ಜೆಸ್ಸಿಕಾ ಆಲ್ಬಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೆಸ್ಸಿಕಾ ಆಲ್ಬಾ
Jessica Alba 2011.jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಜೆಸಿಕಾ ಮರಿ ಆಲ್ಬಾ
(1981-04-28) ಏಪ್ರಿಲ್ ೨೮, ೧೯೮೧(ವಯಸ್ಸು ೩೫)
ಪಮೋನಾ, ಕ್ಯಾಲಿಫ಼ೋರ್ನಿಯಾ, ಅಮೇರಿಕಾ
ವೃತ್ತಿ ನಟಿ
ವರ್ಷಗಳು ಸಕ್ರಿಯ 1994–ಪ್ರಸ್ತುತ
ಪತಿ/ಪತ್ನಿ ಕ್ಯಾಶ್ ವಾರನ್ (2008–ಪ್ರಸ್ತುತ)


ಜೆಸ್ಸಿಕಾ ಮೇರಿ ಆಲ್ಬಾ (1981ರ ಎಪ್ರಿಲ್ 28ರಲ್ಲಿ ಜನಿಸಿದಳು)[೧] ಅಮೆರಿಕಾದ ದೂರದರ್ಶನ ಮತ್ತು ಚಲನಚಿತ್ರರಂಗದ ಓರ್ವ ನಟಿ. ಅವಳು ದೂರದರ್ಶನ ಮತ್ತು ಚಲನಚಿತ್ರದಲ್ಲಿ ನಟಿಸುವುದನ್ನು ತನ್ನ 13ನೇ ವಯಸ್ಸಿನಲ್ಲಿಯೇ ಕ್ಯಾಂಪ್ ನೋವೇರ್ ಮತ್ತು ದಿ ಸೀಕ್ರೆಟ್‌ ವರ್ಲ್ಡ್ ಆಫ್ ಅಲೆಕ್ಸ್ ಮ್ಯಾಕ್ (1994) ಚಿತ್ರಗಳ ಮ‌ೂಲಕ ಆರಂಭಿಸಿದಳು. ಡಾರ್ಕ್ ಏಂಜೆಲ್‌ (2000–2002) ಎಂಬ ದೂರದರ್ಶನ ಸರಣಿ ಕಾರ್ಯಕ್ರಮದಲ್ಲಿ ಮುಖ್ಯನಟಿಯಾಗಿ ಆಲ್ಬಾ ಪ್ರಸಿದ್ಧಿಗೆ ಬಂದಳು.[೨][೩] ಆಲ್ಬಾ ನಂತರ ಅನೇಕ ಚಿತ್ರಗಳಲ್ಲಿ ನಟಿಸಿದಳು. ಅವುಗಳಲ್ಲಿ ಕೆಲವು ಹೀಗಿವೆ: ಹನಿ (2003), ಸಿನ್ ಸಿಟಿ (2005), ಫೆಂಟಾಸ್ಟಿಕ್ ಫೋರ್‌ (2005), ಇನ್‌ಟು ದಿ ಬ್ಲೂ (2005). ....Fantastic Four: Rise of the Silver Surfer ಮತ್ತು ಗುಡ್ ಲಕ್ ಚಕ್‌ ಈ ಎರಡೂ ಚಿತ್ರಗಳು 2007ರಲ್ಲಿ ಬಿಡುಗಡೆಯಾದವು.[೪][೫]


ಆಲ್ಬಾಳನ್ನು ಮಾದಕತೆಯ ಸಂಕೇತ ಎಂದು ಪರಿಗಣಿಸಲಾಗಿದೆ ಹಾಗೂ ತಾನು ಕಾಣಿಸಿಕೊಳ್ಳುವ ರೀತಿಯಿಂದಾಗಿ ಅವಳು ಹೆಚ್ಚಾಗಿ ಮಾಧ್ಯಮಗಳ ಗಮನ ಸೆಳೆಯುತ್ತಿರುತ್ತಾಳೆ. ಮ್ಯಾಕ್ಸಿಮ್‌ ‌ ನಿಯತಕಾಲಿಕದ "100 ಮಂದಿ ಪ್ರಚೋದಕ‌ ವ್ಯಕ್ತಿಗಳ" ವಿಭಾಗದಲ್ಲಿ ಅವಳು ಪದೇಪದೇ ಕಂಡುಬರುತ್ತಾಳೆ. AskMen.comನ 2006ರ "99 ಹೆಚ್ಚು ಅಪೇಕ್ಷಣೀಯ ಮಹಿಳೆಯರ" ಪಟ್ಟಿಯಲ್ಲಿ ಆಕೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಮಾತ್ರವಲ್ಲದೆ, "ಪ್ರಪಂಚದಲ್ಲೇ ಅತಿಹೆಚ್ಚು ಮಾದಕ ಮಹಿಳೆ" ಎಂಬ ಕೀರ್ತಿಯನ್ನು FHM ನಿಯತಕಾಲಿಕದಿಂದ 2007ರಲ್ಲಿ ಪಡೆದುಕೊಂಡಿದ್ದಾಳೆ.[೬][೭][೮] 2006ರ ಮಾರ್ಚ್‌ ತಿಂಗಳ ಪ್ಲೇಬಾಯ್‌ ‌ನ ಮುಖಪುಟದಲ್ಲಿ ಅವಳ ಚಿತ್ರವನ್ನು ಬಳಸಿದ ರೀತಿಗಾಗಿ ಅವಳು ದಾವೆ ಹೂಡಿದಳು, ನಂತರ ಅದನ್ನು ಕೈಬಿಡಲಾಯಿತು.[೯] ಅವಳು ಚಾಯ್ಸ್ ಆಕ್ಟ್ರೆಸ್ ಟೀನ್ ಚಾಯ್ಸ್ ಪ್ರಶಸ್ತಿ ಮತ್ತು ಅತ್ಯುತ್ತಮ ನಟನೆಗಾಗಿ (TV) ಸ್ಯಾಟರ್ನ್ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳನ್ನು ತನ್ನ ಅದ್ಭುತ ನಟನೆಗಾಗಿ ಅವಳು ಗೆದ್ದಿದ್ದಾಳೆ ಹಾಗೂ ಅವಳ ದೂರದರ್ಶನ ಸರಣಿ ಕಾರ್ಯಕ್ರಮ ಡಾರ್ಕ್ ಏಂಜೆಲ್‌ ‌ನಲ್ಲಿನ ಪಾತ್ರಕ್ಕಾಗಿ ಗೋಲ್ಡನ್ ಗ್ಲೋಬ್‌‌ಗೆ ನಾಮನಿರ್ದೇಶನಗೊಂಡಿದ್ದಾಳೆ.[೪]

ಆರಂಭಿಕ ಜೀವನ[ಬದಲಾಯಿಸಿ]

ಕ್ಯಾಲಿಫೋರ್ನಿಯಾ[೧]ಪೊಮೋನದಲ್ಲಿ ಕ್ಯಾಥೆರಿನ್‌ ಆಲ್ಬಾ (ಮೊದಲು ಜೆನ್ಸನ್) ಮತ್ತು ಮಾರ್ಕ್ ಆಲ್ಬಾ ದಂಪತಿಗಳ ಮಗಳಾಗಿ ಆಲ್ಬಾ ಜನಿಸಿದಳು. ಅವಳ ತಾಯಿ ಡೆನ್ಮಾರ್ಕ್ ಮತ್ತು ಫ್ರೆಂಚ್-ಕೆನಡಾ‌ ದೇಶದ ಮ‌ೂಲದವಳು. ಅವಳ ತಂದೆಯ ಹೆತ್ತವರು ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿದ್ದರೂ ಸಹ, ಅವನು ಮಾತ್ರ ಮೆಕ್ಸಿಕನ್-ಅಮೆರಿಕಾದವನು[೧೦][೧೧] (2009ರ ಡಿಸೆಂಬರ್ 1ರಂದು ಲೊಪೆಜ್ ಟುನೈಟ್‌ ‌ನ ಸಂಚಿಕೆಯ ಸಂದರ್ಭದಲ್ಲಿ, ಆಲ್ಬಾ 87%ನಷ್ಟು ಯುರೋಪ್‌ನವಳು‌ ಮತ್ತು 13%ನಷ್ಟು ಅಮೆರಿಕಾದ ಸ್ಥಳೀಯಳು) ಎಂದು DNA ಪರೀಕ್ಷೆ ತೋರಿಸಿದೆ ಎಂದು ಜಾರ್ಜ್ ಲೊಪೆಜ್ ಪ್ರಕಟಿಸಿದ.[೧೨] ಅವಳಿಗೆ ಜೋಶುವಾ ಎಂಬ ಹೆಸರಿನ ಒಬ್ಬ ತಮ್ಮನಿದ್ದಾನೆ. ಅವಳ ಒಂಬತ್ತನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾಕ್ಕೆ ಹಿಂದಿರುಗಿ ವಾಸಿಸುವ ಮೊದಲು, ಅವಳ ತಂದೆ ವಾಯುಸೇನೆಯಲ್ಲಿದ್ದುದರಿಂದ ಕುಟುಂಬ ಸಮೇತರಾಗಿ ಮಿಸ್ಸಿಸ್ಸಿಪ್ಪಿಬೈಲೋಕ್ಸಿ, ಮತ್ತು ಟೆಕ್ಸಾಸ್‌ಡೆಲ್ ರಿಯೊ ಮೊದಲಾದ ಕಡೆಗಳಿಗೆ ವರ್ಗಾವಣೆಗೊಂಡರು.[೩][೧೧] ಆಲ್ಬಾ ತನ್ನ ಕುಟುಂಬವನ್ನು "ತುಂಬಾ ಸಂಪ್ರದಾಯಶೀಲ- ಅಂದರೆ, ಪರಂಪರೆಯನ್ನು ಆಧರಿಸಿದ, ಧರ್ಮನಿಷ್ಠೆಯ, ಲ್ಯಾಟಿನ್ ಅಮೆರಿಕಾದ ಕುಟುಂಬ" ಎಂದೂ ಹಾಗೂ ತನ್ನ ಬಗ್ಗೆ ಹೇಳಿಕೊಳ್ಳುತ್ತಾ ತಾನು ತುಂಬಾ ಉದಾರವಾದಿ ಎಂದೂ ವಿವರಿಸಿದ್ದಾಳೆ; ಕೇವಲ ಐದನೇ ವಯಸ್ಸಿನಲ್ಲಿಯೇ ತನ್ನನ್ನು ತಾನು "ಸ್ತ್ರೀಸಮಾನತಾವಾದಿ" ಎಂದು ವಿವರಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾಳೆ.[೧೩]


ತನ್ನ ಆರಂಭಿಕ ಜೀವನದಲ್ಲಿ ಆಲ್ಬಾ ಅನೇಕ ದೈಹಿಕ ಕಾಯಿಲೆಗಳಿಗೆ ತುತ್ತಾದಳು. ಬಾಲ್ಯದಲ್ಲಿ ಆಕೆ ಎರಡು ಬಾರಿ ಶ್ವಾಸಕೋಶ ವೈಫಲ್ಯದಿಂದ ನರಳಿದಳು, ಒಂದು ವರ್ಷದಲ್ಲಿ 4-5 ಬಾರಿ ನ್ಯುಮೋನಿಯಾಕ್ಕೊಳಗಾದಳು ಹಾಗೂ ಅಪೆಂಡಿಕ್ಸ್‌ನ ಅಂತ್ರವೃದ್ಧಿ ಮತ್ತು ಟಾನ್ಸಿಲ್‌ಗೆ ಸಂಬಂಧಿಸಿದ ಸಿಸ್ಟ್ ಮೊದಲಾದವುಗಳ ಬಾಧೆಗೂ ಒಳಗಾದಳು.[೩] ಅನಾರೋಗ್ಯದಿಂದಾಗಿ ಆಲ್ಬಾ ಹೆಚ್ಚಾಗಿ ಆಸ್ಪತ್ರೆಯಲ್ಲೇ ಇದ್ದುದರಿಂದ ಶಾಲೆಯಲ್ಲಿ ಯಾರೂ ಸ್ನೇಹಿತರಾಗದೆ ಅವಳು ಇತರ ಮಕ್ಕಳಿಂದ ಪ್ರತ್ಯೇಕವಾಗಿ ಉಳಿಯಬೇಕಾಗಿ ಬಂತು ಮತ್ತು ಹೀಗಾಗಿ ಅವಳಿಗೆ ನೆರವಾಗಲು ಯಾರೂ ಬರದಂಥ ಸನ್ನಿವೇಶ ಉದ್ಭವಿಸಿತ್ತು.[೧೪] ಮಗುವಾಗಿದ್ದಾಗಿನಿಂದಲೂ ಆಲ್ಬಾ ಅಸ್ತಮಾ ರೋಗವನ್ನೂ ಹೊಂದಿದ್ದಳು.[೩] ತಮ್ಮ ಕುಟುಂಬವು ಪದೇಪದೇ ವರ್ಗಾವಣೆಗೊಳ್ಳುತ್ತಿದ್ದುದರಿಂದಲೂ ತನ್ನ ಸಮಾನ ವಯಸ್ಕರಿಂದ ಪ್ರತ್ಯೇಕವಾಗಿ ಉಳಿಯಬೇಕಾಗಿ ಬಂತು ಎಂದು ಆಕೆ ಹೇಳಿಕೊಂಡಿದ್ದಾಳೆ.[೧೩] ತನ್ನ ಬಾಲ್ಯಾವಸ್ಥೆಯಲ್ಲಿ ತಾನು ಗೀಳಿನ ಆಂತರಿಕ-ನಿರ್ಬಂಧದ ಕಾಯಿಲೆಯಿಂದಲೂ ನರಳಿದುದಾಗಿ ಆಲ್ಬಾ ಹೇಳಿಕೊಂಡಿದ್ದಾಳೆ.[೧೫][೧೬] ತನ್ನ 16ನೇ ವಯಸ್ಸಿನಲ್ಲಿ ಆಲ್ಬಾ ಪ್ರೌಢಶಾಲೆಯಿಂದ ಉತ್ತೀರ್ಣಳಾದಳು[೧೭]; ಆನಂತರ ಅಟ್ಲಾಂಟಿಕ್ ಥಿಯೇಟರ್ ಕಂಪೆನಿಗೆ ಸೇರಿಕೊಂಡಳು.[೧೮]


ವೃತ್ತಿ ಜೀವನ[ಬದಲಾಯಿಸಿ]

2008ರಲ್ಲಿ ದಿ ಐ ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಆಲ್ಬಾ.

ಆಲ್ಬಾ ತನ್ನ ಐದನೇ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿಯನ್ನು ತೋರಿದಳು. 1992ರಲ್ಲಿ 11-ವರ್ಷ ವಯಸ್ಸಿನ ಆಲ್ಬಾ ಕ್ಯಾಲಿಫೋರ್ನಿಯಾಬೆವೆರ್ಲಿ ಹಿಲ್ಸ್‌‌ನಲ್ಲಿ ನಡೆದ ಸ್ಪರ್ಧೆಗೆ ತನ್ನನ್ನು ಕರೆದುಕೊಂಡು ಹೋಗುವಂತೆ ತಾಯಿಯ ಮನವೊಲಿಸಿದಳು. ನಟನೆಯ ಬಗ್ಗೆ ಉಚಿತ ತರಬೇತಿ ನೀಡುವುದು ಈ ಸ್ಪರ್ಧೆಯ ಅಂತಿಮ ಪ್ರಶಸ್ತಿಯಾಗಿತ್ತು. ಆಲ್ಬಾ ಅಂತಿಮ ಪ್ರಶಸ್ತಿಯನ್ನು ಗೆದ್ದು, ನಟನೆಯ ಬಗೆಗಿನ ಮೊದಲ ತರಬೇತಿ ಕಾರ್ಯಕ್ರಮಗಳಿಗೆ ಸೇರಿಕೊಂಡಳು. ಒಂಬತ್ತು ತಿಂಗಳುಗಳ ನಂತರ ಓರ್ವ ಮಧ್ಯವರ್ತಿಯೊಂದಿಗಿನ ಒಪ್ಪಂದಕ್ಕೆ ಆಲ್ಬಾ ಸಹಿಹಾಕಿದಳು.[೩][೧೮][೧೯] ಅವಳು 1994ರಲ್ಲಿ ಕ್ಯಾಂಪ್ ನೋವೇರ್ ಕಥಾಚಿತ್ರದಲ್ಲಿ ಗೈಲ್ ಎಂಬ ಚಿಕ್ಕ ಪಾತ್ರವೊಂದರಲ್ಲಿ ಆಕೆ ಮೊದಲು ಕಾಣಿಸಿಕೊಂಡಳು. ಅವಳನ್ನು ಮೊದಲು ಎರಡು ವಾರಗಳವರೆಗೆ ನೇಮಿಸಿಕೊಳ್ಳಲಾಗಿತ್ತು; ಆದರೆ ನಂತರದಲ್ಲಿ ಮುಖ್ಯ ನಟಿಯರಲ್ಲಿ ಒಬ್ಬಳನ್ನು ಕೈಬಿಡಬೇಕಾಗಿ ಬಂದಾಗ, ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕಾಗಿ ಅವಳ ಪಾತ್ರವು ಎರಡು-ತಿಂಗಳ ಅವಧಿಯ ಕಾರ್ಯವಾಗಿ ಪರಿವರ್ತನೆಗೊಂಡಿತು.[೨]


ನಿಂಟೆಂಡೊ ಮತ್ತು J.C. ಪೆನ್ನೆಗಳಿಗೆ ಸಂಬಂಧಿಸಿದ ಎರಡು ರಾಷ್ಟ್ರೀಯ ದೂರದರ್ಶನ ಜಾಹೀರಾತುಗಳಲ್ಲಿ ಆಲ್ಬಾ ಮಗುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ನಂತರ ಅವಳು ಅನೇಕ ಸ್ವತಂತ್ರ ಚಿತ್ರಗಳಲ್ಲಿ ನಟಿಸಿದಳು. ಅವಳು 1994ರಲ್ಲಿ ನಿಕೆಲೊಡಿಯೋನ್‌ ಹಾಸ್ಯ ಸರಣಿ ಕಾರ್ಯಕ್ರಮವಾದ ದಿ ಸೀಕ್ರೆಟ್‌ ವರ್ಲ್ಡ್ ಆಫ್ ಅಲೆಕ್ಸ್ ಮ್ಯಾಕ್ ‌ನ ಮ‌ೂರು ಸಂಚಿಕೆಗಳಲ್ಲಿ ದುರಹಂಕಾರಿ ಜೆಸ್ಸಿಕಾ ಪಾತ್ರದಲ್ಲಿ ನಟಿಸುವ ಮ‌ೂಲಕ ದೂರದರ್ಶನದ ಕಡೆಗೆ ತಿರುಗಿದಳು.[೩] ನಂತರ ದೂರದರ್ಶನ ಸರಣಿ ಕಾರ್ಯಕ್ರಮವಾದ ಫ್ಲಿಪ್ಪರ್‌ ‌ನ ಮೊದಲ ಎರಡು ಸರಣಿಗಳಲ್ಲಿ 'ಮಾಯಾ' ಪಾತ್ರದಲ್ಲಿ ಆಕೆ ಅಭಿನಯಿಸಿದಳು.[೨][೩] ಆಕೆಯ ಜೀವರಕ್ಷಕ ತಾಯಿಯ ಶಿಕ್ಷಣದಡಿಯಲ್ಲಿ ಆಲ್ಬಾ ನಡೆಯುವ ಮೊದಲೇ ಈಜಲು ಕಲಿತಳು ಹಾಗೂ ಇವಳೊಬ್ಬ PADI-ಪ್ರಮಾಣೀಕೃತ ಸ್ಕೂಬ-ಈಜುಗಾರ್ತಿಯಾಗಿದ್ದಳು. ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಈ ಕೌಶಲವು ಅದಕ್ಕೆ ಉಪಯೋಗಕರವಾಗಿ ಪರಿಣಮಿಸಿತು.[೩][೨೦]


1998ರಲ್ಲಿ ಇವಳು ಸ್ಟೀವನ್‌ ಬೋಚ್ಕೊನ ಪತ್ತೇದಾರಿ-ನಾಟಕ ಬ್ರೂಕ್ಲಿನ್ ಸೌತ್‌ ‌ನ ಮೊದಲ-ಸರಣಿಯ ಸಂಚಿಕೆಯಲ್ಲಿ ಮೆಲಿಸ್ಸಾ ಹಾರ್ ಪಾತ್ರದಲ್ಲಿ ಹಾಗೂ ಬೆವೆರ್ಲಿ ಹಿಲ್ಸ್‌, 90210 ರ ಎರಡು ಸಂಚಿಕೆಗಳಲ್ಲಿ ಲೀನೆಯಾಗಿ ಮತ್ತು ...The Love Boat: The Next Wave ರ ಒಂದು ಸಂಚಿಕೆಯಲ್ಲಿ ಲಾಯ್ಲ ಪಾತ್ರದಲ್ಲಿ ಕಾಣಿಕೊಂಡಿದ್ದಾಳೆ. 1999ರಲ್ಲಿ ರಾಂಡಿ ಕ್ವೈಡ್‌‌ನ ಹಾಸ್ಯ ಕಥಾಚಿತ್ರ P.U.N.K.S. ನಲ್ಲಿ ಆಕೆ ಕಾಣಿಸಿಕೊಂಡಳು.[೨] ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಆಲ್ಬಾ, ವಿಲಿಯಮ್ H. ಮ್ಯಾಕಿ ಮತ್ತು ಅವನ ಪತ್ನಿ ಫೆಲಿಸಿಟಿ ಹಫ್‌ಮನ್‌‌ರೊಂದಿಗೆ ಅಟ್ಲಾಂಟಿಕ್ ಥಿಯೇಟರ್ ಕಂಪೆನಿಯಲ್ಲಿ ನಟನೆಯನ್ನು ಕಲಿತಳು. ಇದು ಮ್ಯಾಕಿ ಮತ್ತು ಪುಲಿಟ್ಜರ್ ಪ್ರಶಸ್ತಿ-ವಿಜೇತ ನಾಟಕಕಾರ ಮತ್ತು ಚಿತ್ರ ನಿರ್ದೇಶಕ ಡೇವಿಡ್ ಮ್ಯಾಮೆಟ್‌‌ರಿಂದ ಅಭಿವೃದ್ಧಿಗೊಂಡ ಕಂಪೆನಿಯಾಗಿತ್ತು.[೧೮][೨೧]


1999ರಲ್ಲಿ ಡ್ರ್ಯೂ ಬ್ಯಾರಿಮೋರ್‌ನೆವರ್ ಬೀನ್ ಕಿಸ್ಡ್‌ ‌ ಎಂಬ ರೋಮಾಂಚಕಾರಿ ಹಾಸ್ಯಚಿತ್ರದಲ್ಲಿ ದೊಡ್ಡಸ್ತಿಕೆಯ ಪ್ರೌಢಶಾಲಾ ಗುಂಪಿನ ಸದಸ್ಯಳಾಗಿ, ಹಾಗೂ ಐಡಲ್ ಹ್ಯಾಂಡ್ಸ್‌ ‌ ಎಂಬ ಹಾಸ್ಯ-ಸಾಹಸ ಮಿಶ್ರಿತ ಚಿತ್ರದಲ್ಲಿ ಡಿವೋನ್ ಸಾವನಿಗೆ ಎದುರಾಗಿ ನಾಯಕಿಯ ಪಾತ್ರದಲ್ಲಿ ನಟಿಸಿದ ನಂತರ, ಆಲ್ಬಾ ಹಾಲಿವುಡ್‌‌ನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಳು.[೫]


ಫಾಕ್ಸ್‌ ವೈಜ್ಞಾನಿಕ-ಕಾಲ್ಪನಿಕ ದೂರದರ್ಶನ ಸರಣಿ ಕಾರ್ಯಕ್ರಮವಾದ ಡಾರ್ಕ್ ಏಂಜೆಲ್‌ ‌ನ, ತಳೀಯ ರೀತಿಯಲ್ಲಿ ಸೃಷ್ಟಿಲ್ಪಟ್ಟ ಅದ್ಭುತ-ಯೋಧ ಮ್ಯಾಕ್ಸ್ ಗ್ಯುವರನ ಪಾತ್ರಕ್ಕೆ ಬರಹಗಾರ/ನಿರ್ದೇಶಕ ಜೇಮ್ಸ್ ಕ್ಯಾಮೆರಾನ್‌ 1,200 ಮಂದಿಯ ಸಮ‌ೂಹದಿಂದ ಆಲ್ಬಾಳನ್ನು ಆರಿಸಿದಾಗ ಅವಳ ಜೀವನಕ್ಕೆ ಅದ್ಭುತ ತಿರುವು ಸಿಕ್ಕಿತು. ಕ್ಯಾಮೆರಾನ್‌ನ ಸಹ-ನಿರ್ಮಾಣದ ಈ ಸರಣಿಯಲ್ಲಿ ಆಲ್ಬಾ ನಟಿಸಿದಳು. ಹಾಗೂ ಎರಡು ಅವಧಿಗಳವರೆಗೆ 2002ರವರೆಗೆ ಪ್ರದರ್ಶಿತಗೊಂಡ ಈ ಸರಣಿ ಕಾರ್ಯಕ್ರಮವು ಅವಳಿಗೆ ವಿಮರ್ಶಾತ್ಮಕ ಪ್ರಶಂಸೆಯನ್ನು ತಂದುಕೊಟ್ಟಿದ್ದು ಮಾತ್ರವಲ್ಲದೆ ಗೋಲ್ಡನ್ ಗ್ಲೋಬ್‌ ನಾಮನಿರ್ದೇಶನಕ್ಕೂ ಕಾರಣವಾಯಿತು.[೫][೨೨] ಡಾರ್ಕ್ ಏಂಜೆಲ್‌ ‌ ಚಿತ್ರಕ್ಕೆ ತಯಾರಾಗುತ್ತಿದ್ದ ಸಂದರ್ಭದಲ್ಲಿ, ತಾನು ತಿನ್ನುವ ತೊಂದರೆಯಿಂದ ಬಳಲಿದುದಾಗಿ ನಂತರದಲ್ಲಿ ಆಕೆ ಬಹಿರಂಗಗೊಳಿಸಿದಳು.[೨೩]


ಫೆಂಟಾಸ್ಟಿಕ್ ಫೋರ್‌: ರೈಸ್ ಆಫ್ ದ ಸಿಲ್ವರ್ ಸರ್ಫರ್ ಚಿತ್ರದ ಚಿತ್ರೀಕರಣದ ಸಜ್ಜಿಕೆಯಲ್ಲಿ ಆಲ್ಬಾ


ಆಲ್ಬಾ ಜನಪ್ರಿಯ ಸಂಸ್ಕೃತಿಯಲ್ಲಿ ಉತ್ತಮ ರೀತಿಯಲ್ಲಿ ಸ್ವೀಕರಿಸಲ್ಪಟ್ಟಿದ್ದಾಳೆ. ಡಾರ್ಕ್ ಏಂಜೆಲ್‌ ‌ನಲ್ಲಿನ ಪಾತ್ರಕ್ಕಾಗಿ ಅವಳು ಚಾಯ್ಸ್ ಆಕ್ಟ್ರೆಸ್‌ಟೀನ್ ಚಾಯ್ಸ್ ಪ್ರಶಸ್ತಿ ಮತ್ತು ಅತ್ಯುತ್ತಮ ನಟನೆಗಾಗಿ (TV) ಸ್ಯಾಟರ್ನ್ ಪ್ರಶಸ್ತಿಯನ್ನು ಗೆದ್ದಿದ್ದಾಳೆ. ಮ್ಯಾಕ್ಸಿಮ್‌‌ ನಿಯತಕಾಲಿಕದ 100 ಮಂದಿ ಪ್ರಚೋದಕ‌ ವ್ಯಕ್ತಿಗಳ ಪಟ್ಟಿಯಲ್ಲಿ ಆಕೆ ಆಗಾಗ ಕಾಣಿಸಿಕೊಂಡಿದ್ದಾಳೆ. ಸಿನ್ ಸಿಟಿ ಯಲ್ಲಿನ "ಅತಿ ಮಾದಕ ನಟನೆ"ಗಾಗಿ MTV ಚಿತ್ರ ಪ್ರಶಸ್ತಿಯನ್ನು 2006ರಲ್ಲಿ ಆಲ್ಬಾ ಸ್ವೀಕರಿಸಿದಳು.[೪][೮][೨೪] ಅವೇಕ್‌ , ಗುಡ್ ಲಕ್ ಚಕ್‌ ಮತ್ತು ....Fantastic Four: Rise of the Silver Surfer ರಲ್ಲಿನ ಕೆಟ್ಟ ನಟನೆಗಳಿಗಾಗಿ 2007ರ ರಜ್ಜೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡಾಗ ಅವಳ ಅಭಿನಯವು ಟೀಕೆಗೆ ಒಳಗಾಗಬೇಕಾಯಿತು.[೨೫] ಆಕೆ ಫೆಂಟಾಸ್ಟಿಕ್ ಫೋರ್‌ ಮತ್ತು ಇನ್‌ ಟು ದಿ ಬ್ಲೂ ಚಿತ್ರಗಳಲ್ಲಿನ ನಟನೆಗಾಗಿ 2005ರಲ್ಲಿಯ‌ೂ ಅದೇ ಪ್ರಶಸ್ತಿಗೆ ಆಯ್ಕೆಯಾದಳು.[೨೬]


ಆಲ್ಬಾಳ ಹೆಚ್ಚು ಗಮನಾರ್ಹ ಚಿತ್ರಪಾತ್ರಗಳೆಂದರೆ - ಹನಿ ಯಲ್ಲಿನ ಮಹಾತ್ವಾಕಾಂಕ್ಷಿ ನೃತ್ಯಗಾರ್ತಿ-ನೃತ್ಯ ಸಂಯೋಜಕಿ ಪಾತ್ರ, ಸಿನ್ ಸಿಟಿ ಯಲ್ಲಿನ ಕ್ಯಾಬರೆ ನರ್ತಕಿ ನ್ಯಾನ್ಸಿ ಕಲ್ಲಾಹನ್‌ ಪಾತ್ರ ಹಾಗೂ ಮಾರ್ವೆಲ್ ಕಾಮಿಕ್ಸ್‌ನ ಸ್ಯೂ ಸ್ಟೋರ್ಮ್ ಪಾತ್ರ, [[ಫೆಂಟಾಸ್ಟಿಕ್ ಫೋರ್‌{/1‌}ನಲ್ಲಿನ ಅಗೋಚರ ಮಹಿಳೆಯ ಪಾತ್ರ. ಇವುಗಳ ಪೈಕಿ ಚಲನಚಿತ್ರ ವಿಮರ್ಶಕ ಮಿಕ್ ಲಾಸ್ಯಾಲೆ|ಫೆಂಟಾಸ್ಟಿಕ್ ಫೋರ್‌{/1‌}ನಲ್ಲಿನ ಅಗೋಚರ ಮಹಿಳೆಯ ಪಾತ್ರ. ಇವುಗಳ ಪೈಕಿ ಚಲನಚಿತ್ರ ವಿಮರ್ಶಕ ಮಿಕ್ ಲಾಸ್ಯಾಲೆ]] ಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ದೀರ್ಘಕಾಲ ಮಾತನಾಡುವ ಸಂದರ್ಭದಲ್ಲಿನ ಅವಳ ನಟನೆಯು "ದೃಢವಾಗಿರದ ನೆಲೆಯ" ಮೇಲಿತ್ತು ಎಂದು ಹೇಳಿದ. ನಂತರ ಅವಳು ಅದರ ಉತ್ತರಭಾಗವಾದ, ಇನ್‌ ಟು ದಿ ಬ್ಲೂ ನಲ್ಲಿ ಮತ್ತು ಕೆಲವು ವರ್ಷಗಳ ನಂತರ ಗುಡ್ ಲಕ್ ಚಕ್‌ ‌ ಚಿತ್ರದಲ್ಲಿ ಅಭಿನಯಿಸಿದಳು.[೪][೨೭][೨೮] 2006ರ MTV ಚಿತ್ರ ಪ್ರಶಸ್ತಿ ಕಾರ್ಯಕ್ರಮದ ನಿರ್ವಾಹಕಿಯಾಗಿ ಆಲ್ಬಾ ಕಾರ್ಯನಿರ್ವಹಿಸಿದ್ದಳು ಹಾಗೂ ಕಿಂಗ್ ಕಾಂಗ್‌‌ , ಮಿಷನ್ ಇಂಪಾಸಿಬಲ್‌ 3 ಮತ್ತು ದಿ ಡಾ ವಿಂಸಿ ಕೋಡ್ ಮೊದಲಾದ ಚಿತ್ರಗಳನ್ನು ಅಣಕ ಶೈಲಿಯಲ್ಲಿ ಅನುಕರಿಸುವ ರೂಪುರೇಖೆಗಳನ್ನು ರಚಿಸಿದಳು.[೨೯] ಫೆಬ್ರವರಿಯಲ್ಲಿ ಆಕೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸಸ್‌ನ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ನಿರ್ವಾಹಕಿಯಾಗಿ ಕೆಲಸಮಾಡಿದಳು.[೩೦] ಪ್ರತಿಭೆಯ ಮಧ್ಯವರ್ತಿಗಳಾದ ಪ್ಯಾಟ್ರಿಕ್ ವೈಟ್‌ಸೆಲ್‌[೩೧] ಮತ್ತು ಬ್ರಾಡ್ ಕೆಫೆರೆಲ್ಲಿಯಿಂದ ಆಲ್ಬಾ ಪ್ರತಿನಿಧಿಸಲ್ಪಟ್ಟಿದ್ದಾಳೆ.[೯]


2008ರಲ್ಲಿ ಹಾಂಗ್ ಕಾಂಗ್ ಚಿತ್ರವೊಂದನ್ನಾಧರಿಸಿ ಪುನರ್‌ನಿರ್ಮಿಸಲಾದ ದಿ ಐ ಚಿತ್ರದಲ್ಲಿ ನಟಿಸುವ ಮ‌ೂಲಕ ಆಲ್ಬಾ ತನ್ನ ನಟನೆಯನ್ನು ಭಯಾನಕ-ಚಿತ್ರಶೈಲಿಗೆ ಬದಲಾಯಿಸಿದಳು.[೧೧][೩೨] ಆ ಚಿತ್ರವು 2008ರ ಫೆಬ್ರವರಿ 1ರಂದು ಬಿಡುಗಡೆಯಾಯಿತು. ಚಿತ್ರವು ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಪಡೆಯದಿದ್ದರೂ,[೩೩] ಆಲ್ಬಾಳ ಪಾತ್ರನಿರ್ವಹಣೆಯು ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಎರಡೂ ರೀತಿಯ ಸ್ವೀಕರಿಸಲ್ಪಟ್ಟಿತು. ಆಲ್ಬಾ ಚಾಯ್ಸ್‌ ಚಿತ್ರ ನಟಿ: ಭಯಾನಕ/ರೋಮಾಂಚಕಾರಿ ವಿಭಾಗಕ್ಕೆ ಮೀಸಲಾದ ಟೀನ್ ಚಾಯ್ಸ್ ಪ್ರಶಸ್ತಿ ಮತ್ತು ಕೆಟ್ಟ ನಟಿಗಾಗಿ ಮೀಸಲಾಗಿರುವ ರಜ್ಜಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು.[೩೪] 2008ರಲ್ಲಿ "ಗಲ್ಲಾಪೆಟ್ಟಿಗೆ ಬಾಂಬ್" ಎಂದು ಹೆಸರಾದ ದಿ ಲವ್ ಗುರು ಚಿತ್ರದಲ್ಲಿ ಮಿಕೆ ಮೈಯರ್ಸ್‌ ಮತ್ತು ಜಸ್ಟಿನ್ ಟಿಂಬರ್ಲೇಕ್‌ರೊಂದಿಗೆ ಆಲ್ಬಾಳೂ ಸಹ ನಟಿಸಿದ್ದಾಳೆ. ಈ ಚಲನಚಿತ್ರ ಮತ್ತು ಆಲ್ಬಾಳ ನಟನೆಗಳೆರಡೂ ವಿಮರ್ಶಕರಿಂದ ಟೀಕೆಗೊಳಗಾದವು. ಕೆಟ್ಟ ನಟಿಗಾಗಿ ಮೀಸಲಾಗಿರುವ ರಜ್ಜಿ ಪ್ರಶಸ್ತಿಗೆ ಆಲ್ಬಾ ನಾಮನಿರ್ದೇಶನಗೊಂಡಳು.[೪]


2008ರ ಉತ್ತರಾರ್ಧದಲ್ಲಿ, ಆನ್ ಇನ್ವಿಸಿಬಲ್ ಸೈನ್ ಆಫ್ ಮೈ ಓನ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಆಲ್ಬಾ ಸಹಿಹಾಕಿದಳು.[೩೫] ಈ ಚಿತ್ರದ ಚಿತ್ರೀಕರಣವು 2008ರ ನವೆಂಬರ್‌ನಲ್ಲಿ ಪೂರ್ಣಗೊಂಡಿತು.[೩೬] ಪ್ರಸ್ತುತ[when?] ಚಿತ್ರದ ನಿರ್ಮಾಣ-ನಂತರದ ಕಾರ್ಯನಡೆಯುತ್ತಿದ್ದು, 2009ರಲ್ಲಿ ಚಿತ್ರವು ಬಿಡುಗಡೆಯಾಗುವ ಸಂಭವವಿದೆ.[೩೫][೩೭][೩೮][೩೯][೪೦] ಆರಂಭದಲ್ಲಿ ಅಗ್ಲಿ ಬೆಟ್ಟಿಯ ತಾರೆಯಾದ ಅಮೆರಿಕಾ ಫೆರೇರಾಳನ್ನು ಪ್ರಮುಖ ಪಾತ್ರದಲ್ಲಿ ನಟಿಸುವಂತೆ ನಿಯೋಜಿಸಲಾಗಿತ್ತು. ಆದರೆ, ಅವಳ ದೂರದರ್ಶನ ಪ್ರದರ್ಶನವಾದ ಅಗ್ಲಿ ಬೆಟ್ಟಿಗೆ ಸಂಬಂಧಿಸಿದಂತೆ ಇದ್ದ ಚಿತ್ರೀಕರಣದ ಬದ್ಧತೆಗಳಿಂದಾಗಿ ಅವಳನ್ನು ಕೈಬಿಡಲಾಯಿತು.[೪೧][೪೨][೪೩]


ದಿ ಕಿಲ್ಲರ್‌ ಇನ್‌ಸೈಡ್‌ ಮಿ ಪುಸ್ತಕವನ್ನು ಚಲನಚಿತ್ರವನ್ನಾಗಿ ಮಾಡುವ ಅದೇ ಹೆಸರಿನ ಚಿತ್ರದಲ್ಲಿ ಕ್ಯಾಟೆ ಹಡ್ಸನ್ ಮತ್ತು ಕ್ಯಾಸೆ ಅಫ್ಲೆಕ್‌ರೊಂದಿಗೆ ಅಭಿನಯಿಸಲು ಆಲ್ಬಾಳನ್ನು ಗೊತ್ತುಪಡಿಸಲಾಗಿದೆ.[೪೪] ಪ್ರಸ್ತುತ[when?] ಚಿತ್ರೀಕರಣವಾಗುತ್ತಿರುವ ಈ ಚಿತ್ರದಲ್ಲಿ ಜಾಯ್ಸೆ ಲೇಕ್‌ಲ್ಯಾಂಡ್ ಎಂಬ ಒಬ್ಬ ವ್ಯಭಿಚಾರಿಣಿಯ ಪಾತ್ರದಲ್ಲಿ ಆಲ್ಬಾ ಕಾಣಿಸಿಕೊಳ್ಳಲಿದ್ದಾಳೆ.[೪೫][೪೬] ಈ ಚಿತ್ರವು 2010ರಲ್ಲಿ ಬಿಡುಗಡೆಯಾಗಲಿದೆ.[೪೫][೪೭] ಆಲ್ಬಾ 2010ರ ರೋಮಾಂಚಕಾರಿ ಹಾಸ್ಯಚಿತ್ರ ವ್ಯಾಲೆಂಟೈನ್ಸ್ ಡೆ ನಲ್ಲಿ ನಟಿಸಲು ಸಹಿಹಾಕಿದ್ದಾಳೆ.[೪೮][೪೯][೫೦] ಜೂಲಿಯಾ ರಾಬರ್ಟ್ಸ್, ಆನ್ನೆ ಹಾತವೆ, ಜೆಸ್ಸಿಕಾ ಬಯೆಲ್‌, ಎಮ್ಮ ರಾಬರ್ಟ್ಸ್, ಅಶ್ಟೋನ್ ಕುಟ್ಚರ್ ಮತ್ತು ಜೆನ್ನಿಫರ್ ಗಾರ್ನರ್ ಮೊದಲಾದವರೊಂದಿಗೆ ಆಲ್ಬಾ ನಟಿಸಲಿದ್ದಾಳೆ.[೪೯][೫೧][೫೨] ಪ್ರಸ್ತುತ ಈ ಚಿತ್ರವು ನಿರ್ಮಾಣ-ಪೂರ್ವ ಕಾರ್ಯದಲ್ಲಿದೆ ಹಾಗೂ 2010ರ ಫೆಬ್ರವರಿ 12ರಂದು ಬಿಡುಗಡೆಯಾಗಲಿದೆ.[೫೨]


ಪ್ರಖ್ಯಾತಿ[ಬದಲಾಯಿಸಿ]

ಚಿತ್ರ:Playboy 0603.jpg
ಪ್ಲೇಬಾಯ್‌ ನಿಯತಕಾಲಿಕದ 2006ರ ಮಾರ್ಚ್‌ ತಿಂಗಳ ಸಂಚಿಕೆಯ ಮುಖಪುಟ. ಆಲ್ಬಾ ನಿಯತಕಾಲಿಕದ ಮುಖಪುಟದಲ್ಲಿ ತನ್ನ ಭಾವಚಿತ್ರವನ್ನು ಹಾಕಿದುದನ್ನು ವಿರೋಧಿಸಿ ಅದರ ವಿರುದ್ಧ ಮೊಕದ್ದಮೆ ಹೂಡಿದಳು, ಆದರೆ ನಂತರ ಅದನ್ನು ಕೈಬಿಟ್ಟಳು.


2001ರಲ್ಲಿ ಮ್ಯಾಕ್ಸಿಮ್‌‌ ನಿಯತಕಾಲಿಕದ 100 ಮಂದಿ ಪ್ರಚೋದಕ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಆಲ್ಬಾ ಪಡೆದುಕೊಂಡಿದ್ದಾಳೆ. "ನಾನು ಬಯಸುವ ರೀತಿಯಲ್ಲಿ ಜನರು ಯೋಚಿಸುವಂತೆ ಅವರಿಗೆ ಮಾರ್ಗದರ್ಶನ ನೀಡುವ ಸಂದರ್ಭದಲ್ಲಿಯೇ, ನನ್ನ ವೃತ್ತಿಜೀವನದಲ್ಲಿ ಲೈಂಗಿಕ ಆಕರ್ಷಣೆಯನ್ನು ನನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಲು ಎಲ್ಲದಕ್ಕೂ ತಯಾರಾಗಿರಬೇಕಾಗುತ್ತದೆ" ಎಂದು ಅವಳು ಹೇಳಿಕೊಂಡಿದ್ದಾಳೆ.[೫೩] 2005ರಲ್ಲಿ ಪೀಪಲ್ ನಿಯತಕಾಲಿಕದ 50 ಮಂದಿ ಅತಿ ಹೆಚ್ಚು ಸುಂದರ ವ್ಯಕ್ತಿಗಳಲ್ಲಿ ಆಲ್ಬಾಳೂ ಒಬ್ಬಳಾಗಿ ಹೆಸರಿಸಲ್ಪಟ್ಟಳು ಹಾಗೂ 2007ರಲ್ಲಿನ ನಿಯತಕಾಲಿಕದ 100 ಮಂದಿ ಅತಿ ಸುಂದರ ವ್ಯಕ್ತಿಗಳ ಪಟ್ಟಿಯಲ್ಲಿಯ‌ೂ ಈಕೆ ಕಾಣಿಸಿಕೊಂಡಿದ್ದಾಳೆ. ಆಲ್ಬಾಗೆ 2002ರಲ್ಲಿ Hollywood.comನ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 2002ರ ಐದನೇ ಅತ್ಯಂತ ಮಾದಕ ನಟಿ ಎಂಬ ಬಹುಮತ, ಅತ್ಯುನ್ನತ 10 ವೈಜ್ಞಾನಿಕ-ಕಾಲ್ಪನಿಕ ತರುಣಿಯರಲ್ಲಿ #4ನೇ ಸ್ಥಾನ, FHMನ ಅತ್ಯಂತ ಮಾದಕ ನಟಿಯರಲ್ಲಿ #6ನೇ ಸ್ಥಾನ ಹಾಗೂ ಸ್ಟಫ್ ನಿಯತಕಾಲಿಕದ "ಪ್ರಪಂಚದಲ್ಲಿನ 102 ಅತ್ಯಂತ ಮಾದಕ ಮಹಿಳೆ"ಯರ 2002ರ ಆವೃತ್ತಿಯಲ್ಲಿ #12ನೇ ಸ್ಥಾನ ದಕ್ಕಿದೆ.[೫೪] 2005ರಲ್ಲಿ ಮ್ಯಾಕ್ಸಿಮ್‌ ನಿಯತಕಾಲಿಕದ 100 ಮಂದಿ ಪ್ರಚೋದಕ ವ್ಯಕ್ತಿಗಳ ಪಟ್ಟಿಯಲ್ಲಿ ಆಲ್ಬಾಳಿಗೆ #5ನೇ ದೊರಕಿತು.[೫೫]


2006ರ ಮಾರ್ಚ್‌‌ ಸಂಚಿಕೆಯ ಮುಖಪುಟದಲ್ಲಿ ಪ್ಲೇಬಾಯ್‌ ನಿಯತಕಾಲಿಕವು ತನ್ನ '25 ಮಂದಿ ಅತ್ಯಂತ ಮಾದಕ ಪ್ರಸಿದ್ಧ ವ್ಯಕ್ತಿ'ಗಳಲ್ಲಿ ಆಲ್ಬಾಳನ್ನು ಒಬ್ಬಳನ್ನಾಗಿ ಹಾಗೂ 'ಆ ವರ್ಷದ ಮಾದಕ ನಟಿ'ಯಾಗಿ ಹೆಸರಿಸಿದೆ. ಆಲ್ಬಾಳ ಒಪ್ಪಿಗೆ ಇಲ್ಲದೆ ಅವಳ ಭಾವಚಿತ್ರವನ್ನು (ಇನ್‌ ಟು ದಿ ಬ್ಲೂ ಚಿತ್ರದ ಜಾಹೀರಾತಿನಲ್ಲಿ ಬಳಸಿದ ಛಾಯಾಚಿತ್ರದಿಂದ) ಬಳಸಿದುದಕ್ಕಾಗಿ ಪ್ಲೇಬಾಯ್‌ ವಿರುದ್ಧ ದಾವೆ ಹೂಡಿದಳು. ಸದರಿ ಸಂಚಿಕೆಯಲ್ಲಿನ "ನಗ್ನ ಚಿತ್ರಸರಣಿ"ಯೊಂದರಲ್ಲಿ ಅವಳು ಕಾಣಿಸಿಕೊಂಡಿರುವಂತೆ ಇದು ಅಭಿಪ್ರಾಯವನ್ನು ಮೂಡಿಸಿತ್ತು ಎಂದು ಆಕೆ ವಾದಿಸಿದ್ದಳು. ಅದೇನೇ ಇದ್ದರೂ, ಪ್ಲೇಬಾಯ್‌ ಮಾಲೀಕ ಹಫ್ ಹೆಫ್ನರ್‌ ಅವಳಲ್ಲಿ ವೈಯಕ್ತಿಕವಾಗಿ ಕ್ಷಮೆಯಾಚಿಸಿ, ಅವಳು ನಡೆಸುತ್ತಿದ್ದ ಎರಡು ಅನಾಥಾಶ್ರಮಗಳಿಗೆ ದತ್ತಿ ನೀಡಲು ಒಪ್ಪಿದ ನಂತರ ಆ ದಾವೆಯನ್ನು ಆಕೆ ಕೈಬಿಟ್ಟಳು.[೯]


2007ರ ಸ್ಪೈಕ್ TV ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಲ್ಬಾ


2006ರಲ್ಲಿ E! ದೂರದರ್ಶನದ 101 ಅತ್ಯಂತ ಮಾದಕ ಹೆಸರಾಂತ ವ್ಯಕ್ತಿಗಳಲ್ಲಿ #3ನೇ ಶ್ರೇಯಾಂಕವನ್ನು ಪಡೆದುಕೊಂಡಳು. 2006ರಲ್ಲಿ, AskMen.comನ ಓದುಗರು ಆಲ್ಬಾಳನ್ನು 99 ಮಂದಿ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪೈಕಿ ಪ್ರಥಮ ಸ್ಥಾನಕ್ಕೆ ಬಹುಮತ ನೀಡಿ ಆರಿಸಿದರು[೭] ಹಾಗೂ 2007ರಲ್ಲಿ ಮ್ಯಾಕ್ಸಿಮ್‌ ನಿಯತಕಾಲಿಕ ವು ತನ್ನ "ಅತ್ಯುನ್ನತ 100" ಮಂದಿಯಲ್ಲಿ ಆಲ್ಬಾಳಿಗೆ ಎರಡನೇ ಸ್ಥಾನವನ್ನು ನೀಡಿತು.[೮] GQ ಮತ್ತು ಇನ್ ಸ್ಟೈಲ್‌ ನಿಯತಕಾಲಿಕಗಳೆರಡೂ ಆಲ್ಬಾಳನ್ನು ತಮ್ಮ ಜೂನ್ ತಿಂಗಳ ಮುಖಪುಟಗಳಲ್ಲಿ ತೋರಿಸಿದವು[೫೬][೫೭] ಹಾಗೂ ಮೇ ತಿಂಗಳಲ್ಲಿ ಎಂಟು ದಶಲಕ್ಷ ಮತಗಳನ್ನು ಪಡೆದ ನಂತರ FHM (UK ಮತ್ತು USA ಆವೃತ್ತಿಗಳು) ನಿಯತಕಾಲಿಕವು ಆಲ್ಬಾಳನ್ನು "2007ರ, ಪ್ರಪಂಚದಲ್ಲಿನ ಅತ್ಯಂತ ಮಾದಕ ಮಹಿಳೆ" ಎಂದು ಹೆಸರಿಸಿತು.[೬] 2008ರಲ್ಲಿ ಮ್ಯಾಕ್ಸಿಮ್‌ನ 100 ಮಂದಿ ಪ್ರಚೋದಕ‌ ವ್ಯಕ್ತಿಗಳ ಪಟ್ಟಿಗೆ ಹೆಸರಿಸಲಾಗುವ ಮ‌ೂಲಕ ಆಲ್ಬಾಳನ್ನು ಪ್ರಪಂಚದ ಅತಿಹೆಚ್ಚು ಆಕರ್ಷಕ ಮಹಿಳೆಯರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದೆ.[೫೮] 2007ರಲ್ಲಿ, FHM ನಿಯತಕಾಲಿಕದ ಲ್ಯಾಟ್ವಿಯಾದ ಆವೃತ್ತಿಯು ನಡೆಸಿದ ಅಭಿಪ್ರಾಯ ಸಂಗ್ರಹಣೆಯಲ್ಲಿ FHMನ 2007ರ ಅತ್ಯಂತ ಮಾದಕ ಯುವತಿಯರ ಪೈಕಿ ಆಲ್ಬಾ #1ನೇ ಸ್ಥಾನವನ್ನು ಪಡೆದುಕೊಂಡಳು. 2007ರ ಎಂಪೈರ್ ನಿಯತಕಾಲಿಕದ 100 ಮಂದಿ ಅತ್ಯಂತ ಮಾದಕ ಚಿತ್ರನಟಿಯರಲ್ಲಿ ಆಲ್ಬಾ #4ನೇ ಸ್ಥಾನವನ್ನು ಗಿಟ್ಟಿಸಿಕೊಂಡಳು. 2006 ಮತ್ತು 2007ರಲ್ಲಿ ನಾರ್ವೆಯ FHM ನಿಯತಕಾಲಿಕವು ಆಲ್ಬಾಳನ್ನು ಪ್ರಪಂಚದಲ್ಲೇ ಅತ್ಯಂತ ಮಾದಕ ಮಹಿಳೆಯೆಂದು #1ನೇ ಶ್ರೇಯಾಂಕವನ್ನು ನೀಡಿತು.[೫೫] 2009ರಲ್ಲಿನ ಕ್ಯಾಂಪರಿ ಕ್ಯಾಲೆಂಡರಿನಲ್ಲಿ ಆಲ್ಬಾ ಕಾಣಿಸಿಕೊಂಡಳು. ಈಜುಡುಗೆ ಮತ್ತು ಎತ್ತರಿಸಿದ ಹಿಮ್ಮಡಿಯ ಚಪ್ಪಲಿಗಳನ್ನು ಧರಿಸಿ ಮಾದಕ ಭಂಗಿಯಲ್ಲಿರುವ ಆಲ್ಬಾಳ ಛಾಯಾಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರುಗಳ 9,999 ಪ್ರತಿಗಳನ್ನು ಕ್ಯಾಂಪರಿ ಮುದ್ರಿಸಿತು.[೫೯] 2008ರಲ್ಲಿ, ಮ್ಯಾಕ್ಸಿಮ್‌ನ ನಿಯತಕಾಲಿಕದ 100 ಮಂದಿ ಪ್ರಚೋದಕ ವ್ಯಕ್ತಿಗಳ ಪಟ್ಟಿಯಲ್ಲಿ #34ನೇ ಮತ್ತು ವಿಜರ್ಡ್ ನಿಯತಕಾಲಿಕದ "TVಯ ಅತ್ಯಂತ ಮಾದಕ ಮಹಿಳೆಯರ" ಪಟ್ಟಿಯಲ್ಲಿ #2ನೇ ಸ್ಥಾನವನ್ನು ಆಲ್ಬಾ ಪಡೆದುಕೊಂಡಿದ್ದಾಳೆ ಹಾಗೂ ಸಾರ್ವಕಾಲಿಕ ಚಿತ್ರಗಳಲ್ಲಿನ 25 ಮಂದಿ ಅತ್ಯಂತ ಮಾದಕ ಮಹಿಳೆಯರಲ್ಲಿ ಈಕೆ ಒಬ್ಬಳು ಎಂದು GQ ನಿಯತಕಾಲಿಕವು ಹೆಸರಿಸಿದೆ.[೫೫]


"I think there are ambitious girls who will do anything to be famous, and they think men in this business are used to women doing that. Contrary to how people may feel, I've never used my sexuality. That's not part of it for me. When I'm in a meeting, I want to tell you why I'm an asset, how I'm a commodity, how I can put asses in the seats, not, 'There's a chance you're going to be able to f*** me.' That's never been my deal."

Alba on not using her sex appeal in order to get her goals in her acting career, 2008[೬೦]


ತನಗೆ ಬಂದ ಹಲವಾರು ಅವಕಾಶಗಳ ಆಧಾರದ ಮೇಲೆ ತಾನು ಮಾದಕ ಚಂಚಲೆಯಂಥ ಪಾತ್ರಗಳಿಗೇ ಅಂಟಿಕೊಂಡುಬಿಡಬಹುದಾದ ಅಪಾಯದ ಕುರಿತು ಆತಂಕ ವ್ಯಕ್ತಪಡಿಸುವ ಆಲ್ಬಾ, "ಅದು ಹೇಗೇ ಆಗಲಿ, ಇದು ನಟಾಲಿ ಪೋರ್ಟ್‌ಮ್ಯಾನ್‌‌ಳಿಗೆ ಆಗುತ್ತಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದೂ ಹೇಳುತ್ತಾಳೆ.[೬೧] ಸಂದರ್ಶನದಲ್ಲಿ ಆಕೆ ಮಾತನಾಡುತ್ತಾ, ಓರ್ವ ನಟಿಯಾಗಿ ತನ್ನನ್ನು ಗಂಭೀರಸ್ವರೂಪದಲ್ಲಿ ಸ್ವೀಕರಿಸಬೇಕು ಎಂದು ತನಗೆ ಆಸೆಯಿದ್ದರೂ, ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಸಲುವಾಗಿ ತನಗೆ ಆಸಕ್ತಿಯಿಲ್ಲದ ಚಿತ್ರಗಳಲ್ಲಿಯೂ ನಟಿಸಬೇಕಾಗಿ ಬರುತ್ತದೆ; ಅಂತಿಮವಾಗಿ ತನ್ನ ಚಲನಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವಾಗ ಉತ್ತಮ ಚಿತ್ರಗಳನ್ನೇ ಆರಿಸುವ ಭರವಸೆಯಿದೆ ಎಂದು ಹೇಳಿಕೊಂಡಿದ್ದಾಳೆ.[೬೧] ಚಿತ್ರದ ಕುರಿತು ಒಪ್ಪಂದ ಮಾಡಿಕೊಳ್ಳುವಾಗ ಚಿತ್ರದಲ್ಲಿ ಯಾವುದೇ ನಗ್ನತೆ ಇರಬಾರದೆಂದು ಆಲ್ಬಾ ಷರತ್ತುಗಳನ್ನು ಹಾಕುತ್ತಾಳೆ. ಸಿನ್ ಸಿಟಿ ಚಿತ್ರದಲ್ಲಿ ನಗ್ನವಾಗಿ ಕಾಣಿಸಿಕೊಳ್ಳುವಂತೆ ಅವಳನ್ನು ಚಿತ್ರ ನಿರ್ದೇಶಕರಾದ ಫ್ರಾಂಕ್ ಮಿಲ್ಲರ್ ಮತ್ತು ರಾಬರ್ಟ್ ರೋಡ್ರಿಕ್ವೆಜ್ ಹೇಳಿದಾಗ, ಆಹ್ವಾನವನ್ನು ಅವಳು ನಿರಾಕರಿಸುತ್ತಾ ಹೀಗೆ ಹೇಳಿದಳು - "ನಾನು ನಗ್ನವಾಗಿ ಕಾಣಿಸಿಕೊಳ್ಳುವುದಿಲ್ಲ. ನಾನು ಮಾಡುವುದಿಲ್ಲ ಅಷ್ಟೆ. ಇದು ನನ್ನನ್ನು ಕೆಟ್ಟ ನಟಿಯನ್ನಾಗಿ ಮಾಡಬಹುದು. ನನಗೆ ಕೆಲವು ವಿಷಯಗಳಲ್ಲಿ ಬಡ್ತಿ ಸಿಗದಿರಬಹುದು. ಆದರೆ ನನಗೆ ತುಂಬಾ ಕಾಳಜಿಯಿದೆ".[೬೨] GQ ನ ಚಿತ್ರೀಕರಣವೊಂದರಲ್ಲಿ ತಾನು ತೀರಾ ಕಡಿಮೆ ಬಟ್ಟೆ ಧರಿಸಿದ್ದ ಬಗ್ಗೆ ಆಲ್ಬಾ ಹೀಗೆ ಹೇಳಿದ್ದಾಳೆ - "ನಾನು ಹಳೆಯ ಮಾದರಿಯ ಒಳಚಡ್ಡಿಯನ್ನು ಧರಿಸುವುದನ್ನು ಅವರು ಇಷ್ಟಪಡಲಿಲ್ಲ, ಆಗ 'ನಾನು ಮೇಲುಡುಪು ಇಲ್ಲದೆ ಹೋಗಬೇಕಾದರೆ ನನಗೆ ಹಳೆಯ ಮಾದರಿಯ ಒಳಚಡ್ಡಿಯನ್ನು ಧರಿಸಲೇಬೇಕು' ಎಂದು ಹೇಳಿದೆ".[೬೩]


ವೈಯಕ್ತಿಕ ಜೀವನ[ಬದಲಾಯಿಸಿ]

ಧರ್ಮ[ಬದಲಾಯಿಸಿ]

ಆಲ್ಬಾ ತನ್ನ ಹದಿಹರೆಯದ ವಯಸ್ಸಿನವರೆಗೆ ಕ್ರೈಸ್ತ ಧರ್ಮದವಳಾಗಿದ್ದಳು,[೬೪] ಆದರೆ ತನ್ನ ಹೊರನೋಟಗಳಿಂದಾಗಿ ಜನ ತನ್ನನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಭಾಸವಾದಾಗ ನಾಲ್ಕು ವರ್ಷಗಳ ನಂತರ ಆಕೆ ಧರ್ಮವನ್ನು ಬಿಟ್ಟುಬಿಟ್ಟಳು. ಈ ಕುರಿತು ಅವಳು ಮಾತನಾಡುತ್ತಾ, "ನಾನು ಪ್ರಚೋದನಕಾರಿ ಉಡುಪುಗಳನ್ನು ಧರಿಸುತ್ತಿರದ ಸಂದರ್ಭದಲ್ಲಿಯೂ, ನಾನು ಅಂತಹ ಉಡುಪುಗಳನ್ನು ಧರಿಸುತ್ತಿರುವುದರಿಂದಾಗಿ ಹಿರಿಯರು ಮುಂದೆ ನನಗೆ ಹೊಡೆಯಬಹುದು ಎಂದು ನನ್ನ ಯುವ ಪಾದ್ರಿಯು ಹೇಳಿದರು. ಪುರುಷರು ಇಷ್ಟಪಡುವ ರೀತಿಯಲ್ಲಿ ನಾನು ಇದ್ದಿದ್ದೇ ಆದಲ್ಲಿ ಅದು ನನ್ನ ದೋಷ ಎಂದು ಭಾವಿಸುವಂತೆ ಇದು ಮಾಡಿತು ಹಾಗೂ ನನ್ನ ದೇಹದ ಬಗ್ಗೆ ಹಾಗೂ ಓರ್ವ ಮಹಿಳೆಯಾಗಿರುವುದರ ಬಗ್ಗೆ ನಾನು ನಾಚಿಕೆ ಪಡುವಂತಾಯಿತು" ಎಂದು ಆಕೆ ವಿವರಿಸಿದಳು.[೬೫]


ವಿವಾಹಪೂರ್ವದ ಲೈಂಗಿಕ ಸಂಬಂಧ ಮತ್ತು ಸಲಿಂಗಕಾಮದ ಬಗೆಗಿನ ಚರ್ಚ್‌ನ ಖಂಡನೆಗಳ ಬಗ್ಗೆ ಹಾಗೂ ಬೈಬಲ್‌ನಲ್ಲಿ ಪ್ರಬಲ ಮಹಿಳಾ ಆದರ್ಶವ್ಯಕ್ತಿಗಳಿಲ್ಲದುದರ ಬಗ್ಗೆ ಆಲ್ಬಾ ಆಕ್ಷೇಪಣೆಗಳನ್ನು ಹೊಂದಿದ್ದಳು. ಆಕೆ ಬೈಬಲ್‌ನ ಬಗ್ಗೆ ಹೀಗೆಂದು ವಿವರಿಸುತ್ತಾಳೆ - "ಇದೊಂದು ಉತ್ತಮ ಮಾರ್ಗದರ್ಶಿ ಎಂದು ತಿಳಿದಿದ್ದೆ; ಆದರೆ ನನ್ನ ಜೀವನವನ್ನು ಹೇಗೆ ಸಾಗಿಸಿಕೊಂಡು ಹೋಗಬೇಕು ಎಂಬುದರ ಕುರಿತಾಗಿ ಇದು ನಿಸ್ಸಂಶಯವಾಗಿ ಉತ್ತಮವಾದುದಲ್ಲ."[೬೨] ಅವಳು ತನ್ನ 15ನೇ ವಯಸ್ಸಿನಲ್ಲಿ ದೂರದರ್ಶನ ಸರಣಿ ಕಾರ್ಯಕ್ರಮವಾದ ಚಿಕಾಗೊ ಹೋಪ್‌‌ನ 1996ರ ಒಂದು ಸಂಚಿಕೆಯಲ್ಲಿ, ಗಂಟಲಿನಲ್ಲಿ ಗೊನೋರಿಯವನ್ನು ಹೊಂದಿರುವ ಹದಿಹರೆಯದ ಹುಡುಗಿಯ ಅತಿಥಿ-ಪಾತ್ರದಲ್ಲಿ ನಟಿಸಿದಾಗ, ಅವಳ "ಧರ್ಮದ ಬಗೆಗಿನ ಶ್ರದ್ಧೆಯು ಕಡಿಮೆಯಾಗಲು ಆರಂಭವಾಯಿತು". ಚರ್ಚ್‌ನಲ್ಲಿನ ಅವಳ ಸ್ನೇಹಿತರು ಅವಳ ಪಾತ್ರದ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದುದು ಚರ್ಚ್‌ನ ಬಗೆಗಿನ ಅವಳ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿತು.[೩] ಚರ್ಚ್‌ನ್ನು ಬಿಟ್ಟುಬಿಟ್ಟರೂ, ತಾನು ಇನ್ನೂ ದೇವರ ಬಗ್ಗೆ ನಂಬಿಕೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾಳೆ.[೬೬]


ಸಂಬಂಧಗಳು[ಬದಲಾಯಿಸಿ]

2007ರಲ್ಲಿ ಪತಿ ಕ್ಯಾಶ್ ವಾರೆನ್‌ನೊಂದಿಗೆ ಆಲ್ಬಾ

2000ದ ಜನವರಿಯಲ್ಲಿ ಡಾರ್ಕ್ ಏಂಜೆಲ್‌ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಹ-ನಟ ಮೈಕೆಲ್ ವೀದರ್ಲಿಯೊಂದಿಗೆ ಮ‌ೂರು ವರ್ಷಗಳ ಸಂಬಂಧವನ್ನು ಆಲ್ಬಾ ಆರಂಭಿಸಿದಳು. ಇದು ಅವರ ನಡುವಿನ 12 ವರ್ಷ ವಯಸ್ಸಿನ ಅಂತರದಿಂದಾಗಿ ವಿವಾದಕ್ಕೆ ಕಾರಣವಾಯಿತು.[೬೭] ವೆದರ್ಲಿ ಎಂಬಾತ ಆಲ್ಬಾಳ ಇಪ್ಪತ್ತನೇ ವರ್ಷದ ಜನ್ಮದಿನದಂದು ಮದುವೆ ಪ್ರಸ್ತಾಪ ಮಾಡಿದಾಗ, ಅವಳು ಒಪ್ಪಿದಳು.[೧೧] 2003ರ ಆಗಸ್ಟ್‌ನಲ್ಲಿ ಆಲ್ಬಾ ಮತ್ತು ವೆದರ್ಲಿ ತಮ್ಮ ನಡುವಿನ ಸಂಬಂಧವನ್ನು ಕೊನೆಗೊಳಿಸಿರುವುದನ್ನು ಪ್ರಕಟಿಸಿದರು.[೩] 2007ರ ಜುಲೈನಲ್ಲಿ, ಈ ಸಂಬಂಧ ಮುರಿದುದರ ಬಗ್ಗೆ ಆಲ್ಬಾ ಮಾತನಾಡುತ್ತಾ, "ನಾನು ಯಾಕೆ ಅವನಿಂದ ಆಕರ್ಷಿತಳಾದೆ ಎಂಬುದು ನನಗೆ ಗೊತ್ತಿಲ್ಲ. ನಾನು ಇನ್ನೂ ಕನ್ಯೆಯಾಗಿದ್ದೆ. ಅವನು ನನಗಿಂತ 12 ವರ್ಷ ದೊಡ್ಡವನಾಗಿದ್ದ. ಇದನ್ನು ಅವನು ಚೆನ್ನಾಗಿ ತಿಳಿದುಕೊಂಡಿದ್ದಾನೆ ಎಂದು ನಾನು ಭಾವಿಸಿದ್ದೆ. ನನ್ನ ಹೆತ್ತವರಿಗೆ ಇದರಿಂದ ಸಂತೋಷವಾಗಿರಲಿಲ್ಲ. ಅವರು ನಿಜವಾಗಿಯ‌ೂ ಧರ್ಮಶ್ರದ್ಧೆಯುಳ್ಳವರು. ತಾವು ನಂಬಬೇಕಾಗಿರುವ ರೀತಿಯಲ್ಲಿ ಬೈಬಲ್‌ ಇರದಿದ್ದರೆ ಬೈಬಲ್‌ನ್ನು ಬರೆಯಲು ದೇವರು ಅವಕಾಶವನ್ನು ನೀಡುತ್ತಿರಲಿಲ್ಲ ಎಂದು ಅವರು ನಂಬಿರುವವರು. ನಾನು ಸಂಪೂರ್ಣವಾಗಿ ಭಿನ್ನಳು" ಎಂದು ಹೇಳಿದಳು.[೬೮] ಮೋರ್ಗನ್ ಫ್ರೀಮ್ಯಾನ್, ಸೀನ್ ಕಾನರಿ, ರಾಬರ್ಟ್ ರೆಡ್‌ಫೋರ್ಡ್ ಮತ್ತು ಮೈಕೆಲ್ ಕೈನೆ ಮೊದಲಾವರನ್ನು ಸೂಚಿಸುತ್ತಾ, ಹೆಚ್ಚು ವಯಸ್ಸಾದವನು ತನ್ನ ಆದರ್ಶ ಸಂಗಾತಿ ಎಂದು ಯೋಚಿಸಿದ್ದೇನೆಂದು ಒಮ್ಮೆ ಆಲ್ಬಾ ಹೇಳಿಕೊಂಡಿದ್ದಳು. ಅವಳು ಹೀಗೆ ಹೇಳಿದ್ದಾಳೆ - "ಹೆಚ್ಚು ವಯಸ್ಸಾದವರ ಬಗ್ಗೆ ನನ್ನದು ಇದೇ ಅಭಿಪ್ರಾಯ. ಏಕೆಂದರೆ ಅವರು ತುಂಬಾ ಅನುಭವಸ್ಥರಾಗಿದ್ದು ಹೆಚ್ಚು ತಿಳಿದುಕೊಂಡಿರುತ್ತಾರೆ."[೬೯]


2004ರಲ್ಲಿ ಫೆಂಟಾಸ್ಟಿಕ್ ಫೋರ್‌ ಚಿತ್ರ ಮಾಡುತ್ತಿದ್ದ ಸಂದರ್ಭದಲ್ಲಿ, ನಟ ಮೈಕೆಲ್ ವಾರೆನ್‌ನ ಮಗ ಕ್ಯಾಶ್ ವಾರೆನ್‌ನನ್ನು ಆಲ್ಬಾ ಭೇಟಿಯಾದಳು.[೭೦][೭೧] 2007ರ ಡಿಸೆಂಬರ್ 27ರಂದು ಆಲ್ಬಾ ಮತ್ತು ವಾರೆನ್ ತಮ್ಮ ನಿಶ್ಚಿತಾರ್ಥವಾಗಿರುವುದನ್ನು ಪ್ರಕಟಿಸಿದರು.[೭೦] ಲಾಸ್‌ ಏಂಜಲೀಸ್‍‌ನಲ್ಲಿ 2008ರ ಮೇ 19ರ ಸೋಮವಾರದಂದು ವಾರೆನ್‌ನನ್ನು ಆಲ್ಬಾ ವಿವಾಹವಾದಳು.[೭೨][೭೩] 2008ರ ಜೂನ್ 7ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿನ ಸೆಡಾರ್ಸ್-ಸಿನೈ ಮೆಡಿಕಲ್ ಸೆಂಟರ್‌ನಲ್ಲಿ ಹಾನರ್ ಮೇರಿ ವಾರೆನ್[೭೪] ಎಂಬ ಒಂದು ಹೆಣ್ಣು ಮಗುವಿಗೆ, ಆಲ್ಬಾ ಜನ್ಮವಿತ್ತಳು.[೭೫] ಹಾನರ್ ಮೇರಿಯ ಮೊದಲ ಭಾವಚಿತ್ರಗಳು OK! ನಿಯತಕಾಲಿಕದಲ್ಲಿ ಪ್ರಕಟವಾದವು., ಇದಕ್ಕಾಗಿ ಈ ನಿಯತಕಾಲಿಕವು ಅವರಿಗೆ 1.5 ದಶಲಕ್ಷ $ನಷ್ಟು ಹಣವನ್ನು ಪಾವತಿಸಿತ್ತು.[೭೬] ತಾನು ಹೆಚ್ಚು ಮಕ್ಕಳನ್ನು ಪಡೆಯಲು ಬಯಸುವುದಾಗಿ ಆಲ್ಬಾ ಹೇಳಿಕೊಂಡಿದ್ದಾಳೆ.[೭೭][೭೮]


ದಾನ ಮತ್ತು ರಾಜಕೀಯ[ಬದಲಾಯಿಸಿ]

2005ರಲ್ಲಿ AIDS ದತ್ತಿ ಸಂಸ್ಥೆಯಾದ ಆಮ್ಫಾರ್‌ಗಾಗಿ ಹಣಸಂಗ್ರಹಿಸಲು, ತಾನು ಉಚಿತವಾಗಿ ನಟಿಸುವುದಾಗಿ ಕ್ಯಾನೆಸ್ ಚಿತ್ರೋತ್ಸವದಲ್ಲಿ ಆಲ್ಬಾ ಪ್ರಕಟಿಸಿದಳು. US ಸಂಶೋಧನಾ ಸಂಸ್ಥೆಯೊಂದಕ್ಕಾಗಿ ಉದ್ಯಮವು ಒಂದು ಸಹಾಯಾರ್ಥ ಪ್ರದರ್ಶನವನ್ನು ನಡೆಸಿತು. ದಿ ಲಾರ್ಡ್ ಆಫ್ ದಿ ರಿಂಗ್ಸ್‌‌ನ ನಿರ್ಮಾಪಕನಾದ ಬಾಬ್ ವೈನ್‌ಸ್ಟೈನ್‌‌ ಕ್ರೀಡಾತಾರೆಯರಾದ ಮೋನಿಕಾ ಸೆಲೆಸ್ ಮತ್ತು ಬೋರಿಸ್ ಬೆಕರ್‌ರಿಗೆ ಸಂಬಂಧಿಸಿದ ಟೆನಿಸ್‌ ತರಬೇತಿಗಳಿಗಾಗಿ 100,000 $ನಷ್ಟು ಹಣವನ್ನು ಕೊಡಲು ಒಪ್ಪುವುದಾದರೆ ಅವನ ಚಿತ್ರಗಳ ಪೈಕಿ ಒಂದರಲ್ಲಿ ಸಂಭಾವನೆಯಿಲ್ಲದೆ ನಟಿಸುವುದಾಗಿ ಭರವಸೆ ನೀಡುವ ಮೂಲಕ "ಮಹಾನ್‌ ಕಂಪನ"ವನ್ನು ಆಲ್ಬಾ ಉಂಟುಮಾಡಿದ್ದಳು.[೭೯]


ಕ್ಲೋತ್ಸ್ ಆಫ್ ಅವರ್ ಬ್ಯಾಕ್, ಹೆಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ, ನ್ಯಾಶನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆಂಡ್ ಎಕ್ಸ್‌ಪ್ಲಾಯ್ಟೆಡ್ ಚಿಲ್ಡ್ರನ್, ಪ್ರಾಜೆಕ್ಟ್ HOME, RADD, ರೆವ್ಲಾನ್ ರನ್/ವಾಕ್ ಫಾರ್ ವುಮೆನ್, SOS ಚಿಲ್ಡ್ರನ್ ವಿಲೇಜಸ್, ಸೋಲ್ಸ್4ಸೌಲ್ಸ್ ಹಾಗೂ ಸ್ಟೆಪ್‌ ಅಪ್‌ ಇವೇ ಮೊದಲಾದ ಸಂಘಟನೆಗಳಲ್ಲಿ ಭಾಗವಹಿಸುವ ಮ‌ೂಲಕ ಆಲ್ಬಾ ಹಲವಾರು ದಾನಧರ್ಮಗಳನ್ನು ಮಾಡಿದ್ದಾಳೆ.[೮೦] ಡೆಮಾಕ್ರಟಿಕ್‌ ಪಕ್ಷದ ಭರವಸೆಯ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಬರಾಕ್ ಒಬಾಮನನ್ನು 2008ರ ಪ್ರಾಥಮಿಕ ಅವಧಿಯಲ್ಲಿ ಆಲ್ಬಾ ಬಹಿರಂಗವಾಗಿ ಅನುಮೋದಿಸಿದಳು ಹಾಗೂ ಬೆಂಬಲಿಸಿದಳು.[೮೧]


ಗುಲಾಮಗಿರಿ-ವಿಷಯವನ್ನಾಧರಿಸಿದ ಡಿಕ್ಲೇರ್‌ ಯುವರ್‌ಸೆಲ್ಫ್ ಎಂಬ ಚಳವಳಿಯ ಜಾಹೀರಾತಿಗಾಗಿ ಆಲ್ಬಾ ಅಭಿನಯಿಸಿದಳು. ಇದು 2008ರ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಚಲಾಯಿಸುವುದಕ್ಕಾಗಿ ಯುವಜನರ ನೋಂದಣಿಯನ್ನು ಪ್ರೋತ್ಸಾಹಿಸುವ ಚಳುವಳಿಯಾಗಿತ್ತು. ಈ ಜಾಹೀರಾತನ್ನು ಮಾರ್ಕ್ ಲಿಡೆಲ್ ಚಿತ್ರೀಕರಿಸಿದ್ದು,[೮೨][೮೩] ಕಪ್ಪುಪಟ್ಟಿಯೊಂದರಲ್ಲಿ ಸುತ್ತಲ್ಪಟ್ಟು ಬಾಯಿಕಟ್ಟಲಾಗಿರುವ ಆಲ್ಬಾಳ ಭಂಭಗಿಯನ್ನೊಳಗೊಂಡ ಈ ಚಿತ್ರದಿಂದಾಗಿ, ಆಲ್ಬಾ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮದ ಗಮನಸೆಳೆದಳು. ಕೆಲವರು ಈ ಜಾಹೀರಾತುಗಳನ್ನು "ಆಘಾತಕಾರಿ"ಯಾದುದು ಎಂದು ವರ್ಣಿಸಿದರು.[೮೩] "ಇದು ನನಗೆ ವಿಲಕ್ಷಣವಾಗಿ ಅನ್ನಿಸಲಿಲ್ಲ" ಎಂದು ಜಾಹೀರಾತಿನಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಆಲ್ಬಾ ಹೇಳಿಕೊಂಡಿದ್ದಾಳೆ. "ಈ ದೇಶದಲ್ಲಿ ಯುವಕರನ್ನು ರಾಜಕೀಯವಾಗಿ ಹೆಚ್ಚು ಸಕ್ರಿಯಗೊಳಿಸುವ ಅವಶ್ಯಕತೆ ನಮಗಿರುವ ಬಗ್ಗೆ ಯುವಜನರಿಗೆ ಅರಿವಿರುವುದು ಅಗತ್ಯ ಎಂದು ನನ್ನ ಭಾವನೆ", ಮತ್ತು "ಆಘಾತಕಾರಿ ಎನಿಸಿದ ವಿಷಯಗಳಿಗೆ ಜನರು ಪ್ರತಿಕ್ರಿಯಿಸುತ್ತಾರೆ" ಎಂದು ಕೂಡ ಆಲ್ಬಾ ಹೇಳಿದ್ದಾಳೆ.[ಸೂಕ್ತ ಉಲ್ಲೇಖನ ಬೇಕು]


2009ರ ಜೂನ್‌ನಲ್ಲಿ ಓಕ್ಲಹೊಮ ನಗರದಲ್ಲಿ ದಿ ಕಿಲ್ಲರ್‌ ಇನ್‌ಸೈಡ್‌ ಮಿ ಚಿತ್ರದ ಚಿತ್ರೀಕರಣವಾಗುತ್ತಿದ್ದ ಸಂದರ್ಭದಲ್ಲಿ, ನಗರದಾದ್ಯಂತ ಶಾರ್ಕ್‌ ಮೀನುಗಳ ಭಿತ್ತಿಚಿತ್ರಗಳನ್ನು ಆಲ್ಬಾಳು ಅಂಟಿಸಿದಾಗ ಸ್ಥಳೀಯರು "ಕೆರಳಿದರು".[೮೪] ಬಿಳಿ ಶಾರ್ಕ್‌ಮೀನುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಕುರಿತು ಗಮನ ಹರಿಸುವಂತೆ ಮಾಡಲು ತಾನು ಪ್ರಯತ್ನಿಸುತ್ತಿರುವುದಾಗಿ ಈ ಸಂದರ್ಭದಲ್ಲಿ ಆಲ್ಬಾ ತಿಳಿಸಿದಳು. ವಿಧ್ವಂಸಕತೆಗೆಯ ಸಂಬಂಧಿಸಿದಂತೆ ಆಲ್ಬಾ ಬೆನ್ನಟ್ಟುವಿಕೆಗೆ ಹಾಗೂ ಆಪಾದನೆಗೆ ಒಳಗಾಗಬಹುದು ಎಂದು ಮಾಧ್ಯಮಗಳು ಊಹಿಸಿದವು.[೮೫][೮೬] 2009ರ ಜೂನ್ 16ರಂದು, ಆಲ್ಬಾಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯಾವುದೇ ಸ್ವತ್ತು ಮಾಲೀಕರು ಬಯಸದೇ ಇರುವುದರಿಂದ ಅವಳ ವಿರುದ್ಧ ಅಪರಾಧದ ಆರೋಪಗಳನ್ನು ಹೊರಿಸಲು ಸಾಧ್ಯವಿಲ್ಲ ಎಂದು ಓಕ್ಲಹೊಮ ನಗರದ ಪೋಲೀಸರು ಹೇಳಿದರು.[೮೭][೮೮][೮೯][೯೦] ಆಲ್ಬಾ ಪೀಪಲ್ ನಿಯತಕಾಲಿಕಕ್ಕೆ ನೀಡಿದ ಹೇಳಿಕೆಯೊಂದರಲ್ಲಿ ಕ್ಷಮೆಯನ್ನು ಕೋರಿದಳು ಹಾಗೂ ತನ್ನ ಈ ಕ್ರಮಗಳಿಗಾಗಿ ವಿಷಾದಿಸುತ್ತೇನೆ ಎಂದೂ ಹೇಳಿದಳು.[೮೭] ನಂತರ ಅವಳು ಯುನೈಟೆಡ್ ವೇಯ ಜಾಹೀರಾತು ಫಲಕವನ್ನು ಒಂದು ಶಾರ್ಕ್ ಮೀನಿನ ಭಿತ್ತಿಪತ್ರದಿಂದ ಮರೆಮಾಡಿದುದಕ್ಕಾಗಿ, ಬಹಿರಂಗಪಡಿಸದ ಹಣದ ಮೊತ್ತವನ್ನು (500 $ಗೂ ಹೆಚ್ಚು[೯೧]) ಅದಕ್ಕೆ ನೀಡಿದಳು.[೯೨][೯೩][೯೪][೯೫]


ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಚಲನಚಿತ್ರ
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
1994 ಕ್ಯಾಂಪ್ ನೋವೇರ್ ಗೈಲ್ ಮೊದಲ ಚಿತ್ರ
1995 ವೀನಸ್ ರೈಸಿಂಗ್ ಯಂಗ್ ಈವ್
1999 P.U.N.K.S. ಸಮಂತ ಸ್ವೊಬೊಡ
ನೆವರ್ ಬೀನ್ ಕಿಸ್ಡ್‌ ಕಿರ್ಸ್ಟೆನ್ ಲಿಯೋಸಿಸ್
ಐಡಲ್ ಹ್ಯಾಂಡ್ಸ್‌ ಮೋಲಿ
2000 ಪ್ಯಾರನಾಯ್ಡ್ ಕ್ಲೋಯ್
2003 ದ ಸ್ಲೀಪಿಂಗ್ ಡಿಕ್ಷ್‌ನರಿ ಸೆಲಿಮ DVDಯ ಪ್ರಥಮ ಪ್ರದರ್ಶನದ ಚಿತ್ರದಲ್ಲಿನ ಉತ್ತಮ ನಟನೆಗಾಗಿ DVD ಎಕ್ಸ್‌ಕ್ಲೂಸಿವ್ ಪ್ರಶಸ್ತಿ
ಹನಿ ಹನಿ ಡೇನಿಯಲ್ಸ್ ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಮೂವಿ ಲಿಪ್‌ಲಾಕ್‌ ವಿಭಾಗಕ್ಕಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ (ಮೆಖಿ ಫಿಫೆರ್‌ನೊಂದಿಗೆ ಹಂಚಿಕೊಂಡಳು)
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಮೂವಿ ಕೆಮಿಸ್ಟ್ರಿಗಾಗಿ ಟೀನ್ ಚಾಯ್ಸ್ ಪ್ರಶಸ್ತಿ (ಮೆಖಿ ಫಿಫೆರ್‌‌ನೊಂದಿಗೆ ಹಂಚಿಕೊಂಡಳು)
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಚಿತ್ರ ನಟಿಗೆ ಮೀಸಲಾದ ಟೀನ್ ಚಾಯ್ಸ್ ಪ್ರಶಸ್ತಿ - ನಾಟಕ/ಸಾಹಸ ಶೌರ್ಯ
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಅದ್ಭುತ ಚಿತ್ರನಟಿಗೆ ಮೀಸಲಾದ ಟೀನ್ ಚಾಯ್ಸ್ ಪ್ರಶಸ್ತಿ - ಸ್ತ್ರೀ
2005 ಸಿನ್ ಸಿಟಿ ನ್ಯಾನ್ಸಿ ಕಲ್ಲಾಹನ್‌ ಅತ್ಯಂತ ಮಾದಕ ನಟನೆಗಾಗಿ MTV ಮೂವಿ ಪ್ರಶಸ್ತಿ
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಚಿತ್ರ ನಟನೆಗಾಗಿ ಟೀನ್ ಚಾಯ್ಸ್ ಪ್ರಶಸ್ತಿ: ಸಾಹಸ/ಶೌರ್ಯ/ರೋಮಾಂಚನಕಾರಿ
ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ಪೋಷಕನಟಿಗೆ ಮೀಸಲಾದ ಸ್ಯಾಟರ್ನ್‌ ಪ್ರಶಸ್ತಿ
ಫೆಂಟಾಸ್ಟಿಕ್ ಫೋರ್‌ ಸ್ಯೂ ಸ್ಟಾರ್ಮ್ / ಅಗೋಚರ ಮಹಿಳೆ ನಾಮನಿರ್ದೇಶನಗೊಂಡಿದ್ದು — ಉತ್ತಮ ನಟಿಗಾಗಿರುವ ಇಮ್ಯಾಜೆನ್ ಫೌಂಡೇಶನ್ ಪ್ರಶಸ್ತಿ
ನಾಮನಿರ್ದೇಶನಗೊಂಡಿದ್ದು — ಅತ್ಯುತ್ತಮ ನಾಯಕನಿಗಾಗಿರುವ MTV ಮೂವಿ ಪ್ರಶಸ್ತಿ
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ನಟಿಗೆ ಮೀಸಲಾದ ಟೀನ್ ಚಾಯ್ಸ್ ಪ್ರಶಸ್ತಿ: ನಾಟಕ/ಸಾಹಸ ಶೌರ್ಯ
ಇನ್‌ ಟು ದಿ ಬ್ಲೂ ಸ್ಯಾಮ್ ನಾಮನಿರ್ದೇಶನಗೊಂಡಿದ್ದು — ಕೆಟ್ಟ ನಟಿಗಾಗಿ ಮೀಸಲಾಗಿರುವ ರಜ್ಜಿ ಪ್ರಶಸ್ತಿ
2007 ನಾಕ್ಡ್ ಅಪ್ ಸ್ವತಃ ಆಕೆಯೇ ಕೇಮಿಯೊ (ಸಿಕ್ಕಿಲ್ಲ)
Fantastic Four: Rise of the Silver Surfer ಸ್ಯೂ ಸ್ಟೋರ್ಮ್ / ಅಗೋಚರ ಮಹಿಳೆ ಅತ್ಯುತ್ತಮ ಚಿತ್ರ ನಟಿಗಾಗಿರುವ ನಿಕೆಲೊಡಿಯೋನ್ ಕಿಡ್ಸ್ ಚಾಯ್ಸ್ ಪ್ರಶಸ್ತಿ
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಚಿತ್ರಕ್ಕಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ: ಹಿಸ್ಸಿ ಫಿಟ್
ನಾಮನಿರ್ದೇಶನಗೊಂಡಿದ್ದು — ಚಾಯ್ಸ್ ಚಿತ್ರ ನಟಿಗಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ: ಸಾಹಸ ಶೌರ್ಯ
ನಾಮನಿರ್ದೇಶನಗೊಂಡಿದ್ದು — Premios Juventud for Premios Juventud for Actríz que se roba la pantalla
ನಾಮನಿರ್ದೇಶನಗೊಂಡಿದ್ದು — ಕೆಟ್ಟ ನಟಿಗಾಗಿ ಮೀಸಲಾದ ರಜ್ಜಿ ಪ್ರಶಸ್ತಿ
ದಿ ಟೆನ್ ಲಿಜ್ ಆನ್ನೆ ಬ್ಲೇಜರ್
ಗುಡ್ ಲಕ್ ಚಕ್‌ ಕ್ಯಾಮ್ ವೆಕ್ಸ್ಲರ್ ನಾಮನಿರ್ದೇಶನಗೊಂಡಿದ್ದು — Premios Juventud for Premios Juventud for Actríz que se roba la pantalla
ಅವೇಕ್‌ ಸ್ಯಾಮ್ ಲಾಕ್‌ವುಡ್ ನಾಮನಿರ್ದೇಶನಗೊಂಡಿದ್ದು — Premios Juventud for Premios Juventud for Actríz que se roba la pantalla
ನಾಮನಿರ್ದೇಶನಗೊಂಡಿದ್ದು — ಕೆಟ್ಟ ನಟಿಗಾಗಿ ಮೀಸಲಾದ ರಜ್ಜಿ ಪ್ರಶಸ್ತಿ
2008 ದಿ ಐ ಸಿಡ್ನಿ ವೆಲ್ಸ್ ಚಾಯ್ಸ್ ಚಿತ್ರ ನಟಿಗಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ: ಭಯಾನಕ/ರೋಮಾಂಚನಕಾರಿ
ನಾಮನಿರ್ದೇಶನಗೊಂಡಿದ್ದು — Premios Juventud for Premios Juventud for Actríz que se roba la pantalla
ನಾಮನಿರ್ದೇಶನಗೊಂಡಿದ್ದು — ಕೆಟ್ಟ ನಟಿಗಾಗಿ ಮೀಸಲಾದ ರಜ್ಜಿ ಪ್ರಶಸ್ತಿ
ಮೀಟ್ ಬಿಲ್ ಲ್ಯೂಸಿ
ದಿ ಲವ್ ಗುರು ಜಾನೆ ಬುಲ್ಲರ್ಡ್ ನಾಮನಿರ್ದೇಶನಗೊಂಡಿದ್ದು — ಕೆಟ್ಟ ನಟಿಗಾಗಿ ಮೀಸಲಾದ ರಜ್ಜಿ ಪ್ರಶಸ್ತಿ
2010 ಆನ್ ಇನ್ವಿಸಿಬಲ್ ಸೈನ್ ಆಫ್ ಮೈ ಓನ್‌ ಮೋನ ಗ್ರೇ (ಪೂರ್ಣಗೊಂಡಿದೆ)
ದಿ ಕಿಲ್ಲರ್‌ ಇನ್‌ಸೈಡ್‌ ಮಿ ಜಾಯ್ಸ್‌ ಲೇಕ್‌ಲ್ಯಾಂಡ್[೯೬] (ಪೂರ್ಣಗೊಂಡಿದೆ)
ಸಿನ್ ಸಿಟಿ 2 ನ್ಯಾನ್ಸಿ ಕಲ್ಲಾಹನ್‌ ನಿರ್ಮಾಣದ-ಮುಂಚಿನ ಹಂತ
ಮ್ಯಾಚೆಟೆ ಸರ್ತಾನ (ನಿರ್ಮಾಣದ-ನಂತರದ ಹಂತ)
ವ್ಯಾಲೈಂಟೈನ್ಸ್‌ ಡೇ ಮೋರೆಲಿ ಕ್ಲಾರ್ಕಸನ್ (ನಿರ್ಮಾಣದ-ನಂತರದ ಹಂತ)
ದೂರದರ್ಶನ
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
1995-1997 ಫ್ಲಿಪ್ಪರ್‌ ಮಾಯ ಗ್ರಹಾಮ್ ಪುನರಾವರ್ತಕ ಪಾತ್ರ
ನಾಮನಿರ್ದೇಶನಗೊಂಡಿದ್ದು— ಯುವತಾರೆ ಪ್ರಶಸ್ತಿ- ಹಗಲುಹೊತ್ತಿನ TV ಕಾರ್ಯಕ್ರಮದಲ್ಲಿ (1998) ಯುವನಟಿಯಾಗಿ ನೀಡಿದ ಉತ್ತಮ ನಟನೆಗಾಗಿ
2000–2002 ಡಾರ್ಕ್ ಏಂಜೆಲ್‌ ಮ್ಯಾಕ್ಸ್ ಗ್ಯುವರ/X5-452 ಪ್ರಮುಖ ಪಾತ್ರ
ನಾಮನಿರ್ದೇಶನಗೊಂಡಿದ್ದು — ಅತ್ಯುತ್ತಮ ನಟನೆಗಾಗಿ ಗೋಲ್ಡನ್ ಗ್ಲೋಬ್‌ ಪ್ರಶಸ್ತಿ – ದೂರದರ್ಶನ ಸರಣಿ ನಾಟಕ (2000)
ಗೆದ್ದಿದ್ದು—ದೂರದರ್ಶನದಲ್ಲಿನ ಅತ್ಯುತ್ತಮ ನಟಿ ವಿಭಾಗಕ್ಕಾಗಿರುವ ಸ್ಯಾಟರ್ನ್ ಪ್ರಶಸ್ತಿ (2001)
ನಾಮನಿರ್ದೇಶನಗೊಂಡಿದ್ದು— TV ನಾಟಕ ಸರಣಿಯಲ್ಲಿನ ಅತ್ಯುತ್ತಮ ನಟನೆಗಾಗಿ ಯುವ ಕಲಾವಿದರ ಪ್ರಶಸ್ತಿ - ಮುಖ್ಯ ಯುವನಟಿ (2001)
ಗೆದ್ದಿದ್ದು—TV - ಚಾಯ್ಸ್ ನಟಿಗೆ ಮೀಸಲಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ (2001)
ಗೆದ್ದಿದ್ದು—ವರ್ಷದ ಅದ್ಭುತ ನಟಿಗೆ ಮೀಸಲಾಗಿರುವ TV ಗೈಡ್‌ ಪ್ರಶಸ್ತಿ (2001)
ನಾಮನಿರ್ದೇಶನಗೊಂಡಿದ್ದು - ಹೊಸ ಸರಣಿ ಕಾರ್ಯಕ್ರಮದಲ್ಲಿನ ವರ್ಷದ ನಟಿಗೆ ಮೀಸಲಾಗಿರುವ TV ಗೈಡ್‌ ಪ್ರಶಸ್ತಿ (2001)
ನಾಮನಿರ್ದೇಶನಗೊಂಡಿದ್ದು— ದೂರದರ್ಶನ ಸರಣಿ ಕಾರ್ಯಕ್ರಮದಲ್ಲಿನ ಅದ್ಭುತ ನಟಿಗಾಗಿ ALMA ಪ್ರಶಸ್ತಿ (2002)
ನಾಮನಿರ್ದೇಶನಗೊಂಡಿದ್ದು— ದೂರದರ್ಶನ ಸರಣಿ ಕಾರ್ಯಕ್ರಮದಲ್ಲಿನ ಅತ್ಯುತ್ತಮ ನಟಿಗಾಗಿರುವ ಸ್ಯಾಟರ್ನ್ ಪ್ರಶಸ್ತಿ (2002)
ನಾಮನಿರ್ದೇಶನಗೊಂಡಿದ್ದು— ಅಚ್ಚುಮೆಚ್ಚಿನ ಸಾಹಸ ನಟಿಗಾಗಿ ಮೀಸಲಾಗಿರುವ ಕಿಡ್ಸ್ ಚಾಯ್ಸ್ ಪ್ರಶಸ್ತಿ (2002)
ನಾಮನಿರ್ದೇಶನಗೊಂಡಿದ್ದು— TV - ಚಾಯ್ಸ್ ನಟಿಗಾಗಿ ಮೀಸಲಾಗಿರುವ ಟೀನ್ ಚಾಯ್ಸ್ ಪ್ರಶಸ್ತಿ -ನಾಟಕ (2002)
ದೂರದರ್ಶನದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದು
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
1994 ದಿ ಸೀಕ್ರೆಟ್‌ ವರ್ಲ್ಡ್ ಆಫ್ ಅಲೆಕ್ಸ್ ಮ್ಯಾಕ್ ಜೆಸ್ಸಿಕಾ "ಸ್ಕೂಲ್ ಡ್ಯಾನ್ಸ್" (ಸರಣಿ 1, ಸಂಚಿಕೆ 5)
"ಹೂಪ್ ವಾರ್" (ಸರಣಿ 1, ಸಂಚಿಕೆ 2)
"ದಿ ಆಕ್ಸಿಡೆಂಟ್" (ಸರಣಿ 1, ಸಂಚಿಕೆ 1)
1996 ABC ಆಫ್ಟರ್‌ಸ್ಕೂಲ್ ಸ್ಪೆಶಲ್ ಕ್ರಿಸ್ಟಿ "ಟೂ ಸೂನ್ ಫಾರ್ ಜೆಫ್" (ಸರಣಿ 25, ಸಂಚಿಕೆ 1)
ಚಿಕಾಗೊ ಹೋಪ್‌ ಫ್ಲೋರಿ ಹೆರ್ನಾಂಡೆಜ್ "ಸೆಕ್ಸುವಲ್ ಪರ್ವೆರ್ಸಿಟಿ ಇನ್ ಚಿಕಾಗೊ ಹೋಪ್‌" (ಸರಣಿ 2, ಸಂಚಿಕೆ 18)
1998 ಬ್ರೂಕ್ಲಿನ್ ಸೌತ್‌ ಮೆಲಿಸ್ಸಾ ಹಾರ್ "ಎಕ್ಸ್‌ಪೋಸಿಂಗ್ ಜಾನ್ಸನ್" (ಸರಣಿ 1, ಸಂಚಿಕೆ 12)
ಬೆವೆರ್ಲಿ ಹಿಲ್ಸ್‌, 90210 ಲೀನ್ನೆ "ಮೇಕಿಂಗ್ ಅಮೆಂಡ್ಸ್" (ಸರಣಿ 8, ಸಂಚಿಕೆ 23)
"ದ ನೇಚರ್ ಆಫ್ ನರ್ಚರ್" (ಸರಣಿ 8, ಸಂಚಿಕೆ 25)
The Love Boat: The Next Wave ಲಾಯ್ಲಾ "ರಿಮೆಂಬರ್?" (ಸರಣಿ 1, ಸಂಚಿಕೆ 2)
2003 MADtv ಜೆಸ್ಸಿಕಾ ಸಿಂಪ್ಸನ್ "ಸಂಚಿಕೆ #9.5" (ಸರಣಿ 9, ಸಂಚಿಕೆ 5)
2004 ಎಂಟೂರೇಜ್ ಸ್ವತಃ ಆಕೆಯೇ "ದಿ ರಿವ್ಯೂ" (ಸರಣಿ 1, ಸಂಚಿಕೆ 2)
2005 ಟ್ರಿಪ್ಪಿನ್' ಸ್ವತಃ ಆಕೆಯೇ "ಕೋಸ್ಟ ರಿಕಾ" (ಸರಣಿ 1, ಸಂಚಿಕೆ 6)
"ಹಾಂಡುರಸ್" (ಸರಣಿ 1, ಸಂಚಿಕೆ 5)
2009 ದಿ ಆಫೀಸ್ ಸ್ವತಃ ಆಕೆ/ಸೋಫಿ "ಸ್ಟ್ರೆಸ್ ರಿಲೀಫ್" (ಸರಣಿ 5, ಸಂಚಿಕೆ 15)


ಪ್ರಶಸ್ತಿಗಳು[ಬದಲಾಯಿಸಿ]

ಸ್ಪೈಕ್ TV ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆಯುತ್ತಿರುವ ಆಲ್ಬಾ
ಇತರೆ ಪ್ರಶಸ್ತಿಗಳು
ವರ್ಷ ಪ್ರಶಸ್ತಿಗಳು ವಿಭಾಗ ನಾಮನಿರ್ದೇಶನಗೊಂಡ ಕಾರ್ಯ ಫಲಿತಾಂಶ
2001 ALMA ಪ್ರಶಸ್ತಿ ವರ್ಷದ ಆದ್ಭುತ ನಟಿ ಯಾರೂ ಇಲ್ಲ Won
2005 ಯುವ ಹಾಲಿವುಡ್‌ ಪ್ರಶಸ್ತಿಗಳು ನಾಳಿನ ಸೂಪರ್‌ಸ್ಟಾರ್ ಯಾರೂ ಇಲ್ಲ Won
2007 TV ಲ್ಯಾಂಡ್ ಪ್ರಶಸ್ತಿಗಳು ಕಿರುತೆರೆ/ದೊಡ್ಡತೆರೆ ತಾರೆ (ಮಹಿಳೆ) ಯಾರೂ ಇಲ್ಲ Nominated
ಸ್ಪೈಕ್ TV ಗೈಯ್ಸ್ ಚಾಯ್ಸ್ ಪ್ರಶಸ್ತಿಗಳು ಅತ್ಯಂತ ಪ್ರಚೋದಕ‌ ಜೆಸ್ಸಿಕಾ ಯಾರೂ ಇಲ್ಲ Won
2008 ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿಗಳು ನೆಚ್ಚಿನ ಮಹಿಳಾ ಸಾಹಸ ತಾರೆ ಯಾರೂ ಇಲ್ಲ Nominated
ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿಗಳು ನೆಚ್ಚಿನ ಪ್ರಮುಖ ಮಹಿಳೆ ಯಾರೂ ಇಲ್ಲ Nominated
(Source: IMDb.com)ಆಕರಗಳು[ಬದಲಾಯಿಸಿ]

 1. ೧.೦ ೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. ೨.೦ ೨.೧ ೨.೨ ೨.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ೩.೮ ೩.೯ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil. Cite error: Invalid <ref> tag; name "peoplebio" defined multiple times with different content
 4. ೪.೦ ೪.೧ ೪.೨ ೪.೩ ೪.೪ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ೫.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ೬.೦ ೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. ೭.೦ ೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ ೮.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. ೯.೦ ೯.೧ ೯.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ೧೧.೦ ೧೧.೧ ೧೧.೨ ೧೧.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. ೧೩.೦ ೧೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. OK! magazine: 34–39. 3 October 2005.  Missing or empty |title= (help)
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. ದಿ ಟುನೈಟ್ ಶೊ ವಿದ್ ಜೇ ಲೆನೊ ದ ಸಂದರ್ಶನ; 2005ರ ಸೆಪ್ಟೆಂಬರ್ 26
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. ೧೮.೦ ೧೮.೧ ೧೮.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. "28th Annual Razzie Award Nominees for Worst Actress". Razzie Awards. 
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. ೩೫.೦ ೩೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. ೪೫.೦ ೪೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. ೪೯.೦ ೪೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. http://pro.imdb.com/news/ni0780446/[dead link]
 51. Hewitt, Chris (26 June 2009). "Three More Join Valentine's Day". The Hollywood Reporter. 
 52. ೫೨.೦ ೫೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. ೫೫.೦ ೫೫.೧ ೫೫.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil. Cite error: Invalid <ref> tag; name "jessica_alba_bio" defined multiple times with different content
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. ೬೧.೦ ೬೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. ೬೨.೦ ೬೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 68. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. ೭೦.೦ ೭೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil. Cite error: Invalid <ref> tag; name "peopleengaged" defined multiple times with different content
 71. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 72. "Jessica Alba Marries Cash Warren". A Socialite's Life. 2008-05-20. 
 73. Jordan, Julie (2008-05-20). "Jessica Alba Gets Married to Cash Warren!". People Magazine. 
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. ೮೩.೦ ೮೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 86. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 87. ೮೭.೦ ೮೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 88. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 89. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 90. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 91. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 92. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 93. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 94. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 95. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 96. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.


ಹೊರಗಿನ ಕೊಂಡಿಗಳು[ಬದಲಾಯಿಸಿ]

 1. REDIRECT Template:AllRovi person