ವಿಷಯಕ್ಕೆ ಹೋಗು

ನೈಕ್, ಇಂಕ್

Coordinates: 45°30′33″N 122°49′48″W / 45.5093°N 122.8299°W / 45.5093; -122.8299
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nike, Inc.
ಸಂಸ್ಥೆಯ ಪ್ರಕಾರPublic (NYSENKE)
ಸ್ಥಾಪನೆ೨೪ January ೧೯೬೪
1978[]
ಸಂಸ್ಥಾಪಕ(ರು)William J. "Bill" Bowerman
Philip H. Knight
ಮುಖ್ಯ ಕಾರ್ಯಾಲಯBeaverton, Oregon, United States
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Philip H. Knight
(Chairman)
Mark Parker
(CEO) & (President)
ಉದ್ಯಮDesigning and Manufacturing: Sportswear
Sports equipment
ಉತ್ಪನ್ನAthletic shoes
Apparel
Sports equipment
Accessories
ಆದಾಯ US$ ೧೮.೬೨೭ billion (೨೦೦೮)
ಆದಾಯ(ಕರ/ತೆರಿಗೆಗೆ ಮುನ್ನ) US$ ೨.೧೯೯ billion (೨೦೦೭)
ನಿವ್ವಳ ಆದಾಯ US$ ೧.೮೮೩ billion (೨೦೦೮)
ಒಟ್ಟು ಆಸ್ತಿIncrease US$ ೧೨.೪೪೩ billion (೨೦೦೮)
ಒಟ್ಟು ಪಾಲು ಬಂಡವಾಳIncrease US$ ೭.೮೨೫ billion (೨೦೦೮)
ಉದ್ಯೋಗಿಗಳು೩೦,೨೦೦ (೨೦೦೮)
ಜಾಲತಾಣOfficial Website

(pronounced /ˈnaɪki/) (NYSENKE) ಯುನೈಟೆದ್ ಸ್ಟೇಟ್ಸ್ ನ ಪ್ರಮುಖವಾದ ಕ್ರೀಡಾಉಡುಪು ಮತ್ತು ಉಪಕರಣಗಳ ಸರಬರಾಜು ಮಾಡುವ ನೈಕ್, Inc. ಒಂದು ಬಹಿರಂಗ ವ್ಯಾಪಾರಸಂಸ್ಥೆ. ಸಂಸ್ಥೆಯ ಕೇಂದ್ರ ಕಾರ್ಯಾಲಯವು ಪೊರ್ಟ್ ಲ್ಯಾಂಡ್ ಮೆಟ್ರೊಪೊಲಿಟನ್ ವಲಯದಲ್ಲಿನ ಬೀವರ್ಟನ್,ಒರಿಗನ್‌ನಲ್ಲಿದೆ. ಇದು ಪ್ರಪಂಚದ ಕ್ರೀಡಾ ಪಾದರಕ್ಷೆ ಮತ್ತು ಉಡುಪುಗಳ[] ಸರಬರಾಜು ಮಾಡುವ ಪ್ರಮುಖ ಸಂಸ್ಥೆ ಹಾಗೂ ಕ್ರೀಡಾ ಉಪಕರಣಗಳ ಪ್ರಮುಖ ತಯಾರಕರಾಗಿ ಅದರ ಆದಾಯ ೨೦೦೮ ಹಣಕಾಸಿನ ವರ್ಷದಲ್ಲಿ $೧೮.೬ ಬಿಲಿಯನ್ USD, ( ಮೇ ೩೧, ೨೦೦೮ ರಂದು ಕೊನೆಗೊಳ್ಳುವಂತೆ). ೨೦೦೮ನೆ ಸಾಲಿನಲ್ಲಿ , ಪ್ರಪಂಚದಾದ್ಯಂತ ಸಂಸ್ಥೆಯು ೩೦,೦೦೦ ಕ್ಕಿಂತ ಹೆಚ್ಚು ಜನರಿಗೆ ಉದ್ಯೊಗವಕಾಶವನ್ನು ಕಲ್ಪಿಸಿಕೊಟ್ಟಿದೆ. ದಿ ಓರೆಗೋನಿಯನ್ ನ ಪ್ರಕಾರ ನೈಕ್ ಮತ್ತು Precision Castparts ಸಂಸ್ಥೆಗಳು ಮಾತ್ರ fortune 500 ಗಳಾಗಿದ್ದು ಅದರ ಕೇಂದ್ರ ಕಾರ್ಯಾಲಯವು ಓರಿಗನ್ ನಲ್ಲಿರುತ್ತದೆ.

ಜನವರಿ ೨೫, ೧೯೬೪ರಲ್ಲಿ ಬಿಲ್ ಬೊವರ್ಮಾನ್ ಮತ್ತು ಫಿಲಿಫ್ ನೈಟ್ ಏಂಬುವರು ಈ ಸಂಸ್ಥೆಯನ್ನು Blue Ribbon sports ಎಂಬ ಹೆಸರಿನಿಂದ ಸ್ಥಾಪಿಸಿದರು ಮತ್ತು ಅಧಿಕೃತವಾಗಿ ೧೦೭೮ ರಲ್ಲಿ ನೈಕ್, Inc. ಎಂದು ಪರಿವರ್ತಿತವಾಯಿತು. ಈ ಸಂಸ್ಥೆಯು ತನ್ನ ಹೆಸರನ್ನು ನೈಕ್ (Greek Νίκη ಟೆಂಪ್ಲೇಟು:Pronounced), ಗ್ರೀಕ್ ನ ಗೆಲುವಿನ ದೇವತೆ;ಎಂದು ಆಯ್ದುಕೊಂಡಿದೆ ಮತ್ತು ಇದು ಈಜಿಪ್ಟಿಯನ್ ಪದಗಳಾದ "ಶಕ್ತಿ" ಮತ್ತು "ಗೆಲುವು"ಮತ್ತು nakht ಗಳಿಂದ ಪ್ರಭಾವಿತಗೊಂಡಿದೆ[ಸೂಕ್ತ ಉಲ್ಲೇಖನ ಬೇಕು] ನೈಕ್ ಅದರ ಉತ್ಪನ್ನಗಳನ್ನು ಸ್ವಂತ ಗುರುತಿನಿಂದ ಮಾರಾಟ ಮಾಡುತ್ತದೆ. ಮತ್ತು ನೈಕ್+, ಏರ್ ಜೋರ್ಡನ್, ನೈಕ್ ಸ್ಕೇಟ್‌ಬೋರ್ಡಿಂಗ್ ಹಾಗೂ ಸಹಕಾರಿಗಳಾದ ಕೋಲೆ ಹಾನ್, ಹರ್ಲೆ ಇಂಟರ್‌ನ್ಯಾಷನಲ್, ಉಂಬ್ರೊ ಮತ್ತು ಕಾನ್‌ವರ್ಸ್ ಗಳ ಹೆಸರಿನಲ್ಲಿಯೂ ಮಾರಾಟ ಮಾಡುತ್ತದೆ. ನೈಕ್ ಸಂಸ್ಥೆಯ Bauer Hockey (ನಂತರದಲ್ಲಿ Nike Bauer ಎಂದು ಮರುನಾಮಕರಣಗೊಂಡಿತು) ೧೯೯೫ ಮತ್ತು ೨೦೦೮ ನಡುವಿನಲ್ಲಿ .[] ಕ್ರೀಡಾಉಡುಪುಗಳನ್ನು ಮತ್ತು ಉಪಕರಣಗಳನ್ನು ತಯಾರಿಸುವುದರ ಜೊತೆಗೆ ಸಂಸ್ಥೆಯು Niketown ಹೆಸರಿನಲ್ಲಿ ಚಿಲ್ಲರೆ ಮಾರಾಟಮಳಿಗೆಗಳನ್ನೂ ನಡೆಸುತ್ತದೆ. ನೈಕ್ ಪ್ರಪಂಚದಾದ್ಯಂತ ಇರುವ ಉನ್ನತ ಮಟ್ಟದ ಆಟಗಾರರನ್ನು ಮತ್ತು ಕ್ರೀಡಾ ತಂಡಗಳನ್ನು ತನ್ನದೆ ಆದ "Just do it" ಮತ್ತು Swoosh ಎಂಬ ಸಂಸ್ಥೆಯ ಗುರುತಿನಲ್ಲಿ ಪ್ರಾಯೋಜಿಸುತ್ತದೆ.

ಮೂಲ ಮತ್ತು ಇತಿಹಾಸ

[ಬದಲಾಯಿಸಿ]

ನೈಕ್, ಮೂಲತಃ Blue Ribbon sports ಎಂದು ಗುರುತಿಸಲ್ಪಡುತಿತ್ತು, ಇದನ್ನು ಜನವರಿ ೧೯೬೪ ರಂದು ಓರಿಗನ್ ವಿಶ್ವವಿದ್ಯಾನಿಲಯ ದ ಕ್ರೀಡಾಳು ಫಿಲಿಫ್ ನೈಟ್ ಮತ್ತು ಅವನ ಕೋಚ್ ಬಿಲ್ ಬೊವರ್ಮಾನ್ ಸ್ಥಾಪಿಸಿದರು. ಈ ಸಂಸ್ಥೆಯು ಆರಂಭದಲ್ಲಿ ಜಪಾನಿನ ಪಾದರಕ್ಷೆ ತಯಾರಕರಾದ ಒನಿತ್ಸುಕಾ ಟೈಗರ್‌ ಗೆ ವಿತರಕರಾಗಿದ್ದು , ತಮ್ಮ ವ್ಯಾಪಾರದ ಬಹುಭಾಗವನ್ನು ನೈಟ್ಸ್ ಆಟೊಮೊಬೈಲ್ಸ್‌ನ ಜೊತೆಯಲ್ಲಿ ಮಾಡುತ್ತಿದ್ದರು.[]

ಈ ಸಂಸ್ಥೆಯ ಲಾಭ ಬಹಳ ಬೇಗ ವೃದ್ಧಿಗೊಂಡು , ಮತ್ತು ೧೯೬೬ ರಲ್ಲಿ , BRS ತಮ್ಮ ಮೊದಲ ಚಿಲ್ಲರೆ ಮಾರಾಟಮಳಿಗೆಗಳನ್ನು ತೆರೆದು,ಸಾಂತ ಮೊನಿಕ , ಕ್ಯಾಲಿಫೋರ್ನಿಯದ ಪಿಕೊ ಬೌಲೆವರ್ಡ್‌ನಲ್ಲಿ ನೆಲೆಗೊಂಡಿದೆ. ೧೯೭೧ ತನಕ, BRS ಮತ್ತು ಒನಿತ್ಸುಕಾ ಟೈಗರ್‌ನ ಸಂಬಂಧವು ಕೊನೆ ಹಂತಕ್ಕೆ ಬಂದಿತ್ತು. BRS ತಮ್ಮದೆ ಆದ ಪಾದರಕ್ಷೆಯನ್ನು ಬಿಡುಗಡೆಗೆ ಸಿದ್ಧಗೊಳಿಸಿತು , ಅದು ಹೊಸದಾಗಿ ವಿನ್ಯಾಸಗೊಂಡ Swooshಅನ್ನು ಹೊಂದಿರುತ್ತದೆ.[]

ಈ ಹೊಸ ವಿನ್ಯಾಸಯನ್ನು ಹೊಂದಿದ ಪಾದರಕ್ಷೆಯನ್ನು ಸಾರ್ವಜನಿಕವಾಗಿ ಮೊದಲು ಮಾರಾಟವಾದ soccer ಪಾದರಕ್ಷೆ "Nike", ೧೯೭೧ರ ಬೇಸಗೆಯಲ್ಲಿ ಬಿಡುಗಡೆಯಾಯಿತು. ೧೯೭೨ ರ ಫೆಬ್ರುವರಿ ನಲ್ಲಿ , BRS ತಮ್ಮ ಮೊದಲ ನೈಕ್ ಪಾದರಕ್ಷೆಯನ್ನು ಗ್ರೀಕ್ ನ ಗೆಲುವಿನ ದೇವತೆ ಯ ಅಧಾರಿತ ನೈಕ್ ಎಂಬ ಹೆಸರಿನೊಂದಿಗೆ ಪರಿಚಯಿಸಿದರು. ೧೯೭೮ ರಲ್ಲಿ , BRS, Inc. ಅಧಿಕೃತವಾಗಿ ನೈಕ್,Inc. ಎಂದು ಮರುನಾಮಕರಣಗೊಂಡಿತು. ಆರಂಭದಲ್ಲಿ BRS/Nike ಜೊತೆಗೆ ಓಪ್ಪಂದ ಮಾಡಿಕೊಂಡ ಮೊದಲ ವೃತ್ತಿನಿರತ ಆಟಗಾರ ಇಲೀ ನಸ್ತಾಸೆ, ಆಟಗಾರರ ಪ್ರಾಯೋಜಕತ್ವವು ಸಂಸ್ಥೆಯ ಬೆಳವಣಿಗೆಗೆ ಮುಖ್ಯ ಕಾರಣ ವಾಯಿತು.

ಸಂಸ್ಥೆಯ ಮೊದಲ ಸ್ವ-ವಿನ್ಯಾಸದ ಉತ್ಪನ್ನವು ಬೊವರ್ಮಾನ್ ನ "waffle" ವಿನ್ಯಾಸದಿಂದ ಪ್ರೇರೇಪಿತಗೊಂದಿದೆ. ಓರಿಗಾನ್ ವಿಶ್ವವಿದ್ಯಾಲಯವು ಹೊಸರೂಪ ಪಡೆದುಕೊಂಡು Hayward Field ಆದಾಗ,ಬೊವೆರ್ಮನ್ ಸಾಮರ್ಥ್ಯವುಳ್ಳ ಶೂನ ತಳಭಾಗವನ್ನು ವಿನ್ಯಾಸಗೊಳಿಸಲು ವಿವಿಧ ಪ್ರಯೋಗಗಳನ್ನು ಕೈಗೊಂಡನು ಒಂದು ಭಾನುವಾರ ಅವನು ಯುರೆಥೇನ್ ದ್ರವವನ್ನು ತನ್ನ ಹೆಂಡತಿಯ waffle iron ಮೇಲೆ ಹಾಕಿದಾಗ ಅವನ ಶ್ರಮವು ಫಲ ಕೊಟ್ಟಿತು ಬೊವರ್ಮಾನ್ ಸಿದ್ದಗೊಳಿಸಿದ ಮತ್ತು ಸಂಸ್ಕರಿಸಿದ 'waffle' ಸೋಲ್ , ೧೯೭೪.ರಲ್ಲಿ ಇಂದಿನ ಐಕಾನಿಕ್ ವ್ಯಾಫಲ್ ಟ್ರೈನರ್ ಆಗಿ ಪರಿವರ್ತಿತಗೊಂಡಿತು.

೧೯೮೦ ರ ಹೊತ್ತಿಗೆ, ಯುನೈಟೆಡ್ ಸ್ಟೇಟ್ಸ್ ಅಥ್ಲೆಟಿಕ್ ಪಾದರಕ್ಷೆ ಮಾರುಕಟ್ಟೆಯಲ್ಲಿ ೫೦% ಶೇರುಗಳನ್ನು ನೈಕ್ ತಲುಪಿತ್ತು, ಮತ್ತು ಕಂಪೆನಿಯು ಅದೇ ವರ್ಷದ ಡಿಸೆಂಬರ್‌ನಲ್ಲಿ ಸಾರ್ವಜನಿಕವಾಗಿ ಪ್ರಸಿದ್ಧವಾಯಿತು. ಅದರ ಅಭಿವೃಧಿಯು ಟೆಲಿವಿಷನ್ ಜಾಹಿರಾತುಗಳಲ್ಲದೆ, 'word-of-foot' ಜಾಹಿರಾತು (to quote a Nike print ad from the late ೧೯೭೦s)ಮಾಡುವುದರಿಂದ ವ್ಯಾಪಕವಾಗಿ ಬೆಳವಣಿಗೆಯಾಯಿತು. ನೈಕ್‌ನ ಮೊಟ್ಟ ಮೊದಲ ರಾಷ್ಟ್ರೀಯ ದೂರದರ್ಶನ ಜಾಹಿರಾತು ಅಕ್ಟೊಬರ್ ೧೯೮೨ ರಲ್ಲಿ ನ್ಯೂಯಾರ್ಕ್ ಮ್ಯಾರಥಾನ್ ಸಂದರ್ಭದಲ್ಲಿ ಪ್ರಸಾರವಾಯಿತು ಪೋರ್ಟ್ ಲ್ಯಾಂಡ್ ಮೂಲದ ಜಾಹಿರಾತು ಸಂಸ್ಥೆಯಾದ Wieden+Kennedy ಜಾಹಿರಾತುಗಳನ್ನು ಸಿದ್ಢಪಡಿಸಿತ್ತು, ಈ ಸಂಸ್ಥೆಯು ಸುಮಾರು ತಿಂಗಳುಗಳ ಮೊದಲೆ ಏಪ್ರಿಲ್ ೧೯೮೨ ರಲ್ಲಿ ಸ್ಥಾಪನೆಗೊಂಡಿತ್ತು.

ನೈಕ್ ಮತ್ತು ವೀಡನ್+ಕೆನಡಿ ಜೊತೆಯಾಗಿ ಸೇರಿ ಸುಮಾರು ಅಳಿಸಿಹೋಗದಂತಹ ಮುದ್ರಣಗಳು ಹಾಗೂ ದೂರದರ್ಶನ ಜಾಹಿರಾತುಗಳನ್ನು ಸೃಷ್ಟಿಸಿರುತ್ತಾರೆ ಮತ್ತೆ ನೈಕ್ ಸಂಸ್ಥೆಯ ಪ್ರಾಥಮಿಕ ಏಜೆನ್ಸಿಯಾಗಿ ಮುಂದುವರಿದಿದೆ. ಸಂಸ್ಥೆಯ ಸ್ಥಾಪಕ ಸದಸ್ಯನಾದ ಡ್ಯಾನ್ ವೀಡನ್ ಈಗಿನ ಹೆಸರು ವಾಸಿಯಾದ ಸ್ಲೋಗನ್ "Just Do It"ನ್ನು ೧೯೮೮ ರ ನೈಕ್ ಜಾಹಿರಾತಿನ ಪ್ರಚಾರಕ್ಕಾಗಿ ನಾಮಕರಣ ಮಾಡಿದ್ದನ್ನು, ಅಡ್ವೆರ್ಟೈಸಿಂಗ ಏಜ್ ೨೦ನೇ ಶತಮಾನದ ಐದು ಅತ್ಯುತ್ತಮ ಜಾಹಿರಾತು ಸ್ಲೋಗನ್ನಿನಲ್ಲಿ ಒಂದು ಎಂದು ಘೋಷಿಸಲಾಯಿತು ಮತ್ತು ಆ ಪ್ರಚಾರವನ್ನು ಸ್ಮಿತ್ಸೊನಿಯನ್ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ.[] ಜುಲೈ ೧, ೧೯೮೮ ರ ನೈಕ್ ನ ಮೊದಲ "Just Do It" ಜಾಹಿರಾತಿನಲ್ಲಿ ಸ್ಯಾನ್ ಫ್ರಾನ್ಸಿಸ್ಕನ್ ವಾಲ್ಟ್ ಸ್ಟ್ಯಾಕ್ ಕಾಣಿಸಿಕೊಂಡನು.[]

೧೯೮೦ ರ ಉದ್ದಕ್ಕೂ, ನೈಕ್ ಜಗತ್ತಿನಾದ್ಯಂತ ತನ್ನ ಉತ್ಪನ್ನಗಳ ಪಟ್ಟಿಗೆ ಇತರ ಕ್ರೀಡೆಗಳನ್ನು ಮತ್ತು ಪ್ರದೇಶಗಳನ್ನು ಸೇರಿಸಿಕೊಂಡಿತು.[]

ಸ್ವತ್ತುಗಳು

[ಬದಲಾಯಿಸಿ]

ನವೆಂಬರ ೨೦೦೮ ರವರೆಗೆ, ನೈಕ್ , Inc. ಸಂಸ್ಥೆಯು ನಾಲ್ಕು ಪ್ರಮುಖ ಸಂಸ್ಥೆಗಳನ್ನು ತನ್ನದಾಗಿಸಿಕೊಂಡಿತು. ಯಾವುದೆಂದರೆ ಕೋಲೆ ಹಾನ್ , ಹರ್ಲೆ ಇಂಟರ್‌ನ್ಯಾಷನಲ್, ಕಾನ್‌ವರ್ಸ್ Inc ಮತ್ತು ಉಂಬ್ರೊ.

೧೯೮೮ರಲ್ಲಿ , ನೈಕ್ ಮೊದಲು ಅಪ್‌ಸ್ಕೇಲ್ ಪಾದರಕ್ಷ್ ಸಂಸ್ಥೆಯಾದ ಕೋಲೆ ಹಾನ್ ತನ್ನದಾಗಿಸಿಕೊಂಡಿತು .

ಉತ್ಪನ್ನಗಳು

[ಬದಲಾಯಿಸಿ]
ಒಂದು ನೈಕ್ ಬ್ರ್ಯಾಂಡ್ ಅಥ್ಲೆಟಿಕ್ ಶೂ
ನೈಕ್ ಏರ್ ಜೋರ್ಡನ್ ಶೂಗಳ ಒಂದು ಜೊತೆ

ವ್ಯಾಪಕ ಶ್ರೇಣಿಯ ಕ್ರೀಡಾ ಸಲಕರಣೆಗಳನ್ನು ನೈಕ್ ಉತ್ಪಾದಿಸುತ್ತದೆ. ಅವರ ಮೊದಲ ಉತ್ಪನ್ನವೆಂದರೆ ಟ್ರಾಕ್‌ನಲ್ಲಿ ಓಡುವ ಪಾದರಕ್ಷೆಗಳು ಟ್ರ್ಯಾಕ್ & ಫೀಲ್ಡ್, ಬೇಸ್‌ಬಾಲ್, ಐಸ್ ಹಾಕಿ, ಟೆನ್ನಿಸ್, ಅಸೋಸಿಯೇಶನ್ ಫುಟ್‌ಬಾಲ್, ಲ್ಯಾಕ್ರೊಸೆ, ಬಾಸ್ಕೆಟ್ ಬಾಲ್ ಮತ್ತು ಕ್ರಿಕೆಟ್ ಆಟಗೊಳನ್ನೊಳಗೊಂಡು ಇನ್ನು ವ್ಯಾಪಕ ಶ್ರೇಣಿಯ ಆಟಗಳಿಗಾಗಿ ಪ್ರಸ್ತುತ ಅವರು ಶೂಗಳು, ಜೆರ್ಸಿಗಳು, ಶಾರ್ಟ್ಸ್,ಬೇಸ್‌ಲೇಯರ್ಸ್ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ. ನೈಕ್,Inc. ನೈಕ್ ಏರ್ ಮ್ಯಾಕ್ಸ್ ಪಾದರಕ್ಷೆಯ ಶ್ರೇಣಿಯನ್ನು ೧೯೮೭ ರಲ್ಲಿ ಬಿಡುಗಡೆಗೊಳಿಸಿತು. ನೈಕ್ ೬.೦, ನೈಕ್ NYX, ಮತ್ತು ನೈಕ್ SB ಶೂಗಳು ಅವರ ತಯಾರಿಕೆಯ ಶ್ರೇಣಿಗೆ ಇತ್ತೀಚೆಗೆ ಸೇರ್ಪಡೆಯಾಗಿವೆ, ಇವುಗಳನ್ನು ಸ್ಕೇಟ್ ಬೋರ್ಡಿಂಗ್‌ಗೆಂದು ವಿನ್ಯಾಸಗೊಳಿಸಲಾಗಿದೆ. ನೈಕ್ ಹೊಸದಾಗಿ ಏರ್ ಝೂಮ್ ಯೋರ್ಕರ್ ಎಂಬ ಕ್ರಿಕೆಟ್ ಪಾದರಕ್ಷೆಗಳನ್ನು ಪರಿಚಯಿಸಿದೆ, ಅದು ತಮ್ಮ ಪ್ರತಿಸ್ಪರ್ದಿಗಳಿಗಿಂತ ೩೦% ಕಡಿಮೆ ತೂಕವಿರುತ್ತದೆ.[೧೨] ನೈಕ್ ೨೦೦೮ ರಲ್ಲಿ ಏರ್ ಜೋರ್ಡನ್ XX೩ ಯನ್ನು ಪರಿಚಯಿಸಿತು ,ಬ್ಯಾಸ್ಕೆಟ್ ಬಾಲ್‌ಗಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪಾದರಕ್ಷೆಗಳನ್ನು ಪರಿಸರವನ್ನು ಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಶೂಗಳು ಮತ್ತು ಬಟ್ಟೆಗಳನ್ನೊಳಗೊಂಡು ಗಂಡಸರು, ಹೆಂಗಸರು ಮತ್ತು ಮಕ್ಕಳ ಕ್ರೀಡಾ ಚಟುವಟಿಕೆಗಳಾದಂತಹ ಅಸೋಸಿಯೇಶನ್ ಫುಟ್‌ಬಾಲ್[೧೩], ಬಾಸ್ಕೆಟ್ ಬಾಲ್, ಓಡುವುದು, ಕೊಂಬಟ್ ಕ್ರೀಡೆಗಳು, ಟೆನ್ನಿಸ್, ಅಮೆರಿಕನ್ ಫುಟ್‌ಬಾಲ್, ಅಥ್ಲೆಟಿಕ್ಸ್, ಗಾಲ್ಫ್ ಮತ್ತು ಕ್ರಾಸ್ ಟ್ರೈನಿಂಗ್ ಗಳಿಗೆ ವೈವಿಧ್ಯಮಯ ಉತ್ಪನ್ನಗಳನ್ನು ನೈಕ್ ಮಾರಾಟ ಮಾಡುತ್ತದೆ. ಹೊರಾಂಗಣ ಕ್ರೀಡೆಗಳಾದಂತಹ ಟೆನ್ನಿಸ್, ಗಾಲ್ಫ್, ಸ್ಕೇಟ್ ಬೋರ್ಡಿಂಗ್, ಅಸೋಸಿಯೇಶನ್ ಫುಟ್‌ಬಾಲ್, ಬೇಸ್‌ಬಾಲ್, ಅಮೆರಿಕನ್ ಫುಟ್‌ಬಾಲ್, ಸೈಕ್ಲಿಂಗ್, ವಾಲಿಬಾಲ್, ಮಲ್ಲಯುದ್ಧ, ಚೀರ್‌ಲೀಡಿಂಗ್, ಜಲ ಕ್ರೀಡೆಗಳು, ಆಟೋ ರೇಸಿಂಗ್ ಮತ್ತು ಅಥ್ಲೆಟಿಕ್ ಹಾಗೂ ಇತರೆ ಚಟುವಟಿಕೆಗಳಿಗಾಗಿ ನೈಕ್ ಶೂಗಳನ್ನು ಮಾರಾಟ ಮಾಡುತ್ತದೆ. ನೈಕ್, ಯುವ ಸಂಸ್ಕೃತಿ, ಚವ್ ಸಂಸ್ಕೃತಿ ಮತ್ತು ಹಿಪ್ ಹಾಪ್ ಸಂಸ್ಕೃತಿಗಳಲ್ಲಿ ನಗರದ ಫ್ಯಾಷನ್‌ಗೆ ತಕ್ಕ ಬಟ್ಟೆಗಳನ್ನು ಪೂರೈಸುವುದಕ್ಕಾಗಿ ಚಿರಪರಿಚಿತ ಹಾಗೂ ಲೋಕಪ್ರಿಯವಾಗಿದೆ . Nikeಯು ಇತ್ತೀಚೆಗೆ Apple Inc.ನ ಜತೆ ಓಟಗಾರನ ವೇಗವನ್ನು iPod nano ಒಂದಕ್ಕೆ ಸಂಪರ್ಕವಿರುವ ಶೂನಲ್ಲಿರುವ ರೇಡಿಯೋ ಸಾಧನದ ಮೂಲಕ ಅಳೆಯುವ Nike+ ಎಂಬ ಉತ್ಪನ್ನವನ್ನು ತಯಾರಿಸುವ ಒಪ್ಪಂದ ಮಾಡಿಕೊಂಡಿತು. ಈ ಉತ್ಪನ್ನವು ಪ್ರಯೋಜನಕಾರೀ ಅಂಕಿ-ಅಂಶಗಳನ್ನು ತೋರಿಸುವುದಾದರೂ ಇದು ವೈರ್‌ಲೆಸ್ ಸೆನ್ಸರ್ ನೆಟ್ವರ್ಕ್‌ನ ಪುಟ್ಟ, ನಿಕ್ಷಿಪ್ತ ಬುದ್ಧಿಜನಕ ಮೋಟ್‌ಗಳ ಮೂಲಕ ಬಳಕೆದಾರರ RFID ಸಾಧನಗಳನ್ನು ಕಂಡುಹಿಡಿಯಬಲ್ಲ ಸಂಶೋಧಕರ ಟೀಕೆಗೆ ಒಳಗಾಯಿತು.[೧೪][೧೫]

೨೦೦೪ರಲ್ಲಿ ಅವರು SPARQ ತರಬೇತಿ ಕಾರ್ಯಕ್ರಮ/ವಿಭಾಗವನ್ನು ಆರಂಭಿಸಿದರು.

Nikeನ ಕೆಲವು ಹೊಚ್ಚಹೊಸ ಶೂಗಳು Flywire ಮತ್ತು ಲೂನಾರ್‌ಲೈಟ್ ಫೋಮ್ ಅನ್ನು ಹೊಂದಿವೆ. ಇವನ್ನು ಹಲವಾರು ಶೂಗಳ ತೂಕವನ್ನು ಕಡಿಮೆಗೊಳಿಸಲು ಬಳಸಲಾಗುತ್ತದೆ.[೧೬]

In the Gran Turismo 4 ಎಂಬ ವಿಡಿಯೋ ಗೇಮ್‌ನಲ್ಲಿ ಕಂಡುಬರುವ Nikeಯ NikeOne ೨೦೨೨ ಎಂಬ ಹೆಸರಿನ ಕಾರ್ ಅನ್ನು ಫಿಲ್ ಫ್ರಾಂಕ್ ವಿನ್ಯಾಸಗೊಳಿಸಿದ್ದಾರೆ.

ಪ್ರಧಾನಕಚೇರಿ

[ಬದಲಾಯಿಸಿ]

Nikeಯ ಜಾಗತಿಕ ಕೇಂದ್ರಕಚೇರಿಗಳು ಬೀವರ್‌ಟನ್, ಆರೆಗಾನ್ ನಗರದಿಂದ ಸುತ್ತುವರೆಯಲ್ಪಟ್ಟಿದೆಯಾದರೂ ತಾಂತ್ರಿಕವಾಗಿ ಇದು ಅಸಂಯೋಜಿತ ವಾಶಿಂಗ್ಟನ್ ಕೌಂಟಿಯ ವ್ಯಾಪ್ತಿಗೆ ಒಳಪಡುತ್ತದೆ.

ಇದರಿಂದಾಗಿ,The Oregonian ಪ್ರಕಾರ ಬೀವರ್‌ಟನ್ ಮತ್ತು Nike ನಡುವೆ ಕಂಪನಿಯು ಬೀವರ್‌ಟನ್‌ನ Jared Co-operationನ ಎದುರಿಗಿರುವ ೭೪ ಎಕರೆಯಷ್ಟು (೦.೩ ಕಿ.ಮೀ) ಭೂಮಿಯನ್ನ್ನು ಕೊಂಡುಕೊಂಡಾಗಿಂದಲೂ ವಾದವಿವಾದಗಳು ನಡೆಯುತ್ತಲೇ ಬಂದಿವೆ. Nikeಯು ಮೊದಲು ತಮ್ಮ ಪ್ರಧಾನ ಕಚೇರಿಗಳನ್ನು ಆ ದಿಕ್ಕಿನಲ್ಲಿ ವಿಸ್ತರಿಸಲು ಬಯಸಿದಾಗ, ಅವರು MAX ಲೈಟ್ ರೈಲ್ ಸ್ಟೇಶನ್ನಿನ ಬಳಿ ಮನೆಗಳನ್ನು ಕಟ್ಟಿಕೊಂಡು, ಆಸ್ತಿಯನ್ನು ಎರಡು ಸಾರ್ವಜನಿಕ ರಸ್ತೆಗಳ ಮೂಲಕ ಹಾಯಿಸಬೇಕೆಂದು ಬೀವರ್‌ಟನ್ ಬಯಸಿತು, ಮತ್ತು Nikeಯು ಈ ಭೂಮಿಯನ್ನು ಕೊಂಡುಕೊಂಡಾಗಲೇ ಆ ವಲಯಕ್ಕೆ ನಿರ್ದಿಷ್ಟವಾದ ನಿರೀಕ್ಷೆಗಳು ಆಗಲೇ ಸರಿಯಾದ ಜಾಗಗಳಲ್ಲಿದ್ದವು. ಬೀವರ್‌ಟನ್‌ನ ವಿನಂತಿಯು ಮೆಟ್ರೋನ ಪ್ರಾದೇಶಿಕ ಸಂಚಾರ-ಸಂಬಂಧೀ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ್ದಾಗಿತ್ತು. Nikeಯು ರಾಜ್ಯದಿಂದ ಸುಮಾರು ೫,೦೦೦ ಕೆಲಸಗಳನ್ನು ಬೇರೆಡೆಗೆ ವರ್ಗಾಯಿಸುವ ಬೆದರಿಕೆ ಹಾಕಿದ ಒಂದು ವರ್ಷದ ನಂತರ, ಬೀವರ್‌ಟನ್ ಮನೆಗಳನ್ನು ಕಟ್ಟಲೇಬೇಕೆಂಬ ಒತ್ತಾಯವನ್ನು ಹಿಂತೆಗೆದುಕೊಂಡಿತಾದರೂ Nike ವಸತಿಯ ಕೊರತೆಯನ್ನು ಮರೆಯಲಿಲ್ಲ.

ಸ್ವಾಧೀನದಲ್ಲಿ ಉಂಟಾದ ವಿಳಂಬದಿಂದಾಗಿ ಬೀವರ್‌ಟನ್ ಬಲಪ್ರಯೋಗದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ ಮಾಡುವಂತಾಯಿತು. Nikeಯು ಇದರಿಂದಾಗಿ ಮೊಕದ್ದಮೆಯೊಂದನ್ನು ಹೂಡಿತು ಮತ್ತು ಕಂಪನಿಯ ಲಾಬಿಯಿಂಗ್‌ನಿಂದಾಗಿ ೨೦೦೫ರ Oregon Senate Bill ೮೮೭ ಅನ್ನು ಜಾರಿಗೊಳಿಸಲಾಯಿತು. ಈ ಬಿಲ್‌ನ ಪ್ರಕಾರ ಬೀವರ್‌ಟನ್ ಅನ್ನು Nike ಮ ತ್ತುColumbia Sportswear ೩೫ ವರ್ಷಗಳಿಂದ ಅಸಂಯೋಜಿತ ವಾಷಿಂಗ್ಟನ್ ಕೌಂಟಿಯಲ್ಲಿ ಹೊಂದಿದ್ದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸಲಾಯಿತು ಮತ್ತು ಈ ಸುರಕ್ಷೆಯನ್ನು ಮುಂದಿನ ೩೦ ವರ್ಷಗಳವರೆಗೆ Electro Scientific Industries ಮತ್ತು Tektronixಗಳಿಗೆ ವಿಸ್ತರಿಸಲಾಯಿತು.[೧೭]

ಜಾಗತಿಕ ಕೇಂದ್ರಕಚೇರಿಗಳು ಹೆಚ್ಚೂಕಡಿಮೆ 200 acres (0.81 km2) ನಷ್ಟು ಭೂಮಿಯನ್ನು ಹೊಂದಿದೆ. ನಿರ್ಮಾಣದ ಮೊದಲ ಹಂತವನ್ನು ೧೯೯೦ರಲ್ಲಿ ಪೂರೈಸಲಾಯಿತು ಮತ್ತು ೧೯೯೨, ೧೯೯೯, ೨೦೦೧ ಹಾಗೂ ೨೦೦೮ ಹಲವಾರು ವಿಸ್ತರಣೆಗಳನ್ನು ಮಾಡಲಾಯಿತು. ಇಲ್ಲಿರುವ ೧೭ ಕಟ್ಟಡಗಳು ಒಟ್ಟುಸೇರಿ ಅಂದಾಜು 2,000,000 square feet (190,000 m2)ನಷ್ಟು ಕಚೇರಿ ಸ್ಥಳವನ್ನು ಹೊಂದಿವೆ. ಪ್ರತಿಯೊಂದು ಕಟ್ಟಡಕ್ಕೂ Nikeನ ಜತೆ ದೀರ್ಘಕಾಲದವರೆಗೂ ಒಳ್ಳೆಯ ಸಂಬಂಧಗಳನ್ನು ಹೊಂದಿರುವ ಪ್ರಖ್ಯಾತ ಕೋಚ್ ಅಥವಾ ಅಥ್ಲೀಟ್‍ಗಳ ಹೆಸರನ್ನಿಡಲಾಗಿದೆ. ಉದಾಹರಣೆಗೆ ಟೈಗರ್ ವುಡ್ಸ್, ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್, ಮಿಯಾ ಹ್ಯಾಮ್, ಮೈಕೆಲ್ ಜೋರ್ಡಾನ್, ಪೀಟ್ ಸ್ಯಾಂಪ್ರಾಸ್, ಜೋಅನ್ ಬೆನ್ವಾ ಸ್ಯಾಮುಯೆಲ್‌ಸನ್, ಜಾನ್ ಮೆಕೆನ್ರೋ ಮತ್ತು ಇನ್ನಿತರರು.

ಇವುಗಳಲ್ಲಿ ಎರಡು ಕಟ್ಟಡಗಳನ್ನು ಶಿಶು ಅಭಿವೃದ್ಧಿಗಾಗಿ ಮೀಸಲಾಗಿರಿಸಲಾಗಿದ್ದು, ಜೋ ಪ್ಯಾಟೆರ್ನೋ and ಸಿ. ವಿವಿಯನ್ ಸ್ಟ್ರಿಂಗರ್‌ರ ಹೆಸರುಗಳನ್ನು ಹೊತ್ತ ಈ ಕಟ್ಟಡಗಳಲ್ಲಿ Nikeಯಲ್ಲಿ ಕೆಲಸಮಾಡುವವರ ಸುಮಾರು ೫೦೦ ಮಕ್ಕಳ ಉಸ್ತುವಾರಿಯನ್ನು ನೋಡಿಕೊಳ್ಳಲಾಗುತ್ತದೆ. ಒಂದು ನೈಸರ್ಗಿಕ ತೊರೆಯಿಂದ ಊಡಲ್ಪಟ್ಟ ಮಾನವನಿರ್ಮಿತ ಕೆರೆಯೊಂದು ಸುಮಾರು 6 acres (24,000 m2)ನಷ್ಟು ವಿಸ್ತೀರ್ಣ ಹೊಂದಿದ್ದು ಕ್ಯಾಂಪಸಿನ ಮೂಲಕ ಹಾಗುಹೋಗುವ ಸುರಕ್ಷಿತ ಜೌಗುಪ್ರದೇಶಕ್ಕೆ ಹೊಂದಿಕೊಂಡಂತಿದೆ. ಕೆರೆಯಲ್ಲಿನ ಹೂಳನ್ನು ಎತ್ತಿ ಜಾಗದ ಸುತ್ತಲೂ ಒಂದು 14-foot (4.3 m) ಎತ್ತರದ ದಿಣ್ಣೆಯನ್ನು ಮಾಡಿರುವುದು ಕ್ಯಾಂಪಸಿನ ಭಾವನೆ ಬರುವಂತೆ ಮಾಡುತ್ತದೆ. ಜಾಗತಿಕ ಕೇಂದ್ರಕಚೇರಿಯಲ್ಲಿ ಅಂದಾಜು ೫,೦೦೦ ಕೆಲಸಗಾರರಿದ್ದಾರೆ ಮತ್ತು ಇನ್ನುಳಿದ ೨,೦೦೦-೨,೫೦೦ ಜನರು ಹತ್ತಿರದ ಕಚೇರಿ ಸಂಕೀರ್ಣಗಳಲ್ಲಿ ಕೆಲಸ ಮಾಡುತ್ತಾರೆ.[೧೮]

ತಯಾರಿಕೆ

[ಬದಲಾಯಿಸಿ]

ನೈಕ್ ವಿಶ್ವದಾದ್ಯಂತ ೭೦೦ಕ್ಕು ಹೆಚ್ಚು ಅಂಗಡಿಗಳ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿತು ಹಾಗೂ ಅದು ಯುನೈಟೆಡ್ ಸ್ಟೇಟ್ಸ್‌ನ ಹೊರತು ಪಡಿಸಿ ಇನ್ನೂ ೪೫ ದೇಶಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿತ್ತು.[೧೯] ಹೆಚ್ಚಾಗಿ ಕಾರ್ಖಾನೆಗಳು ಇಂಡೊನೇಶಿಯಾ, ಚೈನಾ, ಥೈವಾನ್, ಇಂಡಿಯಾ, ಥೈಲ್ಯಾಂಡ್, ವಿಯಿಟ್ನಾಂ, ಪಾಕಿಸ್ತಾನ, ಫಿಲಿಫೈನ್ಸ್ ಮತ್ತು ಮಲೇಶಿಯಾ ದೇಶಗಳನ್ನೊಳಗೊಂಡಂತೆ ಏಷಿಯಾದಲ್ಲಿ ನೆಲೆಗೊಂಡಿವೆ.[೨೦] ನೈಕ್ ಅದು ಒಪ್ಪಂದಗಳನ್ನು ಹೊಂದಿರುವ ಕಂಪನಿಗಳ ಹೆಸರು, ಮಾಹಿತಿಯನ್ನು ನೀಡುವ ನಿರ್ಧಾರಕ್ಕೆ ಬಂದಿಲ್ಲ. ಆದಾಗ್ಯೂ CorpWatch ಕಂಪನಿಯಂತಹವುಗಳು ಇದರ ಬಗ್ಗೆ ಒರಟಾದ ವಿಮರ್ಶೆಗಳನ್ನು ಮಾಡಿದ ಮೇಲೆ, ನೈಕ್ ತಾನು ಒಪ್ಪಂದ ಹೊಂದಿದ ಕಾರ್ಖಾನೆಗಳ ಬಗ್ಗೆ ಸಂಸ್ಥೆಯ ಆಡಳಿತದ ವರದಿಯಲ್ಲಿ ತೆರೆದಿಟ್ಟಿದೆ.

ಮಾನವ ಹಕ್ಕುಗಳ ಬಗ್ಗೆ ಕಾಳಜಿ

[ಬದಲಾಯಿಸಿ]

ಚೀನಾ, ವಿಯೆಟ್ನಾಮ್, ಇಂಡೋನೇಶಿಯಾ ಮತ್ತು ಮೆಕ್ಸಿಕೋದಂತಹ ರಾಷ್ಟ್ರಗಳ ಫ್ಯಾಕ್ಟರಿಗಳ ಜತೆ ಒಪ್ಪಂದ ಮಾಡಿಕೊಂಡಿರುವುದಕ್ಕಾಗಿ Nikeಯನ್ನು ಟೀಕಿಸಲಾಗಿದೆ. Vietnam Labour Watch ಎಂಬ ಕಾರ್ಯಕರ್ತ ಸಂಘವು ಸಂಗ್ರಹಿಸಿರುವ ದಾಖಲೆಗಳ ಪ್ರಕಾರ, ೧೯೯೬ರಷ್ಟು ಹಿಂದೆಯೇ Nike ವಿಯೆಟ್ನಾಮ್‌ನಲ್ಲಿ ಒಪ್ಪಂದ ಮಾಡಿಕೊಂಡ ಫ್ಯಾಕ್ಟರಿಗಳು ಕನಿಷ್ಟ ವೇತನ ಮತ್ತು ಓವರ್‌ಟೈಮ್‌ಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದನ್ನು ತೋರಿಸಲಾಯಿತಾದರೂ Nikeಯು ಈ ಪದ್ಧತಿಯನ್ನು ಈಗ ನಿಲ್ಲಿಸಲಾಗಿದೆ ಎಂದು ಪ್ರತಿಪಾದಿಸುತ್ತದೆ.[೨೧] ಈ ಕಂಪನಿಯನ್ನು ಆಗಾಗ ಕೆಳದರ್ಜೆಯ ಕಾರ್ಯಾಗಾರಗಳು, ಇವರ ಉತ್ಪನ್ನಗಳು ತಯಾರಾಗುವ ಮುಕ್ತ ವ್ಯವಹಾರ ವಲಯಗಳ ಅಗ್ಗವಾದ ಸಾಗರದಾಚೆಯ ಶ್ರಮದ ಶೋಷಣೆಗಾಗಿ ಟೀಕಿಸಲಾಗುತ್ತದೆ. ನಯೋಮೀ ಕ್ಲೈನ್‌ರ ಪುಸ್ತಕ ನೋ ಲೋಗೋ ಮತ್ತು ಮೈಕೆಲ್ ಮೂರ್‌ರ ಪ್ರಾತ್ಯಕ್ಷಿಕೆಗಳು ಈ ಟೀಕೆಯ ಮೂಲಗಳಾಗಿವೆ.

Nikeಯ ಮಹಿಳಾ ಸಬಲೀಕರಣದ ಬಗೆಗಿನ ಜಾಹೀರಾತುಗಳನ್ನು ಟೀಕಿಸಲಾಗಿದೆ ಏಕೆಂದರೆ ಇಂತಹ ಜಾಹೀರಾತುಗಳನ್ನು ಒಂದೆಡೆ ಮಾಡುತ್ತಲೇ ಪೂರ್ವ ಏಷ್ಯಾದ ತನ್ನ ಫ್ಯಾಕ್ಟರಿಗಳಲ್ಲಿ ಮಹಿಳೆಯರ ಅಬಲೀಕರಣವನ್ನು ನಡೆಸುತ್ತಿದೆಯೆಂದು ಹಲವರು ಅಭಿಪ್ರಾಯಪಡುತ್ತಾರೆ.[೨೨]

೧೯೯೦ರ ದಶಕದಲ್ಲಿ ತನ್ನ ಸಾಕರ್ ಚೆಂಡುಗಳ ತಯಾರಿಕೆಗಾಗಿ ಕಾಂಬೋಡಿಯಾ ಮತ್ತು ಪಾಕಿಸ್ತಾನಗಳ ಗುತ್ತಿಗೆ ಫ್ಯಾಕ್ಟರಿಗಳಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಂಡಿದ್ದಕ್ಕಾಗಿ Nike ತೀವ್ರ ಟೀಕೆಯನ್ನು ಎದುರಿಸಬೇಕಾಯಿತು. ಬಾಲಕಾರ್ಮಿಕರ ಬಳಕೆಯನ್ನು ನಿಲ್ಲಿಸಲು ಅಥವಾ ಕಡಿಮೆ ಮಾಡಲು Nike ಪ್ರಯತ್ನಿಸಿದರೂ ಅವರು ತಮ್ಮ ಉತ್ಪಾದನಾ ಗುತ್ತಿಗೆಗಳನ್ನು ಕೊಡುವ ಕಂಪನಿಗಳು ಸ್ಥಿತವಾಗಿರುವ ಪ್ರದೇಶಗಳಲ್ಲಿರುವ ನಿಯಂತ್ರಣ ಮತ್ತು ಮೇಲಿಚಾರಣೆಯ ನ್ಯೂನತೆಗಳು ಅಲ್ಲಿ ಬಾಲಕಾರ್ಮಿಕರ ಬಳಕೆಯಾಗದಿರುವಂತೆ ಖಚಿತಪಡಿಸಲು ಅಡ್ಡಿಯುಂಟುಮಾಡುತ್ತವೆ.[೨೩]

೨೦೦೧ರ BBC ಪ್ರಾತ್ಯಕ್ಷಿಕೆಯೊಂದು Nike ಗುತ್ತಿಗೆ ನೀಡಿದೆ ಕಾಂಬೋಡಿಯನ್ ಫ್ಯಾಕ್ಟರಿಯೊಂದರಲ್ಲಿ ಬಾಲಕಾರ್ಮಿಕರ ಬಳಕೆ ಮತ್ತು ಕೆಟ್ಟ ಕಾರ್ಯನಿರ್ವಹಣಾ ಪರಿಸರಗಳ ಬಗ್ಗೆ ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸಿತು.[೨೪] ಇದರಲ್ಲಿ ತೋರಿಸಲಾದ ಆರೂ ಹುಡುಗಿಯರು ವಾರದ ಏಳೂ ದಿನಗಳೂ ಹೆಚ್ಚುಕಡಿಮೆ ೧೬ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು.

ಹಲವಾರು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು, ಅದರಲ್ಲಿಯೂ ವಿಶೇಷವಾಗಿ ಜಾಗತೀಕರಣ-ವಿರೋಧಿ ಸಂಘಗಳು ಮತ್ತು United Students Against Sweatshopsದಂತಹ ಕೆಟ್ಟ ಕಾರ್ಯಪರಿಸರ ವಿರೋಧೀ ಗುಂಪುಗಳು ಅಭಿಯಾನಗಳನ್ನು ನಡೆಸುತ್ತ ಬಂದಿವೆ.[೨೫] ಈ ಅಭಿಯಾನಗಳನ್ನು ನಡೆಸಲಾದರೂ ಕೂಡ Nikeಯ ವಾರ್ಷಿಕ ವರದಿಗಳ ಪ್ರಕಾರ ಅದರ ವಾರ್ಷಿಕ ವಹಿವಾಟು ೧೯೯೬ರಲ್ಲಿ $೬.೪ ಬಿಲಿಯನ್ ಇದ್ದುದು ೨೦೦೭ರ ಹೊತ್ತಿಗೆ $೧೭ ಬಿಲಿಯನ್‌ನಷ್ಟು ಹೆಚ್ಚಾಯಿತು.

೨೦೦೮ರ ಜುಲೈನಲ್ಲಿ ಅಸ್ಟ್ರೇಲಿಯನ್ ಚ್ಯಾನೆಲ್ ಆದ ೭ News ನಡೆಸಿದ ತನಿಖೆಯೊಂದರಲ್ಲಿ Nikeಯ ಅತಿ ದೊಡ್ಡ ವಸ್ತ್ರೋದ್ಯಮ ಫ್ಯಾಕ್ಟರಿಯೊಂದರಲ್ಲಿ ಜೀತಪದ್ಧತಿಯನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಳಸಲಾಗಿದ್ದುದು ಬೆಳಕಿಗೆ ಬಂದಿತು. ಮಲೇಶಿಯಾದಲ್ಲಿದ್ದ ಈ ಪ್ಯಾಕ್ಟರಿಯ ದುರ್ಭರ ಜೀವನಮಟ್ಟ ಮತ್ತು ಜೀತಪದ್ಧತಿಯನ್ನು ಮಾರುವೇಷದಲ್ಲಿದ್ದ ಚ್ಯಾನೆಲ್ಲಿನ ಸಿಬ್ಬಂದಿ ಚಿತ್ರೀಕರಿಸಿಕೊಂಡರು. ಆಗಿನಿಂದ Nikeಯು ಈ ರೀತಿಯ ಶೋಷಣೆ ಇನ್ನುಮುಂದೆ ನಡೆಯದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿಕೆ ನೀಡುತ್ತ ಬಂದಿದೆ.[೨೬]

ಲಿಯು ಕ್ಸಿಯಾಂಗ್ ಒಲಂಪಿಕ್ಸ್‌ನಿಂದ ಹಿಂದೆಗೆದ ನಂತರ Nikeಯು ಒಂದು ಅನಾಮಿಕ ಅಂತರಜಾಲ ಪೋಸ್ಟರೊಂದನ್ನು ಹಿಂಬಾಲಿಸಿ ಗುರುತುಹಚ್ಚಲೆಂದು ಚೀನೀ ಸರ್ಕಾರದ "ಸಂಬಂಧಿಸಿದ ಸರ್ಕಾರೀ ವಿಭಾಗ"ಗಳ ಸಹಾಯ ಕೋರಿದ್ದನ್ನು ಒಪ್ಪಿಕೊಂಡಿತು.[೨೭]

ಪರಿಸರಕ್ಕೆ ಸಂಬಂಧಿಸಿದ ದಾಖಲೆಗಳು

[ಬದಲಾಯಿಸಿ]

ಸುಸಂಬದ್ಧವಾಗಿ ಬೆಳೆಯುತ್ತಿರುವ ವಸ್ತ್ರೋದ್ಯಮವು ಸಾಮಾನ್ಯವಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ. Nikeಯು ಈ ಉದ್ಯಮದಲ್ಲಿ ಬೃಹತ್ ಪಾಲುದಾರನಾಗಿರುವುದರಿಂದ ಅದರ ಹಲವಾರು ಕಾರ್ಯಪ್ರಕ್ರಿಯೆಗಳು ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡುತ್ತವೆ. ಬೆಳೆಯುತ್ತಿರುವ ವಸ್ತ್ರೋದ್ಯಮವು ನೀರಿನ ಕೊರತೆ, ಋತುಮಾನ ಬದಲಾವಣೆ, ಪರಿಸರ ಮಾಲಿನ್ಯ ಹಾಗೂ ಅವಶೇಷ ಇಂಧನ ಮತ್ತು ಕಚ್ಚಾವಸ್ತುಗಳ ಬಳಕೆ - ಇವುಗಳೆಲ್ಲದರಲ್ಲಿ ಏರಿಕೆಯನ್ನುಂಟುಮಾಡುವುದರ ಮೂಲಕ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಇದರ ಜತೆಗೇ, ಇಂದಿನ ವಿದ್ಯುನ್ಮಾನ ವಸ್ತ್ರೋತ್ಪಾದನಾ ಕೇಂದ್ರಗಳು ಅಪಾರ ಶಕ್ತಿಯನ್ನು ವ್ಯಯ ಮಾಡುವುದಲ್ಲದೆ ವೇಗವಾಗಿ ಬದಲಾಗುವ ಫ್ಯಾಶನ್ ಮತ್ತು ಕಡಿಮೆದರದ ವಸ್ತ್ರೋತ್ಪಾದನೆಯ ದೆಸೆಯಿಂದ ಬಳಸಿ ಎಸೆವ ಮನಸ್ಥಿತಿಯನ್ನೂ ಹೆಚ್ಚಿಸಿದೆ.[೨೮] ಈ ಎಲ್ಲಾ ಪರಿಣಾಮಗಳು ಒಟ್ಟಾಗಿ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುವುದಾದರೂ, Nikeಯು ಇತರ ಯೋಜನೆಗಳ ಮೂಲಕ ಇದರ ಪರಿಣಾಮಗಳನ್ನು ತಗ್ಗಿಸಲು ಯತ್ನಿಸುತ್ತಿದೆ. Clean Air-Cool Planet ಎಂಬ ನ್ಯೂಇಂಗ್ಲೆಂಡ್‌ನ ಪರಿಸರ ಸಂಸ್ಥೆಯೊಂದರ ಪ್ರಕಾರ, Nikeಯು ಪರಿಸರ ಸ್ನೇಹೀ ಕಂಪನಿಗಳಲ್ಲಿ (ಒಟ್ಟು ೫೬ರಲ್ಲಿ) ಮೊದಲ ೩ ಸ್ಥಾನಗಳಲ್ಲೊಂದನ್ನು ಹೊಂದಿದೆ.[೨೯] Nikeಯು ತನ್ನ (ಉತ್ಪನ್ನ ಜೀವಮಾನವನ್ನು ಮುಚ್ಚುವ) Nike Grind ಎಂಬ ಕಾರ್ಯಕ್ರಮಕ್ಕಾಗಿ Climate Countsನಂತಹ ಸಂಘಗಳ ಮೆಚ್ಚುಗೆಗೆ ಪಾತ್ರವಾಗಿದೆ.[೩೦] ಇದರ ಜತೆಗೇ, Nikeಯು Earth Day ೨೦೦೮ಗಾಗಿ ಆರಂಭಿಸಿದ ಪ್ರಚಾರಕಾರ್ಯದಲ್ಲಿ ಬಳಸಲಾದ ಜಾಹೀರಾತಿನಲ್ಲಿ ಸ್ಟೀವ್ ನ್ಯಾಶ್‌ನನ್ನು ಫ್ಯಾಕ್ಟರಿಯಲ್ಲಿ ಅವಶ್ಯಕವಿಲ್ಲವೆಂದು ಬದಿಗೆ ತಳ್ಳಲಾದ ಸಿಂಥೆಟಿಕ್ ಲೆದರ್‌ನಿಂದ ತಯಾರಿಸಲಾದ Nikeಯ Trash Talk ಶೂಗಳನ್ನು ಧರಿಸಿರುವಂತೆ ತೋರಿಸಲಾಯಿತು. ಈ Trash Talk ಶೂನ ಸೋಲ್‌ಗೆ ಒಂದು ಶೂ-ಮರುಬಳಕೆ ಕಾರ್ಯಕ್ರಮದಲ್ಲಿ ಉತ್ಪಾದಿಸಲಾದ ನುರಿದ ರಬ್ಬರ್ ಅನ್ನು ಬಳಸಲಾಗಿತ್ತು. Nikeಯ ಇವು ಉತ್ಪಾದನಾ ತ್ಯಾಜ್ಯವನ್ನು ಬಳಸಿ ತಯಾರಿಸಲಾದ ಮೊತ್ತಮೊದಲ ಕಾರ್ಯನಿರ್ವಾಹಕ ಬ್ಯಾಸ್ಕೆಟ್‌ಬಾಲ್ ಶೂಗಳೆಂದು ಹೇಳಿಕೊಂಡಿತಾದರೂ ಈ ರೀತಿಯ ೫,೦೦೦ ಜೊತೆ ಶೂಗಳನ್ನು ಮಾತ್ರ ಮಾರುಕಟ್ಟೆಗಾಗಿ ಉತ್ಪಾದಿಸಲಾಯಿತು.[೩೧] Nikeಯು Nike's Reuse-A-Shoe ಎಂಬ ಇನ್ನೊಂದು ಯೋಜನೆಯನ್ನೂ ಆರಂಭಿಸಿದೆ. ೧೯೯೩ರಲ್ಲಿ ಆರಂಭಿಸಲಾದ ಈ ಕಾರ್ಯಕ್ರಮವು Nikeಯ ದೀರ್ಘಕಾಲೀನ ಯೋಜನೆಯಾಗಿದ್ದು, ಯಾವುದೇ ರೀತಿಯ ಹಳೆಯ ಅಥ್ಲೆಟಿಕ್ ಶೂಗಳನ್ನು ಸಂಗ್ರಹಿಸಿ ಅವನ್ನು ಮರುಬಳಕೆ ಮಾಡುವುದರಿಂದಾಗಿ ಪರಿಸರ ಮತ್ತು ಸಮುದಾಯ - ಎರಡಕ್ಕೂ ಪ್ರಯೋಜನವಾಗುವಂತಿದೆ. ಮರುಬಳಕೆ ಮಾಡಿದ ಶೂಗಳಿಂದ ತಯಾರಿಸಲಾದ ಸಾಮಗ್ರಿಯನ್ನ್ನು ಬ್ಯಾಸ್ಕೆಟ್‌ಬಾಲ್ ಕೋರ್ಟ್‌ಗಳು, ಓಟದ ಟ್ರ್ಯಾಕ್‌ಗಳು ಮತ್ತು ಆಟೋಟ ಮೈದಾನಗಳೇ ಮುಂತಾದ ಕ್ರೀಡಾ ಮೇಲ್ಮೈ ತಯಾರಿಕೆಗಾಗಿ ಬಳಸಲಾಗುತ್ತದೆ.[೩೨]

ವ್ಯಾಪಾರೋದ್ಯಮ ತಂತ್ರಗಾರಿಕೆ

[ಬದಲಾಯಿಸಿ]

Nikeಯ ಮಾರುಕಟ್ಟೆ ತಂತ್ರವು ಕಂಪನಿಯ ಯಶಸ್ಸಿನಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ. Nikeಯನ್ನು ಉತ್ತಮ ವಿನ್ಯಾಸಗಳ, ದುಬಾರಿ ಉತ್ಪನ್ನಗಳನ್ನು ಮಾರುವ ಉತ್ಕೃಷ್ಟ ಬ್ರ್ಯಾಂಡ್ ಎಂದು ಪರಿಗಣಿಸಲಾಗುತ್ತದೆ. Nikeಯು ತನ್ನ ವಿಶಿಷ್ಟವಾದ ಲಾಂಛನ ಮತ್ತು "Just do it" ಎಂಬ ಜಾಹಿರಾತು ಘೋಷಣೆಯಿಂದ ಲಭ್ಯವಾಗಿರುವ ಬ್ರ್ಯಾಂಡ್ ಸ್ವರೂಪದ ಸುತ್ತ ತನ್ನ ಮಾರುಕಟ್ಟೆ ತಂತ್ರವನ್ನು ಸ್ಥಾಪಿಸಿ ಗ್ರಾಹಕರನ್ನು ಸೆಳೆದುಕೊಳ್ಳುತ್ತದೆ.[೩೩] Nike ತನ್ನ ಉತ್ಪನ್ನಗಳಿಗೆ ಪ್ರಚಾರ ನೀಡಲು ಪ್ರಖ್ಯಾತ ಅಥ್ಲೀಟ್‌ಗಳು, ವೃತ್ತಿಪರ ಆಟೋಟ ಟೀಮ್‌ಗಳು ಮತ್ತು ಕಾಲೇಜು ಅಥ್ಲೆಟಿಕ್ ಗುಂಪುಗಳ ಜತೆ ಪ್ರಾಯೋಜಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಹಾಗಿದ್ದರೂ, Nikeಯ ಮಾರುಕಟ್ಟೆ ಪ್ರಚಾರ ಮಿಶ್ರಣವು ಪ್ರಚಾರವೇ ಮಾತ್ರವಲ್ಲದೆ ಇತರ ಅಂಶಗಳನ್ನೂ ಒಳಗೊಂಡಿದೆ. These are summarised below.

ಜಾಹೀರಾತುಗಳು

[ಬದಲಾಯಿಸಿ]

೧೯೭೨ರಿಂದ ೧೯೮೨ರವರೆಗೆ Nikeಯು Track and Field News ನಂತಹ ಉತ್ಕೃಷ್ಟವಾದ ಮುದ್ರಣಗಳನ್ನೊಳಗೊಂಡಂತೆ ಹೆಚ್ಚೂಕಡಿಮೆ ಮುದ್ರಿತ ಜಾಹೀರಾತುಗಳನ್ನು ಮಾತ್ರ ಅವಲಂಬಿಸಿತ್ತು. ಆರಂಭದ ದಿನಗಳ ಜಾಹೀರಾತುಗಳು ಹೊಸ ಶೂಗಳ ಬಿಡುಗಡೆಯ ಮೇಲೆ ಕೇಂದ್ರೀಕೃತವಾಗಿದ್ದುದಲ್ಲದೆ ಯಾವಾಗಲೂ ತಮ್ಮ ಓಟದ, ಬ್ಯಾಸ್ಕೆಟ್‌ಬಾಲ್ ಮತ್ತು ಟೆನಿಸ್ ಶೂಗಳನ್ನು ಧರಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ನಿರೂಪಿಸುತ್ತಿದ್ದವು. ೧೯೭೬ರಲ್ಲಿ ಕಂಪನಿಯು ಮೊತ್ತಮೊದಲ ಬಾರಿಗೆ John Brown and Partners ಎಂಬ ಹೊರಗಿನ ಜಾಹೀರಾತು ಏಜೆನ್ಸಿಯನ್ನು ತೈನಾತಿಗೊಳಿಸಿದ ನಂತರ ಅವರು ೧೯೭೭ರಲ್ಲಿ Nikeಯ ಪ್ರಪ್ರಥಮ first 'ಲಾಂಛನ ಜಾಹೀರಾತು' ಎಂದೇ ಪರಿಗಣಿಸಲಾಗುವ ಪ್ರಚಾರವನ್ನು ವಿನ್ಯಾಸಗೊಳಿಸಿದರು. ಹಳ್ಳಿಗಾಡಿನ ರಸ್ತೆಯೊಂದರ ಮೇಲೆ ಏಕಾಂಗಿ ಓಟಗಾರನೊಬ್ಬ ಓಡುತ್ತಿರುವ ಚಿತ್ರವಿದ್ದ, "There is no finish line" ಎಂಬ ಟ್ಯಾಗ್‌ಲೈನನ್ನು ಹೊಂದಿದ್ದ ಆ ಮುದ್ರಿತ ಜಾಹೀರಾತು ಕೂಡಲೇ ಜನಪ್ರಿಯವಾಗಿ ಉತ್ಕೃಷ್ಟ ಜಾಹೀರಾತುಗಳ ಸಾಲಿಗೆ ಸೇರಿಕೊಂಡಿತು. ಈ ಸರಳ ಜಾಹೀರಾತಿನ ಯಶಸ್ಸಿನಿಂದಾಗಿ ಪ್ರೇರಿತಗೊಂಡ Nikeಯು ಇದೇ ಚಿತ್ರವನ್ನೊಳಗೊಂಡ ಪೋಸ್ಟರೊಂದನ್ನು ಬಿಡುಗಡೆ ಮಾಡುವುದರೊಂದಿಗೆ ತನ್ನ ಪೋಸ್ಟರ್ ವಹಿವಾಟನ್ನು ಆರಂಭಿಸಿತು.

೧೯೮೨ರಲ್ಲಿ Nikeಯು ನ್ಯೂಯಾರ್ಕ್ ಮ್ಯಾರಥಾನ್ ವೇಳೆಯಲ್ಲಿ Wieden+Kennedy ಎಂಬ ಹೊಸ ಜಾಹೀರಾತು ಏಜೆನ್ಸಿಯಿಂದ ನಿರ್ಮಿತವಾದ ತನ್ನ ಮೊತ್ತಮೊದಲ ರಾಷ್ಟ್ರೀಯ ದೂರದರ್ಶನದ ಜಾಹೀರಾತುಗಳನ್ನು ಪ್ರಸಾರ ಮಾಡತೊಡಗಿತು. ಇದರಿಂದ Nike ಮತ್ತು W+Kಯ ನಡುವೆ ಆರಂಭವಾದ ಯಶಸ್ವೀ ಪಾಲುದಾರಿಕೆಯು ಇಂದಿನವರೆಗೂ ಹಾಗೇ ಉಳಿದುಕೊಂಡು ಬಂದಿದೆ. Cannes Advertising Festivalನ ಸಂದರ್ಭದಲ್ಲಿ Nike ಅನ್ನು ಎರಡು ಬಾರಿ 'ವರ್ಷದ ಜಾಹೀರಾತುದಾರ'ನ ಬಿರುದಿನೊಂದಿಗೆ ಸನ್ಮಾನಿಸಲಾಗಿದೆ ಮತ್ತು ಈ ಗೌರವವು ಎರಡು ಬಾರಿ ಲಭಿಸಿರುವ ಏಕೈಕ ಸಂಸ್ಥೆ ಇದಾಗಿದೆ(೧೯೯೪, ೨೦೦೩).[೩೪]

೧೯೯೦ರ ದಶಕದಲ್ಲಿ Emmy Awardಗಳನ್ನು ಮೊದಲ ಬಾರಿಗೆ ನೀಡಲಾರಂಭಿಸಿದಂದಿನಿಂದ Nikeಗೆ ಎರಡು ಬಾರಿ ಉತ್ತಮ ಜಾಹೀರಾತಿಗೆ ನೀಡಲಾಗುವ ಪ್ರಶಸ್ತಿಗಳು ಲಭಿಸಿದೆ. ಇದರಲ್ಲಿ ಜನವರಿ ೧ರಂದು Y೨Kಯ ಬಗ್ಗೆ ನುಡಿಯಲಾದ ಎಲ್ಲ ಭವಿಷ್ಯಗಳೂ ನಿಜವಾದಲ್ಲಿ ಒಬ್ಬ ಓಟಗಾರ ಎದುರಿಸಬೇಕಾಗಿ ಬರಬಹುದಾದ ಪರಿಸ್ಥಿತಿಗಳ ಬಗ್ಗೆ ವಿಡಂಬನಾ ನೋಟ ಬೀರುವ "The Morning After," ಎಂಬುದು ಮೊದಲನೆಯದು.[೩೫] Nikeಯ ಎರಡನೇ ಎಮ್ಮಿ ಪ್ರಶಸ್ತಿಯು ಹಲವಾರು ಪ್ರಖ್ಯಾತ ಮತ್ತು ದಿನನಿತ್ಯದ ಅಥ್ಲೀಟ್‌ಗಳು ಹಲವಾರು ಅಥ್ಲೆಟಿಕ್ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ತೋರಿಸುವ 2002ರ "Move," ಎಂಬ ಜಾಹೀರಾತಿಗೆ ಲಭಿಸಿದೆ.[೩೬]

ಪ್ರಶಸ್ತಿಗಳನ್ನು ಗಳಿಸುವುದರ ಜತೆಗೇ, Nike ಜಾಹೀರಾತುಗಳು ಹಲವಾರು ವಿವಾದಗಳನ್ನು ಹುಟ್ಟುಹಾಕುವುದಕ್ಕೂ ಕಾರಣವಾಗಿವೆ:

Kasky ವರ್ಸಸ್ Nike

[ಬದಲಾಯಿಸಿ]

೨೦೦೨ರಲ್ಲಿ ಗ್ರಾಹಕ ಜಾಗೃತಿ ಕಾರ್ಯಕರ್ತನಾಗಿದ್ದ ಮಾರ್ಕ್ ಕ್ಯಾಸ್ಕೈ ಎಂಬಾತನು Nikeಯು ತನ್ನ ಫ್ಯಾಕ್ಟರಿಗಳಲ್ಲಿನ ಕಾರ್ಮಿಕರ ಪರಿಸ್ಥಿತಿಗಳ ಬಗ್ಗೆಗಿನ ಟೀಕೆಗಳಿಗೆ ಪ್ರತಿಯಾಗಿ ಬಿಡುಗಡೆಮಾಡಿದ ಕೆಲವು ನಿಯತಕಾಲಿಕಗಳಲ್ಲಿನ ಜಾಹೀರಾತುಗಳು ಹಾಗೂ ಪತ್ರಗಳ ಬಗ್ಗೆ ಕ್ಯಾಲಿಫೋರ್ನಿಯಾದಲ್ಲಿ ಮೊಕದ್ದಮೆ ಹೂಡಿದನು. ಕ್ಯಾಸ್ಕೈನ ಪ್ರಕಾರ ಕಂಪೆನಿಯು ಹುಸಿ ಜಾಹೀರಾತು ಎಂದು ಹೇಳಬಹುದಾದ ಎಲ್ಲ ಲಕ್ಷಣಗಳನ್ನು ಹೊಂದಿದ ನಿರೂಪಣೆಗಳನ್ನು ಮಾಡಿತ್ತು. ಇದಕ್ಕೆ ಪ್ರತಿಯಾಗಿ Nikeಯು ಕಂಪೆನಿಯು ಒಂದು ಸಾರ್ವಜನಿಕ ವಿಷಯದ ಬಗ್ಗೆ ವ್ಯಕ್ತಪಡಿಸುವಂಥ ತನ್ನ ಅಭಿಪ್ರಾಯಗಳು ಹುಸಿ ಜಾಹೀರಾತು ಕಾನೂನುಗಳಡಿ ಬರುವುದಿಲ್ಲವೆಂದೂ, ಇವು First Amendmentನ ರಕ್ಷೆಗೆ ಅರ್ಹವಾಗಿವೆಯೆಂದೂ ಹೇಳಿಕೆ ನೀಡಿತು. ಅಲ್ಲಿನ ಲೋಕಲ್ ಕೋರ್ಟು Nikeಯ ವಕೀಲರೊಂದಿಗೆ ಸಹಮತ ಸೂಚಿಸಿದರೂ, ಈ ತೀರ್ಪನ್ನು ರದ್ದುಗೊಳಿಸಿದ ಕ್ಯಾಲಿಫೋರ್ನಿಯಾ ಸುಪ್ರೀಮ್ ಕೋರ್ಟ್ ಒಂದು ಕಾರ್ಪೊರೇಶನ್‌ನ ಎಲ್ಲ ನಿವೇದನೆಗಳೂ ವಾಣಿಜ್ಯ ಮಾತುಕತೆಗಳಾಗಿರುವ ಕಾರಣ ಅವು ಹುಸಿ ಜಾಹೀರಾತಿನ ಕಾನೂನುಗಳ ವ್ಯಾಪ್ತಿಗೆ ಒಳಪಡುವುವೆಂದೂ ಹೇಳಿತು.

ಈ ಕೇಸನ್ನು (Nike ವರ್ಸಸ್ Kasky) ಸಮೀಕ್ಷಿಸಲು ಯುನೈಟೆಡ್ ಸ್ಟೇಟ್ಸ್ ಸುಪ್ರೀಮ್ ಕೋರ್ಟ್ ಒಪ್ಪಿಕೊಂಡಿತಾದರೂ ಕೊನೆಯಲ್ಲಿ ಸಂವಿಧಾನಾತ್ಮಕ ವಿವಾದಗಳ ಬಗ್ಗೆ ಯಾವುದೇ ಪ್ರಮುಖ ತೀರ್ಪನ್ನು ನೀಡದಲೇ ಈ ಕೇಸನ್ನು ಟ್ರಯಲ್ ಕೋರ್ಟಿಗೆ ವಾಪಾಸು ಕಳುಹಿಸಿತು. Nikeಯ ಹೇಳಿಕೆಗಳ ಸತ್ಯಾಸತ್ಯತೆಯು ಗೊತ್ತುಪಡಿಸಲಾಗುವುದಕ್ಕೆ ಮುನ್ನವೇ ಎರಡೂ ಪಕ್ಷಗಳು ಕೋರ್ಟಿನ ಹೊರಗೆ ತಮ್ಮ ವಿವಾದವನ್ನು ಇತ್ಯರ್ಥಗೊಳಿಸಿಕೊಂಡರೂ, Nikeಯ ಇಮ್ಯೂನಿಟಿ ಹಕ್ಕುಬಾಧ್ಯತೆಯನ್ನು ಕ್ಯಾಲಿಫೋರ್ನಿಯಾ ಸುಪ್ರೀಮ್ ಕೋರ್ಟು ನಿರಾಕರಿಸಿದ್ದು ಇಂತಹ ಕೇಸುಗಳಿಗೆ ಒಂದು ಮಾದರಿಯಾಗುಳಿಯಿತು. ಈ ಮೊಕದ್ದಮೆಯು ಪೌರ ಸ್ವಾತಂತ್ರ್ಯಗಳ ಬಗ್ಗೆ ಕಾಳಜಿ ಹೊಂದಿದ್ದ ಗುಂಪುಗಳು ಮತ್ತು ಕೆಟ್ಟ ಕಾರ್ಯಾಗಾರ-ವಿರೋಧೀ ಕಾರ್ಯಕರ್ತರ ವಿಶೇಷ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವುದರಲ್ಲಿ ಸಫಲವಾಯಿತು.

ಬೀಟ್‌ಲ್ಸ್ ಹಾಡು

[ಬದಲಾಯಿಸಿ]

Beatles ತಂಡದ ಅಧಿಕೃತ ರೆಕಾರ್ಡ್ ಸಂಸ್ಥೆಯಾದ Apple Recordsನ ಇಚ್ಛೆಯನ್ನೂ ಮೀರಿ Nikeಯ ೧೯೮೭ರ ಒಂದು ಜಾಹೀರಾತು ಬೀಟ್‌ಲ್ಸ್ ಹಾಡು "ರೆವೊಲ್ಯೂಶನ್" ಅನ್ನು ಬಳಕೆ ಮಾಡಿದ್ದರಿಂದ ಕಟುವಾದ ಟೀಕೆಗೆ ಗುರಿಯಾಯಿತು. Nikಯು Beatlesನ ರೆಕಾರ್ಡುಗಳ ಉತ್ತರ ಅಮೆರಿಕನ್ ಪರವಾನಗಿ ಹೊಂದಿದ್ದ Capitol Records Inc.ಗೆ ಈ Beatles ಹಾಡಿನ ಒಂದು ವರ್ಷದ ಹಕ್ಕು ಪಡೆದುಕೊಳ್ಳಲು $೨೫೦,೦೦೦ದಷ್ಟು ಮೊತ್ತವನ್ನು ನೀಡಿತು.

Appleವು Nike Inc., Capitol Records Inc., EMI Records Inc. ಮತ್ತು Wieden+Kennedy ಅಡ್ವರ್ಟೈಸಿಂಗ್ ಏಜೆನ್ಸಿಗಳ ಮೇಲೆ $೧೫ million ಪರಿಹಾರಧನಕ್ಕಾಗಿ ಮೊಕದ್ದಮೆ ಹೂಡಿತು.[೩೭] ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ Capitol-EMI, ಈ ಮೊಕದ್ದಮೆಯು 'ತಳಹದಿರಹಿತ’ವಾಗಿರುವುದೆಂದೂ, Capitol "Revolution"ನ ಪರವಾನಗಿಯನ್ನು "Appleನ ಶೇರುದಾರಳೂ, ನಿರ್ದೇಶಕಳೂ ಆಗಿದ್ದ ಯೋಕೋ ಓನೋ ಲೆನನ್‌ಳ ಉತ್ತೇಜನ ಮತ್ತು ಬೆಂಬಲದಿಂದ" ಪಡೆದುಕೊಂಡಿತ್ತು ಎಂದು ಘೋಷಿಸಿತು.

ನವೆಂಬರ್ ೯, ೧೯೮೯ರಂದು Los Angeles Daily News ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ "Beatles ಮತ್ತು ಅದರ ವಿವಿಧ ಅಮೆರಿಕನ್ ಮತ್ತು ಬ್ರಿಟೀಶ್ ರೆಕಾರ್ಡ್ ಸಂಸ್ಥೆಗಳ ನಡುವಣ ಮೊಕದ್ದಮೆಗಳ ಗೋಜಲನ್ನು ಈಗ ಬಿಡಿಸಿ ಇತ್ಯರ್ಥಗೊಳಿಸಲಾಗಿದೆ" ಎಂದು ಬರೆಯಲಾಗಿತ್ತು. ಕೋರ್ಟಿನ ಹೊರಗೆ ಇತ್ಯರ್ಥವಾದ ಈ ಮೊಕದ್ದಮೆಗಳ ಒಪ್ಪಂದವೊಂದರ ಪ್ರಕಾರ ಇದರ ಮಾಹಿತಿಗಳನ್ನು ಬಹಿರಂಗಪಡಿಸುವಂತಿರಲಿಲ್ಲ. ಈ ಒಪ್ಪಂದವು ಈ ಮೂರು ಬಣಗಳ ನಡುವೆ ನಿಷ್ಕರ್ಷೆಯಾಯಿತು: ಜಾರ್ಜ್ ಹ್ಯಾರಿಸನ್, ಪಾಲ್ ಮೆಕ್‌ಕಾರ್ಟ್ನೀ, ರಿಂಗೋ ಸ್ಟಾರ್; ಯೋಕೋ ಓನೋ; ಹಾಗೂ Apple, EMI ಮತ್ತು Capitol Records. Yoko Onoಳ ವಕ್ತಾರ ಬರೆದುಕೊಂಡಂತೆ "ಇದರ ವಿಷಯಗಳು ಎಷ್ಟೊಂದು ಗೊಂದಲಮಯವಾಗಿದೆಯೆಂದರೆ ಇದರ ಪ್ರಮುಖರಿಗೆ ಹತ್ತಿರವಾಗಿರುವವರಿಗೂ ಇವನ್ನೆಲ್ಲ ಅರ್ಥೈಸಿಕೊಳ್ಳುವುದು ಕಷ್ಟಕರವೆನಿಸುತ್ತಿದೆ. ಈ ಕೇಸಿನಿಂದ ಬಂದ ಲಾಭದಿಂದ ಅಟ್ಲಾಂಟಿಕ್‌ನ ಎರಡೂ ಕಡೆಗಳಲ್ಲಿರುವ ಇದರ ವಕೀಲರುಗಳು ತಮ್ಮ ಮಕ್ಕಳ ಕಾಲೇಜು ಶಿಕ್ಷಣದವರೆಗಿನ ಸಂಪೂರ್ಣ ವೆಚ್ಚವನ್ನು ಭರಿಸಿರಬಹುದು."

Nikeಯು ಮಾರ್ಚ್ ೧೯೮೮ರ ಹೊತ್ತಿಗೆ "Revolution" ಹಾಡನ್ನು ಬಳಸಲಾಗಿದ್ದ ಜಾಹೀರಾತಿನ ಪ್ರಸಾರವನ್ನು ನಿಲ್ಲಿಸಿತು. ನಂತರದಲ್ಲಿ ಯೋಕೋ ಓನೋ Nikeಗೆ ಜಾನ್ ಲೆನನ್‌ನ "ಇನ್‌ಸ್ಟಂಟ್ ಕರ್ಮಾ" ಹಾಡನ್ನು ಇನ್ನೊಂದು ಜಾಹೀರಾತಿನಲ್ಲಿ ಬಳಸಲು ಅನುಮತಿ ನೀಡಿದಳು.

Minor Threat ಜಾಹೀರಾತು

[ಬದಲಾಯಿಸಿ]

೨೦೦೫ರ ಜೂನ್ ಅಂತ್ಯದ ವೇಳೆಗೆ Nikeಗೆ ಡಿಸ್ಕಾರ್ಡ್ ರೆಕಾರ್ಡ್ಸ್‌ನ ಮಾಲೀಕನೂ,ಫುಗಾಜೀ ಎಂಡ್ ದ ಈವನ್ಸ್‌ನ ಗಿಟಾರ್ ವಾದಕ/ಹಾಡುಗಾರನೂ, ಪಂಕ್ ತಂಡ ಮೈನರ್ ಥ್ರೆಟ್‌ನ ಪ್ರಮುಖನೂ ಆಗಿದ್ದ ಇಯಾನ್ ಮೆಕ್ ಏಯ್ ಸಲ್ಲಿಸಿದ ಕೃತಿಚೌರ್ಯ ಮತ್ತು ಕಲಾಚೌರ್ಯದ ದೂರಿನ ಪ್ರಕಾರ, ಮೈನರ್ ಥ್ರೆಟ್‌ನ 1981ರ ಅದೇ ಶೀರ್ಷಿಕೆಯ ಅಲ್ಬಮ್‌ನ ಮೇಲುಹೊದಿಕೆಯ ಕಲೆಯನ್ನು Nike Skateboardingನ ೨೦೦೫ರ ಈಸ್ಟ್ ಕೋಸ್ಟ್ ಪ್ರಾತ್ಯಕ್ಷಿಕಾ ಪ್ರವಾಸದಲ್ಲಿ ಅಂತೆಯೇ ಬಳಸಿಕೊಳ್ಳಲಾಗಿತ್ತು.
ಜೂನ್ ೨೭ರಂದು Nike Skateboardingನ ಜಾಲತಾಣವು Dischord, Minor Threat, ಮತ್ತು ಈ ಎರಡರ ಅಭಿಮಾನಿಗಳಿಂದ ಬಹಿರಂಗವಾಗಿ ಕ್ಷಮಾಪಣೆ ಕೇಳಿತಲ್ಲದೆ ಕೃತಿಚೌರ್ಯವಾಗಿದ್ದ ಎಲ್ಲ ಫ್ಲಯರ್‌ಗಳನ್ನೂ ತೆಗೆದುಹಾಕಿ ನಾಶಮಾಡಲು ಪ್ರಯತ್ನಿಸುತ್ತಿರುವುದಾಗಿ ಸಾರಿತು. ಅದರ ವಿನ್ಯಾಸಕಾರರು ಸ್ಕೇಟ್‌ಬೋರ್ಡರ್‌ಗಳೂ, ಮೈನರ್ ಥ್ರೆಟ್‌ನ ಅಭಿಮಾನಿಗಳೂ ಆಗಿದ್ದರಿಂದ ಅವರುಗಳು ಈ ಜಾಹೀರಾತನ್ನು ಆ ಸಂಗೀತತಂಡಕ್ಕೆ ಗೌರವ ಸಲ್ಲಿಸುವ ಮತ್ತು ಅಭಿಮಾನ ತೋರುವ ಸಲುವಾಗಿ ನಿರ್ಮಿಸಿದರೆಂದೂ ಹೇಳಿಕೆ ನೀಡಲಾಯಿತು.[೩೮] ಕೊನೆಗೂ Nike ಮತ್ತು Minor Threatನ ನಡುವಿನ ಈ ವಿವಾದವನ್ನು ಕೋರ್ಟಿನ ಹೊರಗೇ ಇತ್ಯರ್ಥಗೊಳಿಸಲಾಯಿತು. ಈ ನಿಷ್ಕರ್ಷೆಯ ಅಧಿಕೃತ ಅಂಶಗಳನ್ನು ಎಂದಿಗೂ ಬಹಿರಂಗಗೊಳಿಸಲಾಗಲಿಲ್ಲ.

ಹಾರರ್ ಜಾಹೀರಾತು

[ಬದಲಾಯಿಸಿ]

ಹಾರರ್ ಚಲನಚಿತ್ರಗಳನ್ನು ಲೇವಡಿ ಮಾಡುವಂತಿರುವ ಈ ಜಾಹೀರಾತಿನಲ್ಲಿ, ಒಲಿಂಪಿಕ್ ಓಟಗಾರ ಸುಜಿ ಫೇವರ್-ಹ್ಯಾಮಿಲ್ಟನ್ ಯಾವುದೋ ಒಂದು ಕಗ್ಗಾಡಿನಲ್ಲಿರುವ ಮನೆಯೊಂದರಲ್ಲಿ ಸ್ನಾನ ಮಾಡುತ್ತಿರುವಾಗ ಮುಖವಾಡ ಧರಿಸಿದ ಯಾಂತ್ರಿಕ ಗರಗಸಧಾರೀ ಕೊಲೆಗಾರನೊಬ್ಬ ಪ್ರತ್ಯಕ್ಷನಾಗುತ್ತಾನೆ. ತಾನು ಬಳಸುವ Nike ಉತ್ಪನ್ನಗಳಿಂದಾಗಿ ಕೊಲೆಗಾರನಿಗಿಂತ ಉತ್ತಮವಾದ ದೈಹಿಕ ಸಾಮರ್ಥ್ಯ ಪಡೆದಿರುವ ಹ್ಯಾಮಿಲ್ಟನ್ ತನ್ನ ಮಿಂಚಿನ ಓಟ ಕಿತ್ತು ತಪ್ಪಿಸಿಕೊಳ್ಳುತ್ತಾಳೆ. ಜಾಹೀರಾತಿನ ಕೊನೆಯ ದೃಶ್ಯದಲ್ಲಿ ಓಡಿ ಸುಸ್ತಾಗಿರುವ ಕೊಲೆಗಾರ ಕುಂಟಿಕೊಂಡು ಹೋಗುತ್ತಿರುವುದನ್ನು ತೋರಿಸಲಾಗುತ್ತದೆ ಮತ್ತು "ಕ್ರೀಡೆ ಏಕೆ?" ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪ್ರಶ್ನೆಗೆ ಬೇಗನೆ "ನೀವು ದೀರ್ಘಕಾಲ ಬದುಕುವಿರಿ, ಅದಕ್ಕೆ" ಎಂಬ ಉತ್ತರ ನೀಡಲಾಗುತ್ತದೆ.

೨೦೦೦ದ ಬೇಸಿಗೆ ಒಲಂಪಿಕ್ಸ್(ಶುಕ್ರವಾರ)ನ ಸಮಯದಲ್ಲಿ ಮೊತ್ತಮೊದಲ ಬಾರಿಗೆ ಪ್ರಸಾರಗೊಂಡ "ಹಾರರ್" ಎಂಬ ಶೀರ್ಷಿಕೆ ಹೊತ್ತ ಈ ಜಾಹೀರಾತಿನ ವಿರುದ್ಧ ಸುಮಾರು ೨೦೦ ದೂರುಗಳು (NBCಯ ಪ್ರಕಾರ) ದಾಖಲಾದುದರಿಂದ ಜಾಲವು ಆ ಭಾನುವಾರದ ಹೊತ್ತಿಗೆ ಜಾಹೀರಾತನ್ನು ವಾಪಾಸು ತೆಗೆದುಕೊಂಡಿತು. ESPN ಕೂಡ ಹೀಗೆಯೇ ಮಾಡಿತಾದರೂ ಈ ಜಾಹೀರಾತು FOX, WB, UPN ಮತ್ತು Comedy Central ಮುಂತಾದ ಮಾಧ್ಯಮಜಾಲಗಳಲ್ಲಿ ಬಹಳ ಕಡಿಮೆ ಅಥವಾ ಯಾವುದೇ ವಿವಾದಗಳಿಲ್ಲದೆಯೇ ಪ್ರಸಾರವಾಗುತ್ತ ಇತ್ತು.

ಇದರ ವಿರುದ್ಧದ ಪ್ರತಿಭಟನಾಕಾರರು ಈ ಜಾಹೀರಾತು ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ತಿಳಿಯಾದ ರೀತಿಯಲ್ಲಿ ಪ್ರತಿಬಿಂಬಿಸುತ್ತದೆಯೆಂದೂ, ಮತ್ತೂ ಕೆಲವರು ಇದನ್ನು ನೋಡಲು, ಅದರಲ್ಲಿಯೂ ವಿಶೇಷವಾಗಿ ಒಲಂಪಿಕ್ಸ್ ಅನ್ನು ನೋಡಿ ಸಂತಸಪಡುವ ಮಕ್ಕಳಿಗೆ ವಿಪರೀತ ಭಯವಾಗುತ್ತದೆಯೆಂದೂ ವಾದಿಸಿದರು. Nikeಯ ವಕ್ತಾರರು ಈ ಜಾಹೀರಾತು ಹಾಸ್ಯಮಯವಾದ್ದೆಂದೂ, ಸಾಮಾನ್ಯವಾಗಿ ಅಸಹಾಯಕ ಮಹಿಳೆಯು ಕೊಲೆಗೀಡಾಗುವದನ್ನು ತೋರಿಸುವ ಹಾರರ್ ಚಲನಚಿತ್ರಗಳನ್ನು ಇಲ್ಲಿ ಲೇವಡಿ ಮಾಡುವ ಉದ್ದೇಶ ಮಾತ್ರವಿದೆಯೆಂದೂ ಪ್ರತ್ಯುತ್ತರ ನೀಡಿದರು. ಹ್ಯಾಮಿಲ್ಟನ್ ಕೂಡ ಈ ಜಾಹೀರಾತಿನಲ್ಲಿ ಹೆಣ್ಣು ಗಂಡನ್ನು ಸೋಲಿಸುವಂತೆ ಪ್ರತಿಬಿಂಬಿಸುವುದರಿಂದಾಗಿ ಪ್ರೇರಣೆಯುಂಟುಮಾಡುವಂತಿದೆಯೆಂದೂ ಹೇಳಿಕೆ ನೀಡಿದಳು.

ಚೈನೀಸ್ ಥೀಮಿನ ಜಾಹೀರಾತು

[ಬದಲಾಯಿಸಿ]

೨೦೦೪ರಲ್ಲಿ ಲೆಬ್ರಾನ್ ಜೇಮ್ಸ್‌ ಬಗೆಗಿನ ಜಾಹೀರಾತೊಂದರಲ್ಲಿ ಸಮರ ವಿದ್ಯೆಯನ್ನುಪಯೋಗಿಸಿ ಕಾರ್ಟೂನ್‌ನ ಹಲವು ಸಮರವಿದ್ಯಾಪಾರಂಗತರನ್ನು ಸೋಲಿಸಿ ಚೀನೀ ಡ್ರ್ಯಾಗನ್ ಅನ್ನು ಕೊಲ್ಲುವಂತೆ ತೋರಿಸಲಾದಾಗ ಚೀನೀ ಅಧಿಕಾರಿಗಳು ಇದನ್ನು ದೈವದೂಷಣೆಯೆಂದೂ, ಡ್ರ್ಯಾಗನ್ ಮತ್ತು ರಾಷ್ಟ್ರೀಯ ಗೌರವಕ್ಕೆ ಉಂಟುಮಾಡಲಾದ ಅವಮಾನವೆಂದೂ ಬಣ್ಣಿಸಿದರು. ಈ ಜಾಹೀರಾತನ್ನು ನಂತರ ಚೀನಾದಲ್ಲಿ ಬಹಿಷ್ಕರಿಸಲಾಯಿತು. ೨೦೦೭ರ ಆರಂಭದಲ್ಲಿ ಈ ಜಾಹೀರಾತನ್ನು ಚೀನಾದಲ್ಲಿ ಬಹಿರಂಗಪಡಿಸಲಾಗದಿರುವ ಕಾರಣಗಳಿಂದ ಮರುಪ್ರಸಾರ ಮಾಡಲು ಆರಂಭಿಸಲಾಯಿತು.[೩೯]

ಪ್ರೆಟ್ಟೀ

[ಬದಲಾಯಿಸಿ]

2006 U.S. Openನ ಹೊತ್ತಿಗೆ ತನ್ನ ಉತ್ಪನ್ನಗಳಿಗೆ ಪ್ರಚಾರ ನೀಡಲು Nike ಮಾರಿಯಾ ಶಾರಪೋವಾಳನ್ನು ಚಿತ್ರೀಕರಿಸಿದ್ದ Pretty ಎಂಬ ದೂರದರ್ಶನ ಜಾಹೀರಾತನ್ನು ಎಲ್ಲೆಡೆ ಪ್ರಸಾರ ಮಾಡಲಾರಂಭಿಸಿತು. ಈ ಜಾಹೀರಾತು ಜನಪ್ರಿಯವಾಗಿ ವಿಮರ್ಶಕವರ್ಗದ ಮೆಚ್ಚುಗೆಯನ್ನೂ ಪಡೆದುದಲ್ಲದೆ ಎರಡು Cannes Gold Lionsಗಳನ್ನೂ ಒಳಗೊಂಡಂತೆ ಜಾಹೀರಾತು ಜಗತ್ತಿನ ಹಲವಾರು ಉಚ್ಚತಮ ಪ್ರಶಸ್ತಿಗಳನ್ನೂ ಗಳಿಸಿಕೊಂಡಿತು.

ಸ್ಥಳಗಳು

[ಬದಲಾಯಿಸಿ]
ಆಕ್ಸ್ ಫರ್ಡ್ ಸ್ಟ್ರೀಟ್ ನ ನೈಕ್ ಟೌನ್ , ಲಂಡನ್

Nike (ತನ್ನ Nike ಮತ್ತು "Niketown" ಅಂಗಡಿಗಳನ್ನೂ ಒಳಗೊಂಡಂತೆ) ಯು.ಎಸ್‌ನ ಸುಮಾರು ೨೫,೦೦೦ ವರ್ತಕರಿಗೆ ಹಾಗೂ ವಿಶ್ವದ ೧೬೦ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರುತ್ತದೆ. ಈ ಕಂಪನಿಯು ತನ್ನ ಜಾಲತಾಣವಾದ nikeid.comನಲ್ಲಿ ತನ್ನದೇ ಆದ ವಿಶಿಷ್ಟ NIKEiD ಎಂಬ ಕಾರ್ಯಕ್ರಮವನ್ನು ಹೊಂದಿದ್ದು ಇದರ ಮೂಲಕ ಗ್ರಾಹಕರು ಕೆಲವು ಮಾದರಿಯ Nike ಶೂಗಳ ವಿನ್ಯಾಸ ಮಾಡಿ ತಮ್ಮ ವಿನ್ಯಾಸಗಳನ್ನು ನೇರವಾಗಿ ಉತ್ಪಾದಕರ ಮೂಲಕವೇ ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡಲಾಗಿದೆ. Nikeಯು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಸ್ವತಂತ್ರ ವಿತರಕರು, ಪರವಾನಗಿದಾರರು, ಹಾಗೂ ಸಹಾಯಕರುಗಳ ಮೂಲಕ ಮಾರುತ್ತದೆ.

ಪ್ರಾಯೋಜಕತ್ವ

[ಬದಲಾಯಿಸಿ]

ನೈಕ್ ಸಂಸ್ಥೆಯು ವಿವಿಧ ಕ್ರೀಡೆಗಳ ಮೇಲ್ದರ್ಜೆಯ ಆಟಗಾರರಿಗೆ ಉಪಯೋಗಿಸಲು ಮತ್ತು ಅವರ ಕಂಪೆನಿಯ ತಂತ್ರಜ್ಞಾನ ಮತ್ತು ವಿನ್ಯಾಸಗಳ ಜಾಹೀರಾತುಗಳನ್ನು ಉತ್ತೇಜಿಸಲು ತನ್ನ ಕಂಪೆನಿಯ ಉತ್ಪನ್ನಗಳನ್ನು ನೀಡುತ್ತದೆ

ರೊಮಾನಿಯನ್ ನ ಟೆನ್ನಿಸ್ ಆಟಗಾರ ಇಲೀ ನಸ್ತಾಸೆ ಅವರು ನೈಕ್ ನ ಪ್ರಥಮ ಧೃಡೀಕೃತ ವೃತ್ತಿನಿರತ ಆಟಗಾರರಾಗಿದ್ದರು, ಮತ್ತು ಓಟದ ದಂತಕತೆಯಾದ ಸ್ಟೀವ್ ಫ್ರಿಫೊಂಟೈನ್‌ಅವರು ಸಂಸ್ಥೆಯ ಮೊದಲ ಧೃಡೀಕೃತ ಟ್ರ್ಯಾಕ್ ಓಟಗಾರರಾಗಿದ್ದರು. ಫ್ರಿಫೊಂಟೈನ್ ಓರೆಗಾನ್ ವಿಶ್ವವಿದ್ಯಾಲಯದಲ್ಲಿ ಸಂಸ್ಥೆಯ ಸಹ-ಸಂಸ್ಥಾಪಕ ಬಿಲ್ ಬೊವರ್ ಮ್ಯಾನ್‌ನ ವಿದ್ಯಾರ್ಥಿಯಾಗಿದ್ದನು. ಇಂದು,ನೈಕ್ ಸಂಸ್ಥೆಯ ಮುಖ್ಯ ಕಾರ್ಯಾಲಯದ ಕಟ್ಟಡಕ್ಕೆ ಅವನ ಗೌರವಾರ್ಥವಾಗಿ ದಿ ಸ್ಟೀವ್ ಫ್ರಿಫೊಂಟೈನ್ ಬಿಲ್ಡಿಂಗ್ ಎಂದು ಹೆಸರಿಡಲಾಗಿದ

ಫ್ರಿಫೊಂಟೈನ್‌ನ ಜೊತೆಯಲ್ಲಿಯೇ, ನೈಕ್ ನಂತರದ ವರ್ಷಗಳಲ್ಲಿ ಇತರ ಹಲವು ಯಶಸ್ವಿ ಟ್ರ್ಯಾಕ್ ಮತ್ತು ಮೈದಾನದ ಆಟಗಾರರಾದ ಕಾರ್ಲ್ ಲಿವಿಸ್, ಜಾಕಿ ಜೊನರ್-ಕೆರ್ಸೀ ಮತ್ತು ಸೆಬಾಸ್ಟಿಯನ್ ಕೋ ಅವರನ್ನು ಪ್ರಾಯೋಜಿಸಿದೆ. ಹೀಗಿದ್ದರೂ Nikeಯ ಪ್ರಚಾರ ಮತ್ತು ಮಾರುಕಟ್ಟ್ರೆಯಲ್ಲಿ ಗಮನಾರ್ಹ ಮತ್ತು ಅತಿ ಹೆಚ್ಚಿನ ಏರಿಕೆಯುಂಟಾಗಿದ್ದು ೧೯೮೪ರಲ್ಲಿ ಅದು ಬ್ಯಾಸ್ಕೆಟ್‍ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ ತನ್ನ ಯಶಸ್ವೀ ವೃತ್ತಿ ಜೀವನಕ್ಕೆ ಸಮಾನಾಂತರವಾಗಿ ಜತೆಗೇ ಸ್ಪೈಕ್ ಲೀಯ ಜತೆಗೆ ಮಾರ್ಸ್ ಬ್ಲ್ಯಾಕ್‌ಮೋನ್‌ನ ರೂಪದಲ್ಲಿ ಪ್ರವರ್ತಕನಾದ ಮೇಲೆಯೇ. ,

ಕಳೆದ ೨೦ ವರ್ಷಗಳಲ್ಲಿ ವಿಶೇಷವಾಗಿ,ನೈಕ್ ಪ್ರಮುಖ ಟೆನ್ನಿಸ್ ಆಟಗಾರರರಿಗೆ ಉಡುಪು/ಪಾದರಕ್ಷೆಗಳ ಪ್ರಧಾನ ಪ್ರಾಯೋಜಕತ್ವವನ್ನು ವಹಿಸಿಕೊಡಿದೆ. ನೈಕ್ ಪ್ರಾಯೋಜಿಸಿದ ಕೆಲವು ಈಗಿನ ಮತ್ತು ಹಳೆಯ ಸಫಲವಾದ ಟೆನ್ನಿಸ್ ಆಟಗಾರರೆಂದರೆ: ಜೇಮ್ಸ್ ಬ್ಲೇಕ್, ಜಿಮ್ ಕೋರಿಯರ್, ರೋಜರ್ ಫೆಡೆರರ್, ಲೇಯ್ಟನ್ ಹೆವಿಟ್, ಜುಆನ್ ಮಾರ್ಟಿನ್ ಡೆಲ್ ಪೊಟ್ರೊ, ಆಂಡ್ರೆ ಅಗಾಸ್ಸಿ, ರಫೇಲ್ ನಡಾಲ್, ಪೀಟ್ ಸಾಂಪ್ರಾಸ್, ಮಾರಿಯನ್ ಬಾರ್ತೋಲಿ, ಲಿಂಡ್ಸೇ ಡೆವೆನ್ಪೊರ್ಟ್, ಡೆನಿಯೆಲಾ ಹಂಟುಚ್ಹೋವಾ, ಮೆರಿ ಪೀಯರ್ಸ್, ಮಾರಿಯಾ ಶರಾಪೋವಾ, ಸೆರೇನಾ ವಿಲ್ಲಿಯಮ್ಸ್.

ನೈಕ್ ಅಧಿಕೃತವಾಗಿ ಭಾರತದ ಕ್ರಿಕೆಟ್ ತಂಡಕ್ಕೆ, ೨೦೦೬ ರಿಂದ ೨೦೧೦ರ ಕೊನೆಯ ವರೆಗೆ ೫ ವರ್ಷದ ಕಿಟ್‌ಅನ್ನು ಪ್ರಾಯೋಜಿಸಿದೆ. ನೈಕ್ ಆಡಿಡಾಸ್ ಮತ್ತು ಪ್ಯೂಮವನ್ನು ಹರಾಜಿನಲ್ಲಿ ಹೆಚ್ಚಿನ ಮೊತ್ತ ಹೂಡಿ (US$೪೩ Million total) ಪರಾಭವಗೊಳಿಸಿದೆ.

ಮ್ಯಾಂಚೆಸ್ಟರ್ ಯುನೈಟೆಡ್, ಆರ್ಸೆನಾಲ್, FC ಬಾರ್ಸಿಲೋನಾ, ಇಂಟರ್ ಮಿಲನ್, ಜುವೆಂಟಸ್, ಶಕ್ತರ್, ಪೋರ್ಟೋ, ಸ್ಟೀವಾ, ರೆಡ್ ಸ್ಟಾರ್, ಕ್ಲಬ್ ಅಮೇರಿಕಾ, ಅಸ್ಟನ್ ವಿಲ್ಲಾ, ಸೆಲ್ಟಿಕ್ ಮತ್ತು PSV ಇಂಧೋವನ್ ಎಂಬ ಫುಟ್‌ಬಾಲ್ ಕ್ಲಬ್‌ಗಳನ್ನು ಕೂಡಾ ನೈಕ್ ಪ್ರಾಯೊಜಿಸಿದೆ . ಡುಂಡೀ ಯುನೈಟೆಡ್‌ಅನ್ನು ಕೂಡಾ ಬೇಸಿಗೆ ೨೦೦೯ರಿಂದ ನೈಕ್ ಪ್ರಾಯೋಜಿಸಲಿದೆ.

ಟೈಗರ್ ವುಡ್ಸ್, ಟ್ರೆವರ್ ಇಮೆಲ್‌ಮನ್ ಮತ್ತು ಪಾಲ್ ಕೆಸೀ ಅವರುಗಳನ್ನೊಳಗೊಂಡಂತೆ ವಿಶ್ವದ ಬಹಳಷ್ಟು ಮೇಲ್ಮಟ್ಟದ ಗಾಲ್ಫ್ ಆಟಗಾರರನ್ನು ನೈಕ್ ಪ್ರಾಯೋಜಿಸಿದೆ.

Hoop It Up (ಪ್ರೌಢಶಾಲೆಯ ಬಾಸ್ಕೆಟ್‌ಬಾಲ್) ಮತ್ತು The Golden West Invitational (ಪ್ರೌಢಶಾಲೆಯ ಟ್ರ್ಯಾಕ್ ಮತ್ತು ಫೀಲ್ಡ್)ಗಳನ್ನೊಳಗೊಂಡಂತೆ ಹಲವಾರು ಸಣ್ಣ ಪಂದ್ಯಗಳನ್ನೂ ಸಹ ನೈಕ್ ಪ್ರಾಯೋಜಿಸಿದೆ. ಈ ಪಂದ್ಯಗಳನ್ನು ಜಾಹೀರುಗೊಳಿಸಲು ಅಂತರಜಾಲದ ವೆಬ್ ತಾಣಗಳನ್ನು ನೈಕ್ ಬಳಸಿಕೊಳ್ಳುತ್ತದೆ. nikebasketball.com, nikefootball.com, ಮತ್ತು nikerunning.com ಗಳನ್ನೊಳಗೊಂಡಂತೆ ನಿರ್ಧಿಷ್ಟ ಆಟಗಳಿಗೆ ನೈಕ್ ಹಲವಾರು ವೆಬ್ ತಾಣಗಳನ್ನು ಹೊಂದಿದೆ

ಉಲ್ಲೇಖಗಳು

[ಬದಲಾಯಿಸಿ]
  1. 2007 Annual Report, p. 2 (PDF), Nike, Inc., Retrieved on January ೭, ೨೦೦೭.
  2. Sage, Alexandria (June 26, 2008). "Nike profit up but shares tumble on U.S. concerns". Reuters. Archived from the original on 2008-10-07. Retrieved 2008-07-10.
  3. "Nike sells Bauer Hockey for $200 Million". The Sports Network. February 21, 2008. Retrieved 2008-06-02.
  4. http://www.nikebiz.com/company_overview/history/೧೯೫೦s.html
  5. 'Swoosh' by J.B. Strasser and 'Just Do It' by Donald Katz
  6. ಉಲ್ಲೇಖ ದೋಷ: Invalid <ref> tag; no text was provided for refs named nikebiz.com
  7. http://www.oregonlive.com/business/index.ssf/೨೦೦೮/೦೭/nikes_just_do_it_slogan_celebr.html
  8. "Nike Origins" (PDF). Archived (PDF) from the original on 2003-12-05. Retrieved 2003-12-05.
  9. "ಆರ್ಕೈವ್ ನಕಲು". Archived from the original on 2009-10-22. Retrieved 2009-12-30.
  10. Partlow, Joshua (July, 2003). "Nike Drafts An All Star". The Washington Post. Retrieved 2008-06-02. {{cite web}}: Check date values in: |date= (help)
  11. ೧೧.೦ ೧೧.೧ http://portland.bizjournals.com/portland/stories/2007/11/12/daily22.html
  12. "Nike launches cricket shoe Air Zoom Yorker". The Hindu Business Line. September 2, 2006. Retrieved 2008-06-02.
  13. http://www.soccerpro.com/Nike-Air-Zoom-Control-II-FS-Indoor-Soccer-Shoes-c೪೩೯/
  14. T. Scott Saponas, Jonathan Lester, Carl Hartung, Tadayoshi Kohno. "Devices That Tell On You: The Nike+iPod Sport Kit" (PDF). Archived from the original (PDF) on 2012-09-07. Retrieved 2009-12-30.{{cite web}}: CS1 maint: multiple names: authors list (link)
  15. Tom Espiner (2006-12-13). "Nike+iPod raises RFID privacy concerns". CNet.
  16. "Latest materials improve sportswear performance". ICIS Chemical Business. Retrieved 2008-10-14.
  17. http://blog.oregonlive.com/oregonianextra/2006/06/appellate_court_rejects_beaver.html
  18. "ಆರ್ಕೈವ್ ನಕಲು". Archived from the original on 2011-01-29. Retrieved 2009-12-30.
  19. "NikeBiz | Investors | Corporate". Archived from the original on 2007-09-29. Retrieved 2009-12-30.
  20. "ಆರ್ಕೈವ್ ನಕಲು" (PDF). Archived from the original (PDF) on 2007-06-20. Retrieved 2009-12-30.
  21. Nike Labor Practices in Vietnam
  22. "NMSU:Nike". Archived from the original on 2009-10-22. Retrieved 2009-12-30.
  23. MIT:
  24. http://news.bbc.co.uk/1/hi/programmes/panorama/970385.stm
  25. Sweatfree Campus Campaign Launch
  26. YouTube - Nike Contractor in Malaysia using forced labour
  27. [೧]
  28. Emerging Textiles February ೨೦೦೮. ಮೇ ೩೦, ೨೦೦೭ರಂದು ಪುನರ್‌ಸಂಪಾದಿಸಲಾಗಿದೆ
  29. Reuters report
  30. "ClimateCounts: Nike". Archived from the original on 2011-02-12. Retrieved 2009-12-30.
  31. BRANDWEEK April ೨೩, ೨೦೦೮. ಮೇ ೩೦, ೨೦೦೭ರಂದು ಪುನರ್‌ಸಂಪಾದಿಸಲಾಗಿದೆ
  32. Wicked Local Archived 2008-07-25 ವೇಬ್ಯಾಕ್ ಮೆಷಿನ್ ನಲ್ಲಿ. April ೨೯, ೨೦೦೮. ಮೇ ೩೦, ೨೦೦೭ರಂದು ಪುನರ್‌ಸಂಪಾದಿಸಲಾಗಿದೆ
  33. "Kasky v. Nike: Just the Facts". Reclaim Democracy.org. Retrieved 2008-06-02.
  34. http://www.allbusiness.com/marketing-advertising/4121690-1.html
  35. http://query.nytimes.com/gst/fullpage.html?res=9A0CEFDA1430F932A0575BC0A9669C8B63
  36. http://query.nytimes.com/gst/fullpage.html?res=9D02E6D61130F933A1575AC0A9649C8B63&n=Top%2FNews%2FBusiness%2FCompanies%2FNike%20Inc.
  37. According to a July ೨೮, ೧೯೮೭ article written by the Associated Press.
  38. "Nike: Skateboarding". Archived from the original on 2010-11-25. Retrieved 2009-12-30.
  39. Sandoval, Greg (December 7, 2004). "China Bans LeBron James Nike Ad". The Washington Post. Retrieved 2008-06-02.
  • Egan, Timothy. "The swoon of the swoosh". New York Times Magazine; September 13, 1998.

ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]

ಯಾಹೂ!ನಿಂದ

45°30′33″N 122°49′48″W / 45.5093°N 122.8299°W / 45.5093; -122.8299