ತಲವಾಟ

ವಿಕಿಪೀಡಿಯ ಇಂದ
Jump to navigation Jump to search
ತಲವಾಟ
ಹಳ್ಳಿ
Country India
Stateಕರ್ನಾಟಕ
Districtಶಿವಮೊಗ್ಗ
ತಾಲ್ಲೂಕುಸಾಗರ
Government
 • BodyVillage Panchayat
Population
 (2011)
 • Total~೪೦೦
Languages
 • OfficialKannada
ಸಮಯ ವಲಯUTC+5:30 (IST)
ವಾಹನ ನೊಂದಣಿKA 15
ಸಾಗರಶಿವಮೊಗ್ಗ
Civic agencyಗ್ರಾಮ ಪಂಚಾಯಿತಿ

ತಲವಾಟ ದಕ್ಷಿಣ ಭಾರತದ, ಕರ್ನಾಟಕ ರಾಜ್ಯದಲ್ಲಿರುವ ಹಳ್ಳಿ.[೧]. ಇದು ಶಿವಮೊಗ್ಗ ಮತ್ತುಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ಬರುತ್ತದೆ.ಇದರ ತಾಲ್ಲೂಕು ಸಾಗರ.

ಹವಾಮಾನ[ಬದಲಾಯಿಸಿ]

ಇದು ಮಲೆನಾಡು ಪ್ರದೇಶವಾಗಿರುದರಿಂದ, ನಿತ್ಯಹರಿದ್ವರ್ಣ ಕಾಡು ಮತ್ತು ಬೆಟ್ಟ ಪ್ರದೇಶಗಳಿಂದ ಸುತ್ತುವರೆಯಲ್ಪಟ್ಟಿದೆ. ಇಲ್ಲಿಯ ವಾತಾವರಣ ತಾಪಮಾನ ಬೇಸಿಗೆಕಾಲದಲ್ಲಿ (ಮಾರ್ಚ್ ಇಂದ ಮೇ ವರೆಗೆ) 22 oC ಇಂದ 28 oC ವರೆಗೆ ಇರುತ್ತದೆ. ಜೂನ್ ಇಂದ ಅಕ್ಟೋಬರ್ ಮಳೆಗಾಲದ ಸಮಯವಾಗಿರುತ್ತದೆ. ಚಳಿಗಾಲದಲ್ಲಿ (ನವೆಂಬರ್ ಇಂದ ಫೆಬ್ರುವರೀ), ತಾಪಮಾನ 16 oC ವರೆಗೂ ಇಳಿಯಬಹುದು.

ಉದ್ಯೋಗ[ಬದಲಾಯಿಸಿ]

ಈ ಪ್ರದೇಶದ ಮುಖ್ಯ ಉದ್ಯೋಗ ಕೃಷಿಯಾಗಿರುತ್ತದೆ. ಮುಖ್ಯವಾಗಿ, ಅಡಿಕೆ, ಬತ್ತ ಮತ್ತು ಕಬ್ಬು ಬೆಳೆಯಲಾಗುತ್ತದೆ. ಇದು ಕೃಷಿಯೋಗ್ಯ ಪ್ರದೇಶವಾಗಿದೆ. ಇದಲ್ಲದೆ, ಉಪಬೆಳೆಯಾಗಿ ಕರಿ ಮೆಣಸು, ಕಾಫೀ ಮತ್ತು ಇತರೆ ಮಸಾಲೆ ಪದಾರ್ಥಗಳನ್ನು ಬೆಳೆಯಲಾಗುತ್ತದೆ.

ಪ್ರಯಾಣ[ಬದಲಾಯಿಸಿ]

ಈ ಪ್ರದೇಶವು ರೈಲ್ವೆ ಮತ್ತು ರಸ್ತೆಗಳೊಂದಿಗೆ ಚೆನ್ನಾಗಿ ಸಂಪರ್ಕಗೊಂಡಿದೆ. ಇದು NH 206 ನ ಪಕ್ಕದಲ್ಲಿಯೇ ಇದೆ. ಇದರ ಹತ್ತಿರದ ರೈಲ್ವೆ ಕೇಂದ್ರವು ತಾಳಗುಪ್ಪವಾಗಿರುತ್ತದೆ. ಇಲ್ಲಿ, ದಾರಿಹೋಕರಿಗೆ ಕೆಲವು ಹೋಂಸ್ಟೇಗಳು ಕೂಡ ಇದೆ.

ಹತ್ತಿರದ ಪ್ರೇಕ್ಷಣೀಯ ಸ್ತಳಗಳು[ಬದಲಾಯಿಸಿ]

ಇದರTಹತ್ತಿರದ ಪ್ರೇಕ್ಷಣೀಯ ಸ್ತಳ  ಜೋಗ ಜಲಪಾತ ಮತ್ತು ಶರಾವತಿ ನದಿ ಎಂದು ಹೇಳಬಹುದು.ಇದಲ್ಲದೆ, ಭೀಮೇಶ್ವರ, ಕೊಲ್ಲೂರು ಮತ್ತು ಸಿಗಂದೂರು ಕೂಡ ಹತ್ತಿರದಲ್ಲಿ ಇವೆ.

ಇದಲ್ಲದೆ..[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Census of India : List of Villages Alphabetical Order > Karnataka". Registrar General & Census Commissioner, India. Retrieved 2008-12-18.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ತಲವಾಟ&oldid=690081" ಇಂದ ಪಡೆಯಲ್ಪಟ್ಟಿದೆ