ವಿಷಯಕ್ಕೆ ಹೋಗು

ನಿರ್ಣಾಯಕ ಚಿಂತನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿರ್ಣಾಯಕ ಚಿಂತನೆ , ಅದರ ವಿಶಾಲವಾದ ಅರ್ಥದಲ್ಲಿ "ಯಾವುದನ್ನು ನಂಬಬೇಕು ಅಥವಾ ಯಾವುದನ್ನು ಮಾಡಬೇಕು ಎಂಬುದಕ್ಕೆ ಸಂಬಂಧಪಟ್ಟ ನಿರ್ಣಾಯಕ ನಿರ್ಧಾರ" ಎಂಬುದಾಗಿ ವರ್ಣಿಸಲ್ಪಟ್ಟಿದೆ.[]

ನಿರ್ಣಾಯಕ ಚಿಂತನೆಯು ಉದ್ದೇಶಗಳನ್ನು ಸ್ಪಷ್ಟೀಕರಿಸುತ್ತದೆ, ಊಹೆಗಳನ್ನು ಪರಿಶೀಲಿಸುತ್ತದೆ, ಆಂತರಿಕ ಮೌಲ್ಯಗಳನ್ನು ಗ್ರಹಿಸುತ್ತದೆ, ಕ್ರಿಯೆಗಳನ್ನು ಪೂರ್ಣಗೊಳಿಸುತ್ತದೆ, ಮತ್ತು ಫಲಿತಾಂಶವನ್ನು ನಿರ್ಣಯಿಸುತ್ತದೆ.

"ನಿರ್ಣಾಯಕ ಚಿಂತನೆ" ಎಂಬ ಅಭಿವ್ಯಕ್ತಿಯಲ್ಲಿ "ನಿರ್ಣಾಯಕ" ಎಂಬ ಶಬ್ದವು ಒಂದು ಸಮಸ್ಯೆಗೆ, ಅಂದರೆ ಒಂದು ಪ್ರಶ್ನೆ ಅಥವಾ ಸಂಬಂಧಪಟ್ಟ ಸಮಸ್ಯೆಗೆ ನೀಡಲ್ಪಟ್ಟ ಮಹತ್ವ ಅಥವಾ ಪ್ರಾಮುಖ್ಯತೆ ಎಂಬ ಅರ್ಥವನ್ನು ನೀಡುತ್ತದೆ. ಈ ವಿಷಯದಲ್ಲಿ "ನಿರ್ಣಾಯಕ" ಎಂಬ ಶಬ್ದವು "ಅಸಮ್ಮತಿ" ಅಥವಾ "ನಕಾರಾತ್ಮಕತೆ" ಎಂಬ ಅರ್ಥವನ್ನು ನೀಡುವುದಿಲ್ಲ. ಇಲ್ಲಿ ನಿರ್ಣಾಯಕ ಚಿಂತನೆಯ ಸಕಾರಾತ್ಮಕ ಮತ್ತು ಉಪಯೋಗಕರ ಬಳಕೆಗಳಿವೆ, ಉದಾಹರಣೆಗೆ ಕ್ಲಿಷ್ಟವಾದ ಒಂದು ವೈಯಕ್ತಿಕ ಸಮಸ್ಯೆಗೆ ಕಾರ್ಯಸಾಧ್ಯವಾದ ಪರಿಹಾರವನ್ನು ಕಂಡುಹಿಡಿಯುವುದು, ಯಾವ ಕ್ರಿಯೆಗಳನ್ನು ಮಾಡಬೇಕು ಎಂಬುದರ ಬಗ್ಗೆ ಒಂದು ಗುಂಪಿನ ಜನರಿಗೆ ವಿವರಿಸುವುದು, ಅಥವ ಊಹೆಗಳನ್ನು ವಿಶ್ಲೇಷಿಸುವುದು ಮತ್ತು ಒಂದು ನೀಡಲ್ಪಟ್ಟ ಊಹೆಯ ಬಗ್ಗೆ ಆತ್ಮವಿಶ್ವಾಸದ ಒಂದು ಯುಕ್ತಾಯುಕ್ತತೆಯ ಮಟ್ಟವನ್ನು ವೈಜ್ಞಾನಿಕವಾಗಿ ಕಂಡುಹಿಡಿಯುವಲ್ಲಿ ಬಳಸಿಕೊಳ್ಳಲ್ಪಟ್ಟ ವಿಧಾನಗಳ ಗುಣಮಟ್ಟವನ್ನು ವಿಶ್ಲೇಷಿಸುವುದು ಇತ್ಯಾದಿ. ಶಕ್ತಿಯುತವಾದ ನಿರ್ಣಾಯಕ ಚಿಂತನೆಯನ್ನು ಬಳಸಿಕೊಂಡು ನಾವು ಒಂದು ವಾದವನ್ನು ಪರಿಶೀಲಿಸಬಹುದು, ಉದಾಹರಣೆಗೆ, ಅದನ್ನು ಆಯ್ಕೆಮಾಡಿಕೊಳ್ಳುವುದು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಬಹುದು ಏಕೆಂದರೆ ಇದು ಸಿಂಧುವಾಗಿರುತ್ತದೆ ಮತ್ತು ನಿಜವಾದ ಆಧಾರವಾಕ್ಯದ ಮೇಲೆ ಆಧಾರವಾಗಿದೆ. ಪ್ರತಿಫಲನದ ಮೆಲೆ ಆಧಾರಿತವಾಗಿ, ಒಬ್ಬ ಮಾತುಗಾರನು ಒಂದು ನೀಡಲ್ಪಟ್ಟ ವಿಷಯದ ಮೇಲೆ ಜ್ಞಾನದ ವಿಶ್ವಾಸಯೋಗ್ಯ ಮೂಲಗಳ ಮೂಲಕ ಪರಿಶಿಲಿಸಲ್ಪಡುತ್ತಾನೆ.

ನಿರ್ಣಾಯಕ ಚಿಂತನೆಯು ಒಬ್ಬ ವ್ಯಕ್ತಿಯು ವಿಚಾರಣೆ ಮಾಡುತ್ತಿರುವಾಗ, ನಿರ್ಣಯ ಮಾಡುತ್ತಿರುವಾಗ, ಅಥವಾ ಒಂದು ಸಮಸ್ಯೆಯನ್ನು ಪರಿಹರಿಸುತ್ತಿರುವ ಸಂದರ್ಭದಲ್ಲಿ ಸಂಭವಿಸುತ್ತದೆ; ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಯಾವುದನ್ನು ನಂಬಬೇಕು ಅಥವಾ ಯಾವುದನ್ನು ಮಾಡಬೇಕು ಎಂಬುದನ್ನು ನಿರ್ಣಯ ಮಾಡುತ್ತಿರುವ ಸಮಯದಲ್ಲಿ, ಮತ್ತು ಅದೇ ರೀತಿಯಾಗಿ ಒಂದು ಯುಕ್ತ ಮತ್ತು ಪ್ರತಿಫಲಿತ ವಿಧಾನದಲ್ಲಿ ಸಂಭವಿಸುತ್ತದೆ. ಓದುವುದು, ಬರೆಯುವುದು, ಮಾತನಾಡುವುದು, ಮತ್ತು ಕೇಳುವುದು ಈ ಎಲ್ಲವೂ ನಿರ್ಣಾಯಕವಾಗಿ ಅಥವಾ ನಿರ್ಣಾಯಕವಾಗಿ ಅಲ್ಲದೇ ಮಾಡಲ್ಪಡುತ್ತವೆ. ನಿರ್ಣಾಯಕ ಚಿಂತನೆಯು ಒಬ್ಬ ಸರಿಯಾದ ಓದುಗಾರ ಮತ್ತು ಒಬ್ಬ ಸ್ವತಂತ್ರ ಅಸ್ತಿತ್ವವುಳ್ಳ ಬರಹಗಾರನಾಗಿ ಬದಲಾಗುವುದಕ್ಕೆ ನಿರ್ಣಾಯಕವಾಗಿರುತ್ತದೆ. ಹೆಚ್ಚು ಸಾಮಾನ್ಯವಾಗಿ ಅಭಿವ್ಯಕ್ತಿಗೊಳಿಸಲ್ಪಟ್ಟ ನಿರ್ಣಾಯಕ ಚಿಂತನೆಯು "ಜೀವನದ ಸಮಸ್ಯೆಗಳನ್ನು ತೆಗೆದುಕೊಳ್ಳುವ ಒಂದು ಮಾರ್ಗವಾಗಿದೆ."[]

ಕೌಶಲ್ಯಗಳು

[ಬದಲಾಯಿಸಿ]

ನಿರ್ಣಾಯಕ ಚಿಂತನೆಯ ಪ್ರಮುಖ ಕೌಶಲ್ಯಗಳ ಯಾದಿಯು ಪರಿಶೀಲನೆ, ಅರ್ಥವಿವರಣೆ, ವಿಶ್ಲೇಷಣೆ, ತೀರ್ಮಾನ ಮಾಡುವಿಕೆ, ಮೌಲ್ಯಮಾಪನ ಮತ್ತು ಮೆಟಾ-ಗ್ರಹಣ ಮುಂತಾದವುಗಳನ್ನು ಒಳಗೊಳ್ಳುತ್ತದೆ.

ಅಲ್ಲಿ ಪರಿಣಿತರ ನಡುವೆ ಸಾಮರಸ್ಯದ ಒಂದು ನ್ಯಾಯಸಮ್ಮತ ಮಟ್ಟವಿದೆ, ಅಂದರೆ ಬಲವಾದ ನಿರ್ಣಾಯಕ ಚಿಂತನೆಯಲ್ಲಿ ತೊಡಗಿಕೊಂಡ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಈ ಕೆಳಗಿನವುಗಳಿಗೆ ಸಾಕಷ್ಟು ಪ್ರಾಮುಖ್ಯವನ್ನು ನೀಡುತ್ತದೆ:

  • ಅವಲೋಕನದ ಮೂಲಕ ಸಾಕ್ಷ್ಯ
  • ತೀರ್ಮಾನ ಮಾಡುವಿಕೆಯ ಸಂದರ್ಭ
  • ಸರಿಯಾದ ತೀರ್ಮಾನವನ್ನು ಮಾಡುವುದಕ್ಕೆ ಸಂಬಂಧಿತವಾದ ಮಾನದಂಡ
  • ತೀರ್ಮಾನವನ್ನು ತಯಾರಿಸುವುದಕ್ಕೆ ದೊರಕುವ ವಿಧಾನಗಳು ಮತ್ತು ತಂತ್ರಗಾರಿಕೆಗಳು
  • ಸಮಸ್ಯೆಯನ್ನು ಮತ್ತು ಪ್ರಸ್ತುತದಲ್ಲಿರುವ ಪ್ರಶ್ನೆಯನ್ನು ಅರ್ಥಮಾಡಿಕೊಳುವುದಕ್ಕೆ ಅನ್ವಯಿಸುವ ಸೈದ್ಧಾಂತಿಕ ಸಂಯೋಜನಗಳು

ಶಕ್ತಿಯುತವಾದ ನಿರ್ಣಾಯಕ ಚಿಂತನೆಯ ಕೌಶಲಗಳನ್ನು ಹೊಂದಿರುವುದರ ಜೊತೆಗೆ ಒಬ್ಬ ವ್ಯಕ್ತಿಯು ಸಮಸ್ಯೆಗಳಲ್ಲಿ ತೊಡಗುವುದಕ್ಕೆ ಮತ್ತು ಆ ಕೌಶಲಗಳನ್ನು ಬಳಸಿಕೊಂಡು ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ನಿರ್ದಿಷ್ಟ ಮನೋಭಾವವನ್ನು ಹೊಂದಿರಬೇಕು. ನಿರ್ಣಾಯಕ ಚಿಂತನೆಯು ಕೇವಲ ತರ್ಕಗಳನ್ನು ಮಾತ್ರ ಬಳಸಿಕೊಳ್ಳುವುದಿಲ್ಲ, ಆದರೆ ಸ್ಪುಟತೆ, ವಿಶ್ವಾಸಾರ್ಹತೆ, ನಿಖರತೆ, ಅತಿನಿಷ್ಠತೆ, ಸಂಬಂಧತೆ, ಗಹನತೆ, ಹರವು, ಪ್ರಾಧಾನ್ಯತೆ ಮತ್ತು ನ್ಯಾಯಯುಕ್ತತೆಗಳಂತಹ ವಿಶಾಲವಾದ ಬೌದ್ಧಿಕ ಮಾನದಂಡಗಳನ್ನು ಬಳಸಿಕೊಳ್ಳುತ್ತದೆ.[]

ಕಾರ್ಯವಿಧಾನ

[ಬದಲಾಯಿಸಿ]

ನಿರ್ಣಾಯಕ ಚಿಂತನೆಯು ಈ ಕೆಳಗಿನವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಬಯಸುತ್ತದೆ:

  • ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ನಿರ್ವಹಣಾಯೋಗ್ಯ ಮಾರ್ಗಗಳನ್ನು ಕಂಡುಹಿಡಿಯುವುದಕ್ಕೆ ಸಮಸ್ಯೆಗಳ ಮನಗಾಣುವಿಕೆ
  • ಸಮಂಜಸ (ಸುಸಂಬದ್ಧ) ಮಾಹಿತಿಯ ಸಂಗ್ರಹಣೆ ಮತ್ತು ಜೋಡಣೆ
  • ವ್ಯಕ್ತಪಡಿಸಿಲ್ಲದ ಊಹೆಗಳು ಮತ್ತು ಮೌಲ್ಯಗಳ ಮನಗಾಣುವಿಕೆ
  • ಭಾಷೆಯನ್ನು ಗ್ರಹಿಸುವುದು ಮತ್ತು ನಿಖರತೆ, ಸ್ಪಷ್ಟತೆ, ಮತ್ತು ವ್ಯತ್ಯಾಸ ಗುರುತಿಸುವಿಕೆಯ ಜೊತೆ ಬಳಸುವುದು
  • ಸಾಕ್ಷ್ಯಗಳ ಮೌಲ್ಯವನ್ನು ನಿರ್ಣಯಿಸುವುದಕ್ಕೆ ಮತ್ತು ವಾದವಿವಾದಗಳನ್ನು ಪರಿಶೀಲಿಸುವುದಕ್ಕೆ ಮಾಹಿತಿಯನ್ನು ವಿವರಿಸುವುದು
  • ಪ್ರತಿಪಾದನೆಗಳ ನಡುವಣ ತಾರ್ಕಿಕ ಸಂಬಂಧಗಳ ಅಸ್ತಿತ್ವವನ್ನು (ಅಥವಾ ಅಸ್ತಿತ್ವದಲ್ಲಿ ಇಲ್ಲದಿರುವಿಕೆ) ಗ್ರಹಿಸುವುದು
  • ಅವಶ್ಯಕವಾದ ಅಂತಿಮ ನಿರ್ಣಯವನ್ನು ಮತ್ತು ಸಾಮಾನ್ಯೀಕರಣವನ್ನು ತೆಗೆದುಕೊಳ್ಳುವಿಕೆ
  • ಒಬ್ಬ ವ್ಯಕ್ತಿಯು ತಲುಪುವ ಅಂತಿಮ ನಿರ್ಣಯಗಳು ಮತ್ತು ಸಾಮಾನ್ಯೀಕರಣಗಳನ್ನು ಪರೀಕ್ಷೆಗೆ ಒಳಪಡಿಸುವುದು
  • ಒಬ್ಬ ವ್ಯಕ್ತಿಯ ನಂಬಿಕೆಗಳ ಮಾದರಿಗಳನ್ನು ವ್ಯಾಪಕ ಪರಿಣಿತಿಯ ಆಧಾರದ ಮೇಲೆ ಪುನರ್‌ನಿರ್ಮಾಣ ಮಾಡುವುದು
  • ಪ್ರತಿದಿನದ ಜೀವನದಲ್ಲಿ ನಿರ್ದಿಷ್ಟವಾದ ಸಂಗತಿಗಳು ಮತ್ತು ಗುಣಗಳ ಬಗ್ಗೆ ನಿಖರವಾದ ತೀರ್ಮಾನವನ್ನು ನೀಡುವುದು

ಒಟ್ಟಾರೆಯಾಗಿ:

"ಸಾಕ್ಷ್ಯದ ಬೆಳಕಿನಲ್ಲಿ ಯಾವುದೇ ನಂಬಿಕೆ ಅಥವಾ ಜ್ಞಾನದ ಉದ್ದೇಶಿತ ವಿಧವನ್ನು ಪರಿಶೀಲಿಸುವುದಕ್ಕೆ ಬೇಕಾದ ಒಂದು ನಿರಂತರ ಪ್ರಯತ್ನವು ಅದನ್ನು ಬೆಂಬಲಿಸುತ್ತದೆ ಮತ್ತು ಇದು ಇಚ್ಛಿಸುವ ಮುಂದಿನ ಅಂತಿಮ ತೀರ್ಮಾನಗಳನ್ನು ಬೆಂಬಲಿಸುತ್ತದೆ."[]

ಉದಾಹರಿಸಬಹುದಾದ ಚಿಂತಕನ ಅಭಿವ್ಯಕ್ತಿ

[ಬದಲಾಯಿಸಿ]

ಚಿಂತನೆಯ ಕ್ಷೇತ್ರವನ್ನು ಗಣನೆಗೆ ತೆಗೆದುಕೊಳ್ಳದೆಯೇ, "ಒಬ್ಬ ಉತ್ತಮ ಸುಸಂಕೃತ ನಿರ್ಣಾಯಕ ಚಿಂತಕ":

  • ಪ್ರಮುಖ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ಪ್ರಸ್ತುತಪಡಿಸುತ್ತಾನೆ, ಅವುಗಳನ್ನು ಸ್ಪುಟವಾಗಿ ಮತ್ತು ನಿಖರವಾಗಿ ನಿರೂಪಿಸುತ್ತಾನೆ;
  • ಅವುಗಳನ್ನು ಪರಿಣಾಮಕಾರಿಯಾಗಿ ವಿವರಿಸುವುದಕ್ಕೆ ಸಂಗ್ರಹಿತ ಯೋಜನೆಗಳನ್ನು ಬಳಸಿಕೊಂಡು ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುತ್ತಾನೆ ಮತ್ತು ಪರಿಶೀಲಿಸುತ್ತಾನೆ;
  • ಸರಿಯಾಗಿ-ಆಧಾರಿತವಾದ ಅಂತಿಮ ತೀರ್ಮಾನಗಳು ಮತ್ತು ಪರಿಹಾರಗಳನ್ನು ಸಾಧಿಸುತ್ತಾನೆ, ಅವುಗಳನ್ನು ಸಂಬಂಧಿತ ಮಾನದಂಡ ಮತ್ತು ಗುಣಮಟ್ಟಗಳ ವಿರುದ್ಧ ಪರೀಕ್ಷೆಗೆ ಒಳಪಡಿಸುತ್ತಾನೆ;
  • ಚಿಂತನೆಗಳ ಪರ್ಯಾಯ ವ್ಯವಸ್ಥೆಗಳ ಒಳಗೆ ತೆರೆದ-ಮನದಿಂದ ಆಲೋಚಿಸುತ್ತಾನೆ, ಹೇಗೆ ಅವಶ್ಯಕತೆಯಿದೆಯೋ ಹಾಗೆ ಅವುಗಳ ಊಹೆಗಳು, ಪರಿಣಾಮಗಳು, ಮತ್ತು ಪ್ರಾಯೋಗಿಕ ಪರಿಣಾಮಗಳನ್ನು ಪರಿಗಣಿಸುತ್ತಾನೆ ಮತ್ತು ಪರಿಶೀಲಿಸುತ್ತಾನೆ; ಮತ್ತು
  • ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಸಂದರ್ಭದಲ್ಲಿ ಇತರರ ಜೊತೆಗೆ ಪರಿಣಾಮಕಾರಿಯಾಗಿ ಸಂವಹನ ಮಾಡುತ್ತಾನೆ; ಆ ವಿಷಯದ ಬಗ್ಗೆ ಇನ್ನೊಬ್ಬರ ಆಲೋಚನೆಯ ಮೂಲಕ ಅನುಚಿತವಾಗಿ ಪ್ರಭಾವಿತನಾಗದೇ ಸಂವಹಿಸುತ್ತಾನೆ.

ಮೂಲತತ್ವಗಳು ಮತ್ತು ವಿನ್ಯಾಸಗಳು

[ಬದಲಾಯಿಸಿ]

ತಮ್ಮನ್ನು ತಾವೇ ವಿಮರ್ಶೆ ಮಾಡಿಕೊಳ್ಳುವ ಸಾಮರ್ಥ್ಯ

[ಬದಲಾಯಿಸಿ]

ನಿರ್ಣಾಯಕ ಚಿಂತನೆಯು ಸ್ವಂತದ ಆಲೋಚನೆಯನ್ನು ಒಪ್ಪುವುದು ಮತ್ತು ಪರಿಶೀಲಿಸುವುದಕ್ಕೆ ಸಮರ್ಥವಾಗಿರುವುದು ಈ ಎರಡರ ಅಸ್ತಿತ್ವದಲ್ಲಿರುವಿಕೆಯಾಗಿದೆ. ಚಿಂತನೆಯು ವಿಮರ್ಶೆಗೆ ಒಳಗಾಗಲ್ಪಡಬಹುದು ಏಕೆಂದರೆ ಒಬ್ಬ ವ್ಯಕ್ತಿಯು ಎಲ್ಲಾ ಸಂಬಧಿತ ಮಾಹಿತಿಗಳನ್ನು ಹೊಂದಿರುವುದಿಲ್ಲ - ವಾಸ್ತವವಾಗಿ, ಪ್ರಮುಖವಾದ ಮಾಹಿತಿಯು ಸಂಶೋಧಿಸಲ್ಪಡದೆಯೇ ಇರಬಹುದು, ಅಥವಾ ಮಾಹಿತಿಯು ಇನ್ನೂ ತಿಳಿಯಲ್ಪಟ್ಟಿರದೆಯೇ ಇರಬಹುದು - ಅಥವಾ ಒಬ್ಬ ವ್ಯಕ್ತಿಯು ಅಸಮಂಜಸವಾದ ತೀರ್ಮಾನಗಳನ್ನು ಮಾಡುವ, ಅಸಮರ್ಪಕವಾದ ವಿಷಯಗಳನ್ನು ಬಳಸುವ, ಅಥವಾ ಪ್ರಮುಖವಾದ ಪರಿಣಾಮಗಳನ್ನು ಗಮನಿಸುವುದಕ್ಕೆ ವಿಫಲವಾದ ಕಾರಣದಿಂದ ಚಿಂತನೆಯು ವಿಮರ್ಶೆಗೆ ಒಳಗಾಗಲ್ಪಡುತ್ತದೆ. ಚಿಂತನೆಯ ಸರಿಯಾದ ಕೌಶಲಗಳ ಅಜ್ಞಾನ ಅಥವಾ ಅಸಮರ್ಪಕತೆಯ ಕಾರಣದಿಂದಾಗಿ ಒಬ್ಬ ವ್ಯಕ್ತಿಯ ಚಿಂತನೆಯು ಅಸ್ಪಷ್ಟ, ಅನಿರ್ದಿಷ್ಟ, ಅನಿಕೃಷ್ಟ, ಅಸಂಬಂಧಿತ, ಸಂಕುಚಿತ, ಆಳವಿಲ್ಲದ, ಅತಾರ್ಕಿಕ, ಅಥವಾ ಅಗಣ್ಯವಾಗಬಹುದು. ಮತ್ತೊಂದು ಪ್ರಕಾರದಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ಚಿಂತನೆಯು ಒಂದು ಉಪ-ಅತ್ಯುತ್ತಮ ಅಣಿಗೊಳಿಸುವಿಕೆಯ ಫಲಿತಾಂಶವಾಗಿ ವಿಮರ್ಶೆಗೆ ಒಳಗಾಗಲ್ಪಡುತ್ತದೆ. ನಿರ್ಣಾಯಕ ಚಿಂತನೆಯ ಅಣಿಗೊಳಿಸುವ ಆಯಾಮವು ಗುಣಾವಲಂಬಿತವಾಗಿರುತ್ತದೆ. ಸಾಂಪ್ರದಾಯಿಕ ಉದ್ದೇಶದಲ್ಲಿ ಇದರ ಪ್ರಾಮುಖ್ಯತೆಯು ಸತ್ಯವನ್ನು-ಹುಡುಕುವುದು, ತೆರೆದ-ಮನದ, ವ್ಯವಸ್ಥಿತ, ವಿಶ್ಲೇಷಣಾತ್ಮಕ, ಜಿಜ್ಞಾಸೆಯ, ತಾರ್ಕಿಕ ವಿಧಾನದಲ್ಲಿ ನಂಬಿಕೆಯಿರುವ, ಮತ್ತು ತೀರ್ಮಾನಗಳನ್ನು ಮಾಡುವುದರಲ್ಲಿ ವಿವೇಕತೆ ಈ ಎಲ್ಲದರ ಅವಶ್ಯಕತೆಯನ್ನು ಬಯಸುತ್ತದೆ. ನಿರ್ಣಾಯಕ ಚಿಂತನೆಯ ಕಡೆಗಿನ ಅಣಿಗೊಳಿಸುವಿಕೆಯ ಈ ಸಂಗತಿಗಳ ಒಂದು ಅಥವಾ ಹೆಚ್ಚು ಸಂಗತಿಗಳಲ್ಲಿ ಚಂಚಲ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳು, ಅಥವಾ ವಿರುದ್ಧವಾಗಿ ಅಣಿಗೊಳಿಸುವಿಕೆಯನ್ನು ಹೊಂದಿರುವ ವ್ಯಕ್ತಿಗಳು (ಬೌದ್ಧಿಕವಾಗಿ ಉದ್ಧಟತನವನ್ನು ಹೊಂದಿರುವ, ಪಕ್ಷಪಾತಿ, ಅಸಹಿಷ್ಣು, ಅಸಂಘಟಿತ, ಆಲಸಿ, ಪರಿಣಾಮಗಳ ಬಗ್ಗೆ ನಿರ್ಲಕ್ಷತೆ, ಹೊಸ ಮಾಹಿತಿಗಳ ಕಡೆಗೆ ಅನಾದರವನ್ನು ಹೊಂದಿರುವ, ಕೇಳುವುದರೆಡೆಗೆ ಅಶ್ರದ್ಧೆಯುಳ್ಳ, ಅಥವಾ ನಿರ್ಲಜ್ಜ ವ್ಯಕ್ತಿಗಳು) ತಮ್ಮ ನಿರ್ಣಾಯಕ ಚಿಂತನೆಯ ಕೌಶಲಗಳನ್ನು ಬಳಸಿಕೊಳ್ಳುವಲ್ಲಿ ಹೆಚ್ಚು ಸಾಮಾನ್ಯವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸರಿಯಾದ ಅಣಿಗೊಳಿಸುವಿಕೆಯ ಮಹತ್ವವನ್ನು ಕಂಡುಹಿಡಿಯುವ ಕಡೆಗಿನ ವೈಫಲ್ಯವು ವೈಯುಕ್ತಿಕವಾಗಿ ಮತ್ತು ಸಂಘಟಿತವಾಗಿ ಸ್ವಯಂ-ವಂಚನೆಯ ಹಲವಾರು ವಿಧಗಳಿಗೆ ಮತ್ತು ಮುಚ್ಚಿದ-ಮನದೆಡೆಗೆ ಕರೆದೊಯ್ಯುತ್ತದೆ.[]

ಆಲೋಚನಾಪರ (ಚಿಂತನಶೀಲ) ಚಿಂತನೆ

[ಬದಲಾಯಿಸಿ]

ನಿರ್ಣಾಯಕ ಚಿಂತನೆಯನ್ನು ಬಳಸಿಕೊಂಡು ಸಮಸ್ಯೆಯನ್ನು ಪರಿಹರಿಸುವ ಮತ್ತು ನಿರ್ಣಯವನ್ನು ಮಾಡುವಲ್ಲಿಒಬ್ಬ ವ್ಯಕ್ತಿಯು ಸಾಕ್ಷ್ಯ (ಸಾಕ್ಷ್ಯವನ್ನು ಸಂಶೋಧಿಸುವ ತರಹ), ತೀರ್ಮಾನ ಮಾಡುವಿಕೆಯ ಸಂದರ್ಭ, ತೀರ್ಮಾನವನ್ನು ಸರಿಯಾಗಿ ಮಾಡುವುದಕ್ಕೆ ಸಂಬಂಧಿತ ಮಾನದಂಡ, ತೀಮಾನವನ್ನು ನಿರ್ಣಯ ಮಾಡುವುದಕ್ಕೆ ಅನ್ವಯಿಸಲ್ಪಡಬೇಕಾದ ವಿಧಾನಗಳು ಮತ್ತು ತಂತ್ರಗಾರಿಕೆಗಳು, ಮತ್ತು ಸಮಸ್ಯೆಯನ್ನು ಮತ್ತು ಪ್ರಸ್ತುತದಲ್ಲಿ ಇರುವ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಅನ್ವಯಿಸಬೇಕಾದ ಸೈದ್ಧಾಂತಿಕ ವಿಧಾನಗಳನ್ನು ಪರಿಗಣಿಸುತ್ತದೆ.

ಮಾನವ ತಾರ್ಕಿಕ ವಿಧಾನದ ಚಿಂತನಾಶೀಲ ಸಂಗತಿಯ ಜೊತೆಗಿನ ಶಕ್ತಿಯುತವಾದ ನಿರ್ಣಾಯಕ ಚಿಂತನೆಯ ವಿವೇಚನೆಯು ನಿರ್ಣಾಯಕ ಚಿಂತನೆಯನ್ನು ಸಂಯೋಜಿಸುತ್ತದೆ. ಬಲವಾದ ನಿರ್ಣಾಯಕ ಚಿಂತನೆಯನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ತಮ್ಮ ವೈಯುಕ್ತಿಕ ಮತ್ತು ಸಂಘಟಿತ ಸಾಮರ್ಥ್ಯವನ್ನು ಸುಧಾರಿಸುವುದಕ್ಕೆ ಬಯಸುವ ವ್ಯಕ್ತಿಗಳು, ಆದ್ದರಿಂದ, ತೀರ್ಮಾನ ಮಾಡುವಿಕೆಗೆ ನಾವುಗಳು ಹೆಚ್ಚಿನ ಮಟ್ಟದ ಚಿಂತನಶೀಲತೆ ಮತ್ತು ವಿವೇಚನೆಯನ್ನು ತರುತ್ತೇವೆ ಎಂದು ಶಿಫಾರಸು ಮಾಡಿದರು.

ನಿರ್ಣಾಯಕ ಚಿಂತನೆಯು ಸ್ವಯಂ-ದೋಷಪರಿಹಾರಕ ಸಂಗತಿಗಳು ಮತ್ತು ತತ್ವಗಳ ಮೇಲೆ ಆಧರಿತವಾಗಿದೆ, ಆದರೆ ಬಿಗಿಯಾದ, ಅಥವಾ ಹಂತ-ಹಂತವಾದ ಕಾರ್ಯವಿಧಾನಗಳ ಮೇಲೆ ಅವಲಂಬಿತವಾಗಿಲ್ಲ.[]

ಸಮರ್ಥತೆ

[ಬದಲಾಯಿಸಿ]

ನಿರ್ಣಾಯಕ ಚಿಂತನೆಯು ಕೇವಲ ತಾರ್ಕಿಕ (ಸಂಪ್ರದಾಯಿಕವಾದ ಅಥವಾ ಹೆಚ್ಚು ಸಾಮಾನ್ಯವಾಗಿ, ಅನೌಪಚಾರಿಕವಾದ) ವಿಧಾನಗಳನ್ನು ಮಾತ್ರ ಬಳಸಿಕೊಳ್ಳುವುದಿಲ್ಲ, ಆದರೆ ವಿಶಾಲವಾದ ಬೌದ್ಧಿಕ ಮಾನದಂಡಗಳಾದ ಸ್ಪಷ್ಟತೆ, ವಿಶ್ವಾಸಾರ್ಹತೆ, ನಿಖರತೆ, ನಿಕೃಷ್ಟತೆ, ಸಂಬಂಧತೆ, ಗಹನತೆ, ವಿಸ್ತಾರ, ಪ್ರಾಮುಖ್ಯತೆ ಮತ್ತು ನ್ಯಾಯಯುಕ್ತತೆ ಇವುಗಳನ್ನೂ ಕೂಡ ಬಳಸಿಕೊಳ್ಳುತ್ತದೆ.

ಮನಸ್ಥಿತಿ ಅಥವಾ ಸ್ವಭಾವಗಳು

[ಬದಲಾಯಿಸಿ]

ನಿರ್ಣಾಯಕ ಚಿಂತನೆಯ ಕಡೆಗೆ ಅಣಿಗೊಳಿಸಲ್ಪಟ್ಟ ಒಬ್ಬ ವ್ಯಕ್ತಿಯ ಗುಣಲಕ್ಷಣಗಳನ್ನು ಅವಲೋಕಿಸುವ ಮನಸ್ಸಿನ ಸಕಾರಾತ್ಮಕ ಸ್ವಭಾವಗಳು ಈ ಕೆಳಗಿನವುಗಳನ್ನು ಒಳಗೊಳ್ಳುತ್ತವೆ, ಯಾವ ಕಡೆಗಾದರೂ ಕರೆದೊಯ್ಯುವ ಒಂದು ಕಾರಣ ಮತ್ತು ಸಾಕ್ಷ್ಯವನ್ನು ಅನುಸರಿಸುವ ಅಭಿಲಾಷೆ, ತೆರೆದ-ಮನಸ್ಸು, ಆಯ್ಕೆಗಳ ಸಂಭವನೀಯ ಪರಿಣಾಮಗಳ ಕಡೆಗೆ ಮುಂದಾಲೋಚಿತ ಗಮನ, ಸಮಸ್ಯೆಯನ್ನು ಪರಿಹರಿಸುವುದಕ್ಕೆ ಒಂದು ವ್ಯವಸ್ಥಿತವಾದ ವಿಧಾನ, ಅನ್ವೇಷಣಾ ಪ್ರವೃತ್ತಿ, ನ್ಯಾಯಯುತ-ಮನಸ್ಸು ಮತ್ತು ತೀರ್ಮಾನ ಮಾಡುವಿಕೆಯಲ್ಲಿ ಪ್ರಬುದ್ಧತೆ, ಮತ್ತು ಕೇಳುವಿಕೆಯಲ್ಲಿನ ಅತ್ಮವಿಶ್ವಾಸ.[]

ವ್ಯಕ್ತಿಗಳು ಮನಸ್ಸಿನ ಬೌದ್ಧಿಕ ಸ್ವಭಾವಗಳ ಹೊರತಾಗಿ ಕೇವಲ ಬೌದ್ಧಿಕ ಕೌಶಲಗಳನ್ನು ಮಾತ್ರ ಹೊಂದಿದ್ದಾಗ ದುರ್ಬಲವಾದ ಸಂವೇದನೆಯ ನಿರ್ಣಾಯಕ ಚಿಂತನೆ ಯು ಸಂಭವಿಸುತ್ತದೆ. ನ್ಯಾಯಪರವಾದ-ಮನಸ್ಸಿನ ಅಥವಾ ಬಲವಾದ ಸಂವೇದನೆಯ ನಿರ್ಣಾಯಕ ಚಿಂತನೆ ಯು ಬೌದ್ಧಿಕ ನಮ್ರತೆ, ತಾದಾತ್ಮ್ಯಾನುಭೂತಿ, ಸಮಗ್ರತೆ, ಏಕನಿಷ್ಠ ಸಾಧನೆ, ಧೈರ್ಯ, ಸ್ವಾಯತ್ತತೆ, ಕೇಳುವಿಕೆಯಲ್ಲಿನ ಆತ್ಮವಿಶ್ವಾಸ, ಬೌದ್ಧಿಕ ಸ್ವಭಾವಗಳು ಮುಂತಾದವುಗಳು ಅವಶ್ಯಕವಾಗಿರುತ್ತವೆ. ಆದ್ದರಿಂದ ಬೌದ್ಧಿಕ ಸ್ವಭಾವಗಳಿಂದ ಹೊರತಾದ ನಿರ್ಣಾಯಕ ಚಿಂತನೆಯು ಅನೇಕ ವೇಳೆ ಜಾಣತನದಲ್ಲಿ ಫಲಿತಾಂಶವನ್ನು ನೀಡುತ್ತದೆ, ಆದರೆ ದುರುಪಯೋಗಪಡಿಸಿಕೊಳ್ಳುವ ಮತ್ತು ಅನೇಕ ವೇಳೆ ಅನೈತಿಕ ಅಥವಾ ವ್ಯಕ್ತಿನಿಷ್ಠ ಆಲೋಚನೆಯನ್ನು ಹೊಂದಿರುತ್ತದೆ.

ಮಹತ್ವ

[ಬದಲಾಯಿಸಿ]

ನಿರ್ಣಾಯಕ ಚಿಂತನೆಯು ಎಲ್ಲಾ ವೃತ್ತಿನಿರತ ವಿಭಾಗಗಳ ಮತ್ತು ಶೈಕ್ಷಣಿಕ ಬೋಧನಶಾಖೆಯ (ಅವರ ಅನುಮತಿ ಕೊಡಲ್ಪಡುವ ಪ್ರಶ್ನೆಗಳ ಸೆಟ್, ಸಾಕ್ಷ್ಯಗಳ ಮೂಲಗಳು, ಮಾನದಂಡ, ಇತ್ಯಾದಿಗಳನ್ನು ಪರಾಮರ್ಶಿಸುವುದರ ಮೂಲಕ) ಒಂದು ಅತ್ಯಂತ ಪ್ರಮುಖವಾದ ಅಂಶವಾಗಿದೆ. ವೈಜ್ಞಾನಿಕ ಸ್ಕೆಪ್ಟಿಸಿಸಮ್ (ಒಂದು ವಸ್ತುವಿನ ಸತ್ಯತೆಯ ಬಗೆಗಿನ ಅಪನಂಬಿಕೆ)ನ ಪರಿಧಿಯೊಳಕ್ಕೆ ನಿರ್ಣಾಯಕ ಚಿಂತನೆಯ ಪ್ರಕ್ರಿಯೆಯು ಮಾಹಿತಿಗಳನ್ನು ಜಾಗರೂಕತೆಯಿಂದ ಪಡೆದುಕೊಳ್ಳುವಿಕೆ ಮತ್ತು ವಿವರಿಸುವಿಕೆ ಮತ್ತು ಸರಿಯಾಗಿ-ನ್ಯಾಯಯುತವಾಗಿಸಲ್ಪಟ್ಟ ಒಂದು ಅಂತಿಮ ನಿರ್ಣಯವನ್ನು ಹೊರತರುವುದಕ್ಕೆ ಅದರ ಬಳಕೆ ಮುಂತಾದವುಗಳನ್ನು ಒಳಗೊಳ್ಳುತ್ತದೆ. ನಿರ್ಣಾಯಕ ಚಿಂತನೆಯ ವಿಷಯಗಳು ಮತ್ತು ತತ್ವಗಳು ಯಾವುದೇ ಸಂದರ್ಭಕ್ಕೆ ಅಥವ ದೃಷ್ಟಾಂತಕ್ಕೆ ಅನ್ವಯಿಸಲ್ಪಡಬಹುದು, ಅದರೆ ಆ ಅನ್ವಯಿಕೆಯನ್ನು ಅದರ ಸ್ವಭಾವದ ಮೇಲೆ ಪ್ರತಿಫಲಿಸುವಂತೆ ಮಾಡುವ ಮೂಲಕ ಮಾತ್ರ ಅನ್ವಯಿಸಲ್ಪಡಬಹುದು. ಆದ್ದರಿಂದ ನಿರ್ಣಾಯಕ ಚಿಂತನೆಯು, ಸಂಬಂಧಿತ, ಮತ್ತು ಒಂದರ ಮೇಲೆ ಒಂದು ವ್ಯಾಪಿಸುವ ಒಂದು ವ್ಯವಸ್ಥೆ, ಚಿಂತನೆಗಳ ವಿಧಾನಗಳು ಉದಾಹರಣೆಗೆ, ಮಾನವಶಾಸ್ತ್ರೀಯ ಆಲೋಚನೆ, ಸಾಮಾಜಿಕ ಚಿಂತನೆ, ಐತಿಹಾಸಿಕ ಚಿಂತನೆ, ರಾಜಕೀಯ ಚಿಂತನೆ, ಮನೋವೈಜ್ಞಾನಿಕ ಚಿಂತನೆ, ತತ್ವಶಾಸ್ತ್ರೀಯ ಚಿಂತನೆ, ಗಣಿತಶಾಸ್ತ್ರೀಯ ಚಿಂತನೆ, ರಾಸಾಯನಿಕ ಚಿಂತನೆ, ಜೀವವೈಜ್ಞಾನಿಕ ಚಿಂತನೆ, ಪರಿಸರವ್ಯವಸ್ಥೆಯ ಚಿಂತನೆ, ನ್ಯಾಯಿಕ ಚಿಂತನೆ, ನೈತಿಕ ಚಿಂತನೆ, ಸಂಗೀತ ಚಿಂತನೆ, ಒಬ್ಬ ವರ್ಣಚಿತ್ರಕಾರ, ಶಿಲ್ಪಿ, ಎಂಜಿನಿಯರ್, ವ್ಯಾಪಾರ ಉದ್ಯಮಿ ಮುಂತಾದವರ ರಿತಿಯಲ್ಲಿ ಚಿಂತನೆ ಮಾಡುವುದು ಮುಂತಾದವುಗಳನ್ನು ಒಳಗೊಳ್ಳುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನಿರ್ಣಾಯಕ ಚಿಂತನೆಯ ತತ್ವಗಳು ಸಾರ್ವತ್ರಿಕವಾಗಿದ್ದರೂ ಕೂಡ, ಬೋಧನಶಾಖೆಗಳಿಗೆ ಅವುಗಳ ಅನ್ವಯಿಕೆಯು ಚಿಂತನಶೀಲ ಸಂದರ್ಭೀಕರಣದ ಒಂದು ಪ್ರಕ್ರಿಯೆಯನ್ನು ಅವಶ್ಯಕವಾಗಿಸುತ್ತದೆ.

ನಿರ್ಣಾಯಕ ಚಿಂತನೆಯು ಶೈಕ್ಷಣಿಕ ವಿಭಾಗಗಳಲ್ಲಿ ಅತ್ಯಂತ ಪ್ರಮುಖ ಎಂಬುದಾಗಿ ಪರಿಗನಿಸಲ್ಪಟ್ಟಿದೆ ಏಕೆಂದರೆ ಇದು ಅವರ ಚಿಂತನೆಯನ್ನು ವಿಶ್ಲೇಷಿಸುತ್ತದೆ, ಪರಿಶೀಲಿಸುತ್ತದೆ, ವಿವರಿಸುತ್ತದೆ, ಮತ್ತು ಪುನರ್‌ನಿರ್ಮಾಣ ಮಾಡುತ್ತದೆ, ಆ ಮೂಲಕ ಒಂದು ತಪ್ಪು ನಂಬಿಕೆಯನ್ನು ಅಳವಡಿಸಿಕೊಳ್ಳುವ, ಅದರ ಮೇಲೆ ಕಾರ್ಯ ನಿರ್ವಹಿಸುವ, ಅಥವಾ ಅದರ ಜೊತೆಗೆ ಚಿಂತನೆಯನ್ನು ನಡೆಸುವ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಆದಾಗ್ಯೂ, ತಾರ್ಕಿಕ ವಿಚಾರಣೆ ಮತ್ತು ಕೇಳುವಿಕೆಯ ವಿಧಾನಗಳ ಮಾಹಿತಿಯಿದ್ದರೂ ಕೂಡ, ವಿಧಾನಗಳನ್ನು ಅನ್ವಯಿಸುವಲ್ಲಿನ ಒಬ್ಬ ಚಿಂತಕನ ಅಸಮರ್ಥತೆ ಅಥವಾ ನಡುವಳಿಕೆಗಳ ಸ್ವಭಾವಗಳಿಂದಾಗಿ ಉದಾಹರಣೆಗೆ ಅಹಂಕೇಂದ್ರೀಯತೆಯ ಕಾರಣದಿಂದಾಗಿ ತಪ್ಪುಗಳು ಸಂಭವಿಸುತ್ತವೆ. ನಿರ್ಣಾಯಕ ಚಿಂತನೆಯು ಪೂರ್ವಾಗ್ರಹ, ಪಕ್ಷಪಾತ, ಪ್ರಚಾರ, ಸ್ವಯಂ-ವಂಚನೆ, ವಿರೂಪಣೆ, ತಪ್ಪು ಮಾಹಿತಿ ಇತ್ಯಾದಿಗಳನ್ನು ಒಳಗೊಳ್ಳುತ್ತದೆ. ಜ್ಞಾನಗ್ರಹಣದ ಮನೋವೈಜ್ಞಾನಿಕತೆಯಲ್ಲಿ ನೀಡಲ್ಪಟ್ಟ ಸಂಶೋಧನೆಯಲ್ಲಿ, ಕೆಲವು ಶಿಕ್ಷಕರು (ಬೋಧಕರು) ಸ್ಕೂಲ್‌ಗಳು (ಶಾಲೆಗಳು) ತಮ್ಮ ವಿದ್ಯಾರ್ಥಿಗಳಿಗೆ ನಿರ್ಣಾಯಕ ಚಿಂತನೆಯ ಕೌಶಲಗಳನ್ನು ಕಲಿಸುವುದರ ಕಡೆಗೆ ಮತ್ತು ಬೌದ್ಧಿಕ ಸ್ವಭಾವಗಳನ್ನು ಬೆಳೆಸಿಕೊಳ್ಳುವುದರ ಕಲಿಸುವಿಕೆಯ ಕಡೆಗೆ ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದಾಗಿ ನಂಬಿದ್ದರು.

ಸಂಶೋಧನೆ

[ಬದಲಾಯಿಸಿ]

೧೯೪೧ ರಲ್ಲಿ ನಿರ್ಣಾಯಕ ಚಿಂತನೆಯ ಮೇಲಿನ ಒಂದು ಪ್ರಾರಂಭಿಕ ಅಧ್ಯಯನ ಮತ್ತು ಶಿಕ್ಷಣದಲ್ಲಿ, ಎಡ್‌ವರ್ಡ್ ಗ್ಲೇಸರ್‌ನು ನಿರ್ಣಯಾತ್ಮಕವಾಗಿ ಚಿಂತಿಸುವ ಸಾಮರ್ಥ್ಯವು ಮೂರು ಸಂಗತಿಗಳನ್ನು ಒಳಗೊಳ್ಳುತ್ತದೆ ಎಂಬುದಾಗಿ ಬರೆಯುತ್ತಾನೆ:[]

  1. ಒಬ್ಬ ವ್ಯಕ್ತಿಯ ಅನುಭವದ ಪರಿಧಿಯೊಳಗೆ ಬರುವ ಸಮಸ್ಯೆಗಳನ್ನು ಮತ್ತು ವಿಷಯಗಳನ್ನು ಒಂದು ಆಲೋಚನಾತ್ಮಕ ಮಾರ್ಗದಲ್ಲಿ ಪರಿಗಣಿಸುವುದಕ್ಕೆ ಅಣಿಗೊಳಿಸಲ್ಪಟ್ಟ ಒಂದು ಸ್ವಭಾವ ಅಥವಾ ನಡುವಳಿಕೆ (ಕೆಲವು ವಸ್ತುಗಳ ಬಗೆಗಿನ ಮನಸ್ಸಿನ ಸ್ಥಿತಿ)
  2. ತಾರ್ಕಿಕ ವಿಚಾರಣೆ ಮತ್ತು ಕೇಳುವಿಕೆಯ ವಿಧಾನಗಳ ಮಾಹಿತಿ
  3. ಆ ವಿಧಾನಗಳನ್ನು ಅನ್ವಯಿಸುವಲ್ಲಿ ಕೆಲವು ಕೌಶಲಗಳು.

ವೈಯುಕ್ತಿಕವಾಗಿ ಅಥವಾ ಗುಂಪು ಸಮಸ್ಯೆ ಪರಿಹಾರದಲ್ಲಿ ಮತ್ತು ನಿರ್ಣಯ ಮಾಡುವಿಕೆಯ ಸಂದರ್ಭದಲ್ಲಿ ಮಕ್ಕಳು ಮತ್ತು ಪ್ರಬುದ್ಧ ಕಲಿಕಾಗಾರರಲ್ಲಿ ನಿರ್ಣಾಯಕ ಚಿಂತನೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದ ಶೈಕ್ಷಣಿಕ ಯೋಜನೆಗಳು ಈ ಮೇಲಿನ ಮೂರು ಅಂಶಗಳನ್ನು ವಿವರಿಸುವುದನ್ನು ಮುಂದುವರೆಸುತ್ತಾರೆ.

ಸಮಕಾಲೀನ ಜ್ಞಾನಗ್ರಹಣದ ಮನಃಶಾಸ್ತ್ರವು ಮಾನವ ಕೇಳುವಿಕೆಯನ್ನು ಪ್ರತಿಕ್ರಿಯಾತ್ಮಕ ಮತ್ತು ಚಿಂತನಾಶಿಲ ಎರಡೂ ಆಗಿರುವ ಒಂದು ಕ್ಲಿಷ್ಟಕರವಾದ ಪ್ರಕ್ರಿಯೆ ಎಂಬುದಾಗಿ ಪರಿಗಣಿಸುತ್ತದೆ.[]

ನಿರ್ಣಾಯಕ ಚಿಂತನೆಯ ಕೌಶಲಗಳು ಮತ್ತು ನಿರ್ಣಾಯಕ ಚಿಂತನೆಯ ಅಣಿಗೊಳಿಸುವಿಕೆಗಳ ನಡುವಣ ಸಂಬಂಧವು ಒಂದು ಅನುಭವಾತ್ಮಕ ಪ್ರಶ್ನೆಯಾಗಿದೆ. ಕೆಲವು ವ್ಯಕ್ತಿಗಳು ಇವೆರಡನ್ನೂ ಹೇರಳವಾಗಿ ಹೊಂದಿರುತ್ತಾರೆ, ಕೆಲವರು ಕೌಶಲಗಳನ್ನು ಹೊಂದಿರುತ್ತಾರೆ ಆದರೆ ಆ ಕೌಶಲಗಳನ್ನು ಬಳಸಿಕೊಳ್ಳುವುದಕ್ಕೆ ಅಣಿಗೊಳಿಸುವಿಕೆಯನ್ನು ಹೊಂದಿರುವುದಿಲ್ಲ, ಕೆಲವರು ವ್ಯವಸ್ಥೆಯನ್ನು ಹೊಂದಿರುತ್ತಾರೆ ಆದರೆ ಕೌಶಲಗಳ ಕೊರತೆಯನ್ನು ಅನುಭವಿಸುತ್ತಿರುತ್ತಾರೆ, ಮತ್ತು ಮತ್ತೆ ಕೆಲವರು ಯಾವುದನ್ನೂ ಹೊಂದಿರುವುದಿಲ್ಲ. ಕ್ಯಾಲಿಫೋರ್ನಿಯಾ ನಿರ್ಣಾಯ ಚಿಂತನೆ ವ್ಯವಸ್ಥೆಗೊಳಿಸುವಿಕೆಯ ತಪಶೀಲು ವಿವರಗಳು[೧೦] ಮತ್ತು ಮಾನಸಿಕ ಸ್ಪೂರ್ತಿಯ ಕ್ಯಾಲಿಫೋರ್ನಿಯಾ ವಿಧಾನಗಳು[೧೧] ಇವು ನಿರ್ಣಾಯಕ ಚಿಂತನೆಯನ್ನು ವ್ಯವಸ್ಥಿತಗೊಳಿಸುವುದರ ಎರಡು ವಿಧಾನಗಳಾಗಿವೆ.

ಕಲಿಕಾ ವಿಧಾನದಲ್ಲಿ

[ಬದಲಾಯಿಸಿ]

ಜಾನ್ ಡೇವೆ ಇವರು ಚಿಂತನೆಯ ಕೌಶಲ್ಯಗಳನ್ನು ಬೆಳೆಸುವುದನ್ನು ಉದ್ದೇಶವಾಗಿಟ್ಟುಕೊಂಡಿರುವ ಶೈಕ್ಷಣಿಕ ಪಠ್ಯಗಳು ಕೇವಲ ವೈಯುಕ್ತಿಕ ಕಲಿಕಾಗಾರನಿಗೆ ಮಾತ್ರವಲ್ಲ, ಅದರೆ ಸಮುದಾಯಕ್ಕೆ ಮತ್ತು ಪೂರ್ತಿ ಪ್ರಜಾಪ್ರಭುತ್ವಕ್ಕೆ ಉಪಯೋಗಕರವಾಗಿದೆ ಎಂಬುದನ್ನು ಅಂಗೀಕರಿಸಿದ ಹಲವಾರು ಶೈಕ್ಷಣಿಕ ಮುಖಂಡರುಗಳಲ್ಲಿ ಒಬ್ಬರಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ನಿರ್ಣಾಯಕ ಚಿಂತನೆಯ ಪ್ರಾಮುಖ್ಯತೆಯನ್ನು ನೋಡುವುದಕ್ಕೆ ಮೂಲ ಯಾವುದೆಂದರೆ ಕಲಿಯುವಿಕೆಯಲ್ಲಿ ನಿರ್ಣಾಯಕ ಚಿಂತನೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಾಗಿದೆ. ಈ ವಿಷಯವನ್ನು ಕಲಿಯುವುದಕ್ಕೆ ಅಲ್ಲಿ ಎರಡು ಅರ್ಥಗಳಿವೆ. ಮೊದಲನೆಯದು ಕಲಿಕಾಗಾರರು (ಮೊದಲ ಬಾರಿಗೆ) ವಿಷಯದಲ್ಲಿ ಅಂತರ್ಗತವಾಗಿರುವ ಮೂಲ ಕಲ್ಪನೆಗಳು, ತತ್ವಗಳು, ಮತ್ತು ಸಿದ್ಧಾಂತಗಳನ್ನು ತಮ್ಮ ಮನಸ್ಸಿನಲ್ಲಿ ಸಂಯೋಜಿಸಿದ ಸಂದರ್ಭದಲ್ಲಿ ಉಂಟಾಗುತ್ತದೆ. ಇದು ಅಂತರ್ಗತೀಕರಣ (ಸಂಯೋಜೀಕರಣ)ದ ಒಂದು ಪ್ರಕ್ರಿಯೆಯಾಗಿದೆ. ಕಲಿಕಾಗಾರರು ಆ ಕಲ್ಪನೆಗಳನ್ನು, ತತ್ವಗಳನ್ನು, ಮತ್ತು ಸಿದ್ಧಾಂತಗಳನ್ನು ಪರಿಣಾಮಕಾರಿಯಾಗಿ ತಮ್ಮ ಜೀವನದಲ್ಲಿ ಬಳಸಿಕೊಂಡು ಅವುಗಳು ಸಂಬಂಧಿತವಾಗಿ ಬದಲಾದ ಸಂದರ್ಭದಲ್ಲಿ ಎರಡನೆಯದು ಸಂಭವಿಸುತ್ತದೆ. ಇದು ಅನ್ವಯಿಕೆಯ ಒಂದು ಪ್ರಕ್ರಿಯೆಯಾಗಿದೆ. ಒಳ್ಳೆಯ ಶಿಕ್ಷಕರು ಪ್ರಾಥಮಿಕ ಕಲಿಕೆಯನ್ನು ಒಳಗೊಂಡಂತೆ, ಕಲಿಕೆಯ ಪ್ರತಿ ಹಂತದಲ್ಲಿಯೂ ನಿರ್ಣಾಯಕ ಚಿಂತನೆಯನ್ನು (ಬೌದ್ಧಿಕವಾಗಿ ಕಾರ್ಯತತ್ಪರವಾದ ಚಿಂತನೆ) ಬಿತ್ತುತ್ತಾರೆ (ಬೆಳೆಸುವಲ್ಲಿ ಶ್ರಮಿಸುತ್ತಾರೆ). ಬೌದ್ಧಿಕ ಕಾರ್ಯತತ್ಪರತೆಯ ಈ ಪ್ರಕ್ರಿಯೆಯು ಆಕ್ಸ್‌ಫರ್ಡ್, ಡುರ್ಹಾಮ್, ಕ್ಯಾಂಬ್ರಿಜ್ ಮತ್ತು ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್ (ಅರ್ಥಶಾಸ್ತ್ರದ ಲಂಡನ್ ಸ್ಕೂಲ್) ಟ್ಯುಟೋರಿಯಲ್‌ಗಳ ಕೇಂದ್ರ ವಿಷಯವಾಗಿದೆ. ಉಪಾಧ್ಯಾಯನು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾನೆ, ಅನೇಕ ವೇಳೆ ಒಂದು ಸಾಕ್ರಟೀಸ್‌ನ ಮಾದರಿಯಲ್ಲಿ ಪ್ರಶ್ನಿಸುತ್ತಾನೆ (ಸಾಕ್ರಟಿಕ್ ಕ್ವೆಶ್ಚನಿಂಗ್ (ಸಾಕ್ರಟೀಸ್‌ನ ಪ್ರಶ್ನೆ ಕೇಳುವಿಕೆ) ಅನ್ನು ನೋಡಿ). ಇದರ ಅರ್ಥವೇನೆಂದರೆ, ಒಬ್ಬ ಶಿಕ್ಷಕನು ಪ್ರಶ್ನೆಗಳನ್ನು ಕೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆಯನ್ನು ಬೆಳೆಸುವ ನಿರ್ಣಾಯಕ ಚಿಂತನೆಯನ್ನು ಬೆಳೆಸುತ್ತಾನೆ, ಅದು ಜ್ಞಾನದ ನಿರ್ಮಾಣಕ್ಕೆ ಅವಶ್ಯಕವಾದ ಚಿಂತನೆಯನ್ನು ಪ್ರಚೋದಿಸುತ್ತದೆ.

ಈ ಮೇಲೆ ವಿವರಿಸಲ್ಪಟ್ಟಂತೆ, ಪ್ರತಿ ಬೋಧನಾಶಾಖೆಯು ನಿರ್ಣಾಯಕ ಚಿಂತನೆ ವಿಷಯಗಳ ಮತ್ತು ತತ್ವಗಳ (ಸ್ಕೂಲ್‌ನಲ್ಲಿನ ತತ್ವಗಳಂತೆ) ತನ್ನ ಬಳಕೆಯನ್ನು ಅಳವಡಿಸಿಕೊಳ್ಳುತ್ತದೆ. ಮೂಲ ವಿಷಯಗಳು ಯಾವತ್ತಿಗೂ ಕೂಡ ಅಸ್ತಿತ್ವದಲ್ಲಿ ಇರುತ್ತವೆ, ಆದರೆ ಅವುಗಳು ವಿಷಯ-ನಿರ್ದಿಷ್ಟಿತ ಅಂಶಗಳಲ್ಲಿ ಸಂಯೋಜಿಸಲ್ಪಟ್ಟಿರುತ್ತದೆ. ಈ ಅಂಶಗಳನ್ನು ಕಲಿಯುವುದಕ್ಕೆ ವಿದ್ಯಾರ್ಥಿಗಳಿಗೆ ಬೌದ್ಧಿಕ ಕಾರ್ಯತತ್ಪರತೆಯು ನಿರ್ಣಾಯಕವಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಸ್ವಂತ ಚಿಂತನೆಯನ್ನು ಮಾಡಲೇ ಬೇಕು, ಅವರು ತಮ್ಮ ಸ್ವಂತ ಜ್ಞಾನದ ನಿರ್ಮಾಣವನ್ನು ಮಾಡಬೇಕು. ಒಳ್ಳೆಯ ಶಿಕ್ಷಕರು ಇದನ್ನು ಗುರುತಿಸುತ್ತಾರೆ ಮತ್ತು ಆದ್ದರಿಂದ ಮೂಲ ವಿಷಯಗಳ ಮತ್ತು ವಿಷಯದ ಪ್ರಾಮುಖ್ಯತೆಯನ್ನು ವಹಿಸಿರುವ ತತ್ವಗಳ ಮಾಲಿಕತ್ವವನ್ನು ಪ್ರಚೋದಿಸುವ ಪ್ರಶ್ನೆಗಳು, ಓದುವಿಕೆಗಳು, ಕಾರ್ಯಚಟುವಟಿಕೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ.

ಯುಕೆ ಯ ಸ್ಕೂಲ್ ವ್ಯವಸ್ಥೆಯಲ್ಲಿ, ನಿರ್ಣಾಯಕ ಚಿಂತನೆ ಯು ಒಂದು ಕಲಿಕಾ ವಿಷಯವಾಗಿ ನೀಡಲ್ಪಡುತ್ತದೆ, ಅದನ್ನು ೧೬ ರಿಂದ ೧೮-ವರ್ಷ-ವಯಸ್ಸಿನ ವಿದ್ಯಾರ್ಥಿಗಳು ಎ-ಹಂತದ ವಿಷಯವಾಗಿ ತೆಗೆದುಕೊಳ್ಳಬಹುದಾಗಿದೆ. ಒಸಿಆರ್ ಪರೀಕ್ಷಾ ಮಂಡಳಿಯ ಅಡಿಯಲ್ಲಿ, ವಿದ್ಯಾರ್ಥಿಗಳು ಎ‌ಎಸ್ ಗೆ ಎರಡು ಪರೀಕ್ಷಾ ಪೇಪರ್‌ಗಳಿಗೆ ಕುಳಿತುಕೊಳ್ಳಬಹುದಾಗಿದೆ: "ಸಾಕ್ಷ್ಯದ ವಿಶ್ವಾಸಾರ್ಹತೆ" ಮತ್ತು ವಾದಗಳನ್ನು ಕಂಡುಹಿಡಿಯುವುದು ಮತ್ತು ಬೆಳೆಸುವುದು". ಪೂರ್ತಿ ಸುಧಾರಿತ ಜಿಸಿಇ ಈಗ ದೊರಕುತ್ತಿದೆ: ಎರಡು ಎ‌ಎಸ್ ಘಟಕಗಳ ಸಂಯೋಜನದಲ್ಲಿ, ಅಬ್ಯರ್ಥಿಗಳು ಎರದು ಪೇಪರ್‌ಗಳಿಗೆ ಕುಳಿತುಕೊಳ್ಳುತ್ತಾರೆ "ದ್ವಂದ್ವಗಳ ವಿಶ್ಲೇಷಣ" ಮತ್ತು "ನಿರ್ಣಯಾತ್ಮಕ ಕೇಳುವಿಕೆ". ಎ-ಹಂತದ ಪರೀಕ್ಷೆಗಳು ಅಬ್ಯರ್ಥಿಗಳನ್ನು ನಿರ್ಣಾಯಕವಾಗಿ ಆಲೋಚಿಸುವ ಬಗ್ಗೆ ಮತ್ತು ವಿಶ್ಲೇಷಿಸುವುದಕ್ಕೆ ಬೇಕಾದ ಸಾಮರ್ಥ್ಯವನ್ನು ಹೊಂದಿದ್ದಾರೆಯೋ, ಮತ್ತು ಅವುಗಳ ತೆಗೆಯುವಿಕೆ ಅಥವಾ ಸಂಯೋಜಿಸುವಿಕೆಯ ಊರ್ಜಿತತ್ವಗಳ ಮೇಲೆ ವಾದಗಳನ್ನು ಮಾಡುವುದು, ಹಾಗೆಯೇ ತಮ್ಮ ಸ್ವಂತದ ವಾದವಿವಾದಗಳನ್ನು ತಯಾರಿಸುವುದು ಈ ಎಲ್ಲವನ್ನೂ ಪರೀಕ್ಷಿಸುತ್ತವೆ. ಇದು ಕೆಲವು ಸಂಬಂಧಿತ ವಿಷಯಗಳಾದ ವಿಶ್ವಾಸಾರ್ಹತೆ ಮತ್ತು ನೈತಿಕ ನಿರ್ಣಯ-ಮಾಡುವಿಕೆಯಂತಹ ವಿಷಯಗಳ ಮೇಲೆ ವಿಶ್ಲೇಷಣೆಯನ್ನು ಮಾಡುವ ಅವರ ಸಾಮರ್ಥ್ಯವನ್ನೂ ಕೂಡ ಪರೀಕ್ಷಿಸುತ್ತದೆ. ಆದಾಗ್ಯೂ, ಇದರ ವಿಷಯದ ಅಂತಃಸತ್ವದ ತುಲನಾತ್ಮಕ ಕೊರತೆಯ ಕಾರಣದಿಂದ, ಹಲವಾರು ವಿಶ್ವವಿದ್ಯಾಲಯಗಳು ಇದನ್ನು ಪ್ರವೇಶಗಳ ಸಮಯದಲ್ಲಿ ಒಂದು ಪ್ರಮುಖ ಎ-ಹಂತವಾಗಿ ಸ್ವೀಕರಿಸುವುದಿಲ್ಲ.[೧೨] ಅದೇನೇ ಇದ್ದರೂ, ಎ‌ಎಸ್ ಅನೆಕ ವೇಳೆ ಕೇಳುವಿಕೆಯ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಉಪಯೋಗಕರವಾಗಿದೆ, ಮತು ಪೂರ್ತಿ ಸುಧಾರಿತ ಜಿಸಿಇ ಇದು ರಾಜಕೀಯ ಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ ಅಥವಾ ಮತಧರ್ಮಶಾಸ್ತ್ರಗಳಲ್ಲಿನ ಡಿಗ್ರೀ ವಿಷಯಗಳಲ್ಲಿ ಉಪಯೋಗಕರವಾಗಿದೆ, ಇದು ನಿರ್ಣಾಯಕ ಚಿಂತನೆಗೆ ಉಪಯೋಗಕರವಾಗಿರುವ ಅವಶ್ಯಕವಾದ ಕೌಶಲ್ಯಗಳನ್ನು ನೀಡುತ್ತದೆ, ಉದಾಹರಣೆಗೆ, ಬೈಬಲ್‌ನ ಅಧ್ಯಯನದಲ್ಲಿ.

ಯುಕೆ ಯಲ್ಲಿ ನಿರ್ಣಾಯಕ ಚಿಂತನೆಯಲ್ಲಿ ನೀಡಲ್ಪಡುವ ಒಂದು ಅಡ್ವಾನ್ಸಡ್ ಎಕ್ಸ್ಟೆನ್ಷನ್ ಅವಾರ್ಡ್ (ಸುಧಾರಿತ ವಿಸ್ತರಿತ ಅವಾರ್ಡ್) ಕೂಡ ಇದೆ, ಇದು ವಿದ್ಯಾರ್ಥಿಗಳು ಎ-ಹಂತದಲ್ಲಿ ನಿರ್ಣಾಯಕ ಚಿಂತನೆ ವಿಷಯವನ್ನು ಹೊಂದಿದ್ದರೋ ಇಲ್ಲವೋ ಎಂಬುದರ ಹೊರತಾಗಿಯೂ ಯಾವುದೇ ಎ-ಹಂತದ ವಿದ್ಯಾರ್ಥಿಗೆ ತೆರೆಯಲ್ಪಟ್ಟಿದೆ. ಕ್ಯಾಂಬ್ರಿಜ್ ಅಂತರಾಷ್ಟ್ರೀಯ ಪರೀಕ್ಷೆಗಳು ಚಿಂತನ ಕೌಶಲಗಳಲ್ಲಿ ಒಂದು ಎ-ಹಂತವನ್ನು ಹೊಂದಿವೆ.[೧೩]

೨೦೦೮ ರಿಂದ, ಅಸೆಸ್‌ಮೆಂಟ್ ಅಂಡ್ ಕ್ವಾಲಿಫಿಕೇಷನ್ಸ್ ಅಲಿಯಾನ್ಸ್ ಕೂಡ ಒಂದು ಎ-ಹಂತದ ನಿರ್ಣಾಯಕ ಚಿಂತನೆ ನಿರ್ದಿಷ್ಟೀಕರಣವನ್ನು ನೀಡುತ್ತಿದೆ;[೧೪]

ಒಸಿಆರ್ ಪರೀಕ್ಷಾ ಮಂಡಳಿಗಳೂ ಕೂಡ ಅವುಗಳ ವಿಷಯಗಳನ್ನು ೨೦೦೮ ಕ್ಕಾಗಿ ಬದಲಾಯಿಸಿವೆ. ವಿಶ್ವವಿದ್ಯಾಲಯಗಳ ಮೂಲಕ ವಿಶ್ವವಿದ್ಯಾಲಯ ಪ್ರವೇಶಕ್ಕೆ ಹಲವಾರು ಪರೀಕ್ಷೆಗಳು, ಎ-ಹಂತದ ಪರೀಕ್ಷೆಗಳ ಮೇಲೆ, ಕೂಡ ಒಂದು ನಿರ್ಣಾಯಕ ಚಿಂತನೆಯ ಅಂಶವನ್ನು ಒಳಗೊಳ್ಳುತ್ತವೆ, ಉದಾಹರಣೆಗೆ ಎಲ್‌ಎನ್‌ಎಟಿ, ಯುಕೆಸಿಎಟಿ, ಜೀವವೈಜ್ಞಾನಿಕ ಪ್ರವೇಶ ಪರೀಕ್ಷೆಗಳು ಮತ್ತು ಚಿಂತನೆಯ ಕೌಶಲ್ಯಗಳ ನಿರ್ಧರಿಸುವಿಕೆ ಇತ್ಯಾದಿಗಳನ್ನು ಒಳಗೊಳ್ಳುತ್ತವೆ.

ನಿರ್ಣಾಯಕ ಚಿಂತನೆ ಸೂಚನೆಯ ಕಾರ್ಯಪಟುತ್ವದ ಸಂಶೋಧನೆ

[ಬದಲಾಯಿಸಿ]

ಸಂಶೋಧನೆಯು ನಿರ್ಣಾಯಕ ಚಿಂತನೆಯನ್ನು ಬೆಳೆಸುವಲ್ಲಿನ ವಿಶ್ವವಿದ್ಯಾಲಯಗಳ ಪರಿಣಾಮಕಾರಿತ್ವದ ಬಗೆಗಿನ ಒಂದು ವ್ಯಾಪಕವಾಗಿ ಹರಡಿರುವ ಸ್ಕೆಪ್ಟಿಸಮ್ ಅನ್ನು ಸೂಚಿಸುತ್ತದೆ. ಉದಾಹರಣೆಗೆ, ಕ್ಯಾಲಿಫೋರ್ನಿಯಾದಲ್ಲಿನ ೬೮ ಸಾರ್ವಜನಿಕ ಮತ್ತು ಖಾಸಗಿ ಕಾಲೇಜ್‌ಗಳ ಮೂರು ವರ್ಷದ ಅಧ್ಯಯನದಲ್ಲಿ,[which?] ನಿರ್ಣಾಯಕ ಚಿಂತನೆಯು ಅವರ ಸೂಚನೆಯ ಒಂದು ಪ್ರಾಥಮಿಕ ಉದ್ದೇಶವಾಗಿರಬೇಕು ಎಂಬುದಾಗಿ ಬಹುಪಾಲು ಜನರು (೮೯%) ಪ್ರತಿಪಾದಿಸಿದ್ದರೂ ಕೂಡ, ಕೇವಲ ಸ್ವಲ್ಪ ಭಾಗ ಜನರು (೧೯%) ನಿರ್ಣಾಯಕ ಚಿಂತನೆ ಅಂದರೆ ಏನು ಎಂಬುದರ ಸರಿಯಾದ ವಿವರಣೆಯನ್ನು ನೀಡಬಲ್ಲವರಾಗಿದ್ದರು. ಅದಕ್ಕೂ ಹೆಚ್ಚಾಗಿ, ಹೆಚ್ಚಿನ ಪಾಲು ಶಿಕ್ಷಕರು (೭೮%) ತಮ್ಮ ವಿದ್ಯಾರ್ಥಿಗಳು ಸರಿಯಾದ ಬೌದ್ಧಿಕ ಮಾನದಂಡಗಳ (ತಮ್ಮ ಚಿಂತನೆಯನ್ನು ಪರಿಶೀಲಿಸುವಲ್ಲಿನ ಬಳಕೆಗೆ) ಕೊರತೆಯನ್ನು ಹೊಂದಿದ್ದಾರೆ ಎಂಬುದಾಗಿ ಹೇಳಿದರೂ ಕೂಡ, ಮತ್ತು ವಿದ್ಯಾರ್ಥಿಗಳು ತಮ್ಮ ಸ್ವಂತ ಕೆಲಸದ ಕಲಿಯುವಿಕೆಯು ಪ್ರಾಥಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದನ್ನು ಅರಿತರು ಎಂದು ೭೩% ಶಿಕ್ಷಕರು ಹೆಳಿದ್ದಾರೆ, ಕೇವಲ ಸಣ್ಣ ಪ್ರಮಾಣದ ಶಿಕ್ಷಕರು (೮%) ಮಾತ್ರ ಯಾವುದೇ ಬೌದ್ಧಿಕ ಮಾನದಂಡ ಅಥವಾ ವಿದ್ಯಾರ್ಥಿಗಳಾಗಿ ಅವರಿಗೆ ಅವಶ್ಯಕವಾಗಿರುವ ಮಾನದಂಡಗಳು ಅಥವಾ ಈ ಮಾನದಂಡಗಳು ಮತ್ತು ಸ್ಟ್ಯಾಂಡರ್ಡ್‌ಗಳು ಅಂದರೆ ಏನು ಎಂಬುದರ ಬಗೆಗೆ ಬುದ್ಧಿವಂತ ವಿವರಣೆಯನ್ನು ನೀಡಬಲ್ಲವರಾಗಿದ್ದರು.[ಸೂಕ್ತ ಉಲ್ಲೇಖನ ಬೇಕು]

ಈ ಅಧ್ಯಯನವು ಹೆಚ್ಚಿನ ಅಧ್ಯಯನದಲ್ಲಿ ಪರಿಣಾಮಕಾರಿತ್ವವನ್ನು ಕಲಿಸುವ ಸಾಹಿತ್ಯದ ಒಂದು ಮೆಟಾ-ವಿಶ್ಲೇಷಣೆಗೆ ಕನ್ನಡಿಯನ್ನು ಹಿಡಿಯುತ್ತದೆ.[೧೫]

ಅಧ್ಯಯನದ ಪ್ರಕಾರ, ಹೆಚ್ಚಿನ ಅಧ್ಯಯನದ ಮೆಲಿನ ಅಧಿಕಾರಿಗಳು, ರಾಜಕೀಯ ಮುಖಂಡರುಗಳು ಮತ್ತು ವಾಣಿಜ್ಯ ಉದ್ಯಮಿಗಳ ನಿರ್ಣಯಾತ್ಮಕ ವರದಿಗಳು ಹೇಳಿದ್ದೇನೆಂದರೆ ಹೆಚ್ಚಿನ ಶಿಕ್ಷಣವು ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಪ್ರತಿಕ್ರಿಯಿಸುವುದಕ್ಕೆ ವಿಫಲವಾಗಿದೆ, ಮತ್ತು ನಮ್ಮ ಹಲವಾರು ಪದವೀಧರರ ಜ್ಞಾನ ಮತ್ತು ಕೌಶಲಗಳು ಒಳ್ಳೆಯ-ವಿದ್ಯಾಭ್ಯಾಸವನ್ನು ಹೊಂದಿರುವ ಸಮಾಜದ ಅವಶ್ಯಕೆತೆಗಳ ಮಟ್ಟವನ್ನು ಮುಟ್ಟುವುದಿಲ್ಲ. ಆದ್ದರಿಂದ ಮೆಟಾ-ವಿಶ್ಲೇಷಣೆಯು ಒಂದು ಪ್ರಶ್ನೆಯ ಮೇಲೆ ಕೇಂದ್ರೀಕೃತವಾಗಿದೆ: ಈ ಪ್ರತಿಪಾದನೆಗಳು ಎಷ್ಟು ಸಿಂಧುವಾಗಿವೆ? ಸಂಶೋಧನೆಗಳು ಅಂತಿಮವಾಗಿ ಹೇಳಿದ್ದೇನೆಂದರೆ:

  • "ಬೋಧನಾ ಶಾಖೆಯು ವಿದ್ಯಾರ್ಥಿಗಳ ಚಿಂತನಾ ಕೌಶಲ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಆಸಕ್ತಿಯನ್ನು ಹೊಂದಿರುತ್ತಾರೆ, ಅದರೆ ಸಂಶೋಧನೆಯು ಸ್ಥಿರವಾಗಿ ತೋರಿಸಿದ್ದೇನೆಂದರೆ ಪ್ರಯೋಗದಲ್ಲಿ ಅಂದರೆ ಆಚರಣೆಯಲ್ಲಿ ನಾವುಗಳು ಬೋಧನಾಶಾಖೆಯ ಸತ್ಯದ ಮತ್ತು ಸಂಗತಿಗಳ ಕಡೆಗೆ ಉದ್ದೇಶಿತವಾಗಿರುತ್ತೇವೆ, ಬೌದ್ಧಿಕ ಅಥವಾ ಮೌಲ್ಯಗಳ ಬೆಳವಣಿಗೆಯೆ ಹೊರತಾಗಿ ಅತ್ಯಂತ ಕಡಿಮೆಯ ಜ್ಞಾನಗ್ರಹಣದ ಹಂತಗಳಲ್ಲಿ ಉದ್ದೇಶಿತವಾಗಿರುತ್ತೇವೆ."
  • "ವಿದ್ಯಾರ್ಥಿಗಳ ಹೆಚ್ಚಿನ-ಶ್ರೇಣಿಯ ಬೌದ್ಧಿಕ ಅಥವಾ ಜ್ಞಾನಗ್ರಹಣದ ಸಾಮರ್ಥ್ಯಗಳನ್ನು ಹೆಚ್ಚಾಗಿ ಸಾರ್ವತ್ರಿಕವಾಗಿ ಒಪ್ಪುವ ಬೋಧನಾಶಾಖೆಯು ಕಾಲೇಜ್‌ಗಳ ಮತ್ತು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕಾರ್ಯವನ್ನು ಹೆಚ್ಚು ಪ್ರಮುಖ ಎಂದು ಭಾವಿಸುತ್ತದೆ."
  • ಈ "ಸಾಮರ್ಥ್ಯಗಳು ನಮ್ಮ ವಿದ್ಯಾರ್ಥಿಗಳ ಜಗತ್ತಿನ ಗ್ರಹಿಕೆಗಳನ್ನು ಬಲಪಡಿಸುತ್ತವೆ ಮತ್ತು ಅವರು ಮಾಡುವ ನಂತರದ ನಿರ್ಣಯಗಳನ್ನು ಬಲಪಡಿಸುತ್ತವೆ."
  • "ನಿರ್ದಿಷ್ಟವಾಗಿ, ನಿರ್ಣಾಯಕ ಚಿಂತನೆಯು - ಸಾಕ್ಷ್ಯದ ಗುಣಮಟ್ಟವನ್ನು ಕೌಶಲ್ಯವಾಗಿ ಮತ್ತು ನ್ಯಾಯಸಮ್ಮತವಾಗಿ ಪರಿಶಿಲಿಸುವುದಕ್ಕೆ ಬೇಕಾದ ಸಾಮರ್ಥ್ಯ ಮತ್ತು ದೋಷವನ್ನು ಕಂಡುಹಿಡಿಯುವುದು, ಕಾಪಟ್ಯ, ಬದಲಾವಣೆ, ಅಸಂಯೋಜನ, ಮತ್ತು ಪಕ್ಷಪಾತಗಳನ್ನು ಪರಿಶೀಲಿಸುತ್ತದೆ - ವೈಯುಕ್ತಿಕ ಯಶಸ್ಸು ಮತ್ತು ರಾಷ್ಟ್ರೀಯ ಅವಶ್ಯಕತೆ ಈ ಎರಡಕ್ಕೂ ಕೆಂದ್ರವಾಗಿದೆ."
  • ಶಿಕ್ಷಣ ಕ್ಷೇತ್ರದ ಅಮೇರಿಕಾದ ಮಂಡಳಿಯ ಮೂಲಕ ನಡೆದ ೧೯೭೨ ರ ೪೦,೦೦೦ ಬೋಧನಾ ಶಾಖೆಯ ಸದಸ್ಯರ ಅಧ್ಯಯನವು ಹೇಳಿದ್ದೇನೆಂದರೆ ೯೭ ಪ್ರತಿಶತ ಪ್ರತಿವಾದಿಗಳಿಂದ ಸೂಚಿಸಲ್ಪಟ್ಟ ಅಂಡರ‍್ಗ್ರಾಜುಯೇಟ್ ಶಿಕ್ಷಣದ ಅತ್ಯಂತ ಪ್ರಮುಖವಾದ ಗುರಿಯೆಂದರೆ ನಿರ್ಣಯಾತ್ಮಕವಾಗಿ ಚಿಂತಿಸುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ.
  • ಪ್ರಕ್ರಿಯೆ-ಉದ್ದೇಶಿತ ಸೂಚ್ಯನೀಯ ಉದ್ದೆಶಗಳು "ತಳದಿಂದ ವಿಧ್ಯುಕ್ತ ಕೇಳುವಿಕೆಯಿಂದ ತೆಗೆದುಕೊಂಡ ಪರಿಣಾಮಕಾರಿ ಚಳುವಳಿಯನ್ನು ಪ್ರಚೋದಿಸುವಲ್ಲಿ ಸಾಂಪ್ರದಾಯಿಕ ಸೂಚನೆಗಿಂತ ದೀರ್ಘ ಕಾಲ ಯಶಸ್ವಿಯಾಗಲ್ಪಟ್ಟಿವೆ. ಅಂತಹ ಯೋಜನೆಗಳು ಇತರ ವಿದ್ಯಾರ್ಥಿಗಳು ಮತ್ತು ಉಪನ್ಯಾಸಗಳ ಜೊತೆಗೆ ಕಲಿಯುವಿಕೆ ಮತ್ತು ಸಹಕಾರ ಕಾರ್ಯನಿರ್ವಹಿಸುವುದರಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲ ತೊಡಗಿಕೊಳ್ಳುವಿಕೆಯನ್ನು ಪರಿಶಿಲಿಸುತ್ತವೆ..."
  • "ಕಾಲೇಜ್ ಕ್ಲಾಸ್‌ರೂಮ್‌ಗಳ ಹಲವಾರು ಅಧ್ಯಯನಗಳು ಬಹಿರಂಗಗೊಳಿಸುವುದೇನೆಂದರೆ, ನಮ್ಮ ವಿದ್ಯಾರ್ಥಿಗಳನ್ನು ಕ್ರಿಯಶೀಲವಾಗಿ ತೊಡಗಿಸುವುದರ ಬದಲಾಗಿ, ಉಪನ್ಯಾಸಗಳು ಜ್ಞಾನಗ್ರಹಣ ಕೌಶಲ್ಯಗಳನ್ನು ಬೆಳೆಸುವುದರಲ್ಲಿ ಇತರ ಮಾರ್ಗಗಳಷ್ಟು ಪರಿಣಾಮಕಾರಿಯಾಗಿರದಿದ್ದರೂ ಕೂಡ ನಾವು ಅವರಿಗೆ ಉಪನ್ಯಾಸ ನೀಡುತ್ತೇವೆ (ಕಲಿಸುತ್ತೇವೆ)."
  • "ಅದಕ್ಕೆ ಜೊತೆಯಾಗಿ, ವಿದ್ಯಾರ್ಥಿಗಳು ತಮ್ಮ ಕ್ಲಾಸ್‌ನಲ್ಲಿ ಕೇವಲ ನಾಲ್ಕನೆಯ-ಒಂದು ಭಾಗದಷ್ಟು ಸಮಯವನ್ನು ಮಾತ್ರ ಉಪನ್ಯಾಸಗಳನ್ನು ಕೇಳುವಲ್ಲಿ ತೊಡಗಿಸಿಕೊಳ್ಳುತ್ತಾರೆ, ಮತ್ತು ಉಪನ್ಯಾಸಗಳಿಂದ ಧಾರಣಶಕ್ತಿಯ ಪ್ರಮಾಣವು ಕಡಿಮೆಯಾಗಿರುತ್ತದೆ."
  • "ನಮ್ಮ ವಿಧಾನಗಳು ಅನೇಕ ವೇಳೆ ವಿದ್ಯಾರ್ಥಿಗಳ ದೋಷಯುಕ್ತ ತಿಳುವಳಿಕೆಗಳನ್ನು ಹೊಡೆದೋಡಿಸುವುದಕ್ಕೆ ವಿಫಲವಾಗುತ್ತವೆ, ಮತ್ತು ಕ್ಲಿಷ್ಟ, ಅಮೂರ್ತ ಸಂಗತಿಗಳನ್ನು ಬಯಸುತ್ತವೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಸಮಸ್ಯೆಯನ್ನು ಪರಿಹರಿಸುವುದಕ್ಕಿನ ಸಾಮರ್ಥ್ಯವು ಅಸಮರ್ಪಕವಾದ ಸರಳ ಪ್ರಾಯೋಗಿಕ ಆಚರಣೆಗಳ ಬಳಕೆಯ ಮೂಲಕ ನಿರ್ಬಂಧಿತವಾಗಿರುತ್ತದೆ."
  • "ಕ್ಲಾಸ್‌ರೂಮ್ ಪರೀಕ್ಷೆಗಳು ಅನೇಕ ವೇಳೆ ವಿದ್ಯಾರ್ಥಿಗಳ ಕಲಿಯುವಿಕೆಗೆ ಮಾನದಂಡಗಳನ್ನು ಸ್ಥಾಪಿಸುತ್ತವೆ. ಸೂಚನೆಯ ಜೊತೆಗೆ ಇರುವಂತೆ, ಆದಾಗ್ಯೂ, ನಾವುಗಳು ಬೌದ್ಧಿಕ ಸ್ಪರ್ಧೆಗಳ ಹೊರತಾಗಿ ನೆನಪು ಮಾಡಿಕೊಳ್ಳಲ್ಪಟ್ಟ ವಾಸ್ತವ ಮಾಹಿತಿಯ ಪುನಃಕರೆಯುವಿಕೆಗೆ ಪ್ರಾಧನ್ಯತೆಯನ್ನು ನೀಡುತ್ತೇವೆ."
  • "ಉಪನ್ಯಾಸವನ್ನು ನೀಡುವುದಕ್ಕೆ ನಮ್ಮ ಮನ್ನಣೆಯನ್ನು ಒಟ್ಟರೆಯಾಗಿ ತೆಗೆದುಕೊಂಡಾಗ, ನಮ್ಮ ಪರೀಕ್ಷೆಗಳು ನಮ್ಮ ವಿದ್ಯಾರ್ಥಿಗಳ ಅವರಿಗೆ ಅಥವಾ ಸಮಾಜಕ್ಕೆ ನಿರ್ಬಂಧಿತ ಮೌಲ್ಯವನ್ನು ನೀಡುವ ಸಾಮಾನ್ಯವಾದ ಸತ್ಯವನ್ನು-ಉದ್ದೇಶಿಸಲ್ಪಟ್ಟ ಮೆಮೊರಿ ಲರ್ನಿಂಗ್, ಪುನಃ ಶಕ್ತಿಯನ್ನು ನೀಡುವಂತವಾಗಿರುತ್ತವೆ."

ಈ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿ, ವಿದ್ಯಾರ್ಥಿಗಳಿಗೆ ನಿರ್ಣಾಯಕವಾಗಿ ಚಿಂತನೆ ಮಾಡುವುದರಲ್ಲಿ ಪರಿಣಿತಿಯನ್ನು ನೀಡುವುದಕ್ಕೆ, ಪ್ರಮುಖವಾಗಿ ಇದು ಎಲ್ಲಿ ನಿರ್ಣಾಯಕವಾಗಿರುತ್ತದೆಯೋ ಅಂತಹ ಪದವೀಧರ ಮಟ್ಟ ಮತ್ತು ಸಂಶೋಧನೆಯಲ್ಲಿ, ಅವರು ಹೇಗೆ ಉತ್ತರವನ್ನು ತಿಳಿದುಕೊಳ್ಳಬೇಕು ಎಂಬುದನ್ನು ಕಲಿಸಲ್ಪಡಬಾರದು, ಆದರೆ ಪ್ರಶ್ನೆಯನ್ನು ಹೇಗೆ ಕೇಳಬೇಕು ಎಂಬುದನ್ನು ಕಲಿತುಕೊಳ್ಳಬೇಕು. ಶ್ವಾರ್ಟ್ಜ್‌ನು "ವೈಜ್ಞಾನಿಕ ಸಂಶೋಧನೆಯಲ್ಲಿ ಮೂರ್ಖತನದ ಮಹತ್ವ"ದಲ್ಲಿ[೧೬] ವಿವರಿಸುವಂತೆ ಸಂಶೋಧಕರು ತಾವು ಏನನ್ನು ತಿಳಿದಿಲ್ಲವೋ ಅದನ್ನು ಆದರದಿಂದ ಸ್ವಾಗತಿಸಬೇಕು. ಇದನ್ನು ಸಾಧಿಸುವಲ್ಲಿ ನಿರ್ಣಾಯಕ ಚಿಂತನೆಯು ಒಂದು ಪ್ರಾಥಮಿಕ ಸಾಧನವಾಗಿದೆ.

ನಿರ್ಣಾಯಕ ಚಿಂತಕರ ಬೆಳವಣಿಗೆ

[ಬದಲಾಯಿಸಿ]

ಒಬ್ಬ ನಿರ್ಣಾಯಕ ಚಿಂತಕನ ಬೌದ್ಧಿಕ ಸ್ವಭಾವಗಳನ್ನು ಬೆಳೆಸುವುದಕ್ಕೆ ಅಲ್ಲಿ ಯಾವಿದೇ ರೀತಿಯ ಸರಳ ವಿಧಾನಗಳಿಲ್ಲ. ಒಂದು ಪ್ರಮುಖವಾದ ಮಾರ್ಗವು ಒಬ್ಬ ವ್ಯಕ್ತಿಯ ಬೌದ್ಧಿಕ ತಾದಾತ್ಮ್ಯಾನುಭೂತಿ ಮತ್ತು ಬೌದ್ಧಿಕ ನಮ್ರತೆಯನ್ನು ಅವಶ್ಯಕವಾಗಿಸುತ್ತದೆ. ಮೊದಲನೆಯದು ಒಬ್ಬ ವ್ಯಕ್ತಿಯು ಹೊಂದಿರುವ ನಕರಾತ್ಮಕ ಭಾವನೆಗಳ ಒಳಗೆ ಪ್ರವೆಶಿಸುವುದರಲ್ಲಿ ಮತ್ತು ಅವುಗಳ ಕಡೆಗೆ ಅವಲೋಕನಗಳ ಹೇಳಿಕೆಗಳನ್ನು ಸರಿಯಾಗಿ ನಿರ್ಮಾಣ ಮಾಡುವಲ್ಲಿ ತೀವ್ರವಾದ ಅನುಭವವನ್ನು ಬಯಸುತ್ತದೆ. ಎರಡನೆಯದು ವ್ಯಾಪಕವಾದ ವಿಷಯಗಳಲ್ಲಿ (ಅಜ್ಞಾನವು ಒಬ್ಬ ವ್ಯಕ್ತಿಯ ಪ್ರವೇಶವನ್ನು ಮತ್ತೊಬ್ಬನಿಂದ ಈ ರಿತಿಯಾಗಿ ಹೇಳುವಂತೆ ಮಾಡುತ್ತದೆ, "ನನಗೆ ಗೊತ್ತಿತ್ತು ಎಂದು ನಾನು ಆಲೋಚಿಸಿದ್ದೆ, ಆದರೆ ನಾನು ಕೇವಲ ಆ ರೀತಿ ನಂಬಿದ್ದೆ ) ಒಬ್ಬ ವ್ಯಕ್ತಿಯ ಸ್ವಂತ ಅಜ್ಞಾನದ ಪ್ರಮಾಣವನ್ನು ಗುರುತಿಸುವುದರಲ್ಲಿನ ತೀವ್ರವಾದ ಅನುಭವವನ್ನು ಅವಶ್ಯಕವಾಗಿಸುತ್ತದೆ. ಯಾವಾಗ ಒಬ್ಬ ವ್ಯಕ್ತಿಯು ಬೌದ್ಧಿಕವಾಗಿ ಹೆಚ್ಚು ತಾದಾತ್ಮ್ಯಾನುಭೂತಿಯನ್ನು ಹೊಂದಿರುತ್ತಾನೆಯೋ ಮತ್ತು ಬೌದ್ಧಿಕವಾಗಿ ವಿನೀತನಾಗಿರುತ್ತಾನೋ ಆಗ ಆ ವ್ಯಕ್ತಿಯು ಕಡಿಮೆ ಪಕ್ಷಪಾತಿಯಾಗುತ್ತಾನೆ ಮತ್ತು ಹೆಚ್ಚು ವಿಶಾಲ-ಮನಸ್ಸಿನವನಾಗುತ್ತಾನೆ, ಮತ್ತು ಅದು ಸಮಯವನ್ನು, ಉದ್ದೇಶಪೂರ್ವಕ ಅಭ್ಯಾಸ ಮತ್ತು ಬದ್ಧತೆಯನ್ನು ಅವಶ್ಯಕವಾಗಿಸುತ್ತದೆ. ಇದು ಗಣನೀಯ ಪ್ರಮಾಣದ ವೈಯುಕ್ತಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಒಳಗೊಳ್ಳುತ್ತದೆ.

ಒಬ್ಬ ವ್ಯಕ್ತಿಯ ನಿರ್ಣಯಾತ್ಮಕ ಚಿಂತನೆಯ ಸ್ವಭಾವಗಳನ್ನು ಬೆಳೆಸುವುದಕ್ಕೆ, ಅವನು ನಿರ್ಣಯ ಮಾಡುವಿಕೆಯನ್ನು ಅಮಾನತ್ತಿನಲ್ಲಿಡುವ ಕಲೆಯನ್ನು ಕಲಿತುಕೊಳ್ಳಬೇಕು (ಉದಾಹರಣೆಗೆ, ಒಂದು ಕಾದಂಬರಿಯನ್ನು ಓದುತ್ತಿರುವ ಸಮಯದಲ್ಲಿ, ಸಿನೆಮಾವನ್ನು ನೋಡುತ್ತಿರುವ ಸಮಯದಲ್ಲಿ, ಡೈಲಾಗ್‌ಗಳ ಅಥವಾ ತಾರ್ಕಿಕತೆಗೆ ಸಂಬಂಧಿಸಿದ ಕೇಳುವಿಕೆಯ ಸಮಯದಲ್ಲಿ). ಇದನ್ನು ಮಾಡುವ ಮಾರ್ಗಗಳು ನಿರ್ಣಯವನ್ನು ಉದ್ದೇಶಿಸಿರುವುದಕ್ಕಿಂತ ಒಂದು ಗ್ರಹಣ ಶಕ್ತಿಯನ್ನು ಅಳವಡಿಸಿಕೊಳ್ಳುವುದನ್ನು ಒಳಗೊಳ್ಳುತ್ತದೆ; ಅಂದರೆ, ಒಬ್ಬ ವ್ಯಕ್ತಿಯು ಒಂದು ಸಮಸ್ಯೆಗೆ ನಿರ್ಣಯಾತ್ಮಕ ಚಿಂತನೆಯನ್ನು ಅನ್ವಯಿಸಿದರೆ ಗ್ರಹಿಕೆಯಿಂದ ನಿರ್ಣಯದೆಡೆಗೆ ಬದಲಾಗುವುದು.

ಒಬ್ಬನು ಈ ಕೆಳಗೆ ನಮೂದಿಸಿದ ಸಂಗತಿಗಳ ಮೂಲಕ ತನ್ನ ಸ್ವಂತ ತಪ್ಪು ಮಾಡುವಿಕೆಯ ಸಂಭವನೀಯತೆಯ ಬಗ್ಗೆ ಅರಿವನ್ನು ಹೊಂದಿದವನಾಗುತ್ತಾನೆ:

  1. ಪ್ರತಿಯೊಬ್ಬನೂ ಕೂಡ ಉಪಪ್ರಜ್ಞೆಯ ಪಕ್ಷಪಾತಗಳನ್ನು ಒಪ್ಪಿಕೊಳ್ಳುವುದು, ಮತ್ತು ಅದಕ್ಕೆ ಅನುಗುಣವಾಗಿ ಪ್ರಶ್ನೆ ಮಾಡುವುದು ಮತ್ತು ಚಿಂತನಶೀಲ ನಿರ್ಣಯಗಳನ್ನು ಮಾಡುವುದು;
  2. ಒಂದು ಅಹಂ-ಸಂವೇದನೆಯನ್ನು ಒಪ್ಪಿಕೊಳ್ಳುವುದು ಮತ್ತು, ವಾಸ್ತವವಾಗಿ, ಬೌದ್ಧಿಕವಾಗಿ ವಿನಮ್ರ ಬಗೆಯನ್ನು ಅಳವಡಿಸಿಕೊಳ್ಳುವುದು;
  3. ಒಬ್ಬ ವ್ಯಕ್ತಿಯು ಒಮ್ಮೆ ಬಲವಾಗಿ ಹಿಡಿದಿಟ್ಟುಕೊಂಡ ಮುಂಚಿನ ನಂಬಿಕೆಗಳನ್ನು ಪುನಃ ಕರೆಯುವುದು, ಆದರೆ ಈಗ ಅವು ತಿರಸ್ಕರಿಸಲ್ಪಡುತ್ತವೆ;
  4. ಗುಂಪು ಆಲೋಚನೆಯ ಕಡೆಗಿನ ಪ್ರವೃತ್ತಿ; ಒಬ್ಬ ವ್ಯಕ್ತಿಯ ನಂಬಿಕೆಯ ವ್ಯವಸ್ಥೆಯ ಪ್ರಮಾಣವು ಅವರ ಸುತ್ತಲಿರುವ ಜನರು ವೈಯುಕ್ತಿಕವಾಗಿ ವೀಕ್ಷಿಸಿದನ್ನು ಹೇಳುವುದರ ಮೂಲಕ ನಿರ್ಮಾಣವಾಗಲ್ಪಡುತ್ತವೆ;
  5. ಒಬ್ಬ ವ್ಯಕ್ತಿಯು ಮುಂದೆ ಸಾಗುವುದರ ಬದಲಾಗಿ ಈಗಲೂ ಕೂಡ ಅಂಧ ಸ್ಥಾನಗಳನ್ನು ಪರಿಶೀಲಿಸುವುದು.

ನಿರ್ಣಾಯಕ ಚಿಂತನೆಯ ಸಾಹಿತ್ಯ ಮತ್ತು ಜ್ಞಾನಗ್ರಹಣ ಮನಶಾಸ್ತ್ರ ಸಾಹಿತ್ಯಗಳಿಂದ ತೆಗೆದುಕೊಂಡ ಒಳದೃಷ್ಟಿಗಳ ಒಂದು ಸಂಘಟನೆಯು "ವಾದದ ಮತ್ತು ಶೋಧನಾನುಕೂಲ ವಿಶ್ಲೇಷಣೆಯ ಒಂದು ವಿಧಾನವಾಗಿದೆ." ಈ ತಂತ್ರಗಾರಿಕೆಯು ಕಾರಣಗಳು ಮತ್ತು ಹಕ್ಕುಕೇಳಿಕೆಗಳ ಬಗೆಗಿನ ನಿರ್ಣಾಯಕವಾಗಿ ಚಿಂತಿಸುವ ಪ್ರಭಾವಗಳ ಜೊತೆಗೆ ಮನುಷ್ಯನ ನಿರ್ಣಯ ಮಾಡುವಿಕೆಯ ಮೇಲೆ ಶೋಧನಾನುಕೂಲಗಳ ಮತ್ತು ಪಕ್ಷಪಾತಗಳ ಪ್ರಭಾವಗಳನ್ನು ವಿವರಿಸುತ್ತವೆ.

ಇವನ್ನೂ ನೋಡಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]


ಉಲ್ಲೇಖಗಳು

[ಬದಲಾಯಿಸಿ]
  1. ನಿರ್ಣಯಾತ್ಮಕ ಚಿಂತನೆ: ಶೈಕ್ಷಣಿಕ ನಿರ್ಧಾರ ಮತ್ತು ಸೂಚನೆಗಾಗಿ ಪರಿಣಿತರ ಒಮ್ಮತದ ಒಂದು ವರದಿ. ಇಆರ್‌ಐಸಿ ಡಾಕ್ಯುಮೆಂಟ್ ಸಂಖ್ಯೆ ಇಡಿ ೩೧೫-೪೨೩
  2. Sumner, William (1906). Folkways: A Study of the Sociological Importance of Usages, Manners, Customs, Mores, and Morals. New York: Ginn and Co. p. 633.
  3. ಎನ್‌ಸಿಇಎಸ್ ೯೫-೦೦೧ಪುಟ ೧೪-೧೫ಅನ್ನು ನೋಡಿ.[vague]
  4. Edward M. Glaser (1941). An Experiment in the Development of Critical Thinking. New York, Bureau of Publications, Teachers College, Columbia University. ISBN 0404558437.
  5. ರಾಡರಿಕ್ ಹಿಂಡೆರಿ ಅನ್ನು ನೋಡಿ (೨೦೦೧): ಪರಿಚಯ ಮತ್ತು ಸ್ವಯಂ-ವಂಚನೆ ಅಥವಾ ವೆಚ್ಚರಹಿತ ಮತ್ತು ನಿರ್ಣಯಾತ್ಮಕ ಆಲೋಚನೆ .
  6. ಪೌಲ್, ಡಾ. ರಿಚರ್ಡ್; ಎಲ್ಡರ್, ಡಾ. ಲಿಂಡಾ, ನಿರ್ಣಾಯಕ ಚಿಂತನೆಯ ವಿಷಯ ಮತ್ತು ಸಾಧನಗಳಿಗೆ ಕಿರು ಮಾರ್ಗದರ್ಶಿ . ಡಿಲೊನ್ ಬೀಚ್: ನಿರ್ಣಯಾತ್ಮಕ ಚಿಂತನೆಯ ಮುದ್ರಣಾಲಯಕ್ಕೆ ಅಡಿಪಾಯ, ೨೦೦೮. ಐಎಸ್‌ಬಿಎನ್ ೯೭೮-೦೯೪೪೫೮೩೧೦೪.[page needed]
  7. ಕಾಲೇಜ್ ವಿದ್ಯಾರ್ಥಿಗಳ ಕಲಿಯುವಿಕೆಯ ರಾಷ್ಟ್ರೀಯ ನಿರ್ಧಾರಣೆ: ಕಲಿಸಬೇಕಾದ, ಕಲಿತುಕೊಂಡ, ಮತ್ತು ನಿರ್ಧರಿಸಲ್ಪಟ್ಟ ಕೌಶಲಗಳ ಕಂಡುಹಿಡಿಯುವಿಕೆ, ಎನ್‌ಸಿಇಎಸ್ ೯೪-೨೮೬, ಯುಎಸ್‌ನ ಶಿಕ್ಷಣ ವಿಭಾಗ, ಆಡಿಸನ್ ಗ್ರೀನ್‌ವೊಡ್ (ಇಡಿ), ಸ್ಯಾಲ್ ಕ್ಯಾರಾಲೋ (ಪಿಐ). ಇದನ್ನೂ ನೋಡಿ, ಕ್ರಿಟಿಕಲ್ ಥಿಂಕಿಂಗ್: ಶೈಕ್ಷಣಿಕ ನಿರ್ಧಾರಣ ಮತ್ತು ಸೂಚನೆಗಳ ಉದ್ದೇಶಗಳಿಗೆ ಪರಿಣಿತರ ಒಮ್ಮತದ ಒಂದು ಹೇಳಿಕೆ. ಇಆರ್‌ಐಸಿ, ದಾಖಲೆ ಸಂಖ್ಯೆ. ಇಡಿ ೩೧೫-೪೨೩
  8. ಎಡ್‌ವರ್ಡ್ ಎಮ್. ಗ್ಲೇಸರ್, ನಿರ್ಣಾಯಕ ಚಿಂತನೆಯ ಬೆಳವಣಿಗೆಯಲ್ಲಿನ ಒಂದು ಪ್ರಯೋಗ, ಟೀಚರ್ಸ್ ಕಾಲೇಜ್, ಕೋಲಂಬಿಯಾ ವಿಶ್ವವಿದ್ಯಾಲಯ, ೧೯೪೧.
  9. ಸೊಲೊಮನ್, ಎಸ್.ಎ. (೨೦೦೨) ಸ್ವಯಂ ಸಂಶೋಧನೆಯಲ್ಲಿ ಮತ್ತು ಪಕ್ಷಪಾತಗಳಲ್ಲಿ "ತಾರ್ಕಿಕ ಕಲಿಕೆಯ ಎರಡು ವ್ಯವಸ್ಥೆಗಳು,": ಅಂತರ್ಬೋಧೆಯ ನಿರ್ಣಯದ ಮನಶಾಸ್ತ್ರ, ಗೋವಿಚ್, ಗ್ರಿಫಿನ್, ಕಾಹ್ನೆಮನ್ (ಎಡ್ಸ್), ಕ್ಯಾಂಬ್ರಿಜ್ ವಿಶ್ವವಿದ್ಯಾಲಯ ಮುದ್ರಣಾಲಯ. ಈ ಮಾನವಶಾಸ್ತ್ರದ ಹಲವಾರು ಇತರ ಪ್ರಬಂಧಗಳು ಈ ಸಮಯಕ್ಕೆ ಅದೇ ರೀತಿಯಾಗಿ ಸಂಬಂಧಿತವಾಗಿವೆ. ಈ ವಿಷಯದ ವಿಶ್ಲೇಷಣೆಗಾಗಿ ಇದನ್ನೂ ನೋಡಿ ಮಾನವ ನಿರ್ಣಯ ಮಾಡುವಿಕೆಯಲ್ಲಿ ಅಲೋಚನೆ ಮತ್ತು ತಾರ್ಕಿಕ ಚಿಂತನೆ: ವಾದ ಮತ್ತು ಸ್ವಯಂ ಅನ್ವೇಷಣಾ ವಿಶ್ಲೇಷಣೆಯ ವಿಧಾನ, ಫೇಸಿಯೋನ್ ಅಂಡ್ ಫೇಸಿಯೋನ್, ೨೦೦೭, ಕ್ಯಾಲಿಫೋರ್ನಿಯಾ ಅಕಾಡೆಮಿಕ್ ಮುದ್ರಣಾಲಯ
  10. ಥಾಮಸ್ ಎಫ್. ನೆಲ್ಸನ್ ಲೈರ್ಡ್‌ನಿಂದ ಕ್ಯಾಲಿಫೋರ್ನಿಯಾ ಕ್ರಿಟಿಕಲ್ ಥಿಂಕಿಂಗ್ ಡಿಸ್ಪೊಸಿಷನ್ ಇನ್ವೆಂಟರಿಯ ಬಗ್ಗೆ Archived 11 June 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಲೇಖನ, ದ್ವಿತಿಯಕದ ನಂತರದ ಸಂಶೋಧನೆಯ ಭಾರತೀಯ ವಿಶ್ವವಿದ್ಯಾಲಯ ಕೇಂದ್ರ
  11. ಸ್ಪೂರ್ತಿ ಮತ್ತು ಕಲಿಯುವಿಕೆಯ ಮೇಲಿನ ಸಾಮಾಜಿಕಸಾಂಸ್ಕೃತಿಕ ಪ್ರಭಾವಗಳ ಮೇಲಿನ ಸಂಶೋಧನೆ , ಪುಟ ೪೬
  12. ಆಕ್ಸ್‌ಫರ್ಡ್ ಕ್ಯಾಂಬ್ರಿಜ್ ಮತ್ತು ಆರ್‌ಎಸ್‌ಎ ಎಕ್ಸಾಮಿನೆಷನ್ಸ್‌ಗಳಿಂದ ನಿರ್ಣಾಯಕ ಚಿಂತನೆ ಎಫ್‌ಎಕ್ಯೂ ಗಳು Archived 11 April 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  13. "ಚಿಂತನಾ ಕೌಶಲ್ಯಗಳು", ಕ್ಯಾಂಬ್ರಿಜ್ ಸ್ಥಳೀಯ ಪರೀಕ್ಷೆಗಳ ವಿಶ್ವವಿದ್ಯಾಲಯ
  14. "2008ಕ್ಕೆ ಹೊಸ ಜಿಸಿಇ ಗಳು" Archived 17 February 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಅಸೆಸ್‌ಮೆಂಟ್ ಅಂಡ್ ಕ್ವಾಲಿಫಿಕೇಷನ್ಸ್ ಅಲಾಯನ್ಸ್
  15. ಲಿಯ್ನ್ ಗಾರ್ಡಿನರ್, ಉನ್ನತ ಶಿಕ್ಷಣವನ್ನು ಪುನಃ ವಿನ್ಯಾಸಗೊಳಿಸುವುದು: ವಿದ್ಯಾರ್ಥಿ ಕಲಿಕೆಯಲ್ಲಿ ಗಣನೀಯ ಲಾಭವನ್ನು ಉತ್ಪತ್ತಿ ಮಾಡುವುದು, ಅದರ ಜೊತೆಗೆ: ಉನ್ನತ ಶಿಕ್ಷಣದ ಇಆರ್‌ಐಸಿ ಕ್ಲಿಯರಿಂಗ್ ಹೌಸ್, ೧೯೯೫
  16. ಶ್ವಾರ್ಟ್ಜ್, ಎಮ್.ಎ., ಎಪ್ರಿಲ್ ೨೦೦೮, ಕೋಶ ವಿಜ್ಞಾನದ ನಿಯತಕಾಲಿಕ ೧೨೧, ಪುಟ. ೧೭೭೧

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

(೧೯೯೭) ಕ್ರಿಟಿಕಲ್ ಥಿಂಕಿಂಗ್: ಇಟ್ಸ್ ಡೆಫಿನಿಶನ್ ಅಂಡ್ ಅಸೆಸ್ಮೆಂಟ್ , ನಿರ್ಣಾಯಕ ಚಿಂತನೆಯ ಸಂಶೋಧನೆಯ ಕೇಂದ್ರ (ಯುಕೆ)/ಎಜ್‌ಪ್ರೆಸ್ (ಯುಎಸ್). ಐಎಸ್‌ಬಿಎನ್ ೦-೫೯೫-೨೦೨೮೪-೫.

  • ವಿನ್ಸೆಂಟ್ ಎಫ್. ಹೆಂಡ್ರಿಕ್ಸ್. (೨೦೦೫) ಥಾಟ್ ೨ ಟಾಕ್: ಎ ಕ್ರ್ಯಾಷ್ ಕೋರ್ಸ್ ಇನ್ ರಿಫ್ಲೆಕ್ಷನ್ ಅಂಡ್ ಎಕ್ಸ್‌ಪ್ರೆಶನ್ , ನ್ಯೂಯಾರ್ಕ್: ಆಟೋಮೆಟಿಕ್ ಮುದ್ರಣಾಲಯ / ವಿಐಪಿ. ಐಎಸ್‌ಬಿಎನ್ ೮೭-೯೯೧೦೧೩-೭-೮
  • ಪೌಲ್, ರಿಚರ್ಡ್ ಮತ್ತು ಎಲ್ಡರ್, ಲಿಂಡಾ. (೨೦೦೬) ಕ್ರಿಟಿಕಲ್ ಥಿಂಕಿಂಗ್ ಟೂಲ್ಸ್ ಫಾರ್ ಟೇಕಿಂಗ್ ಚಾರ್ಜ್ ಆಫ್ ಯುವರ್ ಲರ್ನಿಂಗ್ ಅಂಡ್ ಯುವರ್ ಲೈಫ್ , ನ್ಯೂ ಜೆರ್ಸಿ: ಪ್ರೆಂಟೀಸ್ ಹಾಲ್ ಪಬ್ಲಿಷಿಂಗ್. ಐಎಸ್‌ಬಿಎನ್ ೦-೧೪-೧೩೦೨೨೦-೮.
  • ಪೌಲ್, ರಿಚರ್ಡ್ ಮತ್ತು ಎಲ್ಡರ್, ಲಿಂಡಾ. (೨೦೦೨) ಕ್ರಿಟಿಕಲ್ ಥಿಂಕಿಂಗ್: ಟೂಲ್ಸ್ ಫಾರ್ ಟೇಕಿಂಗ್ ಚಾರ್ಜ್ ಆಫ್ ಯುವರ್ ಪ್ರೊಫೆಶನಲ್ ಅಂಡ್ ಪರ್ಸನಲ್ ಲೈಫ್ . ಫೈನಾನ್ಷಿಯಲ್ ಟೈಮ್ಸ್ ಪ್ರೆಂಟೀಸ್ ಹಾಲ್ ಮೂಲಕ ಪ್ರಕಟಿಸಲ್ಪಟ್ಟಿತು.. ಐಎಸ್‌ಬಿಎನ್ ೦-೧೪-೧೩೦೨೨೦-೮.
  • ಟ್ವಾರ್ಡಿ,ಡಾ. ಚಾರ್ಲ್ಸ್ ಆರ್. (೨೦೦೩) ವಾದಗಳ ನಕ್ಷೆಗಳು ನಿರ್ಣಾಯಕ ಚಿಂತನೆಯನ್ನು ಸುಧಾರಿಸುತ್ತವೆ. ಟೀಚಿಂಗ್ ಫಿಲಾಸಫಿ Archived 24 August 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ೨೭:೨ ಜೂನ್ ೨೦೦೪. ಮೊದಲಿನ ಮುದ್ರಣಗಳು: [೧][ಮಡಿದ ಕೊಂಡಿ] [೨]
  • ವೈಟ್, ಜೆ.(೨೦೦೩) ಬ್ಯಾಡ್ ಥಾಟ್ಸ್ - ಎ ಗೈಡ್ ಟು ಕ್ಲಿಯರ್ ಥಿಂಕಿಂಗ್ , ಕೊರ್ವೊ. ಐಎಸ್‌ಬಿಎನ್ ೦-೧೪-೧೩೦೨೨೦-೮.
  • ಥಿಯೋಡರ್ ಶ್ಚಿಕ್ & ಲೂಯಿಸ್ ವೌಘ್ನ್ "ಹೌ ಟು ಥಿಂಕ್ ಅಬೌಟ್ ವಿಯರ್ಡ್ ಥಿಂಗ್ಸ್: ಕ್ರಿಟಿಕಲ್ ಥಿಂಕಿಂಗ್ ಫಾರ್ ಅ ನ್ಯೂ ಏಜ್" (೨೦೧೦)

ಬಾಹ್ಯ ಕೊಂಡಿಗಳು

[ಬದಲಾಯಿಸಿ]