ದಿನಕರ್ ಮಷ್ಣು ಸಾಳುಂಕೆ
ದಿನಕರ್ ಎಮ್. ಸಾಳುಂಕೆ | |
---|---|
ಜನನ | ಬೆಳಗಾವಿ |
ವಾಸಸ್ಥಳ | ದೆಹಲಿ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಜೈವಿಕ ವಿಜ್ಞಾನ |
ಸಂಸ್ಥೆಗಳು | ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಅಂಡ್ ಬಯೋ ಟೆಕ್ನಾಲಜಿ, ರೀಜನಲ್ ಸೆಂಟರ್ ಫಾರ್ ಬಯೋ ಟೆಕ್ನಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನೋಲಜಿ (ಎನ್ಐಐ) |
ಅಭ್ಯಸಿಸಿದ ವಿದ್ಯಾಪೀಠ | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ |
ಡಾಕ್ಟರೇಟ್ ಸಲಹೆಗಾರರು | ಪ್ರೊ.ಎಮ್.ವಿಜಯನ್ |
ಪ್ರಸಿದ್ಧಿಗೆ ಕಾರಣ | ಪ್ರತಿರಕ್ಷಾಶಾಸ್ತ್ರ ಮತ್ತು ಸ್ಟ್ರಕ್ಚರಲ್ ಬಯಾಲಜಿ |
ಗಮನಾರ್ಹ ಪ್ರಶಸ್ತಿಗಳು | ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ(೨೦೦೦) |
ದಿನಕರ್ ಮಷ್ಣು ಸಾಳುಂಕೆ ( ಹಿಂದಿ: दिनकर मश्नु सालुंके ,ಇಂಗ್ಲಿಷ್:Dinkar M. Salunke)ರವರುಒಬ್ಬ ರಚನಾತ್ಮಕ ಜೀವಶಾಸ್ತ್ರಜ್ಞ[೧] ಮತ್ತು ಪ್ರತಿರಕ್ಷಾಶಾಸ್ತ್ರಜ್ಞ . ಪ್ರಸ್ತುತ ಅವರು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿದ್ದಾರೆ (ಐಸಿಜಿಇಬಿ) .[೨] ಮೊದಲಿಗೆ ಅವರು ಬಯೋಟೆಕ್ನಾಲಜಿ (ಆರ್.ಸಿ.ಬಿ) ಗಾಗಿ ಹೊಸದಾಗಿ ಸ್ಥಾಪಿತವಾದ ಪ್ರಾದೇಶಿಕ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು (ಆರ್.ಸಿ.ಬಿ), ಇದು ಫರಿದಾಬಾದ್ ನಲ್ಲಿ[೩] ಜಂಟಿಯಾಗಿ ಬಯೋಟೆಕ್ನಾಲಜಿ ಇಲಾಖೆ (ಭಾರತ) ಮತ್ತು ಯುನೆಸ್ಕೋವನ್ನು ಸ್ಥಾಪಿಸಿತು. ಜೈವಿಕ ವಿಜ್ಞಾನಗಳ ವರ್ಗದಲ್ಲಿ (೨೦೦೦) , ವಿಜ್ಞಾನ ಮತ್ತು ತಂತ್ರಜ್ಞಾನದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಮತ್ತು ಭಾರತದಲ್ಲಿನ ಎಲ್ಲಾ ಪ್ರಮುಖ ವಿಜ್ಞಾನ ಅಕಾಡೆಮಿಗಳ ಫೆಲೋ ಅವರು ಸ್ವೀಕರಿಸಿರುತ್ತಾರೆ .
ಜನನ ಮತ್ತು ಶಿಕ್ಷಣ
[ಬದಲಾಯಿಸಿ]ದಿನಕರ್ ರವರು ೧ ಜುಲೈ ೧೯೫೫ ರಂದು ಬೆಳಗಾವಿಯಲ್ಲಿ ಜನಿಸಿದರು .[೪] ಅವರು ೧೯೭೬ ರಲ್ಲಿ ಬಿ.ಎಸ್.ಸಿ. ಪದವಿಯನ್ನು ಭೌತಶಾಸ್ತ್ರ , ಗಣಿತ ಮತ್ತು ಅಂಕಿಅಂಶ ವಿಷಯಗಳಲ್ಲಿ ಪಡೆದರು ಹಾಗೂ ಭೌತಶಾಸ್ತ್ರದಲ್ಲಿ , ಧಾರವಾಡ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು .[೫]
ವೃತ್ತಿ ಮತ್ತು ವೈಯಕ್ತಿಕ ಜೀವನ
[ಬದಲಾಯಿಸಿ]ಎಮ್.ಎಸ್ಸಿ ಯಲ್ಲಿ ಪ್ರಥಮ ದರ್ಜೆಯನ್ನು ಪಡೆದುಕೊಂಡ ನಂತರ ಅವರು ಪ್ರೊ.ವಿಜಯನ್ ರವರ ಜೊತೆ , ಪಿ.ಎಚ್ಡಿ. ಪದವಿಯನ್ನು ಪೂರ್ಣಗೊಳಿಸಲು ಸೇರಿಕೊಂಡರು . ಅವರು ಬ್ರಾಂಡೀಸ್ ವಿಶ್ವವಿದ್ಯಾನಿಲಯ , ವಾಲ್ತ್ಯಾಮ್,ಮೆಸಾಚುಸೆಟ್ಸ್ , ಯುನೈಟೆಡ್ ಸ್ಟೇಟ್ಸ್ (ವರ್ಷ ೧೯೮೫ - ೧೯೮೮) ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ಮಾಡಿದರು.[೬] ಸಾಳುಂಕೆ ರವರು ಮಾಧುರಿ ಎಂಬುವರನ್ನು ವಿವಾಹವಾಗಿದ್ದು , ದಂಪತಿಗಳಿಗೆ ಒಬ್ಬ ಮಗಳಿದ್ದಾರೆ . ಅವರು ತಮ್ಮ ಕುಟುಂಬ ಸಮೇತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಸಾಳುಂಕೆ ರವರು ೧೯೮೮ ರಲ್ಲಿ ದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನೋಲಜಿ ಕೇಂದ್ರಕ್ಕೆ ವಿಜ್ಞಾನಿ ಸಿಬ್ಬಂದಿಯಾಗಿ ಸೇರಿಕೊಂಡರು ಹಾಗೂ ೨೦೧೫ ರ ತನಕ ಅಲ್ಲಿ ಕಾರ್ಯನಿರ್ವಹಿಸಿದರು . ನವೆಂಬರ್ ೨೦೧೫ ರಿಂದ ಡಾ.ಸಾಳುಂಕೆ ರವರು ಜೆನೆಟಿಕ್ ಎಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರು . ಅವರು ಟ್ರಾನ್ಸ್ಲೇಶನಲ್ ಹೆಲ್ತ್ ಸೈನ್ಸ್ ಮತ್ತು ಟೆಕ್ನಾಲಜಿ ಇನ್ಸ್ಟಿಟ್ಯೂಟ್ (ಟಿ.ಎಚ್.ಎಸ್.ಟಿ.ಐ), ದೆಹಲಿಯ [೭]ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ ( ೨೦೧೦ - ೨೦೧೧ ). ಮೂರು ದಶಕಗಳಿಗೂ ಹೆಚ್ಚು ಕಾಲ , ಅವರು ಪ್ರತಿರಕ್ಷಣಾ ಗುರುತಿಸುವಿಕೆ , ಆಣ್ವಿಕ ಅನುಕರಣೆ ಮತ್ತು ಅಲರ್ಜಿಯ[೮] ರಚನಾತ್ಮಕ ಜೀವವಿಜ್ಞಾನದ ಇಮ್ಯುನೋಲಾಜಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.[೯][೧೦]
ಪ್ರಶಸ್ತಿಗಳು
[ಬದಲಾಯಿಸಿ]- ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ.ಎಸ್.ಐ.ಆರ್) ಇಲಾಖೆಯಿಂದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ -೨೦೦೦.[೧೧]
- ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ - ೨೦೧೧ .[೧೨]
ಉಲ್ಲೇಖಗಳು
[ಬದಲಾಯಿಸಿ]- ↑ Crystallographic studies
- ↑ Dinakar M Salunke's Research[permanent dead link]
- ↑ "ಬಯೋ ಟೆಕ್ನಾಲಜಿ ಮತ್ತು ಯುನೆಸ್ಕೋ , ಫರಿದಾಬಾದ್". Archived from the original on 2019-06-03. Retrieved 2019-06-03.
- ↑ ಜನನ
- ↑ ಶಿಕ್ಷಣ
- ↑ ಪೋಸ್ಟ್ ಡಾಕ್ಟೋರಲ್ ಸಂಶೋಧನೆ
- ↑ "Scientific staff". Archived from the original on 2021-05-13. Retrieved 2019-06-03.
- ↑ [೧]
- ↑ Comparative structural proteomics of allergenic proteins
- ↑ "Jubliantbiosys". Archived from the original on 2019-06-03. Retrieved 2019-06-03.
- ↑ ಭಟ್ನಗರ್ ಪ್ರಶಸ್ತಿ ಪುರಸ್ಕೃತರು
- ↑ "ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ". Archived from the original on 2016-03-04. Retrieved 2019-06-03.