ತೊದಲಬಾಗಿ
ತೊದಲಬಾಗಿ
ತೊದಲಬಾಗಿ | |
---|---|
village | |
Population (೨೦೧೨) | |
• Total | ೧೫೦೦೦ |
ತೊದಲಬಾಗಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿದೆ. ತೊದಲಬಾಗಿ ಗ್ರಾಮವು ಜಿಲ್ಲಾ ಕೇಂದ್ರ ಬಾಗಲಕೋಟದಿಂದ ಸುಮಾರು ೯೦ ಕಿ. ಮಿ. ದೂರ ಇದೆ. ಪ್ರತಿ ಸೋಮವಾರ ಸಂತೆ ಮತ್ತು ಜಾನುವಾರಗಳ ಸಂತೆ ನಡೆಯುತ್ತದೆ.
ಭೌಗೋಳಿಕ
[ಬದಲಾಯಿಸಿ]ಗ್ರಾಮವು ಭೌಗೋಳಿಕವಾಗಿ 16°33'40.6"N ಉತ್ತರ ಅಕ್ಷಾಂಶ ಮತ್ತು 75°32'13.9"E ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಜನಸಂಖ್ಯೆ
[ಬದಲಾಯಿಸಿ]ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 8,598 ಇದೆ. ಅದರಲ್ಲಿ 4352 ಪುರುಷರು ಮತ್ತು 4246 ಮಹಿಳೆಯರು ಇದ್ದಾರೆ.
ಹವಾಮಾನ
[ಬದಲಾಯಿಸಿ]- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - 35°C-42°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - 18°C-28°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.
ಆಹಾರ (ಖಾದ್ಯ)
[ಬದಲಾಯಿಸಿ]ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.
ಸಂಸ್ಕೃತಿ
[ಬದಲಾಯಿಸಿ]ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಕಲೆ
[ಬದಲಾಯಿಸಿ]ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವುಗಳು ಗ್ರಾಮದ ಕಲೆಯಾಗಿದೆ.
ಗೀಗೀಪದಗಳ ಕಲಾವಿದೆಯಾದ ಹಣಮವ್ವ ಹಂಗರಗಿ ಹಾಗೂ ಡೋಳ್ಳಿನ ಪದಗಳ ಕಲಾವಿದರಾದ ಅಪ್ಪಣ್ಣ ತೇಲಿ ಪ್ರಮುಖರಾಗಿದ್ದಾರೆ
ಧರ್ಮಗಳು
[ಬದಲಾಯಿಸಿ]ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಜೈನ ಧರ್ಮದ ಜನರಿದ್ದಾರೆ.
ಭಾಷೆಗಳು
[ಬದಲಾಯಿಸಿ]ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯಗಳು
[ಬದಲಾಯಿಸಿ]- ಶ್ರೀ ಹನುಮಾಣ ದೇವಾಲಯ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
- ಶ್ರೀ ಅಮೋಘಸಿದ್ದೇಶ್ವರ ದೇವಾಲಯ
ಹಬ್ಬಗಳು
[ಬದಲಾಯಿಸಿ]ಪ್ರತಿವರ್ಷ ಶ್ರೀ ಲಕ್ಷ್ಮೀ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಕೃಷಿ
[ಬದಲಾಯಿಸಿ]ಗ್ರಾಮದ ಪ್ರತಿಶತ 90 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆಗಳು
[ಬದಲಾಯಿಸಿ]ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಏತ ನೀರಾವರಿ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಬೆಳೆಗಳು
[ಬದಲಾಯಿಸಿ]ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ದಾಳಿಂಬೆ, ನಿಂಬೆ, ಕಬ್ಬು, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಾಕ್ಷರತೆ
[ಬದಲಾಯಿಸಿ]ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು 67%. ಅದರಲ್ಲಿ 75% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.
ಶಿಕ್ಷಣ
[ಬದಲಾಯಿಸಿ]ಗ್ರಾಮದಲ್ಲಿ ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗಳು ಇವೆ.ಅದರಂತೆ ಮಲ್ಲಿಕಾರ್ಜುನ ಪ್ರೌಢ ಶಾಲೆ, ಮಲ್ಲಿಕಾರ್ಜುನ ಪದವಿಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕೈಗಾರಿಕಾ ತರಬೇತಿ ಕೇಂದ್ರಗಳು ಒಳ್ಳೆಯ ಶಿಕ್ಷಣ ನೀಡುತ್ತಿವೆ.
ಗ್ರಾಮದಲ್ಲಿ ಜನಿಸಿ ಕನ್ನಡ ಜಾನಪದ ಕ್ಷೇತ್ರದಲ್ಲಿ ಅಪರೂಪದ ಜನಪದ ಸಂಕಲನಗಳನ್ನು ಪ್ರಕಟಿಸಿದ ಹಿರಿಯ ಸಾಹಿತಿ ಜಿ.ಬಿ.ಖಾಡೆ ಮತ್ತು ಅವರ ಪುತ್ರ ನಾಡಿನ ಖ್ಯಾತ ಸಂಶೋಧಕ ಸಾಹಿತಿ ಡಾ.ಪ್ರಕಾಶ ಜಿ.ಖಾಡೆ ಈ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ.