ವಿಷಯಕ್ಕೆ ಹೋಗು

ರಜಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಜಾಯಿಯು ಅಫ಼್ಘಾನಿಸ್ತಾನ, ಪಾಕಿಸ್ತಾನ, ಉತ್ತರ ಭಾರತ, ನೇಪಾಳ ಮುಂತಾದ ಕಡೆ ಬಳಸಲಾದ ಹಾಸಿಗೆಯ ಕ್ವಿಲ್ಟ್.[] ಇದು ತೂಲತಲ್ಪ ಅಥವಾ ಹಂಸತೂಲಿಕಾತಲ್ಪವನ್ನು ಹೋಲುವ ಒಂದು ಬಗೆಯ ಹಾಸಿಗೆ ವಸ್ತು. ರಜಾಯಿಗಳು ಸಾಮಾನ್ಯವಾಗಿ ಹತ್ತಿ, ರೇಷ್ಮೆ ಅಥವಾ ಮಖಮಲ್ ಬಟ್ಟೆಯ ಹೊದಿಕೆಯನ್ನು ಹೊಂದಿದ್ದು, ಒಳಗೆ ಕಚ್ಚಾ ಹತ್ತಿಯನ್ನು ತುಂಬಿರಲಾಗಿರುತ್ತದೆ. ಇವು ಈ ಪ್ರದೇಶಗಳಲ್ಲಿ ಆಗಬಹುದಾದ ಬಹಳ ತಂಪನೆಯ ಹವಾಮಾನದಲ್ಲಿ ಕೂಡ ಬಹಳಷ್ಟು ಬೆಚ್ಚಗಿರುವಂತೆ ಶಾಖವನ್ನು ಒದಗಿಸಬಲ್ಲದು. ಮುಖ್ಯವಾಗಿ ಕಚ್ಚಾ ಹತ್ತಿಯಲ್ಲಿ ಸಿಲುಕಿರುವ ದೊಡ್ಡ ಪ್ರಮಾಣದ ಗಾಳಿಯ ನಿರೋಧಕ ಪರಿಣಾಮಗಳು ಈ ಶಾಖಕ್ಕೆ ಕಾರಣವಾಗಿರುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Theodore Leighton Pennell (1912), Things seen in northern India, Dutton, ... The other article which travellers are recommended to purchase in India is a native quilt, or "razai." This is a cotton or silk cover stuffed with cotton-wool ...
  2. Murray's handbook, India, Burma & Ceylon, John Murray, 1924, ... which in North India may sometimes be bitterly cold. The minimum equipment is a pillow and two cotton-wadded quilts (razais), one to sleep on, and one, which should be larger, as a coverlet ...


"https://kn.wikipedia.org/w/index.php?title=ರಜಾಯಿ&oldid=917894" ಇಂದ ಪಡೆಯಲ್ಪಟ್ಟಿದೆ