ಡಂಕನ್ ಫ್ಲೆಚರ್
ವಯಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಹುಟ್ಟು | ಸಾಲಿಸ್ಬರಿ, ದಕ್ಷಿಣ ರೊಡೇಶಿಯಾ | ೨೭ ಸೆಪ್ಟೆಂಬರ್ ೧೯೪೮||||||||||||||||||||||||||||||||||||||||||||||||||||
ಬ್ಯಾಟಿಂಗ್ | ಎಡಗೈ | ||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ವೇಗದ-ಮಧ್ಯಮ | ||||||||||||||||||||||||||||||||||||||||||||||||||||
ಸಂಬಂಧಗಳು | ಅಲನ್ ಫ್ಲೆಚರ್ (ಸಹೋದರ) ಆನ್ ಗ್ರಾಂಟ್ (ಸಹೋದರಿ) | ||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | |||||||||||||||||||||||||||||||||||||||||||||||||||||
ರಾಷ್ಟೀಯ ತಂಡ | |||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೩) | ೯ ಜೂನ್ ೧೯೮೩ v ಆಸ್ಟ್ರೇಲಿಯಾ | ||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೨೦ ಜೂನ್ ೧೯೮೩ v ವೆಸ್ಟ್ ಇಂಡೀಸ್ | ||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | |||||||||||||||||||||||||||||||||||||||||||||||||||||
ವರ್ಷಗಳು | ತಂಡ | ||||||||||||||||||||||||||||||||||||||||||||||||||||
೧೯೬೯/೭೦–೧೯೭೦/೮೦ | ರೊಡೇಸಿಯಾ | ||||||||||||||||||||||||||||||||||||||||||||||||||||
೧೯೮೪/೮೫ | ಪಶ್ಚಿಮ ಪ್ರಾಂತ್ಯ | ||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | |||||||||||||||||||||||||||||||||||||||||||||||||||||
| |||||||||||||||||||||||||||||||||||||||||||||||||||||
ಪದಕ ದಾಖಲೆ
| |||||||||||||||||||||||||||||||||||||||||||||||||||||
ಮೂಲ: Cricinfo, 24 December 2008 |
ಡಂಕನ್ ಆಂಡ್ರ್ಯೂ ಗ್ವಿನ್ನೆ ಫ್ಲೆಚರ್ ಒಬಿಇ (ಜನನ ೨೭ ಸೆಪ್ಟೆಂಬರ್ ೧೯೪೮) ಅವರು ಜಿಂಬಾಬ್ವೆಯ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಅವರು ಇಂಗ್ಲೆಂಡ್ ಮತ್ತು ಭಾರತೀಯ ರಾಷ್ಟ್ರೀಯ ತಂಡಗಳಿಗೆ ತರಬೇತುದಾರರಾಗಿದ್ದಾರೆ. ಅವರು ೨೦೧೩ ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವಿಜೇತರಾಗಿ ಭಾರತೀಯ ತಂಡವನ್ನು ಮುನ್ನಡೆಸಿದರು.
ಡಂಕನ್ ಫ್ಲೆಚರ್ ಅವರು ೧೯೯೯ ಮತ್ತು ೨೦೦೭ ರ ನಡುವೆ ಇಂಗ್ಲೆಂಡ್ ತರಬೇತುದಾರರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಡಂಕನ್ ಫ್ಲೆಚರ್ ಅವರು ೨೭ ಸೆಪ್ಟೆಂಬರ್ ೧೯೪೮ ರಂದು ದಕ್ಷಿಣ ರೊಡೇಶಿಯಾದ ಸಲಿಸ್ಬರಿಯಲ್ಲಿ ಜನಿಸಿದರು (ಇಂದಿನ ಹರಾರೆ, ಜಿಂಬಾಬ್ವೆ). ರೊಡೇಸಿಯನ್ ಕೃಷಿ ಕುಟುಂಬದ ಐದು ಸಹೋದರರಲ್ಲಿ ಫ್ಲೆಚರ್ ಅವರು ಕೂಡ ಒಬ್ಬರು. ಅವರ ಕುಟುಂಬವು ೧೯೩೩ ರಲ್ಲಿ ಕೆಂಟ್‌ನಿಂದ ರೊಡೇಸಿಯಾಕ್ಕೆ ಸ್ಥಳಾಂತರಗೊಂಡಿತು. ಫ್ಲೆಚರ್ ಅವರು ೧೯೬೬ ಮತ್ತು ೧೯೬೭ ರ ನಡುವೆ ರೊಡೇಶಿಯಾ ರೆಜಿಮೆಂಟ್‌ನಲ್ಲಿ ರೈಫಲ್‌ಮ್ಯಾನ್ ಆಗಿ ತಮ್ಮ ರಾಷ್ಟ್ರೀಯ ಸೇವೆಯನ್ನು ನಿರ್ವಹಿಸಿದರು. ೧೯೬೭ ರಲ್ಲಿ ರೊಡೇಸಿಯನ್ ಲೈಟ್ ಇನ್‌ಫಾಂಟ್ರಿಯಲ್ಲಿ ನಿಯಮಿತ ಪಡೆಗೆ ಸೇರಿದರು. ೧೯೭೫ ರಲ್ಲಿ ಸ್ಟಾಫ್ ಸಾರ್ಜೆಂಟ್ ಶ್ರೇಣಿಯನ್ನು ಪಡೆದರು. ನಂತರ ಅವರು ೧೯೭೫ ರಲ್ಲಿ ಸ್ಕೂಲ್ ಆಫ್ ಇನ್‌ಫೆಂಟ್ರಿಯಲ್ಲಿ ಆಫೀಸರ್ ಸ್ಕೂಲ್‌ಗೆ ಹೋದರು. ರೊಡೇಶಿಯಾ ರೆಜಿಮೆಂಟ್ ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ೧೯೮೦ ರಲ್ಲಿ ಡಂಕನ್ ಫ್ಲೆಚರ್ ಅವರು ಕ್ಯಾಪ್ಟನ್ ಆಗಿ ಸೈನ್ಯವನ್ನು ತೊರೆದರು.
ಕ್ರಿಕೆಟ್ ವೃತ್ತಿಜೀವನ
[ಬದಲಾಯಿಸಿ]ಕ್ರಿಕೆಟ್ ಆಟಗಾರನಾಗಿ
[ಬದಲಾಯಿಸಿ]೧೯೭೦ ರ ದಶಕದಲ್ಲಿ ಫ್ಲೆಚರ್ ಅವರು ಕ್ರಿಕೆಟ್ ಆಟಗಾರನಾಗಿ ರೊಡೇಶಿಯಾ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ದೇಶೀಯ ಸ್ಪರ್ಧೆಯಾದ ಕ್ಯೂರಿ ಕಪ್‌ನಲ್ಲಿ ಭಾಗವಹಿಸಿದ್ದರು. ಅವರು ಪಶ್ಚಿಮ ಪ್ರಾಂತ್ಯಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ಸಹ ಆಡಿದರು. ೧೯೮೦ ರಲ್ಲಿ ಜಿಂಬಾಬ್ವೆಯ ಸ್ವಾತಂತ್ರ್ಯದ ನಂತರ, ಫ್ಲೆಚರ್ ಅವರು ಜಿಂಬಾಬ್ವೆ ತಂಡದ ನಾಯಕರಾದರು. ೧೯೮೨ ರ ಐಸಿಸಿ(ICC) ಟ್ರೋಫಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.[೧] ಜಿಂಬಾಬ್ವೆ ಇಂಗ್ಲೆಂಡ್‌ನಲ್ಲಿ ನಡೆದ ೧೯೮೩ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ, ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಸೋಲಿಸಿತು. ಆ ಪಂದ್ಯದಲ್ಲಿ ಫ್ಲೆಚರ್ ಅವರು ಔಟಾಗದೆ ೬೯ ಮತ್ತು ೪/೪೨ ಸ್ಕೋರ್ ಗಳಿಸಿದರು.[೨]
ಕೋಚಿಂಗ್ ವೃತ್ತಿ
[ಬದಲಾಯಿಸಿ]೧೯೯೯ ರಲ್ಲಿ ಇಂಗ್ಲೆಂಡ್ ತರಬೇತುದಾರರಾಗಿ ನೇಮಕಗೊಳ್ಳುವ ಮೊದಲು ಫ್ಲೆಚರ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಶ್ಚಿಮ ಪ್ರಾಂತ್ಯ ಮತ್ತು ಗ್ಲಾಮೊರ್ಗಾನ್‌ಗೆ ತರಬೇತುದಾರರಾಗಿದ್ದರು. ೨೦೦೦ ಮತ್ತು ೨೦೦೪ ರ ನಡುವೆ ಫ್ಲೆಚರ್ ಅವರ ನೇತೃತ್ವದಲ್ಲಿ ಇಂಗ್ಲೆಂಡ್ ತಂಡವು ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ವಿಜಯಗಳನ್ನು ಸಾಧಿಸಿತು. ೨೦೦೪ ರಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಗೆಲ್ಲುವ ಮೊದಲು ಕ್ರಮವಾಗಿ ನ್ಯೂಜಿಲೆಂಡ್ ೩-೦ ಮತ್ತು ವೆಸ್ಟ್ ಇಂಡೀಸ್ ಅನ್ನು ೪-೦ ಅಂತರದಲ್ಲಿ ಸೋಲಿಸಿ. ಎಂಟು ಅನುಕ್ರಮ ಟೆಸ್ಟ್ ಪಂದ್ಯಗಳನ್ನು ಗೆದ್ದರು. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ೨-೧ ಜಯ ಸಾಧಿಸಿ ಆಶಸ್ ಸರಣಿಯನ್ನು ಗೆದ್ದದ್ದರಿಂದ ಸೆಪ್ಟೆಂಬರ್ ೨೦೦೫ ರಲ್ಲಿ 18 ವರ್ಷಗಳಲ್ಲಿ ಫ್ಲೆಚರ್ ಅವರು ಇಂಗ್ಲೆಂಡ್ ತಂಡದ ಮೊದಲ ತರಬೇತುದಾರರಾದರು. ಅದರಿಂದ ಫ್ಲೆಚರ್‌ಗೆ ಅವರಿಗೆ ಒಬಿಇ(OBE) ನೀಡಲಾಯಿತು. ಸೆಪ್ಟೆಂಬರ್ ೨೦೦೫ ರಲ್ಲಿ ಐದು ವರ್ಷಗಳ ಕಾಯುವಿಕೆಯ ನಂತರ ಫ್ಲೆಚರ್ ಅವರಿಗೆ ಬ್ರಿಟಿಷ್ ಪೌರತ್ವವನ್ನು ನೀಡಲಾಯಿತು.[೩]
೨೧ ಏಪ್ರಿಲ್ ೨೦೦೭ ರಂದು ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್‌ನ ಅಂತಿಮ ವಿಶ್ವಕಪ್ ಪಂದ್ಯದ ನಂತರ ಫ್ಲೆಚರ್ ಅವರ ಎಂಟು ವರ್ಷಗಳ ಕೋಚ್ ಅವಧಿಯು ಕೊನೆಗೊಂಡಿತು.
ನವೆಂಬರ್ ೨೦೦೭ ರಲ್ಲಿ ಫ್ಲೆಚರ್ ಅವರು ರಗ್ಬಿಗೆ ಬದಲಾಯಿಸಲು ಯೋಚಿಸಿದರು. ಅದೇ ಸಮಯದಲ್ಲಿ ಫ್ಲೆಚರ್ ಅವರ ಆತ್ಮಚರಿತ್ರೆಯಾದ ಬಿಹೈಂಡ್ ದಿ ಶೇಡ್ಸ್ ಅನ್ನು ಪ್ರಕಟಿಸಲಾಯಿತು.
ಎರಡು ವರ್ಷಗಳ ಒಪ್ಪಂದದೊಂದಿಗೆ, ಹೊರಹೋಗುವ ಕೋಚ್ ಗ್ಯಾರಿ ಕರ್ಸ್ಟನ್ ಅವರ ಶಿಫಾರಸಿನ ಮೇರೆಗೆ[೪] ೨೭ ಏಪ್ರಿಲ್ ೨೦೧೧ ರಂದು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ ಫ್ಲೆಚರ್ ಅವರು ನೇಮಕಗೊಂಡರು.[೫] ಫ್ಲೆಚರ್ ಅವರ ಕೋಚಿಂಗ್ ಅಡಿಯಲ್ಲಿ, ಭಾರತವು ೨೦೧೩ ರ ಐಸಿಸಿ(ICC) ಚಾಂಪಿಯನ್ಸ್ ಟ್ರೋಫಿಯನ್ನು ೨೦೧೩ ರಲ್ಲಿ ಗೆದ್ದುಕೊಳ್ಳುವುದು ಸೇರಿದಂತೆ ಸತತವಾಗಿ ಎಂಟು ಸರಣಿ ವಿಜಯಗಳನ್ನು ಸಾಧಿಸಿತು. ೨೦೧೫ ರ ಕ್ರಿಕೆಟ್ ವಿಶ್ವಕಪ್ ನಂತರ ಫ್ಲೆಚರ್ ಅವರ ಒಪ್ಪಂದವು ಕೊನೆಗೊಂಡಿತು.[೬]
ಕುಟುಂಬ
[ಬದಲಾಯಿಸಿ]ಫ್ಲೆಚರ್ ಅವರ ಸಹೋದರಿ ಆನ್ ಗ್ರಾಂಟ್ ಅವರು ಜಿಂಬಾಬ್ವೆ ಮಹಿಳಾ ರಾಷ್ಟ್ರೀಯ ಫೀಲ್ಡ್ ಹಾಕಿ ತಂಡಕ್ಕೆ ನಾಯಕಿಯಾಗಿದ್ದರು. ಈ ತಂಡಕ್ಕೆ ೧೯೮೦ ರಂದು ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಫ್ಲೆಚರ್ ಅವರ ಸಹೋದರ ಅಲನ್ ಫ್ಲೆಚರ್ ಅವರು ೧೯೭೦ ರ ದಶಕದ ಉತ್ತರಾರ್ಧದಲ್ಲಿ ರೊಡೇಶಿಯಾಕ್ಕಾಗಿ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Full Scorecard of Bermuda vs Zimbabwe Final 1982". ESPNcricinfo. Retrieved 18 ಜನವರಿ 2022.
- ↑ "Full Scorecard of Zimbabwe vs Australia 3rd Match 1983". ESPNcricinfo. Retrieved 18 ಜನವರಿ 2022.
- ↑ "Fletcher granted British citizenship". ESPNcricinfo. 13 ಸೆಪ್ಟೆಂಬರ್ 2005. Retrieved 18 ಜನವರಿ 2022.
- ↑ "Duncan Fletcher appointed as Team India coach Retrieved 27 April 2011". Archived from the original on 24 ನವೆಂಬರ್ 2016. Retrieved 27 ಏಪ್ರಿಲ್ 2011.
- ↑ Duncan Fletcher appointed India coach Retrieved 27 April 2011
- ↑ "Tendulkar, Dravid, Ganguly to find new India coach", Hindustan Times, 27 April 2015