ಮಜ್ಜಿಗೆ
ಮಜ್ಜಿಗೆ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಹಲವು ಇತರ ಹೆಸರುಗಳಿಂದ ಪರಿಚಿತವಾಗಿರುವು ಅನೇಕ ಹೈನು ಪಾನೀಯಗಳನ್ನು ನಿರ್ದೇಶಿಸುತ್ತದೆ. ಮೂಲತಃ, ಮಜ್ಜಿಗೆ ಕೆನೆಯಿಂದ ಬೆಣ್ಣೆಯನ್ನು ಕಡೆದ ನಂತರ ಬಿಟ್ಟುಹೋದ ದ್ರವವಾಗಿತ್ತು. ಈ ಬಗೆಯ ಮಜ್ಜಿಗೆಯನ್ನು ಸಾಂಪ್ರದಾಯಿಕ ಮಜ್ಜಿಗೆ ಎಂದು ಕರೆಯಲಾಗುತ್ತದೆ. ಭಾರತದಾದ್ಯಂತ ಜನಪ್ರಿಯವಿರುವ ಮೊಸರು ಆಧಾರಿತ ಪಾನೀಯ. ಮಜ್ಜಿಗೆಯನ್ನು ಮೊಸರು ಮತ್ತು ತಣ್ಣೀರನ್ನು ಒಟ್ಟಾಗಿ ಒಂದು ಗಡಿಗೆ ಅಥವಾ ಪಾತ್ರೆಯಲ್ಲಿ ಕಡೆಗೋಲನ್ನು ಬಳಸಿ ಕಡೆದು ತಯಾರಿಸಲಾಗುತ್ತದೆ. ಇದನ್ನು ಹಾಗೆಯೇ ಅಥವಾ ವಿವಿಧ ಸಂಬಾರ ಪದಾರ್ಥಗಳಿಂದ ರುಚಿಗೊಳಿಸಿ ಸೇವಿಸಬಹುದು.
ಸಾಂಪ್ರದಾಯಿಕ ಅಥವ ಮನೆಯಲ್ಲಿ ತಯಾರಿಸಲಾದ ಮಜ್ಜಿಗೆಯಲ್ಲಿ ಪ್ರೋಬಯಾಟಿಕ್ ಸೂಕ್ಷ್ಮಜೀವಿಗಳಿರುವ ಕಾರಣ ಅದು ನಮ್ಮ ದೇಹಕ್ಕೆ ಒಳ್ಳೆಯ ಪದಾರ್ಥವಾಗಿದೆ. ಹೊಟ್ಟೆ ಮತ್ತು ಚರ್ಮಕ್ಕೆ ತಂಪನ್ನುಂಟುಮಾಡುತ್ತದೆ. ಮೊಸರನ್ನು ಕಡೆದು ಮಜ್ಜಿಗೆ ಮಾಡುವುದರಿಂದ ಹಾಲು ಅಥವಾ ಮೊಸರಿನಲ್ಲಿ ಇರುವಷ್ಟು ಕೊಬ್ಬಿನ ಅಂಶ ಇದರಲ್ಲಿರುವುದಿಲ್ಲ. ಮಜ್ಜಿಗೆ ದೇಹದ ರೋಗ ತಡೆಗಟ್ಟಲು ಬೇಕಾಗುವ ಶಕ್ತಿಯನ್ನು ಕೊಡುತ್ತದೆ. ಭಾರತದಲ್ಲಿ ಬೆಣ್ಣೆ ತಯಾರಿಸಿದ ಬಳಿಕ ಉಳಿಯುವಂತಹ ಬಳಿ ದ್ರವಕ್ಕೆ ಮಜ್ಜಿಗೆಯೆಂದು ಕರೆಯುತ್ತಾರೆ. ಈ ರೀತಿ ಮಜ್ಜಿಗೆ ತಯಾರಿಸುವ ವಿಧಾನ ಭಾರತ, ನೇಪಾಳ ಹಾಗು ಪಾಕೀಸ್ತಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ದಕ್ಷಿಣ ಭಾರತ, ಪಂಜಾಬ್ ಹಾಗು ಗುಜರಾತ್‍ನಲ್ಲಿ ಮಜ್ಜಿಗೆಗೆ ಸ್ವಲ್ಪ ನೀರು, ಉಪ್ಪು, ಹಿಂಗು ಸೇರಿಸಿ ಊಟಕ್ಕೆ ಬಡಿಸುವುದು ಅಥವಾ ಊಟದ ನಂತರ ಕುಡಿಯುವುದು ಪ್ರತೀತಿ.
ಈ ಪಾನೀಯ ಗುಜರಾತಿ ಮತ್ತು ಉರ್ದು ಭಾಷೆಗಳಲ್ಲಿ ಛಾಸ್ ಎಂಬ ಹೆಸರೇ ಇದೆ ಮತ್ತು ಕೆಲವು ಹಿಂದಿ ಮಾತನಾಡುವ ಉತ್ತರ ಭಾರತ ಪ್ರದೇಶಗಳಲ್ಲಿಯೂ ಕರೆಯಲಾಗುತ್ತದೆ. ಇದು ಹಿಂದಿ ಮಾತನಾಡುವ ಉತ್ತರ ಭಾರತದ ಇತರ ಭಾಗಗಳಲ್ಲಿ ಮಥ ಎಂದು ಕರೆಯಲಾಗುತ್ತದೆ.
ತಮಿಳಿನಲ್ಲಿ ಮೊರ್ ಎಂದು, ಮಲಯಾಳಂ ರಲ್ಲಿ ಮೂರು ಎಂದು, ಕನ್ನಡ ಮತ್ತು ತೆಲುಗಿನಲ್ಲಿ ಮಜ್ಜಿಗೆ ಎಂದು, ಮರಾಠಿಯಲ್ಲಿ ತಾಕ್ ಅಥವಾ ತಕ್ ಎಂದು ಮತ್ತು ಬಂಗಾಳಿಯಲ್ಲಿ ಘೋಲ್ ಎಂದು ಕರೆಯುತ್ತಾರೆ.
ಮಜ್ಜಿಗೆಯು ಹುದುಗಿಸಿದ ಹಾಲಿನ ಪಾನೀಯವಾಗಿದ್ದು, ಸಾಮಾನ್ಯವಾಗಿ ಬೆಚ್ಚಗಿನ ವಾತಾವರಣವಿರುವ ಪ್ರದೇಶದಲ್ಲಿ ಕಾಣಸಿಗುತ್ತದೆ. ದನದ ಹಾಲಿನಿಂದ ಉತ್ಪಾದನೆಯಾಗುವ ಇದು, ಸ್ವಲ್ಪ ಹುಳಿಯ ಅಂಶ ಹೊಂದಿರುತ್ತದೆ. ಇದಕ್ಕೆ ಕಾರಣ ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಯಾಗಳು. ಇದನ್ನು ಎರಡು ರೀತಿಯ ಬ್ಯಾಕ್ಟೀರಿಯಾಗಳಿಂದ ಮಾಡಲಾಗುತ್ತದೆ, ಲಕ್ಟೊಕಾಚ್ಚುಸ್ ಲಕ್ಟಿಸ್ ಹಾಗು ಲಕ್ಟೊಬಸಿಲ್ಲುಸ್ ಬುಲ್ಗರಿಚುಸ್ ಎಂಬುದು ಇದಕ್ಕೆ ಬೇಕಾಗುವ ಬ್ಯಾಕ್ಟೀರಿಯಾಗಳು.
ಆಮ್ಲೀಕರಣಗೊಂಡ ಮಜ್ಜಿಗೆ
[ಬದಲಾಯಿಸಿ]ಆಮ್ಲೀಕರಣಗೊಂಡ ಮಜ್ಜಿಗೆಯನ್ನು ಆಹಾರ ಗ್ರೇಡಿನ ಆಮ್ಲದಿಂದ ತಯಾರಿಸುತ್ತಾರೆ. ಇದನ್ನು ೧ ಚಮಚ ವಿನೆಗರ್ ಅಥವಾ ನಿಂಬೆರಸವನ್ನು ಹಾಲಿಗೆ ಹಾಕಿ ಹತ್ತು ನಿಮಿಷದ ಬಳಿಗೆ ನೋಡಿದರೆ ಮಜ್ಜಿಗೆ ತಯಾರಾಗಿರುತ್ತದೆ. ಇದೆ ಕ್ರಿಯೆಯನ್ನು ಬಿಸಿಯ ಜೊತೆಗೆ ಮಾಡಿದರೆ ಮಜ್ಜಿಗೆಯ ಜೊತೆ ಪನೀರ್ ಕೂಡ ತಯಾರಾಗುತ್ತದೆ.
ನುಡಿಮುತ್ತುಗಳಲ್ಲಿ ಮಜ್ಜಿಗೆ
[ಬದಲಾಯಿಸಿ]- ಅಸಲು ಇಲ್ಲದೆ ಬಡ್ಡಿ ಇಲ್ಲ, ಮೊಸರು ಇಲ್ಲದೆ ಮಜ್ಜಿಗೆ ಇಲ್ಲ
- ಈಚಲುಮರದ ಕೆಳಗೆ ಮಜ್ಜಿಗೆ ಕುಡಿದರೆ ನಾಚಿಗೆಗೇಡಾಗದೇ?
- ತಾನು ಹೋದರೆ ಮಜ್ಜಿಗಿಲ್ಲ, ಮೊಸರಿಗೆ ಚೀಟು’,
- ‘ಪಾದ್ಯಕ್ಕೆ ನೀರು ಇಲ್ಲ, ಊಟಕ್ಕೆ ಮಜ್ಜಿಗೆ ಎಲ್ಲಿ?’,
- ‘ಮಜ್ಜಿಗೆಗೆ ಹೋದವನಿಗೆ ಎಮ್ಮೆ ಕ್ರಯವು ಯಾಕೆ?’,
- ‘ಮಜ್ಜಿಗೆಗೆ ತಕ್ಕ ರಾಮಾಯಣ ಹೇಳಿದ’,
- ಅತ್ತೇಮನೆಗೆ ಮಜ್ಜಿಗೆನೀರು, ತವರುಮನೆಗೆ ಹಾಲು ಮೊಸರು’,
- ‘ಬಸವಾ! ಎಂದರೆ ಪಾಪ! ಸೊಸೆಗೆ ಮಜ್ಜಿಗೆನೀರು ತಾ!
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
- ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ ಇದ್ದಂತೆ’,
- ಹೆಸರು ಕ್ಷೀರಸಾಗರ ಭಟ್ಟ ಮನೆಯಲ್ಲಿ ಮಜ್ಜಿಗೆಗೂ ತತ್ವಾರ
ಉಲ್ಲೇಖನ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]