ತಾರ್ಕಿಕ ಕ್ರಿಯೆ
ತಾರ್ಕಿಕ ಕ್ರಿಯೆ ಎಂಬುದು
ಕಾರಣಗಳು, ನಂಬಿಕೆಗಳು, ತೀರ್ಮಾನಗಳು, ನಡೆಗಳು ಅಥವಾ ಭಾವನೆಗಳಿಗೆ ಸಂಬಂಧಿಸಿದಂತೆ ಹುಟುಕಾಟ ನಡೆಸುವುದರ ಅರಿವಿನ ಪ್ರಕ್ರಿಯೆಯಾಗಿದೆ.[೧]
ತಾರ್ಕಿಕ ಕ್ರಿಯೆಯ ಕುರಿತಾದ ಇಂಥ ಪರ್ಯಾಲೋಚನೆಯ ವಿಭಿನ್ನ ಸ್ವರೂಪಗಳು ವಿಭಿನ್ನ ಕ್ಷೇತ್ರಗಳಲ್ಲಿ ಕಂಡುಬರುತ್ತವೆ. ವಿಶಿಷ್ಟವೆನಿಸುವಂತೆ, ತಾರ್ಕಿಕ ಕ್ರಿಯೆಯನ್ನು ಪರಿಣಾಮಕಾರಿಯಾಗಿಸುವ ಅಥವಾ ಪರಿಣಾಮಕಾರಿಯಾಗಿಸದ, ಸೂಕ್ತವಾದದ್ದಾಗಿಸುವ ಅಥವಾ ಸೂಕ್ತವಲ್ಲದ್ದಾಗಿಸುವ, ಒಳ್ಳೆಯದಾಗಿಸುವ ಅಥವಾ ಕೆಟ್ಟದಾಗಿಸುವ ಅಂಶಗಳ ಕುರಿತಾಗಿ ದರ್ಶನಶಾಸ್ತ್ರದಲ್ಲಿನ ತಾರ್ಕಿಕ ಕ್ರಿಯೆಯ ಅಧ್ಯಯನವು ಗಮನ ಹರಿಸುತ್ತದೆ. ವಾದಗಳೊಳಗಿನ ತಾರ್ಕಿಕ ಕ್ರಿಯೆಯ ಸ್ವರೂಪ ಅಥವಾ ರಚನೆಯನ್ನು ಪರೀಕ್ಷಿಸುವ ಮೂಲಕ, ಅಥವಾ ತಾರ್ಕಿಕ ಕ್ರಿಯೆಯ ನಿರ್ದಿಷ್ಟ ಗುರಿಗಳನ್ನು ತಲುಪಲು ಬಳಸಲಾಗುವ ವ್ಯಾಪಕ ವಿಧಾನಗಳನ್ನು ಪರಿಗಣಿಸುವ ಮೂಲಕ ದಾರ್ಶನಿಕರು ಇದನ್ನು ಕೈಗೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ, ಜನರು ಹೇಗೆ ತರ್ಕಿಸುತ್ತಾರೆ, ಅರಿವಿನ ಮತ್ತು ನರದ ಯಾವ ಪ್ರಕ್ರಿಯೆಗಳು ಇದರಲ್ಲಿ ತೊಡಗಿಸಿಕೊಂಡಿವೆ, ಜನರು ತಳೆಯುವ ತೀರ್ಮಾನಗಳ ಮೇಲೆ ಸಾಂಸ್ಕೃತಿಕ ಅಂಶಗಳು ಹೇಗೆ ಪ್ರಭಾವಬೀರುತ್ತವೆ ಎಂಬುದರ ಕುರಿತು ಅಧ್ಯಯನ ನಡೆಸುವುದರ ಕಡೆಗೆ ಮನೋವಿಜ್ಞಾನಿಗಳು ಹಾಗೂ ಅರಿವಿನ ವಿಜ್ಞಾನಿಗಳು ಒಲವು ತೋರಿಸುತ್ತಾರೆ. ತರ್ಕಿಸಲು ಬಳಸಲ್ಪಡಬಹುದಾದ ತರ್ಕದ ಲಕ್ಷಣಗಳನ್ನು ಯಥಾರ್ಥವಾದದ ತರ್ಕಶಾಸ್ತ್ರ ಅಥವಾ ಕರಾರುವಾಕ್ಕಾದ ತರ್ಕಶಾಸ್ತ್ರದಲ್ಲಿ ಅಧ್ಯಯನ ಮಾಡಲಾಗುತ್ತದೆ. ತಾರ್ಕಿಕ ಕ್ರಿಯೆಯನ್ನು ಲೆಕ್ಕಹಾಕುವಿಕೆಯ ರೀತಿಯಲ್ಲಿ ಹೇಗೆ ರೂಪಿಸಬಹುದು ಎಂಬುದನ್ನು ಸ್ವಯಂಚಾಲನಗೊಳಿಸಿದ ತಾರ್ಕಿಕ ಕ್ರಿಯೆಯ ಕ್ಷೇತ್ರವು ಅಧ್ಯಯನ ಮಾಡುತ್ತದೆ. ನ್ಯಾಯವಾದಿಗಳು ಕೂಡಾ ತಾರ್ಕಿಕ ಕ್ರಿಯೆಯ ಅಧ್ಯಯನ ಮಾಡುತ್ತಾರೆ.
ತಾರ್ಕಿಕ ಕ್ರಿಯೆಯ ಇತಿಹಾಸ
[ಬದಲಾಯಿಸಿ]ಮಾನವರು ತಾವು ಯಾವುದನ್ನು ನಂಬಬೇಕು ಅಥವಾ ಸುದೀರ್ಘ ಕಾಲದವರೆಗೆ ಯಾವುದನ್ನು ಮಾಡಬೇಕು ಎಂಬುದರ ಕುರಿತು ಕೂಲಂಕಷವಾಗಿ ಯೋಜಿಸಲು ತಾರ್ಕಿಕ ಕ್ರಿಯೆಯನ್ನು ಬಳಸಿರುವ ಸಾಧ್ಯತೆಯಿದೆ. ಆದಾಗ್ಯೂ, ಮಾನವನ ಬೆಳವಣಿಗೆಯ ಇತಿಹಾಸದಲ್ಲಿ ತಾರ್ಕಿಕ ಕ್ರಿಯೆಯ ಔಪಚಾರಿಕ ಕೌಶಲಗಳ ಬಳಕೆಯನ್ನು ಮಾನವರು ಯಾವಾಗ ಪ್ರಾರಂಭಿಸಿದರು ಎಂಬುದನ್ನು ನಿರ್ಣಯಿಸಲು ಕೆಲವೊಂದು ಸಂಶೋಧಕರು ಪ್ರಯತ್ನಿಸಿದ್ದಾರೆ.
ಬ್ಯಾಬಿಲೋನಿಯನ್ನರ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಮೆಸೊಪಟ್ಯಾಮಿಯಾದಲ್ಲಿ, 11ನೇ ಶತಮಾನದ BCಯಲ್ಲಿ ಬರೆಯಲ್ಪಟ್ಟ ಎಸಗಿಲ್-ಕಿನ್-ಅಪಿಲ್‌ನ ಡಯಗ್ನಾಸ್ಟಿಕ್ ಹ್ಯಾಂಡ್‌ಬುಕ್ ಎಂಬ ಕೃತಿಯು, ಆಧುನಿಕ ದೃಷ್ಟಿಯನ್ನು ಒಳಗೊಂಡಂತೆ ಸ್ವಪ್ರಮಾಣ ಸೂತ್ರಗಳು ಹಾಗೂ ಊಹನಗಳ ಒಂದು ತಾರ್ಕಿಕ ಸಂಗ್ರಹವನ್ನು ಆಧರಿಸಿತ್ತು. ಅಂದರೆ, ರೋಗಿಯೋರ್ವನ ರೋಗಲಕ್ಷಣಗಳ ಪರೀಕ್ಷೆ ಹಾಗೂ ಪರಿಶೀಲನೆಯ ಮೂಲಕ ರೋಗಿಯ ಕಾಯಿಲೆ, ಕಾಯಿಲೆಯ ವ್ಯಾಧಿಕಾರಣ ವಿಜ್ಞಾನ ಹಾಗೂ ಭವಿಷ್ಯ ಬೆಳವಣಿಗೆ, ಮತ್ತು ರೋಗಿಯ ಚೇತರಿಕೆಯ ಸಾಧ್ಯತೆಗಳನ್ನು ನಿರ್ಣಯಿಸಲು ಸಾಧ್ಯ ಎಂಬ ಆಧುನಿಕ ದೃಷ್ಟಿಯನ್ನು ಈ ಕೃತಿಯ ಒಳಗೊಂಡಿತ್ತು.[೨]
8ನೇ ಮತ್ತು 7ನೇ ಶತಮಾನಗಳ BCಯ ಅವಧಿಯಲ್ಲಿ, ಬ್ಯಾಬಿಲೋನಿಯದ ಖಗೋಳಶಾಸ್ತ್ರಜ್ಞರು ಗ್ರಹಗಳ ಭವಿಷ್ಯ ಕಥನಕ್ಕೆ ಬಳಸಲಾಗುವ ತಮ್ಮ ಪದ್ಧತಿಗಳೊಳಗೆ ಒಂದು ಆಂತರಿಕ ತರ್ಕವನ್ನು ಅಳವಡಿಸಿಕೊಳ್ಳಲು ಶುರುಮಾಡಿದರು; ಇದು ತರ್ಕ ಹಾಗೂ ವಿಜ್ಞಾನದ ದರ್ಶನಶಾಸ್ತ್ರಕ್ಕೆ ನೀಡಲ್ಪಟ್ಟ ಒಂದು ಮುಖ್ಯ ಕೊಡುಗೆಯಾಗಿ ಹೊರಹೊಮ್ಮಿತು.[೩] ಬ್ಯಾಬಿಲೋನಿಯನ್ನರ ಆಲೋಚನೆಯು ಗ್ರೀಕ್‌ನ ಆರಂಭಿಕ ಆಲೋಚನಾ ಲಹರಿಯ ಮೇಲೆ ಒಂದು ಪರಿಗಣನೀಯ ಪ್ರಭಾವವನ್ನು ಹೊಂದಿತ್ತು.[೪]
ಗ್ರೀಕರ ತಾರ್ಕಿಕ ಕ್ರಿಯೆ
[ಬದಲಾಯಿಸಿ]ವಿಶ್ವದ ರೂಪುಗೊಳ್ಳುವಿಕೆಯನ್ನು ವಿವರಿಸಲು ದೇವರುಗಳನ್ನು ಬಳಸಿಕೊಳ್ಳುವ ಪೌರಾಣಿಕ ಕಥೆಗಳನ್ನು 8ನೇ ಶತಮಾನದ BCಯಲ್ಲಿ ಬರೆಯಲ್ಪಟ್ಟ ಹೋಮರ್‌ನ ಕೃತಿಗಳು ಒಳಗೊಂಡಿವೆ. ಆದಾಗ್ಯೂ, ಕೇವಲ ಎರಡು ಶತಮಾನಗಳ ನಂತರ, 6ನೇ ಶತಮಾನದ BCಯಲ್ಲಿನ ಅಂತ್ಯದ ವೇಳೆಗೆ, ಕೊಲೊಫಾನ್‌ನ ಕ್ಸೆನೋಫೇನ್ಸ್ ಎಂಬಾತ, ಪ್ರಕೃತಿ ಹಾಗೂ ದೇವರುಗಳ ಸೃಷ್ಟಿಯ ಕುರಿತಾದ ಹೋಮರನ ಸಮಜಾಯಿಷಿಗಳನ್ನು ಪ್ರಶ್ನಿಸಲು ಶುರುಮಾಡಿದ. ಈ ಕುರಿತು ಅವನು ಹೀಗೆ ಬರೆದ:
- "ಜನರ ನಡುವೆ ಅವಮಾನಕರ ಹಾಗೂ ಒಂದು ನಾಚಿಕೆಗೇಡು ಆಗಿರುವ ಎಲ್ಲ ವಿಷಯಗಳಿಗೂ ಹೋಮರ್ ಮತ್ತು ಹೆಸಿಯಾಡ್ ದೇವರುಗಳನ್ನೇ ಹೊಣೆಯಾಗಿಸುತ್ತಾರೆ" (ಅವಶಿಷ್ಟ ಭಾಗ 11).
- "ದೇವರು ಒಬ್ಬನೇ ಆಗಿದ್ದಾನೆ, ಆತ ದೇವರುಗಳು ಹಾಗೂ ಜನರ ಪೈಕಿ ಅತ್ಯಂತ ಮಹಾನ್ ಆಗಿದ್ದು, ಸ್ವರೂಪ ಹಾಗೂ ಆಲೋಚನೆಯಲ್ಲಿ ಯಾವುದೇ ರೀತಿಯಲ್ಲೂ ಆತ ಜನರಂತಿಲ್ಲ" (ಅವಶಿಷ್ಟ ಭಾಗ 23).
- "ಒಂದು ವೇಳೆ ಎತ್ತುಗಳು ಮತ್ತು ಕುದುರೆಗಳು ಹಾಗೂ ಸಿಂಹಗಳು ಕೈಗಳನ್ನು ಹೊಂದಿದ್ದೇ ಆಗಿದ್ದರೆ, ಅಥವಾ ಜನರ ರೀತಿಯಲ್ಲಿ ತಮ್ಮ ಕೈಗಳಿಂದ ಚಿತ್ರಬರೆಯಬಲ್ಲವಾಗಿದ್ದರೆ ಮತ್ತು ಇತರ ವಿಷಯಗಳನ್ನು ಮಾಡಬಲ್ಲವಾಗಿದ್ದೇ ಆಗಿದ್ದರೆ, ಆಗ ಅವು ದೇವರುಗಳ ಸ್ವರೂಪವನ್ನು ಚಿತ್ರಿಸುತ್ತಿದ್ದವು ಮತ್ತು ತಮ್ಮದೇ ಆದ ಆಕಾರಗಳಿಗೆ ಅನುಸಾರವಾಗಿ, ಅಂದರೆ ಕುದುರೆಗಳು ಕುದುರೆಗಳ ರೀತಿಯಲ್ಲಿ, ಎತ್ತುಗಳು ಎತ್ತುಗಳ ರೀತಿಯಲ್ಲಿ ಅವರ ಒಂದೊಂದೂ ಶರೀರಗಳನ್ನು ರೂಪಿಸುತ್ತಿದ್ದವು" (ಅವಶಿಷ್ಟ ಭಾಗ 15).
ಡೇವಿಡ್ ಫರ್ಲೆಯ ಅನುಸಾರ, "ಮನುಷ್ಯನಿಂದ ಒಂದಷ್ಟು ವಿಭಿನ್ನವಾಗಿರುವ ದೇವರ ಪರಿಕಲ್ಪನೆ, ಮತ್ತು ಜನರೂ ಅದೇ ರೀತಿಯಲ್ಲಿ ನಡೆದುಕೊಳ್ಳುವಂತೆ ಅವರನ್ನು ರೂಪಿಸಿದ, ದೇವರುಗಳ ಕುರಿತಾಗಿ ಹೇಳಲ್ಪಟ್ಟ ಕಥೆಗಳ ನಡುವಿನ ಒಂದು ಅಸಾಮಂಜಸ್ಯವನ್ನು ಕ್ಸೆನೋಫೇನ್ಸ್ ಕಂಡಿರುವುದೇ ಅವನ ಟೀಕೆಗೆ ಆಧಾರವಾಗಿರುವುವಂತೆ ಕಂಡುಬರುತ್ತದೆ."[೫] ಅದೇ ಅವಧಿಯಲ್ಲಿ, ವಿಶ್ವದ ಸ್ವರೂಪದ ಕುರಿತಾದ ಸಿದ್ಧಾಂತಗಳನ್ನು ಬೆಳೆಸಲು ಇತರ ಗ್ರೀಕ್ ಚಿಂತಕರು ಶುರುಮಾಡಿದರು. ಅಂದರೆ, ಸ್ವಭಾವದಲ್ಲಿ ಕ್ರಮಬದ್ಧತೆಗಳಿದ್ದವು ಎಂಬುದನ್ನು ತಾವು ನಂಬಿದಂತೆ ಸೂಚಿಸುವ ಮತ್ತು ವಿಶ್ವದ ಸ್ವರೂಪದ ಕುರಿತಾದ ಒಂದು ಸಮಂಜಸವಾದ ಕಥೆಯನ್ನು ಬೆಳೆಸುವಲ್ಲಿ ಮಾನವರು ತಾರ್ಕಿಕ ಕ್ರಿಯೆಯನ್ನು ಬಳಸಬಹುದು ಸೂಚಿಸುವ ಸಿದ್ಧಾಂತಗಳು ಅವಾಗಿದ್ದವು. ಮಿಲೆಟಸ್‌ನ ಥೇಲ್ಸ್ ಎಂಬಾತ, ಸುಮಾರು 624 BCಯಿಂದ – ಸುಮಾರು 546 BCಯ ಅವಧಿಯಲ್ಲಿ, ತನ್ನ ಪ್ರತಿಪಾದನೆಗಳನ್ನು ಮಂಡಿಸುತ್ತಾ, ಎಲ್ಲವೂ ನೀರೇ ಆಗಿದೆ ಎಂದು ತಿಳಿಸಿದ. ಮಿಲೆಟಸ್‌ನ ಅನಾಕ್ಸಿಮೆನೆಸ್ ಎಂಬಾತ, ಸುಮಾರು 585 BCಯಿಂದ – ಸುಮಾರು 525 BCಯ ಅವಧಿಯಲ್ಲಿ, ತನ್ನ ಪ್ರತಿಪಾದನೆಗಳನ್ನು ಮಂಡಿಸುತ್ತಾ, ಗಾಳಿಯೇ ಎಲ್ಲದಕ್ಕೂ ಮೂಲ ಎಂದು ತಿಳಿಸಿದ.[೫]
ಮಾನವ ತಾರ್ಕಿಕ ಕ್ರಿಯೆಯ ವಿಧಾನಗಳ ಒಂದು ವಿಸ್ತೃತವಾದ, ಕ್ರಮಬದ್ಧವಾದ ನಿರೂಪಣೆಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ, ಅರಿಸ್ಟಾಟಲ್ ಇದುವರೆಗೂ ನಾವು ತಿಳಿದಿರುವಂತೆ ಮೊದಲ ಬರಹಗಾರನಾಗಿದ್ದಾನೆ. ತಾರ್ಕಿಕ ಕ್ರಿಯೆಯ ಎರಡು ಪ್ರಮುಖ ವಿಧಾನಗಳಾದ ವಿಶ್ಲೇಷಣೆ ಮತ್ತು ಸಮನ್ವಯವನ್ನು ಅವನು ಗುರುತಿಸಿದ. ಮೊದಲನೆಯ ವಿಧಾನದಲ್ಲಿ, ಒಂದು ವಸ್ತುವನ್ನು ಅದರ ಘಟಕ ಭಾಗಗಳ ಕಡೆಗೆ ನೋಡುವುದರ ಮೂಲಕ ನಾವು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತೇವೆ. ಎರಡನೆಯ ವಿಧಾನದಲ್ಲಿ, ವಸ್ತುಗಳ ವರ್ಗವೊಂದನ್ನು, ಆ ವರ್ಗದಲ್ಲಿನ ಪ್ರತಿ ವಸ್ತುವಿನ ಸಾಮಾನ್ಯ ಲಕ್ಷಣಗಳ ಕಡೆಗೆ ನೋಡುವ ಮೂಲಕ ಅರ್ಥೈಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ.
ಸಿಲಜಿಸಮ್‌ನ ತರ್ಕ ಎಂದು ಕರೆಯಲ್ಪಡುವ ತರ್ಕವನ್ನು ಅರಿಸ್ಟಾಟಲ್ ಅಭಿವೃದ್ಧಿಪಡಿಸಿದ. ವಾದದ ಹೂರಣವನ್ನು ಕಡೆಗಣಿಸುವ ಮತ್ತು ವಾದದ ಸ್ವರೂಪ ಅಥವಾ ರಚನೆಯ ಮೇಲೆ ಗಮನಹರಿಸುವ ಒಂದು ರೀತಿಯಲ್ಲಿ ತಾರ್ಕಿಕ ಕ್ರಿಯೆಯನ್ನು ವಿಶ್ಲೇಷಿಸುವುದನ್ನು ಈ ತರ್ಕವು ಸಾಧ್ಯವಾಗಿಸುತ್ತದೆ.[೬] ಪ್ರಯರ್ ಅನಲಿಟಿಕ್ಸ್‌ನಲ್ಲಿ, ಈ ಅಂಶಗಳನ್ನು ಎತ್ತಿತೋರಿಸುವ ಮೂಲಕ ಅರಿಸ್ಟಾಟಲ್ ಪ್ರಾರಂಭಿಸುತ್ತಾನೆ:
"ಒಂದು ವೇಳೆ ಯಾವುದೇ ಸಂತೋಷವು ಒಂದು ಒಳ್ಳೆಯ ಸಂಗತಿಯಾಗಿಲ್ಲದಿದ್ದರೆ, ಒಂದು ಸಂತೋಷವಾಗಿರುವಲ್ಲಿ ಯಾವುದಕ್ಕೂ ಆಗುವುದಿಲ್ಲ."[೭]
ಈ ವಾದವು, ಈ ಕೆಳಕಂಡ ಸ್ವರೂಪದ ತಾರ್ಕಿಕ ಕ್ರಿಯೆಯ ನಿಯಮವೊಂದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಅವನು ವಾದಿಸುತ್ತಾನೆ:
- ಪ್ರಮೇಯ: "ಅರಿಸ್ಟಾಟಲ್ ಗ್ರೀಕ್ ಆಗಿದ್ದಾನೆ" ಮತ್ತು "ಎಲ್ಲಾ ಗ್ರೀಕರೂ ಮಾನವರಾಗಿದ್ದಾರೆ"
- ತೀರ್ಮಾನ: "ಅರಿಸ್ಟಾಟಲ್ ಮಾನವನಾಗಿದ್ದಾನೆ"
ಈ ಬಗೆಯ ವಾದವು ಒಳಗೊಂಡಿರುವ ತಾರ್ಕಿಕ ಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಮೂಲಕ, Aಗಳು ಮತ್ತು Bಗಳು ಏನೇ ಆಗಿದ್ದರೂ, ಅವುಗಳ ನಡುವಿನ ಸಂಬಂಧದ ಕುರಿತಾಗಿ ಅದೇ ತೀರ್ಮಾನಕ್ಕೆ ನಾವು ತಲುಪಬಹುದು ಎಂಬುದನ್ನು ನಾವು ಅರಿಯಲು ಸಾಧ್ಯವಿದೆ ಎಂಬುದನ್ನು ಅರಿಸ್ಟಾಟಲ್ ಎತ್ತಿತೋರಿಸುತ್ತಾನೆ. ಇದು ಒಂದು ಸರಳವಾದ ಮತ್ತು ನೇರವಾದ ವಾದವಾಗಿದೆಯಾದರೂ, ಇದು ತರ್ಕದೊಳಗೆ ಅರ್ಥೈಸಿಕೊಳ್ಳುವಲ್ಲಿನ ಮತ್ತು ಸಂಶೋಧಿಸುವಲ್ಲಿನ ಒಂದು ವಿಸ್ಮಯಕರ ಜಿಗಿತದ ಒಂದು ಸೂಚನೆಯಾಗಿದೆ ಮತ್ತು ಇದು ಔಪಚಾರಿಕ ತರ್ಕದ ಬೆಳವಣಿಗೆಯ ಆರಂಭವಾಗಿತ್ತು.
ಭಾರತೀಯರ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಆಲೋಚನೆಗೆ ಸಂಬಂಧಿಸಿದ ಆರು ಭಾರತೀಯ ಪಂಥಗಳ ಪೈಕಿ ಎರಡು ಪಂಥಗಳು ತರ್ಕದೊಂದಿಗೆ ವ್ಯವಹರಿಸುತ್ತವೆ. ಅವೆಂದರೆ: ನ್ಯಾಯ ಮತ್ತು ವೈಶೇಷಿಕ. ಅಕ್ಷಪಾದ ಗೌತಮನ ನ್ಯಾಯ ಸೂತ್ರಗಳು ನ್ಯಾಯ ಪಂಥದ ಪ್ರಮುಖ ಮೂಲಪಾಠಗಳನ್ನು ರೂಪಿಸುತ್ತವೆ; ಈ ನ್ಯಾಯ ಪಂಥವು ಹಿಂದೂ ದರ್ಶನಶಾಸ್ತ್ರದ ಆರು ಸಂಪ್ರದಾಯಬದ್ಧ ಪಂಥಗಳ ಪೈಕಿ ಒಂದಾಗಿದೆ. ಈ ವಾಸ್ತವವಾದಿ ಪಂಥವು ತೀರ್ಮಾನಿಸಿದ್ದಕ್ಕೆ ಸಂಬಂಧಿಸಿದ ಐದು-ಸದಸ್ಯರ ಒಂದು ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಒಂದು ಆರಂಭಿಕ ಪ್ರಮೇಯ, ಒಂದು ಕಾರಣ, ಒಂದು ಉದಾಹರಣೆ, ಒಂದು ಅನ್ವಯಿಕೆ ಹಾಗೂ ಒಂದು ತೀರ್ಮಾನ ಇವೇ ಮೊದಲಾದವನ್ನು ಇದು ಒಳಗೊಂಡಿರುತ್ತದೆ. ಆದರ್ಶವಾದಿ ಬೌದ್ಧಮತೀಯ ದರ್ಶನಶಾಸ್ತ್ರವು ನೈಯಾಯಿಕರಿಗೆ ಒಂದು ಮುಖ್ಯ ಎದುರಾಳಿಯಾಗಿ ಮಾರ್ಪಟ್ಟಿತು. ಮಾಧ್ಯಮಿಕ "ಮಧ್ಯದ ಮಾರ್ಗ"ದ ಸಂಸ್ಥಾಪಕನಾದ ನಾಗಾರ್ಜುನನು, "ಕ್ಯಾಟಸ್ಕೋಟಿ" ಅಥವಾ ಟೆಟ್ರಾಲೆಮ್ಮಾ ಎಂದು ಕರೆಯಲ್ಪಡುವ ಒಂದು ವಿಶ್ಲೇಷಣೆಯನ್ನು ಅಭಿವೃದ್ಧಿಪಡಿಸಿದ. ನಾಲ್ಕು-ಮೂಲೆಗಳನ್ನು ಒಳಗೊಂಡಿರುವ ಈ ವಾದಸರಣಿಯು, ಪ್ರತಿಪಾದನೆಯೊಂದರ ಅಸ್ತ್ಯರ್ಥಕ ವಾಕ್ಯ ಅಥವಾ ದೃಢೀಕರಣ, ಅದರ ನಿರಾಕರಣೆ, ಜಂಟಿ ಅಸ್ತ್ಯರ್ಥಕ ವಾಕ್ಯ ಅಥವಾ ದೃಢೀಕರಣ ಹಾಗೂ ನಿರಾಕರಣೆಯನ್ನು, ಹಾಗೂ ಅಂತಿಮವಾಗಿ ಅದರ ಅಸ್ತ್ಯರ್ಥಕ ವಾಕ್ಯ ಅಥವಾ ದೃಢೀಕರಣ ಹಾಗೂ ನಿರಾಕರಣೆಯ ತಿರಸ್ಕಾರವನ್ನು ಕ್ರಮಬದ್ಧವಾಗಿ ಪರೀಕ್ಷಿಸಿದೆ ಮತ್ತು ತಿರಸ್ಕರಿಸಿದೆ. ಆದರೆ, ದಿಗ್ನಾಗಾ ಹಾಗೂ ಧರ್ಮಕೀರ್ತಿ ಎಂಬ ಅವನ ಉತ್ತರಾಧಿಕಾರಿಯ ನೆರವಿನೊಂದಿಗೆ ಬೌದ್ಧಮತೀಯ ತರ್ಕವು ತನ್ನ ಉಚ್ಛ್ರಾಯವನ್ನು ತಲುಪಿತು. ಬದಲಾಯಿಸಲಾಗದ ಸಹವರ್ತಿತ್ವ ಅಥವಾ ಹಬ್ಬುವಿಕೆ ಎಂದೂ ಕರೆಯಲ್ಪಡುವ, ಅವಶ್ಯಕ ತಾರ್ಕಿಕ ಅಪರಾಧೀನವಾಗಿಸುವಿಕೆಯಾದ "ವ್ಯಾಪ್ತಿ"ಯ ವ್ಯಾಖ್ಯಾನದ ಮೇಲೆ ಅವರ ವಿಶ್ಲೇಷಣೆಯು ಕೇಂದ್ರೀಕರಿಸಲ್ಪಟ್ಟಿತು. ಈ ತುದಿಗೆ "ಆಪೋಹ" ಅಥವಾ ಪ್ರತ್ಯೇಕಿಸುವಿಕೆ ಎಂದು ಕರೆಯಲ್ಪಡುವ ಒಂದು ಸಿದ್ಧಾಂತವು ಅಭಿವೃದ್ಧಿಪಡಿಸಲ್ಪಟ್ಟಿತು. ವಿಶದೀಕರಿಸುವ ಲಕ್ಷಣಗಳ ಒಳಗೆ ಸೇರಿಸುವಿಕೆ ಮತ್ತು ಹೊರಗಿಡುವಿಕೆ ಎಂದು ಕರೆಯಬಹುದಾದ ಅಂಶವನ್ನು ಇದು ಒಳಗೊಂಡಿತ್ತು. ಈ ಸಾಹಸವು ಒಳಗೊಂಡಿರುವ ತೊಡಕುಗಳು ನವ್ಯ-ನ್ಯಾಯದ ನವ-ಅತಿಸೂಕ್ಷ್ಮ ತರ್ಕದ ಪಂಥವನ್ನು ಆಂಶಿಕವಾಗಿ ಉತ್ತೇಜಿಸಿ, ಈ ನವ್ಯ-ನ್ಯಾಯವು ತೀರ್ಮಾನಿಸುವಿಕೆಯ ಒಂದು ಔಪಚಾರಿಕ ವಿಶ್ಲೇಷಣೆಯನ್ನು 16ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಿತು.
ಚೀನಿಯರ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಚೀನಾದಲ್ಲಿ ಕನ್‌ಫ್ಯೂಷಿಯಸ್, ಮೋಝಿ ಮೊದಲಾದವರ ಓರ್ವ ಸಮಕಾಲೀನನಾದ "ಮಾಸ್ಟರ್ ಮೋ" ಎಂಬಾತನಿಗೆ ಮೋಹಿಸ್ಟ್ ಪಂಥವನ್ನು ಸಂಸ್ಥಾಪಿಸಿದ ಕೀರ್ತಿಯು ಸಲ್ಲುತ್ತದೆ. ಕ್ರಮಬದ್ಧ ತೀರ್ಮಾನಿಸುವಿಕೆ ಮತ್ತು ಸರಿಯಾದ ತೀರ್ಮಾನಗಳ ಷರತ್ತುಗಳಿಗೆ ಸಂಬಂಧಿಸಿದ ವಿವಾದಾಂಶಗಳೊಂದಿಗೆ ಮೋಹಿಸ್ಟ್ ಪಂಥದ ಕಟ್ಟುಪಾಡುಗಳು ವ್ಯವಹರಿಸಿದವು. ನಿರ್ದಿಷ್ಟವಾಗಿ ಹೇಳುವುದಾದರೆ, ಮೋಹಿ ತತ್ತ್ವದಿಂದ ಆಚೆಗೆ ಬೆಳೆದ ಪಂಥಗಳ ಪೈಕಿ ಇದು ಒಂದಾಗಿದ್ದು, ಔಪಚಾರಿಕ ತರ್ಕದ ಕುರಿತಾಗಿ ಕೈಗೊಂಡ ಆರಂಭಿಕ ತನಿಖೆಗೆ ಸಂಬಂಧಿಸಿದಂತೆ ಇದರ ತರ್ಕಶಾಸ್ತ್ರಜ್ಞರು ಕೆಲವೊಂದು ವಿದ್ವಾಂಸರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ದುರದೃಷ್ಟವಶಾತ್, ತರುವಾಯ ಬಂದ ಕಿನ್ ರಾಜವಂಶದಲ್ಲಿನ ಕರ್ಮಪ್ರಧಾನ್ಯವಾದದ ಕಠೋರ ನಿಯಮದ ಕಾರಣದಿಂದಾಗಿ, ಚೀನಾದಲ್ಲಿ ಬೌದ್ಧಮತೀಯರಿಂದ ಭಾರತೀಯ ದರ್ಶನಶಾಸ್ತ್ರದ ಪರಿಚಯಿಸುವಿಕೆಯಾಗುವ ವೇಳೆಗೆ ಈ ತನಿಖಾಪಂಥವು ಅಲ್ಲಿಂದ ಕಣ್ಮರೆಯಾಯಿತು.
ಇಸ್ಲಾಮಿನ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಪ್ರವಾದಿ ಮುಹಮ್ಮದ್‌ರ ಸಾವಿನ ನಂತರದ ಒಂದು ಸಮಯಕ್ಕೆ ಸಂಬಂಧಿಸಿದಂತೆ, ವಾದದ ರೂಪಿಸುವಿಕೆಯ ಮಾನದಂಡಗಳ ಮೇಲೆ ಇಸ್ಲಾಮಿನ ಕಾನೂನು ಪ್ರಾಮುಖ್ಯತೆಯನ್ನು ಇರಿಸಿದ್ದರಿಂದ ಅದು ಕಲಾಮ್‌ನಲ್ಲಿನ ತರ್ಕಕ್ಕೆ ಒಂದು ವಿನೂತನ ಮಾರ್ಗವನ್ನು ಹುಟ್ಟುಹಾಕಿತು. ಆದರೆ, ಅರಿಸ್ಟಾಟಲ್ನ ಆರ್ಗನಾನ್ ತರ್ಕಗ್ರಂಥ ವನ್ನು ಅತೀವವಾಗಿ ಗೌರವಿಸಿದ ಮ್ಯು'ಟಾಜಿಲಿ ದಾರ್ಶನಿಕರ ಉಗಮವಾಗುವುದರೊಂದಿಗೆ, ಗ್ರೀಕ್ ದರ್ಶನಶಾಸ್ತ್ರ ಹಾಗೂ ಗ್ರೀಕ್ ಸಂಸ್ಕೃತಿಯ ಅಭ್ಯಾಸಿಗೆ ಸಂಬಂಧಿಸಿದ ದರ್ಶನಶಾಸ್ತ್ರದಿಂದ ಬಂದ ಪರಿಕಲ್ಪನೆಗಳು ನಂತರದಲ್ಲಿ ಈ ಮಾರ್ಗದ ಮೇಲೆ ಪ್ರಭಾವ ಬೀರಿದವು. ಗ್ರೀಕ್ ಸಂಸ್ಕೃತಿಯ ಅಭ್ಯಾಸಕ್ಕೆ ಸಂಬಂಧಿಸಿದಂತೆ ಪ್ರಭಾವಕ್ಕೊಳಗಾದ ಇಸ್ಲಾಮಿನ ದಾರ್ಶನಿಕರ ಕೃತಿಗಳು, ಅವೆರ್ರೋಸ್‌ನಿಂದ ಬಂದ ಆರ್ಗನಾನ್ ತರ್ಕಗ್ರಂಥ ದ ಮೇಲಿನ ವ್ಯಾಖ್ಯಾನಗಳ ಜೊತೆಜೊತೆಗೆ, ಮಧ್ಯಯುಗದ ಯುರೋಪ್‌ನಲ್ಲಿನ ಅರಿಸ್ಟಾಟಲನ ತತ್ತ್ವದ ತರ್ಕದ ಗ್ರಹಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದವು. ಅರಿಸ್ಟಾಟಲನ ತತ್ತ್ವದ ತರ್ಕವನ್ನು ಅನೇಕವೇಳೆ ಟೀಕಿಸಿ ಸರಿಪಡಿಸಿ ತರ್ಕದ ತಮ್ಮದೇ ಆದ ಸ್ವರೂಪಗಳನ್ನು ಪರಿಚಯಿಸಿದ ಅಲ್-ಫರಾಬಿ, ಅವಿಸೆನ್ನಾ, ಅಲ್-ಘಜಾಲಿ ಹಾಗೂ ಇತರ ಮುಸ್ಲಿಮ್ ತರ್ಕಶಾಸ್ತ್ರಜ್ಞರ ಕೃತಿಗಳು ಕೂಡಾ ಮಧ್ಯಯುಗದ ಯುರೋಪಿಯನ್ನರ ತರ್ಕದ ತರುವಾಯದ ಬೆಳವಣಿಗೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದವು.
ತೀರ್ಮಾನಿಸುವಿಕೆಯ ಔಪಚಾರಿಕ ಮಾದರಿಗಳು ಮತ್ತು ಅವುಗಳ ಅಂಗೀಕಾರಾರ್ಹತೆಯ ಅಧ್ಯಯನವನ್ನಷ್ಟೇ ಅಲ್ಲದೇ, ಭಾಷೆಯ ದರ್ಶನಶಾಸ್ತ್ರದ ಅಂಶಗಳು ಹಾಗೂ ಪ್ರಮಾಣ ಪ್ರಮೇಯ ವಿಚಾರ (ಜ್ಞಾನಮೀಮಾಂಸೆ) ಮತ್ತು ತತ್ತ್ವಮೀಮಾಂಸೆಯ ಅಂಶಗಳನ್ನೂ ಸಹ ಇಸ್ಲಾಮಿನ ತರ್ಕಶಾಸ್ತ್ರವು ಒಳಗೊಂಡಿತ್ತು. ಅರೇಬಿಕ್ ಭಾಷಾಶಾಸ್ತ್ರಜ್ಞರ (ಅಥವಾ ವ್ಯಾಕರಣಜ್ಞರ) ಜೊತೆಗಿನ ವಿವಾದಗಳ ಕಾರಣದಿಂದಾಗಿ, ಇಸ್ಲಾಮಿನ ದಾರ್ಶನಿಕರು ತರ್ಕಶಾಸ್ತ್ರ ಹಾಗೂ ಭಾಷೆಯ ನಡುವಿನ ಸಂಬಂಧದ ಕುರಿತು ಕೂಲಂಕಷವಾಗಿ ಯೋಜಿಸುವಲ್ಲಿ ಹೆಚ್ಚು ಆಸಕ್ತಿಯನ್ನು ತಳೆದಿದ್ದರು, ಮತ್ತು ವಸ್ತು ವಿಷಯದ ಪ್ರಶ್ನೆಗೆ ಹಾಗೂ ತಾರ್ಕಿಕ ಕ್ರಿಯೆ ಮತ್ತು ಮಾತಿಗೆ ಸಂಬಂಧಿಸಿದ ತರ್ಕದ ಗುರಿಗಳ ಕುರಿತಾಗಿ ಅವರು ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಯನ್ನು ನಡೆಸಿದರು. ಔಪಚಾರಿಕ ತಾರ್ಕಿಕ ವಿಶ್ಲೇಷಣೆಯ ಕ್ಷೇತ್ರದಲ್ಲಿ ನಿಬಂಧನೆಗಳು, ಪ್ರತಿಪಾದನೆಗಳು ಹಾಗೂ ತರ್ಕಪದ್ಧತಿಗಳ ಸಿದ್ಧಾಂತ ಕುರಿತಾಗಿ ಅವರು ವಿಶದವಾಗಿ ವಿವರಿಸಿದರು. ಎಲ್ಲಾ ತರ್ಕಾಧಾರಿತ ಅಥವಾ ವಿವೇಚನಾಶೀಲ ವಾದಸರಣಿಯು ಇಳಿಸಲ್ಪಡಬಹುದಾದ ಸ್ವರೂಪವಾಗಿ ತರ್ಕಪದ್ಧತಿಯನ್ನು ಅವರು ಪರಿಗಣಿಸಿದರು, ಮತ್ತು ಸಿಲಜಿಸಮ್‌ನ ಸಿದ್ಧಾಂತವನ್ನು ತರ್ಕದ ಕೇಂದ್ರೀಕರಿಸುವ ಬಿಂದುವಾಗಿ ಅವರು ಮಾನ್ಯಮಾಡಿದರು. ಕಾವ್ಯಾತ್ಮಕತೆಯೂ ಸಹ ಕೆಲವು ಶೈಲಿಯಲ್ಲಿ ಒಂದು ಸಿಲಜಿಸಮ್‌ನ ಕಲೆಯಾಗಿ ಇಸ್ಲಾಮಿನ ಅನೇಕ ಪ್ರಮುಖ ತರ್ಕಶಾಸ್ತ್ರಜ್ಞರಿಂದ ಪರಿಗಣಿಸಲ್ಪಟ್ಟಿತು.
ಮುಸ್ಲಿಮ್ ತರ್ಕಶಾಸ್ತ್ರಜ್ಞರಿಂದ ಮಾಡಲ್ಪಟ್ಟ ಮುಖ್ಯ ಬೆಳವಣಿಗೆಗಳಲ್ಲಿ ಅವಿಸೆನ್ನಿಯನ್ನನ ತರ್ಕವನ್ನು ಅರಿಸ್ಟಾಟಲನ ತತ್ತ್ವದ ತರ್ಕದ ಒಂದು ಬದಲಿ ಬಳಕೆಯಾಗಿ ಅಭಿವೃದ್ಧಿಮಾಡಿದ್ದು ಸೇರಿತ್ತು. ಕಾಲ್ಪನಿಕ ತರ್ಕಪದ್ಧತಿ,[೮] ಐಹಿಕ ಪ್ರಕಾರದ ತರ್ಕ,[೯][೧೦] ಮತ್ತು ಅನುಗಮನದ ಆಧಾರವುಳ್ಳ ತರ್ಕ ಇವೇ ಮೊದಲಾದವುಗಳ ಪರಿಚಯಿಸುವಿಕೆಗೆ ಸಂಬಂಧಿಸಿದಂತೆ ಅವಿಸೆನ್ನಾನ ತರ್ಕವ್ಯವಸ್ಥೆಯು ಹೊಣೆಯಾಗಿತ್ತು.[೧೧][೧೨] ಇಸ್ಲಾಮಿನ ದರ್ಶನಶಾಸ್ತ್ರದಲ್ಲಿನ ಇತರ ಮುಖ್ಯ ಬೆಳವಣಿಗೆಗಳಲ್ಲಿ ಇವು ಸೇರಿವೆ: ಇಸ್ನಾಡ್ ಅಥವಾ "ಬೆಂಬಲ" ಎಂದು ಕರೆಯಲ್ಪಡುವ ಒಂದು ಕಟ್ಟುನಿಟ್ಟಾದ ಉಲ್ಲೇಖನದ ಪರಿಪಾಠ, ಮತ್ತು ಅನೇಕ ಬಗೆಗಳ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಅನ್ವಯಿಸಬಹುದಾದ, ಪ್ರತಿಪಾದನೆಗಳನ್ನು ತಪ್ಪೆಂದು ಸಾಧಿಸಲು ಇರುವ, ಇಜ್‌ತಿಹಾದ್ ಎಂದು ಕರೆಯಲ್ಪಡುವ ಮುಕ್ತ ವಿಚಾರಣೆಯ ವೈಜ್ಞಾನಿಕ ವಿಧಾನವೊಂದರ ಬೆಳವಣಿಗೆ.
ತಾರ್ಕಿಕ ಕ್ರಿಯೆಯ ವಿಧಾನಗಳು ಹಾಗೂ ವಾದಸರಣಿ
[ಬದಲಾಯಿಸಿ]ತೀರ್ಮಾನಗಳನ್ನು ಬೆಂಬಲಿಸುವಲ್ಲಿ ಅಥವಾ ಸಮರ್ಥಿಸುವಲ್ಲಿ ಬಳಸಬಹುದಾದ ತಾರ್ಕಿಕ ಕ್ರಿಯೆಯ ಬಗೆಬಗೆಯ ಸ್ವರೂಪಗಳನ್ನು ಗುರುತಿಸುವುದು, ತಾರ್ಕಿಕ ಕ್ರಿಯೆಯ ಅಧ್ಯಯನಕ್ಕಿರುವ ಒಂದು ಮಾರ್ಗವಾಗಿದೆ. ದರ್ಶನಶಾಸ್ತ್ರದಲ್ಲಿ ಮಾಡಲಾಗುವ ತಾರ್ಕಿಕ ಕ್ರಿಯೆಯ ಸ್ವರೂಪಗಳ ನಡುವಿನ ಮುಖ್ಯ ವಿಭಜನವೆಂದರೆ, ಅನುಮಾನಾತ್ಮಕ ತಾರ್ಕಿಕ ಕ್ರಿಯೆ ಹಾಗೂ ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಗಳ ನಡುವಿನದಾಗಿದೆ. "ಕಾರಣಪೂರ್ವಕ ಊಹನದ ವಿಜ್ಞಾನ"ವಾಗಿ ಔಪಚಾರಿಕ ತರ್ಕವು ವಿವರಿಸಲ್ಪಟ್ಟಿದೆ.[೧೩] ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯ ಅಧ್ಯಯನವನ್ನು ಅನೌಪಚಾರಿಕ ತರ್ಕ ಅಥವಾ ನಿರ್ಣಾಯಕ ಚಿಂತನೆ ಎಂದು ಕರೆಯಲಾಗುವ ಕ್ಷೇತ್ರದೊಳಗಡೆ ಸಾಮಾನ್ಯವಾಗಿ ನಿರ್ವಹಿಸಲಾಗುತ್ತದೆ.
ಅನುಮಾನಾತ್ಮಕ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಒಂದು ವೇಳೆ ಪ್ರಮೇಯಗಳು (ಆ ತೀರ್ಮಾನವನ್ನು ಬೆಂಬಲಿಸಲು ಕೊಟ್ಟ ಕಾರಣಗಳು) ನಿಜವಾಗಿದ್ದರೆ, ವಾದದ ತೀರ್ಮಾನವೂ ನಿಜವಾಗಿರಬೇಕಿದ್ದು, ಆಗ ವಾದವೊಂದರಲ್ಲಿನ ತಾರ್ಕಿಕ ಕ್ರಿಯೆಯು ಕ್ರಮಬದ್ಧ ಎನಿಸಿಕೊಳ್ಳುತ್ತದೆ. ಅನುಮಾನಾತ್ಮಕ ತಾರ್ಕಿಕ ಕ್ರಿಯೆಯ ಒಂದು ಶಿಷ್ಟ ಉದಾಹರಣೆಯು, ತರ್ಕಪದ್ಧತಿಗಳಲ್ಲಿ ಕಂಡುಬರುವ ಈ ಕೆಳಗಿನ ಉದಾಹರಣೆಯಂತಿರುತ್ತದೆ:
- ಪ್ರಮೇಯ 1: ಎಲ್ಲಾ ಮಾನವರೂ ಮರ್ತ್ಯ ವ್ಯಕ್ತಿಗಳಾಗಿದ್ದಾರೆ.
- ಪ್ರಮೇಯ 2: ಸಾಕ್ರೆಟಿಸ್ ಓರ್ವ ಮಾನವನಾಗಿದ್ದಾನೆ.
- ತೀರ್ಮಾನ: ಸಾಕ್ರೆಟಿಸ್ ಓರ್ವ ಮರ್ತ್ಯ ವ್ಯಕ್ತಿಯಾಗಿದ್ದಾನೆ.
- ಪ್ರಮೇಯ 2: ಸಾಕ್ರೆಟಿಸ್ ಓರ್ವ ಮಾನವನಾಗಿದ್ದಾನೆ.
ಈ ವಾದದಲ್ಲಿನ ತಾರ್ಕಿಕ ಕ್ರಿಯೆಯು ಕ್ರಮಬದ್ಧವಾಗಿದೆ, ಏಕೆಂದರೆ, 1 ಮತ್ತು 2ರ ಪ್ರಮೇಯಗಳು ನಿಜವಾಗಿರಬಹುದಾದುದಕ್ಕೆ ಮತ್ತು 3ರ ತೀರ್ಮಾನವು ಸುಳ್ಳಾಗಿರಬಹುದಾದುದಕ್ಕೆ ಸಂಬಂಧಿಸಿದಂತೆ ಇಲ್ಲಿ ಬೇರೆ ದಾರಿಯೇ ಇಲ್ಲ.
ಅಂಗೀಕಾರಾರ್ಹತೆಯು ವಾದದಲ್ಲಿನ ತಾರ್ಕಿಕ ಕ್ರಿಯೆಯ ಒಂದು ಲಕ್ಷಣವಾಗಿದೆಯೇ ಹೊರತು, ವಾದದಲ್ಲಿನ ಪ್ರಮೇಯಗಳ ಒಂದು ಲಕ್ಷಣವಾಗಿ ಅಥವಾ ಒಟ್ಟಾರೆಯಾಗಿ ವಾದದ ಒಂದು ಲಕ್ಷಣವಾಗಿ ಇಲ್ಲ. ವಾಸ್ತವವಾಗಿ, ಪ್ರಮೇಯಗಳು ಮತ್ತು ತೀರ್ಮಾನದ ಯಥಾರ್ಥತೆ ಅಥವಾ ಅಸತ್ಯತೆಯು, ವಾದದಲ್ಲಿನ ತಾರ್ಕಿಕ ಕ್ರಿಯೆಯ ಅಂಗೀಕಾರಾರ್ಹತೆಗೆ ಅಸಂಬದ್ಧವಾಗಿದೆ. ಒಂದು ಸುಳ್ಳು ಪ್ರಮೇಯ ಹಾಗೂ ಒಂದು ಸುಳ್ಳು ತೀರ್ಮಾನದೊಂದಿಗಿನ ಈ ಕೆಳಕಂಡ ವಾದವೂ ಸಹ ಕ್ರಮಬದ್ಧವಾಗಿದೆ (ತೀರ್ಮಾನದ ನಿಯಮ ಎಂದು ಕರೆಯಲಾಗುವ ತಾರ್ಕಿಕ ಕ್ರಿಯೆಯ ಸ್ವರೂಪವನ್ನು ಇದು ಹೊಂದಿದೆ).
- ಪ್ರಮೇಯ 1: ಒಂದು ವೇಳೆ ಹಸಿರು ಎಂಬುದು ಒಂದು ಬಣ್ಣವಾಗಿದ್ದರೆ, ಆಗ ಹುಲ್ಲು ಹಸುಗಳಿಗೆ ವಿಷವುಣಿಸುತ್ತದೆ.
- ಪ್ರಮೇಯ 2: ಹಸಿರು ಒಂದು ಬಣ್ಣವಾಗಿದೆ.
- ತೀರ್ಮಾನ: ಹುಲ್ಲು ಹಸುಗಳಿಗೆ ವಿಷವುಣಿಸುತ್ತದೆ.
- ಪ್ರಮೇಯ 2: ಹಸಿರು ಒಂದು ಬಣ್ಣವಾಗಿದೆ.
ಮತ್ತೊಮ್ಮೆ, ಒಂದು ವೇಳೆ ಈ ವಾದದಲ್ಲಿನ ಪ್ರಮೇಯಗಳು ನಿಜವಾಗಿದ್ದಿದ್ದರೆ, ತೀರ್ಮಾನವೂ ಸಹ ನಿಜವಾಗಿರಬೇಕಿರುವ ರೀತಿಯಲ್ಲಿ ತಾರ್ಕಿಕ ಕ್ರಿಯೆಯು ಇರುತ್ತದೆ.
ಕ್ರಮಬದ್ಧ ತಾರ್ಕಿಕ ಕ್ರಿಯೆಯೊಂದಿಗಿನ ಅನುಮಾನಾತ್ಮಕ ವಾದವೊಂದರಲ್ಲಿ, ಪ್ರಮೇಯಗಳಲ್ಲಿ ಒಳಗೊಳ್ಳಲ್ಪಟ್ಟಿರುವ ಮಾಹಿತಿಗಿಂತ ಹೆಚ್ಚೇನೂ ಮಾಹಿತಿಯನ್ನು ತೀರ್ಮಾನವು ಒಳಗೊಳ್ಳುವುದಿಲ್ಲ. ಆದ್ದರಿಂದ, ಅನುಮಾನಾತ್ಮಕ ತಾರ್ಕಿಕ ಕ್ರಿಯೆಯು ಓರ್ವನ ಅರಿವಿನ ತಳಹದಿಯನ್ನು ಹೆಚ್ಚಿಸುವುದಿಲ್ಲ ಮತ್ತು ಈ ಕಾರಣದಿಂದ ಇದು ಅರ್ಥವರ್ಧಕವಲ್ಲದ್ದು ಎನಿಸಿಕೊಂಡಿದೆ.
ಔಪಚಾರಿಕ ತರ್ಕದ ಕ್ಷೇತ್ರದೊಳಗಡೆ, ಅನುಮಾನಾತ್ಮಕ ತಾರ್ಕಿಕ ಕ್ರಿಯೆಯ ವೈವಿಧ್ಯಮಯ ವಿಭಿನ್ನ ಸ್ವರೂಪಗಳು ಅಭಿವೃದ್ಧಿಪಡಿಸಲ್ಪಟ್ಟಿವೆ. ಸಂಕೇತಗಳು, ತಾರ್ಕಿಕ ನಿರ್ವಾಹಕಗಳು ಹಾಗೂ ಒಂದು ತೀರ್ಮಾನಕ್ಕೆ ಬರುವಲ್ಲಿ ಯಾವ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ದಿಷ್ಟಪಡಿಸುವ ನಿಯಮಗಳ ಒಂದು ಸಂಗ್ರಹವನ್ನು ಬಳಸಿಕೊಳ್ಳುವ ಅಮೂರ್ತ ತಾರ್ಕಿಕ ಕ್ರಿಯೆಯನ್ನು ಇವು ಒಳಗೊಳ್ಳುತ್ತವೆ. ತಾರ್ಕಿಕ ಕ್ರಿಯೆಯ ಈ ಸ್ವರೂಪಗಳು ಸಿಲಜಿಸಮ್‌ನ ತರ್ಕ ಎಂದೂ ಹೆಸರಾದ ಅರಿಸ್ಟಾಟಲನ ತತ್ತ್ವದ ತರ್ಕ, ಪ್ರಮೇಯಾತ್ಮಕ ತರ್ಕ, ವಿಶೇಷಣ ತರ್ಕ, ಹಾಗೂ ಪ್ರಕಾರದ ತರ್ಕಗಳನ್ನು ಒಳಗೊಳ್ಳುತ್ತವೆ.
ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಅನುಗಮನ ಎಂಬುದು ತೀರ್ಮಾನಿಸುವುದರ ಒಂದು ಸ್ವರೂಪವಾಗಿದ್ದು, ಹಿಂದಿನ ವೀಕ್ಷಣೆಯನ್ನು ಆಧರಿಸಿ ವೀಕ್ಷಿಸಲ್ಪಡದ ವಸ್ತುಗಳು ಅಥವಾ ಬಗೆಗಳ ಕುರಿತಾಗಿ ನಿರ್ದಿಷ್ಟವಾಗಿ ಅಥವಾ ಸಾಮಾನ್ಯವಾಗಿ ಅವು ಪ್ರತಿಪಾದನೆಗಳನ್ನು ರೂಪಿಸುತ್ತವೆ. ಹಿಂದಿನ ವೀಕ್ಷಣೆಗಳು ಅಥವಾ ಅನುಭವಗಳ ಆಧಾರದ ಮೇಲೆ, ವಸ್ತುಗಳು ಅಥವಾ ಬಗೆಗಳಿಗೆ ಲಕ್ಷಣಗಳು ಅಥವಾ ಸಂಬಂಧಗಳನ್ನು ಹೊಣೆಮಾಡಲು ಇದು ಬಳಸಲ್ಪಡುತ್ತದೆ, ಅಥವಾ ಮರುಕಳಿಸುವ ವಿದ್ಯಮಾನದ ಮಾದರಿಗಳ ಸೀಮಿತ ವೀಕ್ಷಣೆಗಳನ್ನು ಆಧರಿಸಿದ ಸಾಮಾನ್ಯ ಹೇಳಿಕೆಗಳು ಅಥವಾ ಕಾನೂನುಗಳನ್ನು ವ್ಯವಸ್ಥಿತವಾಗಿ ನಿರೂಪಿಸಲು ಇದು ಬಳಸಲ್ಪಡುತ್ತದೆ.
ಅನುಮಾನಾತ್ಮಕ ತಾರ್ಕಿಕ ಕ್ರಿಯೆಯೊಂದಿಗೆ ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯು ವೈರುಧ್ಯವನ್ನು ಪ್ರದರ್ಶಿಸುತ್ತದೆ. ಅತ್ಯುತ್ತಮವಾದ, ಅಥವಾ ಅತ್ಯಂತ ಬಲವಾದ ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯ ಪ್ರಕರಣಗಳಲ್ಲಿ ಪ್ರಮೇಯಗಳ ಯಥಾರ್ಥತೆಯು, ತೀರ್ಮಾನದ ಯಥಾರ್ಥತೆಯ ಖಾತರಿ ನೀಡುವುದಿಲ್ಲ ಎಂಬ ನಿಟ್ಟಿನಲ್ಲಿ ಈ ವೈರುಧ್ಯವು ಕಂಡುಬರುತ್ತದೆ. ಅದರ ಬದಲಿಗೆ, ಅನುಗಮನದ ಆಧಾರವುಳ್ಳ ವಾದವೊಂದರ ತೀರ್ಮಾನವು, ಒಂದಷ್ಟು ಮಟ್ಟದ ಸಂಭವನೀಯತೆಯೊಂದಿಗೆ ಅನುಸರಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ, ಅನುಗಮನದ ಆಧಾರವುಳ್ಳ ವಾದವೊಂದರ ತೀರ್ಮಾನವು ಪ್ರಮೇಯಗಳಲ್ಲಿ ಆಗಲೇ ಒಳಗೊಳ್ಳಲ್ಪಟ್ಟಿರುವ ಮಾಹಿತಿಗಿಂತ ಹೆಚ್ಚಿನ ಮಾಹಿತಿಯನ್ನು ಒಳಗೊಳ್ಳುತ್ತದೆ. ಈ ರೀತಿಯಾಗಿ, ತಾರ್ಕಿಕ ಕ್ರಿಯೆಯ ಈ ವಿಧಾನವು ಅರ್ಥವರ್ಧಕವಾಗಿದೆ.
ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯ ಒಂದು ಶಿಷ್ಟ ಉದಾಹರಣೆಯು, ಡೇವಿಡ್ ಹ್ಯೂಮ್ ಎಂಬ ಅನುಭವೈಕವಾದಿಯಿಂದ ನೀಡಲ್ಪಟ್ಟಿದೆ:
- ಪ್ರಮೇಯ: ಸೂರ್ಯನು ಈಗಿನವರೆಗೂ ಪ್ರತಿ ಮುಂಜಾನೆ ಪೂರ್ವದಲ್ಲಿ ಉದಯಿಸಿದ್ದಾನೆ.
- ತೀರ್ಮಾನ: ಸೂರ್ಯನು ನಾಳೆಯೂ ಸಹ ಪೂರ್ವದಲ್ಲಿ ಉದಯಿಸಲಿದ್ದಾನೆ.
ಸಂಭವಪಕ್ಷನ್ಯಾಯಶೀಲ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಸಂಭವಪಕ್ಷನ್ಯಾಯಶೀಲ ತಾರ್ಕಿಕ ಕ್ರಿಯೆ, ಅಥವಾ ಅತ್ಯುತ್ತಮ ವಿವರಣೆಗಿರುವ ವಾದವು, ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯ ಒಂದು ಸ್ವರೂಪವಾಗಿದೆ. ಏಕೆಂದರೆ, ಸಂಭವಪಕ್ಷನ್ಯಾಯಶೀಲ ವಾದವೊಂದರಲ್ಲಿನ ತೀರ್ಮಾನವು, ತನ್ನ ಪ್ರಮೇಯಗಳಿಂದ ಹಾಗೂ ಒಂದು ರೀತಿಯ ವೀಕ್ಷಿಸಲ್ಪಡದ ಕಾಳಜಿಗಳಿಂದ ಬರುವ ನಿಶ್ಚಿತತೆಯನ್ನು ಅನುಸರಿಸುವುದಿಲ್ಲ. ಹೆಚ್ಚೂ ಕಮ್ಮಿ ವಿವಾದಾಸ್ಪದವಾದ ಊಹನಗಳ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ, ಪರ್ಯಾಯ ವಿವರಣೆಗಳನ್ನು ಸುಳ್ಳೆಂದು ತೋರಿಸಲು ಪ್ರಯತ್ನಿಸುವ ಮೂಲಕ ಅಥವಾ ಪಕ್ಷವಹಿಸಲ್ಪಟ್ಟ ತೀರ್ಮಾನದ ಸಂಭಾವ್ಯತೆಯನ್ನು ತಾರ್ಕಿಕವಾಗಿ ಸಾಧಿಸುವ ಮೂಲಕ, ತಾರ್ಕಿಕ ಕ್ರಿಯೆಯ ಇತರ ಸ್ವರೂಪಗಳಿಂದ ಸಂಭವಪಕ್ಷನ್ಯಾಯವನ್ನು ಪ್ರತ್ಯೇಕಿಸುವ ಪ್ರಯತ್ನವು, ಇತರ ತೀರ್ಮಾನಗಳನ್ನು ಮೀರಿಸಿ ಒಂದು ತೀರ್ಮಾನದ ಪಕ್ಷವಹಿಸುವಲ್ಲಿನ ಒಂದು ಪ್ರಯತ್ನವಾಗಿದೆ. ಉದಾಹರಣೆಗೆ, ಓರ್ವ ರೋಗಿಯು ನಿರ್ದಿಷ್ಟವಾದ ರೋಗಲಕ್ಷಣಗಳನ್ನು ಹೊರಹೊಮ್ಮಿಸಿದಾಗ, ಅಲ್ಲಿ ಬಗೆಬಗೆಯ ಸಂಭವನೀಯ ಕಾರಣಗಳಿರಲು ಸಾಧ್ಯವಿರುತ್ತದೆ, ಆದರೆ ಇವುಗಳ ಪೈಕಿಯ ಒಂದು ಕಾರಣವು ಇತರ ಕಾರಣಗಳಿಗಿಂತ ಹೆಚ್ಚು ಸಂಭವನೀಯವಾಗಿರುವ ಕಾರಣವಾಗಿರುವುದರಿಂದಾಗಿ ಎಲ್ಲವನ್ನು ಮೀರಿಸಿದ ಆದ್ಯತೆಯನ್ನು ಪಡೆಯುತ್ತದೆ.
ಹೋಲಿಕೆ ಸೂಚಿಸುವ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಹೋಲಿಕೆ ಸೂಚಿಸುವ ತಾರ್ಕಿಕ ಕ್ರಿಯೆಯು ನಿರ್ದಿಷ್ಟದಿಂದ ನಿರ್ದಿಷ್ಟದವರೆಗಿನ ತಾರ್ಕಿಕ ಕ್ರಿಯೆಯಾಗಿದೆ. ಇದಕ್ಕೆ ಸಂಬಂಧಿಸಿದ ಉದಾಹರಣೆಯನ್ನು ಕೆಳಗೆ ನೀಡಲಾಗಿದೆ:
- ಪ್ರಮೇಯ 1: ಸಾಕ್ರೆಟಿಸ್ ಮಾನವನಾಗಿದ್ದಾನೆ ಮತ್ತು ಸಾಕ್ರೆಟಿಸ್ ಮರಣಹೊಂದಿದ.
- ಪ್ರಮೇಯ 2: ಪ್ಲೇಟೋ ಮಾನವನಾಗಿದ್ದಾನೆ.
- ತೀರ್ಮಾನ: ಪ್ಲೇಟೋ ಸಾಯಲಿದ್ದಾನೆ.
- ಪ್ರಮೇಯ 2: ಪ್ಲೇಟೋ ಮಾನವನಾಗಿದ್ದಾನೆ.
ಹೋಲಿಕೆ ಸೂಚಿಸುವ ತಾರ್ಕಿಕ ಕ್ರಿಯೆಯನ್ನು ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯ ಒಂದು ಸ್ವರೂಪವಾಗಿ ನೋಡಲು ಸಾಧ್ಯವಿದೆ. ಏಕೆಂದರೆ, ಪ್ರಮೇಯಗಳ ಯಥಾರ್ಥತೆಯು ತೀರ್ಮಾನದ ಯಥಾರ್ಥತೆಯ ಖಾತರಿ ನೀಡುವುದಿಲ್ಲ. ಆದಾಗ್ಯೂ, ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯು ನಿರ್ದಿಷ್ಟದಿಂದ ಸಾರ್ವತ್ರಿಕದವರೆಗಿನ ತಾರ್ಕಿಕ ಕ್ರಿಯೆಯಾಗಿದೆ ಎಂಬುದು ಸಾಂಪ್ರದಾಯಿಕ ದೃಷ್ಟಿಯಾಗಿದೆ, ಹಾಗೂ ತನ್ಮೂಲಕ ಹೋಲಿಕೆ ಸೂಚಿಸುವ ತಾರ್ಕಿಕ ಕ್ರಿಯೆಯು ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಗಿಂತ ಭಿನ್ನವಾಗಿದೆ.[೧೪] ನಿರ್ದಿಷ್ಟದಿಂದ ಸಾರ್ವತ್ರಿಕದವರೆಗಿನ, ಅನುಗಮನದ ಆಧಾರವುಳ್ಳ ತಾರ್ಕಿಕ ಕ್ರಿಯೆಯ ಒಂದು ಉದಾಹರಣೆಯು ಈ ಕೆಳಗಿನಂತಿರುತ್ತದೆ:
- ಪ್ರಮೇಯ 1: ಸಾಕ್ರೆಟಿಸ್ ಮಾನವನಾಗಿದ್ದಾನೆ ಮತ್ತು ಸಾಕ್ರೆಟಿಸ್ ಮರಣಹೊಂದಿದ.
- ಪ್ರಮೇಯ 2: ಪ್ಲೇಟೋ ಮಾನವನಾಗಿದ್ದಾನೆ ಮತ್ತು ಪ್ಲೇಟೋ ಮರಣಹೊಂದಿದ.
- ಪ್ರಮೇಯ 3: ಅರಿಸ್ಟಾಟಲ್ ಮಾನವನಾಗಿದ್ದಾನೆ ಮತ್ತು ಅರಿಸ್ಟಾಟಲ್ ಮರಣಹೊಂದಿದ.
- ತೀರ್ಮಾನ: ಎಲ್ಲಾ ಮಾನವರು ಸಾಯುತ್ತಾರೆ.
- ಪ್ರಮೇಯ 3: ಅರಿಸ್ಟಾಟಲ್ ಮಾನವನಾಗಿದ್ದಾನೆ ಮತ್ತು ಅರಿಸ್ಟಾಟಲ್ ಮರಣಹೊಂದಿದ.
- ಪ್ರಮೇಯ 2: ಪ್ಲೇಟೋ ಮಾನವನಾಗಿದ್ದಾನೆ ಮತ್ತು ಪ್ಲೇಟೋ ಮರಣಹೊಂದಿದ.
ಅನುಮಾನಾತ್ಮಕ, ಅನುಗಮನದ ಆಧಾರವುಳ್ಳ, ಮತ್ತು ಸಂಭವಪಕ್ಷನ್ಯಾಯಶೀಲ ತಾರ್ಕಿಕ ಕ್ರಿಯೆಗಳೆಲ್ಲವೂ, ಹೋಲಿಕೆ ಸೂಚಿಸುವ ತಾರ್ಕಿಕ ಕ್ರಿಯೆಯ ಒಂದು ತಳಹದಿಯನ್ನು ಆಧರಿಸಿವೆ ಎಂಬುದಾಗಿ ವಾದಮಾಡುತ್ತಾ ಬರಲಾಗಿದೆ.[೧೫]
ತರ್ಕಬದ್ಧವಲ್ಲದ ತಾರ್ಕಿಕ ಕ್ರಿಯೆ
[ಬದಲಾಯಿಸಿ]ವಾದಗಳಲ್ಲಿನ ದೋಷಪೂರಿತ ತಾರ್ಕಿಕ ಕ್ರಿಯೆಯು ತರ್ಕಬದ್ಧವಲ್ಲದ ತಾರ್ಕಿಕ ಕ್ರಿಯೆ ಎಂದು ಕರೆಯಲ್ಪಡುತ್ತದೆ. ವಾದಗಳೊಳಗಿನ ತಾರ್ಕಿಕ ಕ್ರಿಯೆಯು, ಒಂದು ಔಪಚಾರಿಕ ತರ್ಕಾಭಾಸ ಅಥವಾ ಒಂದು ಅನೌಪಚಾರಿಕ ತರ್ಕಾಭಾಸವನ್ನು ತಾನು ಉಂಟುಮಾಡುವ ಕಾರಣದಿಂದಾಗಿ, ಕೆಟ್ಟದಾಗಿರಲು ಸಾಧ್ಯವಿದೆ.
ಔಪಚಾರಿಕ ತರ್ಕಾಭಾಸಗಳು
[ಬದಲಾಯಿಸಿ]ವಾದದ ಸ್ವರೂಪ, ಅಥವಾ ರಚನೆಯೊಂದಿಗೆ ಒಂದು ಸಮಸ್ಯೆ ಕಂಡುಬಂದಾಗ, ಔಪಚಾರಿಕ ತರ್ಕಾಭಾಸಗಳು ಸಂಭವಿಸುತ್ತವೆ. ವಾದದ ಸ್ವರೂಪ ಕ್ಕೆ ಇರುವ ಈ ಕೊಂಡಿಗೆ "ಔಪಚಾರಿಕ" ಎಂಬ ಪದವು ಉಲ್ಲೇಖಿಸಲ್ಪಡುತ್ತದೆ. ಒಂದು ಔಪಚಾರಿಕ ತರ್ಕಾಭಾಸವನ್ನು ಒಳಗೊಳ್ಳುವ ವಾದವೊಂದು ಯಾವಾಗಲೂ ನಿಷ್ಪ್ರಮಾಣಕವಾಗಿರುತ್ತದೆ. ಉದಾಹರಣೆಗೆ, ಈ ಕೆಳಗಿನ ವಾದವನ್ನು ಪರಿಗಣಿಸಿ:
- ಒಂದು ವೇಳೆ, ಒಂದು ಪಾನೀಯವು ಕುದಿಯುವ ನೀರಿನಿಂದ ಮಾಡಲ್ಪಟ್ಟರೆ, ಅದು ಬಿಸಿಯಾಗಿರುತ್ತದೆ.
- ಈ ಪಾನೀಯವು ಕುದಿಯುವ ನೀರಿನಿಂದ ಮಾಡಲ್ಪಡಲಿಲ್ಲ.
- ಈ ಪಾನೀಯವು ಬಿಸಿಯಾಗಿಲ್ಲ.
ಈ ವಾದದಲ್ಲಿನ ತಾರ್ಕಿಕ ಕ್ರಿಯೆಯು ಕೆಟ್ಟದಾಗಿದೆ. ಏಕೆಂದರೆ, ಸಂಭಾವನಾ ಸೂಚಕ ವಾಕ್ಯದ ("ಒಂದು ವೇಳೆ..., ಆಗ..." ಹೇಳಿಕೆ) ಪೂರ್ವಗಾಮಿ ವಾಕ್ಯಭಾಗವು (ಮೊದಲ ಭಾಗ), ನಿಜವಾಗಿರುವ ಸಂಭಾವನಾ ಸೂಚಕ ವಾಕ್ಯದ ಅನುಗತ ಭಾಗವು (ದ್ವಿತೀಯಾರ್ಧ) ಇಲ್ಲದೆಯೇ ಸುಳ್ಳಾಗಿರಲು ಸಾಧ್ಯವಿದೆ. ಈ ಉದಾಹರಣೆಯಲ್ಲಿ, ಪಾನೀಯವನ್ನು ಕುದಿಯುವ ಹಾಲಿನಿಂದ ಮಾಡಬಹುದಾಗಿತ್ತು, ಅಥವಾ ಮೈಕ್ರೋವೇವ್‌ನಲ್ಲಿ ಬಿಸಿಮಾಡಬಹುದಾಗಿತ್ತು, ಮತ್ತು 2ನೇ ಹೇಳಿಕೆಯ ಯಥಾರ್ಥತೆಯ ಹೊರತಾಗಿಯೂ ಬಿಸಿಯಾಗಿರಬಹುದಾಗಿದೆ. ಈ ನಿರ್ದಿಷ್ಟ ಔಪಚಾರಿಕ ತರ್ಕಾಭಾಸವು ಪೂರ್ವಗಾಮಿ ವಾಕ್ಯಭಾಗದ ನಿರಾಕರಿಸುವಿಕೆ ಎಂದು ಕರೆಯಲ್ಪಡುತ್ತದೆ.
ಅನೌಪಚಾರಿಕ ತರ್ಕಾಭಾಸಗಳು
[ಬದಲಾಯಿಸಿ]ಒಂದು ಅನೌಪಚಾರಿಕ ತರ್ಕಾಭಾಸವು ತಾರ್ಕಿಕ ಕ್ರಿಯೆಯಲ್ಲಿನ ಒಂದು ದೋಷವಾಗಿದ್ದು, ವಾದದ ಕೇವಲ ಸ್ವರೂಪ-ರಚನೆ ಯೊಂದಿಗಿಂತ ಹೆಚ್ಚಾಗಿ, ಹೂರಣ ದೊಂದಿಗೆ ಇರುವ ಒಂದು ಸಮಸ್ಯೆಯ ಕಾರಣದಿಂದ ಅದು ಸಂಭವಿಸುತ್ತದೆ. ಒಂದು ಅನೌಪಚಾರಿಕ ತರ್ಕಾಭಾಸವನ್ನು ಎಸಗುವ ತಾರ್ಕಿಕ ಕ್ರಿಯೆಯು ನಿಷ್ಪ್ರಮಾಣಕವಾಗಿರುವ, ಅಂದರೆ, ಒಂದು ಔಪಚಾರಿಕ ತರ್ಕಾಭಾಸವನ್ನು ಒಳಗೊಳ್ಳುವ ವಾದವೊಂದರಲ್ಲಿ ಅನೇಕಬಾರಿ ಸಂಭವಿಸುತ್ತದೆ. ಒಂದು ದಾರಿ ತಪ್ಪಿಸುವ ವಾದವು ಇಂಥ ತಾರ್ಕಿಕ ಕ್ರಿಯೆಯ ಒಂದು ಉದಾಹರಣೆಯಾಗಿದೆ.
ವಾದವೊಂದು ಕ್ರಮಬದ್ಧವಾಗಿರಲು ಸಾಧ್ಯವಿದೆ, ಅಂದರೆ, ಯಾವುದೇ ಔಪಚಾರಿಕ ತಾರ್ಕಿಕ ಕ್ರಿಯೆ ತರ್ಕಾಭಾಸಗಳನ್ನು ಒಳಗೊಳ್ಳದಿದ್ದಾಗಲೂ ಸಹ ಒಂದು ಅನೌಪಚಾರಿಕ ತರ್ಕಾಭಾಸವನ್ನು ಅದು ಒಳಗೊಂಡಿರಲು ಸಾಧ್ಯವಿದೆ. ಆತ್ಮಾಶ್ರಯ ದೋಷವನ್ನು ಉಂಟುಮಾಡುವಿಕೆ ಎಂದೂ ಹೆಸರಾಗಿರುವ ಚಕ್ರಕ ದೋಷದ ತಾರ್ಕಿಕ ಕ್ರಿಯೆಯನ್ನು ಒಂದು ವಾದವು ಒಳಗೊಂಡಾಗ ಇದರ ಅತ್ಯಂತ ನಿಚ್ಚಳವಾದ ಉದಾಹರಣೆಗಳು ಸಂಭವಿಸುತ್ತವೆ.
ಮನೋವಿಜ್ಞಾನ
[ಬದಲಾಯಿಸಿ]ತಾರ್ಕಿಕ ಕ್ರಿಯೆಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆಯನ್ನು, ಮನೋವಿಜ್ಞಾನ ಹಾಗೂ ಅರಿವಿನ ವಿಜ್ಞಾನದ ಕ್ಷೇತ್ರಗಳೊಳಗೆ ಕೈಗೊಳ್ಳಲಾಗುತ್ತದೆ. ಹಲವಾರು ವಿಭಿನ್ನ ಸಂದರ್ಭಗಳಲ್ಲಿ ತರ್ಕಾಧಾರಿತ ಅಥವಾ ವಿವೇಚನಾಶೀಲ ಆಲೋಚನೆಯನ್ನು ಕೈಗೊಳ್ಳಲು ಜನರು ಸಮರ್ಥರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ಮನೋವಿಜ್ಞಾನಿಗಳು ಪ್ರಯತ್ನಿಸುತ್ತಾರೆ.
ಮಾನವ ತಾರ್ಕಿಕ ಕ್ರಿಯೆಯ ಕುರಿತಾದ ನಡವಳಿಕೆಯ ಪ್ರಯೋಗಗಳು
[ಬದಲಾಯಿಸಿ]ಪ್ರಾಯೋಗಿಕ ಅರಿವಿನ ಮನೋವಿಜ್ಞಾನಿಗಳು ತಾರ್ಕಿಕ ಕ್ರಿಯೆಯ ನಡವಳಿಕೆಯ ಮೇಲೆ ಸಂಶೋಧನೆಯನ್ನು ಕೈಗೊಳ್ಳುತ್ತಾರೆ. ಉದಾಹರಣೆಗೆ, ಇಂಥ ಸಂಶೋಧನೆಯು ಈ ಮುಂದಿನ ಅಂಶಗಳ ಮೇಲೆ ಗಮನ ಹರಿಸಬಹುದು: ಬುದ್ಧಿಮತ್ತೆ ಅಥವಾ IQ ಪರೀಕ್ಷೆಗಳಂಥ ತಾರ್ಕಿಕ ಕ್ರಿಯೆಯ ಪರೀಕ್ಷೆಗಳಲ್ಲಿ ಜನರು ಹೇಗೆ ಕಾರ್ಯಕ್ಷಮತೆಯನ್ನು ಮೆರೆಯುತ್ತಾರೆ, ಅಥವಾ ತರ್ಕಶಾಸ್ತ್ರದಿಂದ ಸಜ್ಜುಗೊಳಿಸಲ್ಪಟ್ಟಿರುವ ಪರಿಪೂರ್ಣ ಮಾದರಿಗಳನ್ನು ಜನರ ತಾರ್ಕಿಕ ಕ್ರಿಯೆಯು ಎಷ್ಟು ಚೆನ್ನಾಗಿ ಹೋಲುತ್ತದೆ ಇತ್ಯಾದಿ (ಉದಾಹರಣೆಗೆ, ನೋಡಿ: ವಾಸನ್ ಪರೀಕ್ಷೆ).[೧೬] ಸಂಭಾವನಾ ಸೂಚಕ ವಾಕ್ಯಗಳಿಂದ ಜನರು ಹೇಗೆ ತೀರ್ಮಾನಗಳನ್ನು ಮಾಡುತ್ತಾರೆ ಎಂಬುದನ್ನು ಪ್ರಯೋಗಗಳು ಪರೀಕ್ಷಿಸುತ್ತವೆ; ಉದಾಹರಣೆಗೆ, ಒಂದು ವೇಳೆ A ನಂತರ B ಎಂದಾದಲ್ಲಿ, ಪರ್ಯಾಯಗಳ ಕುರಿತಾಗಿ, ಉದಾಹರಣೆಗೆ, A ಅಥವಾ ಅದಿಲ್ಲವಾದರೆ B ಎಂಬಂಥ ಪರ್ಯಾಯಗಳ ಕುರಿತಾಗಿ ಅವರು ಹೇಗೆ ತೀರ್ಮಾನಿಸುತ್ತಾರೆ ಎಂಬುದನ್ನು ಈ ಪ್ರಯೋಗಗಳು ಪರೀಕ್ಷಿಸುತ್ತವೆ.[೧೭] ದೈಶಿಕ ಮತ್ತು ಐಹಿಕ ಸಂಬಂಧಗಳ ಕುರಿತಾದ ಕ್ರಮಬದ್ಧ ಕಾರಣಪೂರ್ವಕ ಊಹನಗಳನ್ನು ಜನರು ಮಾಡಬಲ್ಲರೇ ಎಂಬುದನ್ನು ಅವು ಪರೀಕ್ಷಿಸುತ್ತವೆ; ಉದಾಹರಣೆಗೆ, Aಯು Bಯ ಎಡಭಾಗದಲ್ಲಿದೆ , ಅಥವಾ Aಯು Bಯ ನಂತರ ಬರುತ್ತದೆ , ಮತ್ತು ಪರಿಮಾಣಿಸಲ್ಪಟ್ಟ ಪ್ರತಿಪಾದನೆಗಳ ಕುರಿತಾದ ಕುರಿತಾದ ಕ್ರಮಬದ್ಧ ಕಾರಣಪೂರ್ವಕ ಊಹನಗಳನ್ನು ಜನರು ಮಾಡಬಲ್ಲರೇ ಎಂಬುದನ್ನೂ ಸಹ ಅವು ಪರೀಕ್ಷಿಸುತ್ತವೆ; ಉದಾಹರಣೆಗೆ, ಎಲ್ಲಾ Aಗಳೂ Bಗಳಾಗಿವೆ .[೧೮] ವಾಸ್ತವಿಕ ಸನ್ನಿವೇಶಗಳು, ಕಾಲ್ಪನಿಕ ಸಾಧ್ಯತೆಗಳು, ಸಂಭವನೀಯತೆಗಳು, ಮತ್ತು ಪ್ರತಿ-ವಾಸ್ತವಿಕ ಸನ್ನಿವೇಶಗಳ ಕುರಿತಾಗಿ ಜನರು ಹೇಗೆ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಪ್ರಯೋಗಗಳು ವಿಚಾರಣೆ ನಡೆಸುತ್ತವೆ.[೧೯]
ಮಕ್ಕಳ ತಾರ್ಕಿಕ ಕ್ರಿಯೆಯ ವಿಕಾಸಾತ್ಮಕವಾದ ಅಧ್ಯಯನಗಳು
[ಬದಲಾಯಿಸಿ]ಹುಟ್ಟಿನಿಂದ ಪ್ರೌಢವಯಸ್ಸಿನವರೆಗಿನ ತಾರ್ಕಿಕ ಕ್ರಿಯೆಯ ಬೆಳವಣಿಗೆಯ ಕುರಿತು ವಿಕಾಸಾತ್ಮಕವಾದ ಮನೋವಿಜ್ಞಾನಿಗಳು ವಿಚಾರಣೆ ನಡೆಸುತ್ತಾರೆ. ಪಿಯಗೆಟ್ ಎಂಬಾತನ ಅರಿವಿನ ಬೆಳವಣಿಗೆಯ ಸಿದ್ಧಾಂತವು ತಾರ್ಕಿಕ ಕ್ರಿಯೆಯ ಬೆಳವಣಿಗೆಯ ಮೊದಲ ಸಂಪೂರ್ಣ ಸಿದ್ಧಾಂತವಾಗಿತ್ತು. ತರುವಾಯದಲ್ಲಿ, ಅರಿವಿನ ಬೆಳವಣಿಗೆಯ ಕುರಿತಾದ ಪಿಯಗೆಟ್‌ನ ನವ-ಸಿದ್ಧಾಂತಗಳು ಸೇರಿದಂತೆ ಹಲವಾರು ಪರ್ಯಾಯ ಸಿದ್ಧಾಂತಗಳು ಪ್ರತಿಪಾದಿಸಲ್ಪಟ್ಟವು.[೨೦]
ತಾರ್ಕಿಕ ಕ್ರಿಯೆಯ ನರವಿಜ್ಞಾನ
[ಬದಲಾಯಿಸಿ]ಮಿದುಳಿನ ಜೀವವಿಜ್ಞಾನದ ಕಾರ್ಯಚಟುವಟಿಕೆಯು ನರಶರೀರ ಶಾಸ್ತ್ರಜ್ಞರು ಹಾಗೂ ನರಮನೋವಿಜ್ಞಾನಿಗಳಿಂದ ಅಧ್ಯಯನಕ್ಕೆ ಒಳಗಾಗಿದೆ. ಎಂದಿನ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಮಿದುಳುಗಳ, ಮತ್ತು ಹಾನಿಗೊಳಗಾದ ಅಥವಾ ಅನ್ಯಥಾ ಅಸಾಮಾನ್ಯವಾಗಿರುವ ಮಿದುಳುಗಳ ರಚನೆ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಮಾಡುವ ಸಂಶೋಧನೆಯನ್ನು ಈ ಕ್ಷೇತ್ರದಲ್ಲಿನ ಸಂಶೋಧನೆಯು ಒಳಗೊಳ್ಳುತ್ತದೆ. ತಾರ್ಕಿಕ ಕ್ರಿಯೆಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಳ್ಳುವುದರ ಜೊತೆಗೆ, ಕೆಲವೊಂದು ಮನೋವಿಜ್ಞಾನಿಗಳು, ಉದಾಹರಣೆಗೆ ಪ್ರಾಯೋಗಿಕ ಮನೋವಿಜ್ಞಾನಿಗಳು ಹಾಗೂ ಮನೋರೋಗ ವೈದ್ಯರು, ಜನರ ತಾರ್ಕಿಕ ಕ್ರಿಯೆಯ ಸ್ವಭಾವಗಳು ಅವರಿಗೆ ಪ್ರಯೋಜನಕರವಾಗಿರದ ಸಂದರ್ಭಗಳಲ್ಲಿ ಅವನ್ನು ಮಾರ್ಪಡಿಸುವ ಕಡೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಅರಿವಿನ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ
[ಬದಲಾಯಿಸಿ]ಅರಿವಿನ ವಿಜ್ಞಾನವು ತಾರ್ಕಿಕ ಕ್ರಿಯೆಯನ್ನು ದತ್ತಾಂಶ ಸಂಸ್ಕರಣೆಯೊಂದಕ್ಕೆ ಅದು ಹೊಂದಿರುವ ಸಾದೃಶ್ಯದ ಮೂಲಕ ನೋಡುತ್ತದೆ. ಇಲ್ಲಿ ತಾರ್ಕಿಕ ಕ್ರಿಯೆಯ ವೀಕ್ಷಿಸಲ್ಪಟ್ಟ ಲಕ್ಷಣಗಳ ನಡುವಿನ ಸಂಬಂಧಗಳು ಹಲವಾರು ಮಾದರಿಗಳಲ್ಲಿ ಬಳಸಲ್ಪಟ್ಟು, ವಿಭಿನ್ನ ಸಂದರ್ಭಗಳಲ್ಲಿನ ಸ್ಪಷ್ಟವಾದ, ತಾರ್ಕಿಕವಾಗಿ ಸರಿಯಾದ ತೀರ್ಮಾನಗಳು ಹೊರಹೊಮ್ಮಲು ಕಾರಣವಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] ತಾರ್ಕಿಕ ಕ್ರಿಯೆಯ ಸಂಕೀರ್ಣತೆ ಹಾಗೂ ಪರಿಣಾಮಕಾರಿತ್ವವು ಅರಿವಿನ ಬುದ್ಧಿಮತ್ತೆಯ ನಿರ್ಣಾಯಕ ಸೂಚಕವಾಗಿ ಪರಿಗಣಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು] ಆದ್ದರಿಂದ ಇದು ಅರಿವಿನ ನಿರ್ಧಾರ-ತಳೆಯುವಿಕೆಯ ಅನಿವಾರ್ಯ ಘಟಕವಾಗಿದೆ.
ಕೃತಕ ಬುದ್ಧಿಮತ್ತೆಯಲ್ಲಿ, ದಾರ್ಶನಿಕರು ಮತ್ತು ವಿಜ್ಞಾನಿಗಳು ತಾರ್ಕಿಕ ಕ್ರಿಯೆ ಹಾಗೂ ಯಂತ್ರಗಳನ್ನು ಅಧ್ಯಯನ ಮಾಡುತ್ತಾರೆ, ಮತ್ತು ತರ್ಕಿಸುವುದಕ್ಕೆ ಅಥವಾ ಆಲೋಚಿಸುವುದಕ್ಕೆ ಸಂಬಂಧಿಸಿದಂತೆ ಯಂತ್ರವೊಂದನ್ನು ಸೂಕ್ತವಾಗಿ ಪರಿಗಣಿಸಬಹುದೇ, ಮತ್ತು ಇದರ ಕುರಿತಾಗಿ ತಾರ್ಕಿಕ ಕ್ರಿಯೆಗೆ ಸಂಬಂಧಿಸಿದ ಏನನ್ನು ಒಂದು ಪರೀಕ್ಷೆಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳಬಹುದು ಎಂಬಂಥ ಪ್ರಶ್ನೆಗಳನ್ನು ಅವರು ಪರಿಗಣಿಸುತ್ತಾರೆ. (ಉದಾಹರಣೆಗೆ ನೋಡಿ: ಟ್ಯೂರಿಂಗ್ ಪರೀಕ್ಷೆ.)[೨೧]
ಕಾನೂನುಬದ್ಧ ತಾರ್ಕಿಕ ಕ್ರಿಯೆ
[ಬದಲಾಯಿಸಿ]ಅಸ್ತಿತ್ವದಲ್ಲಿರುವ ಕಾನೂನುಗಳ ಸ್ವರೂಪವನ್ನು ಬಿಂಬಿಸುವಾಗ ಅಥವಾ ಕಾನೂನುಗಳು ಹಾಗೂ ನಿರ್ದಿಷ್ಟ ನ್ಯಾಯಾಲಯ ಪ್ರಕರಣಗಳ ನಡುವಿನ ಸಂಬಂಧದ ಕುರಿತಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ, ಕಾನೂನುಬದ್ಧ ತಾರ್ಕಿಕ ಕ್ರಿಯೆಯನ್ನು ಬಳಸಲಾಗುತ್ತದೆ.
ಥಾರ್ನೆ ಮೆಕ್‌ಕಾರ್ಟಿ ಎಂಬಾತ ಕಿರು ಯೋಜಕವನ್ನು (ಮೈಕ್ರೋ ಪ್ಲಾನರ್) ಬಳಸಿಕೊಳ್ಳುವ ಮೂಲಕ, ತೆರಿಗೆ ವಿಧಿಸುವಿಕೆಗೆ ಸಂಬಂಧಿಸಿದ ಕಾನೂನುಬದ್ಧ ತಾರ್ಕಿಕ ಕ್ರಿಯೆಯ ಯಾಂತ್ರೀಕರಣದಲ್ಲಿನ ಆರಂಭಿಕ ಪಥನಿರ್ಮಾಣದ ಕಾರ್ಯವನ್ನು ಮಾಡಿದ.[೨೨] ಕಾನೂನುಬದ್ಧ ತಾರ್ಕಿಕ ಕ್ರಿಯೆಯ ಔಪಚಾರಿಕಗೊಳಿಸುವಿಕೆ ಹಾಗೂ ಯಾಂತ್ರೀಕರಣದ ಕುರಿತಾದ ಇತ್ತೀಚಿನ ಕೆಲಸವನ್ನು, ಕೃತಕ ಬುದ್ಧಿಮತ್ತೆ ಹಾಗೂ ಕಾನೂನಿನ ಕುರಿತಾಗಿ (ತೀರಾ ಇತ್ತೀಚಿಗೆ ಸ್ಟಾನ್‌ಫೋರ್ಡ್‌ನಲ್ಲಿ 2007ರ ಜೂನ್‌ನಲ್ಲಿ Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.) ನಡೆದ ಅಂತರರಾಷ್ಟ್ರೀಯ ಸಮಾವೇಶಗಳ ನಡಾವಳಿಗಳಲ್ಲಿ ಕಾಣಬಹುದು.
ಟಿಪ್ಪಣಿಗಳು
[ಬದಲಾಯಿಸಿ]- ↑ ಕಿರ್ವಿನ್, ಕ್ರಿಸ್ಟೋಫರ್. 1995. 'ರೀಸನಿಂಗ್'. ಟೆಡ್ ಹೊಂಡೆರಿಕ್ (ಸಂಪಾದಿತ), ದಿ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಫಿಲಾಸಫಿ ಯಲ್ಲಿರುವಂಥದು. ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್: ಪುಟ 748
- ↑ H. F. J. ಹೋರ್ಸ್ಟ್‌ಮನ್‌ಷಾಫ್, ಮಾರ್ಟೆನ್ ಸ್ಟಾಲ್, ಕಾರ್ನೆಲಿಸ್ ಟಿಲ್‌ಬರ್ಗ್ (2004), ಮ್ಯಾಜಿಕ್ ಅಂಡ್ ರ್ಯಾಷನಾಲಿಟಿ ಇನ್ ಏನ್ಷಿಯಂಟ್ ನಿಯರ್ ಈಸ್ಟರ್ನ್ ಅಂಡ್ ಗ್ರೇಸಿಯೋ-ರೋಮನ್ ಮೆಡಿಸಿನ್, ಪುಟ 99, ಬ್ರಿಲ್ ಪಬ್ಲಿಷರ್ಸ್, ISBN 9004136665.
- ↑ D. ಬ್ರೌನ್ (2000), ಮೆಸೊಪಟಾಮಿಯನ್ ಪ್ಲಾನೆಟರಿ ಅಸ್ರಾನಮಿ-ಅಸ್ಟ್ರಾಲಜಿ , ಸ್ಟಿಕ್ಸ್ ಪಬ್ಲಿಕೇಷನ್ಸ್, ISBN 9056930362.
- ↑ ಜಾರ್ಜಿಯೋ ಬುಸೆಲ್ಲಾಟಿ (1981), "ವಿಸ್ಡಮ್ ಅಂಡ್ ನಾಟ್: ದಿ ಕೇಸ್ ಆಫ್ ಮೆಸೊಪಟಾಮಿಯಾ", ಜರ್ನಲ್ ಆಫ್ ದಿ ಅಮೆರಿಕನ್ ಓರಿಯೆಂಟಲ್ ಸೊಸೈಟಿ 101 (1), ಪುಟ 35-47 [43].
- ↑ ೫.೦ ೫.೧ Furley, David (1973). "Rationality among the Greeks and Romans". In Wiener, Philip P (ed.). Dictionary of the History of Ideas. Scribner. ISBN 0684132931. Retrieved 2009-12-02.
- ↑ ಅರಿಸ್ಟಾಟಲ್. 350 BC ರಾಬಿನ್ ಸ್ಮಿತ್ (ಅನುವಾದ). 1989. ಪ್ರಯರ್ ಅನಲಿಟಿಕ್ಸ್ . ಇಂಡಿಯಾನಾಪೊಲಿಸ್, ಇಂಡಿಯಾನಾ: ಹ್ಯಾಕೆಟ್ ಪಬ್ಲಿಷಿಂಗ್.
- ↑ ಅರಿಸ್ಟಾಟಲ್. 350 BC ರಾಬಿನ್ ಸ್ಮಿತ್ (ಅನುವಾದ). 1989. ಪ್ರಯರ್ ಅನಲಿಟಿಕ್ಸ್ . ಇಂಡಿಯಾನಾಪೊಲಿಸ್, ಇಂಡಿಯಾನಾ: ಹ್ಯಾಕೆಟ್ ಪಬ್ಲಿಷಿಂಗ್: A2:7
- ↑ ಲೆನ್ ಎವಾನ್ ಗುಡ್‌ಮನ್ (2003), ಇಸ್ಲಾಮಿಕ್ ಹ್ಯೂಮನಿಸಂ , ಪುಟ 155, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ISBN 0195135806.
- ↑ ಹಿಸ್ಟರಿ ಆಫ್ ಲಾಜಿಕ್: ಅರೇಬಿಕ್ ಲಾಜಿಕ್, ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ .
- ↑ ಡಾ. ಲೊಟ್‌ಫೊಲಾಹ್ ನಬಾವಿ, ಸೋಹ್ರೆವರ್ದಿ'ಸ್ ಥಿಯರಿ ಆಫ್ ಡಿಸಿಸಿವ್ ನೆಸೆಸಿಟಿ ಅಂಡ್ ಕ್ರಿಪ್ಕೆ'ಸ್ QSS ಸಿಸ್ಟಮ್ Archived 2008-01-26 ವೇಬ್ಯಾಕ್ ಮೆಷಿನ್ ನಲ್ಲಿ., ಜರ್ನಲ್ ಆಫ್ ಫಾಕಲ್ಟಿ ಆಫ್ ಲಿಟರೇಚರ್ ಅಂಡ್ ಹ್ಯೂಮನ್ ಸೈನ್ಸಸ್ .
- ↑ ಸೈನ್ಸ್ ಅಂಡ್ ಮುಸ್ಲಿಂ ಸೈಂಟಿಸ್ಟ್ಸ್ Archived 2007-10-20 ವೇಬ್ಯಾಕ್ ಮೆಷಿನ್ ನಲ್ಲಿ., ಇಸ್ಲಾಂ ಹೆರಾಲ್ಡ್.
- ↑ ವಯೇಲ್ B. ಹಲ್ಲಾಕ್ (1993), ಇಬ್ನ್ ತಯ್‌ಮಿಯ್ಯಾ ಎಗೇನ್ಸ್ಟ್ ದಿ ಗ್ರೀಕ್ ಲಾಜಿಷಿಯನ್ಸ್ , ಪುಟ 48. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ISBN 0198240430.
- ↑ ಜೆಫ್ರಿ, ರಿಚರ್ಡ್. 1991. ಫಾರ್ಮಲ್ ಲಾಜಿಕ್: ಇಟ್ಸ್ ಸ್ಕೋಪ್ ಅಂಡ್ ಲಿಮಿಟ್ಸ್ , (3ನೇ ಆವೃತ್ತಿ). ನ್ಯೂಯಾರ್ಕ್: ಮೆಕ್‌ಗ್ರಾ-ಹಿಲ್:1.
- ↑ ವಿಕರ್ಸ್, ಜಾನ್, "ದಿ ಪ್ರಾಬ್ಲಮ್ ಆಫ್ ಇಂಡಕ್ಷನ್", ದಿ ಸ್ಟಾನ್‌ಫೋರ್ಡ್ ಎನ್‌ಸೈಕ್ಲೋಪೀಡಿಯಾ ಆಫ್ ಫಿಲಾಸಫಿ, 2009, http://ಪ್ಲೇಟೋ.stanford.edu/entries/ಅನುಗಮನ-problem/
- ↑ ಜಾನ್ F. ಸೋವಾ ಮತ್ತು ಅರುಣ್ K. ಮಜುಂದಾರ್, ಅನಲಾಜಿಕಲ್ ರೀಸನಿಂಗ್; ಡೆ ಮೂರ್, ಲೆಕ್ಸ್, ಗ್ಯಾಂಟರ್, ಸಂಪಾದಿತ ಕಾನ್ಸೆಪ್ಚುಯಲ್ ಸ್ಟ್ರಕ್ಚರ್ಸ್ ಫಾರ್ ನಾಲೆಜ್ ಕ್ರಿಯೇಷನ್ ಅಂಡ್ ಕಮ್ಯುನಿಕೇಷನ್‌ನಲ್ಲಿರುವುದು, ಪ್ರೊಸೀಡಿಂಗ್ಸ್ ಆಫ್ ICCS 2003, LNAI 2746, ಸ್ಪ್ರಿಂಗರ್-ವೆರ್ಲಾಗ್, ಬರ್ಲಿನ್, 2003, ಪುಟಗಳು 16-36. http://www.jfsowa.com/pubs/analog.htm
- ↑ ಮಾಂಕ್ಟೆಲೊ, K.I. 1999. ರೀಸನಿಂಗ್ ಅಂಡ್ ಥಿಂಕಿಂಗ್ (ಕಾಗ್ನಿಟಿವ್ ಸೈಕಾಲಜಿ: ಮಾಡ್ಯುಲರ್ ಕೋರ್ಸ್.) . ಹೋವ್, ಸಸೆಕ್ಸ್:ಸೈಕಾಲಜಿ ಪ್ರೆಸ್
- ↑ ಜಾನ್‌ಸನ್-ಲೇರ್ಡ್, P.N. & ಬೈರ್ನ್, R.M.J. (1991). ಡಿಡಕ್ಷನ್ . ಹಿಲ್ಸ್‌ಡೇಲ್: ಎರ್ಲ್‌ಬೌಮ್
- ↑ ಜಾನ್‌ಸನ್-ಲೇರ್ಡ್, P.N. (2006). ಹೌ ವಿ ರೀಸನ್ . ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್
- ↑ ಬೈರ್ನ್, R.M.J. (2005). ದಿ ರ್ಯಾಷನಲ್ ಇಮ್ಯಾಜಿನೇಷನ್: ಹೌ ಪೀಪಲ್ ಕ್ರಿಯೇಟ್ ಕೌಂಟರ್‌ಫ್ಯಾಕ್ಚುಯಲ್ ಆಲ್ಟರ್ನೇಟಿವ್ಸ್ ಟು ರಿಯಾಲಿಟಿ. ಕೇಂಬ್ರಿಜ್, MA: MIT ಪ್ರೆಸ್
- ↑ ಡೆಮೆಟ್ರಿಯೌ, A. (1998). ಕಾಗ್ನಿಟಿವ್ ಡೆವಲಪ್‌ಮೆಂಟ್; A. ಡೆಮೆಟ್ರಿಯೌ, W. ಡಾಯ್ಸ್, K.F.M. ವ್ಯಾನ್ ಲೀಷೌಟ್ (ಸಂಪಾದಿತ), ಲೈಫ್-ಸ್ಪ್ಯಾನ್ ಡೆವಲಪ್‌ಮೆಂಟಲ್ ಸೈಕಾಲಜಿಯಲ್ಲಿರುವಂಥದ್ದು (ಪುಟಗಳು 179-269). ಲಂಡನ್: ವೈಲೆ.
- ↑ ಕೋಪ್‌ಲ್ಯಾಂಡ್, ಜ್ಯಾಕ್. 1993. ಆರ್ಟಿಫಿಷಿಯಲ್ ಇಂಟಲಿಜೆನ್ಸ್: ಎ ಫಿಲಸಾಫಿಕಲ್ ಇಂಟ್ರಡಕ್ಷನ್ . ಆಕ್ಸ್‌ಫರ್ಡ್: ಬ್ಲ್ಯಾಕ್‌ವೆಲ್.
- ↑ ಮೆಕ್‌ಕಾರ್ಟಿ, L. ಥಾರ್ನೆ. 1977. 'ರಿಫ್ಲೆಕ್ಷನ್ಸ್ ಆನ್ TAXMAN: ಆನ್ ಎಕ್ಸ್‌ಪರಿಮೆಂಟ್ ಆನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಲೀಗಲ್ ರೀಸನಿಂಗ್'. ಹಾರ್ವರ್ಡ್ ಲಾ ರಿವ್ಯೂ . ಸಂಪುಟ 90, ಸಂಖ್ಯೆ 5.
ಆಕರಗಳು
[ಬದಲಾಯಿಸಿ]- ಕೋಪ್‌ಲ್ಯಾಂಡ್, ಜ್ಯಾಕ್. 1993. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್: ಎ ಫಿಲಾಸಫಿಕಲ್ ಇಂಟ್ರಡಕ್ಷನ್ . ಆಕ್ಸ್‌ಫರ್ಡ್: ಬ್ಲ್ಯಾಕ್‌ವೆಲ್.
- Furley, David (1973). "Rationality among the Greeks and Romans". In Wiener, Philip P (ed.). Dictionary of the History of Ideas. Scribner. ISBN 0684132931. Retrieved 2009-12-02.
- ಜೆಫ್ರಿ, ರಿಚರ್ಡ್. 1991. ಫಾರ್ಮಲ್ ಲಾಜಿಕ್: ಇಟ್ಸ್ ಸ್ಕೋಪ್ ಅಂಡ್ ಲಿಮಿಟ್ಸ್ , (3ನೇ ಆವೃತ್ತಿ). ನ್ಯೂಯಾರ್ಕ್: ಮೆಕ್‌ಗ್ರಾ-ಹಿಲ್.
- ಕಿರ್ವಿನ್, ಕ್ರಿಸ್ಟೋಫರ್. 1995. 'ರೀಸನಿಂಗ್'. ಟೆಡ್ ಹೊಂಡೆರಿಕ್ (ಸಂಪಾದಿತ), ದಿ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಫಿಲಾಸಫಿ ಯಲ್ಲಿರುವಂಥದು. ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.
- ಮಾಂಕ್ಟೆಲೊ, K.I. 1999. ರೀಸನಿಂಗ್ ಅಂಡ್ ಥಿಂಕಿಂಗ್ (ಕಾಗ್ನಿಟಿವ್ ಸೈಕಾಲಜಿ: ಮಾಡ್ಯುಲರ್ ಕೋರ್ಸ್.) . ಹೋವ್, ಸಸೆಕ್ಸ್:ಸೈಕಾಲಜಿ ಪ್ರೆಸ್
- ಮೆಕ್‌ಕಾರ್ಟಿ, L. ಥಾರ್ನೆ. 1977. 'ರಿಫ್ಲೆಕ್ಷನ್ಸ್ ಆನ್ TAXMAN: ಆನ್ ಎಕ್ಸ್‌ಪರಿಮೆಂಟ್ ಆನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಲೀಗಲ್ ರೀಸನಿಂಗ್'. ಹಾರ್ವರ್ಡ್ ಲಾ ರಿವ್ಯೂ . ಸಂಪುಟ 90, ಸಂಖ್ಯೆ 5.
- ಸ್ಕ್ರಿವೆನ್, ಮೈಕೇಲ್. 1976. ರೀಸನಿಂಗ್ . ನ್ಯೂಯಾರ್ಕ್: ಮೆಕ್‌ಗ್ರಾ-ಹಿಲ್. ISBN 0-07-055882-5
ಇವನ್ನೂ ನೋಡಿ
[ಬದಲಾಯಿಸಿ]- ಧರ್ಮಸೂಕ್ಷ್ಮ ವಿವೇಚನೆ
- ಮುಚ್ಚುಮರೆಯಿಲ್ಲದ ತರ್ಕವಿಧಾನ
- ನಿರ್ಣಾಯಕ ಚಿಂತನೆ
- ಅನೂರ್ಜಿತಗೊಳಿಸಬಹುದಾದ ತಾರ್ಕಿಕ ಕ್ರಿಯೆ
- ಪುರಾವೆ
- ತೀರ್ಮಾನಿಸುವುದು
- ತರ್ಕಶಾಸ್ತ್ರ
- ತಾರ್ಕಿಕ ಆಭಾಸ
- ತಾರ್ಕಿಕ ತರ್ಕಶಕ್ತಿ
- ಮಿಲ್ನ ವಿಧಾನಗಳು
- ಕಾರ್ಯಸಾಧ್ಯ ಕಾರಣ
- ಕಾರಣ
- ಅಂಗೀಕಾರಕ್ಕೆ ಪ್ರಾಧಾನ್ಯತೆಯಿರುವ ತೀರ್ಮಾನ
- ಅನುಗಮನ
- ಸೈದ್ಧಾಂತಿಕ ಕಾರಣ
- ಆಮೆಯು ಅಕಿಲೀಸ್ಗೆ ಏನು ಹೇಳಿತು
- ರ್ಯಾಸ್ಟಫೇರಿಯನ್ ಪಂಥದ ತಾರ್ಕಿಕ ಕ್ರಿಯೆ ಸಮಾರಂಭ
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Articles with hatnote templates targeting a nonexistent page
- Articles with unsourced statements from July 2007
- ಗ್ರಹಣಶಕ್ತಿ
- ಸಮಸ್ಯೆ ಪರಿಹರಿಸುವಿಕೆ
- ಆಲೋಚನೆ
- ನಿರ್ಣಾಯಕ ಚಿಂತನೆ
- ಕಾರಣಪೂರ್ವಕ ಊಹನ
- ತಾರ್ಕಿಕ ಕ್ರಿಯೆ
- ತರ್ಕಶಾಸ್ತ್ರದಲ್ಲಿನ ಪರಿಕಲ್ಪನೆಗಳು