ I, II, III, ಮತ್ತು IV ಗಳಿಂದ ಮಾಡಲ್ಪಟ್ಟಿದೆ.
- ಕಾಲಜಿನಿನ ಮೊದಲ ವಿಧ: ಚರ್ಮ, ಟೆಂಡನ್, ವಾಸ್ಕುಲಾರ್, ಲಿಗೆಚರ್, ಅಂಗಗಳು, ಮೂಳೆ (ಮೂಳೆಯ ಮುಖ್ಯವಾದ ಅಂಶ)
- ಕಾಲಜಿನಿನ ಎರಡನೆ ವಿಧ: ಕಾರ್ಟಿಲೆಜ್ (ಕಾರ್ಟಿಲೆಜ್ ನ ಮುಖ್ಯವಾದ ಆಂಶ)
- ಕಾಲಜಿನಿನ ಮೂರನೇ ವಿಧ: ರೆಟಿಕುಲೇಟ್ (ರೆಟಿಕುಲಾರ್ ಫೈಬರ್ ಗಳ ಮುಖ್ಯವಾದ ಆಂಶ),ಸಾಮಾನ್ಯವಾಗಿ ವಿಧ I ಕಾಲಜನ್ ದೊಂದಿಗೆ ಇರುತ್ತದೆ.
- ಕಾಲಜಿನಿನ ನಾಲ್ಕನೆ ವಿಧ: ಸೆಲ್ ಬೇಸ್ಮೆಂಟ್ ಮೆಂಬರೇನ್ ಬೇಸ್ ಗಳಾಗುತ್ತದೆ.
- ಕಾಲಜಿನಿನ ಐದನೇ ವಿಧ: ಜೀವಕೋಶದ ಮೇಲ್ಮೈ, ಕೂದಲು ಮತ್ತು ಪ್ಲಾಸೆಂಟಾ(ಮಾಸು)
ಕಾಲಜನ್-ಸಂಬಂಧಿತ ರೋಗಗಳು ಸಾಮಾನ್ಯವಾಗಿ ಅನುವಂಶಿಕ ದೋಷಗಳಿಂದಾಗಿ, ಅಥವಾ ಪೌಷ್ಟಿಕಾಂಶದ ಕೊರತೆಯಿಂದಾಗಿ ಉಂಟಾಗುತ್ತವೆ. ಇದು ಬೈಯೊಸಿಂಥೆಸಿಸ್, ಅಸ್ಸೆಂಬ್ಲಿ, ಪೋಸ್ಟ್ ಟ್ರಾನ್ಸಲೇಷನಲ್ ಮಾಡಿಫಿಕೆಷನ್, ಸೆಕ್ರಿಷನ್ ಅಥವಾ ಕಾಲಜನ್ ಉತ್ಪಾದನೆಯ ಸಂಸ್ಕರಣ ವಿಧಾನಗಳ ಮೇಲೆ ಪರಿಣಾಮ ಬೀರುತ್ತದೆ.
ವಿಧಗಳು | ಟಿಪ್ಪಣಿಗಳು | ವಂಶವಾಹಿ (ಜೀನ್ಸ್) | ರೋಗಗಳು | - | I | ಇದು ಮನುಷ್ಯ ದೇಹದಲ್ಲಿ ಹೇರಳವಾಗಿರುವ ಕಾಲಜನ್. ಇದು ಟಿಸ್ಯು ದುರಸ್ತಿಗೊಂಡು ವಾಸಿಯಾದಾಗ ಆಗುವ ಅಂತ್ಯ-ಉತ್ಪನ್ನವಾದ ಸ್ಕಾರ್ ಟಿಸ್ಯು ವಿನಲ್ಲಿರುತ್ತದೆ. ಇದು ಟೆಂಡನ್, ಚರ್ಮ, ಆರ್ಟರಿ ವಾಲ್ (ಧಮನಿಯ ಭಿತ್ತಿ), ಮೈಯೊಫೈಬ್ರಿಲಗಳ ಎಂಡೊಮೈಸಿಯಮ್, ಫೈಬ್ರೊಕಾರ್ಟಿಲೆಜ್, ಮತ್ತು ಮೂಳೆ ಹಾಗು ಹಲ್ಲಿನ ಆರ್ಗಾನಿಕ್( ಜೈವಿಕ) ಭಾಗದಲ್ಲಿ ಕೂಡ ಇರುತ್ತದೆ. | COL1A1, COL1A2 | ಒಸ್ಟಿಯೊಜೆನೆಸಿಸ್ಇಂಫರ್ಪೆಕ್ಟಾ, ಎಹ್ಲೆರಸ್-ಡಾನ್ಲಾಸ್ ಸಿಂಡ್ರೋಮ್, ಇನ್ಫಾನ್ಟಿಲ್ ಕಾರ್ಟಿಕಲ್ ಹೈಪರೊಸ್ಟೊಸಿಸ್ aka
(ಎಂದು ಕೂಡ ಕರೆಯಲ್ಪಡುವ) ಕೇಫೀಸ್ ಡಿಸೀಸ್ . |
- | II | ಎಲ್ಲಾ ಕಾರ್ಟಿಲೆಜ್ ಪ್ರೋಟೀನ್ ಗಳ 50% ಭಾಗ ಹೈಯಲೈನ್ ಕಾರ್ಟಿಲೆಜ್ ದಿಂದ ಮಾಡಲಾಗಿರುತ್ತೆ.
ಕಣ್ಣುಗಳ ಕಾಚದ್ರವ (ವಿಟೆರಸ್ ಹೂಮರ್). |
COL2A1 | ಕಾಲಜಿನೊಪತಿ, II ಮತ್ತು XI ವಿಧಗಳು | - | III | ಇದು ಗ್ರಾನುಲೇಷನ್ ಟಿಸ್ಯುವಿನ , ಕಾಲಜನ್ ಮತ್ತು ಎಳೆಯ ಫೈಬ್ರೊಬ್ಲಾಸ್ಟ್ಸ್ ಗಳಿಂದ I ವಿಧದ ಕಾಲಜನ್ ಉತ್ಪತ್ತಿಯಾಗುವುದಕ್ಕಿಂತ ಮೊದಲು ಶೀಘ್ರವಾಗಿ
ಉತ್ಪತ್ತಿಯಾಗುತ್ತದೆ. ರೆಟಿಕುಲಾರ್ ಫೈಬರ್. ಧಮನಿಯ ಭಿತ್ತಿ, ಚರ್ಮ, ಕರಳು ಮತ್ತು ಗರ್ಭಾಶಯ ದಲ್ಲಿ ಕೂಡ ಇರುತ್ತದೆ |
COL3A1 | ಎಹ್ಲೆರಸ್-ಡಾನ್ಲಾಸ್ ಸಿಂಡ್ರೋಮ್ | - | IV | ಬಾಸಲ್ ಲಾಮಿನ; ಕಣ್ಣಿನ ಸಪೂರ. ಕಿಡ್ನಿ (ಮೂತ್ರಪಿಂಡ) ಗಳಲ್ಲಿರುವ ನೆಫ್ರಾನ್ ಗಳ ಕಾಪಿಲರಿ ಮತ್ತು ಗ್ಲಾಮರುಲೈ
ಗಳಲ್ಲಿದ್ದು ಫಿಲ್ಟ್ರೇಷನ್ ಸಿಸ್ಟಂ ನಲ್ಲಿ ಪಾತ್ರವಹಿಸುತ್ತದೆ. |
COL4A1, COL4A2, COL4A3, COL4A4, COL4A5, COL4A6 | ಆಲ್ಪೋರ್ಟ್ ಸಿಂಡ್ರೋಮ್, ಗುಡ್ ಪಾಸ್ಟರ್ಸ್ ಸಿಂಡ್ರೋಮ್ | - | V | ಬಹಳಷ್ಟು ಇಂಟರ್ಸ್ಟಿಷಿಯಲ್ ಟಿಸ್ಯು ವಿಧ I ದೊಂದಿಗೆ ಬೆರೆತಿರುವ, ಪ್ಲಾಸೆಂಟಾ ದೊಂದಿಗೆ ಹೊಂದಿಕೊಂಡ ಸಂಯೋಜನೆ. | COL5A1, COL5A2, COL5A3 | ಎಹ್ಲೆರಸ್-ಡಾನ್ಲಾಸ್ ಸಿಂಡ್ರೋಮ್ (ಸಾಂಪ್ರದಾಯಿಕ) | - | VI | I ವಿಧದೊಂದಿಗೆ ಸಂಬಂಧಿಸಿದ ಬಹುತೇಕ ಇಂಟರ್ಸ್ಟಿಷಿಯಲ್ ಟಿಸ್ಯು | COL6A1, COL6A2, COL6A3 | ಯುಲ್ರಿಚ್ ಮಯೋಪತಿ ಮತ್ತು ಬೆತೆಲಂ ಮಯೋಪತಿ | - | VII | ಡರ್ಮಲ್ ಎಪಿಡರ್ಮಲ್ ಜಂಕ್ಷನ್ನು(ಕೂಡುವ ಸ್ಥಳ) ನಲ್ಲಿ | COL7A1 | ಎಪಿಡೆರಮೋಲೈಸಿಸ್ ಬುಲ್ಲೊಸ ಡಿಸ್ಟ್ರೋಪಿಕ | - | VIII | ಕೆಲವು ಎಂಡೊಥಿಲಿಯಲ್ ಜೀವಕೋಶಗಳಲ್ಲಿ | COL8A1, COL8A2 | ಪೊಸ್ಟೀರಯರ್ ಪಾಲಿಮಾರ್ಪಸ್ ಕಾರ್ನಿಯಲ್ ಡಿಸ್ಟ್ರೋಫಿ 2 | - | IX | FACIT ಕಾಲಜನ್, ಕಾರ್ಟಿಲೆಜ್,
II ಮತ್ತು XI ವಿಧದ ಫೈಬ್ರಿಲ್ಸ್ ಗಳೊಂದಿಗೆ ಸಂಬಂಧಿಸಿದ |
COL9A1, COL9A2, COL9A3 | - EDM2 ಮತ್ತು EDM3 | - | X | ಹೈಪರ್ಟ್ರೋಫಿಕ್ ಮತ್ತು ಮಿನರಲೈಸಿಂಗ್ ಕಾರ್ಟಿಲೆಜ್ | COL10A1 | ಸ್ಕಮಿಡ್ ಮೆಟಫೈಸಿಯಲ್ ಡಿಸ್ಪಪ್ಲಾಸಿಯ | - | XI | ಕಾರ್ಟಿಲೆಜ್ | COL11A1, COL11A2 | ಕಾಲಜೆನೊಪತಿ, II ಮತ್ತು XI ವಿಧಗಳು | - | XII | FACIT ಕಾಲಜನ್,
I ವಿಧ ಹೊಂದಿರುವ ಫೈಬ್ರಿಲ್ಸ್, ಡೆಕೊರಿನ್ ಮತ್ತು ಗ್ಲೈಕೊಸಾಮಿನೊಗ್ಲಿಕಾನ್ಸ್ ಗಳೊಂದಿಗೆ ಸಹಕರಿಸುತ್ತದೆ. |
COL12A1 | - | - | XIII | ಟ್ರಾನ್ಸ್ ಮೆಂಬರೇನ್ ಕಾಲಜನ್,
ಇಂಟರ್ಜಿನ್ a1b1, ಫೈಬ್ರೊನೆಕ್ಟಿನ್ ಮತ್ತು ನಿಡೊಜನ್ ಮತ್ತು ಪೆರ್ಲಿಕಾನ್ಗಳತಂಹ ಬೇಸ್ಮೆಂಟ್ ಮೆಂಬರೆನ್ಸ್ ಗಳ ಆಂಶದೊಂದಿಗೆ ಸಹಕರಿಸುತ್ತದೆ. |
COL13A1 | - | - | XIV | FACIT ಕಾಲಜನ್ | COL14A1 | - | - | XV | - | COL15A1 | - | - | XVI | - | COL16A1 | - | - | XVII | 180 kDa ಪ್ರೋಟೀನು ಆದ BP180 ಯೆಂದು ಕೂಡ ಕರೆಯಲ್ಪಡುವ ಟ್ರಾನ್ಸ್ಮೆಂಬರೆನ್ ಕಾಲಜನ್ . | COL17A1 | ಬುಲ್ಲೊಸ್ ಪೆಂಫಿಗಾಯಿಡ್ ಮತ್ತು ಜಂಕ್ಷನಲ್ ಎಪಿಡೆರ್ಮೊಲಿಸ್ ಬುಲ್ಲೊಸಾ ದ
ಕೆಲವು ವಿಧಗಳು. |
- | XVIII | ಎಂಡೊಸ್ಟಾಟಿನ್ನ ಮೂಲ | COL18A1 | - | - | XIX | FACIT ಕಾಲಜನ್ | COL19A1 | - | - | XX | - | COL20A1 | - | - | XXI | FACIT ಕಾಲಜನ್ | COL21A1 | - | - | XXII | - | COL22A1 | - | - | XXIII | MACIT ಕಾಲಜನ್- | COL23A1 | - | - | XXIV | - | COL24A1 | - | - | XXV | - | COL25A1 | - | - | XXVI | - | EMID2 | - | - | XXVII | - | COL27A1 | - | - | XXVIII | - | COL28A1 | - | - | XXIX | ಎಪಿಡರ್ಮಲ್ ಕಾಲಜನ್ | COL29A1 | ಅಟೊಪಿಕ್ ಡರ್ಮಟೈಟಿಸ್[೨೫] |
ಮೇಲೆ ತಿಳಿಸಿರುವ ರೋಗಗಳಲ್ಲದೆ, ಸ್ಕಿಲ್ರೊಡರ್ಮ ದಲ್ಲಿ ಕಾಲಜನ್ ಅತಿ ಹೆಚ್ಚು ನಿಕ್ಷೇಪಗೊಳುತ್ತದೆ.
ಸ್ಟೈನಿಂಗ್
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(March 2010) |
ಹಿಸ್ಟಾಲಜಿ (ಉತಕ ವಿಜ್ಞಾನ)ಯ ಪ್ರಕಾರ ಕಾಲಜನ್ ಮಾನಕವಾದ H&E ಗಳಲ್ಲಿ ಹೊಳೆಯುವ ಇಯೊಸಿನೊಫಿಲಿಕ್ (ಪಿಂಕ್) ಆಗಿರುತ್ತದೆ. ಮಿಥೈಲ್ ವೈಯಲೆಟ್ ಎಂಬ ಡೈ, ಅನ್ನು ಟಿಸ್ಯುಗಳ ಕಾಲಜನ್ಅನ್ನು ಸ್ಟೇನ್ ಮಾಡಲು ಬಳಸಬಹುದು. ಮಿಥೈಲ್ ಬ್ಲೂ ಎಂಬ ಡೈ ಕೂಡ ಕಾಲಜನ್ ಸ್ಟೇನ್ ಬಳಸಬಹುದು. ಮೇಲಾಗಿ, ಬೇಕಾದಲ್ಲಿ ಇಮ್ಯೂನೊಹಿಸ್ಟೊಕೆಮಿಕಲ್ ಸ್ಟೇನ್ ಗಳು ಕೂಡ ಇವೆ.ಕಾಲಜನ್ ಅನ್ನು ಬೇರೆ ಫೈಬರ್ಗಳಿಂದ ಗುರುತಿಸಲು ಇರುವ ಉತ್ತಮ ಸ್ಟೇನ್ ಎಂದರೆ ಮಾಸನ್ಸ್ ಟ್ರೈಕ್ರೋಮ್ ಸ್ಟೇನ್.
ಸಂಶ್ಲೇಷಣೆ
[ಬದಲಾಯಿಸಿ]ಅಮೀನೊ ಅಮ್ಲ
[ಬದಲಾಯಿಸಿ]ಕಾಲಜನ್ ಅಮೀನೊ ಅಮ್ಲದ ವಿಶಿಷ್ಟವಾದ ಸಂಯೋಜನೆ ಮತ್ತು ಅನುಕ್ರಮವನ್ನು ಹೊಂದಿದೆ:
- ಬಹುತೇಕವಾಗಿ ಪ್ರತಿ ಮೂರನೇ ಶೇಷದಲ್ಲಿ ಗ್ಲೈಸೀನ್ (Gly) ಇರುತ್ತದೆ
- ಕಾಲಜನ್ ನ 9% ಭಾಗ ಪ್ರೋಲಿನ್ (Pro) ನಿಂದ ಮಾಡಲ್ಪಟ್ಟಿದೆ
- ಕಾಲಜನ್, ಸ್ಥಾನಾಂತರಣ (ಟ್ರಾನ್ಸ್ಲೇಷನ್) ಕ್ರಿಯೆಯ ಸಂದರ್ಭದಲ್ಲಿ ನೇರವಾಗಿ ಒಳತೂರಿಲ್ಲದ,ಎರಡು ಅಮೀನೊ ಅಮ್ಲಗಳ ವಿರಳವಾದ ನಿಷ್ಪನ್ನಗಳನ್ನು ಹೊಂದಿದೆ. ಇ ಎರಡು ಅಮೀನೊ ಅಮ್ಲಗಳು ಗ್ಲೈಸೀನ್ ಸ್ಥಾನಕ್ಕೆ ಅನುಗುಣವಾಗಿ ನಿರ್ದಿಷ್ಟವಾದ ಸ್ಥಳದಲ್ಲಿ ಇರುತ್ತದೆ; ಅದಲ್ಲದೆ ಸ್ಥಾನಾಂತರಣ ಕ್ರಿಯೆಯ ನಂತರ ಈ ಅಮೀನೊ ಅಮ್ಲಗಳನ್ನು ವಿವಿಧ ಎನಜೈಮುಗಳು ಪರಿವರ್ತಿಸುತ್ತವೆ; ಇ ಎರಡು ಕ್ರಿಯೆಗೆ ಅನುಗುಣಕವಾಗಿ (ಕೊಫ್ಯಾಕ್ಟರ್) ಜೀವಸತ್ವ 'ಸಿ' ದ ಅವಶ್ಯಕತೆಯಿದೆ.
- ಪ್ರೋಲಿನ್ ನಿಂದ ಉತ್ಪತ್ತಿಯಾದ ಹೈಡ್ರಾಕ್ಸಿಪ್ರೋಲಿನ್(Hyp).
- ಲೈಸೀನ್ ನಿಂದ ಉತ್ಪತ್ತಿಯಾದಹೈಡ್ರಾಕ್ಸಿಲೈಸೀನ್. ಕಾಲಜಿನಿನ ವಿಧಕ್ಕೆ ಅನುಗುಣವಾಗಿ, ಹಲವು ಹೈಡ್ರಾಕ್ಸಿಲೈಸೀನ್ ಗಳು ಡೈಸಾಕ್ಕಾರೈಡ್ ಗಳನ್ನು ಹೊಂದಿರುತ್ತದೆ.
ಚರ್ಮದ ಕಾಲಜನ್ (ಸ್ಕಿನ್ ಕಾಲಜನ್)ನಿಂದ ಅಮೀನೊ ಆಮ್ಲದ ವಿಘಟನೆಗೆ ಕಾರ್ಟಿಸಾಲ್ ಉದ್ದೀಪಿಸುತ್ತದೆ.[೨೬]
ಕಾಲಜನ್ I ರೂಪಣ (ರಾಸಾಯನಿಕ ರಚನೆ)
[ಬದಲಾಯಿಸಿ]ಬಹಳಷ್ಟು ಕಾಲಜನ್ ವಿಧಗಳು ಒಂದೇ ರೀತಿಯಲ್ಲಿ ರೂಪಗೊಳ್ಳುತ್ತವೆ, ಆದರೆ ಈ ಕೆಳಗಿನ ಪ್ರಕ್ರಿಯೆ I ವಿಧಕ್ಕೆ ವೈಶಿಷ್ಟ:
- ಜೀವಕೋಶದೊಳಗಡೆ
- ರೈಬೋಸೋಮಿನಲ್ಲಿ ರಫ್ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್(RER)ಗೆ ಹೊಂದಿಕೊಂಡಂತೆ ಮೂರು ಪೆಪ್ಟೈಡ್ ಚೈನ್ ಗಳು (2 ಅಲ್ಫಾ-1 ಮತ್ತು 1 ಅಲ್ಫಾ-2 ಚೈನ್) ರಚನೆಯಾಗುತ್ತದೆ.
ಈ ಪೆಪ್ಟೈಡ್ ಚೈನ್ ಗಳು (ಪ್ರಿಪ್ರೊಕಾಲಜನನ್ ಎಂದು ಕರೆಲಾಗುವ) ಪ್ರತಿತುದಿಯಲ್ಲಿ ರೆಜಿಸ್ಟ್ರೇಷನ್ ಪೆಪ್ಟೈಡ್ ಹೊಂದಿರುತ್ತದೆ; ಇದಲ್ಲದೆ ಒಂದು ಪೆಪ್ಟೈಡ್ ಕೂಡ ಸೇರಿರಿತ್ತದೆ.
- RERನ ಲುಮೆನ್ ಒಳಗೆ ಪೆಪ್ಟೈಡ್ ಚೈನ್ ಗಳನ್ನು ಕಳುಹಿಸಲಾಗುತ್ತದೆ
- RER ನೊಳಗಡೆ ಸಿಗನಲ್ ಪೆಪ್ಟೈಡ್ಸ್ ಗಳು ಒತ್ತಾಗಿರುತ್ತವೆ. ಈ ಚೈನ್ ಗಳಿಗೆ ಪ್ರೊಕಾಲಜನ್ ಎಂದು ಕರೆಯಲಾಗುತ್ತದೆ
- ಲೈಸೀನ್ ಮತ್ತು ಪ್ರೋಲಿನ್ ಅಮೀನೊ ಅಮ್ಲಗಳ ಹೈಡ್ರಾಕ್ಸಿಲೇಷನ್ ಲುಮೆನ್ ಒಳಗಡೆ ನಡೆಯುತ್ತದೆ. ಈ ಕ್ರಿಯೆಯು ಅನುಗುಣಕ- ಅಸ್ಕಾರಬಿಕ್ ಆಮ್ಲ (ಜೀವಸತ್ವ 'ಸಿ')ದ ಮೇಲೆ ಅವಲಂಭಿತ
- ನಿರ್ದಿಷ್ಟ ಅಮೀನೊ ಅಮ್ಲಗಳ ಗ್ಲೈಕೊಸೈಲೇಷನ್ ನಡೆಯುತ್ತದೆ.
- ತ್ರಿ ಸುರಳಿ ಆಕೃತಿ RER ಒಳಗಡೆ ಉಂಟಾಗುತ್ತದೆ
- ಪ್ರೊಕಾಲಜನ್ ಅನ್ನು ಗಾಲ್ಗಿ ಅಪಾರೇಟಸ್ ಗೆ ಕಳುಹಿಸಲಾಗುತ್ತದೆ,ಇಲ್ಲಿ ಇದನ್ನು ಸಿದ್ದಪಡಿಸಿ, ಎಕ್ಸೊಸೈಟೋಸಿಸ್ ನಿಂದ ಸ್ರಾವಿಸಲಾಗುತ್ತದೆ.
- ಜೀವಕೋಶದ ಹೊರಗಡೆ
ರೀಜಿಸ್ಟ್ರೇಷನ್ ಪೆಪ್ಟೈಡ್ಸ್ ಅನ್ನು ವಿಚ್ಛೇದಿಸಿ ಟ್ರೊಪೊಕಾಲಜನ್ ರೂಪಗೊಳ್ಳುತ್ತದೆ.
- ಹೈಡ್ರಾಕ್ಸಿಲೈಸೀನ್ ಮತ್ತು ಲೈಸೀನ್ ಶೇಷಗಳನ್ನು ಬಂಧಿಸುವ ಲೈಸೈಲ್ ಆಕ್ಸಿಡೆಸ್ ಗಳ ಸಹವೇಲನ್ಸಿ ಅಡ್ಡಬಂಧಗಳ ಮೂಲಕ ಮಲ್ಟಿಪಲ್ (ಒಂದಕ್ಕಿಂತ ಹೆಚ್ಚಿನ) ಟ್ರೋಪೊಕಾಲಜನ್ ಅಣುಗಳು ಕಾಲಜನ್ ಫೈಬ್ರಿಲ್ ಗಳನ್ನು ಉಂಟುಮಾಡುತ್ತವೆ.
ಆನೇಕ ಕಾಲಜನ್ ಫೈಬ್ರಿಲ್ ಗಳು ಕೂಡಿ ಕಾಲಜನ್ ಫೈಬ್ರಿಲ್ಗಳು ಉಂಟಾಗುತ್ತವೆ.
- ಕಾಲಜನ್ ಜೀವಕೋಶದ ಪೊರೆಗಳಿಗೆ ಫೈಬ್ರೊನೆಕ್ಟಿನ್ ಮತ್ತು ಇಂಟರ್ಜಿನ್ ಗಳನ್ನು ಒಳಗೊಂಡಂತೆ ಹಲವಾರು ಪ್ರೋಟೀನುಗಳು ಮೂಲಕ ಅಂಟಿಕೊಂಡಿರುತ್ತದೆ.
ಸಂಶ್ಲೇಷಿತ ರೋಗಜನನ (ರೋಗ ನಿದಾನದ ಪರೀಕ್ಷೆ)
[ಬದಲಾಯಿಸಿ]ಜೀವಸತ್ವ 'ಸಿ' ಕೊರತೆ, ಸ್ಕರ್ವಿ ಎಂಬ ಉಗ್ರ ಮತ್ತು ನೋವಿಂದ ಕೂಡಿದ ರೋಗವನ್ನು ಉಂಟುಮಾಡುತ್ತದೆ. ದೋಷಪೂರಿತ ಕಾಲಜನ್ ಗಟ್ಟಿಯಾದ ಯೋಜಿ ಉತಕದ (ಕನೆಕ್ಟಿವ್ ಟಿಸ್ಯು)ಬೆಳವಣಿಗೆಯನ್ನು ತಡೆಯುತ್ತದೆ. ರಕ್ತ ಸೂಸಿ ಒಸಡುಗಳು ತಮ್ಮ ಬಲ ಕಳೆದುಕೊಳ್ಳುತ್ತವೆ, ಹಲ್ಲುಗಳು ಕೂಡ ಉದರಬಹುದು; ಚರ್ಮ ಬಣ್ಣ ಕಳೆದುಕೊಳ್ಳಬಹುದು ಮತ್ತುಗಾಯಗಳು ವಾಸಿಯಾಗುವುದಿಲ್ಲ. ಹದಿನೆಂಟನೆ ಶತಮಾನಕ್ಕೂ ಮುಂಚೆ, ಈ ಪರಿಸ್ಥಿತಿಯು ದೀರ್ಘವಾದ ಮಿಲಿಟರಿ ದಂಡಯಾತ್ರೆ ಮಾಡುತ್ತಿದವರಲ್ಲಿ ಕುಖ್ಯಾತವಾಗಿತ್ತು, ಅದರಲ್ಲೂ ಮುಖ್ಯವಾಗಿ ಸಮುದ್ರ ಯಾನದ ಸಂದರ್ಭದಲ್ಲಿ ಯಾತ್ರಿಕರು ಜೀವಸತ್ವ 'ಸಿ' ಇರುವ ಆಹಾರ ಪದಾರ್ಥಗಳಿಂದ ವಂಚಿತರಾಗುತ್ತಿದ ಕಾರಣ ಅಂತಹವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತಿತ್ತು. ಅಟೋಇಮ್ಮೂನ್ ರೋಗಗಳಾದ ಲುಪುಸ್ ಎರಿಥೆಮಾಟೊಸಸ್ ಅಥವಾ ರುಮಾಟಿಡ್ ಆರ್ಥರೈಟಿಸ್[೨೭] ಗಳು ಆರೋಗ್ಯವಂತ ಕಾಲಜನ್ ಫೈಬರ್ ಗಳನ್ನು ನಾಶಮಾಡಬಹುದು. (ಇಮ್ಯೂನ್ ಸಿಸ್ಟಂ- ಮನುಷ್ಯರ ರೋಗಗಳಿಂದ ಪ್ರತಿ(ರೋಧ)ರಕ್ಷಣೆ ಪಡೆಯುವಂತಹ ವ್ಯವಸ್ಥೆ; ಆಟೋಇಮ್ಯೂನ್ ರೋಗಗಳು- ಒಬ್ಬ ವ್ಯಕ್ತಿಯ ಪ್ರತಿರಕ್ಷಣೆಯ ವ್ಯವಸ್ಥೆಯು ಅದರದೇ ಜೀವಕೋಶಗಳ ಮೇಲೆ ಪ್ರಹಾರ ಮಾಡಿ ಟಿಸ್ಯುಗಳ ನಾಶಕ್ಕೆ ಕಾರಣವಾಗುತ್ತದೆ).ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಕಾಲಜನ್ ನಾಶಮಾಡುವ ಅಥವಾ ಅದರ ಉತ್ಪಾದನೆಯನ್ನು ಅಡ್ಡಿಪಡಿಸುವಂತಹ ಅಪಾಯಕಾರಿ ಗುಣಗಳನ್ನು ಹೊಂದಿದೆ.
ಉಪಯೋಗ
[ಬದಲಾಯಿಸಿ]ಎನಜೈಮು ಗಳಂತಹ ಗ್ಲಾಬುಲಾರ್ ಪ್ರೋಟೀನ್ ಗಳಿಗಿಂತ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುವ ಫೈಬ್ರಸ್ ಸ್ಟ್ರಕ್ಚರಲ್ ಪ್ರೋಟೀನ್ ಗಳಲ್ಲಿ ಕಾಲಜನ್ ಒಂದು. ಕಾಲಜಿನಿನ ಗಟ್ಟಿಯಾದ ಗೊಂಚಲುಗಳನ್ನು ಕಾಲಜನ್ ಫೈಬರ್ ಎನ್ನುತ್ತಾರೆ; ಇದು ಟಿಸ್ಯುಗಳಿಗೆ ಆಸರೆ ಕೊಡುವ ಎಕ್ಸಟ್ರಾಸೆಲುಲಾರ್ ಮ್ಯಾಟ್ರಿಕ್ಸ್ ಗಳ ಪ್ರಮುಖ ಅಂಶವಾಗಿದೆ. ಇದಲ್ಲದೆ ಜೀವಕೋಶಗಳಿಗೆ ಹೊರಗಡೆಯ ವಿನ್ಯಾಸವನ್ನು ಕೊಡುತ್ತದೆ, ಇದಲ್ಲದೆ ಕಾಲಜನ್ ಕೆಲವು ಜೀವಕೋಶದೊಳಗಡೆ ಕೂಡ ಸಿಗುತ್ತದೆ. ಕಾಲಜನ್ ಅಸಾಧಾರಣವಾದ ಕರ್ಷಕ ಶಕ್ತಿ ಹೊಂದಿದೆ; ಇದು ಫಾಷಿಯ, ಮೃದ್ವಸ್ಥಿ (ಕಾರ್ಟಿಲೇಜ್), ತಂತುಕಟ್ಟು (ಲಿಗಾಮೆಂಟ್), ಸ್ನಾಯುಹುರಿ (ಟೆಂಡನ್),ಮೂಳೆ (ಬೊನ್) ಮತ್ತು ಚರ್ಮದ ಮುಖ್ಯವಾದ ಭಾಗವಾಗಿದೆ.[೨೮][೨೯] ಇದು ಮೃದುವಾದ ಕೆರಾಟಿನ್ ಜೊತೆಯೊಂದಿಗೆ ಚರ್ಮದ ಶಕ್ತಿ ಮತ್ತು ಪ್ರತ್ಯಾಸ್ಥತೆಗೆ ಕಾರಣವಾಗಿದೆ; ವಯಸ್ಸಾದ ಹಾಗೆ ಆಗುವ ಇದರ ಅವನತಿ ಸುಕ್ಕುಗಳಿಗೆ ಕಾರಣ. ಇದು ರಕ್ತ ನಾಳಗಳನ್ನು ಬಲಗೊಳಿಸಿ, ಟಿಸ್ಯುಗಳ ಅಭಿವೃದ್ಧಿಯಲ್ಲಿ ಮುಖ್ಯವಾದ ಪಾತ್ರವಹಿಸುತ್ತದೆ. ಇದು ಕಣ್ಣಿನ ಕಾರ್ನಿಯ ಮತ್ತು ಮಸೂರ(ಲೆನ್ಸ್)ದಲ್ಲಿ ಸ್ಪಟಿಕದ (ಕ್ರಿಸ್ಟಲ್) ರೂಪದಲ್ಲಿರುತ್ತದೆ. ಇದನ್ನು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಸುಟ್ಟು ಗಾಯಗಳ ಶಸ್ತ್ರಚಿಕಿತ್ಸೆಯಲ್ಲಿ ಕೂಡ ಉಪಯೋಗಿಸಲಾಗುತ್ತದೆ. ಹೈಡ್ರೊಲೈಸ್ಡ್ (ನೀರಿನ ನೆರವಿನಿಂದ ವಿಭಜನೆಗೊಂಡ) ಕಾಲಜನ್ ತೂಕ ನಿರ್ವಹಣೆಯಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ; ಇದರ ತಣಿವನ್ನು ತೀರಿಸುವ ಶಕ್ತಿ ಅನುಕೂಲಕರವಾಗಿ ಬಳಸಬಹುದು.[ಸೂಕ್ತ ಉಲ್ಲೇಖನ ಬೇಕು]
ಕೈಗಾರಿಕೆಯಲ್ಲಿನ ಉಪಯೋಗಗಳು
[ಬದಲಾಯಿಸಿ]ಕಾಲಜನ್ ಗಳ ಆಣುರಚನೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬದಲಾಯಿಸಿದರೆ, ಉದಾಹರಣೆಗೆ: ಶಾಖದಿಂದ, ಟ್ರೊಪೊಕಾಲಜಿನಿನ ಮೂರು ಎಳೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಬೇರೆಬೇರೆಯಾಗಿ ಗ್ಲಾಬುಲಾರ್ ಡೊಮೈನ್ಸ್ ಗಳಾಗುತ್ತವೆ. ಸಾಮಾನ್ಯವಾದ ಕಾಲಜನ್ ಪಾಲಿಪ್ರೊಲೈನ್ II (PPII)(ಉದಾಹರಣೆಗೆ: ರಾಂಡಮ್ ಕಾಯಿಲ್ )ಗಳ ಪ್ರಧಾನವಾದ ರಚನೆಗಿಂತ ವಿಭಿನ್ನ ರಚನೆಯನ್ನು ಹೊಂದಿರುತ್ತದೆ. ಜೆಲಾಟಿನ್ ಹೇಗೆ ರೂಪಗೊಳ್ಳುತ್ತದೆ; ಎಂದು ಈ ಕ್ರಮ ವಿವರಿಸುತ್ತದೆ. ಜೆಲಾಟಿನ್ ಅನ್ನು ಜೆಲಾಟಿನ್ ಡೆಸೆರಟ್ ಒಳಗೊಂಡಂತೆ ಹಲವಾರು ಬಗೆಯ ತಿನಿಸುಗಳಲ್ಲಿ ಬಳಸುತ್ತಾರೆ. ಆಹಾರ ಪದಾರ್ಥಗಳಲ್ಲದೆ ಜೆಲಾಟಿನ್ ಅನ್ನು ಔಷಧ, ಸೌಂದರ್ಯ ವರ್ಧಕ ಮತ್ತು ಛಾಯಾಗ್ರಹಣ ಉದ್ಯಮಗಳಲ್ಲಿ ಬಳಸುತ್ತಾರೆ.[೩೦] ಪೌಷ್ಟಿಕಾಂಶದ ದೃಷ್ಟಿಯಿಂದ ಕಾಲಜನ್ ಮತ್ತು ಜೆಲಾಟಿನ್ ಕಡಿಮೆ ಗುಣಮಟ್ಟದ ಪ್ರೋಟೀನುಗಳ ಮೂಲವೆನಿಸಿವೆ; ಏಕೆಂದರೆ ಅವುಗಳಲ್ಲಿ ಮನುಷ್ಯರಿಗೆ ಎಲ್ಲಾ ಅಗತ್ಯ ಅಮೀನೊ ಅಮ್ಲಗಳ ಸರಿಯಾದ ಪ್ರಮಾಣವಿರುವುದಿಲ್ಲ, ಅದೂ ಅಲ್ಲದೆ ಅವುಗಳು ಸಂಪೂರ್ಣವಾದ ಪ್ರೋಟೀನುಗಳಲ್ಲ. (ಆಹಾರ ಶಾಸ್ತ್ರ ವಿಶ್ಲೀಷಿಸಿರುವ ಹಾಗೆ). ಕಾಲಜನ್ ಅವಲಂಬಿತ ಆಹಾರ ಪರಿಪೂರಕಗಳ ಉತ್ಪಾದಕರು ಅವರ ಉತ್ಪನ್ನಗಳು ಚರ್ಮ ಹಾಗು ಬೆರಳಿನ ಉಗುರುಗಳ ಗುಣಮಟ್ಟವನ್ನು ಹೆಚ್ಚಿಸಿ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ, ಎಂದು ಹೇಳುತ್ತಾರೆ. ಆದರೆ ಮುಖ್ಯವಾಹಿನಿಯ ವೈಜ್ಞಾನಿಕ ಸಂಶೋಧನೆಗಳು ಅವರುಗಳ ಹೇಳಿಕೆಗಳನ್ನು ಸಮರ್ಥಿಸುವಂತಹ ಯಾವುದೇ ಭದ್ರವಾದ ಆಧಾರ ಒದಗಿಸಿಲ್ಲ.[ಸೂಕ್ತ ಉಲ್ಲೇಖನ ಬೇಕು] ಇಂತಹ ತೊಂದರೆಗಳಿರುವ ವ್ಯಕ್ತಿಗಳಿಗೆ ಪ್ರೋಟೀನು ಕೊರತೆ ಮಾತ್ರವಲ್ಲದೆ ಇತರೆ ಅನೇಕ ಗಮನಿಸದ ಸ್ಥಿತಿಗಳು(ವಯಸ್ಸು, ಒಣ ಚರ್ಮ, ಆರ್ತರೈಟಿಸ್ ಇತ್ಯಾದಿ)ಕೂಡ ಕಾರಣವಿರಬಹದು.ಗ್ರೀಕ್ ಭಾಷೆಯ ಅಂಟು ಎಂಬರ್ಥದ kolla ಯಿಂದ ಬಂದಿದೆ, ಕಾಲಜನ್ ಎಂದರೆ "ಗ್ಲೂ ಪ್ರೋಡುಸರ್" (ಅಂಟು ತಯಾರಕ) ಎಂದರ್ಥ; ಇದು ಅಂಟನ್ನು ತಯಾರಿಸಲು ಪ್ರಾಚೀನ ಕಾಲದ ವಿಧಾನವಾದ ಕುದುರೆ ಮತ್ತು ಇತರೆ ಪ್ರಾಣಿಗಳ ಚರ್ಮ ಮತ್ತು ಸ್ನಾಯುರಜ್ಜುಗಳನ್ನು ಕುದಿಸುವ ಕ್ರಮದಿಂದ ಬಂದಿದೆ. ಕಾಲಜನ್ ನಿಂದ ಮಾಡಲ್ಪಟ್ಟ ಅಂಟನ್ನು [[ಈಜಿಪ್ಟಿನವರಿಂದ |ಈಜಿಪ್ಟಿನವರಿಂದ ]]ಸುಮಾರು 4000 ವರ್ಷಗಳ ಹಿಂದೆ; ಸುಮಾರು 1500 ವರ್ಷಗಳ ಹಿಂದೆ ಇದನ್ನು ಅಮೇರಿಕಾದ ಮೂಲನಿವಾಸಿಗಳು(ನೇಟಿವ್ ಅಮೇರಿಕನ್ಸ್) ತಮ್ಮ ಬಿಲ್ಲುಗಳಲ್ಲಿ ಬಳಸುತ್ತಿದರು. ವಿಶ್ವದ ಅತೀ ಹಳೆಯ ಅಂಟು ಎಂದು ಕಾರ್ಬನ್-ಡೆಟೆಡ್ ವಿಧಾನದ ಮೂಲಕ 8000 ವರ್ಷ ಕ್ಕೂ ಹಳೆಯದು, ಹಿಂದಿನದು ಕಾಲಜನ್ ಎಂದು ನಿಶ್ಚಯಿಸಲಾಗಿದೆ. ಇದನ್ನು ದಾರದ ಬುಟ್ಟಿಯಲ್ಲಿ ರಕ್ಷಣೆ ಕೊಡುವ ಎಳೆಯಾಗಿ, ಮತ್ತು ಕಸೂತಿ ಕೆಲಸಮಾಡಿದ (0}ಬಟ್ಟೆಗಳಲ್ಲಿ, ಹಾಗು ಪಾತ್ರಗಳನ್ನು ಒಟ್ಟಾಗಿಸಲು; ಹಾಗು ಮನುಷ್ಯನ ತಲೆಬುರುಡೆಯ ಮೇಲ್ಭಾಗದಲ್ಲಿ ಮಾಡುವ ಅಲಂಕಾರಕ್ಕೆ ಬಳಸಲಾಗುತ್ತದೆ.[೩೧] ಕಾಲಜನ್ ಸಾಮಾನ್ಯವಾಗಿ ಜೆಲಾಟಿನ್ ಆಗಿ ಪರಿವರ್ತಿತವಾಗುತ್ತದೆ; ಆದರೆ ಒಣ ಪರಿಸ್ಥಿತಿಯ ಕಾರಣ ಇದು ಹಾಗೆ ಉಳಿಯುತ್ತದೆ. ಪ್ರಾಣಿಗಳಿಂದ ತಯಾರಾದ ಆಂಟು ಥರ್ಮೋಪ್ಲಾಸ್ಟಿಕ್ ಗಳು, ಪುನಃಕಾಯಿಸುವುದರಿಂದ ಮೃದುವಾಗುವ ಕಾರಣದಿಂದಾಗಿ, ಅವುಗಳನ್ನು ಈಗಲೂ ವೈಯಲಿನ್ ಮತ್ತು ಗಿಟಾರ್ ನಂತಹ ಸಂಗೀತ ವಾದ್ಯಗಳನ್ನು ಮಾಡಲು ಬಳಸುತ್ತಾರೆ. ಇವುಗಳ ರಿಪೇರಿಗಾಗಿ ಇವುಗಳನ್ನು ಪುನಃ ಬಿಡಿಸಬೇಕಾಗಬಹುದು, ಗಟ್ಟಿಯಾದ ಕೃತಕ ಪ್ಲಾಸ್ಟಿಕ್ ಅಂಟುಗಳು ಒಂದು ರೀತಿಯಲ್ಲಿ ಶಾಶ್ವತವಾದ್ದರಿಂದ ಈ ಗುಣವಿರುವುದಿಲ್ಲ. ಅನೇಕ ಶತಮಾನಗಳಿಂದ ತೊಗಲನ್ನು ಒಳಗೊಂಡಂತೆ ಪ್ರಾಣಿಗಳ ಸ್ನಾಯುರಜ್ಜು ಮತ್ತು ಚರ್ಮವನ್ನು ಅನೇಕ ಉಪಯೋಗಿ ವಸ್ತುಗಳನ್ನು ತಯಾರಿಸಲು ಬಳಸುತ್ತಿದ್ದಾರೆ.ಜೆಲಾಟಿನ್-ರೆಸೊರ್ಸಿನಾಲ್-ಫಾರ್ಮಾಲ್ಡಿಹೈಡ್ ಅಂಟನ್ನು (ಫಾರ್ಮಾಲ್ಡಿಹೈಡ್ ಬದಲು ಕಡಿಮೆ ವಿಷಕರವಾದ ಪೆಂಟಾನೆಡಿಯಲ್ ಮತ್ತು ಎಥಾನೆಡಿಯಲ್ ಬಳಸಿ) ಮೊಲಗಳ ಮೇಲಿನ ಪ್ರಯೋಗಗಳಲ್ಲಿ ಶ್ವಾಸಕೋಶದ ಮೇಲೆ ಮಾಡಿದ ಸೀಳುಗಳನ್ನು ಸರಿಪಡಿಸಲು ಬಳಸಲಾಗುತ್ತಿದೆ.[೩೨]
ವೈದ್ಯಕೀಯ ಉಪಯೋಗಳು
[ಬದಲಾಯಿಸಿ]ಹೃದಯದ ಕಾರ್ಡಿಯಾಕ್ ವಾಲ್ವ್ ರಿಂಗ್ಸ್ (ಹೃದಯದ ಕವಾಟಿನ ವಲಯ), ಹೃದಯದ ಪ್ರಮುಖ ಭಾಗ ಮತ್ತು ಹೃದಯದ ಜೀವಾಳದಲ್ಲಿ ಕ್ರಿಪ್ಷವಾಗಿ ವಿಶಿಷ್ಟ ಮತ್ತು ಚಲಿಸುವ ಹೃದಯದ ದ್ರವ ವವಸ್ಥೆಗೆ ಆಸರೆಯಾಗಿ ಕಾಲಜನ್ ಕಾರ್ಯನಿರ್ವಹಿಸುತ್ತದೆ. ಅತೀ ಹೆಚ್ಚಿನ ಒತ್ತಡದ ನಡುವೆಯು ಪ್ರತಿ ವಾಲ್ವುಲಾರ್ ಲೀಫ್ ಲೆಟ್(ಕಾವಿಟಿನ ಎಳೆಯ)ಗಳು ಅದರ ಆಕಾರವನ್ನು ಉಳಿಸಿಕೊಳ್ಳುವಂತೆ ಕಾಲಜನ್ ಮಾಡುತ್ತದೆ. ವಯಸ್ಸಾದ ಹಾಗೆ ಸಹಜ ಕ್ರಿಯೆಯಾಗಿ ಕಾಲಜನ್ ಗಳಲ್ಲಿ ಕ್ಯಾಲ್ಸಿಯಮ್ ನಿಕ್ಷೇಪಣೆಗೊಳ್ಳುತ್ತದೆ. ಇಂತಹ ನಿಕ್ಷೇಪಗಳು ಇಂದಿನ ಕಾರ್ಡಿಯಾಕ್ ಇಮೇಜಿಂಗ್ ತಂತ್ರಜ್ಞಾನದಿಂದ ಕಾರ್ಡಿಯಾಕ್ ಇನ್ಪುಟ್ ನಲ್ಲಿ ಹಾಗು ಕಾರ್ಡಿಯಾಕ್ ಔಟ್ಪುಟ್ ನಲ್ಲಿ ರಕ್ತದ ಪ್ರಮಾಣ ನಿರ್ಧರಿಸುವಲ್ಲಿ ಸಹಾಯ ಮಾಡುತ್ತದೆ. ಕ್ಯಾಲ್ಷಿಯಮ್ ಸ್ಕೋರಿಂಗ್ ನಂತಹ ನಿರ್ದಿಷ್ಟವಾದ ಇಮೆಜಿಂಗ್ ತಂತ್ರಜ್ಞಾನವು, ಇಂತಹ ತಂತ್ರಜ್ಞಾನದ ಉಪಯೋಗವನನ್ನು ತೋರಿಸುತ್ತದೆ, ಅದರಲ್ಲೂ ಪ್ರಮುಖವಾಗಿ ವಯಸ್ಸಾದ ರೋಗಿಗಳಲ್ಲಿ ಕಾಲಜನ್ ರೋಗಲಕ್ಷಣಗಳ ಅಧಾರಕ್ಕೆ ಒಳಪಟ್ಟಂತೆ ಇರುತ್ತವೆ.
ಕಾಲಜನ್ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ; ಇದಲ್ಲದೆ ಸುಟ್ಟುಗಾಯಗಳನ್ನು ಗುಣಪಡಿಸುವ ಸಾಧನವಾಗಿ; ಮೂಳೆಗಳ ಪುನಾರಚನೆಯಲ್ಲಿ ಹಾಗು ಹಲವು ವಿವಿಧ ದಂತವೈದ್ಯಕೀಯ, ಅರ್ಥೋಪೆಡಿಕ್ ಮತ್ತು ಶಸ್ತ್ರಚಿಕಿತ್ಸೆಗಳಲ್ಲಿ ಕೂಡ ಬಳಕೆಯಾಗುತ್ತದೆ. ಕೆಲವು ಗಮನಾರ್ಹ ಅಂಶಗಳು:#ಸೌಂದರ್ಯವರ್ಧಕವಾಗಿ ಬಳಸಿದಾಗ, ದೈಹಿಕ ಪ್ರತಿರೋಧದಿಂದಾಗಿ (ಅಲರ್ಜಿಕ್ ರಿಯಾಕ್ಷನ್) ದೇಹವು, ಸುದೀರ್ಘವಾಗಿ ಕೆಂಪಾಗಿರುವ ಸಾಧ್ಯತೆಯಿದೆ; ಸೌಂದರ್ಯವರ್ಧಕವಾಗಿ ಬಳಸುವುದಕ್ಕು ಮೊದಲು ದೇಹದ ಗಮನ ಸೆಳೆಯದ ಒಂದು ಚಿಕ್ಕ ಭಾಗದಲ್ಲಿ ಪರೀಕ್ಷೆ ಮಾಡುವುದರಿಂದ ಈ ಪರಿಸ್ಥಿಯನ್ನು ಸರಿಸುಮಾರು ಸಂಪೂರ್ಣವಾಗಿ ನಿಗ್ರಹಿಸಬಹುದು. #ಸಾಮಾನ್ಯವಾಗಿ ವೈದ್ಯಕೀಯವಾಗಿ ಬಳಸುವ ಕಾಲಜನ್ ಗಳನ್ನು BSE (ಬೋವೈನ್ ಸ್ಪಾಂಜಿಫಾರ್ಮ ಎನ್ಸೆಫಾಲೊಪತಿ)ಮುಕ್ತ ಪ್ರಾಣಿಗಳೆಂದು ಧೃಡಿಕರಣ ಪಡೆದ ಎಳೆಯ ದನ,ಗೋವುಗಳ ಮಾಂಸಗಳಿಂದ ಉತ್ಪತ್ತಿ ಮಾಡಲಾಗುತ್ತದೆ. ಬಹಳಷ್ಟು ಉತ್ಪಾದಕರು "ಕ್ಲೋಸ್ಡ್ ಹೆರ್ಡ್ಸ್" ಗಳ ಪ್ರಾಣಿಗಳನ್ನು ಅಥವಾ BSE ಯು ಇದುವರೆಗು ವರದಿಯಾಗದ ಆಸ್ಟ್ರೇಲಿಯಾ, ಬ್ರೆಸಿಲ್ ಮತ್ತು ನ್ಯೂಜಿಲ್ಯಾಂಡ್ ಗಳಂತಹ ದೇಶಗಳ ಪ್ರಾಣಿಗಳನ್ನು ಬಳಸಲಾಗುತ್ತದೆ.
- ಪಾರ್ಸೈನ್ (ಹಂದಿ) ಟಿಸ್ಯುವನ್ನು ವಿವಿಧ ಶಸ್ತ್ರಚಿಕಿತ್ಸೆಗಳಲ್ಲಿ ಉಪಯೋಗಿಸುವ ಕಾಲಜನ್ ಷೀಟ್ ಅನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ.
- ಪರ್ಯಾಯವಾಗಿ ರೋಗಿಯ ಕೊಬ್ಬಿನಂಶ, ಹೈಲುರೊನಿಕ್ ಅಮ್ಲ, ಅಥವಾಪಾಲಿಅಕ್ರೈಲ್ ಅಮೈಡ್ ಜೆಲ್ ಗಳನ್ನು ಬಳಸಿ ಸುಲಭವಾಗಿ ತಯಾರಿಸಬಹುದು.
ಸುಟ್ಟು ಗಾಯಗಳ ಚಿಕಿತ್ಸೆಯಲ್ಲಿ ಕೃತಕ ಚರ್ಮದ ರಚನೆಯಲ್ಲಿ ಕಾಲಜನ್ ಅನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಈ ಕಾಲಜನ್ ಗಳನ್ನು ಬೊವೈನ್( ಗೋವಿನ ಪ್ರಬೇಧಕ್ಕೆ ಸೇರಿದ),ಇಕ್ವೈನ್ (ಕುದುರೆ ಪ್ರಬೇಧಕ್ಕೆ ಸೇರಿದ), ಯಾ ಪಾರ್ಸೈನ್(ಹಂದಿಯ ಪ್ರಬೇಧಕ್ಕೆ ಸೇರಿದ), ಹಾಗು ಕೆಲವೊಮ್ಮೆ ಮನುಷ್ಯನ ರ ಮೂಲದಿಂದ ಉತ್ಪತ್ತಿಸಲಾಗುತ್ತದೆ; ಕೆಲವೊಮ್ಮೆ ಇದರೊಂದಿಗೆ ಸಿಲಿಕೋನ್, ಗ್ಲೈಕೊಸಮಿನೊಗ್ಲೈಕಾನ್ ಮತ್ತು ಫೈಬ್ರೊಬ್ಲಾಸ್ಟ್, ಗ್ರೋತ್ ಫಾಕ್ಟರ್ ಮತ್ತು ಇತರೆ ವಸ್ತುಗಳ ಸಂಯುಕ್ತದೊಂದಿಗೆ ಬಳಸಲಾಗುತ್ತದೆ.ಕೀಲುಗಳ ಚಲನಶೀಲತೆಗೆ ಸಹಾಯಮಾಡುವ ಪರಿಪೂರಕ ವಸ್ತು (ಜಾಯಿಂಟ್ ಮೊಬಿಲಿಟಿ ಸಪ್ಲಿಮೆಂಟ್)ವಾಗಿ ಕಾಲಜನ್ ಅನ್ನು ಮಾರಲಾಗುತ್ತಿದೆ.[೩೩] ಪ್ರೋಟೀನುಗಳು ಸೇರುವ ಮುನ್ನ ಆಮೀನೊ ಆಮ್ಲವಾಗಿ ವಿಚ್ಛೇದಿತಗೊಳ್ಳುವ ಕಾರಣ, ಬಾಯಿ ಮೂಲಕ ಸೇವಿಸುವ ಕಾಲಜನ್ ಗಳು ದೇಹದ ಉಜಕ ಟಿಸ್ಯುಗಳ ಮೇಲೆ ಹೆಚ್ಚಿನ ಪರಿಣಾಮ ಬೀರದು.ಪ್ರತ್ಯೇಕ ಅಮೀನೊ ಅಮ್ಲಗಳನ್ನು ಪರಿಪೂರಕವನ್ನಾಗಿ ಸ್ವೀಕರಿಸದಾಗ ಆಗುವ ಪರಿಣಮ ಹೊರತುಪಡಿಸಿದರೆ.ಇತ್ತೀಚೆಗೆ, ಪ್ರಾಣಿಗಳಿಂದ ಉತ್ಪತ್ತಿಯಾಗುವ ಕಾಲಜನ್ ಗೆ ಪರ್ಯಾಯವನ್ನು ಕಂಡುಹಿಡಿಯಲಾಗಿದೆ. ಮನುಷ್ಯರಿಂದ ತಯಾರಿಸಿದ ಈ ಕಾಲಜನ್ ಸ್ವಲ್ಪ ದುಬಾರಿಯಾದರೂ, ದಾನಿಗಳ ಕಾಡವೆರ್ಸ್, ಪ್ಲಾಸೆಂಟಾ, ಮತ್ತು ಗರ್ಭಪಾತವಾದ ಭ್ರೂಣಗಳಿಂದ ಉತ್ಪತ್ತಿಮಾಡಬಹುದು; ಇದರಿಂದಾಗಿ ಉಂಟಾಗಬಹುದಾದ ಪ್ರತಿರೋಧಕ (ಇಮ್ಯೂನ್)ಕ್ರಿಯೆಗಳನ್ನು ಕಡಿಮೆ ಮಾಡಬಹುದು. ಅದನ್ನು ಚರ್ಮದ ಮೂಲಕ ಹೀರಿಕೊಳ್ಳಲಾಗದಿದ್ದರೂ, ಕಾಲಜನ್ ಅನ್ನು ಸೌಂದರ್ಯವರ್ಧಕವಾಗಿ ಬಳಸುತ್ತಾರೆ.[೩೪]
ಪಳೆಯುಳಿಕೆ ದಾಖಲೆ
[ಬದಲಾಯಿಸಿ]ಕಾಲಜನಿನನ್ನು ತಯಾರಿಸಲು ಹೆಚ್ಚಿನ ಪ್ರಮಾಣದ ವಾಯುಮಂಡಲದ ಆಮ್ಲಜನಕ(ಆಕ್ಸಿಜನ್)ನ ಅವಶ್ಯಕತೆಯಿರವುದರಿಂದ, ರಚನೆಯಲ್ಲಿ ಸಂಕಿರ್ಣವಾದ ಪ್ರಾಣಿಗಳು ವಾಯುಮಂಡಲದಲ್ಲಿ ಕಾಲಜನ್ ಉತ್ಪಾದಿಸಲು ಬೇಕಾದಷ್ಟು ಆಮ್ಲಜನಕವಿಲ್ಲದವರೆಗೆ ಹುಟ್ಟುವುದಿಲ್ಲ. ಕಾಲಜನ್ ನ ಉಗಮವು ಹೊರಚರ್ಮ(ಕುಟಿಕಲ್), ಚಿಪ್ಪು,ಬುರಡೆ, ಪೊರೆ (ಶೆಲ್)ಮತ್ತು ಸ್ನಾಯು(ಮಸಲ್)ಗಳ ರಚನೆಗೆ ಕಾರಣವಾಗಿರಬಹುದು. ಆದರೆ, ಫಾಸ್ಸಿಲ್ಲುಗಳಲ್ಲಿ(ಪ್ರಾಣಿಗಳ ಅವಶೇಷ) ಕಾಲಜನ್ ಉಳಿದಿರುವ ಸಾಧ್ಯತೆ ಬಹಳ ಕಡಿಮೆ.[೩೫] ಸುಮಾರು ೮೦ million years ago ವರ್ಷಗಳಷ್ಟು ಹಿಂದೆ ಇದ್ದ ಡೈನೊಸಾರ್ ಗಳ, ಪಳೆಯುಳಿಕೆಗಳಲ್ಲಿ ಕಾಲಜನ್ ಸಿಕ್ಕಿದೆ, ಎನ್ನುವುದಕ್ಕೆ ಆಧಾರಗಳು ಜಾಸ್ತಿಯಾಗುತ್ತಿದೆಯಾದರೂ ಈ ವಿಷಯವು ಇನ್ನು ವಿವಾದಪೂರ್ಣವಾಗಿದೆ.[೩೬] ಅಲ್ಲದೆ ಟೆರೊಸಾರಸ್ ಗಳ ರಕ್ಕೆಗಳಲ್ಲಿ ಕಾಲಜನ್ ಫೈಬರ್,ಅಕ್ಟಿನೊಫೈಬ್ರಿಲ್ಸ್ ಗಳು ಇದೆಯೆಂಬುದು ಗಮನಾರ್ಹ ಅಂಶವಾಗಿದೆ.
ಕಲೆ
[ಬದಲಾಯಿಸಿ]ಜೂಲಿಯನ್ ವಾಸ್-ಆಂಡ್ರೆ, ಬಿದಿರು ಮತ್ತು ಸ್ಟೇನ್ ಲೆಸ್ ಸ್ಟೀಲ್ ಗಳನ್ನು ಬಳಸಿ ಕಾಲಜನ್ ವಿನ್ಯಾಸವನ್ನು ಆಧರಿಸಿ ಶಿಲ್ಪಕೃತಿಯನ್ನು ರಚಿಸಿದ್ದಾನೆ. ಅವನ ಆಕೃತಿ ಅನ್ರಾವೆಲ್ಲಿಂಗ್ ಕಾಲಜನ್ ಅವನ ಪ್ರಕಾರ, "ವಯಸ್ಸಾಗುವ ಮತ್ತು ಬೆಳವಣಿಗೆ ಕ್ರಿಯೆಗೆ ಒಂದು ರೂಪಕ".[೩೭][೩೮]
ಇವನ್ನೂ ನೋಡಿ
[ಬದಲಾಯಿಸಿ]- ಪ್ರಾಣಿಗಳಿಂದ ತಯಾರಿಸಿದ ಅಂಟು (ಅನಿಮಲ್ ಗ್ಲೂ)
- ಕಾಲಜನ್ ವಿಭಜನೆ ಮತ್ತು ಹೊಸರೂಪ ಕೊಡುವುದರಲ್ಲಿ ಪಾಲ್ಗೊಳ್ಳುವ ಕಾಲಜನೆಸ್ , ಎನ್ನುವ ಎಂಜೈಮ್. ಕಾಲಜನ್ ಅನ್ನು ಗುರಿಯನ್ನಾಗಿಸುವ ಇತರೆ ಪ್ರೋಟಿಯೆಸ್ ಗಳ ಬಗ್ಗೆ ಹೆಚ್ಚು ತಿಳಿಯಲು ದಿ ಪ್ರೋಟಿಯೊಲೈಸಿಸ್ ಮಾಪ್ ನೋಡಿರಿ.
- ಎಹ್ಲೆರಸ್-ಡಾನ್ಲಾಸ್ ಸಿಂಡ್ರೋಮ್
- ಫೈಬ್ರಸ್ ಪ್ರೋಟೀನ್
- ಜೆಲಾಟೈನ್
- ಹೈಪರ್ ಮೊಬಿಲಿಟಿ ಸಿಂಡ್ರೋಮ್
- LOXL1
- LOXL2
- LOXL3
- LOXL4
- ಮಾರ್ಫನ್ ಸಿಂಡ್ರೋಮ್
- ಒಸ್ಟಯಾಡ್
ಆಕರಗಳು
[ಬದಲಾಯಿಸಿ]- ↑ ಮುಲರ್, ವರ್ನರ್ ಇ.ಜಿ. ದಿ ಆರೀಜಿನ್ ಆಫ್ ಮೆಟಾಜೋನ್ ಕಾಂಪ್ಲೇಕ್ಸಿಟಿ: ಪೊರಿಫೆರಾ ಆಸ್ ಇಂಟಿಗ್ರೇಟೆಡ್ ಅನಿಮಲ್ಸ್. ಇಂಟಿಗ್ರೇಟೆಡ್ ಕಾಂಪುಟೇಷನಲ್ ಬಯಾಲಜಿ, 43:3–10, 2003.
- ↑ ಗ್ಲೋರಿಯಾ ಎ. ಡಿ ಲುಲ್ಲೊಡಾಗೆರ್, ಷಾನ್ ಎಂ. ಸ್ವೀನೀ, ಜಾರ್ಮೊ ಕೊರ್ಕೊ, ಲೀನಾ ಅಲಾ-ಕೊಕೊ, ಮತ್ತು ಜೇಮ್ಸ್ ಡಿ. ಸಾನ್ ಅಂಟೊನಿಯೊ; ಮ್ಯಾಪ್ಪಿಂಗ್ ದಿ ಲಿಗ್ಯಾಂಡ್-ಬೈಂಡಿಂಗ್ ಸೈಟ್ಸ್ ಅಂಡ್ ಡಿಸೀಸ್-ಅಸೋಸಿಯೆಟೆಡ್ ಮುಟೆಷನ್ಸ್ ಆನ್ ದಿ ಮೊಸ್ಟ ಅಬಂಡಂಟ್ ಪ್ರೋಟೀನ್ ಇನ್ ದಿ ಹ್ಯೂಮನ್, ಟೈಪ್ I ಕಾಲಜನ್ Archived 2009-06-15 ವೇಬ್ಯಾಕ್ ಮೆಷಿನ್ ನಲ್ಲಿ.; J. Biol. .Chem. , Vol. 277, Issue 6, 4223-4231, ಫೆಬ್ರುವರಿ 8, 2002
- ↑ ಸಿಕ್ಕೊರಸ್ಕಿ, ಡಿಸಿಸ್ ಲಾ ಇ. (2001) ಕೆಮಿಕಲ್ ಅಂಡ್ ಫಂಕ್ಷನಲ್ ಪ್ರಾಪರ್ಟಿಸ್ ಆಫ್ ಫುಡ್ ಪ್ರೋಟೀನ್ಸ್. CRC ಪ್ರೆಸ್. p. 242
- ↑ ವೈಕಾಫ್, ಆರ್., ಆರ್. ಕೋರೆ, ಮತ್ತು ಜೆ. ಬಿಸ್ಕೊ, ಎಕ್ಸ್-ರೆ ರಿಪ್ಲೆಕ್ಷೆನ್ಸ್ ಆಫ್ ಲಾಂಗ್ ಸ್ಪೇಸಿಂಗ್ ಫ್ರಮ್ ಟೆಂಡನ್. Science, 1935. 82: p. 175–176.
- ↑ ಕ್ಲಾರ್ಕ್, ಜಿ., ಪಾರ್ಕರ್, ಇ., ಚಾಡ್, ಜೆ. ಮತ್ತು ವಾರೆನ್, ಡಬ್ಲ್ಯೂ.ಜೆ., ನ್ಯೂ ಮೆಷರ್ಮೆಂಟ್ಸ್ ಆಫ್ ಪ್ರಿವಿಯಸಲಿ ಅನ್ ನೋನ್ ಲಾರ್ಜ್ ಇಂಟರ್ ಪ್ಲೇನಾರ್ ಸ್ಪೇಸಿಂಗ್ಸ್ ಇನ್ ನಾಚುರಲ್ ಮಟಿರಿಯಲ್ಸ್. J. Amer. Chem. Soc, 1935. 57: p. 1509–1509.
- ↑ GNR — ಎ ಟ್ರಿಬ್ಯೂಟ್ - ರಿಸೊನೆನ್ಸ್ - ಅಕ್ಟೋಬರ್ 2001
- ↑ "ಆರ್ಕೈವ್ ನಕಲು" (PDF). Archived from the original (PDF) on 2008-12-16. Retrieved 2010-05-12.
- ↑ ಜಿ.ಎನ್. ರಾಮಚಂದ್ರನ್- ನೇಚರ್ Structural ಅಂಡ್ ಮಾಲಿಕುಲಾರ್ ಬಯಾಲಜಿ
- ↑ ಫ್ರೇಸರ್, ಅರ್.ಡಿ., ಟಿ.ಪಿ. ಮಾಕ್ ರೇ, ಮತ್ತು ಇ. ಸುಜುಕಿ, ಚೈನ್ ಕನ್ಪರಮೇಷನ್ ಇನ್ ದಿ ಕಾಲಜನ್ ಮಾಲಿಕ್ಯೂಲ್. J Mol Biol, 1979. 129(3): p. 463–81
- ↑ ಒಕುಯಾಮ, ಕೆ., et al., ಕ್ರಿಸ್ಟಲ್ ಅಂಡ್ ಮಾಲಿಕುಲಾರ್ ಸ್ಟ್ರಕ್ಚರ್ ಅಫ್ ಎ ಕಾಲಜನ್-ಲೈಕ್ ಪಾಲಿಪೆಪ್ ಟೈಡ್(Pro-Pro-Gly)10. J Mol Biol, 1981. 152(2): p. 427–43.
- ↑ ಟ್ರಾಬ್, ಡಬ್ಲ್ಯೂ., ಎ. ಯೋನಾತ್, ಮತ್ತು ಡಿ.ಎಂ. ಸೀಗಲ್, ಆನ್ ದಿ ಮಾಲಿಕುಲಾರ್ ಸ್ಟ್ರಕ್ಚರ್ ಅಫ್ ಕಾಲಜನ್. Nature, 1969. 221(5184): p. 914–7.
- ↑ ಬೆಲ್ಲಾ, ಜೆ., ಎಂ. ಯಿಟನ್, ಬಿ. ಬ್ರಾಡ್ಸಕಿ, ಮತ್ತು ಎಚ್.ಎಂ. ಬೆರ್ಮನ್, ಕ್ರಿಸ್ಟಲ್ ಅಂಡ್ ಮಾಲಿಕುಲಾರ್ ಸ್ಟ್ರಕ್ಚರ್ ಆಫ್ ಎ ಕಾಲಜನ್-ಲೈಕ್ ಪೆಪ್ಟೈಡ್ ಅಟ್ 1.9 A ರೆಸಲ್ಯೂಷನ್. Science, 1994. 266(5182): p. 75–81.
- ↑ ಹೂಮ್ಸ್, ಡಿ.ಜೆ. ಅಂಡ್ ಎ. ಮಿಲ್ಲರ್, ಕ್ವಾಸಿ -ಹೆಕ್ಸಾಗೊನಲ್ ಮಾಲಿಕುಲಾರ್ ಪ್ಯಾಪಿಂಗ್ ಇನ್ ಕಾಲಜನ್ ಫೈಬ್ರಿಲ್ಸ್. Nature, 1979. 282(5741): p. 878–80.
- ↑ ಜೆಸಿಯಾರ್, ಜೆ.ಸಿ., ಎ. ಮಿಲ್ಲರ್, ಮತ್ತು ಸಿ. ಬೆರ್ತಹೆಟ್-ಕೊಲೊಮಿನಾಸ್, ಕ್ರಿಸ್ಟಲೈನ್ ತ್ರೀ-ಡೈಮೆನ್ ಷನಲ್ ಪ್ಯಾಪಿಂಗ್ ಇಸ್ ಜೆನೆರಲ್ ಕ್ಯಾರಕ್ಟರಿಸ್ಟಿಕ್ ಆಫ್ ಟೈಪ್ I ಕಾಲಜನ್ ಫೈಬ್ರಿಲ್ಸ್. FEBS Lett, 1980. 113(2): p. 238–40.
- ↑ ಫ್ರೇಸರ್, ಅರ್.ಡಿ.ಬಿ. ಮತ್ತು ಟಿ.ಪಿ. ಮಾಕ್ ರೆ, ಯುನಿಟ್ ಸೆಲ್ ಅಂಡ್ ಮಾಲಿಕುಲಾರ್ ಕನೆಕ್ಟಿವಿಟಿ ಇನ್ ಟೆಂಡನ್ ಕಾಲಜನ್. Int. J. Biol. Macromol., 1981. 3: p. 193–200.
- ↑ ಫ್ರೇಸರ್, ಅರ್.ಡಿ., ಟಿ.ಪಿ. ಮಾಕ್ ರೆ, ಮತ್ತು ಎ. ಮಿಲ್ಲರ್, ಮಾಲಿಕುಲಾರ್ ಪ್ಯಾಪಿಂಗ್ ಇನ್ ಟೈಪ್ I ಕಾಲಜನ್ ಫೈಬ್ರಿಲ್ಸ್. J Mol Biol, 1987. 193(1): p. 115–25.
- ↑ ವೆಸ್ಸ್, ಟಿ.ಜೆ., et al., ಮಾಲಿಕುಲಾರ್ ಪ್ಯಾಪಿಂಗ್ ಆಫ್ ಟೈಪ್ I ಕಾಲಜನ್ ಇನ್ ಟೆಂಡನ್. J Mol Biol, 1998. 275(2): p. 255–67.
- ↑ ೧೮.೦ ೧೮.೧ ೧೮.೨ ಒರ್ಗೆಲ್, ಜೆ.ಪಿ., et al., "ಮೈಕ್ರೊಫೈಬ್ರಿಲಾರ್ ಸ್ಟ್ರಕ್ಚರ್ ಆಫ್ ಟೈಪ್ I ಕಾಲಜನ್ ಇನ್ ಸಿಟು". Proc Natl Acad Sci U S A , 2006. 103(24): p. 9001–5.
- ↑ ಹೂಮ್ಸ್, ಡಿ.ಜೆ., ಬಿಲ್ದಿಂಗ್ ಕಾಲಜನ್ ಮಾಲಿಕ್ಯೂಲ್ಸ್, ಫೈಬ್ರಿಲ್ಸ್ ಮತ್ತು ಸುಪ್ರಾಫೈಬ್ರಿಲಾರ್ ಸ್ಟ್ರಕ್ಚರ್ಸ್ . J Struct Biol, 2002. 137(1-2): p. 2–10
- ↑ ೨೦.೦ ೨೦.೧ ಹೂಮ್ಸ್, ಡಿ.ಜೆ., ದಿ ಕಾಲಜನ್ ಸುಪರ್ ಫ್ಯಾಮಿಲಿ-ಡೈವರ್ಸ್ ಸ್ಟ್ರಕ್ಚರ್ಸ್ ಅಂಡ್ ಅಸ್ಸೆಂಬ್ಲಿಸ್. Essays Biochem, 1992. 27: p. 49–67.
- ↑ ಹೂಮ್ಸ್, ಡಿ.ಜೆ. ಮತ್ತು ಎ. ಮಿಲ್ಲರ್, ಕ್ವಾಸಿ-ಹೆಕ್ಸಾಗೊನಲ್ ಮಾಲಿಕುಲಾರ್ ಪ್ಯಾಪಿಂಗ್ ಇನ್ ಕಾಲಜನ್ ಫೈಬ್ರಿಲ್ಸ್. Nature, 1979. 282(5741): p. 878-80.
- ↑ ಪೆರುಮಾಲ್, ಎಸ್., ಒ. ಅಂಟಿಪೊವ, ಮತ್ತು ಜೆ.ಪಿ. ಒರ್ಗೆಲ್, ಕಾಲಜನ್ ಫೈಬ್ರಿಲ್ ಅರ್ಕಿಟೆಕ್ಚರ್, ಡೊಮೈನ್ ಆರ್ಗಾನೈಸೇಷನ್, ಆಂಡ್ ಟ್ರಿಪಲ್-ಹೆಲಿಕಲ್ ಕನ್ಫರ್ಮೇಷನ್ ಗೊವೆರನ್ ಇಟ್ಸ್ ಪ್ರೊಟೀಯೊಲೈಸಿಸ್. Proc Natl Acad Sci U S A, 2008. 105(8): p. 2824–9.
- ↑ ಸ್ವೀನಿ, ಎಸ್.ಎಮ್., et al., ಕಾಂಡಿಡೇಟ್ ಸೆಲ್ ಅಂಡ್ ಮಾಟ್ರಿಕ್ಸ್ ಇಂಟರಾಕ್ಷನ್ ಡೊಮೈನ್ಸ್ ಆನ್ ದಿ ಕಾಲಜನ್ ಫೈಬ್ರಿಲ್, ದಿ ಪ್ರಿಡಾಮಿನೆಂಟ್ ಪ್ರೋಟಿನ್ ಆಫ್ ವರ್ಟಿಬ್ರೆಟ್ಸ್. J Biol Chem, 2008. 283(30): p. 21187–97.
- ↑ ವಾರ್ಡೋಸ್ಕಿ, ಟಿ., et al., ಟೈಪ್ I ಕಾಲಜನ್ ಅಂಡ್ ಕಾಲಜನ್ ಮಿಮೆಟಿಕ್ಸ್ ಆಸ್ ಅಂಜಿಯೊಜೆನಿಸಿಸ್ ಪ್ರಮೊಟಿಂಗ್ ಸುಪರ್ ಪಾಲಿಮರ್ಸ್. Curr Pharm Des, 2007. 13(35): p. 3608–21.
- ↑ ಸೋಡೆರ್ಹಾಲ್ ಸಿ, ಮಾರೆನ್ಹೊಲ್ಸ್ ಐ, ಕ್ರೆಶ್ಚರ್ ಟಿ, ರುಸ್ಚೆನಡಾರ್ಪ್ ಎಫ್, ಎಸ್ಪಾರಸ-ಗಾರಡಿಲ್ಲೊ ಜೆ, et al., ವೇರಿಯೆಂಟ್ಸ್ ಇನ್ ಎ ನಾವಲ್ ಎಪಿಡೆರ್ಮಲ್ ಕಾಲಜನ್ ಜೀನ್ (COL29A1) ಆರ್ ಅಸೋಸಿಯೇಟಡ್ ವಿತ್ ಎಟೊಪಿಕ್ ಡರ್ಮಟೈಟಿಸ್. PLoS Biology Vol. 5, No. 9, e242 doi:10.1371/journal.pbio.0050242
- ↑ ಹೌಕ್, ಜೆ.ಸಿ.; ಶರ್ಮ, ವಿ.ಕೆ.; ಪಟೇಲ್, ವೈ.ಎಂ.; ಗ್ಲಾಡ್ನರ್, ಜೆ.ಎ. (1968) “ಇಂಡಕ್ಷನ್ ಆಫ್ ಕಾಲಜಿನೊಲೈಟಿಕ್ ಅಂಡ್ ಪ್ರೋಟಿಯೊಲೈಟಿಕ್ ಅಕ್ಟಿವಿಟಿಸ್ ಬೈ ಅಂಟಿಇನ್ಫಲ್ಮೇಟರಿ ಡ್ರಗ್ಸ್ ಇನ್ ದಿ ಸ್ಕಿನ್ ಅಂಡ್ ಫೈಬ್ರೊಬ್ಲಾಸ್ಟ್ಸ್”. Biochemical Pharmacology 17: 2081,
- ↑ AJR ಆರ್ಟಿಕಲ್ ಎಬೌಟ್ ಲುಪುಸ್ ಅಂಡ್ ಅದರ್ ಕಾಲಜನ್ ಡಿಸ್ ಆರ್ಡರ್ಸ್
- ↑ ಫ್ರಾಟ್ಸ, ಪಿ. ಕಾಲಜನ್: Structure ಅಂಡ್ ಮೆಕಾನಿಕ್ಸ್. ಸ್ಪ್ರಿಂಗರ್, ನ್ಯೂ ಯಾರ್ಕ್, 2008
- ↑ ಬುಹ್ಲೆರ್, ಎಂ.ಜೆ., "ನೇಚರ್ ಡಿಸೈನ್ಸ್ ಟಫ್ ಕಾಲಜನ್: ಎಕ್ಸ್ ಪ್ಲೇನಿಂಗ್ ದಿ ನಾನೊಸ್ಟ್ರಕ್ಚರ್ ಆಫ್ ಕಾಲಜನ್ ಫೈಬ್ರಿಲ್ಸ್". Proc Natl Acad Sci U S A , 2006. 103(33): p. 12285–90.
- ↑ "ಜೆಲಾಟಿನ್ಸ್ ಅಡ್ವಾಂಟೆಜ್ಸ್: ಹೆಲ್ತ್, ನ್ಯೂಟ್ರಿಷನ್ ಅಂಡ್ ಸೇಫಟಿ". Archived from the original on 2012-06-09. Retrieved 2010-05-12.
- ↑ "ಕಂಡುಹಿಡಿಯಲಾಗಿರುವ ಅತ್ಯಂತ ಹಳೆಯ ಅಂಟು". Archived from the original on 2005-12-17. Retrieved 2010-05-12.
- ↑ Ann Thorac Surg. 1994 Jun; 57(6): 1622–7
- ↑ ಹೈಡ್ರೊಲೈಸ್ಡ್ ಕಾಲಜನ್ ಪಿಲ್ಸ್ ಯುಸೇಜಸ್
- ↑ http://www.articlesbase.com/skin-care-articles/can-collagen-be-absorbed-into-the-skin-or-is-it-all-just-one-big-hoax-674325.html
- ↑ doi:10.1111/j.1502-3931.1996.tb01844.x
This citation will be automatically completed in the next few minutes. You can jump the queue or expand by hand - ↑ doi:10.1126/science.1165069
This citation will be automatically completed in the next few minutes. You can jump the queue or expand by hand - ↑ Ward, Barbara (2006). "'Unraveling Collagen' structure to be installed in Orange Memorial Park Sculpture Garden". Expert Rev. Proteomics. 3 (2): 174. doi:10.1586/14789450.3.2.169.
{{cite journal}}
: Unknown parameter|month=
ignored (help) - ↑ "ಜೆ. ವಾಸ್-ಅಂಡ್ರೇ ಯೊಂದಿಗೆ ಸೀಡ್ ಮಾಗಜೈನ್ ನಲ್ಲಿ ಪ್ರಕಟವಾಗಿರುವ "ಸೀಯಿಂಗ್ ಬಿಲೊ ದಿ ಸರ್ಫೇಸ್" ಸಂದರ್ಶನ". Archived from the original on 2012-06-29. Retrieved 2010-05-12.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ದಿ ಕಾಲಜನ್ ಪ್ರೋಟೀನ್
- ಕಾಲಜನ್ ನ 12 ಬಗೆಗಳು
- ವಿಧI ಮತ್ತು ವಿಧ III ಕಾಲಜನ್ ಮುಟೆಷನ್ ಗಳ ಮಾಹಿತಿ ಸಂಗ್ರಹ.
- ಕಾಲಜನ್ ವಿಜ್ಞಾನ.ಡಿರಬಿಕ್ಸ Archived 2011-04-02 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಲಜನ್ ದೃಢತೆಯನ್ನು ಲೆಕ್ಕಹಾಕುವುದು.
- ವಿಧ I ಮತ್ತು ವಿಧ IV ಕಾಲಜನ್ ವಿನ್ಯಾಸಗಳ ಕಂಪ್ಯೂಟರ್-ಸೃಷ್ಟಿತ ಚಿತ್ರಣ (ಅನಮೇಷನ್). Archived 2011-01-04 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂಟರ್ಜಿನ್-ಕಾಲಜನ್ ಇಂಟರ್ಫೇಸ್, PMAP (ದಿ ಪ್ರೋಟಿಯೊಲೈಸಿಸ್ )—ಅನಿಮೇಷನ್
- ಇಂಟರ್ಜಿನ್-ಕಾಲಜನ್ ಬೈಂಡಿಂಗ್ ಮಾಡಲ್, PMAP (ದಿ ಪ್ರೋಟಿಯೊಲೈಸಿಸ್ ಮ್ಯಾಪ್)—ಅನಿಮೇಷನ್
- ಕಾಲಜನ್-ಇಂಟರ್ಜಿನ್ ಅಟಾಮಿಕ್ ಡಿಟೈಲ್ , PMAP (ದಿ ಪ್ರೋಟಿಯೊಲೈಸಿಸ್ ಮ್ಯಾಪ್)—ಅನಿಮೆಷನ್
- ಮೆಡಿಕಲ್ ಕಾಲಜನ್ 3D Archived 2010-06-26 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages with incomplete DOI references
- CS1 errors: unsupported parameter
- CS1: long volume value
- Articles needing additional references from March 2010
- Articles with invalid date parameter in template
- All articles needing additional references
- Articles with unsourced statements from December 2008
- Articles with unsourced statements from November 2009
- Commons link is on Wikidata
- Articles that show a Medicine navs template
- ರಸಾಯನಶಾಸ್ತ್ರ
- ಆಮ್ಲಗಳು
- ರಚನೆಯಲ್ಲಿ ಸಹಾಯಮಾಡುವ ಪ್ರೋಟೀನುಗಳು
- ಎಡಿಬಲ್ ಥಿಕ್ ನಿಂಗ್ ಎಜೆಂಟ್ (ತಿನ್ನಬಹುದಾದ, ಮಂದವಾಗಲು ಸಹಾಯ ಮಾಡುವ ಕಾರಕಗಳು)
- ಇಂಟರ್ಜಿನ್ಸ್