ತಾಳ್ತಜೆ ವಸಂತಕುಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
' ಡಾ.'ತಾಳ್ತಜೆ ವಸಂತಕುಮಾರ' ರು ಮುಂಬಯಿನ ಕನ್ನಡ ಸಂಘದಲ್ಲಿ'

ಡಾ|ತಾಳ್ತಜೆ ವಸಂತಕುಮಾರ ಇವರು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಿವೃತ್ತರಾಗಿದ್ದಾರೆ. ಮುಂಬಯಿಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.

’ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’-೨೦೦೯[ಬದಲಾಯಿಸಿ]

೨೦೦೯ ರ ಪ್ರತಿಶ್ಠಿತ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ,' ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ, ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ. ಮುಂಬಯಿಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬಯಿನ 'ಬಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ 'ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ',ತಾಳ್ತಜೆಯವರ, ೪ ದಶಕಗಳ ಮುಂಬಯಿನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ೧೩ ನೇ ತಾರೀಖಿನಂದು ಖ್ಯಾತಕವಿ, 'ಶ್ರೀ. ಬಿ. ಎ. ಸನದಿ'ಯವರ ಹಸ್ತದಿಂದ ಪ್ರದಾನಮಾಡಲಾಯಿತು. ಪ್ರಶಸ್ತಿ ಫಲಕ, ಶಾಲು, ಫಲಪುಷ್ಪ, ಸನ್ಮಾನ-ಪತ್ರ, ಹಾಗೂ ನಗದು ಹತ್ತು ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು. ನಿವೃತ್ತ ಹಾಗೂ ಒಂಟಿ-ಜೀವನ ನಡೆಸುತ್ತಿರುವಾಗ, ಸ್ನೇಹ, ವಿಶ್ವಾಸ, ಕೃತಜ್ಞನೆಗಳು ದೊಡ್ಡ ಮೌಲ್ಯಗಳಾಗಿ ಸಮಾಧಾನ ಕೊಡುತ್ತವೆ, ಎಂದು ತಾಳ್ತಜೆಯವರು ನುಡಿದರು. ಸಮಾರಂಭದ ಪ್ರಮುಖ ಅತಿಥಿಯಾಗಿ, ಆಗಮಿಸಿದ, ’ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಡಬಿದ್ರಿ’, ಛೇರ್ಮನ್, ಡಾ, ಎಂ ಮೋಹನ ಆಳ್ವ, ದೀಪಬೆಳಗಿ, 'ಅಕ್ಷಯ ಮಾಸ ಪತ್ರಿಕೆಯ ವಿಶೇಷಾಂಕ',ದ ಬಿಡುಗಡೆಮಾಡಿದರು. ಅಕ್ಷಯ ಪತ್ರಿಕೆಯ 'ಪ್ರಧಾನ ಸಂಪಾದಕ, ಕುಕ್ಯಾನ್' ರವರನ್ನು ಗೌರವಿಸಲಾಯಿತು. ಖ್ಯಾತಕವಿ, ಬಿ. ಎ. ಸನದಿಯವರು 'ಅಕ್ಷಯ ಮಾಸ ಪತ್ರಿಕೆ'ಯ ಬಗ್ಗೆ ಮಾತನಾಡಿ, ಅದು ಒಳನಾಡು ಹೊರನಾಡುಗಳನ್ನು ಬೆಸೆದು, 'ಅತ್ಯಂತ ಜನಪ್ರಿಯ ಪತ್ರಿಕೆ'ಯಾಗಿ ಹೊರಹೊಮ್ಮಿದೆಯೆಂದರು. ವಸಂತಕುಮಾರ್ ಮಾತನಾಡಿ, 'ಬಿಲ್ಲವರ ಎಸೋಸಿಯೇಷನ್' ಮುಂಬಯಿನಗರದ, ಒಂದು ಮುಕ್ತಮನಸ್ಸುಗಳ ಸುಸಂಘಟನೆಯಾಗಿ ಬೆಳೆದಿರುವುದನ್ನು ಶ್ಲಾಘಿಸಿದರು. ಅಧ್ಯಕ್ಷ, ಜಯ ಸಿ. ಸುವರ್ಣ ಮುಂದುವರೆದು, 'ಬಿಲ್ಲವರ ಅಸೋಸಿಯೇಷನ್, ಕಳೆದ ಏಳೂವರೆ ದಶಕಗಳಿಂದ ಸಮಾಜನಿರ್ಮಾಣ ಕಾರ್ಯಗಳನ್ನು ಮುಂದುವರೆಸಿ, ಸಮಾಜದ ದುರ್ಬಲ ವರ್ಗಕ್ಕೆ ಸಹಾಯಮಾಡಿ, ನಾರಾಯಣ ಗುರುಗಳ ಸಂದೇಶದಂತೆ, ಬಡಮಕ್ಕಳ ಅಕ್ಷರ ಸೇವೆಯ ಕಡೆ ಗಮನ ಹರಿಸುತ್ತಾ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲೂ ಹೆಸರುಮಾಡಿದೆಯೆಂದು ತಿಳಿಸಿದರು.

ಮನರಂಜನೆ ಕಾರ್ಯಕ್ರಮ[ಬದಲಾಯಿಸಿ]

’ಕಲಾಸೌರಭ ತಂಡ’ದಿಂದ, ’ರಸಮಂಜರಿ’, ಮತ್ತು ಮಹಿಳಾ ವಿಭಾಗದಿಂದ ನೃತ್ಯ, ಇತ್ಯಾದಿಗಳು ಜರುಗಿದವು. ಈ ಸಮಯದಲ್ಲಿ, ಗೌ.ಪ್ರಧಾನ ಕಾರ್ಯದರ್ಶಿ, ಜ್ಯೋತಿ. ಕೆ. ಸುವರ್ಣ, ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಕೋ. ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ, ವಾಸುದೇವ ಆರ್. ಕೋಟ್ಯಾನ್, ಅಸೋಸಿಯೇಷನ್ ನ ಗೌ. ಅಧ್ಯಕ್ಷ, ವೈ. ನಾಗೇಶ್, ಮಹಿಳಾ ವಿಭಾದ ಕಾರ್ಯಾಧ್ಯಕ್ಷೆ, ಜಯಂತಿ ಉಳ್ಳಾಲ್, ಉಪಾಧ್ಯಕ್ಷ ಎಲ್.ವಿ. ಅಮೀನ್, ಸಿಟಿ. ಸಾಲ್ಯಾನ್ ಹಾಗೂ ಮತ್ತಿತರ ಗಣ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು

ಪ್ರಶಸ್ತಿಪ್ರದಾನ-ಸಮಿತಿ[ಬದಲಾಯಿಸಿ]

ಪ್ರಶಸ್ತಿಪ್ರದಾನ-ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ, ಡಾ. ಸಂಜೀವಶೆಟ್ಟಿ ಹಾಗೂ ಡಾ.ವಿಶ್ವನಾಥ್ ಕಾರ್ನಾಡರ ಮುಂದಾಳತ್ವದಲ್ಲಿ, ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. 'ತಾಳ್ತಜೆ ವಸಂತಕುಮಾರ್' ರಿಗೆ, ಸಾಹಿತ್ಯದಲ್ಲಿ ಆಸ್ತೆ, ಹಾಗೂ ಅಭಿರುಚಿ ಬಾಲ್ಯದಿಂದಲೇ ಬಂದದ್ದು. ’ಬೆಂಗಳೂರು ವಿಶ್ವವಿದ್ಯಾಲಯ’ ದಿಂದ ಎಂ. ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, 'ಬಂಗಾರದ ಪದಕ'ವನ್ನು ಗಳಿಸಿದ್ದಾರೆ. ’ಮಂಗಳೂರು ವಿಶ್ವವಿದ್ಯಾಲಯ’ದಿಂದ ’ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ,’ ಎಂಬ ವಿಷಯವನ್ನು ಆರಿಸಿಕೊಂಡು ಸಂಶೋಧನೆನಡೆಸಿ, ಮಹಾಪ್ರಬಂಧವನ್ನು ಸಿದ್ಧಪಡಿಸಿ, ’ಪಿ. ಎಚ್. ಡಿ’ ಪದವಿಯನ್ನು ಸಂಪಾದಿಸಿದರು. ’ಪುತ್ತೂರಿನ ವಿವೇಕಾನಂದ ಕಾಲೇಜ್’ ನಲ್ಲಿ ೧೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಮುಂಬಯಿಗೆ ಪಾದಾರ್ಪಣೆಮಾಡಿದರು. ಮುಂದೆ, ಮುಂಬಯಿನಲ್ಲಿ, ೧೯೮೬-೨೦೦೮, ನಿವೃತ್ತರಾಗುವವರೆಗೆ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ,ಸೇವೆಸಲ್ಲಿಸಿದರು. ತಾಳ್ತಜೆಯವರಿಗೆ ಮುದಕೊಟ್ಟ ಒಲವಿನ ಸಾಹಿತ್ಯ ಪ್ರಾಕಾರಗಳು, ಸಂಶೋಧನೆ, ಕಾವ್ಯ ಮೀಮಾಂಸೆ, ಜಾನಪದ ಸಂಸ್ಕೃತಿಯ ಅಧ್ಯಯನ, ವಿಮರ್ಶೆ, ಇತ್ಯಾದಿ. ಹಳೆಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು, ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಗಳಿಸಿದ್ದಾರೆ.

ಪ್ರಶಸ್ತಿಗಳು, ಸನ್ಮಾನಗಳು[ಬದಲಾಯಿಸಿ]

  • ಸನ್, ೧೯೯೩ ರಲ್ಲಿ ಜರ್ಮನಿಯ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಕನ್ನಡ-ಕರ್ನಾಟಕದ ವಿಷಯವಾಗಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
  • ಸನ್, ೨೦೦೧ ರ, 'ಗೊರೂರು ಸಾಹಿತ್ಯ ಪ್ರಶಸ್ತಿ'.
  • ಸನ್, ೨೦೦೫ ರ, 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'.
  • ಸನ್, ೨೦೧೦ ರ 'ಕಾಂತಾವರ ಪ್ರಶಸ್ತಿ'.
  • ಸನ್, ೨೦೧೧ ರ, ಸಾಲಿನ 'ಸೇಡಿಯಾಪು ವಿದ್ವತ್ ಪ್ರಶಸ್ತಿ'. ಇದನ್ನು 'ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ' ನೀಡುತ್ತಾ ಬಂದಿದೆ.

ಕೃತಿಗಳು[ಬದಲಾಯಿಸಿ]

ಅತ್ಯುತ್ತಮ ವಿಮರ್ಶಕ, ಹಾಗೂ ಮಾತುಗಾರರು[ಬದಲಾಯಿಸಿ]

ಡಾ. ವಸಂತಕುಮಾರರು, ರಾಷ್ಟ್ರಮಟ್ಟದ, ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು, ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ, ಅನೇಕ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ವಿಚಾರಸಂಕಿರಣಗಳನ್ನು ವ್ಯವಸ್ಥೆಗೊಳಿಸಿ, ನಿರ್ದೇಶಿಸಿದ್ದಾರೆ. ಒಳ್ಳೆಯ ಮಾತುಗಾರರು, ಹಾಗೂ ಅತ್ಯುನ್ನತ ವಿಮರ್ಶಕರಲ್ಲೊಬ್ಬರು.

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

ವಿಮರ್ಶೆ[ಬದಲಾಯಿಸಿ]

ಅಧ್ಯಯನ,ಸಂಶೋಧನೆ[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ಸಂಪಾದನೆ[ಬದಲಾಯಿಸಿ]

ಚಿತ್ರ:Taltaje.jpg
'ಪುತ್ತೂರಿನಲ್ಲಿ ಅಭಿನಂದನಾ ಸಮಾರಂಭ'

ಪುತ್ತೂರಿನಲ್ಲಿ ಅಭಿನಂದನಾ ಸಮಾರಂಭ[ಬದಲಾಯಿಸಿ]

ಸನ್. ೨೦೧೩ ರ ಮಾರ್ಚ್ ೧೭ ರಂದು ದಿನವಿಡೀ ಜರುಗಿದ ವೈವಿಧ್ಯ ಪೂರ್ಣ ಕಾರ್ಯಕ್ರಮದಲ್ಲಿ 'ಆಯನ' ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು. ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಮುಂದಾಳು ಶ್ರೀ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ಕಾವ್ಯ ವಾಚನ, ವಿಶೇಷ ಉಪನ್ಯಾಸ, ಹಾಗೂ ೮ ಮಂದಿ ಶಿಷ್ಯರ ಗುರುವಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಕಾವ್ಯವಾಚನ ಶ್ರೀ. ಗಣಪತಿ ಪದ್ಯಾಣರಿಂದ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಧ್ಯಕ್ಷರಾದ, ಶ್ರೀ.ಪ್ರದೀಪ್ ಕುಮಾರ್ ಕಲ್ಕೂರ ಶುಭ ಹಾರೈಸಿದರು. ಡಾ. ಪಾದೇಕಲ್ಲು ವಿಷ್ಣು ಭಟ್ಟ 'ಕನ್ನಡ ಸಾಹಿತ್ಯ ಸಂಶೋಧನೆಗಳಿಗೆ ತಾಳ್ತಜೆ ವಸಂತಕುಮಾರರ ಕೊಡುಗೆ' ಎಂಬ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮುಂಬಯಿ ಪ್ರತಿನಿಧಿ ಡಾ. ಗಿರಿಜಾ ಶಾಸ್ತ್ರಿಯವರು ಶುಭ ಹಾರೈಸಿದರು. ಮಧ್ಯಾನ್ಹ 'ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮ' ವಿತ್ತು. ಅಭಿನಂದನಾ ಕಾರ್ಯಕ್ರಮ ಸಂಜೆ ಜರುಗಿತು. ನಾಡೋಜ, ಹಂಪ ನಾಗರಾಜಯ್ಯ ಅಧ್ಯಕ್ಷರಾಗಿದ್ದರು.ಪ್ರೊ. ಎ. ವಿ. ನಾರಾಯಣ ಸ್ವಾಗತ ಭಾಷಣ ಮಾಡಿದರು. ಡಾ. ಬಿ. ಎ. ವಿವೇಕ ರೈ 'ಆಯನ' ಗ್ರಂಥವನ್ನು ಅನಾವರಣ ಗೊಳಿಸಿ ಅರ್ಪಿಸಿದರು. ಚಿನ್ನಪ್ಪ ಗೌಡ ಪ್ರಾಸ್ತಾವಿಕ ಭಾಷಣ, ಪ್ರೊ. ಎಂ. ರಾಮಚಂದ್ರ, ಅಭಿನಂದನಾ ಭಾಷಣ ಮಾಡಿದರು. ಕಾರ್ಯದರ್ಶಿ ಡಾ. ಗೊವಿಂದ ಪ್ರಸಾದ್ ಕಜೆ, ವಂದಿಸಿದರು. ಡಾ. ಹಂಪನಾ, ಮತ್ತು ಸಮಿತಿಯ ಗೌರವಾಧ್ಯಕ್ಷ ಶ್ರೀ. ರಾಮ್ ಭಟ್, ಸಮಿತಿಯ ಪರವಾಗಿ ಡಾ. ತಾಳ್ತಜೆಯವರಿಗೆ ಪುಷ್ಪ ಹಾರ, ತಾಂಬೂಲ, ಫಲ,ಸ್ಮರಣಿಕೆಗಳನ್ನಿತ್ತು ಶಾಲು ಹೊದಿಸಿ ಗೌರವ ಸಮರ್ಪಿಸಿದರು. ಶ್ರೀ. ಮಹೇಶ್ ಕಜೆ, ಕಾರ್ಯಕ್ರಮ ನಿರೂಪಣೆ ಮಾಡಿದರು. ವಿವೇಕಾನಂದ ಕಾಲೇಜಿನಲ್ಲಿ ತಾಳ್ತಜೆಯವರು ಸುಮಾರು ೧೫ ವರ್ಷ ಸೇವೆ ಸಲ್ಲಿಸಿದ್ದರು. ಹಾಗಾಗಿ ಅವರ ಶಿಷ್ಯರು, ಅಭಿಮಾನಿಗಳು, ಬಂಧುಗಳು ಹಾಗೂ ಅಪಾರ ಸ್ನೇಹಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.