ನಾಗರಹಾವು (2016 ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗರಹಾವು ಕೋಡಿ ರಾಮಕೃಷ್ಣ ನಿರ್ದೇಶನದ 2016 ರ ಭಾರತೀಯ ಕನ್ನಡ ಭಾಷೆಯ ಫ್ಯಾಂಟಸಿ ಚಿತ್ರವಾಗಿದ್ದು, ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಮಾಡಿದ್ದ ಚೊಚ್ಚಲ ಚಿತ್ರವಿದು. ಈ ಸಿನಿಮಾ ಅವರ ಜೀವನದ ಕೊನೆಯ ಚಿತ್ರ.[೧] ಸಾಜಿದ್ ಖುರೇಷಿ ಮತ್ತು ಇನ್‌ಬಾಕ್ಸ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ್ದಾರೆ . [೨]

ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರ ಪಾತ್ರವನ್ನು ಡಿಜಿಟಲ್ ಸಿಜೆಐ ಮೂಲಕ ಸೃಷ್ಟಿಸಲಾಗಿದೆ. [೩] ನಟರಾದ ದಿಗಂತ್, ಸೈಕುಮಾರ್, ರಾಜೇಶ್ ವಿವೇಕ್, ಮತ್ತು ಸಾಧು ಕೋಕಿಲಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಗುರುಕಿರಣ್ ಅವರ ಸಂಗೀತ ಸಂಯೋಜನೆ, ಎಚ್‌ಸಿ ವೇಣುಗೋಪಾಲ್ ಅವರ ಛಾಯಾಗ್ರಹಣ ಮತ್ತು ಜೋನಿ ಹರ್ಷ ಸಂಪಾದನೆ ಮಾಡಿದ್ದಾರೆ. ಚಿತ್ರವನ್ನು ತಮಿಳಿನಲ್ಲಿ ಶಿವನಾಗಂ, ತೆಲುಗಿನಲ್ಲಿ, ನಾಗಾಭರಣಂ ಮತ್ತು ಹಿಂದಿಯಲ್ಲಿ ನಾಗವಂಶಿ ಎಂದು ಬಿಡುಗಡೆ ಮಾಡಲಾಗಿದೆ. [೪] ಈ ಚಿತ್ರ 14 ಅಕ್ಟೋಬರ್ 2016 ರಂದು ಬಿಡುಗಡೆಯಾಯಿತು. [೫]

ಸಿಜಿಐ ಪರಿಣಾಮದ ಮೂಲಕ ನಟ ವಿಷ್ಣುವರ್ಧನ್ ಅವರ ಮರಳಿ ಬಂದ ಕಾರಣಕ್ಕಾಗಿ ಈ ಚಿತ್ರ ಅಭಿಮಾನಿಗಳಿಗೆ ಒಂದು ಕೊಡುಗೆಯಾಗಿತ್ತು. [೬]

ಉಲ್ಲೇಖಗಳು[ಬದಲಾಯಿಸಿ]

  1. K, Bhumika (2016-05-31). "Ramya in Nagarahavu". The Hindu (in Indian English). ISSN 0971-751X. Retrieved 2016-10-15.
  2. 808. "nagarahavu — chitraloka.com | Kannada Movie News, Reviews | Image". www.chitraloka.com. Archived from the original on 2016-06-30. Retrieved 2016-10-15. {{cite web}}: |last= has numeric name (help)
  3. "Hundreds of artists bringing Vishnuvardhan back to life". The New Indian Express. Archived from the original on 2016-09-22. Retrieved 2016-10-15.
  4. "Divya Spandana's Nagabharanam". moviegalleri.net. 4 June 2016. Archived from the original on 5 ಜೂನ್ 2016. Retrieved 4 June 2016.
  5. "Good news for Vishnuvardhan fans: The Kannada actor is back on screen with Nagarahavu — Firstpost". Firstpost (in ಅಮೆರಿಕನ್ ಇಂಗ್ಲಿಷ್). 2016-10-14. Retrieved 2016-10-15.
  6. http://www.ibtimes.co.in/nagarahavu-naagarahaavu-aka-shivanagam-movie-review-live-audience-response-699468