ದಿನಕರ್ ಮಷ್ಣು ಸಾಳುಂಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿನಕರ್ ಎಮ್. ಸಾಳುಂಕೆ
ಜನನಬೆಳಗಾವಿ
ವಾಸಸ್ಥಳದೆಹಲಿ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಜೈವಿಕ ವಿಜ್ಞಾನ
ಸಂಸ್ಥೆಗಳುಇಂಟರ್ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಅಂಡ್ ಬಯೋ ಟೆಕ್ನಾಲಜಿ, ರೀಜನಲ್ ಸೆಂಟರ್ ಫಾರ್ ಬಯೋ ಟೆಕ್ನಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನೋಲಜಿ (ಎನ್ಐಐ)
ಅಭ್ಯಸಿಸಿದ ವಿದ್ಯಾಪೀಠಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಡಾಕ್ಟರೇಟ್ ಸಲಹೆಗಾರರುಪ್ರೊ.ಎಮ್.ವಿಜಯನ್
ಪ್ರಸಿದ್ಧಿಗೆ ಕಾರಣಪ್ರತಿರಕ್ಷಾಶಾಸ್ತ್ರ ಮತ್ತು ಸ್ಟ್ರಕ್ಚರಲ್ ಬಯಾಲಜಿ
ಗಮನಾರ್ಹ ಪ್ರಶಸ್ತಿಗಳುಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ(೨೦೦೦)

ದಿನಕರ್ ಮಷ್ಣು ಸಾಳುಂಕೆಹಿಂದಿ: दिनकर मश्नु सालुंके ,ಇಂಗ್ಲಿಷ್:Dinkar M. Salunke)ರವರುಒಬ್ಬ ರಚನಾತ್ಮಕ ಜೀವಶಾಸ್ತ್ರಜ್ಞ[೧] ಮತ್ತು ಪ್ರತಿರಕ್ಷಾಶಾಸ್ತ್ರಜ್ಞ . ಪ್ರಸ್ತುತ ಅವರು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿದ್ದಾರೆ (ಐಸಿಜಿಇಬಿ) .[೨] ಮೊದಲಿಗೆ ಅವರು ಬಯೋಟೆಕ್ನಾಲಜಿ (ಆರ್.ಸಿ.ಬಿ) ಗಾಗಿ ಹೊಸದಾಗಿ ಸ್ಥಾಪಿತವಾದ ಪ್ರಾದೇಶಿಕ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು (ಆರ್.ಸಿ.ಬಿ), ಇದು ಫರಿದಾಬಾದ್‌ ನಲ್ಲಿ[೩] ಜಂಟಿಯಾಗಿ ಬಯೋಟೆಕ್ನಾಲಜಿ ಇಲಾಖೆ (ಭಾರತ) ಮತ್ತು ಯುನೆಸ್ಕೋವನ್ನು ಸ್ಥಾಪಿಸಿತು. ಜೈವಿಕ ವಿಜ್ಞಾನಗಳ ವರ್ಗದಲ್ಲಿ (೨೦೦೦) , ವಿಜ್ಞಾನ ಮತ್ತು ತಂತ್ರಜ್ಞಾನದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಮತ್ತು ಭಾರತದಲ್ಲಿನ ಎಲ್ಲಾ ಪ್ರಮುಖ ವಿಜ್ಞಾನ ಅಕಾಡೆಮಿಗಳ ಫೆಲೋ ಅವರು ಸ್ವೀಕರಿಸಿರುತ್ತಾರೆ .

ಜನನ ಮತ್ತು ಶಿಕ್ಷಣ[ಬದಲಾಯಿಸಿ]

ದಿನಕರ್ ರವರು ೧ ಜುಲೈ ೧೯೫೫ ರಂದು ಬೆಳಗಾವಿಯಲ್ಲಿ ಜನಿಸಿದರು .[೪] ಅವರು ೧೯೭೬ ರಲ್ಲಿ ಬಿ.ಎಸ್.ಸಿ. ಪದವಿಯನ್ನು ಭೌತಶಾಸ್ತ್ರ , ಗಣಿತ ಮತ್ತು ಅಂಕಿಅಂಶ ವಿಷಯಗಳಲ್ಲಿ ಪಡೆದರು ಹಾಗೂ ಭೌತಶಾಸ್ತ್ರದಲ್ಲಿ , ಧಾರವಾಡ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು .[೫]

ವೃತ್ತಿ ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

ಎಮ್.ಎಸ್ಸಿ ಯಲ್ಲಿ ಪ್ರಥಮ ದರ್ಜೆಯನ್ನು ಪಡೆದುಕೊಂಡ ನಂತರ ಅವರು ಪ್ರೊ.ವಿಜಯನ್ ರವರ ಜೊತೆ , ಪಿ.ಎಚ್ಡಿ. ಪದವಿಯನ್ನು ಪೂರ್ಣಗೊಳಿಸಲು ಸೇರಿಕೊಂಡರು . ಅವರು ಬ್ರಾಂಡೀಸ್ ವಿಶ್ವವಿದ್ಯಾನಿಲಯ , ವಾಲ್ತ್ಯಾಮ್,ಮೆಸಾಚುಸೆಟ್ಸ್‌ , ಯುನೈಟೆಡ್ ಸ್ಟೇಟ್ಸ್ (ವರ್ಷ ೧೯೮೫ - ೧೯೮೮) ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ಮಾಡಿದರು.[೬] ಸಾಳುಂಕೆ ರವರು ಮಾಧುರಿ ಎಂಬುವರನ್ನು ವಿವಾಹವಾಗಿದ್ದು , ದಂಪತಿಗಳಿಗೆ ಒಬ್ಬ ಮಗಳಿದ್ದಾರೆ . ಅವರು ತಮ್ಮ ಕುಟುಂಬ ಸಮೇತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ಸಾಳುಂಕೆ ರವರು ೧೯೮೮ ರಲ್ಲಿ ದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನೋಲಜಿ ಕೇಂದ್ರಕ್ಕೆ ವಿಜ್ಞಾನಿ ಸಿಬ್ಬಂದಿಯಾಗಿ ಸೇರಿಕೊಂಡರು ಹಾಗೂ ೨೦೧೫ ರ ತನಕ ಅಲ್ಲಿ ಕಾರ್ಯನಿರ್ವಹಿಸಿದರು . ನವೆಂಬರ್ ೨೦೧೫ ರಿಂದ ಡಾ.ಸಾಳುಂಕೆ ರವರು ಜೆನೆಟಿಕ್ ಎಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರು . ಅವರು ಟ್ರಾನ್ಸ್ಲೇಶನಲ್ ಹೆಲ್ತ್ ಸೈನ್ಸ್ ಮತ್ತು ಟೆಕ್ನಾಲಜಿ ಇನ್ಸ್ಟಿಟ್ಯೂಟ್ (ಟಿ‌.ಎಚ್.ಎಸ್.ಟಿ.ಐ), ದೆಹಲಿಯ [೭]ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ ( ೨೦೧೦ - ೨೦೧೧ ). ಮೂರು ದಶಕಗಳಿಗೂ ಹೆಚ್ಚು ಕಾಲ , ಅವರು ಪ್ರತಿರಕ್ಷಣಾ ಗುರುತಿಸುವಿಕೆ , ಆಣ್ವಿಕ ಅನುಕರಣೆ ಮತ್ತು ಅಲರ್ಜಿ[೮] ರಚನಾತ್ಮಕ ಜೀವವಿಜ್ಞಾನದ ಇಮ್ಯುನೋಲಾಜಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.[೯][೧೦]

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Crystallographic studies
  2. Dinakar M Salunke's Research[ಶಾಶ್ವತವಾಗಿ ಮಡಿದ ಕೊಂಡಿ]
  3. "ಬಯೋ ಟೆಕ್ನಾಲಜಿ ಮತ್ತು ಯುನೆಸ್ಕೋ , ಫರಿದಾಬಾದ್‌". Archived from the original on 2019-06-03. Retrieved 2019-06-03.
  4. ಜನನ
  5. ಶಿಕ್ಷಣ
  6. ಪೋಸ್ಟ್ ಡಾಕ್ಟೋರಲ್ ಸಂಶೋಧನೆ
  7. "Scientific staff". Archived from the original on 2021-05-13. Retrieved 2019-06-03.
  8. [೧]
  9. Comparative structural proteomics of allergenic proteins
  10. "Jubliantbiosys". Archived from the original on 2019-06-03. Retrieved 2019-06-03.
  11. ಭಟ್ನಗರ್ ಪ್ರಶಸ್ತಿ ಪುರಸ್ಕೃತರು
  12. "ಜಿ.ಎನ್.ರಾಮಚಂದ್ರನ್ ಚಿನ್ನದ ಪದಕ". Archived from the original on 2016-03-04. Retrieved 2019-06-03.