ಡ್ರೂ ಬ್ಯಾರಿಮೋರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡ್ರೂ ಬ್ಯಾರಿಮೋರ್
Drew Barrymore Berlin 2014.jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಡ್ರೂ ಬ್ಲಿಥ್ ಬ್ಯಾರಿಮೋರ್
(1975-02-22) ಫೆಬ್ರುವರಿ ೨೨, ೧೯೭೫(ವಯಸ್ಸು ೪೨)
ಕಲ್ವರ್ ನಗರ, ಕ್ಯಾಲಿಫೋರ್ನಿಯ, ಅಮೇರಿಕ
ವೃತ್ತಿ ನಟಿ/ನಿರ್ಮಾಪಕಿ/ನಿರ್ದೇಶಕಿ
ವರ್ಷಗಳು ಸಕ್ರಿಯ ೧೯೭೮–ಪ್ರಸ್ತುತ
ಪತಿ/ಪತ್ನಿ ಜೆರೆಮಿ ಥಾಮಸ್ (೧೯೯೪–೧೯೯೫)
ಟಾಮ್ ಗ್ರೀನ್ (೨೦೦೧–೨೦೦೧)
Official website

ಡ್ರೂ ಬ್ಲಿಥ್ ಬ್ಯಾರಿಮೋರ್ (ಜನನ ೧೯೭೫ ಫ್ರೆಬ್ರವರಿ ೨೨) ಅಮೆರಿಕಾದ ಓರ್ವ ನಟಿ, ಚಲನಚಿತ್ರ ನಿರ್ಮಾಪಕಿ ಹಾಗೂ ಚಲನಚಿತ್ರ ನಿರ್ದೇಶಕಿ.

ಆಕೆ ಅಮೆರಿಕಾದ ನಟರ ವರ್ಗಕ್ಕೆ ಸೇರಿದ ಬ್ಯಾರಿಮೋರ್ ಕುಟುಂಬದ ಅತ್ಯಂತ ಕಿರಿಯ ಸದಸ್ಯೆ ಮತ್ತು ಜಾನ್ ಬ್ಯಾರಿಮೋರ್ನ ಮೊಮ್ಮಗಳಾಗಿದ್ದಾಳೆ. ಕೇವಲ ಹನ್ನೊಂದು ತಿಂಗಳ ವಯಸ್ಸಿನವಳಾಗಿರುವಾಗಲೇ ಜಾಹೀರಾತೊಂದರಲ್ಲಿ ಆಕೆ ಮೊಟ್ಟಮೊದಲು ಕಾಣಿಸಿಕೊಂಡಳು.

1980ರಲ್ಲಿ ಅಲ್ಟರ್ಡ್ ಸ್ಟೇಟ್ಸ್‌ ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಲನಚಿತ್ರರಂಗಕ್ಕೆ ಆಕೆಯ ಪ್ರಥಮ ಪರಿಚಯವಾಯಿತು. ಇದಾದ ನಂತರ, E.T. ದಿ ಎಕ್ಸ್‌ಟ್ರಾ-ಟೆರೆಸ್ಟ್ರಿಯಲ್ ಎಂಬ ಚಿತ್ರದಲ್ಲಿನ ಹಠಾತ್‌ ದರ್ಶನದ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಳು. ನಂತರ ಆಕೆ ಶೀಘ್ರವಾಗಿ ಹಾಲಿವುಡ್‌ನ ಅತ್ಯಂತ ಸುಪ್ರಸಿದ್ಧ ಬಾಲ ಕಲಾವಿದರಲ್ಲಿ ಒಬ್ಬಳಾಗಿ ಮಾರ್ಪಟ್ಟು, ಮುಖ್ಯವಾಗಿ ಹಾಸ್ಯಪಾತ್ರಗಳಲ್ಲಿ ತನಗೊಂದು ನೆಲೆ ಕಲ್ಪಿಸಿಕೊಳ್ಳುತ್ತಾ ಹೋದಳು.

ಮಾದಕವಸ್ತು ಹಾಗೂ ಮದ್ಯಸೇವನಾ ವ್ಯಸನ ಮತ್ತು ಪುನರ್ವಸತಿ ಕೇಂದ್ರದಲ್ಲಿ[೧][೨] ಎರಡು ಬಾರಿ ದಾಖಲಾಗಬೇಕಾಗಿ ಬಂದುದರ ಗುರುತನ್ನೊಳಗೊಂಡಿದ್ದ ತನ್ನ ಗೊಂದಲಮಯ ಬಾಲ್ಯದ ನಂತರ, ಲಿಟ್ಲ್‌ ಗರ್ಲ್‌ ಲಾಸ್ಟ್‌ ಎಂಬ ಆತ್ಮಕಥೆಯನ್ನು 1990ರಲ್ಲಿ ಬ್ಯಾರಿಮೋರ್ ಬರೆದಳು. ವಿಫಲಗೊಂಡ ಚಿತ್ರಗಳಾದ ಪಾಯಿಸನ್‌ ಐವಿ , ಬ್ಯಾಡ್‌ ಗರ್ಲ್ಸ್ ‌, ಬಾಯ್ಸ್‌ ಆನ್‌ ದಿ ಸೈಡ್ ‌, ಮತ್ತು ಎವೆರಿಒನ್‌ ಸೇಸ್‌ ಐ ಲವ್‌ ಯು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಬಾಲತಾರೆಯ ಪಟ್ಟದಿಂದ ಪ್ರಾಪ್ತವಯಸ್ಕ ನಟಿಯ ಪಟ್ಟಕ್ಕೆ ಆಕೆ ಯಶಸ್ವಿಯಾಗಿ ರೂಪಾಂತರಗೊಂಡಳು. ಆನಂತರ, ದಿ ವೆಡ್ಡಿಂಗ್ ಸಿಂಗರ್ ಮತ್ತು ಲಕಿ ಯೂ ನಂಥ ಪ್ರಣಯಭರಿತ ಹಾಸ್ಯಚಿತ್ರಗಳಲ್ಲಿ ಆಕೆ ತನ್ನನ್ನು ನೆಲೆಗೊಳಿಸಿಕೊಂಡಳು.

1990ರಲ್ಲಿ, ಆಕೆ ಮತ್ತು ನ್ಯಾನ್ಸಿ ಜುವೊನೆನ್‌ ಎಂಬ ಆಕೆಯ ಪಾಲುದಾರ ಫ್ಲವರ್ ಫಿಲ್ಮ್ಸ್‌ ಎಂಬ ಚಿತ್ರನಿರ್ಮಾಣ ಕಂಪನಿಯನ್ನು ಸ್ಥಾಪಿಸಿದರು. 1999ರಲ್ಲಿ ಬ್ಯಾರಿಮೋರ್ ನಟಿಸಿದ ನೆವರ್ ಬೀನ್‌ ಕಿಸ್ಡ್‌ ಎಂಬ ಚಿತ್ರ ಈ ಕಂಪನಿಯ ಮೊದಲ ನಿರ್ಮಾಣವಾಯಿತು. ಬ್ಯಾರಿಮೋರ್ ಅಭಿನಯದ ಚಾರ್ಲೀಸ್‌ ಏಂಜೆಲ್ಸ್ ‌, 50 ಫಸ್ಟ್‌ ಡೇಟ್ಸ್ ‌, ಮತ್ತು ಮ್ಯೂಸಿಕ್‌ ಅಂಡ್ ಲಿರಿಕ್ಸ್‌ ಎಂಬ ಚಲನಚಿತ್ರಗಳ ಜೊತೆಗೇ, ಡೋನಿ ಡಾರ್ಕೊ ನಂಥ ಧಾರ್ಮಿಕ ನಂಬುಗೆಯ ಕುರಿತಾದ ಚಿತ್ರವನ್ನೂ ಸಹ ಫ್ಲವರ್ ಫಿಲ್ಮ್ಸ್‌ ಸಂಸ್ಥೆ ನಿರ್ಮಿಸುತ್ತಾ ಬಂದಿದೆ. ಬ್ಯಾರಿಮೋರ್‌ಳ ತೀರಾ ಇತ್ತೀಚಿನ ಯೋಜನೆಗಳಲ್ಲಿ ಹಿ ಈಸ್‌ ಜಸ್ಟ್‌ ನಾಟ್‌ ದಟ್‌ ಇನ್‌ಟು ಯು , ಬೆವರ್ಲಿ ಹಿಲ್ಸ್‌ ಚಿಹುವಾಹುವಾ , ಮತ್ತು ಎವೆರಿಬಡಿ ಈಸ್‌ ಫೈನ್‌ ಎಂಬ ಚಿತ್ರಗಳು ಸೇರಿವೆ.

ಹಾಲಿವುಡ್‌ ವಾಕ್‌ ಆಫ್‌ ಫೇಮ್‌ ಮೇಲೆ ಒಂದು ನಕ್ಷತ್ರವನ್ನು ಪಡೆದ ಬ್ಯಾರಿಮೋರ್‌, 2007ರ ಪೀಪಲ್‌ ನಿಯತಕಾಲಿಕದ, 100 ಅತ್ಯಂತ ಸುಂದರಿಯರ ಕುರಿತಾದ ಸಚಿತ್ರ ಮಾಹಿತಿಯಿದ್ದ ಸಂಚಿಕೆಯ ಮುಖಪುಟದಲ್ಲಿ ರಾರಾಜಿಸಿದರು.

ವಿಶ್ವಸಂಸ್ಥೆವಿಶ್ವ ಆಹಾರ ಕಾರ್ಯಕ್ರಮದ (ವರ್ಲ್ಡ್ ಫುಡ್‌ ಪ್ರೋಗ್ರಾಮ್‌-WFP) ಹಸಿವು ವಿರೋಧಿ ಆಂದೋಲನದ ರಾಯಭಾರಿಯಾಗಿ ಬ್ಯಾರಿಮೋರ್‌ಳನ್ನು ನೇಮಕಮಾಡಲಾಯಿತು. ಅಲ್ಲಿಂದೀಚೆಗೆ, ಸದರಿ ಕಾರ್ಯಕ್ರಮಕ್ಕೆ 1 ದಶಲಕ್ಷ $ಗಿಂತಲೂ ಹೆಚ್ಚಿನ ಹಣವನ್ನು ಆಕೆ ದಾನಮಾಡಿದ್ದಾಳೆ.

2007ರಲ್ಲಿ, ಆಕೆ ಕವರ್‌ಗರ್ಲ್‌ನ ನೂತನ ರೂಪದರ್ಶಿಯಾಗಿ ಮತ್ತು ಗುಸ್ಸಿ ಕಂಪನಿಯ ನೂತನ ಆಭರಣಗಳ ಶ್ರೇಣಿಯ ಕಾಸ್ಮೆಟಿಕ್‌ ಆಂಡ್ ದಿ ಫೇಸ್‌ ವಿಭಾಗದ ವಕ್ತಾರಳಾಗಿ ನೇಮಕಗೊಂಡಳು.


ಆರಂಭದ ಜೀವನ[ಬದಲಾಯಿಸಿ]

ಕ್ಯಾಲಿಫೋರ್ನಿಯಾಕಲ್ವರ್‌ ನಗರದಲ್ಲಿ ಅಮೆರಿಕಾದ ನಟ ಜಾನ್‌ ಡ್ರೂ ಬ್ಯಾರಿಮೋರ್ ಹಾಗೂ ಇಲ್ದಿಕೊ ಜೈದ್‌ ಬ್ಯಾರಿಮೋರ್‌ (ನೀ ಮಕೊ)[೧][೩] ದಂಪತಿಗಳ ಮಗಳಾಗಿ ಬ್ಯಾರಿಮೋರ್ ಜನಿಸಿದಳು. IIನೇ ಜಾಗತಿಕ ಸಮರದಲ್ಲಿನ ಹಂಗೇರಿಯಾದ ನಿರಾಶ್ರಿತರಿಗಾಗಿದ್ದ ಪಶ್ಚಿಮ ಜರ್ಮನಿಯ ಬ್ರನ್ನೆನ್‌ಬರ್ಗ್‌ನಲ್ಲಿನ ನಿರಾಶ್ರಿತ ವ್ಯಕ್ತಿಗಳ ಶಿಬಿರವೊಂದರಲ್ಲಿ ಈ ಮಹತ್ವಾಕಾಂಕ್ಷೀ ನಟಿ ಜನ್ಮತಾಳಿದಳು. ಮೌರಿಸ್‌ ಕಾಸ್ಟೆಲ್ಲೋ ಎಂಬ ಓರ್ವ ನಟ ಹಾಗೂ ಪೂರ್ವಜನ ಮೂಲಕ, ತನ್ನ ತಂದೆಯ ಕಡೆಯಿಂದ ಬ್ಯಾರಿಮೋರ್‌ ಐರಿಷ್‌ ತಲೆಮಾರು ಅಥವಾ ಕುಲಕ್ಕೆ ಸೇರಿದವಳಾಗಿದ್ದಾಳೆ.


ಅಕೆಯ ಜನನದ ನಂತರ[೧] ಅವಳ ತಂದೆ-ತಾಯಿ ವಿಚ್ಚೇದನ ಪಡೆದರು. ಜಾನ್‌ ಬ್ಲಿಥ್ ಬ್ಯಾರಿಮೋರ್‌[೪] ಎಂಬ ಓರ್ವ ಮಲಸಹೋದರನ್ನು ಆಕೆ ಹೊಂದಿದ್ದು, ಆತನೂ ಸಹ ಒಬ್ಬ ನಟನಾಗಿದ್ದರೆ, ಬ್ಲಿಥ್ ಡೊಲೊರೆಸ್‌ ಬ್ಯಾರಿಮೋರ್ ಹಾಗೂ ಬ್ರಾಹ್ಮಾ (ಜೆಸ್ಸಿಕಾ) ಬ್ಲಿಥ್ ಬ್ಯಾರಿಮೋರ್‌ ಎಂಬಿಬ್ಬರು ಮಲಸಹೋದರಿಯರನ್ನೂ ಆಕೆ ಹೊಂದಿದ್ದಾಳೆ.


ಬ್ಯಾರಿಮೋರ್ ನಟಿಸುವುದಕ್ಕಾಗಿಯೇ ಜನಿಸಿದ್ದಳು: ಅವಳ ಮುತ್ತಾತ-ಮುತ್ತಜ್ಜಿಯರಾದ ಮೌರಿಸ್‌ ಬ್ಯಾರಿಮೋರ್ ಮತ್ತು ಜಾರ್ಜಿ ಡ್ರೂ ಬ್ಯಾರಿಮೋರ್, ಮೌರಿಸ್‌ ಕೊಸ್ಟೆಲ್ಲೊ ಮತ್ತು ಮೇ ಕೊಸ್ಟೆಲ್ಲೊ (ನೀ ಅಲ್ಟ್‌ಸ್‌ಚುಕ್)[೫] ಮತ್ತು ಅವಳ ತಾತ-ಅಜ್ಜಿಯರಾದ ಜಾನ್ ಬ್ಯಾರಿಮೋರ್ ಮತ್ತು ಡೊಲೊರೆಸ್ ಕೊಸ್ಟೆಲ್ಲೊ ಸೇರಿದಂತೆ ಎಲ್ಲರೂ ನಟರಾಗಿದ್ದರು;[೫] ಜಾನ್ ಬ್ಯಾರಿಮೋರ್ ವಾದಯೋಗ್ಯ ರೀತಿಯಲ್ಲಿ ಆತನ ಕಾಲದಲ್ಲಿ ಅತ್ಯಂತ ಖ್ಯಾತಿ ಪಡೆದ ನಟನಾಗಿದ್ದ.[೧][೬] ಲಯೋನಿಲ್ ಬ್ಯಾರಿಮೋರ್‌, ಎಥೆಲ್ ಬ್ಯಾರಿಮೋರ್ ಮತ್ತು ಹೆಲೀನ್‌ ಕೋಸ್ಟೆಲ್ಲೋ[೭] ಸೋದರ ಮೊಮ್ಮಗಳಾಗಿರುವ ಆಕೆ, ಜಾನ್‌ ಡ್ರೂ ಮತ್ತು ನಟಿ ಲೂಯಿಸಾ ಲೇನ್‌ ಡ್ರೂ ದಂಪತಿಗಳ ಗಿರಿಮಗಳಾಗಿದ್ದಾಳೆ, ಹಾಗೂ ಮೂಕ ಚಲನಚಿತ್ರದ ನಟ/ಲೇಖಕ/ನಿರ್ದೇಶಕ ಸಿಡ್ನಿ ಡ್ರೂನ ಸೋದರ ಮರಿಮಗಳಾಗಿದ್ದಾಳೆ.[೮] ಆಕೆಯು ನಿರ್ದೇಶಕ ಸ್ಟಿವನ್ ಸ್ಪಿಲ್‌ಬರ್ಗ್‌,[೨] ಮತ್ತು ಸೊಫಿಯಾ ಲಾರೆನ್‌ರ ಧರ್ಮಪುತ್ರಿಯೂ ಆಗಿದ್ದಾಳೆ.[೯]


ಡ್ರೂ ಎಂಬ ಅವಳ ಮೊದಲ ಹೆಸರು ಅವಳ ತಂದೆಯ ಕಡೆಯ ಮುತ್ತಜ್ಜಿಯಾದ ಜಾರ್ಜಿ ಡ್ರೂ ಬ್ಯಾರಿಮೋರ್ ಎಂಬುವವಳ ಕನ್ಯಾನಾಮವಾಗಿತ್ತು; ಬ್ಲಿಥ್‌ ಎಂಬ ಅವಳ ಮಧ್ಯದ ಹೆಸರು, ಆಕೆಯ ಮುತ್ತಜ್ಜ ಮೌರಿಸ್‌ ಬ್ಯಾರಿಮೋರ್ ಎಂಬಾತ ಸಂಸ್ಥಾಪಿಸಿದ ರಾಜ ಮನೆತನದ ಮೂಲ ಕುಲನಾಮವಾಗಿತ್ತು.[೨]

ಉಗಮದಿಂದ ಕೀರ್ತಿಯವರೆಗೆ[ಬದಲಾಯಿಸಿ]

ಚಿತ್ರ:Barrymore.JPG
ಹಾಲಿವುಡ್‌ ವಾಕ್‌ ಆಫ್‌ ಫೇಮ್‌ ಮೇಲಿನ ಡ್ರೂ ಬ್ಯಾರಿಮೋರ್‌ಳ ನಕ್ಷತ್ರ

ಬ್ಯಾರಿಮೋರ್ ಹನ್ನೊಂದು ತಿಂಗಳಿನ ಮಗುವಾಗಿದ್ದಾಗ ನಾಯಿಯ ಅಹಾರದ ವಾಣಿಜ್ಯ ಜಾಹೀರಾತೊಂದಕ್ಕೆ ಧ್ವನಿ ನೀಡುವುದರೊಂದಿಗೆ ಆಕೆಯ ವೃತ್ತಿಜೀವನ ಆರಂಭವಾಯಿತು.[೨] ಆಕೆಯ ಜೊತೆಯಲ್ಲಿ ನಟಿಸುತ್ತಿದ್ದ ನಾಯಿ ಆಕೆಗೆ ಕಚ್ಚಿದಾಗ, ಅವಳು ಅಳಬಹುದೆಂದು ನಿರ್ಮಾಪಕರು ಹೆದರಿದ್ದರು. ಆದರೆ ಅವಳು ಏನೂ ಆಗಿಲ್ಲವೆಂಬಂತೆ ಸುಮ್ಮನೇ ನಕ್ಕಿದ್ದರಿಂದ ಅವಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಾಯಿತು.[೨]

1980ರಲ್ಲಿ ಅಲ್ಟರ್ಡ್ ಸ್ಟೇಟ್ಸ್‌ ಎಂಬ ಚಲನಚಿತ್ರದಲ್ಲಿ ಆಕೆಯು ಚಿಕ್ಕ ಪಾತ್ರವೊಂದನ್ನು ಅಭಿನಯಿಸುವುದರೊಂದಿಗೆ ಚಿತ್ರರಂಗಕ್ಕೆ ಆಕೆಯ ಮೊದಲ ಪರಿಚಯವಾಯಿತು.[೧] ಒಂದು ವರ್ಷದ ನಂತರ, E.T. ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್‌ ಚಿತ್ರದಲ್ಲಿನ ಎಲಿಯಟ್‌ನ ಕಿರಿಯ ಸಹೋದರಿಯಾದ ಗೆರ್ಟಿಯ ಪಾತ್ರದಲ್ಲಿ ಆಕೆ ಕಾಣಿಸಿಕೊಂಡು ಪ್ರಖ್ಯಾತಿಯನ್ನು ಪಡೆದಳು.[೨] ಇರ್ರೀಕನ್ಸಿಲಬಲ್ ಡಿಫರೆನ್ಸಸ್‌ ಎಂಬ ಚಿತ್ರದಲ್ಲಿನ ಆಕೆಯ ಪಾತ್ರಕ್ಕಾಗಿ 1984ರಲ್ಲಿ ಅತ್ಯುತ್ತಮ ಪೋಷಕ ನಟಿಗಾಗಿ ಮೀಸಲಿರುವ ಗೋಲ್ಡನ್‌ ಗ್ಲೋಬ್‌ ನಾಮನಿರ್ದೇಶನವೊಂದಕ್ಕೆ ಅವಳು ಪಾತ್ರಳಾದಳು. ತನ್ನ ತಾಯ್ತಂದೆಯನ್ನು ತೊರೆದು ಹೋಗುವ ಹರೆಯದ ಹುಡುಗಿಯಾಗಿ ಆಕೆ ಈ ಚಿತ್ರದಲ್ಲಿ ನಟಿಸಿದ್ದಳು.[೨][೧೦] ಚಿಕಾಗೊ ಸನ್‌-ಟೈಮ್ಸ್‌ ಪತ್ರಿಕೆಯಲ್ಲಿನ ವಿಮರ್ಶೆಯೊಂದರಲ್ಲಿ ರೋಜರ್‌ ಎಬರ್ಟ್‌ ಈ ಕುರಿತು ಅಭಿಪ್ರಾಯ ತಿಳಿಸುತ್ತಾ, "ಈ ಪಾತ್ರಕ್ಕೆ ಬ್ಯಾರಿಮೋರ್‌ ಕರಾರುವಾಕ್ಕಾಗಿ ಸೂಕ್ತವಾದ ನಟಿಯಾಗಿದ್ದಾಳೆ; ಏಕೆಂದರೆ, ಈ ಪಾತ್ರವನ್ನು ಆಕೆ ಘನವಾದ ಪ್ರಶಾಂತತೆಯೊಂದಿಗೆ ನಿರ್ವಹಿಸಿದ್ದಾಳೆ" ಎಂದು ಬರೆದ.


ಈ ಮುಂದಿನ ಮಾತುಗಳನ್ನು ಹೇಳುವ ಮೂಲಕ ಆತ ತನ್ನ ವಿಮರ್ಶೆಯನ್ನು ಮುಗಿಸುತ್ತಾನೆ: "ಡ್ರೂ ಬ್ಯಾರಿಮೋರ್ ಪಾತ್ರವು ಈ ಎಲ್ಲದರ ಮೂಲಕ ಸೂಕ್ತವಾಗಿ ಕಂಡುಬರುತ್ತದೆ. ವೃತ್ತಿಜೀವನದ ಬಗೆಗೆ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅವಳಿಗೆ ಬೇಕಿರುವುದು ಒಂದು ಸಂತೋಷದಾಯಕವಾದ ಮನೆ ಮತ್ತು ಆಕೆಯ ದಿನನಿತ್ಯದ ಅಗತ್ಯವಾದ ಪ್ರೀತಿ. ಆ ದೃಷ್ಟಿಯಲ್ಲಿ ಹೇಳುವುದಾರೆ, ಹಾಲಿವುಡ್‌ ಪ್ರಪಂಚವು (ಮತ್ತು ಸಾರ್ವತ್ರಿಕವಾಗಿ ಹೇಳುವುದಾದರೆ ಅಮೆರಿಕಾದ ಯಶಸ್ಸು) ಹೇಗೆ ತಂದೆ-ತಾಯಿಯರ ಸ್ವಾಭಾವಿಕ ಕಾರ್ಯವೈಖರಿಗಳಿಂದ ಪ್ರಾಪ್ತವಯಸ್ಕರು ಸಂಬಂಧ ಕಡಿದೊಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂಬುದನ್ನು ಈ ಚಿತ್ರವು ತೋರಿಸುತ್ತದೆ."[೧೧]


ಬಂಡಾಯದ ಯುಗ[ಬದಲಾಯಿಸಿ]

ಆಕಸ್ಮಿಕವಾಗಿ ದೊರೆತ ಈ ತಾರಾಪಟ್ಟದ ಪರಿಣಾಮವಾಗಿ, ಕೆಟ್ಟರೀತಿಯಲ್ಲಿ ತನ್ನನ್ನು ಕಾಡಿದ ಬಾಲ್ಯವೊಂದನ್ನು ಬ್ಯಾರಿಮೋರ್ ಸಹಿಸಿಕೊಂಡಳು. ಆಕೆ ಓರ್ವ ಪುಟ್ಟ ಹುಡುಗಿಯಾಗಿದ್ದಾಗಲೇ ಸುಪ್ರಸಿದ್ಧವಾಗಿದ್ದ ಸ್ಟುಡಿಯೋ 54ಕ್ಕೆ ಆಕೆ ನಿಯತವಾಗಿ ಭೇಟಿ ನೀಡುತ್ತಿದ್ದಳು, ಒಂಬತ್ತರ ವಯಸ್ಸಿನಲ್ಲಿ ಸಿಗರೇಟುಗಳನ್ನು ಸೇದುತ್ತಿದ್ದಳು, 11 ವರ್ಷದವಳಾಗುವ ಹೊತ್ತಿಗೆ ಮದ್ಯಸೇವನೆ ಮಾಡುತ್ತಿದ್ದಳು, 12ರ ವಯಸ್ಸಿನಲ್ಲಿ ಮರಿಜುವಾನಾ ಎಂಬ ಮಾದಕ ದ್ರವ್ಯವನ್ನು ಸೇದುತ್ತಿದ್ದಳು, ಮತ್ತು 13ನೇ ವಯಸ್ಸಿನಲ್ಲಿ ಕೊಕೇನನ್ನು ಮೂಸಿ ಎಳೆದುಕೊಳ್ಳುತ್ತಿದ್ದಳು.[೧][೨] ತನ್ನ ರಾತ್ರಿಯ ಜೀವನ ಮತ್ತು ನಿರಂತರ ಪಾರ್ಟಿಗಳಿಂದಾಗಿ, ಅವಳು ಮಾಧ್ಯಮಗಳಿಗೆ ಜನಪ್ರಿಯ ವಸ್ತುವಾಗಿದ್ದಳು.

ಆಕೆ 13 ವರ್ಷ ವಯಸ್ಸಿನವಳಾಗಿದ್ದಾಗ ಪುನರ್ವಸತಿ ಕೇಂದ್ರದಲ್ಲಿದ್ದಳು.[೧][೨] 14 ವರ್ಷ ವಯಸ್ಸಿನವಳಾಗಿದ್ದಾಗ ಆತ್ಮಹತ್ಯೆಗೆ ಪ್ರಯತ್ನಿಸಿದರಿಂದ ಆಕೆ ಮರಳಿ ಪುನರ್ವಸತಿ ಕೇಂದ್ರವನ್ನು ಸೇರಬೇಕಾಗಿ ಬಂತು. ಇದಾದ ನಂತರ ಗಾಯಕ ಡೇವಿಡ್ ಕ್ರಾಸ್ಬಿ ಮತ್ತು ಆತನ ಪತ್ನಿಯ ಜೊತೆಯಲ್ಲಿ ಮೂರು ತಿಂಗಳವರೆಗೆ ಆಕೆ ಕಾಲ ಕಳೆದಳು.[೬]

ಕ್ರಾಸ್ಬಿ ಹೇಳುವ ಪ್ರಕಾರ, ಈ ಉಳಿಯುವಿಕೆಯು ತ್ವರಿತವಾಗಿ ತೆಗೆದುಕೊಂಡ ನಿರ್ಧಾರವಾಗಿತ್ತು; ಏಕೆಂದರೆ "ಮಿತಪಾನಕ್ಕೆ ಅಥವಾ ಸಂಯಮದೆಡೆಗೆ ಬದ್ಧರಾಗಿರುವ ಜನರ ಸುತ್ತಮುತ್ತ ಆಕೆ ಇರುವುದು ಅಗತ್ಯವಾಗಿತ್ತು."[೬]

ತನ್ನ ಜೀವನದ ಈ ಅವಧಿಯನ್ನು 1990ರಲ್ಲಿ ತಾನು ಬರೆದ ಲಿಟ್ಲ್‌ ಗರ್ಲ್‌ ಲಾಸ್ಟ್‌ ಎಂಬ ಆತ್ಮಕಥನದಲ್ಲಿ ಬ್ಯಾರಿಮೋರ್‌ ನಂತರ ವಿವರಿಸಿದಳು. ನಂತರ ಮುಂದಿನ ವರ್ಷದಲ್ಲಿ, ವಿಮೋಚನೆಗಾಗಿ ಬಾಲ ನ್ಯಾಯಾಲಯದಲ್ಲಿ ಸಲ್ಲಿಸಲಾದ ಒಂದು ಯಶಸ್ವೀ ಮನವಿಯ ನಂತರ ಆಕೆ ತನ್ನ ಸ್ವಂತ ವಠಾರದ ಮನೆಗೆ ಸೇರಿಕೊಂಡಳು ಮತ್ತು ಎಂದಿಗೂ ಹಳೆಯ ದುಶ್ಚಟಗಳಿಗೆ ಮತ್ತೆ ಸಿಲುಕಲಿಲ್ಲ.[೬]


ನೂತನ ಕಲ್ಪನಾಸ್ವರೂಪ[ಬದಲಾಯಿಸಿ]

ತನ್ನ ಹದಿಹರೆಯದ ಕೊನೆಯ ಭಾಗದಲ್ಲಿ, 1992ರಲ್ಲಿ ಬಂದ ಪಾಯಿಸನ್‌ ಐವಿ ಚಿತ್ರದಲ್ಲಿ ಓರ್ವ ಸ್ವಾರ್ಥಗುಣದ ಹದಿಹರೆಯದ ಪ್ರಲೋಭನಕಾರಿಣಿಯ ಪಾತ್ರವನ್ನು ವಹಿಸಿದ್ದರಿಂದಾಗಿ ಆಕೆಗೊಂದು ಹೊಸ ಕಲ್ಪನಾಸ್ವರೂಪ ದಕ್ಕಿತು. ಈ ಚಿತ್ರವು ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ಸೋತಿತಾದರೂ, ವಿಡಿಯೋ ಹಾಗೂ ಕೇಬಲ್‌ ಮಾಧ್ಯಮಗಳಲ್ಲಿ ಜನಪ್ರಿಯವಾಗಿತ್ತು.[೧][೧೨] ಅದೇ ವರ್ಷದಲ್ಲಿ, 17ರ ಹರೆಯದಲ್ಲಿ ಇಂಟರ್‌ವ್ಯೂ ಎಂಬ ನಿಯತಕಾಲಿಕದ ಜುಲೈ ಸಂಚಿಕೆಯ ಮುಖಪುಟಕ್ಕಾಗಿ ತನ್ನ ಅಂದಿನ ಭಾವೀಪತಿ, ನಟ ಜೇಮೀ ವಾಲ್ಟರ್ಸ್‌‌ನೊಂದಿಗೆ ಆಕೆ ನಗ್ನಭಂಗಿಯನ್ನು ತಳೆದದ್ದೇ ಅಲ್ಲದೇ, ಸಂಚಿಕೆಯ ಒಳಪುಟಗಳ ಚಿತ್ರಗಳಲ್ಲೂ ನಗ್ನಳಾಗಿ ಕಾಣಿಸಿಕೊಂಡಳು.[೧೩] 1993ರಲ್ಲಿ, ಗನ್‌ಕ್ರೇಝಿ ಚಲನಚಿತ್ರಕ್ಕಾಗಿ ಬ್ಯಾರಿಮೋರ್ ಎರಡನೇ ಬಾರಿಗೆ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ಹೊಂದಿದಳು.[೧೦]

ಪ್ಲೇಬಾಯ್ ನಿಯತಕಾಲಿಕದ 1995ರ ಜನವರಿಯ ಸಂಚಿಕೆಯಲ್ಲಿ ಬ್ಯಾರಿಮೋರ‍್ ನಗ್ನಭಂಗಿಯಲ್ಲಿ ಕಾಣಿಸಿಕೊಂಡಳು.[೧೪][೧೫] ಬ್ಯಾರಿಮೋರ್‌ ಓರ್ವ ಮಗುವಾಗಿದ್ದಾಗ ಆಕೆಯನ್ನು E.T. ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್‌ ಚಿತ್ರದಲ್ಲಿ ನಿರ್ದೇಶಿಸಿದ್ದ ಸ್ಟೀವನ್‌ ಸ್ಪಿಲ್‌ಬರ್ಗ್‌, ಆಕೆಯ ಇಪ್ಪತ್ತನೆಯ ಹುಟ್ಟುಹಬ್ಬದ ಸಮಯದಲ್ಲಿ ರಜಾಯಿಯೊಂದನ್ನು (ಕ್ವಿಲ್ಟ್‌) ಉಡುಗೊರೆಯಾಗಿ ನೀಡಿ, ಅದರೊಂದಿಗೆ "ನಿನ್ನ ದೇಹವನ್ನು ಮುಚ್ಚಿಕೋ" ಎಂಬ ಟಿಪ್ಪಣಿಯನ್ನು ಲಗತ್ತಿಸಿದ್ದ.[೨] ಪ್ಲೇಬಾಯ್‌ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಆಕೆಯ ಚಿತ್ರಗಳ ಪ್ರತಿಗಳನ್ನು ಅದರೊಳಗೆ ಸೇರಿಸಲಾಗಿದ್ದು, ಆ ಚಿತ್ರಗಳನ್ನು ಸ್ಪಿಲ್‌ಬರ್ಗ್‌‌ನ ಕಲಾವಿಭಾಗವು ಮಾರ್ಪಡಿಸಿ ಆಕೆಯು ಸಂಪೂರ್ಣ ವಸ್ತ್ರವನ್ನು ಧರಿಸಿರುವಂತೆ ತೋರಿಸಿತ್ತು.[೧೬] ಈ ಅವಧಿಯಲ್ಲಿ ಆಕೆ ತನ್ನ ಐದು ಚಲನಚಿತ್ರಗಳಲ್ಲಿ ನಗ್ನಳಾಗಿ ಕಾಣಿಸಿಕೊಂಡಿದ್ದಳು. 1995ರ ಅವಧಿಯಲ್ಲಿ ಬಂದ ಲೇಟ್‌ ಷೋ ವಿತ್ ಡೇವಿಡ್‌ ಲೆಟರ್‌ಮನ್‌ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುವಾಗ, ಡೇವ್ ಲೆಟರ್‌ಮನ್‌ನ ಓರೆಮೇಜಿನ ಮೇಲೆ ಹತ್ತಿದ ಬ್ಯಾರಿಮೋರ‍್ ಅವನೆಡೆಗೆ ತನ್ನ ನಗ್ನಗೊಂಡ ಸ್ತನಗಳನ್ನು ಪ್ರದರ್ಶಿಸಿ, ಕ್ಯಾಮೆರಾದೆಡೆಗೆ ಬೆನ್ನನ್ನು ತೋರಿಸಿದ್ದಳು. ಇದು ಆತನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಆಕೆ ನಡೆದುಕೊಂಡ ಪರಿಯಾಗಿತ್ತು.[೬] ಆಕೆ ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾಳೆ. ಗೆಸ್ ? ಎಂಬ ಜೀನ್ಸ್ ಉಡುಪಿನ ಸರಣಿ ಜಾಹೀರಾತಿನಲ್ಲಿ ಆಕೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾಳೆ[೧೭] 1992ರಲ್ಲಿ ಆಕೆ ಸ್ತನದ ಗಾತ್ರವನ್ನು ತಗ್ಗಿಸುವ ಶಸ್ತ್ರಚಿಕಿತ್ಸೆಗೆ ಮೊರೆಹೋದಳು, ಮತ್ತು ಈ ಕುರಿತಾಗಿ ಆಕೆ ಹೇಳಿಕೊಂಡಿದ್ದಾಳೆ.


I really love my body and the way it is right now. There's something very awkward about women and their breasts because men look at them so much. When they're huge, you become very self-conscious. Your back hurts. You find that whatever you wear, you look heavy in. It's uncomfortable. I've learned something, though, about breasts through my years of pondering and pontificating, and that is: Men love them, and I love that.[೧೮]


ಪ್ರಸಿದ್ಧಿಗೆ ಮರಳುವಿಕೆ[ಬದಲಾಯಿಸಿ]

1995ರಲ್ಲಿ ಬಾಯ್ಸ್‌ ಆನ್‌ ದಿ ಸ್ಲೈಡ್‌ ಎಂಬ ಚಲನಚಿತ್ರದಲ್ಲಿ ವೂಫಿ ಗೋಲ್ಡ್‌ಬರ್ಗ್‌ ಹಾಗೂ ಮೇರಿ-ಲೂಯಿಸ್ ಪಾರ್ಕರ್‌[೧೯] ಎದುರಿಗೆ ಬ್ಯಾರಿಮೋರ‍್ ನಟಿಸಿದಳು. ಅಷ್ಟೇ ಅಲ್ಲ, ಜೋಯೆಲ್‌ ಷುಮೇಕರ್‌ಬ್ಯಾಟ್‌ಮನ್‌ ಫಾರೆವರ್‌ ಚಲನಚಿತ್ರದಲ್ಲಿ ಆಕೆಗೆ ಒಂದು ಕಿರುದೃಶ್ಯದ ಪಾತ್ರವಿದ್ದು, ಅದರಲ್ಲಿ ಆಕೆ ಟಾಮ್ಮಿ ಲೀ ಜೋನ್ಸ್‌ನ ಪಾತ್ರವಾದ ಟೂ ಫೇಸ್‌ನ ಓರ್ವ ಉಪಪತ್ನಿಯಾಗಿ ಅಭಿನಯಿಸಿದ್ದಳು.[೨೦][೨೧] ನಂತರದ ವರ್ಷದಲ್ಲಿ ಆಕೆ ಸ್ಕ್ರೀಮ್ ಎಂಬ ಯಶಸ್ವೀ ಭಯಾನಕ ಚಲನಚಿತ್ರದಲ್ಲಿ ಒಂದು ಕಿರುದೃಶ್ಯದ ಪಾತ್ರವನ್ನು ಅವಳು ವಹಿಸಿದ್ದಳು. ನೆಚ್ಚಿಕೊಳ್ಳಬಹುದಾದ ಕಲಾವಿದೆಯಾಗಿ ಹಾಗೂ ಗಲ್ಲಾಪೆಟ್ಟಿಗೆಯ ಓರ್ವ ಅಗ್ರಗಣ್ಯ ಆಕರ್ಷಣೆಯಾಗಿ ತನ್ನ ಸ್ಥಾನವನ್ನು ಬ್ಯಾರಿಮೋರ್‌ ಮುಂದುವರಿಸಿಕೊಂಡು ಬಂದಳು.[೧][೨೨] ವಿಶ್‌ಫುಲ್‌ ಥಿಂಕಿಂಗ್ (1996), ದಿ ವೆಡ್ಡಿಂಗ್ ಸಿಂಗರ್‌ [೨೩] (1998), ಮತ್ತು ಹೋಮ್‌ ಫ್ರೈಸ್‌ (1998) ಚಿತ್ರಗಳಂಥ ಪ್ರಣಯಭರಿತ ಹಾಸ್ಯಚಿತ್ರಗಳಲ್ಲಿ ಆಕೆ ಆಗಿಂದಾಗ್ಗೆ ಅಭಿನಯಿಸಿದಳು.[೨೪]

2007ರ ಮೇ ತಿಂಗಳಲ್ಲಿ ನಡೆದ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಬ್ಯಾರಿಮೋರ್‌.

ಚಾರ್ಲೀಸ್‌ ಏಂಜೆಲ್ಸ್‌ ಸೇರಿದಂತೆ, ಅವಳ ಕಂಪನಿಯಾದ ಫ್ಲವರ‍್ ಫಿಲ್ಮ್ಸ್‌ನಿಂದ ನಿರ್ಮಿಸಲ್ಪಟ್ಟ ಚಲನಚಿತ್ರಗಳಲ್ಲಿನ ಹಲವಾರು ಪಾತ್ರಗಳ ಜೊತೆಗೆ, ರೈಡಿಂಗ್ ಇನ್‌ ಕಾರ್ಸ್‌ ವಿತ್ ಬಾಯ್ಸ್‌ (2001) ಎಂಬ ಹಾಸ್ಯ/ನಾಟಕ ರೂಪದ ಚಿತ್ರದಲ್ಲಿ ಬ್ಯಾರಿಮೋರ‍್ ನಾಟಕೀಯ ಪಾತ್ರವೊಂದನ್ನು ನಿಭಾಯಿಸಿದಳು. ಈ ಚಿತ್ರದಲ್ಲಿ ಮಾದಕವಸ್ತು-ವ್ಯಸನಿ ತಂದೆಯೊಂದಿಗೆ ನಡೆದ ಒಂದು ವಿಫಲಗೊಂಡ ಮದುವೆಯಲ್ಲಿ ಓರ್ವ ಹರೆಯದ ತಾಯಿಯ ಪಾತ್ರವನ್ನು ಆಕೆ ನಿರ್ವಹಿಸಿದ್ದಳು (ಇದು ಬೆವೆರ್ಲಿ ಡಿ’ಓನೋಫ್ರಿಯೋನ ನಿಜ-ಜೀವನದ ಕಥೆಯನ್ನು ಆಧರಿಸಿತ್ತು).[೨೫] 2002ರಲ್ಲಿ ಸ್ಯಾಮ್‌ ರಾಕ್‌ವೆಲ್‌ ಮತ್ತು ಜೂಲಿಯಾ ರಾಬರ್ಟ್ಸ್‌ ಜೊತೆಯಲ್ಲಿ ಬ್ಯಾರಿಮೋರ‍್ ಕನ್‌ಫೆಷನ್ಸ್‌ ಆಫ್‌ ಎ ಡೇಂಜರಸ್‌ ಮೈಂಡ್‌ ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡಳು.[೨೬]


ಫ್ಲವರ‍್ ಫಿಲ್ಮ್ಸ್‌[ಬದಲಾಯಿಸಿ]

1995ರಲ್ಲಿ, ವ್ಯವಹಾರದ ಪಾಲುದಾರನಾದ ನ್ಯಾನ್ಸಿ ಜುವೊನೆನ್‌ನೊಂದಿಗೆ ಫ್ಲವರ್‌ ಫಿಲ್ಮ್ಸ್‌ ಎಂಬ ಸಂಸ್ಥೆಯನ್ನು ಬ್ಯಾರಿಮೋರ‍್ ಸ್ಥಾಪಿಸಿದಳು.[೨೭] 1999ರಲ್ಲಿ ಬಂದ ನೆವರ್‌ ಬೀನ್‌ ಕಿಸ್ಡ್‌ ಎಂಬ ಚಿತ್ರವು ಕಂಪನಿಯ ಮೊದಲ ಚಿತ್ರವಾಯಿತು.[೨೮] ಈ ಕಂಪನಿಯಿಂದ ಬಂದ ಎರಡನೇ ಚಿತ್ರವು ಚಾರ್ಲೀಸ್‌ ಏಂಜಲ್ಸ್‌ (2000) ಎಂಬುದಾಗಿತ್ತು. 2000ರಲ್ಲಿನ ಗಲ್ಲಾಪೆಟ್ಟಿಗೆಯಲ್ಲಿನ ಒಂದು ಯಶಸ್ವಿ ಚಿತ್ರವಾಗಿ ಇದು ಪರಿಣಮಿಸಿ, ಬ್ಯಾರಿಮೋರ‍್ ಹಾಗೂ ಆಕೆಯ ಕಂಪನಿಗೆ ಭದ್ರವಾದ ನಲೆಗಟ್ಟು ನೀಡಿತು.[೨][೨೯]


ರಿಚರ್ಡ್‌ ಕೆಲ್ಲಿಯ ಪ್ರಥಮ ಪರಿಚಯದ ಚಿತ್ರವಾದ ಡೊನ್ನೀ ಡಾರ್ಕೊ ದ ನಿರ್ಮಾಣ ಕಾರ್ಯಕ್ಕೆ ಅಡತಡೆಗಳುಂಟಾದಾಗ, ಫ್ಲವರ‍್ ಫಿಲ್ಮ್ಸ್‌ ವತಿಯಿಂದ ಹಣಕಾಸಿನ ನೆರವು ನೀಡುವ ಮೂಲಕ ಮುಂದಡಿಯಿಟ್ಟ ಬ್ಯಾರಿಮೋರ‍್, ಶೀರ್ಷಿಕೆ ಪಾತ್ರದ ಇಂಗ್ಲಿಷ್‌ ಶಿಕ್ಷಕಿಯ ಪಾತ್ರವಾದ ಕರೇನ್‌ ಪೊಮೆರಾಯ್‌ ಎಂಬ ಚಿಕ್ಕ ಪಾತ್ರವನ್ನು ವಹಿಸಿದಳು.[೩೦] 9/11ರ ಘಟನೆಯಿಂದಾಗಿ ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಂಥಾ ಯಶಸ್ಸನ್ನು ಕಾಣಲಾಗದಿದ್ದರೂ, DVDಯ ಬಿಡುಗಡೆಯ ನಂತರ ಇದಕ್ಕೆ ಧಾರ್ಮಿಕ ನಂಬುಗೆಯ ಸ್ಥಾನಮಾನ ದಕ್ಕಿತು ಹಾಗೂ ಕಥಾಸ್ವರೂಪದ ತಿರುವುಗಳ ಹಾಗೂ ಅರ್ಥಗಳ ರಹಸ್ಯವನ್ನು ಬಿಡಿಸುವುದರ ಕಡೆಗೆ ತೊಡಗಿಸಿಕೊಳ್ಳುವಲ್ಲಿ ಅಸಂಖ್ಯಾತ ವೆಬ್‌ಸೈಟ್‌ಗಳಿಗೆ ಇದು ಪ್ರೇರಣೆ ನೀಡಿತು.[೩೦]


2003ರಲ್ಲಿ, ಡೈಲನ್ ಸ್ಯಾಂಡರ್ಸ್‌ ಆಗಿ ಚಿತ್ರದಲ್ಲಿCharlie's Angels: Full Throttle [೧][೨೯] ಅವಳ ಪಾತ್ರವು ಪುನರಾವರ್ತನೆಯಾಯಿತು ಮತ್ತು ಆಲಿವ್, ದಿ ಅದರ‍್ ರೇಂಡಿಯರ‍್ [೩೧] ಚಿತ್ರದಲ್ಲಿನ ಅಭಿನಯಕ್ಕಾಗಿ ಆಕೆ ಎಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು ಮತ್ತು 2003ರಲ್ಲಿ ಡ್ಯೂಪ್ಲೆಕ್ಸ್‌ ಚಿತ್ರದಲ್ಲಿ ಬೆನ್‌ ಸ್ಟಿಲ್ಲರ್‌ನೊಂದಿಗೆ ಕಾಣಿಸಿಕೊಂಡಳು. ಸಹನಟ ಆಡಮ್‌ ಸ್ಯಾಂಡ್ಲರ್‌ಹ್ಯಾಪಿ ಮ್ಯಾಡಿಸನ್‌ ಕಂಪನಿಯೊಂದಿಗೆ 2004ರಲ್ಲಿ ಫ್ಲವರ‍್ ಫಿಲ್ಮ್ಸ್‌ ಕಂಪನಿಯು 50 ಫಸ್ಟ್ ಡೇಟ್ಸ್‌ ಚಿತ್ರವನ್ನು ನಿರ್ಮಿಸಿತು.[೩೨][೩೩]

ಬ್ಯಾರಿಮೋರ್‌ಳ ಆಕರ್ಷಣಾ ಗುಣವನ್ನು ಸಾರೀಕರಿಸುವ ಮೂಲಕ ರೋಜರ‍್ ಎಬರ್ಟ್‌ ಎಂಬಾತ 50 ಫಸ್ಟ್ ಡೇಟ್ಸ್‌ ಚಿತ್ರದ ಕುರಿತಾದ ತನ್ನ ವಿಮರ್ಶೆಯಲ್ಲಿ, ಬ್ಯಾರಿಮೋರ‍್ "ಒಂದು ನಗುವಿನ ರೂಪದ ಲಜ್ಜೆಯೊಂದಿಗಿನ ಪ್ರಾಮಾಣಿಕತೆಯನ್ನು" ಹೊಂದಿದ್ದಾಳೆ ಮತ್ತು ಅವಳ ಚಿತ್ರವು "ಒಲವು ಗಳಿಸುವ ಮತ್ತು ಪ್ರೀತಿಪಾತ್ರವಾಗುವ" ಲಕ್ಷಣವನ್ನು ಹೊಂದಿದೆ ಎಂದು ವಿವರಿಸಿದ.[೩೪]


50 ಫಸ್ಟ್‌ ಡೇಟ್ಸ್‌ ಚಿತ್ರದ ನಂತರ ಫಿವರ್ ಪಿಚ್‌ (2005), ಮತ್ತು 2007ರಲ್ಲಿ ಬಂದ ಮ್ಯೂಸಿಕ್‌ ಅಂಡ್ ಲಿರಿಕ್ಸ್‌ ಹಾಗೂ ಲಕಿ ಯೂ ಚಿತ್ರಗಳು ಬಂದವು.[೩೫][೩೬] ಬ್ಯಾರಿಮೋರ್‌‌ಳ ಇತ್ತೀಚಿನ ಯೋಜನೆಗಳಲ್ಲಿ 2008ರಲ್ಲಿ ಬಂದ ಬೆವರ್ಲಿ ಹಿಲ್ಸ್‌ ಚಿಹುವಾಹುವಾ ಮತ್ತು 2009ರಲ್ಲಿ ಬಂದ ಹಿ ಈಸ್‌ ಜಸ್ಟ್‌ ನಾಟ್‌ ದಟ್‌ ಇನ್‌ಟು ಯೂ ,ಗ್ರೇ ಗಾರ್ಡನ್ಸ್‌ ಮತ್ತು ಎವೆರಿಬಡೀಸ್‌ ಫೈನ್‌ ಚಿತ್ರಗಳು ಸೇರಿವೆ.


ಬ್ಯಾರಿಮೋರ್‌ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಚಿತ್ರವಾದ ವಿಪ್‌ ಇಟ್‌ , 2009ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಯಿತು. ವಿಪ್‌ ಇಟ್‌ ಚಿತ್ರದಲ್ಲಿ ಎಲೆನ್ ಪೇಜ್ ಮತ್ತು ಮಾರ್ಸಿಯಾ ಗೇ ಹಾರ್ಡೆನ್ ನಟಿಸಿದ್ದರು ಹಾಗೂ ಇದು ಸೌಂದರ್ಯ ಸ್ಪರ್ಧೆಯ ಪ್ರದರ್ಶನ ಮತ್ತು ಆಸ್ಟಿನ್‌, ಟೆಕ್ಸಾಸ್‌ ಹರ್ಲ್‌ ಗರ್ಲ್ಸ್‌ ರೋಲರ‍್ ಡರ್ಬಿ ತಂಡದೊಂದಿಗಿನ ಒಂದು ಗೀಳಿನ ಕುರಿತಾದುದಾಗಿತ್ತು. ಈ ಚಿತ್ರದಲ್ಲಿ ಬ್ಯಾರಿಮೋರ್ ಕೂಡಾ ಸಹನಟಿಯಾಗಿ ಕಾಣಿಸಿಕೊಂಡಳು.[೩೭]


ವೃತ್ತಿಜೀವನದ ಇತರ ಪ್ರಮುಖ ಅಂಶಗಳು[ಬದಲಾಯಿಸಿ]

ಫ್ಯಾಮಿಲಿ ಗೈ ಎಂಬುವ ಅನಿಮೇಟೆಡ್‌ ಹಾಸ್ಯಚಿತ್ರದಲ್ಲಿ ಜಿಲಿಯನ್‌ ಎಂಬ, ಬ್ರಿಯಾನ್‌ ಗ್ರೀಫಿನ್‌ನ ಸರಳ-ಮನಸ್ಸಿನ ಸ್ನೇಹಿತೆಯಾಗಿ ನಟಿಸುವ ಮೂಲಕ ಬ್ಯಾರಿಮೋರ್ ಒಂದು ಪುನರಾವರ್ತನೆಯ ಪಾತ್ರವನ್ನು ಆರಂಭಿಸಿದಳು.[೩೮] ಅಲ್ಲಿಂದೀಚೆಗೆ ಆಕೆ ಎಂಟು ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಾಳೆ.[೩೮][೩೯][೪೦][೪೧] 2005ರಲ್ಲಿ ಬಂದ ಮೈ ಡೇಟ್‌ ವಿತ್‌ ಡ್ರೂ ಎಂಬ ಸಾಕ್ಷ್ಯಚಿತ್ರಕ್ಕೆ ಆಕೆ ವಸ್ತುವಾಗಿದ್ದಾಳೆ. ಇದರಲ್ಲಿ, ಬ್ಯಾರಿಮೋರ್‌ಳ ಓರ್ವ ಅಭಿಮಾನಿ ಹಾಗೂ ಮಹತ್ವಾಕಾಂಕ್ಷೀ ಚಿತ್ರನಿರ್ಮಾಪಕ, ಆಕೆಯೊಂದಿಗಿನ ಒಂದು ವಿಹಾರದ ದಿನವನ್ನು ಪಡೆದುಕೊಳ್ಳಲು ತನ್ನೆಲ್ಲಾ ಸೀಮಿತ ಮೂಲಗಳನ್ನು ಬಳಸುತ್ತಾನೆ.[೪೨]

2004ರ ಫೆಬ್ರವರಿ 3ರಂದು ಆಕೆ ಹಾಲಿವುಡ್ ವಾಕ್ ಆಫ್ ಫೇಮ್‌ನ ಮೇಲಿನ ಒಂದು ನಕ್ಷತ್ರದ ಗೌರವವನ್ನು ಸ್ವೀಕರಿಸಿದಳು.[೪೩]

ಜೋಸೆಟ್‌ ಷೀರನ್‌ ಶೈನರ್‌, ಬ್ಯಾರಿಮೋರ್‌, ಕಾಂಡೊಲಿನಾ ರೈಸ್‌, ಮತ್ತು ಪಾಲ್‌ ಟೆರ್ಗಾಟ್‌


ಬ್ಯಾರಿಮೋರ್ ನಟಿಸಿದ ಚಿತ್ರಗಳು ವಿಶ್ವದಾದ್ಯಂತದ ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ 2.3 ಶತಕೋಟಿ $ಗಳಿಗಿಂತಲೂ ಹೆಚ್ಚು ಹಣವನ್ನು ಗಳಿಸಿವೆ. ದಿ ಹಾಲಿವುಡ್‌ ರಿಪೋರ್ಟರ್‌ ನ ವಾರ್ಷಿಕ ಮೊದಲ 10 ತಾರಾ ಸಂಭಾವನೆಯ ಪಟ್ಟಿಯ ಅನುಸಾರ, 2006ರ ವರ್ಷಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪೈಕಿ ಅವಳದು ಎರಡನೆಯ ಸ್ಥಾನವಾಗಿತ್ತು.[೪೪]


2007ರ ಫೆಬ್ರವರಿ 3ರಂದು, ಬ್ಯಾರಿಮೋರ್ ಸಾಟರ್ಡೆ ನೈಟ್ ಲೈವ್ (SNL) ಕಾರ್ಯಕ್ರಮದ ಅತಿಥೇಯಳಾಗಿ ನಿರಂತರ ಐದನೇ ಬಾರಿಗೆ[೨೯] ನಡೆಸಿಕೊಟ್ಟಳು. ಇದರಿಂದಾಗಿ ಸದರಿ ಕಾರ್ಯಕ್ರಮದ ಇತಿಹಾಸದಲ್ಲಿ ಕ್ಯಾಂಡಿಸ್ ಬರ್ಗೆನ್ ನಂತರ ಅವಳು ಎರಡನೆಯ ಮಹಿಳಾ ಅತಿಥೇಯಳಾಗುವಂತಾಯಿತು. ಆಕೆ ಮತ್ತೆ 2009ರ ಅಕ್ಟೋಬರ್ 10ರಂದು ಮತ್ತೊಮ್ಮೆ ಆತಿಥ್ಯ ವಹಿಸಿ, ಆರನೇ ಬಾರಿಗೆ ಆತಿಥ್ಯವಹಿಸಿದ ಮೊದಲ ಮಹಿಳೆ ಎನ್ನುವ ಗೌರವಕ್ಕೆ ಪಾತ್ರಳಾದಳು. ಕಾರ್ಯಕ್ರಮದ ಅತಿಥೇಯಳ ಪಾತ್ರವನ್ನು ನಿರ್ವಹಿಸಿದ ಅತಿ ಕಿರಿಯ ಪ್ರಸಿದ್ಧ ವ್ಯಕ್ತಿ (1982ರಲ್ಲಿ ಏಳನೇ ವಯಸ್ಸಿನಲ್ಲಿ) ಎಂಬ ದಾಖಲೆಯು ಇಂದಿಗೂ ಬ್ಯಾರಿಮೋರ್‌ಳ ಹೆಸರಿನಲ್ಲಿದೆ.[೪೫][೪೬]


2007ರಲ್ಲಿ[೪೭] ಕವರ್‌ಗರ್ಲ್‌ ಕಾಸ್ಮೆಟಿಕ್ಸ್‌ನ ರೂಪದರ್ಶಿ ಹಾಗೂ ವಕ್ತಾರಳಾಗುವ ಮತ್ತು ಪೀಪಲ್ಸ್‌ ಆನ್ಯುಯಲ್‌ 100 ಮೋಸ್ಟ್ ಬ್ಯೂಟಿಫುಲ್‌ ಪೀಪಲ್‌ ಲಿಸ್ಟ್‌ ನಲ್ಲಿ[೪೮] ನಂ. 1 ಸ್ಥಾನದಲ್ಲಿದ್ದಳು.2007ರಲ್ಲಿ, ಆಕೆ ಗುಸ್ಸಿ ಆಭರಣ ಶ್ರೇಣಿಗಾಗಿರುವ ಹೊಸ ಮುಖವೆಂದು ಹೆಸರಿಸಲ್ಪಟ್ಟಳು.[೪೯][೫೦] ಐಎಂಜಿ ಮಾಡೆಲ್ಸ್‌ ನ್ಯೂಯಾರ್ಕ್‌ ಸಿಟಿಗೆ ಬ್ಯಾರಿಮೋರ್ ಸಹಿಹಾಕಿದ್ದಾಳೆ.


2007ರ ಮೇ ತಿಂಗಳಲ್ಲಿ, ವಿಶ್ವಸಂಸ್ಥೆಯ ವಿಶ್ವ ಅಹಾರ ಕಾರ್ಯಕ್ರಮ[೫೧][೫೨] ಹಸಿವು ವಿರೋಧಿ ಅಂದೋಲನದ ರಾಯಭಾರಿಯಾಗಿ ಬ್ಯಾರಿಮೋರ್ ನೇಮಕಗೊಂಡಳಷ್ಟೇ ಅಲ್ಲದೇ, ಆ ಉದ್ದೇಶಕ್ಕಾಗಿ 1 ದಶಲಕ್ಷ $ ಹಣವನ್ನು ನಂತರ ಆಕೆ ದೇಣಿಗೆಯಾಗಿ ನೀಡಿದಳು.[೨೯][೫೩]ವೈಯಕ್ತಿಕ ಜೀವನ[ಬದಲಾಯಿಸಿ]

1991ರಲ್ಲಿ, ತನ್ನ 16ನೇ ವಯಸ್ಸಿನಲ್ಲಿ ಹಾಲಿವುಡ್ ನಿರ್ಮಾಪಕ ಲೆಲ್ಯಾಂಡ್ ಹೆವಾರ್ಡ್‌ನ ಮೊಮ್ಮಗನಾದ ಲೆಲ್ಯಾಂಡ್ ಹೆವಾರ್ಡ್‌ನೊಂದಿಗೆ ಬ್ಯಾರಿಮೋರ್‌ ನಿಶ್ಚಿತಾರ್ಥ ಮಾಡಿಕೊಂಡಳು.[೫೪] ಆದಾಗ್ಯೂ, ಕೆಲ ತಿಂಗಳ ನಂತರ ಈ ನಿಶ್ಚಿತಾರ್ಥವು ರದ್ದುಗೊಂಡಿತು.[೫೫] ಇದಾದ ಕೆಲವೇ ದಿನಗಳಲ್ಲಿ, 1992-93ರಲ್ಲಿ ಸಂಗೀತಗಾರ/ನಟ ಜಾಮಿ ವಾಲ್ಟರ್ಸ್‌ನೊಂದಿಗೆ ಬ್ಯಾರಿಮೋರ್ ನಿಶ್ಚಿತಾರ್ಥ ಮಾಡಿಕೊಂಡು ಜತೆಗಿದ್ದಳು.

ಬಾರ್‌ಟೆಂಡರ್‌ ಆಗಿದ್ದು ನಂತರ ಬಾರ್‌ ಮಾಲೀಕನಾಗಿ ರೂಪುಗೊಂಡ ಜೆರೆಮಿ ಥಾಮಸ್‌ ಎಂಬ ವೆಲ್ಷ್‌ ವ್ಯಕ್ತಿಯೊಂದಿಗೆ ಆಕೆ 1994ರ ಮಾರ್ಚ್ 20ರಿಂದ ಏಪ್ರಿಲ್‌ 28ರವರೆಗೆ ವೈವಾಹಿಕ ಜೀವನವನ್ನು ನಡೆಸಿದಳು.[೧][೬] ಅವಳ ಎರಡನೇ ಮದುವೆಯು ಟಾಮ್‌ ಗ್ರೀನ್‌ ಎಂಬ ಹಾಸ್ಯಕಲಾವಿದನೊಂದಿಗೆ ನಡೆಯಿತು ಮತ್ತು ಅವರ ವೈವಾಹಿಕ ಜೀವನವು 2001ರ ಜುಲೈ 7ರಿಂದ 2002ರ ಅಕ್ಟೋಬರ್ 15ರವರೆಗೆ ಸಾಗಿತು.[೫೬][೫೭]

2001ರ ಡಿಸೆಂಬರ್‌ನಲ್ಲಿ ಗ್ರೀನ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ.[೫೭] 2002ರಲ್ಲಿ, ಫ್ಯಾಬ್ರೈಝಿಯೋ ಮೊರೆಟ್ಟಿ ಎಂಬ ಸ್ಟ್ರೋಕ್ಸ್‌ ಡ್ರಮ್‌ ನುಡಿಸುವ ಕಲಾವಿದನನ್ನು ಸಂಗೀತ ಕಚೇರಿಯೊಂದರಲ್ಲಿ ಭೇಟಿಮಾಡಿದ ಕೆಲವೇ ದಿನಗಳಲ್ಲಿ, ಆತನೊಂದಿಗೆ ಬ್ಯಾರಿಮೋರ್ ಡೇಟಿಂಗ್‌ ಆರಂಭಿಸಿದಳು.[೧][೨೯]

ಆದರೂ ಅವರ ಐದು ವರ್ಷಗಳ ಅವಧಿಯ ಸಂಬಂಧವು 2007ರ ಜನವರಿ 10ರಂದು ಅಂತ್ಯಗೊಂಡಿತು.[೨೯][೫೮] ತೀರಾ ಇತ್ತೀಚೆಗೆ ಆಕೆ ಜಸ್ಟಿನ್‌ ಲಾಂಗ್‌[೫೯] ಎಂಬಾತನೊಂದಿಗೆ ಡೇಟಿಂಗ್‌ ನಡೆಸಿದಳಾದರೂ, ತಾವಿಬ್ಬರೂ ಬೇರ್ಪಟ್ಟಿರುವುದನ್ನು ಅವರು 2008ರ ಜುಲೈನಲ್ಲಿ ದೃಢೀಕರಿಸಿದರು.[೬೦]


ಈ ಇಬ್ಬರೂ ಈಗ ಜೋಡಿಯಾಗಿ ಉಳಿದಿಲ್ಲವಾದರೂ, ಗೋಯಿಂಗ್ ದಿ ಡಿಸ್ಟೆನ್ಸ್‌ ಎಂಬ ಮುಂಬರಲಿರುವ ಚಲನಚಿತ್ರದಲ್ಲಿ ಒಟ್ಟಾಗಿ ನಟಿಸಲು ಅವರಿಬ್ಬರೂ ಸಹಿ ಹಾಕಿದ್ದಾರೆ ಎಂದು ಯುಎಸ್‌ ವೀಕ್ಲಿ ಯು ವರದಿ ಮಾಡಿದೆ.[೬೧]


ತಾನು "ಎರಡು ವರ್ಷಗಳಿಂದ ಮಹಿಳೆಯೋರ್ವಳೊಂದಿಗೆ" ಇಲ್ಲ ಎಂದು ಬ್ಯಾರಿಮೋರ್‌ 1997ರಲ್ಲಿನ ಒಂದು ಸಂದರ್ಶನದಲ್ಲಿ ಹೇಳಿದಳಾದರೂ, 1990ರ ದಶಕದಲ್ಲಿ ಅವಳನ್ನು ಓರ್ವ ದ್ವಿಲಿಂಗಿ ಎಂಬಂತೆ ಆಗಿಂದಾಗ್ಗೆ ಚಿತ್ರಿಸಲಾಯಿತು.[೬೨] 2004ರಲ್ಲಿ, ಅವಳು ಈ ರೀತಿ ಹೇಳಿದಳೆಂದು ವರದಿಯಾಗಿತ್ತು: "ಓರ್ವ ಪುರುಷ ಮತ್ತು ಓರ್ವ ಮಹಿಳೆಯು ಜೊತೆಯಲ್ಲಿರುವುದು ಒಂದು ಸುಂದರವಾದ ಅನುಭೂತಿಯನ್ನು ನೀಡುವಂತೆಯೇ ಓರ್ವ ಮಹಿಳೆಯೊಂದಿಗೆ ಮತ್ತೋರ್ವ ಮಹಿಳೆಯಿರುವುದೂ ಸುಂದರವಾಗಿರುತ್ತದೆ.

ಮಹಿಳೆಯೊಂದಿಗೆ ಇರುವುದೆಂದರೆ ಅದು ನಿಮ್ಮದೇ ಶರೀರವನ್ನು ಒಳಹೊಕ್ಕು ನೋಡಿದಂತೆ, ಆದರೆ ಮತ್ತಾರದೋ ಮೂಲಕ. ನಾನು ಹರೆಯದವಳಾಗಿದ್ದಾಗ ಅಸಂಖ್ಯಾತ ಮಹಿಳೆಯರೊಂದಿಗೆ ನನ್ನ ಒಡನಾಟವಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ನಾನು ಇದನ್ನು ಪ್ರೀತಿಸುತ್ತೇನೆ".[೬೩] 2007ರ ಮಾರ್ಚ್‌ನಲ್ಲಿ, ನಿಯತಕಾಲಿಕದ ಮಾಜಿ ಸಂಪಾದಕಿಯಾದ ಜೇನ್‌ ಪ್ರಾಟ್‌ ಎಂಬಾಕೆಯು, ತೊಂಬತ್ತರ-ದಶಕದ ಮಧ್ಯಭಾಗದಲ್ಲಿ ತಾನು ಬ್ಯಾರಿಮೋರ್‌ಳೊಂದಿಗೆ ಪ್ರಣಯ ಸಂಬಂಧವನ್ನು ಇಟ್ಟುಕೊಂಡಿದ್ದಾಗಿ ತನ್ನ ಸಿರಿಯಸ್‌ ಉಪಗ್ರಹ ರೇಡಿಯೋ ಕಾರ್ಯಕ್ರಮದಲ್ಲಿ ಸಮರ್ಥಿಸಿದ್ದಳು.[೬೪]


ಬ್ಯಾರಿಮೋರ್ ಮೊದಮೊದಲು ಸಸ್ಯಹಾರಿಯಾಗಿದ್ದಳು, ಆದರೆ ಕಾಲಾನಂತರದಲ್ಲಿ ಮಾಂಸವನ್ನು ತಿನ್ನಲು ಆರಂಭಿಸಿದಳು.[೬೫] ಆಕೆ ಕರ್ಟ್ ಕೋಬಿನ್‌ನ ಮಗಳಾದ ಫ್ರಾನ್ಸೆಸ್‌ಳ ಧರ್ಮಮಾತೆಯಾಗಿದ್ದಾಳೆ.


ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ನಟಿ[ಬದಲಾಯಿಸಿ]

ಲಂಡನ್‌ನಲ್ಲಿ ನಡೆದ ಸಂಗೀತ ಮತ್ತು ಸಾಹಿತ್ಯದ ಮೊದಲ ಪ್ರಯೋಗದಲ್ಲಿ ಬ್ಯಾರಿಮೋರ್‌.

| ಹೋಮ್‌ ಫ್ರೈಸ್‌ | ಸ್ಯಾಲಿ ಜಾಕ್ಸನ್‌ ||-| rowspan="2"| 1999 | ನೆವರ್ ಬೀನ್ ಕಿಸ್ಡ್‌ | ಜೋಸಿ ಗೆಲ್ಲರ್‌ ನಾಮನಿರ್ದೇಶನಗೊಂಡಿದ್ದು - ಅತ್ಯುತ್ತಮ ಅಭಿನಯಕ್ಕೆ ಮೀಸಲಾದ MTV ಚಲನಚಿತ್ರ ಪ್ರಶಸ್ತಿ - ಮಹಿಳೆ
ನಾಮನಿರ್ದೇಶನಗೊಂಡಿದ್ದು - ಅತ್ಯುತ್ತಮ ಚುಂಬನಕ್ಕೆ ಮೀಸಲಾದ ಎಮ್‌ಟಿವಿ ಚಲನಚಿತ್ರ ಪ್ರಶಸ್ತಿ|-| ಆಲಿವ್, ದಿ ಅದರ್ ರೇಂಡೀರ್‌ | ಆಲಿವ್| ಕಂಠದಾನ |-| rowspan="4"| 2000 ದಿ ಸಿಮ್ಸನ್ಸ್‌| ಸೋಫಿ (ಕಂಠದಾನ)| 1ನೇ ಸಂಚಿಕೆ|-| ಸ್ಕಿಪ್ಡ್‌ ಪಾರ್ಟ್ಸ್‌ | ಫ್ಯಾಂಟಸಿ ಗರ್ಲ್‌ ||-| ಟೈಟನ್‌ A.E. | ಅಕಿಮಾ| ಕಂಠದಾನ|-| ಚಾರ್ಲೀಸ್‌ ಏಂಜಲ್ಸ್‌ | ಡೈಲಾನ್‌ ಸ್ಯಾಂಡರ್ಸ್‌ | ಕ್ಯಾಮೆರಾನ್‌ ಡಿಯಾಝ್‌ ಮತ್ತು ಲೂಸಿ ಲಿಯುರೊಂದಿಗಿನ ತೆರೆಯ ಮೇಲಿನ ಅತ್ಯುತ್ತಮ ತಂಡಕ್ಕೆ ಮೀಸಲಾದ MTV ಚಲನಚಿತ್ರ ಪ್ರಶಸ್ತಿ
ನಾಮನಿರ್ದೇಶನಗೊಂಡದ್ದು - ಅತ್ಯುತ್ತಮ ಹೊಡೆದಾಟದ ದೃಶ್ಯಕ್ಕೆ ಮೀಸಲಾದ MTV ಚಲನಚಿತ್ರ ಪ್ರಶಸ್ತಿ|-| rowspan="3"| 2001 | ಡೋನ್ನಿ ಡಾರ್ಕೊ | ಕರೇನ್‌ ಪೋಮ್‌ರಾಯ್‌ ||-| ಫ್ರೆಡ್ಡಿ ಗಾಟ್‌ ಫಿಂಗರ್ಡ್‌ | Mr. ಡೇವಿಡ್‌ಸನ್'ಸ್‌ ರಿಸೆಪ್ಷನಿಸ್ಟ್‌ ||-| ರಿಂಗಿಂಗ್ ಇನ್ ಕಾರ್ಸ್‌ ವಿತ್ ಬಾಯ್ಸ್‌ | ಬೆವೆರ್ಲಿ ಡೊನೊಫ್ರಿಯೊ ||-| 2002 | ಕನ್ಫೆಷನ್ಸ್‌ ಆಫ್ ಎ ಡೇಂಜರಸ್‌ ಮೈಂಡ್‌ | ಪೆನ್ನಿ ||-| rowspan="2"| 2003 | Charlie's Angels: Full Throttle | ಡೈಲಾನ್‌ ಸ್ಯಾಂಡರ್ಸ್‌ | ನಾಮನಿರ್ದೇಶನಗೊಂಡದ್ದು – ಕ್ಯಾಮೆರಾನ್‌ ಡಿಯಾಝ್ ಮತ್ತು ಲೂಸಿ ಲಿಯುರೊಂದಿಗಿನ ಅತ್ಯುತ್ತಮ ನೃತ್ಯ ಸನ್ನಿವೇಶಕ್ಕಾಗಿ ಮೀಸಲಾಗಿರುವ MTV ಚಲನಚಿತ್ರ ಪ್ರಶಸ್ತಿ

Year Film Role Notes
1978 ಸಡನ್ಲಿ, ಲವ್‌ ಬಾಬ್ಬಿ ಗ್ರಹಾಂ (Uncredited) TV ಚಲನಚಿತ್ರ
1980 ಬೋಗಿ ಲೆಸ್ಲಿ ಬೋಗಾರ್ಟ್‌ TV ಚಲನಚಿತ್ರ
ಆಲ್ಟರ್ಡ್‌ ಸ್ಟೇಟ್ಸ್‌ ಮಾರ್ಗರೇಟ್‌ ಜೆಸ್ಸಪ್‌
1982 E.T. ದಿ ಎಕ್ಸ್‌ಟ್ರಾ-ಟೆರೆಸ್ಟ್ರಿಯಲ್‌ ಗರ್ಟೀ ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ಹೊಸಮುಖಕ್ಕಾಗಿರುವ BAFTA ಪ್ರಶಸ್ತಿ
1984 ಫೈರ್‌ಸ್ಟಾರರ್‌ ಚಾರ್ಲೀನ್‌ "ಚಾರ್ಲಿ" ಮೆಕ್‌ಗೀ ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ಅಭಿನಯ ನೀಡಿದ ಓರ್ವ ಕಿರಿಯ ನಟನಿಗೆ ಮೀಸಲಾದ ಸ್ಯಾಟರ್ನ್‌ ಪ್ರಶಸ್ತಿ
ಇರ್ರೀಕನ್ಸಿಲಬಲ್‌ ಡಿಫರೆನ್ಸಸ್‌ ಕೇಸಿ ಬ್ರಾಡ್ಸ್‌ಕಿ

ನಾಮನಿರ್ದೇಶಿತಗೊಂಡಿದ್ದು — ಅತ್ಯುತ್ತಮ ಪೋಷಕ ನಟಿಗಾಗಿ ಮೀಸಲಾದ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ- ಚಲನಚಿತ್ರ

1985 ಕ್ಯಾಟ್ಸ್ ಐ ಅವರ್ ಗರ್ಲ್‌, ಅಮಂಡಾ (ಎಲ್ಲಾ ವಿಭಾಗಗಳಿಗೆ)
1986 ಬೇಬ್ಸ್‌ ಇನ್‌ ಟಾಯ್‌ಲ್ಯಾಂಡ್‌ ಲಿಸಾ ಪೈಪರ್‌ TV ಚಲನಚಿತ್ರ
1989 ಸೀ ಯು ಇನ್ ದಿ ಮಾರ್ನಿಂಗ್‌ ಕ್ಯಾಥಿ ಗುಡ್‌ವಿನ್‌
ಫಾರ್‌ ಫ್ರಂ ಹೋಮ್‌ ಜೋಲೀನ್‌ ಕಾಕ್ಸ್‌
1991 ಮೊಟೊರಾಮಾ ಫ್ಯಾಂಟಸಿ ಗರ್ಲ್‌
1992 2000 ಮಾಲಿಬು ರೋಡ್‌ ಲಿಂಡ್ಸೆ

6 ಸಂಚಿಕೆಗಳು

Waxwork II: Lost in Time ವ್ಯಾಂಪೈರ್ ವಿಕ್ಟಿಮ್‌ #1
ಪಾಯಿಸನ್‌ ಐವಿ

ಐವಿ

ಗನ್‌ಕ್ರೇಝಿ ಅನಿತಾ ಮಿಂಟೀರ್‌ ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ನಟಿಗೆ ಮೀಸಲಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಕಿರುಸರಣಿ ಅಥವಾ ದೂರದರ್ಶನ ಚಿತ್ರ
1993 ದಿ ಅಮಿ ಫಿಶರ್ ಸ್ಟೋರಿ ಅಮಿ ಫಿಶರ್
ನೋ ಪ್ಲೇಸ್‌ ಟು ಹೈಡ್‌ ಟಿನ್ಸೆಲ್ ಹ್ಯಾನ್ಲೆ
ಡಾಪ್ಪೆಲ್‌ಗ್ಯಾಂಗರ್‌ ಹಾಲಿ ಗೂಡಿಂಗ್‌
ವೇಯ್ನ್ಸ್‌ ವರ್ಲ್ಡ್‌ 2 ಬ್ಜೆರ್ಗನ್ ಕ್ಜೆರ್ಗನ್‌
1994 ಇನ್‌ಸೈಡ್‌ ದಿ ಗೋಲ್ಡ್‌ಮೈನ್‌

ಡೇಸಿ

ಬ್ಯಾಡ್‌ ಗರ್ಲ್ಸ್‌ ಲಿಲಿ ಲಾರೊನೆಟ್‌
1995 ಬಾಯ್ಸ್‌ ಆನ್‌ ದಿ ಸೈಡ್‌ ಹಾಲಿ ಪುಲ್‌ಚಿಕ್‌-ಲಿಂಕನ್‌
ಮ್ಯಾಡ್‌ ಲವ್‌ ಕೇಸಿ ರಾಬರ್ಟ್ಸ್
ಬ್ಯಾಟ್‌ಮನ್‌ ಫಾರೆವರ್‌

ಶುಗರ್‌

1996 ಎವೆರಿಒನ್‌ ಸೇಸ್‌ ಐ ಲವ್‌ ಯು ಸ್ಕೈಲರ್ ಡಾಂಡ್ರಿಜ್‌
ಸ್ಕ್ರೀಮ್‌ ಕೇಸಿ ಬೆಕರ್‌ ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ಪೋಷಕನಟಿಗೆ ಮೀಸಲಾದ ಸ್ಯಾಟರ್ನ್‌ ಪ್ರಶಸ್ತಿ
1997 ವಿಶ್‌ಫುಲ್‌ ಥಿಂಕಿಂಗ್‌ ಲೆನಾ
ಬೆಸ್ಟ್‌ ಮೆನ್‌ ಹೋಪ್‌
1998 ದಿ ವೆಡ್ಡಿಂಗ್ ಸಿಂಗರ್‌ ಜೂಲಿಯಾ ಸಲ್ಲಿವನ್‌ ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ನಟಿಗಾಗಿ ಮೀಸಲಾದ ಕ್ಲೋಟ್ರೂಡಿಯಸ್‌ ಪ್ರಶಸ್ತಿ ಎವರ್ ಆಫ್ಟರ್‌‌ ಗೂ ಸಹ
ಎವರ್ ಆಫ್ಟರ್‌‌ ಡೇನಿಯೆಲ್‌ ಡಿ ಬಾರ್ಬಾರಾಕ್‌ ಅತ್ಯುತ್ತಮ ನಟಿಗೆ ಮೀಸಲಾದ ಸ್ಯಾಟರ್ನ್ ಪ್ರಶಸ್ತಿ
ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ನಟಿಗಾಗಿ ಮೀಸಲಾದ ಕ್ಲೋಟ್ರೂಡಿಯಸ್‌ ಪ್ರಶಸ್ತಿ ದಿ ವೆಡ್ಡಿಂಗ್ ಸಿಂಗರ್‌ ಗೂ ಸಹ
ಡ್ಯೂಪ್ಲೆಕ್ಸ್‌ ನ್ಯಾನ್ಸಿ ಕೆಂಡ್ರಿಕ್ಸ್‌
2004 50 ಫಸ್ಟ್‌ ಡೇಟ್ಸ್‌ ಲಕಿ ವಿಟ್‌ಮೋರ್‌

ತೆರೆಯ ಮೇಲಿನ ಅತ್ಯುತ್ತಮ ಜೋಡಿಗೆ ಮೀಸಲಾದ MTV ಚಲನಚಿತ್ರ ಪ್ರಶಸ್ತಿ‌
ನಾಮನಿರ್ದೇಶನಗೊಂಡದ್ದು - ಅತ್ಯುತ್ತಮ ಅಭಿನಯಕ್ಕೆ ಮೀಸಲಾದ MTV ಚಲನಚಿತ್ರ ಪ್ರಶಸ್ತಿ - ಮಹಿಳೆ
ತೆರೆಯ ಮೇಲಿನ ಅಚ್ಚುಮೆಚ್ಚಿನ ಹೊಂದಾಣಿಕೆಗೆ ಮೀಸಲಾದ ಜನರ ಆಯ್ಕೆಯ ಪ್ರಶಸ್ತಿ

ಮೈ ಡೇಟ್‌ ವಿತ್‌ ಡ್ರೂ ಸ್ವತಃ ಆಕೆ
2005 ಫಿವರ್ ಪಿಚ್‌ ಲಿಂಡ್ಸೆ ಮೀಕ್ಸ್‌

|- |2006–2009 | ಫ್ಯಾಮಿಲಿ ಗೈ | ಜಿಲ್ಲಿಯನ್‌ ರಸ್ಸೆಲ್‌ (ಕಂಠದಾನ) | 7 ಸಂಚಿಕೆಗಳು |- | 2006 | ಕ್ಯೂರಿಯಸ್‌ ಜಾರ್ಜ್‌ | ಮ್ಯಾಗಿ | ಕಂಠದಾನ |- | rowspan="2"| 2007 | ಮ್ಯೂಸಿಕ್‌ ಅಂಡ್ ಲಿರಿಕ್ಸ್‌ | ಸೋಫಿ ಫಿಶರ್‌ | |- | ಲಕಿ ಯೂ | ಬಿಲ್ಲಿ ಆಫರ್‌ | |- | 2008 | ಬೆವರ್ಲಿ ಹಿಲ್ಸ್‌ ಚಿಹುವಾಹುವಾ | ಕ್ಲೋಯೆ | ಕಂಠದಾನ |- | rowspan="4"| 2009 | ಹಿ ಈಸ್‌ ಜಸ್ಟ್‌ ನಾಟ್‌ ದಟ್‌ ಇನ್‌ಟು ಯು | ಮೇರಿ | |- | ಗ್ರೇ ಗಾರ್ಡನ್ಸ್‌ | ಎಡಿತ್‌ ಬೌವಿಯರ್ ಬೀಲ್‌ | ಕೇಬಲ್ HBO ಚಲನಚಿತ್ರಕ್ಕಾಗಿ ನಿರ್ಮಿಸಲಾದದ್ದು
ನಾಮನಿರ್ದೇಶನಗೊಂಡದ್ದು – ಮಹೋನ್ನತ ಮುಖ್ಯ ನಟಿಗೆ ಮೀಸಲಾಗಿರುವ Emmy ಪ್ರಶಸ್ತಿ – ಕಿರುಸರಣಿ ಅಥವಾ ಒಂದು ಚಲನಚಿತ್ರ
ನಾಮನಿರ್ದೇಶನಗೊಂಡದ್ದು - ಅತ್ಯುತ್ತಮ ನಟಿಗೆ ಮೀಸಲಾದ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಕಿರುಸರಣಿ ಅಥವಾ ದೂರದರ್ಶನ ಚಲನಚಿತ್ರ ನಾಮನಿರ್ದೇಶನಗೊಂಡದ್ದು - [[ಕಿರುಸರಣಿ ಅಥವಾ ದೂರದರ್ಶನ ಚಲನಚಿತ್ರವೊಂದರಲ್ಲಿ ನಟಿಯೊಬ್ಬಳ ಮಹೋನ್ನತ ಅಭಿನಯಕ್ಕಾಗಿ ಮೀಸಲಾದ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ]] |- | ಎವೆರಿಬಡೀಸ್‌ ಫೈನ್‌ | ರೋಸಿ | |- | ವಿಪ್‌ ಇಟ್‌ | ಸ್ಮ್ಯಾಶ್ಲಿ ಸಿಂಪ್ಸನ್‌ |

2010 ಗೋಯಿಂಗ್ ದಿ ಡಿಸ್ಟನ್ಸ್‌ 'ನಿರ್ಮಾಣದ-ನಂತರದ್ದು'ಇದನ್ನೂ ಗಮನಿಸಿ[ಬದಲಾಯಿಸಿ]


ಆಕರಗಳು[ಬದಲಾಯಿಸಿ]

 1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ "Drew Barrymore". Inside the Actors Studio. Season 9. Episode 910. 2003-06-22. Bravo. http://www.bravotv.com/Inside_the_Actors_Studio/guest/Drew_Barrymore. 
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ಸ್ಟೀನ್‌ ಹಾಫ್‌ಮನ್‌, ಕರೋಲ್‌. ದಿ ಬ್ಯಾರಿಮೋರ್ಸ್‌: ಹಾಲಿವುಡ್‌'ಸ್‌ ಫಸ್ಟ್‌ ಫ್ಯಾಮಿಲಿ . ಯುನಿವರ್ಸಿಟಿ ಪ್ರೆಸ್‌ ಆಫ್ ಕೆಂಟುಕಿ, 2001. ISBN 0-8131-2213-9.
 6. ೬.೦ ೬.೧ ೬.೨ ೬.೩ ೬.೪ ೬.೫ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. "ದಿ ಕೋಸ್ಟೆಲೊ ಫ್ಯಾಮಿಲಿ." BarrymoreFamily.com .
 8. "ದಿ ಡ್ರೂ ಫ್ಯಾಮಿಲಿ." BarrymoreFamily.com .
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. ೧೦.೦ ೧೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. "The E! True Hollywood Story: Drew Barrymore". 2007-11-28. E!. 
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Batman Forever (DVD). Warner Brothers. 2005. 
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. ೨೯.೦ ೨೯.೧ ೨೯.೨ ೨೯.೩ ೨೯.೪ ೨೯.೫ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. ೩೦.೦ ೩೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. ೩೮.೦ ೩೮.೧ Steve Callaghan and Greg Colton (2006-11-12). "Whistle While Your Wife Works". Family Guy. Season 5. Episode 5. Fox. 
 39. Cherry Chevapravatdumrong and James Purdum (2006-11-19). "Prick Up Your Ears". Family Guy. Season 5. Episode 6. Fox. 
 40. Alec Sulkin, Wellesley Wild, and Pete Michels (2006-11-26). "Chick Cancer". Family Guy. Season 5. Episode 7. Fox. 
 41. Kirker Butler and Zac Moncrief (2006-12-17). "Barely Legal". Family Guy. Season 5. Episode 8. Fox. 
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Sporkin, Elizabeth (1991-02-25). "They'll Take Romance". 
 55. Kahn, Toby (1992-09-14). "Passages". 
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. ೫೭.೦ ೫೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. Hobson, Louis B. (1997-03-04). "True Drew". Canoe Jam!. 
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.


ಹೆಚ್ಚಿನ ಓದಿಗೆ[ಬದಲಾಯಿಸಿ]

 • ಆರನ್‌ಸನ್‌, ವರ್ಜೀನಿಯಾ. ಡ್ರೂ ಬ್ಯಾರಿಮೋರ್‌ . ಚೆಲ್ಸಿಯಾ ಹೌಸ್‌, 1999. ISBN 0-7910-5306-7
 • ಬ್ಯಾಂಕ್‌ಸ್ಟನ್‌, ಜಾನ್‌. ಡ್ರೂ ಬ್ಯಾರಿಮೋರ್‌ . ಚೆಲ್ಸಿಯಾ ಹೌಸ್‌ ಪಬ್ಲಿಷರ್ಸ್‌, 2002. ISBN 0-7910-6772-6
 • ಬ್ಯಾರಿಮೋರ್‌, ಡ್ರೂ. ಲಿಟ್ಲ್‌ ಗರ್ಲ್‌ ಲಾಸ್ಟ್‌ . ಪಾಕೆಟ್ ಸ್ಟಾರ್‌ ಬುಕ್ಸ್‌, 1990. ISBN 0-671-68923-1
 • ಎಲ್ಲಿಸ್‌, ಲೂಸಿ. ಡ್ರೂ ಬ್ಯಾರಿಮೋರ್‌: ದಿ ಬಯಾಗ್ರಫಿ . ಔರಮ್‌ ಪ್ರೆಸ್‌, 2004. ISBN 1-84513-032-4
 • ಹಿಲ್‌, ಆನ್ನಿ E. ಡ್ರೂ ಬ್ಯಾರಿಮೋರ್‌ . ಲ್ಯೂಸೆಂಟ್‌ ಬುಕ್ಸ್‌, 2001. ISBN 1-56006-831-0


ಬಾಹ್ಯ ಕೊಂಡಿಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
 1. REDIRECT Template:AllRovi person