ನಗುವ ಹೂವು (ಚಲನಚಿತ್ರ)
ಗೋಚರ
ನಗುವ ಹೂವು (ಚಲನಚಿತ್ರ) | |
---|---|
ನಗುವ ಹೂವು | |
ನಿರ್ದೇಶನ | ಆರ್.ಎನ್.ಕೆ.ಪ್ರಸಾದ್ |
ನಿರ್ಮಾಪಕ | ಆರ್.ಎನ್. ಸುದರ್ಶನ್ |
ಪಾತ್ರವರ್ಗ | ಸುದರ್ಶನ್ ಶೈಲಶ್ರೀ ರಂಗ, ಆರ್.ನಾಗೇಂದ್ರರಾವ್ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
ಬಿಡುಗಡೆಯಾಗಿದ್ದು | ೧೯೭೧ |
ಚಿತ್ರ ನಿರ್ಮಾಣ ಸಂಸ್ಥೆ | ಸುದರ್ಶನ್ ಫಿಲಂಸ್ |
ನಗುವ ಹೂವು - 1971 ರಲ್ಲಿ ತಯಾರಾದ ಕನ್ನಡ ಚಲನಚಿತ್ರವಾಗಿದ್ದು ಛಾಯಾಚಿತ್ರಗ್ರಾಹಕರಾದ ಆರ್. ಎನ್. ಕೆ. ಪ್ರಸಾದ್ ಇದನ್ನು ನಿರ್ದೇಶಿಸಿದ್ದಾರೆ. ಇದರ ನಿರ್ಮಾಪಕರು ಆರ್. ಎನ್. ಸುದರ್ಶನ್. ಇದರ ಸಾಹಿತ್ಯವು ನಟಿ ಶೈಲಶ್ರೀ ಅವರದು. ಸುದರ್ಶನ್ ಮತ್ತು ಶೈಲಶ್ರೀ ಅವರುಗಳಲ್ಲದೆ ಚಿತ್ರನಟರಾದ ಕೆ.ಎಸ್. ಅಶ್ವಥ್ , ರಂಗಾ, ಆರ್ ನಾಗೇಂದ್ರರಾಯರು ಮತ್ತು ಬಿ.ವಿ. ರಾಧಾ ಅವರುಗಳು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 18ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದಲ್ಲಿನ ಉತ್ತಮ ಕಥಾಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಚಲನಚಿತ್ರದ ಹಿನ್ನೆಲೆ ಸಂಗೀತವನ್ನು ಜಿ. ಕೆ. ವೆಂಕಟೇಶ್ ಅವರು ಸಂಯೋಜಿಸಿದರು. ಆರ್. ಎನ್. ಜಯಗೋಪಾಲ್ ಅವರು ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ಆರ್.ಎನ್.ಸುದರ್ಶನ್
- ಶೈಲಶ್ರೀ
- ರಂಗಾ
- ಕೆ.ಎಸ್.ಅಶ್ವಥ್
- ಆರ್.ನಾಗೇಂದ್ರರಾವ್
- ಬಿ.ವಿ. ರಾಧಾ
- ಬಾಲಕೃಷ್ಣ
- ಗಣಪತಿ ಭಟ್
- ತೂಗುದೀಪ ಶ್ರೀನಿವಾಸ್
- ವಿಜಯಶ್ರೀ
- ಬಿ.ಜಯಶ್ರೀ
- ಮಾಸ್ಟರ್ ಚಂದ್ರಶೇಖರ್
- ಹನುಮಂತಾಚಾರ್
- ವಿಜಯಕುಮಾರ
- ಬಿ. ಜಯಾ
ಚಿತ್ರಗೀತೆಗಳು
[ಬದಲಾಯಿಸಿ]ಹಾಡು | ಗಾಯಕರು | ರಚನಕಾರರು |
---|---|---|
"ಗುಲಾಬಿ ಓ ಗುಲಾಬಿ" | ಪಿ. ಸುಶೀಲ | ಆರ್.ಎನ್.ಜಯಗೋಪಾಲ್ |
"ಒಂದೇ ಒಂದು ಹೂವು" | ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ | |
"ಈ ಶುಭದಿನದೆ" | ಪಿ. ಸುಶೀಲ | ಆರ್.ಎನ್.ಜಯಗೋಪಾಲ್ |
"ಇರಬೇಕು ಇರಬೇಕು" | ಸುದರ್ಶನ್ | ಆರ್.ಎನ್.ಜಯಗೋಪಾಲ್ |