ವಿಷಯಕ್ಕೆ ಹೋಗು

ದೇವತಾರ್ಚನ ವಿಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವತಾರ್ಚನ ವಿಧಿ

[ಬದಲಾಯಿಸಿ]
  • ದೇವತಾರ್ಚನ ನಿತ್ಯ ವಿಧಿ- ಸಂಕ್ಷಿಪ್ತ
  • ಪಂಚಾಯತನ ಪೂಜಾ ವಿಧಿ - ಯಜುರ್ ವೇದ ಹವ್ಯಕ ಸಂಪ್ರದಾಯ ಸಂಕ್ಷಿಪ್ತ ರೂಪ :

ಪ್ರಸ್ತಾವನೆ :

[ಬದಲಾಯಿಸಿ]

  • ದೇವರ ಮೂರ್ತಿ ಪೂಜಾವಿಧಿಯು ಯಾವಾಗಿನಿಂದ ಪ್ರಾರಂಭವಾಯಿತೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆರ್ಯ ಸಮಾಜ ಸ್ಥಾಪಕರಾದ ಅಸಾಧಾರಣ ವೇದ ವಿದ್ವಾಂಸರಾದ ಶ್ರೀ ದಯಾನಂದ ಸರಸ್ವತಿಯವರು ಮೂರ್ತಿಪೂಜಾ ಪದ್ದತಿಯನ್ನು ಒಪ್ಪಿರಲಿಲ್ಲ. ಅವರು ಈ ಮೂರ್ತಿಪೂಜಾ ಪದ್ದತಿಯು ಜೈನರಿಂದ ಆರಂಭವಾಗಿ ಹಿಂದೂ ಧರ್ಮದಲ್ಲಿ ಸೇರಿಕೊಂಡಿದೆಯೆಂದು ತಮ್ಮ ಪ್ರಸಿದ್ಧ ಸತ್ಯಾರ್ಥ ಪ್ರಕಾಶ ಗ್ರಂಥದಲ್ಲಿ ಹೇಳಿದ್ದಾರೆ. ಭಗವದ್ಗೀತೆಯಲ್ಲಿ ೭ ನೇ ಅಧ್ಯಾಯದ ೨೧, ೨೨ನೇ ಶ್ಲೋಕಗಳಲ್ಲಿ ಯಾವನು ದೇವತೆಗಳ ತನುವನ್ನು (ದೇಹವನ್ನು -ಮೂರ್ತಿಯನ್ನು?) ಅರ್ಚಿಸಲು ಇಷ್ಟಪಡುತ್ತಾನೋ ಅವನಿಗೆ ಆಯಾ ದೇವತೆಗಳಲ್ಲಿ ಶ್ರದ್ಧೆಯುಂಟು ಮಾಡುವೆನು ಮತ್ತು ಅವರ ಬಯಕೆಗಳನ್ನು ಈಡೇರಿಸುವೆನು ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಆದರೆ ಭಗವಂತನನ್ನೇ ಸರ್ವಾಂತರ್ಯಾಮಿ ಎಂದು ತಿಳಿದು ಧ್ಯಾನಮಾಡುವುದು ಶ್ರೇಷ್ಠವೆಂದು ಅದೇ ಅಧ್ಯಾಯದಲ್ಲಿ ತಿಳಿಸಿದ್ದಾನೆ.
  • ಶ್ರೀ ಶಂಕರರು ಷಣ್ಮತಸ್ಥಾಪಕರೆಂದು ಹೆಸರು ಪಡೆದಿದ್ದು ಪಂಚಾಯತನ ಪೂಜೆಯನ್ನು ಪ್ರಚುರ ಪಡಿಸಿದರೆಂಬುದು ಪ್ರತೀತಿ. ಆದರೆ ಅವರ ಪ್ರಸ್ಥಾನತ್ರಯ ಭಾಷ್ಯಗಳಲ್ಲಿ ಎಲ್ಲಿಯೂ ಪಂಚಾಯತನ ಪೂಜೆಯ ವಿಷಯ ಬರುವುದಿಲ್ಲ. ಷಣ್ಮತದ ವಿಷಯವೂ ಬರುವುದಿಲ್ಲ. ಆದರೆ ರೂಢಮೂಲವಾಗಿ ಅವರು ಪಂಚಾಯತನ ಪೂಜೆಯನ್ನು ವಿಧಿಸಿ ಬೇರೆ ಬೇರೆ ಉಪಾಸಕರ ಮಧ್ಯೆ ಇರುವ ಮನಸ್ತಾಪವನ್ನು ಶಮನಗೊಳಸಿದರೆಂದು ನಂಬಲಾಗಿದೆ. ಈ ದೇವರ ಪೂಜಾವಿಧಿ ನಿತ್ಯಕರ್ಮದಲ್ಲಿ ಸೇರುವುದು.

ಪಂಚಾಯತನ ದೇವತೆಗಳು :

[ಬದಲಾಯಿಸಿ]

  • ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು , ಈ ಐದೂ ದೇವತೆಗಳ ಮೂರ್ತಿಗಳಿದ್ದಲ್ಲಿ ಅಥವಾ ಶಿಲೆಗಳಿದ್ದಲ್ಲಿ ಅವರ ಮನೆ ದೇವತೆಯ ಮೂರ್ತಿ ಯಾ ಶಿಲೆಯನ್ನು ಮಧ್ಯದಲ್ಲಿಟ್ಟು ಉಳಿದವುಗಳನ್ನು ಈ ಕೆಳಗಿನ ಕ್ರಮದಲ್ಲಿಡುವುದು ಶಾಸ್ತ್ರ ಪದ್ದತಿ. ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು.
  • ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆ ಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಷೇಕ, ಪೂಜೆ ಮಾಡುವ ಪದ್ಧತಿಗಳಿವೆ.
  • ವಿಷ್ಣು ಕೇಂದ್ರ; ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ ಪೂರ್ವ ದಕ್ಷಿಣ ಮಧ್ಯೆ ಆಗ್ನೇಯದಲ್ಲಿ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ
  • ಶಿವ ಕೇಂದ್ರ: ವಿಷ್ಣು ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಸೂರ್ಯ- ಪೂರ್ವ ದಕ್ಷಿಣ ಮಧ್ಯೆ ಆಗ್ನೇಯದಲ್ಲಿ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
  • ಸೂರ್ಯಕೇಂದ್ರ: ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ -ಪೂರ್ವ ದಕ್ಷಿಣ ಮಧ್ಯೆ ಆಗ್ನೇಯದಲ್ಲಿ; ವಿಷ್ಣು -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
  • ಅಂಬಿಕಾ ಕೇಂದ್ರ: ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮಧ್ಯೆ ಆಗ್ನೇಯದಲ್ಲಿ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ;: ಸೂರ್ಯ- ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
  • ಗಣಪತಿ ಕೇಂದ್ರ: ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮಧ್ಯೆ ಆಗ್ನೇಯದಲ್ಲಿ; ಸೂರ್ಯ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ; ಅಂಬಿಕಾ - ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ವಿಷ್ಣು ಕೇಂದ್ರ -೧- ** ಶಿವ -ಕೇಂದ್ರ- -೨- ** ಸೂರ್ಯ -ಕೇಂದ್ರ- -೩- ** ಅಂಬಿಕಾ ಕೇಂದ್ರ -೪-
ಸೂರ್ಯ ಪಶ್ಚಿಮ ಅಂಬಿಕಾ ** ಗಣಪತಿ ಪಶ್ಚಿಮ ಅಂಬಿಕಾ ** ವಿಷ್ಣು ಪಶ್ಚಿಮ ಅಂಬಿಕಾ ** ಗಣಪತಿ ಪಶ್ಚಿಮ ಸೂರ್ಯ
ದಕ್ಷಿಣ ವಿಷ್ಣು ಉತ್ತರ ** ದಕ್ಷಿಣ ಶಿವ ಉತ್ತರ ** ದಕ್ಷಿಣ ಸೂರ್ಯ ಉತ್ತರ ** ದಕ್ಷಿಣ ಅಂಬಿಕಾ ಉತ್ತರ
ಗಣಪತಿ ಪೂರ್ವ ಶಿವ ** ಸೂರ್ಯ ಪೂರ್ವ ವಿಷ್ಣು ** ಗಣಪತಿ ಪೂರ್ವ ಶಿವ ** ಶಿವ ಪೂರ್ವ ವಿಷ್ಣು
ಗಣಪತಿ ಕೇಂದ್ರ -೫-
ಸೂರ್ಯ ಪಶ್ಚಿಮ ಅಂಬಿಕಾ
ದಕ್ಷಿಣ ಗಣಪತಿ ಉತ್ತರ
ಶಿವ ಪೂರ್ವ ವಿಷ್ಣು

ಹೀಗೆ ಜೋಡಿಸಲು ಅನಾನುಕೂಲವಿದ್ದಲ್ಲಿ ಅನುಕೂಲಕ್ಕೆ ತಕ್ಕಂತೆ ಜೋಡಿಸಿ ಇಡಬಹುದು.

ಪೂಜಾ ಪರಿಕರಗಳು :

[ಬದಲಾಯಿಸಿ]

ಒಂದು ಹರಿವಾಣ, ಕಲಶದ ಚೊಂಬು, ಲೋಟ, ಉದ್ಧರಣೆ ಸೌಟು (ಚಮಚ) ತೀರ್ಥದ ಸಣ್ಣ ಬಟ್ಟಲು (ತಾಮ್ರ), ಗಂಧ ಅಕ್ಷತೆಯ ಚಿಕ್ಕ ತಟ್ಟೆ (ತಾಮ್ರ), (ಪ್ಲೇಟು), ಆಚಮನದ ನೀರು ಹಾಕಲು, ಕೈತೊಳೆಯಲು ಚಿಕ್ಕ ಪಾತ್ರೆ (ಬೌಲ್).

  • ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯ ಪರಿಕರಗಳನ್ನು -ಪಾತ್ರೆಗಳನ್ನು ಆದ್ಯತೆಯ ಮೇಲೆ ಉಪಯೋಗಿಸುವುದು ರೂಢಿ. ಕಬ್ಬಿಣದ ಪಾತ್ರೆಗಳನ್ನು ನಿಷೇಧಿಸಿದೆ. ಆದರೆ ಈಗ ಉತ್ತಮವಾದ ತುಕ್ಕು ಹಿಡಿಯದ ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು ಬಂದಿರುವುದರಿಂದ ಅದನ್ನು ಶುಚಿಗೊಳಿಸುವುದು ಸುಲಭವಾಗಿರುವುದರಿಂದ ಬಹಳ ಜನ ಅದನ್ನು ಉಪಯೋಗಿಸುತ್ತಾರೆ. ಉಪಾದ್ಯರೂ / ಪುರೋಹಿತರೂ ಸಹ ಉಪಯೋಗಿಸುವರು.
  • ಆದರೆ ವಿಶೇಷ ಪೂಜಾದಿನಗಳಲ್ಲಿ ಕಲಶದ (ನೀರು ತುಂಬುವ) ಬೆಳ್ಳಿ ಅಥವಾ ತಾಮ್ರದ /ಹಿತ್ತಾಳೆಯ ಪಾತ್ರೆ ಉಪಯೋಗಿಸುತ್ತಾರೆ. ತುಳಸಿ, ದೂರ್ವೆ, ಹೂವು, ಆರತಿ ಬತ್ತಿ, ಊದಿನ ಕಡ್ಡಿಗಳು, ಕರ್ಪೂರ, ಗಂಧ ತೇಯುವ ಕಲ್ಲು, ಸಣ್ಣ ಶ್ರೀಗಂಧದ ಕೊರಡು (ತುಂಡು), ಕೆಂಪು ಚಂದನದ ಕೊರಡು. ಮಂಗಳಾಕ್ಷತೆಯ ಬಟ್ಟಲು, ಮಂಟಪವನ್ನೂ, ತೊಳೆದ ದೇವರ ಮೂರ್ತಿಗಳನ್ನು ಒರೆಸಲು ಶುದ್ಧವಾದ ಬಟ್ಟೆ, ಕುಳಿತುಕೊಳ್ಳುವ ಮರದ ಮಣೆ ಅಥವಾ ಚಾಪೆ. ಇವುಗಳನ್ನೆಲ್ಲಾ ಜೋಡಿಸಿ ಶುಚಿಯಾಗಿಟ್ಟಿರಬೇಕು.

ನಿತ್ಯ ಪೂಜಾ ವಿಧಾನ :

[ಬದಲಾಯಿಸಿ]

  • ಪೂಜಾವಿಧಾನ ಒಂದೊಂದು ಭಾಗದಲ್ಲಿ ಒಂದೊಂದು ವಿಧವಿದೆ. ಆದರೆ ಮೂಲ ತತ್ವ ಒಂದೇ ಇದೆ.

ನಿತ್ಯ ಪೂಜೆಗೆ ಪ್ರಸಿದ್ಧವಾಗಿರುವುದು ಮತ್ತು ಆಚರಣೆಯಲ್ಲಿರುವುದು:

ಪಂಚೋಪಚಾರ ಪೂಜೆ

[ಬದಲಾಯಿಸಿ]
  • ೧.ಗಂಧ, ೨.ಪುಷ್ಪ, ೩.ಧೂಪ, ೪ದೀಪ, ೫. ನೈವೇದ್ಯ:

ಗಂಧವನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು ತೋರಿಸುವುದು, ದೀಪವನ್ನು ಬೆಳಗುವುದು, ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ 'ಪಂಚೋಪಚಾರ' ಎನ್ನುತ್ತಾರೆ.

ಷೋಡಶೋಪಚಾರ ಪೂಜೆ (೧೬ ಉಪಚಾರ)

[ಬದಲಾಯಿಸಿ]

ಆಸನಂ ಸ್ವಾಗತಂ ಚಾರ್ಘ್ಯಂ ಪಾದ್ಯಮಾಚಮನೀಯಕಂ| ಮಧುಪರ್ಕಾರ್ಪಣಂ ಸ್ನಾನವಸನಾಭರಣಾನಿ ಚ|| ಸುಗಂಧಃ ಸುಮನೋ ಧೂಪೋ ದೀಪಮನ್ನೇನ ಭೋಜನಂ| ಮಾಲ್ಯಾನುಲೇಪನಂ ಚೈವ ನಮಸ್ಕಾರ ಇತಿಕ್ರಮಾತ್ ||

  • ೧.ಆಸನಂ ೨.ಸ್ವಾಗತಂ, ೩.ಅರ್ಘ್ಯಂ, ೪.ಪಾದ್ಯಂ,(ಆಚರಣೆಯಲ್ಲಿ ಪಾದ್ಯ ಆದ ಮೇಲೆ ಅರ್ಘ್ಯ), ೫.ಆಚಮನೀಯಕಂ| ೬.ಮಧುಪರ್ಕಾರ್ಪಣಂ, ೭.ಸ್ನಾನಂ, ೮.ವಸನ, ೯.ಆಭರಣಾನಿ ಚ|| ೧೦.ಸುಗಂಧಃ, ೧೧.ಸುಮನೋ ಧೂಪೋ, ೧೨.ದೀಪಂ, ೧೩.ಅನ್ನೇನಭೋಜನಂ|; ೧೪.ಮಾಲ್ಯಾ ೧೫. ಅನುಲೇಪನಂ ಚೈವ, ೧೬.ನಮಸ್ಕಾರ ಇತಿ ಕ್ರಮಾತ್||
  • ಆದರೆ ರೂಢಿಯ ಪೂಜಾ ಕ್ರಮದಲ್ಲಿ ಬೇರೆ ರೀತಿ ಅನಸರಣೆ ಇದೆ. ೧.ಧ್ಯಾನ, ೨. ಆವಾಹನ, ೩ ಆಸನ, ೪.ಪಾದ್ಯ ೫. ಅರ್ಘ್ಯ, ೬ ಆಚಮನ, ೭.ಸ್ನಾನ (ಮಲಾಪಕರ್ಷಣ, ಪಂಚಾಮೃತ, ಮಹಾಭಿಷೇಕ ಮತ್ತು ಶುದ್ಧೋದಕ ಸ್ನಾನ) ೮.ವಸ್ತ್ರ, ೯.ಆಭರಣ ೧೦ ಉಪವೀತ, ೧೧.ಗಂಧ, ೧೨.ಅಕ್ಷತಾ, ೧೩.ಪುಷ್ಪ, ಇವುಗಳ ಸಮರ್ಪಣೆ, ೧೪.ದ್ವಾದಶ ನಾಮ ಪೂಜಾ, ೧೫.ಧೂಪ, ೧೬.ದೀಪ, ೧೭.ನೈವೇದ್ಯ,(ಭೋಜನ) ೧೮.ಮಂಗಲ ನೀರಾಜನ, ೧೯.ತಾಂಬೂಲ, ೨೦.ಮಂತ್ರ ಪುಷ್ಪ, ೨೧.ಪ್ರದಕ್ಷಿಣ ೨೨. ನಮಸ್ಕಾರ, ೨೨.ಪ್ರಸನ್ನಾರ್ಘ್ಯ, ೨೩.ಪ್ರಾರ್ಥನೆ, ೨೪.ವಿಸರ್ಜನ.
  • ಚತುರ್ವಿಂಶತಿ ಉಪಚಾರ ಪೂಜೆಯಲ್ಲಿ ಸ್ವಲ್ಪ ಬೇರೆ ಕ್ರಮ ಇದೆ. ಇವಲ್ಲದೆ ಮಂಟಪ, ದ್ವಾರಪಾಲಕರ, ಶಂಖ, ಆಸನ ಪೂಜಾವಿಧಿಗಳು ಸೇರಿವೆ.

ಇದರಲ್ಲಿ ಕೆಲವರು ನಿತ್ಯಪೂಜೆಗೆ ಆವಾಹನೆ ವಿಸರ್ಜನೆ ಅಗತ್ಯವಿಲ್ಲವೆಂದು ಹೇಳುತ್ತಾರೆ

  • ಈ ಕ್ರಮಗಳಲ್ಲದೆ ಸಮಯ ಉಳಿತಾಯಕ್ಕಾಗಿ ೬, ೮, ೧೨ ಉಪಚಾರದ ಪೂಜೆಗಳೂ ಇವೆ.

ಪೂಜೆಯ ಮೂಲ ತತ್ವ :

[ಬದಲಾಯಿಸಿ]

ನಿತ್ಯ ಪೂಜೆಯ ಮೂಲ ತತ್ವ - ದೇವರಿಗೆ ವಂದನೆ ಧನ್ಯವಾದ ಅರ್ಪಿಸುವದು. ಅದಕ್ಕಾಗಿ ದೇವತೆಯನ್ನು, ಅಥವಾ ದೇವತೆಗಳನ್ನು ಮನೆಯ ದೇವ ಮಂಟಪದಲ್ಲಿರುವ ಮೂರ್ತಿಗಳಿಗೆ ಆಹ್ವಾನಿಸಿ ಆ ದೇವತೆಗಳನ್ನು ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಉಪಚಾರ ಮಾಡುವಂತೆ ಉಪಚರಿಸಿ ಬೀಳ್ಕೊಡುವದು. ಉದಾ: ಆವಾಹನೆ -ಅಥಿತಿ ಸ್ವಾಗತ; ಆಸನ- ಕುಳಿತುಕೊಳ್ಳಲು ಆಸನ ಕೊಡುವುದು; ಅರ್ಘ್ಯ ಮತ್ತು ಪಾದ್ಯ- ಕೈಕಾಲು ತೊಳೆಯಲು ನೀರು; ಆಚಮನ- ಕುಡಿಯಲು ನೀರು ಕೊಡುವುದು; ಅಭಿಷೇಕ -ಸ್ನಾನ; ಗಂಧ, ಹೂ - ಅಲಂಕಾರ; ಧೂಪ, ದೀಪ - ಪರಿಮಳ ಸಿಂಚನ, ಗೌರವ ಅರ್ಪಣ; ನೈವೇದ್ಯ - ಭೋಜನ, ತಾಂಬೂಲ; ಪ್ರಸನ್ನಾರ್ಘ್ಯ - ಕೈತೊಳೆದ ನಂತರ ಕೈಗೆ ಸುವಾಸನೆಯ ನೀರು; ಆರತಿ - ಗೌರವ ಸಮರ್ಪಣೆ; ಪ್ರಾರ್ಥನೆ - ನಮಗೆ ಬೇಕಾದುದನ್ನು ಕೇಳುವುದು. ನಂತರ ಬೀಳ್ಕೊಡುಗೆ. ಇದರಲ್ಲಿ ಹೆಚ್ಚಿನ ವಿಶೇಷವು ದೇವತೆಗಳಿಗೆ ತೋರಿಸುವ ಭಕ್ತಿಯಲ್ಲಿದೆ. ಆದರೆ ಭಗವದ್ಗೀತೆಯಲ್ಲಿ ಭಗವಂತನನ್ನು ಸರ್ವಾಂತರ್ಯಾಮಿಯೆಂದು ಅರ್ಥಮಾಡಿಕೊಂಡು ದ್ಯಾನ ಮಾಡುವುದೇ ಶ್ರೇಷ್ಠವೆಂದು ಹೇಳಿದೆ.

ಪ್ರಾಙ್ಮುಖ (ಪೂರ್ವ) ಉಪವಿಷ್ಯ -ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳಬೇಕು. ಇದರಲ್ಲಿ ಸ್ವಲ್ಪ ತೊಂದರೆ ಇದೆ. ಪೂಜೆ ಮಾಡುವವನು ದೇವರಮೂರ್ತಿಗಳನ್ನು ಪಶ್ಚಿಮಕ್ಕೆ ಅಥವಾ ದಕ್ಷಿಣಕ್ಕೆ ಅಭಿಮುಖವಾಗಿ ಇಡಬೇಕಾಗುವುಸದು. ಆದರೆ ಅದು ಅಷ್ಟು ಸರಿ ಅಲ್ಲ. ದೇವರ ಮಂಟಪವು (ಮೂರ್ತಿಗಳನ್ನು) ಪೂರ್ವಕ್ಕೆ ಅಭಿಮುಖವಾಗಿ ಇಡುವುದು ಶಾಸ್ತ್ರ ಸಮ್ಮತ. ಆಗ ಪೂಜೆ ಮಾಡುವವನು ಉತ್ತರಕ್ಕೆ ಮುಖಮಾಡಿ ಕುಳಿತರೆ ಸರಿಯಾಗುವುದು. ಎಡಕ್ಕೆ ದೇವರ ಮಂಟಪ ಮತ್ತು ಮೂರ್ತಿಗಳು ಇದ್ದು ಬಲ ಕೈಯಿಂದ ಪೂಜೆ ಮಾಡಲು ಅನುಕೂಲ ಆಗುವುದು. (ಆಚಮನದ ಕ್ರಮವನ್ನು ಸಂಧ್ಯಾವಂದನೆ ಸಂಧ್ಯಾವಂದನೆ ಮಂತ್ರ) ಯಲ್ಲಿ ನೋಡಿ. ಸಂಕಲ್ಪ ನಂತರ ಲೋಟ ಮತ್ತು ಹರಿವಾಣದ ನೀರನ್ನು ಬೇರೆ ಪಾತ್ರೆಗೆ ಹಾಕಿ ಹರಿವಾಣವನ್ನು ಸ್ವಲ್ಪ(೪ ಚಮಚ) ನೀರು ಹಾಕಿ ಶುಚಿಮಾಡಿಕೊಳ್ಳಬೇಕು (ಆಚಮನದ ನೀರು ಪೂಜೆಗೆ ಸಲ್ಲದು). ಸ್ವಲ್ಪ ಗಂಧವನ್ನು ತೇಯ್ದು ಗಂಧಾಕ್ಷತೆ ತಟ್ಟೆಯಲ್ಲಿ ಇಟ್ಟುಕೊಳ್ಳಬೇಕು.

ದೇವತಾಹ್ವಾನ ಮತ್ತು ಆರಂಭಿಕ ಕ್ರಿಯೆ :

[ಬದಲಾಯಿಸಿ]

ಇಲ್ಲಿರುವ ಕ್ರಿಯೆಯ ಮತ್ತು ಇತರೆ ಮಂತ್ರಗಳನ್ನು ಹೇಳಬೇಕು;

  • ಓಂ ಘಟ್ ಇತಿ ಘಂಟಾಂ ಪೂಜಯೇತ್|| [ಗಂಟೆಯ ಪೂಜೆ: ಗಂಟೆಗೆ ಗಂಧ ಹಚ್ಚಿದ ಹೂವು ಏರಿಸಿ ಗಂಟೆ ಬಾರಿಸುವುದು. ಗಂಟೆ ಬಾರಿಸುವುದು ದೇವತೆಗಳ ಆಗಮನಕ್ಕಾಗಿ ಮತ್ತು ರಾಕ್ಷಸರ ನಿರ್ಗಮನಕ್ಕಾಗಿ]
  • ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಾಕ್ಷಸಾಂ|| ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ|| ಘಂಟಾಂ ವಾದಯೇತ್ ||

ತತ್ವಾರ್ಥ ಧ್ಯಾನ

  • ದೇಹೋ ದೇವಾಲಯಃ ಪ್ರೋಕ್ತೋ ದೇವೋ ಜೀವಃ ಸದಾಶಿವಃ| ತ್ಯಜೇದ್ ಅಜ್ಞಾನ ನಿರ್ಮಾಲ್ಯಂ ಸೋSಹಂ ಭಾವೇನ ಪೂಜಯೇತ್|| ಇತಿ ಧ್ಯಾತ್ವಾ ||(ದೇಹವನ್ನು ದೇವಾಲಯವೆಂದೂ, ಜೀವನು ಪರಮಾತ್ಮನಾದ ಸದಾಶಿವನೆಂದು ಭಾವಿಸಿ ಅಜ್ಞಾನ ತೊರೆದು ಪೂಜಿಸಬೇಕು.)
  • ಮಂಟಪ ಪೂಜೆ

||ಚತುರ್ ದ್ವಾರ ಸ್ಥಿತ ದ್ವಾರಪಾಲಾದಿ ದೇವತಾಭ್ಯೋ ನಮಃ|| ಧ್ಯಾನಾದಿ ಉಪಚಾರಾನ್ ಸಮರ್ಪಯಾಮಿ|| ಇತಿ ದ್ವಾರ ಪಾಲಾದೀನ್ ಅಭ್ಯರ್ಚ್ಯ [ಮಂಟಪದ ಒಳಗೆ ನಾಲ್ಕು ದಿಕ್ಕಿಗೂ ಹೂವು ಇಡುವುದು]||

  • ||ಆಸನ ಪೂಜೆ|| ಪೃಥಿವ್ಯಾಂ ಮೇರು ಪೃಷ್ಠ ಋಷಿಃ||ಸುತಲಂ ಛಂದಃ|| ಆದಿ ಕೂರ್ಮೋ ದೇವತಾ|| ಆಸನೇ ವಿನಿಯೋಗಃ || ಪೃಥ್ವೀ ತ್ವಯಾ ಧೃತಾ ಲೋಕಾ ದೇವೀ ತ್ವಂ ವಿಷ್ಣುನಾ ಧೃತಾ|| ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಂ|| ಕೂರ್ಮಾಸನಾಯ ನಮಃ|| ಇತಿ ಆಸನಂ ಆಭಿಮಂತ್ರ್ಯ||
  • ಮಂಟಪದಲ್ಲಿರುವ ಆಸನಕ್ಕೂ, ಕುಳಿತಿರುವ ಆಸನಕ್ಕೂ ಗಂಧಲೇಪಿತ ಹೂ ಹಾಕುವುದು.
  • ||ಮೂರು ಸಣ್ಣ ಚಪ್ಪಾಳೆಯಿಂದ ಭೂತಗಳ ಉಚ್ಛಾಟನೆ||

ಅಪಕ್ರಾಮಂತು ಭೂತಾದ್ಯಾಃ ಸರ್ವೇ ತೇ ಭೂಮಿಭಾರಕಾಃ| ಸರ್ವೇಷಾಮವಿರೋಧೇನ ಪೂಜಾಕರ್ಮ ಸಮಾರಭೇ|| ಸಾರ್ಧತಾಲತ್ರಯೇಣೈವ ಭೂತಮುಚ್ಛಾಟಯೇದ್ಗರುಃ|| ಓಂ ಹ್ರೀಂ ಅಸ್ತ್ರಾಯ ನಮಃ (ಕೈಬರೆಹದ ಪ್ರತಿ)[ಅಥವಾ ಅಸುರಾಂತಕ ತ್ರಿಶೂಲಾಯ ಫಟ್-ಎಲ್ಲಾ ಕಡೆ ಬಾಣದ ಮುದ್ರೆ ತೋರಿಸುವುದು] ಇತಿ ಭೂತಾದೀನ್ ಉತ್ಸಾದ್ಯ||

  • ಗುರು ವಂದನೆ

||ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ| ಚಕ್ಷುರ್ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ||ಇತಿ ಗುರುಂ ನಮಸ್ಕೃತ್ಯ||

  • ಗಣಪತಿಂ ಪ್ರಾರ್ಥಯೇತ್

||ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ| ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ|| ಧೂಮ್ರಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ| ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛೃಣುಯಾದಪಿ (ಪಠೇತ್ ಶೃಣುಯಾದಪಿ)|| ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ| ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ||

  • [ಸುಮುಖಃ ; ಏಕದಂತಃ : ಕಪಿಲಃ : ಗಜಕರ್ಣಕಃ : ಲಂಬೋದರಃ : ವಿಕಟಃ : ವಿಘ್ನರಾಜಃ : ಗಣಾಧಿಪಃ : ಧೂಮ್ರಕೇತುಃ : ಗಣಾಧ್ಯಕ್ಷಃ : ಫಾಲಚಂದ್ರಃ : ಗಜಾನನಃ : ಹೀಗೆ ೧೨ ಹೆಸರುಗಳು (ವಿಘ್ನಃ ತಸ್ಯ ನ ಜಾಯತೇ -೧೨ಹೆಸರು ಕೇಳಿದರೆ ವಿಘ್ನ ಬಾರದು).]
  • ||ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ| ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ||
  • ಅಭೀಪ್ಸಿತಾರ್ಥ ಸಿದ್ಧ್ಯರ್ಥಂ ಪೂಜಿತೋ ಯಃ ಸುರೈರಪಿ| ಸರ್ವ ವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮಃ||
  • ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
  • ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ||
  • ಶ್ರೀ ಲಕ್ಷ್ಮಿನಾರಾಯಣಾಭ್ಯಾಂ ನಮಃ|| ಶ್ರೀಮದುಮಾಮಹೇಶ್ವರಾಭ್ಯಾಂ ನಮಃ||
  • ಶ್ರೀ ಸೀತಾರಾಮಾಭ್ಯಾಂ ನಮಃ|| ಮಾತೃಭ್ಯೋ ನಮಃ|| ಪಿತೃಭ್ಯೋ ನಮಃ ||
  • ಗುರುಭ್ಯೋ ನಮಃ|| ಆಚಾರೇಭ್ಯೋ ನಮಃ|| ಕುಲದೇವತಾಭ್ಯೊ ನಮಃ|| [ಕುಲದೇವರನ್ನು ನೆನೆಯುವುದು]
  • ಸರ್ವೇಭ್ಯೋ ದೇವೇಭ್ಯೋ ನಮಃ|| ಸರ್ವಾಭ್ಯೋ ದೇವತಾಭ್ಯೋ ನಮಃ|| ಸುಮುಹೂರ್ತಂ ಅಸ್ತು ಇತಿ [ಸುಮುಹೂರ್ತಮಸ್ತ್ವಿತಿ] ಭವಂತೋ ಬ್ರುವಂತು ||

||ಸುಮೂಹೂರ್ತಮಸ್ತು || ||ಅಥ ದ್ವಿರಾಚಮ್ಯ || [ಆಚಮನ ಮಾಡಿದರೆ, ಥಾಲಿಯಲ್ಲಿ ಸ್ವಲ್ಪವೇ ನೀರು ಇಟ್ಟುಕೊಂಡು ಹರಿವಾಣದ ನೀರನ್ನೂ ಬಟ್ಟಲು ನೀರನ್ನೂ ಬರಿದುಮಾಡಿ ಪುನಃ ತುಂಬಿಕೊಳ್ಳ ಬೇಕು]

  • || ಪ್ರಾಣಾನಾಯಮ್ಯ||

ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ -(ಇತಿ ಶಿರಸಿ)| ಗಾಯತ್ರೀ ಛಂದಃ (ಇತಿ ಮುಖೇ)| ಪರಮಾತ್ಮಾ ದೇವತಾ (ಇತಿ ಹೃದಯೇ)| ಇತಿ ವಿನ್ಯಸ್ಯ| ಪ್ರಾಣಾಯಾಮೇ ವಿನಿಯೋಗಃ|| ಓಂ ಭೂಃ -ಇತಿ ಪಾದಯೋಃ| ಓಂ ಭುವಃ - ಇತಿ ಜಾನುಯೋಃ| ಓಗ್ಂ ಸುವಃ - ಇತ್ಯುರ್ವೋಃ| ಓಂ ಮಹಃ - ಇತಿ ಜಠರೇ| ಓಂ ಜನಃ -ಇತಿ ಕಂಠೇ| ಓಂ ತಪಃ - ಇತಿ ಮುಖೇ| ಓಗ್ಂ ಸತ್ಯಂ - ಇತಿ ಶಿರಸಿ| ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ| ಧಿಯೋ ಯೋ ನಃ ಪ್ರಚೋದಯಾತ್| ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ|| ಇತಿ ತ್ರಿವಾರಮುಚ್ಚಾರಯೇತ್||

  • ||ಸಂಕಲ್ಪ||

ವಿಷ್ಣೋ ವಿಷ್ಣೋ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಹರೇಃ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ ಮಹಾಮೇರೋರ್ದಕ್ಷಿಣೇ ಪಾರ್ಶ್ವೇ ಶ್ರೀಮದ್ಗೋದಾವರ್ಯಾಃ ದಕ್ಷಿಣೇ ತೀರೇ ಗೋಕರ್ಣಮಂಡಲೇ ಗೋರಾಷ್ಟ್ರ ದೇಶೇ ಭಾಸ್ಕರ ಕ್ಷೇತ್ರೇ ಸಹ್ಯಪರ್ವತೇ ಶಾಲಿವಾಹನ ಶಕಾಬ್ದೇ- ||

  • ಅಸ್ಮಿನ್ ವರ್ತಮಾನಕಾಲೇ ವ್ಯಾವಹಾರಿಕೇ --ಸಂವತ್ಸರೇ, --ಅಯನೇ, --ಋತೌ , --ಮಾಸೇ, --ಪಕ್ಷೇ, --ತಿಥೌ, --ವಾಸರೇ, ||

ಅಥವಾ [ಹಿಂದೆ ಸಂಧ್ಯಾವಂದನೆಯಲ್ಲಿ ಸಂಕಲ್ಪ ಹೇಳಿದ್ದರೆ: ಯಾವದ್ ಪೂರ್ವೋಚ್ಚರಿತ ಏವಂ ಗುಣ ವಿಶೇಷಣ ವಿಶಿಷ್ಠಾಯಾಂ ಪುಣ್ಯಾಯಾಂ ಪುಣ್ಯಕಾಲೇ; ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿಧ ಪುರುಷಾರ್ಥ ಫಲ ಸಿಧ್ಯರ್ಥಂ ಶ್ರೀ ಸೂರ್ಯಗಣಪತ್ಯಂಬಿಕಾ ಶಿವ ವಿಷ್ಣು [ಮನೆದೇವರ ಹೆಸರೂ ಹೇಳಿ- ಉದಾ: ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಅಥವಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ] ಮಮೋಪಾತ್ತ ದುರಿತಕ್ಷಯದ್ವಾರಾ ಯಥಾಶಕ್ತಿ ಯಥಾ ಜ್ಷಾನ, ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ|| ಇತಿ ಸಂಕಲ್ಪ್ಯ ||

ಷೋಡಶೋಪಚಾರ ಪೂಜೆ

[ಬದಲಾಯಿಸಿ]

[ಅರ್ಘ್ಯಕೊಡುವಾಗ, ಕರಿಷ್ಯೆ ಎಂದಾಗಲೆಲ್ಲಾ ಬಲಹಸ್ತದಿಂದ ನಾಲ್ಕು ಬೆರಳ ತುದಿಯಿಂದ ಹರಿವಾಣಕ್ಕೆ ಒಂದು ಸೌಟು ನೀರು ಬಿಡಬೇಕು]

  • ತನ್ನಿರ್ವಿಘ್ನತಾ ಸಿಧ್ಯರ್ಥಂ ಗಣಪತಿ ಪ್ರಾರ್ಥನಂ ಚ ಕರಿಷ್ಯೇ
  • ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ || ಇತಿ ಗಣಪತಿಂ ಪ್ರಾರ್ಥ್ಯ ||
  • ||ಕಲಶ ಪೂಜಾಂ ಕುರ್ಯಾತ್ ||
  • [ನೀರು ತುಂಬಿದ ಕಲಶವನ್ನು ದೇವರ ಬಲ/ಎದುರು/ನಮ್ಮ ಬಲ ಭಾಗದಲ್ಲಿ, ನೀರಿನಲ್ಲಿ ನೆಲದ ಮೇಲೆ ಚತುರಶ್ರ ಮಂಡಲ ಹಾಕಿ ಅದರ ಮೇಲಿಟ್ಟು, ಅದಕ್ಕೆ ಹೂವು, ದೂರ್ವೆ, ತುಲಸಿ ಕುಡಿ ಹಾಕಿ, ಅದರ ಮೇಲೆ (ಎರಡು) ಕೈ ಇಟ್ಟುಕೊಂಡು ಅಭಿಮಂತ್ರಿಸುವುದು.]
  • ||ಕಲಶಸ್ಯ ಮುಖೇ ರುದ್ರಃ ಕಂಠೇ ವಿಷ್ಣುಃ ಸಮಾಶ್ರಿತಃ | ಮೂಲೇ ತತ್ರ ಸ್ಥಿತೋ ಬ್ರಹ್ಮ ಮಧ್ಯೇ ಮಾತೃಗಣಾಃ ಸ್ಮೃತಾಃ || ಕುಕ್ಷೌ ತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುಂಧರಾ | ಋಗ್ವೇದೋSಥ ಯಜುರ್ವೇದಃ ಸಾಮವೇದೋ ಹ್ಯಥರ್ವಣಃ || ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ [ಜಲೇಸ್ಮಿನ್ಸನ್ನಿಧಿಂ] ಕಲಶೇಸ್ಮಿನ್ಸನ್ನಿಧಿಂ ಕುರು || ಓಂ ಭೂರ್ಭುವಸ್ಸುವಃ || ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ || ಕಲಶಾಧಿದೇವತಾಭ್ಯೋ ನಮಃ || ಗಂಧಪುಷ್ಪಾಕ್ಷತಾನ್ ಸಮರ್ಪಯಾಮಿ ||(ಗಂಧ ಮುಟ್ಟಸಿದ ಹೂವು, ದೂರ್ವೆ, ತುಳಸಿ ಹಾಕಿ ನಮಸ್ಕರಿಸುವುದು) ಇತಿ ಕಲಶಾರ್ಚನಂ ||
  • ||ಅಥ ಶಂಖ ಪೂಜಾ||

ಓಂ ಸಹಸ್ರೋಲ್ಕಾಯ ಸ್ವಾಹಾ ಅಸ್ತ್ರಾಯ ಫಟ್ || ಇತಿ ಶಂಖಂ ಅಭಿಮಂತ್ರ್ಯ (ಮಂತ್ರ ಹೇಳಿ, ತುಳಸೀಕುಡಿಯಿಂದ ನೀರು ಚಿಮಕಿಸಿ ಅಭಿಮಂತ್ರಿಸುವುದು, ಶಂಖವನ್ನು ಕೈಯಲ್ಲಿ ತೆಗೆದುಕೊಂಡು ಓಂಕಾರ ಹೇಳಿ, ನೀರು ತುಂಬುವುದು; ಗಂಧ ಪುಷ್ಪಾದಿಗಳನ್ನು ಅದಕ್ಕೆ ಏರಿಸುವುದು. ಅದರ ಸ್ಥಾನದಲ್ಲಿಡುವುದು.) ||ಓಮಿತಿಜಲಮಾಪೂರ್ಯ್ಯ- ಗಂಧಪುಷ್ಪಾದಿಭಿರಭ್ಯರ್ಚ್ಯ: ಶಂಖಂ ನಿಧಾಯ || ಓಂ ಪಾಂಚಜನ್ಯಾಯ ವಿದ್ಮಹೇ ಪದ್ಮಗರ್ಭಾಯ ಧೀಮಹಿ ತನ್ನಃ ಶಂಖಃ ಪ್ರಚೋದಯಾತ್ || ತ್ರೈಲೋಕ್ಯೇ ಯಾನಿ ತೀರ್ಥಾನಿ ವಾಸುದೇವಸ್ಯ ಚಾಜ್ಞಯಾ | ಶಂಖೇತಿಷ್ಠಂತಿ ವಿಪ್ರೇಂದ್ರ ತಸ್ಮಾತ್ ಶಂಖಂ ಪ್ರಪೂಜಯೇತ್ || ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ | ರಕ್ಷಾರ್ಥಂ ಸರ್ವದೇವಾನಾಂ ಪಾಂಚಜನ್ಯ ನಮೋಸ್ತುತೇ || (ಶಂಖ ಜಲವನ್ನು ಸ್ವಲ್ಪ ಕಳಶಕ್ಕೆ ಹಾಕಿ, ತುಳಸೀ ಕುಡಿಯಿಂದ ತನಗೂ, ಉಪಕರಣಗಳಿಗೂ, ಚಮಕಿಸಿ ಉಳಿದುದನ್ನು ಬರಿದುಮಾಡಿ, ಪುನಃ ಓಂಕಾರದಿಂದ ಕಲಶದ ನೀರನ್ನು ತುಂಬಿ ಯಥಾಸ್ಥಾನದಲ್ಲಿ - ಮಂಟಪದಲ್ಲಿ ದೇವರ ಬಲಕ್ಕೆ ಚಿಕ್ಕ ಬಟ್ಟಲಲ್ಲಿ ಇಡುವದು.)

  • || ಅಥ ಆತ್ಮಾರ್ಚನಂ||'

(ವೇದದ ಆದಿ ಮತ್ತು ಅಂತ್ಯದಲ್ಲಿ ಹೇಳಿದ ಪ್ರಕೃತಿಯಲ್ಲಿ ಲೀನವಾಗಿರುವ ಅವನೇ - ಆತ್ಮನೇ ಪರಮಾತ್ಮನಾದ ಮಹೇಶ್ವರನು: ನನ್ನ ಆತ್ಮನೇ ಅಚ್ಯುತನು, ಅನಂತನು)

  • || ಗಂಧಪುಷ್ಪಾಕ್ಷತಾನ್ ಸ್ವ ಶಿರಸಿ ನಿಧಾಯ || ಅಚ್ಯುತೋಽಹಂ ಅನಂತೋಽಹಂ ಬ್ರಹ್ಮಾತ್ಮಧ್ಯಾನ ಪೂರ್ವಕಂ | ಓಂ ಯೋ ವೇದಾದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ | ತಸ್ಯ ಪ್ರಕೃತಿ ಲೀನಸ್ಯ ಯಃ ಪರಃ ಸ ಮಹೇಶ್ವರಃ || ಓಂ ಆತ್ಮನೇ ನಮಃ || ಓಂ ಅಂತರಾತ್ಮನೇ ನಮಃ || ಓಂ ಪರಮಾತ್ಮನೇ ನಮಃ || ಓಂ ಜ್ಞಾನಾತ್ಮನೇನಮಃ || ಇತಿ ಸಂಪೂಜ್ಯ | ಶಿರಸ್ಥ ಪುಷ್ಪಮಾಘ್ರಾಯ ವಿಸೃಜ್ಯ, ಉಪಸ್ಪೃಶೇತ್||
  • || ಆಧಾರ ಶಕ್ತ್ಯಾದಿ ಪೀಠದೇವತಾಭ್ಯೋ ನಮಃ || ಸ್ವಾಮಿನ್ ಸರ್ವ ಜಗನ್ನಾಥ ಯಾವತ್ ಪೂಜಾವಸಾನಕಂ | ತಾವತ್ತ್ವಂ ಪ್ರೀತಿಭಾವೇನ ಪೀಠೇಸ್ಮಿನ್ ಸನ್ನಿಧಿಂ ಕುರು || (ವಿಷ್ಣು ಮನೆ ದೇವರಾಗಿರುವವರಿಗೆ) ||ಅಥ ವಿಷ್ಣು ನವ ಶಕ್ತಿ ಪೂಜಾಂ ಕರಿಷ್ಯೇ || ಪಂಚಾಯತನ ಮಧ್ಯದಲ್ಲಿರುವ ಕುಲದೇವತೆಯ ನವಶಕ್ತಿ ಪೂಜೆ ಮಾಡುವುದು ಎಲ್ಲ ಮೂರ್ತಿ/ಶಿಲೆಗಳನ್ನು ಹರಿವಾಣದಲ್ಲಿ ಜೋಡಿಸಿ ಇಟ್ಟುಕೊಳ್ಳುವುದು- ಲೋಹದ ಮೂರ್ತಿಗಳನ್ನು ಒರೆಸಿ ಮಂಟಪದಲ್ಲಿ ಇಡಬಹುದು. ಅವಕ್ಕೆ ವಿಶೇಷ ದಿನಗಳಲ್ಲಿ ಮಾತ್ರ ಅಭಿಷೇಕ ಮಾಡಿ ಶಿಲೆಗಳಿಗೆ ದಿನವೂ ಆಭಿಷೇಕ ಮಾಡಬಹುದು.

ವಿಷ್ಣು ನವಶಕ್ತಿ ಪೂಜೆ

[ಬದಲಾಯಿಸಿ]

  • || ಓಂ ವಿಮಲಾಯೈ ನಮಃ || ಉತ್ಕರ್ಷಿಣೈ ನಮಃ || ಜ್ಞಾನಾಯೈ ನಮಃ || ಕ್ರಿಯಾಯೈ ನಮಃ || ಯೋಗಾಯೈನಮಃ || ಬ್ರಾಹ್ಮೈ (ಹ್ ಮ್ ಐ) ನಮಃ || ಸತ್ಯಾಯೈ ನಮಃ || ಈಶಾನಾಯೈ ನಮಃ || ಅನುಗ್ರಹಾಯೈ ನಮಃ || ಇತಿ ನವಶಕ್ತಿಪೂಜಾಂ ಸಮರ್ಪಯಾಮಿ||

||ಆವಾಹನೆ || ಓಂ ನಮೋ ಭಗವತೇ ವಿಷ್ಣವೇ ಸರ್ವಭೂತಾತ್ಮನೇ ವಾಸುದೇವಾಯ ಸಕಲ ಗುಣ ಶಕ್ತಿ ಯುಕ್ತಾಯ ಯೋಗಾಯ ಯೋಗಪದ್ಮಪೀಠಾತ್ಮನೇ ನಮಃ || ಸ್ವರ್ಣ ಪೀಠಂ ಕಲ್ಪಯಾಮಿ|| ಸ್ವಾತ್ಮ ಸಂಸ್ಥಂ ಅಜಂ ಶುದ್ಧಂ ತ್ವಾಮದ್ಯ ಪುರುಷೋತ್ತಮ | ಅರಣ್ಯಾಮಿವ ಹವ್ಯಾಶಂ ಮೂರ್ತಾವಾವಾಹಯಾಮ್ಯಹಂ (ಮೂರ್ತೌ ಆವಾಹಯಾಮಿ ಅಹಂ)|| ಓಂ ಭೂರ್ಭುವಸ್ಸುವರೋಂ ಸಶಕ್ತಿ ಸಾಂಗ ಸಾಯುಧ ಸವಾಹನ ಸಪರಿವಾರ ಸರ್ವಾಲಂಕಾರ ಭೂಷಿತ ಶ್ರೀ ಮಹಾವಿಷ್ಣುಂ ಆವಾಹಯಾಮಿ || ಶ್ರೀ ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣುಂ ಆವಾಹಯಾಮಿ || ಶ್ರೀ ಲಕ್ಷ್ಮೀನಾರಾಯಣಂ ಆವಾಹಯಾಮಿ (ಅವರವರ ಮನೆ ದೇವರ ಹೆಸರು ಹೇಳಿ ಆವಾಹನೆ ಮಾಡಬಹುದು)|| ಆವಾಹಿತೋ ಭವ| ಸಂಸ್ಥಾಪಿತೋ ಭವ | ಸನ್ನಿಹಿತೋ ಭವ | ಸನ್ನಿರುದ್ಧೋ ಭವ | ಅವಗುಂಠಿತೋ ಭವ | ಅಮೃತ ಕಿರಣೋ ಭವ | ವ್ಯಾಪ್ತೋ ಭವ | ಸುಪ್ರಸನ್ನೋ ಭವ || ಕ್ಷಮಸ್ವ ಸಾನ್ನಿದ್ಧ್ಯಂ (ದ್ ಧ್ಯ್ ಮ್) ಕುರು [ಯಾವತ್ ಪೂಜಾವಸಾನಕಂ ತಾವತ್ತ್ವಂ ಪ್ರೀತಿಭಾವೇನ ಪೀಠೇಸ್ಮಿನ್ ಸನ್ನಿಧಿಂ ಕುರು] | ಅತ್ರ ಸನ್ನಿಹಿತಾಃ ಸಂತು || ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ವಿಷ್ಣುಃ ಪ್ರಚೋದಯಾತ್ || ಇದಂ ಅರ್ಘ್ಯಂ || ಓಂ ನಮೋ ನಾರಾಯಣಾಯ || ಇತಿ ಜಪಂ ||

ಪಂಚೋಪಚಾರ ಪೂಜಾಂ ಕರಿಷ್ಯೇ

[ಬದಲಾಯಿಸಿ]
  • || ಓಂ ಲಂ ಪೃಥಿವ್ಯಾತ್ಮನೇ ನಮಃ | ಗಂಧಂ ಕಲ್ಪಯಾಮಿ || ಓಂ ಹಂ ಆಕಾಶಾತ್ಮನೇ ನಮಃ | ಪುಷ್ಪಂ ಕಲ್ಪಯಾಮಿ || ಓಂ ಯಂ ವಾಯ್ವಾತ್ಮನೇ ನಮಃ | ಧೂಪಂ ಕಲ್ಪಯಾಮಿ || ಓಂ ರಂ ತೇಜೋಮಯಾತ್ಮನೇ ನಮಃ | ದೀಪಂ ಕಲ್ಪಯಾಮಿ || ಓಂ ಅಂ ಅಮೃತಾತ್ಮನೇ ನಮಃ | ನೈವೇದ್ಯಂ ಕಲ್ಪಯಾಮಿ || ಇತಿ ಪಂಚೋಪಚಾರ ಪೂಜಾಂ ಸಮರ್ಪಯಾಮಿ.
  • [ಲಂ ನಿಂದ ಪ್ರತಿ ಬೀಜಾಕ್ಷರಕ್ಕೂ ಕಿರುಬೆರಳಿಂದ ಒಂದೊಂದೇ ಬೆರಳನ್ನು ಹೆಬ್ಬೆರಳಿಂದ ಸ್ಪರ್ಶಿಸಿ ಸಮರ್ಪಣೆ ಭಾವ ತೋರಿಸುವುದು] || ಅಥ ಯಥಾಶಕ್ತಿ ಯಥಾಜ್ಞಾನ ಷೋಡಶೋಪಚಾರ ಪೂಜಾಂ ಕರಿಷ್ಯೇ||

ಷೋಡಶೋಪಚಾರ ಪೂಜೆ

[ಬದಲಾಯಿಸಿ]

|| ಅಂಜಲೌ ಪುಷ್ಪಂ ಗೃಹೀತ್ವಾ ಹೃದಯಸ್ಥಂ ದೇವಂ ಶ್ವಾಸ ಮಾರ್ಗೇಣ ಪಷ್ಪೇ ಸಮಾಗತಂ ವಿಭಾವ್ಯ ||

  • ಸರ್ವಾಕಾರಾಂ ಸರ್ವಲೋಕಾಂತರಸ್ಥಾಂ ಓಂಕಾರಾಖ್ಯಾಂ ಯೋಗಿಹೃದ್ಯಾನುಗಮ್ಯಂ| ಶಕ್ತ್ಯಾ ಯುಕ್ತಾಂ ಸಾಯುಧಾಂ ಭಕ್ತಸೇವ್ಯಾಂ ಶಾಂತಾಂ ಜ್ಯೋತಿರ್ಮೂರ್ತಿಂ ಆವಾಹಯಾಮಿ ||
  • || ಸಶಕ್ತಿ ಸಾಂಗ ಸಾಯುಧ ಸವಾಹನ ಸಪರಿವಾರ ಸರ್ವಾಲಂಕಾರ ಭೂಷಿತ ಶ್ರೀ ಸೂರ್ಯ ಗಣಪತಿ ಅಂಬಿಕಾ ಶಿವ ವಿಷ್ಣುಂ ಆವಾಹಯಾಮಿ || [ಪುರುಷ ಸೂಕ್ತದ ಮೊದಲ ಮಂತ್ರವನ್ನು ಹೇಳಿ (ಇದು ಒಂದು ಕ್ರಮ-ಪದ್ದತಿ) ಅಂಗೈಯಲ್ಲಿರುವ ಹೂವನ್ನು (ವಿಷ್ಣು ಮೂರ್ತಿಗೆ) ಎದೆಯ ಹೃದಯದ ಹತ್ತಿರದಿಂದ ಹೂವಿರುವ ಬೊಗಸೆಯನ್ನು ಮುಖದ ಹತ್ತಿರ ತಂದು (ಶ್ವಾಸ ಮಾರ್ಗದಿಂದ) ದೇವರ ಮೂರ್ತಿಗಳ ಶಿರಸ್ಸುಗಳ ಮೇಲೆ ಹಾಕುವುದು || ಅತ್ರ ಸನ್ನಿಹಿತಾಃ ಸಂತು ||
  • ಆವಾಹನಂ ಸಮರ್ಪಯಾಮಿ ||
  • ಆಸನಂ ಸಮರ್ಪಯಾಮಿ ||
  • ಪಾದ್ಯಂ ಸಮರ್ಪಯಾಮಿ ||
  • ಅರ್ಘ್ಯಂ ಸಮರ್ಪಯಾಮಿ ||
  • ಆಚಮನಂ ಸಮರ್ಪಯಾಮಿ ||
  • [ವಿಗ್ರಹಗಳಿಗೆ ವಿಶೇಷ ದಿನಗಳಲ್ಲಿ ಮಾತ್ರ ಅಭಿಷೇಕ- ಸಾಲಿಗ್ರಾಮಾದಿ ಶಿಲೆಗಳಿಗೆ ದಿನವೂ ಅಭಿಷೇಕ] ಆದೌ ಮಲಾಪಕರ್ಷಣ ಸ್ನಾನಂ ಕರಿಷ್ಯೆ || [ಮಲಿನವನ್ನು ತೊಳೆಯುವ ಸ್ನಾನ - ನೀರಿನಿಂದ ಅಭಿಷೇಕ ಮಾಡಿ ತಿಕ್ಕಿ ತೊಳೆಯುವುದು]
  • || ಅಭಿಷೇಕ ಮಂತ್ರಃ||
  • ಓಂ ಆಪೋಹಿಷ್ಠಾ ಮಯೋಭುವ ಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ||
  • ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |
  • ಓಂ ಉಶತೀರಿವ ಮಾತರಃ || ಓಂ ತಸ್ಮಾ ಅರಂಗಮಾಮವೋ ಯಸ್ಯ ಕ್ಷಯಾಯ ಜಿನ್ವಥ ||
  • ಓಂ ಆಪೋ ಜನಯತಾಚನಃ ||
  • ಮಲಾಪಕರ್ಷಣ ಸ್ನಾನಂ ಸಮರ್ಪಯಾಮಿ||
  • ಅಥ ಮಹಾಭಿಷೇಕಂ ಕರಿಷ್ಯೇ
  • ವೇದ ಮಂತ್ರ ಪೂರ್ವಕ ಮಾಡಲು -ಮೇಲಿನ ಆವಾಹನಂ -- ಇತ್ಯಾದಿ ಕ್ರಿಯೆಗೆ ಈ ಕೆಳಗಿನ ಕ್ರಮ ಅನುಸರಿಸಬಹುದು : ಮಲಾಪಕರ್ಷಣ(ಮಲಿನ -ಕೊಳೆ ತೆಗೆಯುವ) ಸ್ನಾನವಾದ ಮೇಲೆ -ಪುರುಷಸೂಕ್ತದ ಎಲ್ಲ ಮಂತ್ರ ಹೇಳಿ ಮಹಾಭಿಷೇಕ ಮಾಡುವ ಪದ್ಧತಿ ಇದೆ.
  • || ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಚಃ ಸಹಸ್ರಪಾತ್||
  • ಸ ಭೂಮಿಂ ವಿಶ್ವತೋವೃತ್ವಾ ಅತ್ಯತ್ತಿಷ್ಠದ್ದಶಾಂಗುಲಂ||೧|| (ಆವಾಹನಂ ಸಮರ್ಪಯಾಮಿ ||)
  • ಓಂ ಪುರುಷ ಏವೇದಗ್ಂ ಸರ್ವಂ | ಯದ್ಭೂತಂ ಯಚ್ಚಭವ್ಯಂ|
  • ಉತಾಮೃತತ್ವಸ್ಯೇಶಾನಃ | ಯದನ್ನೇನಾತಿರೋಹತಿ |೨||(ಆಸನಂ ಸಮರ್ಪಯಾಮಿ || )
  • ಓಂ ಏತಾವಾನಸ್ಯ ಮಹಿಮಾ ಅತೋ ಜ್ಯಾಯಾಗ್ಂಶ್ಚ ಪೂರುಷಃ ||
  • ಪಾದೋSಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಂಮೃತಂದಿವಿ || ೩||( ಪಾದ್ಯಂ ಸಮರ್ಪಯಾಮಿ ||)
  • ಓಂ ತ್ರಿಪಾದೂರ್ಧ್ವ ಉದೈತ್ಪುರುಷಃ | ಪಾದೋಸ್ಯೇಹಾ ಭವಾತ್ಪುನಃ ||
  • ತತೋವಿಶ್ವಂಙ್ವ್ಯಕ್ರಾಮತು | ಸಾಶನಾನಶನೇ ಅಭಿ ||೪|| (ಅರ್ಘ್ಯಂ ಸಮರ್ಪಯಾಮಿ ||)
  • ಓಂ ತಸ್ಮಾದ್ವಿರಾಡಜಾಯತ ವಿರಾಜೋ ಅಧಿಪೂರುಷಃ ||
  • ಸಜಾತೋS ತ್ಯರಿಚ್ಯತ | ಪಶ್ಚಾದ್ಭೂಮಿಮಥೋ ಪುರಃ || ೫|| (ಆಚಮನಂ ಸಮರ್ಪಯಾಮಿ || )
  • ಓಂ ಯತ್ಪರುಷೇಣ ಹವಿಷಾ ದೇವಾ ಯಜ್ಞಮತನ್ವತ
  • ವಸಂತೋಸ್ಯಾಸೀದಾಜ್ಯಂ || ಗ್ರೀಷ್ಮ ಇಧ್ಮಃ ಶರದ್ಧವಿಃ || ೬|| (ಆಭಿಷೇಕಂ ಸಮರ್ಪಯಾಮಿ || ಶುದ್ಧೋದಕ ಸ್ನಾನಮ್ ಸಮರ್ಪಯಾಮಿ ||)
  • [ಈ ಮಂತ್ರವನ್ನು ಹೇಳುತ್ತಾ ಶಂಖದಿಂದ ನೀರನ್ನು ಬಿಟ್ಟು ಶಾಲಿಗ್ರಾಮಕ್ಕೆ ಗಂಟೆ ಬಾರಿಸುತ್ತಾ ಅಭಿಷೇಕ ಮಾಡುವುದು- ಆ ನೀರನ್ನು ತೀರ್ಥಕ್ಕಾಗಿ ತಾಮ್ರದ ಬಟ್ಟಲಲ್ಲಿ ತುಲಸಿ ಕುಡಿಹಾಕಿ ಹಿಡಿದಿಟ್ಟುಕೊಳ್ಳಬೇಕು. ತೀರ್ಥದ ಬಟ್ಟಲಲ್ಲಿ ಸಾಲಿಗ್ರಾಮವನ್ನಿಟ್ಟು ಅಭಿಷೇಕ ಮಾಡಬಹುದು. ನಂತರ ಒರೆಸಿ ಪೀಠದಲ್ಲಿಟ್ಟು ಗಂಧ ಹಚ್ಚುವುದು-
  • (ಉದಕಂ ಚಂದನಂ ಚಕ್ರಂ ಶಂಖಶ್ಚ ತುಲಸೀದಲಂ |
  • ಘಂಟಾ ಪುರುಷಸೂಕ್ತಂ ಚ ತಾಮ್ರ ಪಾತ್ರಮಥಾಷ್ಟಮಂ|
  • ಶಾಲಗ್ರಾಮ ಶಿಲಾ ಚೈವ ನವಭಿಃ ತೀರ್ಥಮಾಹರೇತ್ - ಈ ಮಂತ್ರ ಹೇಳುವುದಿಲ್ಲ, ತಿಳುವಳಿಕೆಗಾಗಿ ಕೊಟ್ಟಿದೆ)
  • |[ಸಮಯ ಉಳಿಸಲು ಇಲ್ಲಿ ಪುರುಷಸೂಕ್ತ ಮಂತ್ರವನ್ನು ಅಭಿಷೇಕದವರೆಗೆ ಮಾತ್ರಾ ಉಪಯೋಗಿಸಿದೆ. ಒಂದೇ ಮಂತ್ರ ಹೇಳಬಹುದು, ಇಲ್ಲವೇ ಪೂರ್ಣ ಹೇಳಬಹುದು. ಪ್ರತಿಯೊಂದು ಕ್ರಿಯೆಗೂ ಒಂದೊಂದು ಮಂತ್ರ ಹೇಳುವ ಕ್ರಮವೂ ಇದೆ. ಈ ಪುರುಷ ಸೂಕ್ತದ ಮಂತ್ರಕ್ಕೂ (ಅರ್ಥ- ಪೂಜಾ ಕ್ರಿಯೆಗೂ) ಕ್ರಿಯೆಗೂ ಏನೂ ಸಂಬಂಧವಿಲ್ಲ. ಒಳ್ಳೆಯ ವಿಚಾರದೊಂದಿಗೆ ಪೂಜೆ ಮಾಡುವ ಉದ್ದೇಶ - ಅದಕ್ಕೆ ಪ್ರಸಿದ್ಧ ವೇದ ಮಂತ್ರ ಹೇಳುವುದು.
  • ಇಲ್ಲದಿರುವ ಸಲಕರಣೆಗೆ ಹೂವನ್ನಾಗಲೀ ಅಕ್ಷತೆಯನ್ನಾಗಲಿ ಹಾಕುವುದು.

|| ಪೀಠೇ ಪ್ರತಿಷ್ಠಾಪ್ಯ ||

  • ವಸ್ತ್ರಂ ಸಮರ್ಪಯಾಮಿ ||
  • ಉಪವೀತಂ ಸಮರ್ಪಯಾಮಿ ||
  • ಆಭರಣಂ ಸಮರ್ಪಯಾಮಿ||
  • ಗಂಧಂ ಸಮರ್ಪಯಾಮಿ ||
  • ಅಕ್ಷತಾನ್ ಸಮರ್ಪಯಾಮಿ ||
  • ಪುಷ್ಪಾಣಿ ಸಮರ್ಪಯಾಮಿ ||
  • (ಎಲ್ಲದಕ್ಕೂ ಒಂದೊಂದು ಹೂ ಹಾಕುವುದು.

|| ಅಥ ದ್ವಾದಶ ನಾಮ ಪೂಜಾಂ ಕರಿಷ್ಯೇ ||

[ಬದಲಾಯಿಸಿ]

ಸೂರ್ಯನಿಗೆ || ನಾಮಗಳಿಗೆ ಹೂವು ಅಥವಾ ಅಕ್ಷತೆ ಹಾಕುವುದು|| ಎಲ್ಲಾ ಹೆಸರಿಗೂ ಸೇರಿಸಿ ಒಂದೆರಡು ಹೂ ಹಾಕಬಹುದು. (ಶಿವನಿಗೆ ತುಳಸಿ ಆಗದು; ವಿನಾಯಕನಿಗೆ ತುಳಸಿ ಆಗದು; ಅಂಬಿಕೆಗೆ ತುಳಸಿ, ದೂರ್ವೆ ಆಗದು; ವಿಷ್ಣುವಿಗೆ (ಸಾಲಿಗ್ರಾಮಕ್ಕೆ) ಕೃಷ್ಣನಿಗೆ ತುಲಸಿ ಆಗಲೇ ಬೇಕು; ಗಣಪನಿಗೆ ದೂರ್ವೆ ಬೇಕು; ಶಿವನಿಗೆ ಬಿಲ್ವ ಇಷ್ಟ.)

  • ಓಂ ಸಹಸ್ರಕಿರಣಾಯ ನಮಃ || ಓಂ ಸೂರ್ಯಾಯ ನಮಃ || ಓಂ ತಪನಾಯ ನಮಃ || ಓಂ ಸವಿತ್ರೇ ನಮಃ || ಓಂ ರವಯೇ ನಮಃ || ಓಂ ವಿಕರ್ತನಾಯ ನಮಃ || ಓಂ ಜಗಚ್ಚಕ್ಷುಷೇ ನಮಃ || ಓಂ ದ್ಯುಮಣಯೇ ನಮಃ || ಓಂ ತರಣಯೇ ನಮಃ || ಓಂ ತಿಗ್ಮ ಧೀಧಿತಯೇ ನಮಃ || ಓಂ ದ್ವಾದಶಾತ್ಮನೇ ನಮಃ || ಓಂ ತ್ರಯೀಮೂರ್ತಯೇ ನಮಃ || ಇತಿ ದ್ವಾದಶ ನಾಮ ಪೂಜಾಂ ಸಮರ್ಪಯಾಮಿ ||
  • ಗಣಪತಿಗೆ

ಮುಂದೆ ಎಲ್ಲಾ ಹೆಸರಿಗೂ ಮೊದಲು 'ಓಂ' ಸೇರಿಸಿಕೊಳ್ಳಬೇಕು. ಹೆಸರಿನ ಕೊನೆಯಲ್ಲಿ ಎಲ್ಲದಕ್ಕೂ 'ನಮಃ' ಸೇರಿಸಿಕೊಳ್ಳಬೇಕು. || ಓಂ ಸುಮುಖಾಯ ನಮಃ || ಓಂ ಏಕದಂತಾಯ || ಓಂ ಕಪಿಲಾಯ || ಓಂ ಗಜಕರ್ಣಕಾಯ || ಓಂ ಲಂಬೋದರಾಯ || ಓಂ ವಿಕಟಾಯ || ಓಂ ವಿಘ್ನರಾಜಾಯ || ಓಂ ಗಣಾಧಿಪಾಯ || ಓಂ ಧೂಮ್ರಕೇತವೇ || ಓಂ ಗಣಾಧ್ಯಕ್ಷಾಯ || ಓಂ ಭಾಲಚಂದ್ರಾಯ || ಓಂ ಗಜಾನನಾಯ ||

  • ಅಂಬಿಕೆಗೆ

|| ಓಂ ದುರ್ಗಾಯೈ ನಮಃ || ಓಂ ಶಾಂತೈ || ಓಂ ಶಾಂಭವೈ || ಓಂ ಭೂತಿದಾಯಿನೈ || ಓಂ ಶಂಕರ ಪ್ರಿಯಾಯೈ || ಓಂ ನಾರಾಯಣೈ || ಓಂ ಭದ್ರಕಾಲ್ಯೈ || ಓಂ ಶಿವದೂತ್ಯೈ || ಓಂ ಮಹಾಲಕ್ಷ್ಮೈ (ಕ್.ಷ್.ಮೈ) || ಓಂ ಮಹಾಮಾಯಾಯೈ || ಓಂ ಯೋಗನಿದ್ರಾಯೈ || ಓಂ ಚಂಡಿಕಾಯೈ ||

  • ಶಿವನಿಗೆ

|| ಓಂ ಮಹಾದೇವಾಯ ನಮಃ || ಮಹೇಶ್ವರಾಯ || ಶಂಕರಾಯ || ವೃಷಧ್ವಜಾಯ || ಕೃತ್ತಿವಾಸಸೇ || ಕಾಮಾಂಗನಾಶನಾಯ || ದೇವ ದೇವೇಶಾಯ || ಹರಾಯ || ಶ್ರೀ ಕಂಠಾಯ || ಪಾರ್ವತೀಪತಯೇ || ಶ್ರೀ ರುದ್ರಾಯ || ಶಿವಾಯ ನಮಃ ||

  • ವಿಷ್ಣುವಿಗೆ

|| ಓಂ ಕೇಶವಾಯ ನಮಃ || ನಾರಾಯಣಾಯ || ಮಾಧವಾಯ || ಗೋವಿಂದಾಯ || ವಿಷ್ಣವೇ || ಮಧುಸೂದನಾಯ || ತ್ರಿವಿಕ್ರಮಾಯ || ವಾಮನಾಯ || ಶ್ರೀಧರಾಯ || ಹೃಷೀಕೇಶಾಯ || ಪದ್ಮನಾಭಾಯ || ದಾಮೋದರಾಯ ನಮಃ ||

  • ಇತಿ ದ್ವಾದಶ ನಾಮ ಪೂಜಾಂ ಸಮರ್ಪಯಮಿ ||

ಧೂಪ ದೀಪಾರಾಧನೆ

[ಬದಲಾಯಿಸಿ]

  • |ದಶಾಂಗಂ ಗುಗ್ಗುಲಂ ಧೂಪಂ | ಸುಗಂಧಂ ಚ ಸುಮನೋಹರಂ ಕಪಿಲಾಘೃತ ಸಂಯುಕ್ತಂ |
  • ಧೂಪೋಽಯಂ ಪ್ರತಿಗೃಹ್ಯತಾಂ || ಧೂಪಂ ಸಮರ್ಪಯಾಮಿ ||
  • |ಸಾಜ್ಯಂ ತ್ರಿವರ್ತಿ ಸಂಯುಕ್ತಂ | ವಹ್ನಿನಾ ಯೋಜಿತಂ ಮಯಾ |

ಗೃಹಾಣ ಮಂಗಳಂ ದೀಪಂ ತ್ರೈಲೋಕ್ಯ ತಿಮಿರಾಪಹಂ || ದೀಪಂ ದರ್ಶಯಾಮಿ ||

ನೈವೇದ್ಯ

[ಬದಲಾಯಿಸಿ]

  • ||ನೈವೇದ್ಯಾರ್ಥಂ ಸೋಪಸ್ಕರಮಭಿಘಾರಿತಂ ಅನ್ನಂ ನಿಧಾಯ [ಚತುರಸ್ರ ಮಂಡಲ ಬರೆದು ಅದರ ಮೇಲೆ ಅಭಿಗಾರ ಮಾಡಿದ ಅನ್ನವನ್ನೂ ಇತರ ಉಪಸ್ಕರಗಳನ್ನೂ ನೈವೇದ್ಯಕ್ಕೆ ಇಡುವುದು. ಗಾಯತ್ರೀ ಮಂತ್ರದಿಂದ ಪ್ರೋಕ್ಷಣೆ ಮಾಡುವುದು.]||
  • || ಓಂ ಭೂರ್ಭುವಸ್ಸುವಃ || ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ಸತ್ಯಂತ್ವರ್ತೇನ ಪರಿಷಿಂಚಾಮಿ [ಸುತ್ತುಗಟ್ಟುವುದು] || ಅನ್ನಪೂರ್ಣಪರಮೇಶ್ವರ್ಯೈ ನಮಃ ||

[ಹೂವಿಗೆ ಗಂಧಾಕ್ಷತೆ ಸೇರಿಸಿ ಅನ್ನದ ಪಾತ್ರೆಯ ತಲದ ಹತ್ತಿರ ಹಾಕಿ ಕೈ ಮುಗಿಯುವುದು ]

  • || ನಾನಾವಿಧ ಫಲ [ನಾಲೀಕೇರಂ ಕದಳೀ ಫಲಂ] ಭಕ್ಷ್ಯ ಭೋಜ್ಯ ಸಹಿತ ಮಹಾನೇವೇದ್ಯಂ ನಿವೇದಯಾಮಿ || ಇತಿ ತುಲಸೀದಲ ಮಿಶ್ರಿತ ಜಲೇನ ನೈವೇದ್ಯಂ ಪರಿಷಿಚ್ಯ ತುಲಸೀದಲಂ ದೇವೇ ಅರ್ಪಯೇತ್ ||

ನೀರು ತುಲಸೀದಲದಿಂದ ಸುಳಿದು ಮಂತ್ರ ಹೇಳಿ ದೇವರಿಗೆ ಅರ್ಪಿಸುವುದು || ಓಂ ಅಮೃತೋಪಸ್ತರಣಮಸಿ ಸ್ವಾಹಾ || ಇತಿ ಕಿಂಚಿಜ್ಜಲಂ ಸಮರ್ಪ್ಯ|| [ಪ್ರತಿಮಂತ್ರಕ್ಕೂ ಹೇಳಿದ ಬೆರಳುಗಳನ್ನು ಹೆಬ್ಬೆರಳಿನಿಂದ ಸ್ಪರ್ಶಮಾಡಿ ದೇವರ ಕಡೆ ಸಮರ್ಪಣೆ ತೋರಿಸುವುದು] || ಕನಿಷ್ಠಾನಾಮಿಕಾ ಅಂಗುಷ್ಠೈಃ | ಓಂ ಪ್ರಾಣಾಯ ಸ್ವಾಹಾ || ಅನಾಮಿಕಾಮಧ್ಯಮಾ ಅಂಗುಷ್ಠೈಃ | ಓಂ ಅಪಾನಾಯ ಸ್ವಾಹಾ || ಮಧ್ಯಮಾ ತರ್ಜನಿ ಅಂಗುಷ್ಠೈಃ | ಓಂ ವ್ಯಾನಾಯ ಸ್ವಾಹಾ || ಕನಿಷ್ಠತರ್ಜನಿ ಅಂಗುಷ್ಠೈಃ | ಓಂ ಉದಾನಾಯ ಸ್ವಾಹಾ || ಸರ್ವಾಭಿಃ ಅಂಗುಲೀಭಿಃ | ಓಂ ಸಮಾನಯ ಸ್ವಾಹಾ || ಇತಿ ಪಂಚ ಮುದ್ರಾ ಪ್ರದರ್ಶ್ಯ || ಓಂ ಬ್ರಹ್ಮಣೇ ಸ್ವಾಹಾ || ಸೂರ್ಯ ಗಣಪತ್ಯಂಬಿಕಾ ಶಿವ ವಿಷ್ಣು ದೇವೇಭ್ಯೋ ನಮಃ|| ಇಷ್ಟದೇವತಾಭ್ಯೋ ನಮಃ [ಶ್ರೀ ಲಕ್ಷ್ಮಿ ನಾರಾಯಣೇಭ್ಯೋ ನಮಃ : [ಹೀಗೆ ಇಷ್ಟದೇವರ ಹೆಸರು ಹೇಳುವುದು] || ನೈವೇದ್ಯಂ ಸಮರ್ಪಯಾಮಿ [ವಿಸರ್ಜಯಾಮಿ] [ಪುನಃ ತುಲಸೀದಲ ಮಿಶ್ರಿತ ಜಲೇನ ನೈವೇದ್ಯಂ ಪರಿಷಿಚ್ಯ ತುಲಸೀದಲಂ ದೇವೇ ಅರ್ಪಯೇತ್ || ನೀರು ತುಲಸೀದಲದಿಂದ ಸುಳಿದು ಮಂತ್ರ ಹೇಳಿ ದೇವರಿಗೆ ಅರ್ಪಿಸುವುದು] || ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ|| ಓಂ ಅಮೃತಾಪಿಧಾನಮಸಿ ಸ್ವಾಹಾ || ಪಾರ್ಷದ ಗಣೇಭ್ಯೋ ನಮಃ || ತೃಪ್ತಿರಸ್ತು || ಹಸ್ತ ಪ್ರಕ್ಷಾಲನಂ ಮುಖ ಪ್ರಕ್ಷಾಲನಂ ಸಮರ್ಪಯಾಮಿ || ಪೂಗೀಫಲ ತಾಂಬೂಲಂ ಸಮರ್ಪಯಾಮಿ || ಪುಷ್ಪಂ ಸಮರ್ಪಯಾಮಿ || ಸರ್ವೋಪಚಾರ ಪೂಜಾಂ ಸಮರ್ಪಯಾಮಿ ||

|| ಮಂಗಲ ನೀರಾಜನಂ ಕರಿಷ್ಯೆ ||

[ಬದಲಾಯಿಸಿ]

ಮಂಗಲ ನೀರಾಜನಂ ಸಮರ್ಪಯಾಮಿ ||

  • ಓಂ ಯೋ ವೇದಾದೌ ಸ್ವರಃ ಪ್ರೋಕ್ತೋ ವೆದಾಂತೇ ಚ ಪ್ರತಿಷ್ಠಿತಃ | ತಸ್ಯ ಪ್ರಕೃತಿ ಲೀನಸ್ಯ ಯಃ ಪರಃ ಸ ಮಹೇಶ್ವರಃ ||
  • ಮಂತ್ರಪುಷ್ಪಂ ಸಮರ್ಪಯಾಮಿ ||

ಸೂರ್ಯ ಗಣಪತ್ಯಂಬಿಕಾ ಶಿವ ವಿಷ್ಣು ದೇವೇಭ್ಯೋ ನಮಃ|| ಇಷ್ಟದೇವತಾಭ್ಯೋ ನಮಃ [ಶ್ರೀ ಲಕ್ಷ್ಮೀ ನಾರಾಯಣೇಭ್ಯೋ ನಮಃ : ಹೀಗೆ ಇಷ್ಟದೇವರ ಹೆಸರು ಹೇಳಿ ಪ್ರದಕ್ಷಿಣ ನಮಸ್ಕಾರ ಮಾಡುವುದು] || ಪ್ರದಕ್ಷಿಣ ನಮಸ್ಕಾರಂ ಸಮರ್ಪಯಾಮಿ || || ಗಂಧ ಪಷ್ಪ ಅಕ್ಷತ ತುಲಸೀದಲ ದೂರ್ವಾಂಕುರಾನ್ ಗೃಹೀತ್ವಾ ||

'|| ಪ್ರಸನ್ನಾರ್ಘ್ಯಂ ||

[ಬದಲಾಯಿಸಿ]

  • (ಪ್ರಸನ್ನಾರ್ಘ್ಯವನ್ನು ಕೊಡುವಾಗ ತುಲಸಿ, ದೂರ್ವೆ, ಹೂ, ಗಂಧ ಮತ್ತು ಅಕ್ಷತೆಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಅಂಗೈ ಮೇಲೆ ನೀರು ಹಾಕಿ ಬೆರಳ ತುದಿಗಳಿಂದ ನೀರು ಬಿಡಬೇಕು. ಐದೂ ಅರ್ಘ್ಯಗಳು ಆದ ಮೇಲೆ ತುಲಸಿ, ದೂರ್ವೆ, ಹೂ ಮತ್ತು ಅಕ್ಷತೆಗಳನ್ನು ಮಂಟಪದಲ್ಲಿ ದೇವರ ಪಾದತಲಕ್ಕೆ ಇಡಬೇಕು)
  • ಪ್ರಸನ್ನಾರ್ಘ್ಯಂ ಕರಿಷ್ಯೆ
  • ಓಂ ಭಾಸ್ಕರಾಯ ವಿದ್ಮಹೇ | ಮಹಾದ್ಯುತಿಕಾರಾಯ ಧೀಮಹಿ | ತನ್ನೋ ಆದಿತ್ಯಃ ಪ್ರಚೋದಯಾತ್ ||
  • ಓಂ ಏಕದಂತಾಯ ವಿದ್ಮಹೇ | ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||
  • ಓಂ ಕಾತ್ಯಾಯನಾಯ ವಿದ್ಮಹೇ | ಕನ್ಯಾಕುಮಾರ್ಯೈ ಧೀಮಹಿ | ತನ್ನೋ ದುರ್ಗೀ ಪ್ರಚೋದಯಾತ್ ||
  • ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ ||
  • ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್ ||

ಇತಿ ಪ್ರಸನ್ನಾರ್ಘ್ಯಂ ಸಮರ್ಪಯಾಮಿ || || ಪುನಃ ಪೂಜಾಂ ಕರಿಷ್ಯೆ||

  • ಆವಾಹಿತ ದೇವತಾಭ್ಯೋ ನಮಃ ||
  • ಸರ್ವ ರಾಜೋಪಚಾರ ಪೂಜಾರ್ಥೇ ಪುಷ್ಪಾಣಿ ಸಮರ್ಪಯಾಮಿ [ಎಲ್ಲ ದೇವ ಮೂರ್ತಿಗಳಿಗೂ ಹೂವು ಹಾಕುವುದು] || ಸರ್ವ ರಾಜೋಪಚಾರ ಪೂಜಾಂ ಸಮರ್ಪಯಾಮಿ ||

|| ಪ್ರಾರ್ಥನೆ ||

[ಬದಲಾಯಿಸಿ]

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ | ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ | ಆಯುಷ್ಯಂ ತೇಜ ಆರೋಗ್ಯಂ | ದೇಹಿ ಮೇ ಪುರುಷೋತ್ತಮ ||(ಇದನ್ನು ಬಿಡಬಹುದು - ಪೂಜೆಯು ಪರಮೇಶ್ವರ ಪ್ರೀತ್ಯರ್ಥವಾಗಿರುವುದು)

|| ಸಮರ್ಪಣಂ ||

[ಬದಲಾಯಿಸಿ]

  • ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕ್ರಿಯಾದಿಷು| ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ [ತಂ ಅಚ್ಯುತಂ] ||
  • ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ || ಪೂಜಾಕಾಲೇ ಮಧ್ಯೇ ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಜಪಮಹಂ ಕರಿಷ್ಯೆ ||

ಓಂ ಅಚ್ಯುತಾಯ ನಮಃ || ಓಂ ಅನಂತಾಯ ನಮಃ || ಓಂ ಗೋವಿಂದಾಯ ನಮಃ || ಓಂ ವಿಷ್ಣವೇ ನಮಃ|| ವಿಷ್ಣವೇ ನಮಃ || ವಿಷ್ಣವೇ ನಮಃ ||

  • ಶಂಖಮಧ್ಯೇ ಸ್ಥಿತಂ ತೋಯಂ ಭ್ರಾಮಿತಂ ಕೇಶವೋಪರಿ || ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಯುತಂ ದಹೇತ್ || ಇತಿ ಶಂಖೋದಕಂ ಕಿಂಚಿದಾತ್ಮನಿ ಪ್ರೋಕ್ಷ್ಯ -ಶೇಷಮುತ್ಸೃಜೇತ್ [ಶಂಖದಲ್ಲಿ ಅಭಿಷೇಕ ಮಾಡಿದ ಮೇಲೆ ಅದರಲ್ಲಿ ಸ್ವಲ್ಪ ನೀರನ್ನು ಉಳಿಸಿರಬೇಕು; ಈಗ ಸ್ವಲ್ಪ ಚಿಮುಕಿಸಿಕೊಂಡು ಉಳಿದುದನ್ನು ಖಾಲಿ ಮಾಡಬೇಕು] ||

||ಪುನಃ ಪ್ರಾರ್ಥನಂ||

[ಬದಲಾಯಿಸಿ]
  • ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ | ದೇಹಿ ಮೇ ಕೃಪಯಾ ಶಂಭೋ || ತ್ವಯಿ ಭಕ್ತಿಮಚಂಚಲಾಂ ||

ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ |
ಪೂಜಾವಿಧಿಂ ನ ಜಾನಾಮಿ ಕ್ಷಮಸ್ವ ಪರಮೇಶ್ವರ ||
ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ |
ಪೂಜಾ ತೇ ವಿಷಯೋಪಭೋಗ ರಚನಾ ನಿದ್ರಾ ಸಮಾಧಿ ಸ್ಥಿತಿಃ ||
ಸಂಚಾರಃ ಪದಯೋಃ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಾ ಗಿರಃ |
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ ||
ಕರಚರಣ ಕೃತಂ ವಾಕ್ಕಾಯಜಂ ಕರ್ಮಜಂ ವಾ |
ಶ್ರವಣ ನಯನಜಂ ವಾ ಮಾನಸಂ ವಾಪರಾಧಂ ||
ವಿದಿತಂ ಅವಿದಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

  • (ಆಯಾಸವಿಲ್ಲದೆ ಇರುವ ಮರಣವನ್ನೂ, ದೀನವೃತ್ತಿ ಇಲ್ಲದ ಜೀವನವನ್ನೂ, ನಿನ್ನಲ್ಲಿ ಅಚಂಚಲ ಭಕ್ತಿಯನ್ನೂ, ಶಂಭುವೇ- ಶಂಕರನೇ ಕೃಪೆಯಿಟ್ಟು ನನಗೆ ಕೊಡು.)
  • ಆವಾಹನಂ ನ ಜಾನಾಮಿ- :ನನಗೆ ನಿನ್ನನ್ನು ಆವಾಹನೆ ಮಾಡುವುದೂ ಗೊತ್ತಿಲ್ಲ, ವಿಸರ್ಜನೆ ಮಾಡುವುದೂ ಗೊತ್ತಿಲ್ಲ; ನೀನೇ ನನ್ನ ಆತ್ಮವು, ನಿನ್ನ ಪತ್ನಿಯಾದ ಗಿರಿಜೆಯೇ ನನ್ನ ಬುದ್ಧಿ; ಪಂಚಪ್ರಾಣಗಳೇ ನನ್ನ ಸಹಚರರು; ನನ್ನ ಶರಿರವೇ ನಿನ್ನ ಮನೆ- ಗುಡಿ; ನಾನು ಪಂಚೇಂದ್ರಯಗಳಿಂದ ಅನುಭವಿಸುವ ಸುಖವೇ ನಿನ್ನ ಪೂಜೆ; ನನ್ನ ನಿದ್ದೆಯೇ ಸಮಾಧಿ ಸ್ಥಿತಿ; ನಾನು ಪಾದಗಳಿಂದ ಸಂಚರಿಸುವುದೇ ನಿನ್ನ ಪ್ರದಕ್ಷಿಣೆ; ನನ್ನ ಎಲ್ಲಾ ಮಾತುಗಳೇ ನಿನ್ನ ಸ್ತೋತ್ರವೆಂದು ತಿಳಿ; ನಾನು ಮಾಡುವ ಪ್ರತಿಯೊಂದು ಕೆಲಸವೂ ನಿನ್ನ ಪೂಜೆಯು.
  • ಶ್ರೀಮನ್ನಾರಾಯಣ ಶ್ರೀಶಂಕರಭಗವತ್ಪಾದಾದಿ ಗುರುಭ್ಯೋ ನಮಃ||

ಇತಿ ಪ್ರಾರ್ಥ್ಯ ||

  • ದೇವದೇವ ಜಗನ್ನಾಥ ಹೃದಯೇ ಮಮ ನಿರ್ಮಲೇ |

ಯಾಗದೇಶಾತ್ಸಮಾಗತ್ಯ ನಿವಾಸಂ ಕುರು ಲೀಲಯಾ ||
ಹೃತ್ ಪದ್ಮ ಕರ್ಣಿಕಾ ಮಧ್ಯೇ ದೇವ್ಯಾ ಸಹ ಪರಮೇಶ್ವರ ||
ಪ್ರವಿಶ ತ್ವಂ ಮಹಾದೇವ ಸರ್ವೈರಾವರಣೈಃ ಸಹ ||
ಇತಿ ಪುಷ್ಪಾಂಜಲೌ ಸಮಾಗತಾನ್ ವಿಭಾವ್ಯ ಆತ್ಮನಿ ವಿಸರ್ಜಯೇತ್ |

  • ದೇವರ ದೇವನಾದ ಜಗನ್ನಾಥನೇ- ಜಗತ್ತಿನ ಒಡೆಯನೇ, ನನ್ನ ನಿರ್ಮಲವಾದ ಹೃದಯದಲ್ಲಿರುವ ಚಿಕ್ಕ ಪ್ರದೇಶದಲ್ಲಿ ಬಂದು ಸೇರಿಕೊಂಡು ಅಲ್ಲಿಯೇ ನಿವಾಸ ಮಾಡು- ನೀನು ಹೃದಯದ ಕರ್ಣಿಕೆಯ ಮಧ್ಯದಲ್ಲಿ ದೇವಿಯ ಸಹಿತ ಸಂತಸದಿಂದ ವಾಸಿಸು; ಹಾಗೆಯೇ ದೇಹದ ಸರ್ವ ಆವರಣದಲ್ಲೂ ಪ್ರವೇಶಿಸು.

{ಅಂಜಲೀ ಬದ್ಧ ಹಸ್ತಗಳನ್ನು ಹೃದಯದ ಕಡೆ ಬಾಗಿಸಿ ದೇವರನ್ನು ಸ್ವಂತ ಹೃದಯಕ್ಕೆ ಆಹ್ವಾನಿಸಿಕೊಳ್ಳುವುದು] ||

|| ತೀರ್ಥ ಸ್ವೀಕಾರ ||

  • ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ |

ಸರ್ವದುರಿತೋಪಶಮನಂ ವಿಷ್ಣು ಪಾದೋದಕಂ ಶುಭಮ್ ||
ಇತಿ ತೀರ್ಥಂ ಸ್ವೀಕೃತ್ಯ- ಈ ಮಂತ್ರ ಹೇಳಿ ತೀರ್ಥ ಸ್ವೀಕಾರ ಮಾಡುವುದು ||
ಪ್ರಸಾದಂ ಗೃಹೀತ್ವಾ -ಪ್ರಸಾದ ಸ್ವೀಕರಿಸುವುದು || ದ್ವಿರಾಚಮ್ಯ || ||
ಸರ್ವೇಭ್ಯೋ ದೇವೇಭ್ಯೋ ನಮಃ || ಯಥಾ ಸ್ಥಾನಂ ಉದ್ವಾಸಯಾಮಿ ||

ವಿಷ್ಣು ಸ್ಮರಣಂ ಕೃತ್ವಾ || ಘಂಟಾಂ ವಾದಯೇತ್ || [] [] [ಆಗಮಿಸಿದ ದೇವತೆಗಳ ನಿರ್ಗಮನಕ್ಕಾಗಿ ಘಂಟಾ ವಾದನ.]

|| ಶ್ರೀ ಕೃಷ್ಣಾರ್ಪಣಮಸ್ತು || ಇತಿ ಸಂಕ್ಷಿಪ್ತ ದೇವತಾರ್ಚನ ವಿಧಿಃ ||

ಉಲ್ಲೇಖ

[ಬದಲಾಯಿಸಿ]
  1. ಯಜುರ್ವೇದ ನಿತ್ಯಕರ್ಮ ಸಂಗ್ರಾಹಕರು ಶ್ರೀ ಬಿ.ಶಂಕರ ಶಾಸ್ತ್ರಿಗಳು ; ಟಿಪ್ಪಣಿ - ವಿವರಣೆ -ಬಿ ಎಸ್ ಚಂದ್ರಶೇಖರ ಸಾಗರ
  2. ಬೋಧಾಯನೀಯ ನಿತ್ಯ ಕರ್ಮ ಪ್ರದೀಪ - ಶ್ರೀ ಬರಿಗೆ ಗಣೇಶ ಭಟ್ಟರು - ಹವ್ಕಕಸಂಘ.ಕೇಡಲೇಸರ.





ಉಲ್ಲೇಖ

[ಬದಲಾಯಿಸಿ]